For Quick Alerts
ALLOW NOTIFICATIONS  
For Daily Alerts

ಲಿವರ್‌ ಸಮಸ್ಯೆ, ಲಿವರ್‌ ಕ್ಯಾನ್ಸರ್ ತಡೆಗಟ್ಟುವ ಗುಣ ಈ 11 ಆಹಾರಗಳಿಗಿವೆ

|

ಲಿವರ್ ಅನ್ನು ಎಷ್ಟು ಆರೋಗ್ಯವಾಗಿ ಇಡುತ್ತೇವೋ ಅಷ್ಟು ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಏಕೆಂದರೆ ದೇಹದ ಇತರ ಅಂಗಗಳು ಆರೋಗ್ಯವಾಗಿರಬೇಕೆಂದರೆ ಲಿವರ್‌ ಆರೋಗ್ಯ ಚೆನ್ನಾಗಿರಬೇಕು.

ದಪ್ಪಗಿರುವವರಿಗೆ, ಮದ್ಯಪಾನ ಮಾಡುವವರಿಗೆ ಫ್ಯಾಟಿ ಲಿವರ್‌ ಸಮಸ್ಯೆ ಇರುತ್ತೆ. ನಾವು ಸೇವಿಸುವ ಕೆಲವೊಂದು ಔಷಧಗಳು ಕೂಡ ಲಿವರ್‌ನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು. ಇದರಿಂದ ನಮ್ಮ ಚಯಪಚಯದಲ್ಲಿ ವ್ಯತ್ಯಾಸ ಉಂಟಾಗಿ ಒಟ್ಟು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಇದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುವುದು. ಆದ್ದರಿಂದ ಲಿವರ್‌ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು.

ನೀವು ಟೀ, ಕಾಫಿ ಪ್ರಿಯರಾಗಿದ್ದರೆ ಈ ವಿಷಯ ಕೇಳಿದರೆ ನ ನೀವು ಹಚ್ಚು ಖುಷಿ ಪಡುತ್ತೀರಿ, ಅದು ನಿಮ್ಮ ಲಿವರ್‌ನ ಆರೋಗ್ಯ ಹೆಚ್ಚಿಸುವಲ್ಲಿ ಸಹಕಾರಿ. ನಾವಿಲ್ಲಿ ಲಿವರ್‌ ಆರೋಗ್ಯ ಹೆಚ್ಚಿಸುವ ಅತ್ಯುತ್ತಮ ಆಹಾರಗಳ ಪಟ್ಟಿ ನೀಡಿದ್ದೇವೆ ನೋಡಿ:

1.ಕಾಫಿ:

1.ಕಾಫಿ:

ನಿಮ್ಮ ಲಿವರ್‌ ಆರೋಗ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅದರಲ್ಲೂ ಬ್ಲ್ಯಾಕ್‌ ಕಾಫಿ (ಸಕ್ಕರೆ ರಹಿತ), ಬೆಲ್ಲ ಕಾಫಿ ಇವೆಲ್ಲಾ ಆರೋಗ್ಯಕ್ಕೆ ಒಳ್ಳೆಯದು.

ಅಲ್ಲದೆ ಕಾಫಿ ಕುಡಿಯುವುದರಿಂದ ಸಾಮಾನ್ಯವಾಗಿ ಕಂಡು ಬರುವ ಲಿವರ್‌ ಕ್ಯಾನ್ಸರ್‌ ಕೂಡ ತಡೆಗಟ್ಟಬಹುದು ಎಂದು ಅಧ್ಯಯನಗಳು ಹೇಳಿವೆ. ಯಾರು ದಿನದಲ್ಲಿ 3 -4 ಕಪ್‌ ಹಾಫಿ ಕುಡಿಯುವ ಅಭ್ಯಾಸ ಇರುತ್ತದೋ ಅವರಲ್ಲಿ ಲಿವರ್‌ ಸಮಸ್ಯೆ, ಲಿವರ್ ಕ್ಯಾನ್ಸರ್ ಈ ರೀತಿಯೆಲ್ಲಾ ಕಂಡು ಬರುವುದು ತುಂಬಾ ಅಪರೂಪ.

2. ಟೀ

2. ಟೀ

ಟೀ ಕೂಡ ಲಿವರ್‌ನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಗ್ರೀನ್‌ ಟೀ ಕುಡಿಯುವುದರಿಂದ ಫ್ಯಾಟಿ ಲಿವರ್‌ ಸಮಸ್ಯೆ ತಡೆಗಟ್ಟಬಹುದು. ಇನ್ನು ಈಗಾಗಲೇ ಲಿವರ್‌ ಸಮಸ್ಯೆಯಿದ್ದರೆ ಗ್ರೀನ್‌ ಟೀ ತೆಗೆದುಕೊಳ್ಳುವ ಮುನ್ನ ನೀವು ನಿಮ್ಮ ವೈದ್ಯರ ಸಲಹೆ ಪಡೆಯಲೇಬೇಕು.

