For Quick Alerts
ALLOW NOTIFICATIONS  
For Daily Alerts

ನಿಮ್ಮ ಡಯಟ್‌ ಹಾಳುಮಾಡಲಿದೆ ಗೋಧಿ ಎಚ್ಚರ!

|

ನಮ್ಮ ಆಹಾರ ಆದಷ್ಟೂ ಸ್ಥಳೀಯವಾಗಿರಬೇಕು, ಆಗಲೇ ನಿಸರ್ಗ ನಿಯಮಗಳು ಸರಿಯಾದ ರೀತಿಯಲ್ಲಿ ನಿರ್ವಹಿಸಲ್ಪಡುತ್ತವೆ ಎಂದು ತಜ್ಞರು ವಿವರಿಸುತ್ತಾರೆ. ಹಾಗಾದರೆ ಈಗ ನಮ್ಮಲ್ಲಿ ಲಭ್ಯವಿರುವ ನೂರಕ್ಕೂ ಹೆಚ್ಚು ಬಗೆಯ ಧಾನ್ಯಗಳಲ್ಲಿ ಹೆಚ್ಚಿನವು ನಮಗೆ ಸ್ಥಳೀಯವಲ್ಲ! ಮುಖ್ಯವಾಗಿ ಗೋಧಿ, ಇದು ನಮ್ಮ ದೇಶದ ಬೆಳೆ ಅಲ್ಲ. ಪಶ್ಚಿಮ ಗೋಳದ ಮೂಲದ ಈ ಧಾನ್ಯವನ್ನು ವ್ಯಾಪಾರೀ ಧಾನ್ಯವನ್ನಾಗಿ ಜಗತ್ತಿನ ಇತರ ಕಡೆಗಳಲ್ಲಿ ಬೆಳೆಸಲಾಗಿರುವ ಕಾರಣಕ್ಕೆ ನಮಗೆ ಗೋಧಿ ಅತಿ ಸುಲಭವಾಗಿ ಸಿಗುತ್ತಿದೆ.

ಅಲ್ಲದೇ ಹಲವು ಬಗೆಯ ಖಾದ್ಯಗಳನ್ನು ತಯಾರಿಸಲು ಬಳಸಲಾಗುತ್ತಿದೆ. ಬ್ರೆಡ್, ಬನ್, ಪಾಸ್ತಾ, ಕುಕ್ಕೀಸ್, ಕೇಕ್, ಚಪ್ಪಾತಿ, ಮಫಿನ್, ಕ್ರೋಸಾಂಟ್, ಕುರುಕು ತಿಂಡಿ, ಬೆಳಗ್ಗಿನ ಉಪಾಹಾರದ ಸಿದ್ಧ ಆಹಾರಗಳು, ಅಷ್ಟೇ ಅಲ್ಲ, ಹಲವು ಬಗೆಯ ಸಿಹಿ ತಿಂಡಿಗಳು ಮೊದಲಾದವುಗಳನ್ನೂ ತಯಾರಿಸಲು ಬಳಸಲಾಗುತ್ತದೆ.

ನಮ್ಮ ಪೂರ್ವಜರ ವಿಕಾಸದ ಸಮಯದಲ್ಲಿ ಧಾನ್ಯಗಳು ಸಾಂಪ್ರದಾಯಿಕ ಮಾನವ ಆಹಾರದ ಭಾಗವಾಗಿರಲೇ ಇಲ್ಲ ಮತ್ತು ಕೊಲೊರಾಡೋ ಸ್ಟೇಟ್ ಯೂನಿವರ್ಸಿಟಿಯ ಪ್ರಾಧ್ಯಾಪಕ ಡಾ. ಲೊರೆನ್ ಕೊರ್ಡೆನ್ ಸೇರಿದಂತೆ ಕೆಲವು ಸಂಶೋಧಕರ ಪ್ರಕಾರ, ಧಾನ್ಯಗಳು ಪಾಶ್ಚಿಮಾತ್ಯ ದೇಶಗಳಲ್ಲಿ ಈಗ ಪ್ರಚಲಿತದಲ್ಲಿರುವ ದೀರ್ಘಕಾಲದ ಕಾಯಿಲೆಗಳಿಗೆ ಕೊಡುಗೆ ನೀಡುತ್ತವೆ ಎಂದು 1999 ರಲ್ಲಿ ಪ್ರಕಟವಾದ "ವರ್ಲ್ಡ್ ರಿವ್ಯೂ ಆಫ್ ನ್ಯೂಟ್ರಿಷನ್ ಅಂಡ್ ಡಯೆಟಿಕ್ಸ್" ನಲ್ಲಿ ಪ್ರಕಟವಾದ ವರದಿಯಲ್ಲಿ ವಿವರಿಸಲಾಗಿದೆ.

