For Quick Alerts
ALLOW NOTIFICATIONS  
For Daily Alerts

ಅಂತರರಾಷ್ಟ್ರೀಯ ಯೋಗ ದಿನ 2021: ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವ 8 ಯೋಗಾಸನಗಳು

|

ಬಂಜೆತನ ಎನ್ನುವುದು ಮಹಿಳೆಯರಲ್ಲಿ ಮಾತ್ರ ಕಂಡು ಬರುವ ಸಮಸ್ಯೆಯಲ್ಲ ಪುರುಷರಲ್ಲೂ ಕಂಡು ಬರುವುದು. ಪುರುಷರಲ್ಲಿ ಬಂಜೆತನವಿದ್ದರೂ ಮಕ್ಕಳಾಗುವುದಿಲ್ಲ. ಜೀವನಶೈಲಿ, ಅಭ್ಯಾಸ ಇವೆಲ್ಲಾ ಪುರುಷರಲ್ಲಿ ಬಂಜೆತನ ಪ್ರಮಾಣ ಹೆಚ್ಚಿಸುವುದು.

ಯೋಗ ಎಂಬುವುದು ಬಂಜೆತನ ಸಮಸ್ಯೆ ನಿವಾರಿಸುವಲ್ಲ ಸಹಕಾರಿಯಾಗಿದೆ. ಅಲ್ಲದೆ ಯೋಗ ಪುರುಷರಲ್ಲಿ ಲೈಂಗಿಕ ಸಮಸ್ಯೆಗಳನ್ನು ನಿವರಿಸುವಲ್ಲಿಯೂ ಸಹಕಾರಿ.

ಯೋಗ ಮನಸ್ಸು ಹಾಗೂ ದೇಹವನ್ನು ಸಮತೋಲನದಲ್ಲಿಡುತ್ತದೆ, ಯೋಗ ಭಂಗಿಗಳಿಂದ ರಕ್ತ ಸಂಚಾರ ಹೆಚ್ಚಾಗುವುದರಿಂದ ಹಾರ್ಮೋನ್‌ಗಳನ್ನು ಸಮತೋಲನದಲ್ಲಿಡುವುದು.ಇದರಿಂದಾಗಿ ಬಂಜೆತನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವುದು. ಯೋಗ ಮಾಡುವುದರಿಂದ ಪುರುಷರಲ್ಲಿ ಟೆಸ್ಟೋಸ್ಟಿರೋನ್ ಹಾರ್ಮೋನ್ ಹೆಚ್ಚಿಸುವುದರಿಂದ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು.

ಪುರುಷರು ದಿನ ನಿತ್ಯ ಯಾವೆಲ್ಲಾ ಯೋಗಾಸನ ಅಭ್ಯಾಸ ಮಾಡಿದರೆ ಸಂತಾನೋತ್ಪತ್ತಿಗೆ ಒಳ್ಳೆಯದು ಎಂದು ನೋಡೋಣ:

1. ಸರ್ವಾಂಗಾಸನ (Shoulder stand)

1. ಸರ್ವಾಂಗಾಸನ (Shoulder stand)

ಇದು ಭುಜದ ಮೇಲೆ ನಿಲ್ಲುವಂಥ ಆಸನವಾಗಿದೆ. ಮೊದಲಿಗೆ ಇದನ್ನು ಮಾಡಲು ಸಾಧ್ಯವಾಗುವುದಿಲ್ಲ, ಅಭ್ಯಾಸ ಮಾಡುತ್ತಾ ನಿಲ್ಲಬಹುದು. ಈ ಆಸನವನ್ನು ಯೋಗ ತಜ್ಞರ ಮಾರ್ಗದರ್ಶನದಲ್ಲಿ ಮೊದಲಿಗೆ ಅಭ್ಯಾಸ ಮಾಡಿ. ಪ್ರತಿದಿನ 2 ನಿಮಿಷ ಸರ್ವಾಂಗಾಸನ ಮಾಡುವುದರಿಂದ ಹಾರ್ಮೋನ್‌ಗಳು ಸಮತೋಲನದಲ್ಲಿರುತ್ತದೆ. ಥೈರಾಯ್ಡ್‌ ಗ್ರಂಥಿಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಈ ಆಸನ ಸಹಕಾರಿ.

