For Quick Alerts
ALLOW NOTIFICATIONS  
For Daily Alerts

ಬೆಳಗ್ಗಿನ ಈ ಅಭ್ಯಾಸಗಳಿಂದ ಮೈತೂಕ ಹೆಚ್ಚುವುದು

|

ನೀವು ನಿಮ್ಮ ಬೆಳಗ್ಗಿನ ದಿನಚರಿಯನ್ನು ಹೇಗೆ ಪ್ರಾರಂಭಿಸುತ್ತೀರಿ, ಅದರಂತೆ ನಿಮ್ಮ ಆರೋಗ್ಯ ಇರುತ್ತದೆ. ಬೆಳಗ್ಗಿನ ದಿನಚರಿ ಆರೋಗ್ಯಕರವಾಗಿದ್ದರೆ ಮನಸ್ಸು ಹಾಗೂ ದೇಹ ಉಲ್ಲಾಸಭರಿತವಾಗಿರುತ್ತದೆ.

ನೀವು ಬೆಳಗ್ಗೆ ಎದ್ದು ಒಂದು ವಾಕ್ ಹೋದಾಗ ಅಥವಾ ಅರ್ಧ ಗಂಟೆ ಯೋಗ, ಪ್ರಾಣಯಾಮ ಅಭ್ಯಾಸ ಮಾಡಿದಾಗ ಮನಸ್ಸು ತುಂಬಾ ಹಗುರವಾಗುವುದು, ದೇಹದಲ್ಲಿ ಹುರುಪು ತುಂಬುವುದು.

ಅದೇ ತುಂಬಾ ತಡವಾಗಿ ಎದ್ದರೆ ಆ ದಿನ ಪೂರ್ತಿ ಆಲಸ್ಯ. ಅದಕ್ಕೇ ಬೆಳಗ್ಗೆ ನಮ್ಮ ಮೂಡ್‌ ಸರಿಯಾಗಿದ್ದರೆ ಎಲ್ಲವೂ ಸರಿ ಹೋಗುತ್ತೆ ಎಂದು ಹೇಳುವುದು.

ಆದರೆ ಕೆಲವರು ಬೆಳಗ್ಗೆ ತಡವಾಗಿ ಏಳುವುದು, ಬೆಳಗ್ಗಿನ ಉಪಾಹಾರ ಸೇವಿಸದೇ ಇರುವುದು ಈ ರೀತಿಯ ತಪ್ಪುಗಳನ್ನು ಮಾಡುತ್ತಾರೆ. ಈ ಅಭ್ಯಾಸಗಳು ನಮ್ಮ ಮಾನಸಿಕ ಒತ್ತಡ ಹೆಚ್ಚು ಮಾಡುತ್ತೆ, ಆಯಾಸ ಉಂಟು ಮಾಡುತ್ತೆ ಜೊತೆ ತೂಕ ಹೆಚ್ಚಲು ಕೂಡ ಕಾರಣವಾಗಿದೆ.

ನಾವಿಲ್ಲಿ ಬೆಳಗ್ಗೆ ನೀವು ಮಾಡುವ ಯಾವ ತಪ್ಪುಗಳಿಂದಾಗಿ ತೂಕ ಹೆಚ್ಚಾಗುತ್ತೆ ಎಂದು ಹೇಳಿದ್ದೇವೆ ನೋಡಿ:

