For Quick Alerts
ALLOW NOTIFICATIONS  
For Daily Alerts

ಈ 10 ಜ್ಯೂಸ್‌ಗಳು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

|

ನಮ್ಮ ದೇಹದಲ್ಲಿ ರೋಗ ನಿರೋಧಕ ಕಾರ್ಯ ವಿಧಾನವೂ ನಮ್ಮ ದೇಹಕ್ಕೆ ಯಾವ ಕಣಗಳು, ಯಾವುದು ಬೇಡ ಎಂದು ನಿರ್ಧರಿಸುತ್ತವೆ. ಅಂದರೆ ದೇಹಕ್ಕೆ ಹಾನಿಕಾರಕವಾದ ಕಣಗಳ ವಿರುದ್ಧ ಹೋರಾಟವನ್ನು ಮಾಡಿ ದೇಹದ ಆರೋಗ್ಯ ಕಾಪಾಡುತ್ತದೆ. ಆದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ದೇಹಕ್ಕೆ ವಿಟಮಿನ್ಸ್, ಖನಿಜಾಂಶಗಳು ಅವಶ್ಯಕವಾಗಿವೆ.

10 Immunity-boosting juices to drink in summer | Boldsky Kannada
Immunity Boost Juice To Drink In Summer

ಇಲ್ಲಿ ನಾವು ಕೆಲವೊಂದು ರೆಸಿಪಿಗಳನ್ನು ನೀಡಿದ್ದೇವೆ. ಇವುಗಳು ನಿಮ್ಮ ದೇಹದ ಆರೋಗ್ಯ ಹೆಚ್ಚಿಸುವುದರ ಜೊತೆಗೆ ಶೀತ, ಜ್ವರ ಬರದಂತೆ ದೇಹ ರಕ್ಷಣೆ ಮಾಡುತ್ತವೆ. ಬೇಸಿಗೆ ಎಂದ ಮೇಲೆ ಜ್ಯೂಸ್‌ ಕುಡಿಯಬೇಕು ಅನಿಸುವುದು. ಆಗ ಈ ಜ್ಯೂಸ್‌ ಮಾಡಿ ಸವಿಯಿರಿ, ಇದರಿಂದ ಆರೋಗ್ಯ ಹೆಚ್ಚುವುದು.

1. ಸೇಬು, ಕ್ಯಾರೆಟ್, ಕಿತ್ತಳೆ ಜ್ಯೂಸ್

1. ಸೇಬು, ಕ್ಯಾರೆಟ್, ಕಿತ್ತಳೆ ಜ್ಯೂಸ್

ಕ್ಯಾರೆಟ್, ಸೇಬು, ಕಿತ್ತಳೆ ಮೂರು ಮಿಶ್ರ ಮಾಡಿ ಜ್ಯೂಸ್‌ ಮಾಡಿ ಕುಡಿಯುವುದರಿಂದ ದೇಹವು ಸೋಂಕಾಣುಗಳ ವಿರುದ್ಧ ಹೋರಾಡುವ ಸಾಮಾರ್ಥ್ಯ ಹೆಚ್ಚಿಸಿಕೊಳ್ಳುತ್ತದೆ. ಇದನ್ನು ಬೆಳಗ್ಗಿನ ಹೊತ್ತು ಮಾಡಿ ಕುಡಿಯಿರಿ.

ಇದರಲ್ಲಿರುವ ಪೋಷಕಾಂಶಗಳು

  • ವಿಟಮಿನ್ ಎ, ಬಿ-6 ಮತ್ತು ಸಿ
  • ಪೊಟಾಷ್ಯಿಯಂ
  • ಫಾಲಿಕ್‌ ಆಮ್ಲ
  • 2. ಕಿತ್ತಳೆ ಮತ್ತು ಗ್ರೇಪ್‌ಫ್ರೂಟ್‌

    2. ಕಿತ್ತಳೆ ಮತ್ತು ಗ್ರೇಪ್‌ಫ್ರೂಟ್‌

    ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ ದೇಹವನ್ನು ಹಾನಿಕಾರಕ ಕಣಗಳಿಂದ ರಕ್ಷಣೆ ಮಾಡುತ್ತದೆ. ವಿಟಮಿನ್ ಸಿ ಕಡಿಮೆಯಾದರೆ ದೇಹದಲ್ಲಿ ಗಾಯ ಉಂಟಾದರೆ ಬೇಗ ಒಣಗುವುದಿಲ್ಲ ಅಲ್ಲದೆ ದೇಹ ಸೋಂಕಾಣುಗಳ ವಿರುದ್ಧ ಹೋರಾಡುವ ಸಾಮಾರ್ಥ್ಯ ಕಳೆದುಕೊಳ್ಳುವುದು.

