For Quick Alerts
ALLOW NOTIFICATIONS  
For Daily Alerts

ಮಧುಮೇಹ, ಮರೆವು, ಕ್ಯಾನ್ಸರ್ ಮತ್ತಿತರ ಕಾಯಿಲೆ ತಡೆಗಟ್ಟುವ MIND ಡಯಟ್‌

|

ನಾವು ಯಾವ ಆಹಾರವನ್ನು ಇಷ್ಟ ಪಟ್ಟು ಸೇವಿಸುತ್ತೇವೆ ಅದರ ಪ್ರಭಾವ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಆಗುತ್ತದೆ. ಏಕೆಂದರೆ ಕೆಲವೊಂದು ಆಹಾರಗಳನ್ನು ಕಷ್ಟ ಪಟ್ಟು ತಿನ್ನುತ್ತೇವೆ. ಬೇರೆಯವರ ಒತ್ತಾಯದಿಂದ ಅಥವಾ ಮನಸ್ಸಿಲ್ಲದೆ ಸೇವಿಸುವ ಆಹಾರ ಪದಾರ್ಥಗಳು ಕೆಲವೊಮ್ಮೆ ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಸಾಕಷ್ಟು ಅಧ್ಯಯನಗಳಲ್ಲಿ ಇದು ಸಾಬೀತಾಗಿದೆ ಕೂಡ. ನಮ್ಮ ಆರೋಗ್ಯ ಚೆನ್ನಾಗಿರಬೇಕಾದರೆ ನಾವು ಅತ್ಯುತ್ತಮವಾದ ಶುದ್ಧ ಆಹಾರ ಸೇವನೆ ಮಾಡಬೇಕು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸಸ್ಯಾಧಾರಿತ ಆಹಾರ ಪದಾರ್ಥಗಳಿಗೆ ಸಾಕಷ್ಟು ಮನ್ನಣೆ ಇದೆ. ನಮಗೆ ಸಿಗುವಂತಹ ಪೌಷ್ಠಿಕ ಸತ್ವಗಳು ನೈಸರ್ಗಿಕ ರೂಪದಲ್ಲಿ ನಮಗೆ ಇದರಿಂದ ಸಿಗುತ್ತವೆ.

ಆಹಾರ ಪದ್ಧತಿಗಳಲ್ಲಿ ಹಲವಾರು ವಿಧಗಳಿವೆ. ಅದರಲ್ಲಿ ಹೆಚ್ಚು ಪ್ರಚಲಿತಗೊಂಡಿರುವುದು ಮೆಡಿಟರೇನಿಯನ್ ಆಹಾರ ಪದ್ಧತಿ. ಒಂದೊಂದು ಆಹಾರ ಪದ್ಧತಿಯಲ್ಲಿ ಮನುಷ್ಯನ ಒಂದೊಂದು ಬಗೆಯ ಆರೋಗ್ಯ ಸಮಸ್ಯೆಗಳ ಗುಂಪನ್ನು ಸರಿ ಪಡಿಸುವ ಗುಣ - ಲಕ್ಷಣಗಳು ಇರುತ್ತವೆ.

ಈ ಲೇಖನದಲ್ಲಿ ಅಂತಹದೇ ಒಂದು ಜನರ ಆರೋಗ್ಯಕ್ಕೆ ಸಹಕಾರಿಯಾಗಿರುವ MIND ಎಂಬ ಒಂದು ಬಗೆಯ ಆಹಾರ ಪದ್ಧತಿಯ ಬಗ್ಗೆ ತಿಳಿದುಕೊಳ್ಳೋಣ:

MIND ಆಹಾರ ಪದ್ಧತಿ ಎಂದರೆ ಏನು ?

MIND ಆಹಾರ ಪದ್ಧತಿ ಎಂದರೆ ಏನು ?

ಅತ್ಯಂತ ಸರಳವಾಗಿ ಹೇಳಬೇಕೆಂದರೆ MIND ಆಹಾರ ಪದ್ಧತಿ ಇನ್ನಿತರ ಎರಡು ಬಗೆಯ ಅತ್ಯುತ್ತಮ ಆಹಾರ ಪದ್ಧತಿಗಳ ಸಂಯೋಜನೆ ಆಗಿದೆ. ಅವುಗಳೆಂದರೆ,

