For Quick Alerts
ALLOW NOTIFICATIONS  
For Daily Alerts

ನವರಾತ್ರಿ ಉಪವಾಸ: ಈ 9 ದಿನಗಳ ಉಪವಾಸದಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ

|

ಎಲ್ಲಡೆ ನವರಾತ್ರಿ ಸಂಭ್ರಮ, ಈ ನವರಾತ್ರಿಯ ಸಮಯದಲ್ಲಿ ಭಕ್ತರು 9 ದಿನಗಳ ಕಾಲ ಉಪವಾಸವಿದ್ದು ನವ ದುರ್ಗೆಯರನ್ನು ಆರಾಧಿಸುತ್ತಾರೆ. ನವರಾತ್ರಿಯಲ್ಲಿ ಉಪಹಾಸ ಮಾಡುವವರು ಹಣ್ಣುಗಳು, ಹಾಲು ಇವುಗಳನ್ನಷ್ಟೇ ಸೇವಿಸುತ್ತಾರೆ. ಈ ಅವಧಿಯಲ್ಲಿ ಸಾತ್ವಿಕ ಆಹಾರಗಳನ್ನು ಮಾತ್ರ ಸೇವಿಸಬೇಕು. ದುರ್ಗೆಯ ಕೃಪೆಗಾಗಿ ಮಾಡುವ ನವರಾತ್ರಿ ಉಪವಾಸದಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಈ ಲೇಖನದಲ್ಲಿ 9 ದಿನಗಳ ಕಾಲ ಉಪವಾಸ ಮಾಡುವುದರಿಂದ ಆರೋಗ್ಯಕ್ಕೆ ಉಂಟಾಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

1 ದೇಹವನ್ನು ಡಿಟಾಕ್ಸ್ ಮಾಡುತ್ತೆ

1 ದೇಹವನ್ನು ಡಿಟಾಕ್ಸ್ ಮಾಡುತ್ತೆ

ನವರಾತ್ರಿಯಲ್ಲಿ ಉಪವಾಸ ಮಾಡುವುದರಿಂದ ದೇವಿಯ ಕೃಪೆಗೆ ಪಾತ್ರರಾಗುವುದು ಮಾತ್ರವಲ್ಲ ದೇಹವನ್ನು ಡಿಟಾಕ್ಸ್ ಅಂದರೆ ಶುದ್ಧ ಮಾಡಲು ಸಹಕಾರಿ. ನಮ್ಮ ಆಹಾರ ಶೈಲಿಯಿಂದಾಗಿ ದೇಹದಲ್ಲಿ ಕಶ್ಮಲಗಳು ಹೆಚ್ಚಾಗಿರುತ್ತದೆ. ಈ ಕಶ್ಮಲಗಳನ್ನು ಹೊರ ಹಾಕದಿದ್ದರೆ ಕಾಯಿಲೆಗಳು ಹೆಚ್ಚಾಗುವುದು. ನವರಾತ್ರಿಯಲ್ಲಿ ಸಾತ್ವಿಕ ಆಹಾರಗಳನ್ನು ಮಾತ್ರ ಸೇವಿಸುವುದರಿಂದ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಬಹುದು, ಇದರಿಂದ ಆರೋಗ್ಯ ಹೆಚ್ಚುವುದು.

2. ತೂಕ ಇಳಿಕೆಯಾಗುತ್ತದೆ

2. ತೂಕ ಇಳಿಕೆಯಾಗುತ್ತದೆ

ಈ 9 ದಿನಗಳ ಕಾಲ ಉಪವಾಸ ಮಾಡುವುದರಿಂದ ದೇಹದಲ್ಲಿರುವ ಬೇಡದ ಕೊಲೆಸ್ಟ್ರಾಲ್‌ ಕರಗುತ್ತದೆ, ದೇಹದಲ್ಲಿರುವ ಕೊಬ್ಬಿನಂಶ ಕರಗಿ ಮೈ ತೂಕ ಕಡಿಮೆಯಾಗುವುದು. ನವರಾತ್ರಿ ಉಪವಾಸ ಮಾಡುವುದರಿಂದ ಕಿಡ್ನಿ, ಲಿವರ್‌, ಇತರ ಅಂಗಾಂಗಗಳಲ್ಲಿ ಸಂಗ್ರಹವಾಗಿರುವ ಕೊಬ್ಬಿನಂಶ ಕರಗಿಸಬಹುದು.

