For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್‌ ಕ್ರೀಡಾಪಟುಗಳ ಆಹಾರಶೈಲಿ: ಇವರು ಯಾವ ರೀತಿಯ ಆಹಾರ ಸೇವಿಸುತ್ತಾರೆ?

|

ಕ್ರೀಟಾಪಟುಗಳು ಸಾಮಾನ್ಯವಾಗಿ ಸದೃಢವಾದ ಮೈಕಟ್ಟನ್ನು ಹೊಂದಿರುತ್ತಾರೆ, ಅವರ ಮೈಕಟ್ಟೇ ನೋಡಿಯೇ ಇವರು ಕ್ರೀಡಾಪಟುವಿರಬಹುದು ಎಂದು ಅಂದಾಜಿಸಬಹುದು. ಓಟವಾಗಿರಲಿ, ಸ್ವಿಮ್ಮಿಂಗ್, ಕುಸ್ತಿ ಹೀಗೆ ಯಾವುದೇ ಕ್ರೀಡೆಯಾಗಿರಲಿ ಅವರಿಗೆ ಅದೃಢ ಮೈಕಟ್ಟು ಬೇಕು. ಅವರು ಪ್ರತಿನಿತ್ಯ ಮಾಡುವ ಅಭ್ಯಾಸದಿಂದಾಗಿ ಅವರು ಮೈಕಟ್ಟು ಕಬ್ಬಿಣದಂತೆ ಕಟ್ಟುಮಸ್ತಾದ ಮೈಕಟ್ಟು ಹೊಂದಿರುತ್ತಾರೆ.

ಕ್ರೀಡಾಪಟುಗಳಿಗೆ ವ್ಯಾಯಾಮ ಹಾಗೂ ಆಹಾರಶೈಲಿ ತುಂಬಾ ಮುಖ್ಯ. ಇಷ್ಟ ಪಟ್ಟ ಎಲ್ಲಾ ಆಹಾರ ತಿನ್ನುವಂತಿಲ್ಲ, ಹಾಗಂತ ಡಯಟ್ ಮಾಡುವವರು ಕೊಬ್ಬಿನ ಆಹಾರ, ಕಾರ್ಬ್ಸ್‌, ಕ್ಯಾಲೋರಿ ಇವುಗಳೆನ್ನೆಲ್ಲಾ ತ್ಯಜಿಸಿ ಪಾಲಿಸುತ್ತಾರಲ್ಲಾ ಅಂಥ ಆಹಾರ ಕೂಡ ಅಲ್ಲ.

ಇವರ ಆಹಾರದಲ್ಲಿ ಒಂದು ಬಗೆಯ ಶಿಸ್ತು ಇರುತ್ತದೆ. 2008ರಲ್ಲಿ ಒಲಿಂಪಿಕ್‌ ಈಜುಪಟು ಮೈಕಲ್ ಪೆಲ್ಪ್ಸ್ ದಿನದಲ್ಲಿ 12,000 ಕ್ಯಾಲೋರಿ ಎಂಬ ರೂಮರ್ ಹರಿದಾಡಿತ್ತು, 2017ರಲ್ಲಿ ಅವರೇ ಸತ್ಯಾಸತ್ಯತೆ ಹೇಳಿದ್ದರು, ರೂಮರ್‌ಗೂ ಅವರು ಹೇಳಿರುವುದಕ್ಕೂ ದೊಡ್ಡ ವ್ಯತ್ಯಾಸವೇನು ಇರಲಿಲ್ಲ, ಅವರು ದಿನದಲ್ಲಿ 8000 ದಿಂದ 10,000ದಷ್ಟು ಕ್ಯಾಲೋರಿಯ ಆಹಾರ ಸೇವಿಸತ್ತೇನೆ ಎಂಬುವುದಾಗಿ ಹೇಳಿದ್ದಾರೆ.

 ಒಲಿಂಪಿಕ್ಸ್ ಕ್ರೀಡಾಪಟು ಯಾವ ರೀತಿಯ ಆಹಾರ ಸೇವಿಸುತ್ತಾರೆ?

ಒಲಿಂಪಿಕ್ಸ್ ಕ್ರೀಡಾಪಟು ಯಾವ ರೀತಿಯ ಆಹಾರ ಸೇವಿಸುತ್ತಾರೆ?