ಗ್ಲುಟೆನ್ ಅಸಹಿಷ್ಣುತೆ

ಗ್ಲುಟೆನ್ ಅಸಹಿಷ್ಣುತೆ

ಗೋಧಿಯಲ್ಲಿರುವ ಅಂಟುವಿಕೆಗೆ ಕಾರಣವಾಗಿರುವ ಗ್ಲುಟನ್‌ ಎಂಬ ಅಂಶ ಕೆಲವರ ದೇಹಕ್ಕೆ ಒಗ್ಗುವುದಿಲ್ಲ. ಈ ವ್ಯಕ್ತಿಗಳನ್ನು ಗ್ಲುಟೆನ್ ಅಸಹಿಷ್ಣು (gluten sensitive) ಕರೆಯುತ್ತಾರೆ. ಇವರಲ್ಲಿ ಗೋಧಿಯ ಸೇವನೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ಇದು ಗೋಧಿಯಲ್ಲಿ ಮಾತ್ರವಲ್ಲ, ರೈ, ಬಾರ್ಲಿ ಮತ್ತು ಕಸಿ ಮಾಡಿದ ಓಟ್ಸ್‌ನಲ್ಲಿಯೂ ಕಂಡುಬರುತ್ತದೆ.

ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ಸೆಂಟರ್ ಫಾರ್ ಸೆಲಿಯಾಕ್ ರಿಸರ್ಚ್ (University of Maryland Center for Celiac Research) ಸಂಸ್ಥೆಯ ಪ್ರಕಾರ, ಸುಮಾರು 1 ಪ್ರತಿಶತದಷ್ಟು ಅಮೆರಿಕನ್ನರು ಉದರದ ಕಾಯಿಲೆ ಹೊಂದಿದ್ದಾರೆ, ಇದು ಹೊಟ್ಟೆಯ ಸೆಳೆತ, ಹೊಟ್ಟೆಯುಬ್ಬರಿಕೆ, ಅತಿಸಾರ, ಮಲಬದ್ಧತೆ ಮತ್ತು ತೂಕ ಇಳಿಕೆಯಿಂದ ಕೂಡಿದೆ, ಆದರೆ ಇನ್ನೂ 6 ಪ್ರತಿಶತದಷ್ಟು ಜನರು ಗ್ಲುಟೆನ್ ಅಸಹಿಷ್ಣುತೆಯನ್ನು ಹೊಂದಿದ್ದು, ಇದು ತಲೆನೋವು, ದೇಹದ ತುದಿಭಾಗಗಳಲ್ಲಿ ಸೂಜಿ ಚುಚ್ಚಿದಂತೆ ಅನ್ನಿಸುವುದು, ಮೆದುಳಿಗೆ ಮಂಕು ಕವಿಯುವುದು, ತೂಕ ಹೆಚ್ಚಾಗುವುದು ಮತ್ತು ಕರುಳುಗಳಲ್ಲಿ ಉರಿಯೂತ ಮೊದಲಾದ ಇತರ ಸೂಚನೆಗಳನ್ನು ಹೋಲುವ ಲಕ್ಷಣಗಳನ್ನು ಉಂಟುಮಾಡುತ್ತದೆ.

ಎರಡೂ ಪರಿಸ್ಥಿತಿಗಳಿಗೆ ಗೋಧಿ ಮತ್ತು ಗ್ಲುಟೆನ್ ಸೇವನೆಯನ್ನು ಕಟ್ಟುನಿಟ್ಟಾಗಿ ತಪ್ಪಿಸುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ನೀವು ಉದರದ ಅಥವಾ ಗ್ಲುಟೆನ್ ಅಸಹಿಷ್ಣುರಾಗಿದ್ದರೆ, ನಿಮ್ಮ ಆಹಾರದಲ್ಲಿ ಗೋಧಿ ಅಥವಾ ಗ್ಲುಟೆನ್ ಇರುವ ಯಾವುದೇ ಧಾನ್ಯಗಳನ್ನು ನೀವು ಸೇರಿಸಿಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಆಹಾರ ಲೇಬಲ್‌ಗಳನ್ನು ಎಚ್ಚರಿಕೆಯಿಂದ ಓದುವುದು ಅವಶ್ಯಕವಾಗಿದೆ..