2. ಹಾಲಾಸನ (Plough pose)

2. ಹಾಲಾಸನ (Plough pose)

ಈ ಆಸನ ಪೆಲ್ವಿಕ್ ಏರಿಯಾಗೆ ರಕ್ತ ಸಂಚಾರ ಹೆಚ್ಚಿಸುವುದರಿಂದ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು. ಅಲ್ಲದೆ ದೇಹದಲ್ಲಿ ಪ್ಲಕ್ಸಿಬಲಿಟಿ ಕಾಪಾಡಲು ಕೂಡ ಇದು ಸಹಕಾರಿ.

3. ಧನುರ್ಸಾನ (Bow pose)

3. ಧನುರ್ಸಾನ (Bow pose)

ಈ ಆಸನ ಕೂಡ ಪುರುಷರ ಸಂತೋತ್ಪತ್ತಿ ಸಾಮರ್ಥ್ಯ, ಲೈಂಗಿಕ ಸಾಮರ್ಥ್ಯ ಹೆಚ್ಚಿಸುವುದು. ಶೀಘ್ರ ಸ್ಖಲನ ಸಮಸ್ಯೆ ಇರುವವರು ಈ ಆಸನ ಅಭ್ಯಾಸ ಮಾಡುವುದರಿಂದ ಆ ಸಮಸ್ಯೆ ಕಡಿಮೆಯಾಗುವುದು.

ಹೊಟ್ಟೆ ಮೇಲೆ ಮಲಗಿ ಕೈಗಳಿಂದ ಮೊಣಕಾಲುಗಳನ್ನು ಹಿಡಿದು ದೇಹವನ್ನು ಮೇಲೆ ಎತ್ತಬೇಕು. ಆಗ ದೇಹ ಬಿಲ್ಲಿನಂತೆ ಕಾಣುವುದು. ಇದನ್ನು ದಿನ ಒಂದು ನಿಮಿಷ ಅಭ್ಯಾಸ ಮಾಡಿದರೆ ಸಾಕು.

4. ಕುಂಭಕಾಸನ (Plank pose)

4. ಕುಂಭಕಾಸನ (Plank pose)

ಈ ಆಸನ ಮಾಡುವುದು ಸುಲಭ, ಆದರೆ ಮೊದಲಿಗೆ ಮಾಡುವಾಗ ಸ್ವಲ್ಪ ಕಷ್ಟವಾದರೂ ನಂತರ ಮಾಡಬಹುದು. ಪಾದ ಹಾಗೂ ಕೈಗಳನ್ನು ನೆಲದ ಮೇಲೆ ಊರಿ, ದೇಹದ ಉಳಿದ ಭಾಗಗಳನ್ನು ಎತ್ತಬೇಕು. ಇದರಿಂದ ಭುಜಗಳು, ತೊಡೆಸಂದುಗಳು ಬಲವಾಗುವುದು.

5. ಪಶ್ಚಿಮೋತ್ಥಾನಾಸನ (Seated forward bend)

5. ಪಶ್ಚಿಮೋತ್ಥಾನಾಸನ (Seated forward bend)

ಈ ಆಸನದಲ್ಲಿ ಕಾಲುಗಳನ್ನು ಮುಂದೆಕ್ಕೆ ಚಾಚಿ ಕೂರಬೇಕು, ನಂತರ ನಿಧಾನಕ್ಕೆ ಬಾಗಿ ಹೆಬ್ಬರಳನ್ನು ಹಿಡಿಯಬೇಕು, ತಲೆ ಮಂಡಿಗೆ ತಾಗುವಂತಿದ್ದರೆ ಒಳ್ಳೆಯದು.