    ಆದರೆ ಈ ಕಾಂಬಿನೇಷನ್ ಜ್ಯೂಸ್‌ ಕುಡಿದರೆ ವಿಟಮಿನ್ ಸಿ ಕೊರತೆ ಉಂಟಾಗುವುದಿಲ್ಲ ಹಾಗೂ ದೇಹದಲ್ಲಿ ರೋಗ ನಿರೋಧಕ ಸಾಮಾರ್ಥ್ಯ ಹೆಚ್ಚುವುದು.

    ಪೋಷಕಾಂಶಗಳು

    • ವಿಟಮಿನ್ ಎ, ಬಿ-6 ತ್ತು
    • ಫಾಲಿಕ್ ಆಮ್ಲ
    • ಸತು
    • 3. ಮನೆಯಲ್ಲಿಯೇ ಮಾಡಿದ ಟೊಮೆಟೊ ಜ್ಯೂಸ್/ರಸ

      3. ಮನೆಯಲ್ಲಿಯೇ ಮಾಡಿದ ಟೊಮೆಟೊ ಜ್ಯೂಸ್/ರಸ

      ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಟೊಮೆಟೊ ಜ್ಯೂಸ್‌ ತುಂಬಾ ಪ್ರಯೋಜನಕಾರಿಯಾಗಿದೆ. ಈ ಟೊಮೆಟೊ ಜ್ಯೂಸ್ ಮಾಡುವ ವಿಧಾನ ಕೂಡ ಸುಲಭವಾಗಿದೆ. ತಾಜಾ ಟೊಮೆಟೊ ಹಣ್ಣು ಆಯ್ಕೆ ಮಾಡಿ ಅದನ್ನು ತೊಳೆದು, ಟೊಮೆಟೊದ ತೊಟ್ಟಿನ ತುದಿ ತೆಗೆಯಿರಿ, ಅದನ್ನು ಪ್ಯಾನ್‌ಗೆ ಹಾಕಿ ತುಂಬಾ ಕಡಿಮೆ ಉರಿಯಲ್ಲಿ 30 ನಿಮಿಷ ಬೇಯಿಸಿ, ನಂತರ ಮನೆಯಲ್ಲಿರುವ ಮಸಿಯುವ ಮರದ ಸಾಮಗ್ರಿಯಿಂದ ಚೆನ್ನಾಗಿ ಮಸಿಯಿರಿ, ನಂತರ ಅದನ್ನು ಕಾಯಿಸಿ ಒಗ್ಗರಣೆ ನೀಡಿ, ಸ್ವಲ್ಪ ಹೊತ್ತು ಕುದಿಸಿ ಅದನ್ನು ಕುಡಿಯಿರಿ.

      ಇದರಲ್ಲಿರುವ ಪೋಷಕಾಂಶಗಳು

      • ವಿಟಮಿನ್ ಎ ಮತ್ತು ಸಿ
      • ಕಬ್ಬಿಣದಂಶ
      • ಫೋಲೆಟ್
      • 4. ಕಲೆ, ಟೊಮೆಟೊ, ಸೆಲರಿ

        4. ಕಲೆ, ಟೊಮೆಟೊ, ಸೆಲರಿ

        ದೇಹದಲ್ಲಿ ವಿಟಮಿನ್ ಎ ಕೊರತೆ ಉಂಟಾಗದಂತೆ ತಡೆಯಲು ಈ ಜ್ಯೂಸ್ ದಾರಾಳ ಸಾಕು. ಇವು ಮೂರನ್ನು ಟ್ಯೂಸ್ ಮಾಡಿ ಕುಡಿಯಬಹುದು.

        ಪೋಷಕಾಂಶಗಳು

        • ವಿಟಮಿನ್ ಎ ಮತ್ತು ಸಿ
        • ಮೆಗ್ನಿಷ್ಯಿಯಂ
        • ಪೊಟಾಷ್ಯಿಯಂ
        • ಕಬ್ಬಿಣದಂಶ
        • ಕೊಬ್ಬಿನ ಆಮ್ಲ
        • 5, ಬೀಟ್‌ರೂಟ್‌, ಕ್ಯಾರೆಟ್‌, ಶುಂಠಿ ಮತ್ತು ಅರಿಶಿಣ

          5, ಬೀಟ್‌ರೂಟ್‌, ಕ್ಯಾರೆಟ್‌, ಶುಂಠಿ ಮತ್ತು ಅರಿಶಿಣ

          ಉರಿಯೂತದ ಸಮಸ್ಯೆ ಇರುವವರು ಈ ಜ್ಯೂಸ್ ಮಾಡಿ ಕುಡಿಯುವುದರಿಂದ ಉತ್ತಮ ಪ್ರಯೋಜನ ಪಡೆಯಬಹುದು. ರೋಗನಿರೋಧಕ ಶಕ್ತಿ ಕುಂದಿ ಸೋಂಕು ಉಂಟಾದರೆ ಉರಿಯೂತ ಉಂಟಾಗುವುದು. ಇದರಿಂದಾಗಿ ಜ್ವರ, ಕೆಮ್ಮು, ನೆಗಡಿ, ಮೈಕೈ ನೋವು ಮುಂತಾದ ಸಮಸ್ಯೆ ಉಂಟಾಗುವುದು.