ಕ್ರೀಡಾಪಟುಗಳು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವತ್ತ ಹೆಚ್ಚು ಗಮನ ನೀಡುತ್ತಾರೆ. ಪ್ರೊಟೀನ್‌ ಅಂಶದ ಆಹಾರಗಳತ್ತ ಗಮನ ನೀಡುತ್ತಾರೆ. ಎಲ್ಲಾ ಕ್ರೀಡಾಪಟುಗಳ ಆಹಾರಶೈಲಿ ಒಂದೇ ರೀತಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಏಕೆಂದರೆ ಅದು ಅವರು ಆಡುವ ಆಟವನ್ನು ಅವಲಂಬಿಸಿರುತ್ತದೆ.

ಉದಾಹರಣೆಗೆ ಓಟಗಾರನಿಗೆ ಆಟದಲ್ಲಿ ಸುಮಾರು 2000 ಕ್ಯಾಲೋರಿ ಕರಗಿದರೆ ಮೀಟರ್‌ ಡ್ಯಾಶ್‌ನಲ್ಲಿ ಓಡುವ ಕ್ರೀಡಾಪಟುಗೆ ಆ ಕ್ರೀಡೆಯಲ್ಲಿ 19 ಕ್ಯಾಲೋರಿ ಕರಗಬಹುದು. ಇನ್ನು ಕ್ಯಾಲೋರಿ ಇರುವ ಆಹಾರವನ್ನು ಎಷ್ಟು ತೆಗೆದುಕೊಳ್ಳಬೇಕು ಎಂಬುವುದು ಅವರ ಆಟವನ್ನು ಅವಲಭಿಸಿರುತ್ತದೆ. ಶೂಟರ್‌ಗೆ ದಿನದಲ್ಲಿ 2000 ಕ್ಯಾಲೋರಿ ಆಹಾರ ಸೇವಿಸಿದರೆ ಸಾಕಾಗುವುದು, ಅದೇ ಜೈ ಜಂಪ್ ಮಾಡುವವರಿಗೆ ದಿನದಲ್ಲಿ 10, 000 ಕ್ಯಾಲೋರಿಯ ಆಹಾರ ಬೇಕಾಗುತ್ತದೆ.

ಒಟ್ಟಿನಲ್ಲಿ ಕ್ರೀಡಾಪಟುಗಳು ಆರೋಗ್ಯಕರ ಆಹಾರ ಸೇವಿಸುತ್ತದೆ. ಅವರ ಆಹಾರದಲ್ಲಿ ಕಾರ್ಬ್ಸ್, ಪ್ರೊಟೀನ್, ಒಮೆಗಾ 3 ಈ ರೀತಿಯ ಆರೋಗ್ಯಕರ ಕೊಬ್ಬಿನಂಶ, ಹಣ್ಣುಗಳು, ನಾರಿನಂಶ ಇರುವ ಆಹಾರ, ಆ್ಯಂಟಿಆಕ್ಸಿಡೆಂಟ್‌ ಅಧಿಕವಿರುವ ಆಹಾರ, ಪೋಷಕಾಂಶ ಅಧಿಕವಿರುವ ಆಹಾರ ಸೇವಿಸುತ್ತಾರೆ.

ಆಟದ ದಿನ ಅಥವಾ ಸಮಯದಲ್ಲಿ ಹೊಟ್ಟೆ ತುಂಬಾ ಆಹಾರ ಸೇವಿಸುವುದಿಲ್ಲ, ಈ ಸಮಯದಲ್ಲಿ ಬರ್ಗರ್‌ನಂಥ ಆಹಾರ ಸೇವಿಸುವುದಿಲ್ಲ, ಬೆಣ್ಣೆ ಹಣ್ಣು, ನಟ್ಸ್, ಪ್ರೊಟೀನ್‌ ಶೇಕ್‌ ಈ ರೀತಿಯ ಆಹಾರಗಳನ್ನು ತೆಗೆದುಕೊಳ್ಳುತ್ತಾರೆ.