ಹೊಟ್ಟೆ ಉಬ್ಬುವಿಕೆ ಸಮಸ್ಯೆ ದೂರಾಗುವುದು

ಕೆಲವರಿಗೆ ಏನಾದರೂ ಆಹಾರ ಸೇವಿಸಿದ ತಕ್ಷಣ ಹೊಟ್ಟೆ ಉಬ್ಬುವಿಕೆ ಉಂಟಾಗುವುದು. ನವರಾತ್ರಿ ಉಪವಾಸ ಮಾಡುವಾಗ ಇಂಥ ಸಮಸ್ಯೆ ಉಂಟಾಗವುದಿಲ್ಲ.

3. ಹೃದಯದ ಆರೋಗ್ಯಕ್ಕೆ ಒಳ್ಳೆಯದು

3. ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಉಪವಾಸ ಮಾಡುವುದರಿಂದ ದೇಹದಲ್ಲಿರುವ ಕೊಬ್ಬಿನಂಶ ಕರಗುತ್ತದೆ, ಇದರಿಂದ ರಕ್ತಸಂಚಾರ ಸರಾಗವಾಗಿ ನಡೆಯುವುದು, ರಕ್ತ ಸಂಚಾರ ಸರಾಗವಾಗಿದ್ದರೆ ಹೃದಯದ ಆರೋಗ್ಯ ವೃದ್ಧಿಸುವುದು. ಹೃದಯದ ಆರೋಗ್ಯಕ್ಕೆ ಆರೋಗ್ಯಕರ ಮೈ ತೂಕ ಹೊಂದಿರಬೇಕು. ನವರಾತ್ರಿ ಉಪವಾಸ ಮಾಡಿದಾಗ ಈ ಎಲ್ಲಾ ನಿಟ್ಟಿನಲ್ಲಿ ಸಹಕಾರಿಯಾಗಿದೆ.

ಯಾರು ನವರಾತ್ರಿ ಉಪವಾಸ ಮಾಡಬಾರದು?

ಯಾರು ನವರಾತ್ರಿ ಉಪವಾಸ ಮಾಡಬಾರದು?

ಮಧುಮೇಹಿಗಳು ಉಪವಾಸ ಮಾಡಬಾರದು: ಮಧುಮೇಹಿಗಳು ಯಾವುದೇ ಉಪವಾಸ ಮಾಡಬಾರದು. ಏಕೆಂದರೆ ಮಧುಮೇಹಿಗಳಿಗೆ ಹಸಿವು ನಿಯಂತ್ರಿಸಲು ಕಷ್ಟವಾಗುವುದು. ಉಪವಾಸವಿದ್ದಾಗ ಬೇಗನೆ ಸುಸ್ತಾಗುತ್ತಾರೆ, ಆದ್ದರಿಂದ ಮಧುಮೇಹಿಗಳು ಉಪವಾಸವನ್ನು ಮಾಡಬಾರದು.

ಈ ವಿಷಯಗಳತ್ತ ಗಮನಹರಿಸಿ

ಈ ವಿಷಯಗಳತ್ತ ಗಮನಹರಿಸಿ

* ಬಿಪಿ ಚೆಕ್‌ ಮಾಡಿ: ನವರಾತ್ರಿ ಉಪವಾಸ ಮಾಡುವಾಗ ನಿಮ್ಮ ಬಿಪಿ ಚೆಕ್‌ ಮಾಡುವುದು ಒಳ್ಳೆಯದು.

* ಉಪವಾಸವಿದ್ದಾಗ ಸುಸ್ತು, ತುಂಬಾ ತಲೆ ನೋವು, ತಲೆಸುತ್ತು ಈ ರೀತಿಯ ಸಮಸ್ಯೆಗಳು ಉಂಟಾಗಿದ್ದರೆ ಉಪವಾಸ ಮಾಡಬೇಡಿ.

ಬರೀ ಸಾತ್ವಿಕ ಆಹಾರಗಳನ್ನಷ್ಟೇ ಸೇವಿಸಿ.

English summary

Navratri Fast : Health Benefits of Fasting During Navratri in Kannada

Navratri Fast 2022: You will get health benefits from Navratri fasting in Kannada, read on....
Story first published: Monday, September 26, 2022, 11:54 [IST]
X
Desktop Bottom Promotion