3. ಗ್ರೇಪ್‌ಫ್ರೂಟ್‌

3. ಗ್ರೇಪ್‌ಫ್ರೂಟ್‌

ಗ್ರೇಪ್‌ಫ್ರೂಟ್‌ನಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ ಸ್ವಾಭಾವಿಕವಾಗಿ ನಿಮ್ಮ ಲಿವರ್‌ನ ರಕ್ಷಣೆ ಮಾಡುತ್ತದೆ. ಅಲ್ಲದೆ ಈ ಹಣ್ಣು ಹೆಪಾಟೈಟ್‌ ಫೈಬ್ರೋಸಿಸ್ ಉಂಟಾಗುವುದನ್ನು ತಡೆಗಟ್ಟುತ್ತೆ. ಇನ್ನು ಲಿವರ್‌ನಲ್ಲಿ ಉರಿಯೂತದ ಸಮಸ್ಯೆ ತಡೆಗಟ್ಟುತ್ತೆ, ಲಿವರ್‌ನ ನರಗಳು ಹಾನಿಯಾಗದಂತೆ ರಕ್ಷಣೆ ಮಾಡುತ್ತೆ.

4. ಬೆರ್ರಿ ಹಣ್ಣುಗಳು

4. ಬೆರ್ರಿ ಹಣ್ಣುಗಳು

ಬೆರ್ರಿ ಹಣ್ಣುಗಳು ಒಟ್ಟು ಮೊತ್ತದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ನೀವು ಬ್ಲೂ ಬೆರ್ರಿ ಹಾಗೂ ಕ್ರ್ಯಾನ್‌ ಬೆರ್ರಿ ಹಣ್ಣುಗಳನ್ನು ನಿರಂತರವಾಗಿ 21 ದಿನ ತಿಂದರೆ ನಿಮ್ಮ ಲಿವರ್‌ನ ಆರೋಗ್ಯ ಸೂಪರ್ ಆಗಿರುತ್ತೆ,

5. ದ್ರಾಕ್ಷಿ

5. ದ್ರಾಕ್ಷಿ

ಎಲ್ಲಾ ಬಗೆಯ ದ್ರಾಕ್ಷಿಗಳು ಆರೋಗ್ಯಕ್ಕೆ ಒಳ್ಳೆಯದು. ಒಂದು ಅಧ್ಯಯನದ ಪ್ರಕಾರ 3 ತಿಂಗಳವರೆಗೆ ಅದರ ಬೀಜ ತೆಗೆದು ತಿಂದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರ ಕುರಿತು ಇನ್ನೂ ಹೆಚ್ಚಿನ ಅಧ್ಯಯನಗಳು ನಡೆಯುತ್ತಿಎ.

6. ಕಳ್ಳಿ ಹಣ್ಣು

6. ಕಳ್ಳಿ ಹಣ್ಣು

ಇದನ್ನು Prickly pear ಎಂದು ಇಂಗ್ಲಿಷ್‌ನಲ್ಲಿ ಕರೆಯಲಾಗುವುದು. ಇದು ತಿನ್ನುವ ಕಳ್ಳಿ ಹಣ್ಣಾಗಿದ್ದು ಇದರಿಂದ ಜ್ಯೂಸ್‌ ಎಲ್ಲಾ ಮಾಡಿ ಕುಡಿಯಲಾಗುವುದು. ಇದರಿಂದ ಅಲ್ಸರ್‌ ತಡೆಗಟ್ಟಬಹುದು, ಹೊಟ್ಟೆಯಲ್ಲಿ ಹುಣ್ಣಾಗಿದ್ದರೆ ಒಣಗುವುದು, ಲಿವರ್ ಸಮಸ್ಯೆ ತಡೆಗಟ್ಟಬಹುದು.

7. ಬೀಟ್‌ರೂಟ್‌ಜ್ಯೂಸ್‌

7. ಬೀಟ್‌ರೂಟ್‌ಜ್ಯೂಸ್‌

ಬೀಟ್‌ರೂಟ್‌ ಜ್ಯೂಸ್‌ ಕೂಡ ಲಿವರ್‌ನ ಆರೋಗ್ಯಕ್ಕೆ ಒಳ್ಳೆಯದು. ಬೀಟ್‌ರೂಟ್‌ ಜ್ಯೂಸ್‌ ರಕ್ತಹೀನತೆ ಸಮಸ್ಯೆ ಕೂಡ ತಡೆಗಟ್ಟುತ್ತೆ.