ತೂಕ ಏರುವಿಕೆ

ತೂಕ ಏರುವಿಕೆ

ಗೋಧಿ ಸೇರಿದಂತೆ ಹೆಚ್ಚಿನ ಏಕದಳ ಧಾನ್ಯಗಳಲ್ಲಿ ಲೆಕ್ಟಿನ್ ಎಂಬ ಜೀವರಾಸಾಯನಿಕ ಸಂಯುಕ್ತವಿದೆ. ಲೆಕ್ಟಿನ್‌ಗಳನ್ನು ಸ್ವಾಭಾವಿಕವಾಗಿ ಗೋಧಿಯಂತಹ ಅನೇಕ ಸಸ್ಯಗಳು ತಮ್ಮನ್ನು ತಾವು ಶತ್ರುಗಳಿಂದ ರಕ್ಷಿಸಿಕೊಳ್ಳಲು ಉತ್ಪಾದಿಸುತ್ತವೆ. ಸಿ-ರಿಯಾಕ್ಟಿವ್ ಪ್ರೊಟೀನ್‌ನೊಂದಿಗೆ ಅಳೆಯಲ್ಪಟ್ಟಂತೆ ಧಾನ್ಯಗಳು ಮತ್ತು ಲೆಕ್ಟಿನ್‌ಗಳ ಮಟ್ಟ ಹೆಚ್ಚಿರುವ ಆಹಾರವು ಇನ್ಸುಲಿನ್ ಪ್ರತಿರೋಧತೆ, ಅಧಿಕ ರಕ್ತದೊತ್ತಡ ಮತ್ತು ಹೆಚ್ಚಿನ ಉರಿಯೂತದ ಮಟ್ಟಗಳೊಂದಿಗೆ ಸಂಬಂಧಿಸಿದೆ ಎಂದು ಹಂದಿಗಳ ಮೇಲೆ ನಡೆಸಲಾದ ಸಂಶೋಧನೆಯ ಬಳಿಕ "ಬಿಎಂಸಿ ಎಂಡೋಕ್ರೈನ್ ಡಿಸಾರ್ಡರ್ಸ್" ಎಂಬ ವರದಿಯನ್ನು 2005 ರ ಡಿಸೆಂಬರ್ ಸಂಚಿಕೆಯಲ್ಲಿ ನಲ್ಲಿ ಪ್ರಕಟಿಸಿದೆ.

ಈ ಅಧ್ಯಯನದ ಲೇಖಕರು ಲೆಕ್ಟಿನ್ ಹೊಂದಿರುವ ಧಾನ್ಯಗಳಲ್ಲಿ ಸಮೃದ್ಧವಾಗಿರುವ ಆಹಾರವು ಲೆಕ್ಟಿನ್ ಪ್ರತಿರೋಧವನ್ನು ಉಂಟುಮಾಡುವ ಮೂಲಕ ಹಸಿವನ್ನು ಹೆಚ್ಚಿಸುತ್ತದೆ ಎಂದು ನಂಬುತ್ತಾರೆ, ಇದು ಪಾಶ್ಚಿಮಾತ್ಯ ಸಮಾಜಗಳಲ್ಲಿ ಏರಿರುವ ತೂಕ ಮತ್ತು ಸ್ಥೂಲಕಾಯತೆಯ ಹೆಚ್ಚಳವನ್ನು ವಿವರಿಸುತ್ತದೆ.

ಸ್ವಯಂ ನಿರೋಧಕ ಪರಿಸ್ಥಿತಿಗಳು

ಸ್ವಯಂ ನಿರೋಧಕ ಪರಿಸ್ಥಿತಿಗಳು

ರ್‍ಹುಮಟಾಯ್ಡ್ ಸಂಧಿವಾತ (rheumatoid arthritis) ಮತ್ತು ಉರಿಯೂತದ ಕರುಳಿನ ಕಾಯಿಲೆ (inflammatory bowel disease) ಸೇರಿದಂತೆ ಕೆಲವು ಸಾಮಾನ್ಯ ಸ್ವರಕ್ಷಿತ ಪರಿಸ್ಥಿತಿಗಳು ಗೋಧಿ ಮತ್ತು ಏಕದಳ ಧಾನ್ಯಗಳ ಸೇವನೆಯೊಂದಿಗೆ ಸಂಬಂಧ ಹೊಂದಿರಬಹುದು ಎಂದು 1999 ರ "ವರ್ಲ್ಡ್ ರಿವ್ಯೂ ಆಫ್ ನ್ಯೂಟ್ರಿಷನ್ ಅಂಡ್ ಡಯೆಟಿಕ್ಸ್" ಎಂಬ ಮಾಧ್ಯಮದಲ್ಲಿ ಪ್ರಕಟಿಸಲಾಗಿದೆ.