6. ಪಾದ ಹಸ್ತಾಸನ (Standing forward bend)

6. ಪಾದ ಹಸ್ತಾಸನ (Standing forward bend)

ಇದು ಕೂಡ ಸರಳವಾದ ಆಸನ ಆದರೂ ಕೂಡ ಅಭ್ಯಾಸ ಇಲ್ಲದವರಿಗೆ ಪ್ರಾರಂಭದಲ್ಲಿ ಪಾದಗಳನ್ನು ಮುಟ್ಟಲು ಕಷ್ಟವಾಗಬಹುದು, ಅಭ್ಯಾಸ ಮಾಡುತ್ತಿದ್ದರೆ ಕೆಲವು ವಾರಗಳಲ್ಲಿಯೇ ಸಾಧ್ಯವಾಗುವುದು. ಈ ಆಸನ ಮಾಡುವಾಗ ನೇರವಾಗಿ ನಿಲ್ಲಬೇಕು, ನಂತರ ನಿಧಾನ ಬಾಗುತ್ತಾ ಪಾದಗಳನ್ನು ಮುಟ್ಟಬೇಕು. ಹೀಗೆ ಬಾಗುವಾಗ ಮಂಡಿಗಳನ್ನು ಮಡಚಬಾರದು.

7. ಭುಜಾಂಗಾಸನ (Cobra Pose)

7. ಭುಜಾಂಗಾಸನ (Cobra Pose)

ಭುಜಾಂಗಾಸನ ಮಾನಸಿಕ ಒತ್ತಡ ಕಡಿಮೆ ಮಾಡುತ್ತೆ ಸ್ನಾಯಗಳು ಹಾಗೂ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು. ಇದು ಸಂತಾನೋತ್ಪತ್ತಿ ಅಂಗದ ಸಾಮರ್ಥ್ಯ ಹೆಚ್ಚಿಸುವುದು. ಬೆನ್ನು ಮೂಳೆಯ ಆರೋಗ್ಯಕ್ಕೆ ಈ ಯೋಗಾಸನ ತುಂಬಾನೇ ಒಳ್ಳೆಯದು. ಮಗುಚಿ ಮಲಗಿ ನಿಧಾನಕ್ಕೆ ಎದೆ ಭಾಗವನ್ನು ಮೇಲೆತ್ತಬೇಕು, ಕಾಲುಗಳು ಮ್ಯಾಟ್‌ ಮೇಲೆ ತಾಗುವಂತಿರಲಿ. ಈ ಆಸನವನ್ನು ಒಂದು ನಿಮಿಷ ಮಾಡಿ.

8. ನೌಕಾಸನ (Boat pose)

8. ನೌಕಾಸನ (Boat pose)

ನೌಕಾಸನ ಕಾಲುಗಳು, ಹಿಂಬದಿ, ಕಿಬ್ಬೊಟ್ಟೆಯನ್ನು ಬಲಪಡಿಸುತ್ತದೆ. ಇದು ಪೆಲ್ವಿಕ್ ಸ್ನಾಯುಗಳನ್ನು ಬಿಗಿಯಾಗಿಸಿ ಸೆಕ್ಸ್ ಹಾರ್ಮೋನ್‌ ಬಿಡುಗಡೆ ಮಾಡುವುದು. ಅಲ್ಲದೆ ಈ ಆಸನ ಹೊಟ್ಟೆಯ ಬೊಜ್ಜು ಕರಗಿಸುವುದು ಅಲ್ಲದೆ ಆತ್ಮವಿಶ್ವಾಸ ಹೆಚ್ಚಿಸುವುದು.

ಸೂಚನೆ: ಆಸನಗಳನ್ನು ಅಭ್ಯಾಸ ಮಾಡುವಾಗ ಯೋಗ ತಜ್ಞರ ಮಾರ್ಗದರ್ಶನದಲ್ಲಿ ಮಾಡಿ.

English summary

International Yoga Day 2021: Yoga Asanas To Boost Male Fertility in Kannada

International yoga day 2021: yoga asanas to boost male fertility in Kannada, read on...
X
Desktop Bottom Promotion