For Quick Alerts
ALLOW NOTIFICATIONS  
For Daily Alerts

ಸತುವಿನಂಶವಿರುವ ಈ ಆಹಾರಗಳನ್ನು ತಿಂದರೆ ಕಾಯಿಲೆ ಬೀಳುವುದು ಕಡಿಮೆಯಾಗುವುದು

|

ಮಕ್ಕಳಿಗಾಗಿರಲಿ-ದೊಡ್ಡವರಿಗಾಗಿರಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಕಡೆ ಗಮನ ನೀಡಬೇಕು. ಆಗ ಕಾಯಿಲೆ ಬೀಳುವುದು ತುಂಬಾನೇ ಕಡಿಮೆಯಾಗುವುದು. ನಾವು ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಮ್ಮ ಆಹಾರಶೈಲಿ, ಜೀವನಶೈಲಿ ಬದಲಾಯಿಸಬೇಕಾಗಿದೆ.

zinc rich foods

ರೋಗ ನಿರೋಧಕ ಶಕ್ತಿ ಹೆಚ್ಚಿಸು ವ ಪ್ರಮುಖ ಆಹಾರಗಳಲ್ಲಿ ಸತುವಿನಂಶವಿರುವ ಆಹಾರಗಳು ತುಂಬಾನೇ ಪಾತ್ರವಹಿಸುತ್ತದೆ. ನಮ್ಮ ದೇಹಕ್ಕೆ ಸತು ತುಂಬಾನೇ ಅವಶ್ಯಕ, ಅದು ನಮಗೆ ಆಹಾರದ ಮೂಲಕ ದೊರೆಯುತ್ತದೆ.

ಆರೋಗ್ಯವರ್ಧನೆಗೆ ದಿನದಲ್ಲಿ ಯಾರು ಎಷ್ಟು ಗ್ರಾಂ ಸತು ಸೇವಿಸಬೇಕು ಎಂದು ನೋಡೋಣ:

ಯಾರಿಗೆ ಎಷ್ಟು ಸತು ಬೇಕು?

ಯಾರಿಗೆ ಎಷ್ಟು ಸತು ಬೇಕು?

0-6 ತಿಂಗಳ ಮಗುವಿಗೆ : 2 mg

7-12 ತಿಂಗಳ ಮಗುವಿಗೆ: 3 mg

1-3 ವರ್ಷದ ಮಕ್ಕಳಿಗೆ :3 mg

4-8 ವರ್ಷದ ಮಕ್ಕಳಿಗೆ: 5mg

9-13 ವರ್ಷದ ಮಕ್ಕಳಿಗೆ: 8 mg

18-18 ವರ್ಷದವರಿಗೆ: 11 mg

19 ವರ್ಷ ಮೇಲ್ಪಟ್ಟವರಿಗೆ: 11mg

ಗರ್ಭಿಣಿಯರಿಗೆ: 13mg

ಸಸ್ಯಾಹಾರಿಗಳಿಗೆ ಸತುವಿನಂಶವಿರುವ ಆಹಾರಗಳು

ಸಸ್ಯಾಹಾರಿಗಳಿಗೆ ಸತುವಿನಂಶವಿರುವ ಆಹಾರಗಳು

* ಬಟಾಣಿ (ಒಂದು ಕಪ್‌ನಲ್ಲಿ 2.3 ಮಿಗ್ರಾಂ ಸತುವಿನಂಶ ಇದೆ)

* ಧಾನ್ಯಗಳು (ಒಂದು ಕಪ್‌ ಧಾನ್ಯದಲ್ಲಿ 4.7ಮಿಗ್ರಾಂ ಸತುವಿನಂಶ ಇದೆ)

* ಸಿಹಿಕುಂಬಳಕಾಯಿ ಬೀಜ (ಒಂದು ಮುಷ್ಠಿಯಷ್ಟು ಸಿಹಿ ಕುಂಬಳಕಾಯಿ ಬೀಜದಲ್ಲಿ 2.2 ಮಿಗ್ರಾಂ ಸತು ಹಾಗೂ 8.5 ಮಿಗ್ರಾಂ ಪ್ರೊಟೀನ್ ಇದೆ)

* ಕಲ್ಲಂಗಡಿ ಬೀಜ

ನೀವು ಒಂದು ಮುಷ್ಠಿ ಕಲ್ಲಂಗಡಿ ಬೀಜ ತಿಂದರೆ 4 ಮಿಗ್ರಾಂ ಸತುವಿನಂಶ ದೊರೆಯುತ್ತದೆ.