ತುಂಬಾ ತಡವಾಗಿ ಏಳುವುದು

ತುಂಬಾ ತಡವಾಗಿ ಏಳುವುದು

ದಿನದಲ್ಲಿ 8 ಗಂಟೆ ನಿದ್ದೆ ಅವಶ್ಯಕ. ಸಾಧ್ಯವಾದರೆ ಒಂದು 11 ಗಂಟೆಯ ಒಳಗೆ ಮಲಗಿ ಬೆಳಗ್ಗೆ 6 ಗಂಟೆಯ ಒಳಗೆ ಎದ್ದೇಳುವ ಅಭ್ಯಾಸ ತುಂಬಾನೇ ಒಳ್ಳೆಯದು. ಆದರೆ ಕೆಲವರು ಮಲಗುವುದು ತಡವಾಗಿ, ಏಳುವಾಗ ಮಧ್ಯಾಹ್ನವಾಗಿರುತ್ತೆ. ಈ ರೀತಿಯ ಅಭ್ಯಾಸ ಇರುವವರು ಬೆಳಗ್ಗಿನ ಬ್ರೇಕ್‌ಫಾಸ್ಟ್‌ ತಿನ್ನಲ್ಲ ಅಥವಾ ತುಂಬಾ ತಡವಾಗಿ ತಿನ್ನುತ್ತಾರೆ. ಈ ಅಭ್ಯಾಸ ದೇಹದ ಚಯಪಚಯ ಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಯಾರು 8 ಗಂಟೆಗಿಂತ ಅಧಿಕ ಹೊತ್ತು ನಿದ್ದೆ ಮಾಡುತ್ತಾರೋ ಅವರಲ್ಲಿ ಶೇ.21ರಷ್ಟು ಜನರಿಗೆ ಒಬೆಸಿಟಿ ಬರುವ ಸಾಧ್ಯತೆ ಇದೆ ಎಂದು ಅಧ್ಯಯನ ಹೇಳಿದೆ. ದಿನದ ಸಮಯವನ್ನು ಹೆಚ್ಚು ನಿದ್ದೆಯಲ್ಲಿಯೇ ಕಳೆಯುವುದಾದರೆ ಅವರಲ್ಲಿ ಉದಾಸೀನ ಅಥವಾ ಆಲಸ್ಯ ತುಂಬಾ ಇರುತ್ತದೆ. ಇದರಿಂದ ವ್ಯಾಯಾಮ ಮಾಡುವುದಿಲ್ಲ, ಯಾವುದೇ ದೈಹಿಕ ಶ್ರಮ ಇರುವುದಿಲ್ಲ, ಈ ಎಲ್ಲಾ ಕಾರಣದಿಂದ ಮೈ ತೂಕ ಹೆಚ್ಚಾಗುತ್ತದೆ.

ಬೆಳಗ್ಗೆ ನೀರು ಕುಡಿಯದೇ ಇರುವುದು

ಬೆಳಗ್ಗೆ ನೀರು ಕುಡಿಯದೇ ಇರುವುದು

ಎಷ್ಟೋ ಜನರಿಗೆ ಬೆಳಗ್ಗೆ ಕಾಫಿ/ಟೀ ಕುಡಿಯುವ ಅಭ್ಯಾಸ ಇರುತ್ತದೆ. ಆದರೆ ಈ ಅಭ್ಯಾಸದಿಂದ ನಿಮ್ಮ ಸೊಂಟದ ಸುತ್ತಲಿನ ಗಾತ್ರ ಹೆಚ್ಚಾಗುವುದು. ಬೆಳಗ್ಗೆ ಎದ್ದು ನೀರು ಕುಡಿದರೆ ಇದು ದೇಹದಲ್ಲಿರುವ ಬೇಡದ ಕಶ್ಮಲಗಳನ್ನು ಹೊರಹಾಕಲು ಸಹಾಯ ಮಾಡುತ್ತೆ, ಅಲ್ಲದೆ ದೇಹವು ಅಧಿಕ ಕ್ಯಾಲೋರಿಯನ್ನು ಕರಗಿಸಲು ನೀರು ಸಹಕಾರಿ. ನೀರು ಕಡಿಮೆ ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ, ಇದರಿಂದ ಚಯಪಚಯ ಕ್ರಿಯೆ ಕಡಿಮೆಯಾಗುತ್ತೆ, ಇದರ ಪರಿಣಾಮ ಸೊಂಟದ ಸುತ್ತಲಿನ ಮೈತೂಕ ಹೆಚ್ಚುವುದು.

ನೀವು ಮೈತೂಕ ಹೆಚ್ಚಬಾರದು ಎಂದು ಬಯಸುವುದಾದರೆ ಬೆಳಗ್ಗೆ ಎದ್ದ ಬಳಿಕ ಮೊದಲಿಗೆ ಬಿಸಿ-ಬಿಸಿ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಮತ್ತು ಜೇನು ಸೇರಿಸಿ ಕುಡಿದರೆ ಮೈತೂಕ ಕಾಪಾಡಬಹುದು.