          ಸಂಧಿವಾತ ಇರುವವರು ಈ ಜ್ಯೂಸ್ ಕುಡಿಯುವುದು ಒಳ್ಳೆಯದು ಏಕೆಂದರೆ ಶುಂಠಿ ಹಾಗೂ ಅರಿಶಿಣ ಉರಿಯೂತದ ವಿರುದ್ಧ ಹೋರಾಡುತ್ತದೆ.

          ಪೋಷಕಾಂಶಗಳು

          • ವಿಟಮಿನ್ ಎ, ಸಿ ಮತ್ತು ಇ
          • ಕಬ್ಬಿಣದಂಶ
          • ಕ್ಯಾಲ್ಸಿಯಂ
          • 6. ಸ್ಟ್ರಾಬೆರ್ರಿ ಮತ್ತು ಮಾವಿನಹಣ್ಣು

            6. ಸ್ಟ್ರಾಬೆರ್ರಿ ಮತ್ತು ಮಾವಿನಹಣ್ಣು

            ಹುಳಿ ಮಿಶ್ರ ಸಿಹಿ ಇಷ್ಟ ಪಡುವವರಿಗೆ ಈ ಜ್ಯೂಸ್ ತುಂಬಾ ಇಷ್ಟವಾಗುವುದು, ತಣ್ಣನೆಯ ಸ್ಟ್ರಾಬೆರ್ರಿ ಹಾಗೂ ಮಾವಿನಹಣ್ಣು ತೆಗೆದು ಜ್ಯೂಸ್ ಮಾಡಿ ಕುಡಿಯಿರಿ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು, ಅದರಲ್ಲೂ ವಯಸ್ಸಾದವರು ಈ ಜ್ಯೂಸ್ ಕುಡಿಯುವ ಮೂಲಕ ಆರೋಗ್ಯ ಕಾಪಾಡಬಹುದು.

            ಪೋಷಕಾಂಶಗಳು

            • ವಿಟಮಿನ್ ಎ, ಸಿ ಮತ್ತು ಇ
            • ಕಬ್ಬಿಣದಂಶ'
            • ಪೋಲೆಟ್
            • 7. ಸ್ಟ್ರಾಬೆರ್ರಿ, ಕಿವಿ, ಪುದೀನಾ

              7. ಸ್ಟ್ರಾಬೆರ್ರಿ, ಕಿವಿ, ಪುದೀನಾ

              ವಿಟಮಿನ್ ಸಿ ಅಧಿಕವಿರುವ ಈ ಜ್ಯೂಸ್ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ. ಸ್ಟ್ರಾಬೆರ್ರಿ, ಕಿವಿ ಬ್ಲೆಮಡ್ ಮಾಡಿ ಅದಕ್ಕೆ ಪುದೀನಾ ಹಾಕಿದರೆ ಸವಿಯಲು ರುಚಿಕರ ಹಾಗೂ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದನ್ನು ತಯಾರಿಸುವಾಗ ಮೊಸರು ಬದಲಿಗೆ ಗ್ರೀಕ್ ಯೋಗರ್ಟ್ ಬಳಸಿದರೆ ರುಚಿಕರ.

              ಪೋಷಕಾಂಶಗಳು

              • ವಿಟಮಿನ್ ಎ, ಸಿ ಮತ್ತು ಬಿ-6
              • ಮೆಗ್ನಿಷ್ಯಿಯಂ
              • ಸತು
              • ಫೋಲೆಟ್
              • 8. ಕಲ್ಲಂಗಡಿ ಜ್ಯೂಸ್

                8. ಕಲ್ಲಂಗಡಿ ಜ್ಯೂಸ್

                ಕಲ್ಲಂಗಡಿ ಜ್ಯೂಸ್‌ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮಾತ್ರವಲ್ಲ, ಸ್ನಾಯುಗಳ ಊತವನ್ನು ಕೂಡ ಕಡಿಮೆ ಮಾಡುತ್ತದೆ. ವಯಸ್ಕರಲ್ಲಿ ಸ್ನಾಯುಗಳಲ್ಲಿ ಊತ, ನೋವು ಜ್ವರ ಲಕ್ಷಣವಾಗಿದೆ. ಇದರ ಜ್ಯೂಸ್ ಮಾಡುವ ವಿಧಾನ ಕೂಡ ಸುಲಭವಾಗಿದೆ.

