For Quick Alerts
ALLOW NOTIFICATIONS  
For Daily Alerts

ಕೊರಿಯನ್‌ರ ಆಕರ್ಷಕ, ಆರೋಗ್ಯಕರ ಮೈಕಟ್ಟಿಗೆ ಈ ಅಭ್ಯಾಸಗಳೇ ಕಾರಣ

|

ಕೊರಿಯನ್ ವ್ಯಕ್ತಿಗಳ ಮೈಕಟ್ಟು ಅವರ ಸೌಂದರ್ಯ ಕಂಡು ಇಡೀ ಜಗತ್ತೇ ಅದರ ರಹಸ್ಯ ತಿಳಿಯಲು ಬಯಸುತ್ತಿದೆ. ಇವರ ಆಹಾರಕ್ರಮವೇನು? ತಮ್ಮ ತ್ವಚೆ ಹೊಳಪಿಗೆ ಇವರ ಸೀಕ್ರೆಟ್‌ ಚಿಕಿತ್ಸೆಯೇನು ಎಂಬುವುದನ್ನು ತಿಳಿಯ ಬಯಸುತ್ತಿದ್ದಾರೆ.

ಕೊರಿಯನ್‌ ವ್ಯಕ್ತಿಗಳು ಯಾವಾಗ ಫಿಟ್‌ ಅಂಡ್‌ ಹೆಲ್ತಿ ಆಗಿರುತ್ತಾರೆ. ಅದಕ್ಕೆ ಕಾರಣ ಅವರ ಜೀವನಶೈಲಿ ಹಾಗೂ ಆಹಾರಶೈಲಿಯಾಗಿದೆ. ಅವರು ತುಂಬಾ ಆರೋಗ್ಯಕರ ಆಹಾರಶೈಲಿ ಪಾಲಿಸುತ್ತಾರೆ. ಅವರ ಆಹಾರದಲ್ಲಿ ಕಾರ್ಬ್ಸ್‌ ಇರುತ್ತದೆ, ಪ್ರೊಟೀನ್‌ ಇರುತ್ತದೆ . ಆದರೆ ಆಹಾರ ವಿಷಯಗಳಲ್ಲಿ ಅವರು ತುಂಬಾನೇ ಸ್ಟ್ರಿಕ್ಟ್. ಅವರಿಗೆ ಆಹಾರದ ಸಮತೋಲನ ಹೇಗೆ ಮಾಡಬೇಕು ಎಂಬ ಟ್ರಿಕ್ಸ್ ಗೊತ್ತಿದೆ, ಆದ್ದರಿಂದಲೇ ಅವರ ಮೈತೂಕ ಹೆಚ್ಚುವುದಿಲ್ಲ. ಪ್ರತಿದಿನ ವ್ಯಾಯಾಮ ಮಾಡುತ್ತಾರೆ, ಅತ್ಯಧಿಕ ತಿನ್ನುವುದಿಲ್ಲ.

ಅವರ ಆಹಾರ ಶೈಲಿಯಿಂದಾಗಿ ಸಮತೂಕದ ಮೈಕಟ್ಟು ಹೊಂದಿದ್ದಾರೆ, ಬನ್ನಿ ಅವರ ಆಹಾರಕ್ರಮ ಹೇಗಿದೆ ಎಂದು ನೋಡೋಣ:

ತರಕಾರಿಗಳ ಸೇವನೆ

ತರಕಾರಿಗಳ ಸೇವನೆ

ಕೊರಿಯನ್‌ ವ್ಯಕ್ತಿಗಳು ತುಂಬಾ ಬಗೆಯ ತರಕಾರಿಗಳನ್ನು ತಮ್ಮ ಹಾರದಲ್ಲಿ ಸೇರಿಸುತ್ತಾರೆ. ತರಕಾರಿಗಳಲ್ಲಿ ನಾರಿನಂಶ ಅಧಿಕವಿದ್ದು ಕ್ಯಾಲೋರಿ ಕಡಿಮೆ ಇರುತ್ತದೆ. ತೂಕ ಇಳಿಕೆಗೆ ಬಹುಮುಖ್ಯವಾಗಿ ಬೇಕಾಗಿರುವುದು ನಾರಿನಂಶದ ಆಹಾರಗಳ ಸೇವನೆ. ತರಕಾರಿಗಳನ್ನು ಅಧಿಕ ಸೇವಿಸಿದಾಗ ಕ್ಯಾಲೋರಿ ಕಡಿಮೆಯಾಗುವುದು.

