For Quick Alerts
ALLOW NOTIFICATIONS  
For Daily Alerts

ಈಗಲೂ 30ರ ಹರೆಯದವರಂತೆ ಕಾಣುವ ಕಿಚ್ಚ ಸುದೀಪ್‌ ಅವರ ಫಿಟ್ನೆಸ್ ಸೀಕ್ರೆಟ್ ಏನು ಗೊತ್ತಾ?

|

ಕಟ್ಟು ಮಸ್ತು ರೂಪದ 6'1 ಅಡಿ ಎತ್ತರದ ದೃಢಕಾಯ ಸುದೀಪ್‌ ಪರ್ಸನಾಲಿಟಿ ನೋಡುವುದೇ ಚೆಂದ. ಕನ್ನಡದ ಹೆಮ್ಮೆಯ ನಟ ಭಾರತೀಯ ಚಿತ್ರರಂಗದಲ್ಲಿಯೇ ಪ್ರಸಿದ್ಧ ನಟರಲ್ಲಿ ಒಬ್ಬರಾಗಿ ಮಿಂಚುತ್ತಿದ್ದು ಇಂದಿಗೂ 30 ವರ್ಷದ ತರುಣನಂತೆ ಕಾಣುವ ಸುದೀಪ್‌ ಅವರ ವಯಸ್ಸು 50. 1971 ಸೆಪ್ಟೆಂಬರ್‌2ರಂದು ಇವರು ಹುಟ್ಟಿದ್ದು.

ಸುದೀಪ್‌ ಲುಕ್‌ಗೂ ಅವರ ವಯಸ್ಸಿಗೂ ಸಂಬಂಧವೇ ಇಲ್ಲ. ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟಾಗಿನಿಂದ ಇಲ್ಲಿಯವರೆಗೆ ಅದೇ ಸ್ಮಾರ್ಟ್ ಅಂಡ್ ಸ್ಟೈಲಿಷ್ ಲುಕ್‌. ಶಿಸ್ತು, ಸ್ಥಿರತೆ, ಕೆಲಸದಲ್ಲಿರುವ ಸಮರ್ಪಣೆ ಮನೋಭಾವ ಇದು ಇವರ ಫಿಟ್ನೆಸ್ ಗುಟ್ಟಾಗಿದೆ.

ಅಚ್ಚರಿಯ ಸಂಗತಿ ಎಂದು ಸುದೀಪ್ ಅವರು ಜಿಮ್‌ಗೆ ಹೋಗಿ ಗಂಟೆ ಗಟ್ಟಲೆ ಟೈಮ್ ಕಳೆಯಲ್ಲ, ವೇಯ್ಟ್ ಲಿಫ್ಟ್‌ ಎತ್ತುವುದು, ಜಿಮ್‌ನಲ್ಲಿ ಕಸರತ್ತು ಮಾಡುವುದು ಅವರಿಗೆ ಇಷ್ಟವಿಲ್ಲ, ಅದರ ಬದಲಿಗೆ ಫಿಟ್ನೆಸ್‌ಗಾಗಿ ಅವರು ಪ್ರತಿದಿನ 2000 ಸ್ಕಿಪ್ಪಿಂಗ್ ಮಾಡುತ್ತಾರೆ, ಜೊತೆಗೆ ಲೆಗ್‌ ಸ್ಟ್ರೆಚ್, ಸೈಕ್ಲಿಂಗ್ ಇವೆಲ್ಲಾ ಮಾಡುತ್ತಾರೆ. ಇನ್ನು ಆಹಾರಕ್ರಮದಲ್ಲೂ ಅಷ್ಟೇ ದಕ್ಷಿಣ ಭಾರತದ ಅಡುಗೆ ಶೈಲಿ ಇಷ್ಟ ಪಡುವ ಇವರು ಜಂಕ್‌ ಫುಡ್‌ಗಳಿಂದ ದೂರವಿರುತ್ತಾರೆ.

ಸುದೀಪ್‌ ಅವರು ಫಿಟ್ನೆಸ್‌ಗಾಗಿ ಅನುಸರಿಸುತ್ತಿರುವ ಜೀವನಶೈಲಿ ಹಾಗೂ ಆಹಾರಶೈಲಿ ಏನೆಂದು ನೋಡೋಣ ಬನ್ನಿ:

ಸುದೀಪ್‌ ಅವರ ದಿನಚರಿ

ಸುದೀಪ್‌ ಅವರ ದಿನಚರಿ

ಬರೀ ನಾಲ್ಕು ತಾಸು ನಿದ್ದೆ ಮಾಡಿ ಬೆಳಗ್ಗೆ 7:30ಗೆ ಅವರು ತಮ್ಮ ದಿನಚರಿ ಪ್ರಾರಂಭಿಸುತ್ತಾರೆ. ಮನೆ ಅಡುಗೆ ಇಷ್ಟ ಪಡುವ ಸುದೀಪ್ ಅವರಿಗೆ ದೋಸೆ ಅಂದ್ರೆ ತುಂಬಾನೇ ಇಷ್ಟ. ಇಡ್ಲಿ, ಅನ್ನದ ಐಟಂ ಸ್ವಲ್ಪ ದೂರವಿಡುತ್ತಾರೆ. ಫಿಲ್ಟರ್ ಕಾಫಿ ತುಂಬಾ ಇಷ್ಟ ಪಡುವ ಕಿಚ್ಚ ಅವರು ಕಾಫಿಗೆ ಮಾತ್ರ ಕಡಿವಾಣ ಹಾಕಲ್ಲ.