8. ಬ್ರೊಕೋಲಿ, ಕ್ಯಾಬೇಜ್‌, ಬೀಟ್‌ರೂಟ್‌ ಈ ಬಗೆಯ ತರಕಾರಿಗಳಿ

8. ಬ್ರೊಕೋಲಿ, ಕ್ಯಾಬೇಜ್‌, ಬೀಟ್‌ರೂಟ್‌ ಈ ಬಗೆಯ ತರಕಾರಿಗಳಿ

ಮೊಳಕೆ ಬರಿಸಿದ ಕಾಳುಗಳು, ಬ್ರೊಕೋಲಿ, ಸಾಸಿವೆ ಸೊಪ್ಪು, ಕ್ಯಾಬೇಜ್‌, ಹೂಕೋಸು ಈ ಬಗೆಯ ತರಕಾರಿಗಳ ಸೇವನೆ ಲಿವರ್‌ನ ಆರೋಗ್ಯಕ್ಕೆ ಒಳ್ಳೆಯದು.

9. ನಟ್ಸ್

9. ನಟ್ಸ್

ನಟ್ಸ್‌ನಲ್ಲಿ ಒಳ್ಳೆಯ ಕೊಬ್ಬಿನಂಶ, ಆ್ಯಂಟಿಆಕ್ಸಿಡೆಂಟ್‌, ವಿಟಮಿನ್ ಇ ಇರುತ್ತದೆ. ನಟ್ಸ್‌ ತಿನ್ನುವುದರಿಂದ ಬರೀ ಲಿವರ್‌ಗಷ್ಟೇ ಅಲ್ಲ ಹೃದಯಕ್ಕೆ ಒಟ್ಟು ಮೊತ್ತ ಆರೋಗ್ಯಕ್ಕೆ ಒಳ್ಳೆಯದು.

10. ಮೀನು

10. ಮೀನು

ಮೀನಿನಲ್ಲಿ ಒಮೆಗಾ 3 ಕೊಬ್ಬಿನಂಶವಿರುತ್ತದೆ ಇದು ಉರಿಯೂತದ ಸಮಸ್ಯೆ ಕಡಿಮೆ ಮಾಡಲು ತುಂಬಾನೇ ಸಹಕಾರಿ, ಅಲ್ಲದೆ ಹೃದಯ ಸಂಬಂಧಿ ಸಮಸ್ಯೆ ಕಡಿಮೆ ಮಾಡುತ್ತೆ. ಮೀನನ್ನು ನಿಮ್ಮ ಆಹಾರದಲ್ಲಿ ಸೇರಿಸಿದಷ್ಟೂ ಒಳ್ಳೆಯದು.

11. ಆಲೀವ್‌ ಎಣ್ಣೆ

11. ಆಲೀವ್‌ ಎಣ್ಣೆ

ಆಲೀವ್ ಎಣ್ಣೆಯಲ್ಲಿರುವ ಗುಣಗಳಿಂದಾಗಿ ಆರೋಗ್ಯಕರ ಎಣ್ಣೆಯೆಂದು ಪರಿಗಣಿಸಲಾಗಿದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಚಯಪಚಯ ಕ್ರಿಯೆ ಉತ್ತಮವಾಗಿಸುತ್ತೆ. ಲಿವರ್‌ನಲ್ಲಿ ಕೊಬ್ಬು ಶೇಖರವಾಗುತ್ತಿದ್ದಂತೆ ಸಮಸ್ಯೆ ಶುರುವಾಗುವುದು, ಆಲೀವ್‌ ಎಣ್ಣೆ ಕೊಬ್ಬಿನಂಶ ಸಂಗ್ರಹವಾಗುವುದನ್ನು ತಡೆಗಟ್ಟುತ್ತೆ

ಕೊನೆಯದಾಗಿ:

* ನಿಮ್ಮ ಆಹಾರಕ್ರಮದಲ್ಲಿ ಈ ಆಹಾರಗಳನ್ನು ಸೇರಿಸುವುದರಿಂದ ಲಿವರ್‌ ಸಂಬಂಧಿತ ಸಮಸ್ಯೆ ಕಡಿಮೆಯಾಗುವುದು.

*ಲಿವರ್‌ನ ಕ್ಯಾನ್ಸರ್ ತಡೆಗಟ್ಟುತ್ತೆ

* ರಾಸಾಯನಿಕಗಳಿಂದ ಲಿವರ್‌ನ ರಕ್ಷಣೆ ಮಾಡುತ್ತೆ.

precaution is better than cure ಎಂಬ ಮಾತಿದೆ, ಆದ್ದರಿಂದ ಲಿವರ್‌ನ ಸಮಸ್ಯೆ ಬಂದು ಒದ್ದಾಡುವ ಬದಲಿಗೆ ಈ ಸುಲಭದ ವಿಧಾನವಾದ ಆಹಾರದ ಮೂಲಕ ಲಿವರ್‌ನ ಆರೋಗ್ಯ ಹೆಚ್ಚಿಸಿ.

English summary

Liver Diet: Best Foods to Eat for Lever Health in Kannada

Liver Diet: Best Foods to Eat for Lever Health in Kannada, read on....
X
Desktop Bottom Promotion