For Quick Alerts
ALLOW NOTIFICATIONS  
For Daily Alerts

ವೀಟ್‌ಗ್ರಾಸ್‌ ಹೀಗೆ ಬಳಸಿದರೆ ತೂಕ ಕಡಿಮೆಯಾಗುತ್ತೆ, ಮೊಡವೆ ಸಮಸ್ಯೆಯೂ ಇರಲ್ಲ

|

ಡಯಟ್‌, ಫಿಟ್ನೆಸ್ ಎನ್ನುವವರ ಪಾಲಿನ ಸೂಪರ್‌ಫುಡ್‌ ಎಂದು ಕರೆಸಿಕೊಳ್ಳುವ ಜ್ಯೂಸ್‌ ಎಂದರೆ ವೀಟ್‌ಗ್ರಾಸ್‌ ಜ್ಯೂಸ್‌ ಅಂದರೆ ಗೋಧಿಯ ಹುಲ್ಲಿನ ಜ್ಯೂಸ್‌. ಇದು ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ. ಇದು ತೂಕ ಕಳೆದುಕೊಳ್ಳಲು ಬಯಸುವವರಿಗೆ ಉತ್ತಮ. ಇಷ್ಟೇ ಅಲ್ಲ ಇದು ಹಸಿವನ್ನು ಕಡಿಮೆ ಮಾಡುವ ಜೊತೆಗೆ, ಕಡಿಮೆ ಕ್ಯಾಲೋರಿ ಹೊಂದಿರುವ ಪಾನೀಯ. ಹಾಗಾಗಿ ಇದು ಆರೋಗ್ಯಕರ ಡಯಟ್‌ನಲ್ಲಿ ಸೇರಿದೆ.

ಗೋಧಿಯ ಎಳೆಯ ಚಿಗುರಿನಿಂದ ತಯಾರಿಸುವ ಜ್ಯೂಸ್‌ ಅತ್ಯಂತ ಜನಪ್ರಿಯ.ಯಾಕೆಂದರೆ ಇದು ಹೆಚ್ಚು ಪೋಷಕಾಂಶಭರಿತವಾದ ಆಹಾರ, ವಿಶೇಷವಾಗಿ ಫೈಬರ್‌ ಮತ್ತು ಪ್ರೋಟೀನ್‌ ಇದರಲ್ಲಿ ಹೆಚ್ಚಾಗಿರುತ್ತದೆ. ಅಲ್ಲದೇ ವಿಟಮಿನ್‌ ಎ,ಸಿ,ಕೆ, ಇ ಮತ್ತು ಬಿ ಅಂಶಗಳನ್ನು ಒಳಗೊಂಡಿದೆ. ಅಷ್ಟು ಮಾತ್ರವಲ್ಲ ಕಬ್ಬಿಣಾಂಶ, ಕ್ಯಾಲ್ಸಿಯಂ ಮತ್ತು ಮೆಗ್ನೇಷಿಯಂ ಕೂಡಾ ಇದರಲ್ಲಿ ಹೇರಳವಾಗಿರುತ್ತದೆ. ವೀಟ್‌ ಗ್ರಾಸ್‌ ಎಲ್ಲರಿಗೂ ಕೈಗೆಟಕುವ ರೀತಿಯಲ್ಲಿ ಸಿಗುವುದಿಲ್ಲವಾದ್ದರಿಂದ, ಗೋಧಿ ಹುಲ್ಲಿನ ಪುಡಿಗಳಂತೂ ಧಾರಾಳವಾಗಿ ಸಿಗುತ್ತೆ. ಈ ಪುಡಿಯನ್ನು ಆರೋಗ್ಯಕ್ಕೆ ಮಾತ್ರವಲ್ಲ, ಮುಖದ ಆರೈಕೆ, ಹಾಗೂ ಕೂದಲಿಗೂ ಬಳಸಬಹುದು. ಇದನ್ನು ಬಳಸುವ ವಿಧಾನಗಳ ಕುರಿತು ಈ ಲೇಖನದಲ್ಲಿ ವಿವರಿಸಲಾಗಿದೆ ನೋಡಿ.