ಆಹಾರ ಶೈಲಿ

ಆಹಾರ ಶೈಲಿ

ಶೂಟಿಂಗ್‌ನಲ್ಲಿರಲಿ, ಮನೆಯಲ್ಲಿರಲಿ ಲಂಚ್ ಹಾಗೂ ಡಿನ್ನರ್ ತುಂಬಾ ಸರಳವಾಗಿರುತ್ತದೆ. ಲಂಚ್‌ಗೆ ರಾಗಿ ಮುದ್ದೆಯನ್ನು ಸಾಂಬರ್‌ ಜೊತೆ ಸವಿದು, ತಾಜಾ ಹಣ್ಣಿನ ಜ್ಯೂಸ್‌ ತೆಗೆದುಕೊಳ್ಳುತ್ತಾರೆ. ರಾತ್ರಿ ರಾಗಿ ರೊಟ್ಟಿ ಅಥವಾ ಚಪಾತಿಯನ್ನು ತರಕಾರಿ ಪಲ್ಯ ಅಥವಾ ತಂದೋರಿ ಜೊತೆಗೆ ಸವಿಯುತ್ತಾರೆ. ಇವರು ಗ್ರೇವಿ ಫುಡ್ ಅಷ್ಟು ಇಷ್ಟಪಡಲ್ಲ. ಚಿಕನ್ ಮತ್ತು ಸಮುದ್ರಾಹಾರ ಎಂದರೆ ಸುದೀಪ್ ಅವರಿಗೆ ತುಂಬಾನೇ ಇಷ್ಟ.

ಫಿಟ್ನೆಸ್ ಸೀಕ್ರೆಟ್

ಫಿಟ್ನೆಸ್ ಸೀಕ್ರೆಟ್

ಸುದೀಪ್‌ ಅವರ ನನಗೆ ಆ ಹಾರ ಬೇಡ, ಈ ಆಹಾರ ಬೇಡ ಎಂದು ಹೇಳಲ್ಲ ಎಲ್ಲಾ ಆಹಾರ ಸೇವಿಸುತ್ತಾರೆ, ಆದರೆ ಮಿತಿಯಲ್ಲಿ ಸೇವಿಸುತ್ತಾರೆ. ಜಂಕ್‌ ಫುಡ್‌ಗಳಿಂದ ತುಂಬಾನೇ ದೂರ ಇರುತ್ತಾರೆ.

ಕುಕ್ಕಿಂಗ್‌: ಸುದೀಪ್‌ ಅವರಿಗೆ ಸ್ಟ್ರೆಸ್ ಬಸ್ಟರ್

ಕುಕ್ಕಿಂಗ್‌: ಸುದೀಪ್‌ ಅವರಿಗೆ ಸ್ಟ್ರೆಸ್ ಬಸ್ಟರ್

ಕುಕ್ಕಿಂಗ್ ಅಂದ್ರೆ ಸುದೀಪ್ ಅವರಿಗೆ ತುಂಬಾನೇ ಇಷ್ಟ. ಕಿಚ್ಚನ ಅನೇಕ ಕುಕ್ಕಿಂಗ್ ವೀಡಿಯೋಗಳಿವೆ. ಬಿಗ್‌ಬಾಸ್‌ ಸ್ಪರ್ಧಿಗಳಿಗೆ ತಮ್ಮ ಕೈಯಾರೆ ಅಡುಗೆ ಮಾಡಿ ಕಳುಹಿಸಿದ್ದನ್ನೂ ನೋಡಿದ್ದೇವೆ. ಮಗಳಿಗೆ ಪಿಜ್ಜಾ ಇಷ್ಟವೆಂದು ಕೈಯಾರೆ ಮಾಡಿ ಕೊಡುತ್ತಾರೆ. ಮನೆಗೆ ಯಾರಾದರೂ ಅತಿಥಿಗಳು ಬಂದ್ರೆ ಹಾಗೂ ಫ್ರೀ ಟೈಮ್‌ನಲ್ಲಿ ಮನೆಯವರಿಗಾಗಿ ಕಿಚ್ಚ ಅವರು ಅಡುಗೆ ಮಾಡುತ್ತಾರೆ. ಅನೇಕ ವೆರೈಟಿ ಅಡುಗೆಗಳು ಸುದೀಪ್‌ ಅವರಿಗೆ ಗೊತ್ತಿದೆ. ಬರೀ ಇಂಡಿಯನ್ ಶೈಲಿ ಮಾತ್ರವಲ್ಲ ಚೈನೀಸ್‌ ಮತ್ತಿತರ ಶೈಲಿಯ ಅಡುಗೆ ಮಾಡುವುದರಲ್ಲೂ ಇವರು ಎಕ್ಸ್‌ಪರ್ಟ್.

English summary

Kichcha Sudeep: Diet Plan and Fitness Secrets of Pan India Actor Sudeep in Kannada

Kichcha Sudeep: Diet Plan and Fitness Secrets of Pan India Actor Sudeep in Kannada, read on...
X