ಈ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಿದ್ದರೂ, ನಿಮ್ಮ ರೋಗಲಕ್ಷಣಗಳಲ್ಲಿ ಯಾವುದೇ ಸುಧಾರಣೆಗಳನ್ನು ನೀವು ಗಮನಿಸುತ್ತೀರಾ ಎಂದು ನೋಡಲು ನೀವು ಸ್ವಯಂ ನಿರೋಧಕ ಸ್ಥಿತಿಯಿಂದ ಬಳಲುತ್ತಿದ್ದರೆ ನಿಮ್ಮ ಆಹಾರದಿಂದ ಗೋಧಿ ಮತ್ತು ಧಾನ್ಯಗಳನ್ನು ನಿವಾರಿಸುವ ಕ್ರಮವನ್ನು ನೀವು ಪ್ರಯತ್ನಿಸಬಹುದು. ನಿಮ್ಮ ಆಹಾರಕ್ರಮವನ್ನು ನೀವಾಗಿಯೇ ಬದಲಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಅಧಿಕ ರಕ್ತದ ಸಕ್ಕರೆಯ ಮಟ್ಟಗಳು

ಅಧಿಕ ರಕ್ತದ ಸಕ್ಕರೆಯ ಮಟ್ಟಗಳು

ನೀವು ಇನ್ಸುಲಿನ್ ಪ್ರತಿರೋಧ, ಮೆಟಾಬಾಲಿಕ್ ಸಿಂಡ್ರೋಮ್, ಪ್ರಿಡಿಯಾಬಿಟಿಸ್ (ಮಧುಮೇಹದ ಮುನ್ನಾ ಅವಧಿ) ಅಥವಾ ಮಧುಮೇಹ ಹೊಂದಿದ್ದರೆ, ಏಕಕಾಲದಲ್ಲಿ ಹೆಚ್ಚು ಕಾರ್ಬೋಹೈಡ್ರೇಟುಗಳನ್ನು ಸೇವಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ತೀವ್ರ ಏರಿಕೆ ಉಂಟಾಗುತ್ತದೆ. ಅನೇಕ ಗೋಧಿ ಆಧಾರಿತ ಆಹಾರಗಳಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟುಗಳ ಅಂಶವಿದೆ.

ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ​​ನಿಮ್ಮ ಕಾರ್ಬೋಹೈಡ್ರೇಟುಗಳನ್ನು ಪ್ರತಿ ಊಟದಲ್ಲಿ 45 ರಿಂದ 60 ಗ್ರಾಂ ಗಿಂತ ಹೆಚ್ಚಾಗದಂತೆ ಸೀಮಿತಗೊಳಿಸಬೇಕೆಂದು ಶಿಫಾರಸು ಮಾಡುತ್ತದೆ, ಆದರೆ ಟೊಮೆಟೊ ಆಧಾರಿತ ಸಾಸ್‌ನೊಂದಿಗೆ 2 ಕಪ್ ಗೋಧಿ ಪಾಸ್ಟಾ ಮತ್ತು ಗೋಧಿ ಹಿಟ್ಟಿನಿಂದ ತಯಾರಿಸಿದ ಎರಡು ಸಣ್ಣ ಕುಕೀಗಳನ್ನು ತಿನ್ನುವುದರಿಂದ 100 ಗ್ರಾಂ ಕಾರ್ಬೋಹೈಡ್ರೇಟ್‌ಗಳನ್ನು ಪಡೆಯಬಹುದು. ಆಲೂಗೆಡ್ಡೆ ಚಿಪ್ಸ್ ಅಥವಾ ಬುರುಗು ಪಾನೀಯದಿಂದ ಲಭಿಸುವ ಹೆಚ್ಚುವರಿ ಕಾರ್ಬೋಹೈಡ್ರೇಟುಗಳನ್ನು ಪರಿಗಣಿಸದೆ, ಬಿಳಿ ಅಥವಾ ಇಡಿಯ ಗೋಧಿ ಹಿಟ್ಟಿನಿಂದ ತಯಾರಿಸಿದ 12 ಇಂಚಿನ ಪಿಜ್ಜಾ ಸುಮಾರು 95 ಗ್ರಾಂ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ.