ಬೀನ್ಸ್ (ಒಂದು ಕಪ್ ಬೇಯಿಸಿದ ಬೀನ್ಸ್‌ನಲ್ಲಿ 2 ಮಿಗ್ರಾಂ ಸತು ಇದೆ)

* ಓಟ್‌ಮೀಲ್‌ (ಓಟ್‌ಮೀಲ್‌ನಲ್ಲಿ ಸತು, ನಾರಿನಂಶ, ಫೋಲೆಟ್,ವಿಟಮಿನ್‌ ಬಿ6, ಬೀಟಾ ಅಮಶವಿದೆ)

* ಗೋಡಂಬಿ (ಗೋಡಂಬಿ ತಿಂದರೆ 1.5 ಮಿಗ್ರಾಂ ಸತುವಿನಂಶ ದೊರೆಯುತ್ತದೆ)

* ಮೊಸರು: ಒಂದು ಕಪ್‌ ಮೊಸರು ಸೇವಿಸಿದರೆ 1.5 ಮಿಗ್ರಾಂ ಸತುವಿನಂಶ ದೊರೆಯುತ್ತದೆ

* ಡಾರ್ಕ್‌ ಚಾಕೋಲೆಟ್:100 ಗ್ರಾಂ ಡಾರ್ಕ್‌ ಚಾಕೋಲೆಟ್‌ನಿಂದ 3.3 ಮಿಗ್ರಾಂ ಸತುವಿನಂಶ ದೊರೆಯುತ್ತದೆ.

* ಕೆಂಪಕ್ಕಿ: ಪ್ರತಿ 100 ಗ್ರಾಂಗೆ 1 ಮಿಗ್ರಾಂ ಸತುವಿನಂಶ ದೊರೆಯುತ್ತದೆ.

* ಪಾಲಾಕ್‌ : ಒಂದು ಕಪ್‌ ಪಾಲಾಕ್‌ನಿಂದ ನಿಮಗೆ 7 ಮಿಗ್ರಾಂ ಸತುವಿನಂಶ ದೊರೆಯುತ್ತದೆ.

* ಗೋಧಿ: ಗೋಧಿಯಿಂದ ತಯಾರಿಸಿದ ಆಹಾರ ಸೇವನೆಯಿಂದ ಸತುವಿನಂಶ ದೊರೆಯುತ್ತದೆ.

* ಉದ್ದಿನ ಬೇಳೆ: ಪ್ರತಿ 100 ಗ್ರಾಂಗೆ 2.6 ಮಿಗ್ರಾಂ ಸತುವಿನಂಶ ದೊರೆಯುತ್ತದೆ.

* ಬೆಣ್ಣೆ ಹಣ್ಣು

* ಬಾದಾಮಿ, ಟೋಫು ಈ ಆಹಾರಗಳಲ್ಲಿ ನಿಮಗೆ ಸತುವಿನಂಶ ದೊರೆಯುತ್ತದೆ

* ಅಣಬೆ ಸೇವನೆಯಿಂದ ಕೂಡ ಸತು ದೊರೆಯುತ್ತದೆ.

 ಮಾಂಸಾಹಾರಗಳಲ್ಲಿ ಸತುವಿನಂಶ

ಮಾಂಸಾಹಾರಗಳಲ್ಲಿ ಸತುವಿನಂಶ

* ಕುರಿ: 100 ಗ್ರಾಂ ಕುರಿ ಮಾಂಸದಲ್ಲಿ 5 ಮಿಗ್ರಾಂ ಸತುವಿನಂಶವಿದೆ

* ಪೋರ್ಕ್‌: 100ಗ್ರಾಂ ಪೋರ್ಕ್‌ನಲ್ಲಿ 14.2 ಮಿಗ್ರಾಂ ಸತುವಿನಂಶವಿದೆ.

* ಟರ್ಕಿ: 100 ಗ್ರಾಂ ಟರ್ಕಿ ಮಾಂಸದಲ್ಲು 3.09 ಮಿಗ್ರಾಂ ಸತುವಿನಂಶವಿದೆ

* ಮೃದ್ವಂಗಿಗಳು: 100 ಗ್ರಾಂನಲ್ಲಿ 16ಮಿಗ್ರಾಂ ಸತುವಿನಂಶವಿದೆ.

* ಏಡಿಗಳು: 100 ಗ್ರಾಂ ಏಡಿ ಮಾಂಸದಲ್ಲಿ 4.7 ಮಿಗ್ರಾಂ ಸತುವಿನಂಶವಿದೆ

* ಸಾಲಮೋನ್: 100ಗ್ರಾಂನಲ್ಲಿ 0.64 ಮಿಗ್ರಾಂ ಸತುವಿನಂಶವಿದೆ.

* ಸೀಗಡಿ: 100 ಗ್ರಾಂನಲ್ಲಿ 1.34 ಮಿಗ್ರಾಂ ಸತುವಿನಂಶ ದೊರೆಯುತ್ತದೆ.

English summary

List of Zinc Rich Foods to Boost Immunity in Kannada

Here are list zinc rich foods to boost immunity, read on...
X
Desktop Bottom Promotion