1. ವೀಟ್‌ಗ್ರಾಸ್‌ ಸ್ಮೂದಿ

1. ವೀಟ್‌ಗ್ರಾಸ್‌ ಸ್ಮೂದಿ

ಸ್ಮೂದಿ ಯಾರಿಗಿಷ್ಟ ಇಲ್ಲ ಹೇಳಿ. ನಿಮಗಿಷ್ಟವಾದ ಸ್ಮೂದಿಯಲ್ಲಿ ಈ ಗೋಧಿಹುಲ್ಲಿನ ಪುಡಿಯನ್ನು ಕೂಡಾ ಬೆರೆಸಬಹುದು. ಅದು ಹೇಗೆಂದ್ರೆ, ನಿಮ್ಮಿಷ್ಟದ ಹಣ್ಣಿನ ಸ್ಮೂದಿಯನ್ನು ಮಾಡಿ, ಅದರಲ್ಲಿ ಒಂದು ಚಮಚ ವೀಟ್‌ಗ್ರಾಸ್‌ ಪುಡಿ ಬೆರೆಸಿ, ಗೋಧಿ ಹುಲ್ಲು ಸಾಮಾನ್ಯವಾಗಿ ಕಹಿ ಇರೋದ್ರಿಂದ ಹಣ್ಣಿನ ಪ್ರಮಾಣ ಹೆಚ್ಚಿಸಬಹುದು. ಮುಖ್ಯವಾಗಿ ತೂಕ ಇಳಿಸಿಕೊಳ್ಳಲು ಬಯಸೋರು ಸಕ್ಕರೆಯ ಬದಲಾಗಿ ಜೇನುತುಪ್ಪ ಬಳಸಿ. ಇವಿಷ್ಟು ಹಾಕಿದರೆ ನಿಮ್ಮ ಶಕ್ತಿವರ್ಧಕ ಸ್ಮೂದಿ ರೆಡಿ. ಇದನ್ನು ವರ್ಕ್‌ಔಟ್‌ ಮುನ್ನ ಕುಡಿಯಲೂಬಹುದು.

2. ವೀಟ್‌ಗ್ರಾಸ್‌ ಜ್ಯೂಸ್‌

2. ವೀಟ್‌ಗ್ರಾಸ್‌ ಜ್ಯೂಸ್‌

ನಿಮಗೆ ತಾಜಾ ವೀಟ್‌ಗ್ರಾಸ್‌ ಸಿಗದೇ ಇದ್ದರೆ, ನೀವು ಇದರ ಪೌಡರ್‌ ಕೂಡಾ ಬಳಸಬಹುದು, ಈ ಪುಡಿಯನ್ನು ಬಳಸೋದು ಕೂಡಾ ಸುಲಭ. ವೀಟ್‌ ಗ್ರಾಸ್‌ ಗೂ, ಇದರ ಪೌಡರ್‌ನಲ್ಲೂ ಏನೂ ವ್ಯತ್ಯಾಸವಿರದು. ಸೇಬು, ಕಿತ್ತಳೆ, ಪೈನಾಪಲ್‌ ಅಥವಾ ಶುಂಠಿ ಬೆರೆಸಿ ಮಾಡಿದ ಜ್ಯೂಸ್‌ಗೆ ಒಂದು ಚಮಚ ಗೋಧಿ ಹುಲ್ಲಿನ ಪೌಡರ್‌ ಬೆರೆಸಿ ಕುಡಿಯಿರಿ. ಹಣ್ಣಿನ ಜ್ಯೂಸ್‌ ನಿಮ್ಮ ಆಯ್ಕೆಗೆ ಬಿಟ್ಟಿದ್ದು, ಇದರಲ್ಲಿ ಒಂದು ಚಮಚ ವೀಟ್‌ಗ್ರಾಸ್‌ ಪೌಡರ್‌ ಹಾಕೋದಿಕ್ಕೆ ಮರೆಯಬೇಡಿ.ಇನ್ನೊಂದು ವಿಚಾರವೆಂದರೆ ಇದನ್ನು ಖಾಲಿ ಹೊಟ್ಟೆಗೆ ಕುಡಿಯೋದು ತುಂಬಾ ಒಳ್ಳೇಯದು. ಈ ವೀಟ್‌ಗ್ರಾಸ್‌ ಜ್ಯೂಸ್‌ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುವುದಲ್ಲದೇ, ತೂಕ ಇಳಿಕೆಗೂ ಸಹಕಾರಿ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತೆ ಮತ್ತು ಕರುಳಿನ ಆರೋಗ್ಯವನ್ನೂ ಕಾಪಾಡುತ್ತೆ.

3. ವೀಟ್‌ಗ್ರಾಸ್‌ ಮೌತ್‌ವಾಶ್‌

3. ವೀಟ್‌ಗ್ರಾಸ್‌ ಮೌತ್‌ವಾಶ್‌

ಆಶ್ಚರ್ಯವಾದರೂ ಸತ್ಯ. ಹೌದು.. ವೀಟ್‌ಗ್ರಾಸ್‌ನಲ್ಲಿ ಕ್ಲೋರೋಫಿಲ್‌ ಅಂಶವಿರುವುದರಿಂದ, ಇದು ಬ್ಯಾಕ್ಟೀರಿಯಾವನ್ನು ನಾಶಮಾಡಿತ್ತದೆ. ಹಲ್ಲಿನ ಸಮಸ್ಯೆಗಳಾದ ಹಲ್ಲಿನ ಕುಳಿ, ಸೋಂಕುಗಳಾಗದಂತೆ ತಡೆಯುತ್ತದೆ. ಇದನ್ನು ಮೌತ್‌ವಾಶ್‌ ಆಗಿ ಹೇಗೆ ಬಳಸಿಕೊಳ್ಳಬಹುದೆಂದರೆ ನಿಮ್ಮ ಟೂತ್‌ಪೇಸ್ಟ್‌ ಅಥವಾ ಮೌತ್‌ವಾಶ್‌ಗೆ ಗೋಧಿಹುಲ್ಲಿನ ಪುಡಿಯನ್ನು ಸೇರಿಸಬೇಕು. ಬಾಯಿ, ವಸಡು ಹಾಗೂ ಹಲ್ಲಿನ ಆರೋಗ್ಯಕ್ಕೆ ಇದು ಉತ್ತಮ.

