For Quick Alerts
ALLOW NOTIFICATIONS  
For Daily Alerts

ಯಾವಾಗ ಸೋರೆಕಾಯಿ ತಿಂದ್ರೆ ಅದು ಸೈನಡ್‌ನಷ್ಟು ವಿಷವಾಗಿರುತ್ತೆ?

|

ತುಂಬಾ ಆರೋಗ್ಯಕರ ಎಂದು ಸೇವಿಸಿ ಅದು ವಿಷವಾದ ಎಷ್ಟೋ ಪ್ರಕರಣಗಳನ್ನು ಕೇಳುತ್ತೇವೆ. ಸೋರೆಕಾಯಿ ಆರೋಗ್ಯಕ್ಕೆ ಎಷ್ಟು ಒಳ್ಳೆಯದೆಂದು ನಮಗೆಲ್ಲಾ ಗೊತ್ತು. ಬೊಜ್ಜು ಕರಗಿಸುವುದು, ದೇಹದಲ್ಲಿ ಕೊಲೆಸ್ಟ್ರಾಲ್‌ನ ಹಾಗೂ ಸಕ್ಕರೆಯಂಶ ನಿಯಂತ್ರಣದಲ್ಲಿಡುವುದು ಹೀಗೆ ಸೋರೆಕಾಯಿ ಅದ್ಭುತ ಪ್ರಯೋಜನಗಳನ್ನು ಹೊಂದಿದೆ.

ಎಷ್ಟೋ ಜನರು ಮೈ ಬೊಜ್ಜು ಕರಗಿಸಲು ಸೋರೆಕಾಯಿ ಜ್ಯೂಸ್‌ ಕುಡಿಯುತ್ತಾರೆ. ಇದರಿಂದ ಒಳ್ಳೆಯ ಫಲಿತಾಂಶ ಕೂಡ ಪಡೆದಿದ್ದಾರೆ. ಬೊಜ್ಜು ಕರಗುವುದು, ದೇಹ ಫಿಟ್‌ ಆಗಿರುವುದು ಹಾಗೂ ಯಾವುದೇ ಅಡ್ಡಪರಿಣಾಮಗಳಿಲ್ಲ. ಈ ಕಾರಣದಿಂದಾಗಿ ಫಿಟ್ನೆಸ್‌ ಕಡೆ ಗಮನ ನೀಡುವವರು ಸೋರೆಕಾಯಿ ಜ್ಯೂಸ್‌ ಕುಡಿಯುತ್ತಾರೆ. ಆದರೆ ನೀವು ಕುಡಿಯುವ ಜ್ಯೂಸ್‌ ಕಹಿಯಿದ್ದರೆ ಅದು ವಿಷವಾಗಬಹುದು ಹುಷಾರ್‌!

ಹೌದು ಸೋರೆಕಾಯಿ ಕಹಿಯಿದ್ದರೆ ಅದು ಸೈನಡ್‌ನಷ್ಟು ವಿಷಕಾರಿ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಸೆಲೆಬ್ರಿಟಿ ತಾಹಿರಾ ಕಶ್ಯಪ್‌ ಖುರಾನಾ ಕಹಿ ಸೋರೆಕಾಯಿ ತಿಂದು ಎರಡು ದಿನ ಐಸಿಯುವಿನಲ್ಲಿ ಜೀವಮರಣ ನಡುವೆ ಹೋರಾಡಿದ ಬಗ್ಗೆ ತಿಳಿಸಿ ಯಾರೂ ಕಹಿ ಸೋರೆಕಾಯಿ ತಿನ್ನಬೇಡಿ, ತಿಂದರೆ ಅಪಾಯಕಾರಿ ಎಂದು ತಿಳಿಸಿದ್ದಾರೆ.

ಸೋರೆಕಾಯಿ ಯಾವಾಗ ತಿನ್ನಬಾರದು, ಸೋರೆಕಾಯಿ ದೇಹವನ್ನು ಸೇರಿಸಿದಾಗ ಉಂಟಾಗುವ ತೊಂದರೆಗಳೇನು ಎಂಬುವುದನ್ನು ನೋಡೋಣ ಬನ್ನಿ:

ಬಳಸುವ ಮುನ್ನ ಸ್ವಲ್ಪ ರುಚಿ ನೋಡಿ

ಬಳಸುವ ಮುನ್ನ ಸ್ವಲ್ಪ ರುಚಿ ನೋಡಿ

ನೀವು ಜ್ಯೂಸ್‌ ಮಾಡುವ ಮುನ್ನ ಅಥವಾ ಸಾರು ಮಾಡುವ ಮುನ್ನ ಕತ್ತರಿಸಿ ಸ್ವಲ್ಪ ನೆಕ್ಕಿ ನೋಡಿ. ಆಗ ಕಹಿ ರುಚಿ ಬಂದರೆ ಬಳಸಲೇಬೇಡಿ. ಏಕೆಂದರೆ ಕಹಿಯಾದ ಸೋರೆಕಾಯಿ ತುಂಬಾ ವಿಷಕಾರಿಯಾಗಬಹುದು. ಇದರಿಂದ ಜನರು ಸಾವನ್ನಪ್ಪಿರುವ ಪ್ರಕರಣಗಳಿವೆ.