ಹುದುಗು ಬಂದ ಆಹಾರ ಸೇವನೆ

ಹುದುಗು ಬಂದ ಆಹಾರ ಸೇವನೆ

ಅವರ ಎಲ್ಲಾ ಆಹಾರಗಳ ಜೊತೆ ಹುದುಗು ಬರಿಸಿದ ಆಹಾರವಿರುತ್ತದೆ (ನಾವು ದೋಸೆ, ಇಡ್ಲಿಗೆ ಹುದುಗು ಬರಿಸಿ ಸೇವಿಸುತ್ತೇವೆ). ಈ ಆಹಾರಗಳು ಹೊಟ್ಟೆಗೆ ಒ.ಳ್ಳೆಯದು ಜೊತೆಗೆ ಜೀರ್ಣಕ್ರಿಯೆಗೆ ಸಹಕಾರಿ. ಇದರ ಜೊತೆಗೆ ಇಂಥ ಹುದುಗು ಬಂದ ಆಹಾರಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

 ಫಾಸ್ಟ್‌ಫುಡ್‌ಗಿಂತ ಮನೆ ಆಹಾರಗಳ ಸೇವನೆ

ಫಾಸ್ಟ್‌ಫುಡ್‌ಗಿಂತ ಮನೆ ಆಹಾರಗಳ ಸೇವನೆ

ಮನೆಯೂಟ ಸೇವಿಸಿದರನೇ ತೂಕ ನಿಯಂತ್ರಣಕ್ಕೆ ತುಂಬಾನೇ ಕಡಿವಾಣ ಹಾಕಬಹುದು. ಫಾಸ್ಟ್‌ ಫುಡ್ಸ್, ಸಂಸ್ಕರಿಸಿದ ಆಹಾರ ಇವುಗಳು ತೂಕ ಇಳಿಕೆಗೆ ಪ್ರಮುಖ ಕಾರಣಗಳಾಗಿವೆ. ಅಲ್ಲದೆ ಇಂಥ ಆಹಾರಗಳ ಸೇವನೆಯಿಂದ ಕ್ಯಾನ್ಸರ್‌ನಂಥ ಮಾರಾಣಾಂತಿಕ ರೋಗಗಳು ಹೆಚ್ಚಾಗುವುದು. ಮನೆ ಆಹಾರಗಳ ಸೇವನೆ ಆರೋಗ್ಯವನ್ನು ವೃದ್ಧಿಸುತ್ತದೆ.

ಸಮುದ್ರಾಹಾರಗಳನ್ನು ಸೇರಿಸುವುದು

ಸಮುದ್ರಾಹಾರಗಳನ್ನು ಸೇರಿಸುವುದು

ಕೊರಿಯನ್‌ ಡಯಟ್‌ನಲ್ಲಿ ಸಮುದ್ರಾಹಾರಗಳು ಹೆಚ್ಚಾಗಿ ಇರುತ್ತದೆ. ಅವುಗಳಿಂದ ಸೂಪ್‌ ತಯಾರಿಸಲಾಗುವುದು ಹಾಗೂ ಆಹಾರಗಳಲ್ಲಿ ಬಳಸಲಾಗುವುದು. ಸಮುದ್ರಾಹಾರಗಳಲ್ಲಿ ವಿಟಮಿನ್ಸ್ ಹಾಗೂ ಖನಿಜಾಂಶಗಳು ತುಂಬಾನೇ ಇರುತ್ತದೆ. ಸಮುದ್ರಾಹಾರ ಸೇವಿಸಿದರೆ ಬೇಗನೆ ಹೊಟ್ಟೆ ಹಸಿವು ಉಂಟಾಗುವುದಿಲ್ಲ.

ಆರೋಗ್ಯಕರ ಜೀವನಶೈಲಿ

ಆರೋಗ್ಯಕರ ಜೀವನಶೈಲಿ

ಕೊರಿಯನ್ನರು ಗಾಡಿಯಲ್ಲಿ ಓಡಾಡುವುದಕ್ಕಿಂತ ಹೆಚ್ಚಾಗಿ ನಡೆಯುತ್ತಾರೆ. ದಿನಾ ನಡೆಯುವುದು, ಆರೋಗ್ಯಕರ ಆಹಾರಶೈಲಿ, ದೈಹಿಕ ವ್ಯಾಯಾಮ ಇವುಗಳಿಂದಾಗಿ ಅವರು ತುಂಬಾ ಫಿಟ್ ಆಗಿರುತ್ತಾರೆ, ಅದರಲ್ಲೂ ಕೊರಿಯನ್‌ ಮಹಿಳೆಯರು ಆಕರ್ಷಕ ಮೈಕಟ್ಟು ಹೊಂದಿರುತ್ತಾರೆ.

English summary

Koreans Lifestyle Habits to Stay Always Healthy and Fit in Kannada

Koreans Lifestyle Habits to Stay Always Healthy and Fit in Kannada, Read on...
Story first published: Sunday, October 24, 2021, 8:58 [IST]
X