1 ಮೆಡಿಟರೇನಿಯನ್ ಆಹಾರ ಪದ್ಧತಿ

2 DASH ಆಹಾರ ಪದ್ಧತಿ

ವಯಸ್ಸಾದಂತೆ ಮನುಷ್ಯನಿಗೆ ಎದುರಾಗುವ ಮೆದುಳಿನ ತೊಂದರೆಗಳು ಮತ್ತು ಅರಿವಿನ ಸಮಸ್ಯೆಯನ್ನು ಅಂದರೆ ಡೆಮೆನ್ಷಿಯ ಸಮಸ್ಯೆಯನ್ನು ದೂರ ಮಾಡಲು ಈ ಆಹಾರ ಪದ್ಧತಿ ಬಳಕೆಗೆ ಬರುತ್ತದೆ. ಆದರೆ ಆಂಟಿ - ಆಕ್ಸಿಡೆಂಟ್ ಅಂಶ ಹೆಚ್ಚಾಗಿರುವ ಈ ಪದ್ಧತಿಯಿಂದ ದೀರ್ಘ ಕಾಲದ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ. ಹಾಗಾಗಿ ಇದೊಂದು ಅತ್ಯುತ್ತಮ ಆಹಾರ ಪದ್ಧತಿ ಎಂದು ಸಾಬೀತಾಗಿದೆ.

MIND ಆಹಾರ ಪದ್ಧತಿಯಲ್ಲಿ ಕಂಡುಬರುವ ಆಹಾರ ಪದಾರ್ಥಗಳು : -

MIND ಆಹಾರ ಪದ್ಧತಿಯಲ್ಲಿ ಕಂಡುಬರುವ ಆಹಾರ ಪದಾರ್ಥಗಳು : -

MIND ಆಹಾರ ಪದ್ಧತಿಯನ್ನು ಅನುಸರಿಸುತ್ತಿರುವ ಜನರಿಗೆ ಸಾಕಷ್ಟು ಲಾಭಗಳಿವೆ. ಏಕೆಂದರೆ ಇದರಲ್ಲಿ ನಾವು ಪ್ರತಿ ದಿನ ಸೇವಿಸುವ ಹಲವು ಆಹಾರ ಪದಾರ್ಥಗಳು ಸೇರಿರುತ್ತವೆ. ಉದಾಹರಣೆಗೆ ಬೆರ್ರಿ ಹಣ್ಣುಗಳು, ಡ್ರೈ ಫ್ರೂಟ್ಸ್, ಹಸಿರೆಲೆ ತರಕಾರಿಗಳು, ಬೀನ್ಸ್, ಪೂರ್ಣ ಪ್ರಮಾಣದ ಕಾಳುಗಳು, ಸ್ಟಾರ್ಚ್ ಅಂಶ ಹೊರತಾದ ತರಕಾರಿಗಳು ಇತ್ಯಾದಿ ಈ ಆಹಾರ ಪದ್ಧತಿಯ ಅಭ್ಯಾಸದಲ್ಲಿ ತಿನ್ನಲು ಸಿಗುತ್ತವೆ. ತಜ್ಞರ ಪ್ರಕಾರ MIND ಆಹಾರ ಪದ್ಧತಿಯನ್ನು ಅನುಸರಿಸುವ ಜನರು ವಾರಕ್ಕೆ ಕನಿಷ್ಠ ಒಂದು ಬಾರಿ ಮೀನು ಮತ್ತು ಪೌಲ್ಟ್ರಿ ಆಹಾರ ಸೇವನೆಯ ಜೊತೆಗೆ ತಮ್ಮ ಅಡುಗೆ ಪದಾರ್ಥಗಳ ತಯಾರಿಯಲ್ಲಿ ಆಲಿವ್ ಆಯಿಲ್ ಬಳಸುವುದು ಅನಿವಾರ್ಯವಾಗಿದೆ. ಇನ್ನು ಮಧ್ಯಪಾನ ಸೇವಿಸುವವರು ಪ್ರತಿ ದಿನ ಒಂದು ಗ್ಲಾಸ್ ವೈನ್ ಮಾತ್ರ ಸೇವನೆ ಮಾಡಬೇಕು.