                ಪೋಷಕಾಂಶಗಳು

                • ವಿಟಮಿನ್ ಎ ಮತ್ತು ಸಿ
                • ಮೆಗ್ನಿಷ್ಯಿಯಂ
                • ಸತು
                • 9. ಕುಂಬಳಕಾಯಿ ಬೀಜ

                  9. ಕುಂಬಳಕಾಯಿ ಬೀಜ

                  ಕುಂಬಳಕಾಯಿ ಬೀಜ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕುಂಬಳಕಾಯಿ ಬೀಜವನ್ನು ಹಾಲಿನಲ್ಲಿ ಹಾಕಿ ಬ್ಲೆಂಡ್ ಮಾಡಿ ಜ್ಯೂಸ್‌ ಮಾಡಿ ಕುಡಿಯಬಹುದು. ಇದನ್ನು ಸ್ಮೂತಿ ಮಾಡಿ ಕುಡಿದರೆ ಹೆಚ್ಚು ರುಚಿಕರ.

                  ಈ ಜ್ಯೂಸ್‌ನಿಂದ ದೊರೆಯುವ ಇತರ ಪ್ರಯೋಜನಗಳು

                  • ಮೂಳೆ ಆರೋಗ್ಯ ಹೆಚ್ಚುವುದು
                  • ಮೆನೋಪಾಸ್‌ನಲ್ಲಿ ಕಾಡುವ ಸಮಸ್ಯೆ ಕಡಿಮೆ ಮಾಡುವುದು
                  • ಮೂತ್ರ ಸೋಂಕು ತಡೆಗಟ್ಟುತ್ತದೆ
                  • ಕೂದಲು ಹಾಗೂ ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು
                  • ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು
                  • ಪುರುಷರ ಪ್ರೋಸ್ಟೇಟ್ ಆರೋಗ್ಯ ಕಾಪಾಡುತ್ತದೆ.
                  • ಪೋಷಕಾಂಶಗಳು

                    • ವಿಟಮಿನ್ ಎ, ಸಿ ಮತ್ತು ಬಿ-6
                    • ಮೆಗ್ನಿಷ್ಯಿಯಂ
                    • ಸತು
                    • 10. ಪಾಲಾಕ್, ಲೆಟ್ಯೂಸೆ ಮತ್ತು ಕಳೆ

                      10. ಪಾಲಾಕ್, ಲೆಟ್ಯೂಸೆ ಮತ್ತು ಕಳೆ

                      ಇವುಗಳ ಜ್ಯೂಸ್‌ ಕೂಡ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುವಲ್ಲಿ ತುಂಬಾ ಸಹಕಾರಿ. ಈ ಜ್ಯೂಸ್‌ ಮಕ್ಕಳಿಗೆ ಕೂಡ ಇಷ್ಟವಾಗುವುದು.

                      2 ಸಾಧಾರಣ ಗಾತ್ರ ಕಳೆ ಸೊಪ್ಪು. 1 ಕಪ್ ಪಾಲಾಕ್, ಅರ್ಧ ಸೌತೆಕಾಯಿ, ಸ್ವಲ್ಪ ಶುಂಠಿ, ಲೆಟ್ಯೂಸೆ ಹಾಕಿ ಮಿಕ್ಸಿಯಲ್ಲಿ ರುಬ್ಬಿ, ಸೋಸಿ, ನಂತರ ನಿಂಬೆರಸ ಹಿಂಡಿ ಕುಡಿಯಬಹುದು.

                      ಪೋಷಕಾಂಶಗಳು

                      • ವಿಟಮಿನ್ ಎ, ಸಿ ಮತ್ತು ಬಿ-6
                      • ಕಬ್ಬಿಣದಂಶ
                      • ಕ್ಯಾಲ್ಸಿಯಂ
                      • ಇದರ ಜೊತೆಗೆ ವ್ಯಾಯಾಮ,ಸಮತೋಲಿನ ಆಹಾರಕ್ರಮ ಪಾಲಿಸಿದರೆ ಅನೇಕ ರೋಗಗಳು ಬರದಂತೆ ತಡೆಗಟ್ಟಬಹುದು. ಹೆಚ್ಚಿನ ನಮ್ಮ ಜೀವನಶೈಲಿಯಿಂದಾಗಿ ಬರುತ್ತವೆ, ಆದ್ದರಿಂದ ಜೀವನಶೈಲಿ ಆರೋಗ್ಯಕರವಾಗಿದ್ದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹೆಚ್ಚುವುದು.

English summary

Immunity Boost Juice To Drink In Summer

Your immune system is needs a healthy dose of vitamins and minerals. Here are 10 juice recipes, that will boost your immunity and make you stay healthy.
Story first published: Friday, April 10, 2020, 14:03 [IST]
X
Desktop Bottom Promotion