ಸೋರೆಕಾಯಿ ವಿಷ ದೇಹವನ್ನು ಸೇರಿದಾಗ ಕಂಡು ಬರುವ ಲಕ್ಷಣಗಳು

ಸೋರೆಕಾಯಿ ವಿಷ ದೇಹವನ್ನು ಸೇರಿದಾಗ ಕಂಡು ಬರುವ ಲಕ್ಷಣಗಳು

*ಕಿಬ್ಬೊಟ್ಟೆ ನೋವು

* ವಾಂತಿ

* ಬೇಧಿ

* ರಕ್ತವಾಂತಿ

* ಕರುಳಿನಲ್ಲಿ ರಕ್ತಸ್ರಾವ

*ಸಾವು ಕೂಡ ಸಂಭವಿಸಬಹುದು

ಸೋರೆಕಾಯಿ ಜ್ಯೂಸ್ ಕುಡಿದ ಬಳಿಕ ಅಥವಾ ಸಾರು ತಿಂದ ಬಳಿಕ ಹೊಟ್ಟೆ ನೋವು, ವಾಂತಿ ಮುಂತಾದ ಲಕ್ಷಣಗಳು ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆದರೆ ಪ್ರಾಣಾಪಾಯದಿಂದ ಪಾರಾಗಬಹುದು.

ತಾಹಿರಾ ಕಶ್ಯಪ್ ಖುರಾನಾ ಅನುಭವ

ತಾಹಿರಾ ಕಶ್ಯಪ್ ಖುರಾನಾ ಅನುಭವ

ಪ್ರತಿದಿನ ಸೋರೆಕಾಯಿ ಜ್ಯೂಸ್‌ಗೆ ಸ್ವಲ್ಪ, ಅರಿಶಿಣ ಹಾಗೂ ಆಮ್ಲ(ನೆಲ್ಲಿಕಾಯಿ ಜ್ಯೂಸ್‌) ಹಾಕಿ ಕುಡಿಯುತ್ತಿದ್ದರು. ಆದರೆ ಇತ್ತೀಚೆಗೆ ಇವರು ಸೋರೆಕಾಯಿ ಜ್ಯೂಸ್‌ ತೆಗೆದುಕೊಂಡ ಸೋರೆಕಾಯಿ ಜ್ಯೂಸ್‌ ಕಹಿ ಅನಿಸಿದರೂ ಕುಡಿದರು. ಕುಡಿದ ಸ್ವಲ್ಪ ಹೊತ್ತಿನಲ್ಲಿ ವಾಂತಿ-ಬೇಧಿ ಕಾಣಿಸಿಕೊಂಡಿತ್ತು. ಹಾಗಾಗಿ ಆಸ್ಪತ್ರೆಗೆ ದಾಖಲಾಗಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಇದರ ಬಗ್ಗೆ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದಾರೆ.

ಸೋರೆಕಾಯಿ ಹಸಿ ತಿನ್ನುವುದು ಒಳ್ಳೆಯದಾ, ಬೇಯಿಸಿ ತಿನ್ನುವುದು ಒಳ್ಳೆಯದಾ?

ಸೋರೆಕಾಯಿ ಹಸಿ ತಿನ್ನುವುದು ಒಳ್ಳೆಯದಾ, ಬೇಯಿಸಿ ತಿನ್ನುವುದು ಒಳ್ಳೆಯದಾ?

ಸೋರೆಕಾಯಿ ಜ್ಯೂಸ್‌ ಮಾಡಿ ಕುಡಿಯುವಾಗ ಹಸಿ ಬಳಸುತ್ತೇವೆ, ಆದರೆ ಹಸಿ ತಿಂದರೆ ಅಡ್ಡಪರಿಣಾಮ ಉಂಟಾಗುವುದು, ಬೇಯಿಸಿ ತಿಂದರೆ ಇಂಥ ಅಪಾಯಗಳನ್ನು ತಪ್ಪಿಸಬಹುದು. ಆದರೆ ಕಹಿ ಇದ್ದರೆ ಮಾತ್ರ ಬೇಯಿಸಿ ತಿನ್ನಲೂ ಮಾಡಬಾರದು.

FAQ's
  • ಸೋರೆಕಾಯಿ ತಿಂದರೆ ಮೈ ಬೊಜ್ಜು ಕರಗುವುದಾ?

    ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಸೊರೆಕಾಯಿ ಜ್ಯೂಸ್ ಕುಡಿದರೆ ತೂಕ ಇಳಿಕೆಗೆ ಸಹಕಾರಿ. ಇದರಲ್ಲಿ ನಾರಿನಂಶ ಹೆಚ್ಚಿದ್ದು ತೂಕ ಇಳಿಕೆಗೆ ಸಹಕಾರಿಯಾಗಿದೆ.
    ಆದರೆ ದಿನದಲ್ಲಿ ಒಂದು ಲೋಟಕ್ಕಿಂತ ಹೆಚ್ಚು ಜ್ಯೂಸ್ ಕುಡಿಯುವುದು ಒಳ್ಳೆಯದಲ್ಲ. ಇದು ಲಿವರ್‌ನ ಆರೋಗ್ಯಕ್ಕೂ ಒಳ್ಳೆಯದು.

  • ಸೋರೆಕಾಯಿ ಹಾಳಾಗಿದೆ ಎಂದು ತಿಳಿಯುವುದು ಹೇಗೆ?

    ಸೋರೆಕಾಯಿ ಸಿಪ್ಪೆ ಮೆತ್ತಗಾದರೆ ಅಥವಾ ಅದರ ರುಚಿಯಲ್ಲಿ ವ್ಯತ್ಯಾಸವಾದರೆ ಹಾಳಾಗಿದೆ ಎಂದು ಅರ್ಥ. ಅಂಥ ಸೋರೆಕಾಯಿ ಬಳಸಬಾರದು.

English summary

If Bottle Gourd Taste Bitter, It’s Poisonous as Cyanide Says Expert

If Bottle Gourd Taste Bitter, It’s Poisonous as Cyanide Says Expert, read on...
Story first published: Monday, October 11, 2021, 18:02 [IST]
X
Desktop Bottom Promotion