ಅನೇಕ ಬಾರಿ ಆಹಾರ ತೆಗೆದುಕೊಳ್ಖುತ್ತಾರೆ

ಅನೇಕ ಬಾರಿ ಆಹಾರ ತೆಗೆದುಕೊಳ್ಖುತ್ತಾರೆ

ಕ್ರೀಡಾಪಟುಗಳು ತಮ್ಮ ದೇಹಕ್ಕೆ ಶಕ್ತಿಯನ್ನು ತುಂಬಲು ಅನೇಕ ಬಾರಿ ಆಹಾರ ತೆಗೆದುಕೊಳ್ಳುತ್ತಾರೆ. ಮಧ್ಯ-ಮಧ್ಯ ಆರೋಗ್ಯಕರ ಸ್ನ್ಯಾಕ್ಸ್ ತೆಗೆದುಕೊಳ್ಳುತ್ತಾರೆ. ಇನ್ನು ಗಾಯದಿಂದ ಚೇತರಿಸಲು, ಮಸಲ್‌ಗಳು ಬಲವಾಗಲು ಕಾರ್ಬ್ಸ್ ಹಾಗೂ ಪ್ರೊಟೀನ್ ಇರುವ ಆಹಾರ ಸೇವಿಸುತ್ತಾರೆ.

ದೇಹದಲ್ಲಿ ನೀರಿನಂಶ ಇರುವಂತೆ ನೋಡಿಕೊಳ್ಳಬೇಕು

ದೇಹದಲ್ಲಿ ನೀರಿನಂಶ ಇರುವಂತೆ ನೋಡಿಕೊಳ್ಳಬೇಕು

ಕ್ರೀಡಾಪಟುಗಳು ತುಂಬಾ ವ್ಯಾಯಾಮ ಮಾಡುವುದರಿಂದ ಹೆಚ್ಚು ಬೆವರಿ ನೀರಿನಂಶ ಕಡಿಮೆಯಾಗುವುದು, ಆದ್ದರಿಂದ ತುಂಬಾ ನೀರು ಕುಡಿಯಬೇಕು ಹಾಗೂ ಅವರಿಗೆ ಎಲೆಕ್ಟ್ರೋಲೈಟ್ಸ್ ನೀಡಲಾಗುವುದು. ಶೇಕ್‌ಗಳನ್ನು ತೆಗೆದುಕೊಳ್ಳುತ್ತಾರೆ.

ಅವರ ಆಹಾರಶೈಲಿ ನಾವು ಪಾಲಿಸಬಾರದು ಏಕೆ?

ಅವರ ಆಹಾರಶೈಲಿ ನಾವು ಪಾಲಿಸಬಾರದು ಏಕೆ?

ಅವರ ಆಹಾರಶೈಲಿ ಅವರ ಆಟವನ್ನು ಅವಲಂಬಿಸಿರುತ್ತದೆ. ಹೆಚ್ಚು ಕ್ಯಾಲೋರಿ ಬರ್ನ್‌ ಆಗುವ ಆಟದಲ್ಲಿ ಹೆಚ್ಚು ಕ್ಯಾಲೋರಿಯ ಆಹಾರ ಸೇವಿಸಬೇಕಾಗುತ್ತದೆ. ಕ್ರೀಡಾಪಟುಗಳು ವ್ಯಾಯಾಮ ಮಾಡುತ್ತಾರೆ, ಹಾಗಾಗಿ ತಿಂದ ಕ್ಯಾಲೋರಿ ಕರಗುವುದು. ಅಲ್ಲದೆ ಅವರು ಯಾವ ರೀತಿಯ ಆಹಾರಶೈಲಿ ಪಾಲಿಸಬೇಕೆಂದು ಕೋಚ್ ಹೇಳುತ್ತಾರೆ, ಆದರೆ ನಾವು ಅವರ ಆಹಾರ ಶೈಲಿ ಅನುಸರಿಸಿದರೆ ಕ್ಯಾಲೋರಿ ಹೆಚ್ಚಾಗಬಹುದು, ಅಲ್ಲದೆ ವ್ಯಾಯಾಮದಲ್ಲಿ ಅವರಷ್ಟು ಕರಗಿಸಲು ಸಾಧ್ಯವಿಲ್ಲ.. ಇನ್ನು ತುಂಬಾ ತಿಂದು ಕರಗಿಸಲು ತುಂಬಾ ಹೊತ್ತು ವ್ಯಾಯಾಮ ಮಾಡಿದರೆ ಮಸಲ್‌ಗಳಿಗೆ ಹಾನಿಯಾಗುತ್ತದೆ. ಆದ್ದರಿಂದ ಕ್ರೀಡಾಪಟುಗಳ ಆಹಾರಶೈಲಿ ಸಾಮಾನ್ಯರು ಅನುಸರಿಸಬಾರದು.

English summary

Olympic Athletes Diet Plan: What Do Olympic Athletes Eat, and Are Their Diets Healthy? explained in kannada

Olympic Athletes Diet Plan: What Do Olympic Athletes Eat, and Are Their Diets Healthy? explained in kannada, read on...
X