ಯಾವೆಲ್ಲಾ ಆಹಾರಗಳನ್ನು ತಿನ್ನಬಾರದು : -

ಯಾವೆಲ್ಲಾ ಆಹಾರಗಳನ್ನು ತಿನ್ನಬಾರದು : -

MIND ಆಹಾರ ಪದ್ಧತಿಯನ್ನು ಅನುಸರಿಸುತ್ತಿರುವ ಜನರು ಯಾವುದೇ ಕಾರಣಕ್ಕೂ ತಮ್ಮ ಆಹಾರ ಪದ್ಧತಿಯಲ್ಲಿ ಸ್ಯಾಚುರೇಟೆಡ್ ಕೊಬ್ಬಿನ ಅಂಶಗಳನ್ನು ಮತ್ತು ಟ್ರಾನ್ಸ್ ಫ್ಯಾಟ್ ಅಂಶಗಳನ್ನು ಸೇವಿಸಬಾರದು. ಬೆಣ್ಣೆಯನ್ನು ಮತ್ತು ಮಾರ್ಗರೈನ್ ಸೇವನೆ ಮಾಡುವುದಾದರೆ ಒಂದು ದಿನಕ್ಕೆ 1 ಟೇಬಲ್ ಸ್ಪೂನ್ ಗಿಂತ ಕಡಿಮೆ ಇರಬೇಕು. ಇನ್ನು ಕೆಂಪು ಮಾಂಸಾಹಾರ ಮತ್ತು ಚೀಸ್ ಪದಾರ್ಥಗಳಿಂದ ದೂರವೇ ಉಳಿಯಬೇಕು. ಬೇಕರಿಯ ಸಿಹಿ ಪದಾರ್ಥಗಳು, ಪೇಸ್ಟ್ರಿ, ಎಣ್ಣೆಯಲ್ಲಿ ಕರಿದ ಪದಾರ್ಥಗಳು, ರಸ್ತೆ ಬದಿಯ ಜಂಕ್ ಫುಡ್ ಸೇವನೆ ಇತ್ಯಾದಿಗಳಿಂದ ಅಂತರವನ್ನು ಕಾಯ್ದುಕೊಂಡರೆ ಒಳ್ಳೆಯದು.

MIND ಆಹಾರ ಪದ್ಧತಿಯನ್ನು ಅನುಸರಿಸಿ ಯಾವ ಕಾಯಿಲೆಗಳನ್ನು ದೂರ ಇಡಬಹುದು : -

MIND ಆಹಾರ ಪದ್ಧತಿಯನ್ನು ಅನುಸರಿಸಿ ಯಾವ ಕಾಯಿಲೆಗಳನ್ನು ದೂರ ಇಡಬಹುದು : -

MIND ಆಹಾರ ಪದ್ಧತಿ ದೇಹಕ್ಕೆ ಅತ್ಯುತ್ತಮವಾದ ಆರೋಗ್ಯವನ್ನು ನೀಡುವ ಆಹಾರ ಪದ್ಧತಿಯಾಗಿದೆ. ಮುಖ್ಯವಾಗಿ ಅರಿವಿನ ಸಮಸ್ಯೆಗಳನ್ನು ಹೋಗಲಾಡಿಸುವ ಮತ್ತು ಮೆದುಳಿಗೆ ಸಂಬಂಧ ಪಟ್ಟಂತೆ ಇರುವ ದೀರ್ಘಕಾಲಿಕ ಕಾಯಿಲೆಗಳನ್ನು ಈ ಆಹಾರ ಪದ್ಧತಿಯಿಂದ ದೂರ ಮಾಡಿಕೊಳ್ಳಬಹುದು. ಇದರ ಕೆಲವೊಂದು ಪ್ರಯೋಜನಗಳನ್ನು ನೋಡುವುದಾದರೆ......

ಹೃದಯ ರಕ್ತನಾಳದ ಸಮಸ್ಯೆಗಳು ದೂರವಾಗುತ್ತವೆ : -

ಹೃದಯ ರಕ್ತನಾಳದ ಸಮಸ್ಯೆಗಳು ದೂರವಾಗುತ್ತವೆ : -

ಇತ್ತೀಚೆಗೆ ನಡೆದ ಒಂದು ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, MIND ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ವಯಸ್ಸಾದ ಮೇಲೆ ಎದುರಾಗುವ ಅಲ್ಜಿಮರ್ ಕಾಯಿಲೆಯನ್ನು ತಡೆಗಟ್ಟಬಹುದು. ಇದರ ಜೊತೆಗೆ ಹೃದಯ ರಕ್ತನಾಳಗಳ ಸಮಸ್ಯೆ ಇರುವುದಿಲ್ಲ. ಮೇಲೆ ಹೇಳಿದಂತೆ ಜನರ ಆರೋಗ್ಯ ದೃಷ್ಟಿಯಲ್ಲಿ ಎರಡು ಬಹಳ ಉತ್ತಮ ಎನಿಸಿಕೊಂಡ ಆಹಾರ ಪದ್ಧತಿಗಳ ಸಂಯೋಜನೆಯೊಂದಿಗೆ ಇರುವ MIND ಆಹಾರ ಪದ್ಧತಿ ನಿಮ್ಮ ದೇಹಕ್ಕೆ ಸಂಬಂಧಪಟ್ಟಂತೆ, ಪಾರ್ಶ್ವವಾಯು, ಹೃದಯದ ಸಮಸ್ಯೆಗಳು, ಅಧಿಕ ರಕ್ತದ ಒತ್ತಡದ ಸಮಸ್ಯೆ ಇತ್ಯಾದಿಗಳನ್ನು ದೂರ ಮಾಡುತ್ತದೆ.