ಬೆಳಗ್ಗೆ ಆರೋಗ್ಯಕರವಲ್ಲದ ಆಹಾರ ಸೇವಿಸುವುದು

ಬೆಳಗ್ಗೆ ಆರೋಗ್ಯಕರವಲ್ಲದ ಆಹಾರ ಸೇವಿಸುವುದು

ಬೆಳಗ್ಗೆ ತಿಂಡಿಗೆ ನೂಡಲ್ಸ್, ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇನೆ ಇವೆಲ್ಲಾ ಮೈ ತೂಕ ಹೆಚ್ಚಲು ಒಂದು ಕಾರಣ. ಬೆಳಗ್ಗೆ ನಿಮ್ಮ ಆಹಾರದಲ್ಲಿ ಆರೋಗ್ಯಕರ ಆಹಾರ ಇರುವಂತೆ ನೋಡಿಕೊಳ್ಳಿ, ಜೊತೆಗೆ ಎರಡು ಬಗೆಯ ಹಣ್ಣು ಇದ್ದರೆ ತುಂಬಾನೇ ಒಳ್ಳೆಯದು. ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಮೊಟ್ಟೆ, ಸಲಾಡ್ , ದೋಸೆ, ಇಡ್ಲಿ ಇವೆಲ್ಲಾ ಆರೋಗ್ಯಕರ. ಅಧಿಕ ಕೊಬ್ಬಿನಂಶವಿರುವ, ಅಧಿಕ ಸೋಡಿಯಂ ಇರುವ ಆಹಾರ ಸೇವನೆಯಿಂದ ಹೊಟ್ಟೆ ಉಬ್ಬುವುದು, ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು.

ನೀವು ಮೈ ತೂಕದ ಬಗ್ಗೆ ತುಂಬಾ ಚಿಂತೆ ಮಾಡುತ್ತಿದ್ದರೆ ಬೆಳಗ್ಗೆ ನೀವು ಸೇವಿಸುವ ಆಹಾರದ ಕಡೆ ಗಮನ ನೀಡಿ.

ಬೆಳಗ್ಗೆ ಟಿವಿ ನೋಡುತ್ತಾ ಆಹಾರ ಸೇವಿಸುವುದು

ಬೆಳಗ್ಗೆ ಟಿವಿ ನೋಡುತ್ತಾ ಆಹಾರ ಸೇವಿಸುವುದು

ಈ ಅಭ್ಯಾಸ ಹಲವರಲ್ಲಿ ಇರುತ್ತದೆ. ಹೀಗೆ ಮಾಡುವುದರಿಂದ ಗೊತ್ತಿಲ್ಲದೆಯೇ ಅಗ್ಯತಕ್ಕಿಂತ ಹೆಚ್ಚು ತಿನ್ನುವ ಸಾಧ್ಯತೆ ಹೆಚ್ಚು. ಅಲ್ಲದೆ ಟಿವಿ ನೋಡುತ್ತಾ ಊಟ ಮಾಡಿದರೆ ಆಹಾರ ಚೆನ್ನಾಗಿ ಜಗಿಯುವುದಿಲ್ಲ, ಇದರಿಂದ ಜೀರ್ಣಕ್ರಿಯೆ ನಿಧಾನವಾಗುವುದು, ಮೈತೂಕ ಹೆಚ್ಚುವುದು. ಆಹಾರವನ್ನು ಚೆನ್ನಾಗಿ ಜಗಿದು ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಿ.

ತುಂಬಾ ಟೀ/ಕಾಫಿ ಕುಡಿಯುವುದು

ತುಂಬಾ ಟೀ/ಕಾಫಿ ಕುಡಿಯುವುದು

ಬೆಳಗ್ಗೆ ಎದ್ದ ಬಳಿ 2-3 ಲೋಟ ಟೀ/ಕಾಫಿ ಕುಡಿಯವ ಅಭ್ಯಾಸ ಇದ್ದರೆ ಇದರಿಂದ ಮೈ ತೂಕ ಹೆಚ್ಚುವುದು. ತೂಕ ಇಳಿಕೆ ಮಾಡಬೇಕೆಂದರೆ ಸಕ್ಕರೆ ಬಳಸಬೇಡ, ಅಲ್ಲದೆ ಸೋಯಾ ಹಾಲು, ಕೊಬ್ಬಿನಂಶ ಕಡಿಮೆ ಇರುವ ಹಾಲು ಬಳಕೆ ಮಾಡಿ.

ಬೆಳಗ್ಗೆ ವ್ಯಾಯಾಮ ಮಾಡದೇ ಇರುವುದು

ಬೆಳಗ್ಗೆ ವ್ಯಾಯಾಮ ಮಾಡದೇ ಇರುವುದು

ಬೆಳಗ್ಗೆ ವ್ಯಾಯಾಮ ಮಾಡುವುದರಿಂದ ತೂಕ ನಿಯಂತ್ರಣದಲ್ಲಿ ಇರುವುದು ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಬೆಳಗ್ಗೆ ಎದ್ದು ಅರ್ಧ ಗಂಟೆ ನಡೆಯುವುದು, ವ್ಯಾಯಾಮ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.

English summary

Morning Habits May Be Causing You to Gain Weight

These morning habits may be causing you to gain weight, read on...
X
Desktop Bottom Promotion