ನಿಮ್ಮ ಆಹಾರದಲ್ಲಿ ಗೋಧಿಯನ್ನು ನಿಯಂತ್ರಿಸಿ

ನಿಮ್ಮ ಆಹಾರದಲ್ಲಿ ಗೋಧಿಯನ್ನು ನಿಯಂತ್ರಿಸಿ

ಗೋಧಿಯ ಸೇವನೆ ನಿಮಗೆ ಕೆಲವು ಸಮಸ್ಯೆಗಳನ್ನು ಉಂಟುಮಾಡುತ್ತಿದೆ ಎಂದು ನಿಮಗೆ ಅನಿಸಿದರೆ, ಒಂದು ಅಥವಾ ಎರಡು ತಿಂಗಳು ನಿಮ್ಮ ಆಹಾರಕ್ರಮದಲ್ಲಿ ಗೋಧಿಯ ಯಾವುದೇ ಆಹಾರಗಳು ಇರದಂತೆ ಮಾಡಲು ಯತ್ನಿಸಿ. ಮೊದಲ ವಾರಗಳಲ್ಲಿ ಈ ಸವಾಲನ್ನು ಎದುರಿಸಲು ತುಂಬಾ ಕಷ್ಟವಾಗಬಹುದು ಏಕೆಂದರೆ ಗೋಧಿಯಿಂದ ಅನೇಕ ಪ್ರಧಾನ ಆಹಾರಗಳನ್ನು ತಯಾರಿಸಲಾಗುತ್ತದೆ. ಬೆಳಗಿನ ಉಪಾಹಾರಕ್ಕಾಗಿ, ಸಾಮಾನ್ಯ ಮೊಸರು, ತಾಜಾ ಹಣ್ಣುಗಳು ಮತ್ತು ಒಣಬೀಜಗಳೊಂದಿಗೆ ಕ್ವಿನೋವಾ ಗಂಜಿ ಪ್ರಯತ್ನಿಸಿ ಅಥವಾ ಪಾಲಕ್, ಅಣಬೆಗಳು ಮತ್ತು ಚೀಸ್ ನೊಂದಿಗೆ ಮೊಟ್ಟೆಗಳನ್ನು ಬೇಯಿಸಿ.

ಮಧ್ಯಾಹ್ನದ ಊಟಕ್ಕೆ, ನೀವು ಹುಳಿ ಬ್ರೆಡ್‌ನಿಂದ (sourdough bread) ಮಾಡಿದ ಸ್ಯಾಂಡ್‌ವಿಚ್ ಹೊಂದಬಹುದು ಅಥವಾ ಚಿಕನ್, ಬೆಣ್ಣೆಹಣ್ಣು, ಆಲಿವ್ ಎಣ್ಣೆಯಲ್ಲಿ ತಯಾರಿಸಿದ ಬೇಕನ್ ನೊಂದಿಗೆ ಎಲೆಗಳ ಸೊಪ್ಪಿನ ಸಲಾಡ್ ಹೊಂದಬಹುದು. ರಾತ್ರಿಯ ಊಟಕ್ಕೆ ಆಲಿವ್ ಎಣ್ಣೆಯನ್ನು ಚಿಮುಕಿಸಿದ ಒಲೆಯಲ್ಲಿ ಬೇಯಿಸಿದ ಸಿಹಿ ಆಲೂಗೆಡ್ಡೆ ಫ್ರೈಗಳೊಂದಿಗೆ ನಿಮ್ಮ ಪ್ರೋಟೀನ್ ಅಹಾರವನ್ನು ತಯಾರಿಸಿಕೊಳ್ಳಿ. ಆದರೆ ಯಾವುದೇ ಬದಲಾವಣೆಗಳನ್ನು ನಿಮ್ಮ ಆಹಾರಕ್ರಮದಲ್ಲಿ ಅಳವಡಿಸಿಕೊಳ್ಳುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗಿದೆ.

English summary

Negative Effects of Wheat in Your Diet

Here we are discussing about Negative Effects of Wheat in Your Diet. Grains were not part of the traditional human diet during the evolution of our hunter-gatherer ancestors. Read more.
X
Desktop Bottom Promotion