ಮಧುಮೇಹಿ ರೋಗಿಗಳಿಗೆ ತುಂಬಾ ಸಹಕಾರಿ : -

ಮಧುಮೇಹಿ ರೋಗಿಗಳಿಗೆ ತುಂಬಾ ಸಹಕಾರಿ : -

ಸಕ್ಕರೆ ಕಾಯಿಲೆ ಹೊಂದಿರುವ ರೋಗಿಗಳು ಮುಖ್ಯವಾಗಿ ತಮ್ಮ ಆಹಾರ ಪದ್ಧತಿಯ ಮೇಲೆ ಹೆಚ್ಚು ಗಮನ ನೀಡಬೇಕು. ಒಳ್ಳೆಯ ಗುಣಮಟ್ಟದ ಜೀವನ ನಡೆಸಲು ಮಧುಮೇಹಿಗಳಿಗೆ ತಮ್ಮ ಆರೋಗ್ಯ ಬಹಳ ಮುಖ್ಯವಾಗುತ್ತದೆ. ಹಣ್ಣು-ತರಕಾರಿಗಳ ಜೊತೆಗೆ ಕಾಳುಗಳನ್ನು ಮತ್ತು ಬೀಜಗಳನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣ ಆಗುತ್ತದೆ. ಮಧುಮೇಹ ಸಮಸ್ಯೆ ಶೇಕಡ 20% ಕಡಿಮೆ ಆಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಕ್ಯಾನ್ಸರ್ ರೋಗದಿಂದ ಮುಕ್ತಿ ಪಡೆಯಬಹುದು : -

ಕ್ಯಾನ್ಸರ್ ರೋಗದಿಂದ ಮುಕ್ತಿ ಪಡೆಯಬಹುದು : -

ಹೆಚ್ಚು ಹೆಚ್ಚು ತರಕಾರಿಗಳು, ದ್ವಿದಳ ಧಾನ್ಯಗಳು, ಕಾಳುಗಳು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿದ್ದರೆ, ಮುಂಬರುವ ದಿನಗಳಲ್ಲಿ ಕ್ಯಾನ್ಸರ್ ಸಮಸ್ಯೆ ಬರದಂತೆ ತಡೆಗಟ್ಟಬಹುದು. ಈ ವಿಚಾರದಲ್ಲಿ MIND ಆಹಾರ ಪದ್ಧತಿ ತುಂಬಾ ಉತ್ತಮವಾಗಿದೆ ಎಂದು ಹಲವೆಡೆ ಸಾಬೀತಾಗಿದೆ. MIND ಆಹಾರ ಪದ್ಧತಿಯನ್ನು ಅನುಸರಿಸುತ್ತಿರುವ ಜನರಿಗೆ ಕರುಳಿನ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಹೊಟ್ಟೆಗೆ ಸಂಬಂಧ ಪಟ್ಟ ಕ್ಯಾನ್ಸರ್ ಸಮಸ್ಯೆ, ಲಿವರ್ ಕ್ಯಾನ್ಸರ್ ಮತ್ತು ಪ್ಯಾಂಕ್ರಿಯಾಸ್ ಕ್ಯಾನ್ಸರ್ ಬರುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ.

ದೀರ್ಘ ಕಾಲದ ಉರಿಯೂತ ದೂರವಾಗುತ್ತದೆ : -

ಮನುಷ್ಯರಿಗೆ ಸ್ವಲ್ಪ ವಯಸ್ಸಾದ ಮೇಲೆ ಬರುವ ಅಲ್ಜಿಮರ್ ಕಾಯಿಲೆ, ಹೃದಯದ ಸಮಸ್ಯೆ ಮತ್ತು ರೋಗ - ನಿರೋಧಕ ಶಕ್ತಿಯ ವಿರುದ್ಧ ಕಂಡುಬರುವ ಹಲವಾರು ಸಮಸ್ಯೆಗಳು ಉರಿಯೂತದಿಂದ ಉಂಟಾಗುತ್ತವೆ. ಆದರೆ ಹೆಚ್ಚು ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಸಸ್ಯಾಧಾರಿತ ಆಹಾರ ಪದ್ಧತಿ ಅನುಸರಿಸುವುದರಿಂದ ಮತ್ತು ಕೊಬ್ಬಿನ ಅಂಶ ಜೊತೆಗೆ ಸಕ್ಕರೆ ಅಂಶ ಇರುವ ಆಹಾರಗಳನ್ನು ದೂರ ಮಾಡುವುದರಿಂದ ಉರಿಯೂತದ ಸಮಸ್ಯೆ ದೂರವಾಗುತ್ತದೆ.

English summary

MIND Diet To Prevent Diabetes, CVD, Dementia and More

MIND Diet To Prevent Diabetes, CVD, Dementia and more diseases, know more about this MIND diet...
X
Desktop Bottom Promotion