4. ವೀಟ್‌ಗ್ರಾಸ್‌ಫೇಸ್‌ಪ್ಯಾಕ್‌

4. ವೀಟ್‌ಗ್ರಾಸ್‌ಫೇಸ್‌ಪ್ಯಾಕ್‌

ವೀಟ್‌ಗ್ರಾಸ್‌ನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಆಂಟಿ ಏಜಿಂಗ್‌ ಗುಣಲಕ್ಷಣಗಳನ್ನು ಹೊಂದಿದೆ. ಇದು ವಯಸ್ಸಾದಂತೆ ಕಂಡುಬರುವ ಮುಖದಲ್ಲಿನ ನೆರಿಗೆ ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡುತ್ತೆ. ಮುಖದ ಸೌಂದರ್ಯ ಹೆಚ್ಚಿಸೋಕೆ ಕಸರತ್ತು ಮಾಡುವ ಸುಂದರಿಯರು, ಈ ವೀಟ್‌ಗ್ರಾಸ್‌ ಪೌಡರ್‌ನ ಫೇಸ್‌ಪ್ಯಾಕ್‌ ಟ್ರೈ ಮಾಡಿ ನೋಡಿ. ಇದು ಮುಖದಲ್ಲಿನ ಮೊಡವೆಗಳನ್ನು ಕಡಿಮೆ ಮಾಡಿವುದಲ್ಲದೇ ಉರಿಯೂತವನ್ನೂ ತಡೆಗಟ್ಟುವಲ್ಲಿ ಸಹಕಾರಿ. ನೀವು ಯಾವುದಾದರೂ ಪೇಸ್‌ಪ್ಯಾಕ್‌ ಬಳಸುತ್ತಿದ್ದಲ್ಲಿ ಅದಕ್ಕೆ ಸ್ವಲ್ಪ ಗೋಧಿ ಹುಲ್ಲಿನ ಪುಡಿಯನ್ನು ಸೇರಿಸಿ ಮುಖಕ್ಕೆ ಹಚ್ಚಿ. ಇದನ್ನು ವಾರಕ್ಕೊಮ್ಮೆ ಬಳಸಬಹುದು. ಇದರಿಂದ ನಿಮ್ಮ ತ್ವಚೆಯ ಹೊಳಪು ಹೆಚ್ಚುವುದಲ್ಲದೇ, ಮೊಡವೆಯ ಸಮಸ್ಯೆಗೂ ಬೈ ಬೈ ಹೇಳಬಹುದು.

5. ವೀಟ್‌ಗ್ರಾಸ್‌ ಹೇರ್‌ ಪ್ಯಾಕ್‌

5. ವೀಟ್‌ಗ್ರಾಸ್‌ ಹೇರ್‌ ಪ್ಯಾಕ್‌

ಮುಖದ ಆರೈಕೆಯ ನಂತರ ಮಹತ್ವ ಕೊಡೋದೆ ಕೂದಲಿನ ಆರೋಗ್ಯಕ್ಕೆ. ವೀಟ್‌ ಗ್ರಾಸ್‌ ಪೌಡರನ್ನು ನೀವು ತಲೆಕೂದಲಿಗೂ ಹೇರ್‌ಪ್ಯಾಕ್‌ನಂತೆ ಹಚ್ಚಬಹುದು. ಈ ಪುಡಿಯನ್ನು ನೀರಿನಲ್ಲಿ ಮಿಶ್ರಣಮಾಡಿ, ಪೇಸ್ಟ್‌ ರೀತಿ ಮಾಡಿಕೊಂಡು, ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ, ಹದಿನೈದು - ಇಪ್ಪತ್ತು ನಿಮಿಷಗಳ ನಂತರ ಚೆನ್ನಾಗಿ ಕೂದಲನ್ನು ತೊಳೆಯಿರಿ. ಈ ಹೇರ್‌ಪ್ಯಾಕ್‌ ತಲೆಹೊಟ್ಟನ್ನು ನಿವಾರಿಸಿ, ಕೂದಲಿನ ಬೇರನ್ನು ಬಲಪಡಿಸುತ್ತದೆ.

English summary

How To Use Wheatgrass Powder For Weight Loss, Acne-Free Skin in kannada

Wheatgrass powder helps to loose weight and to get acne-free skin, how to use it, have a look...
X
Desktop Bottom Promotion