For Quick Alerts
ALLOW NOTIFICATIONS  
For Daily Alerts

ಸಣ್ಣ ಆಗಬೇಕಾದರೆ ಕೇವಲ ಡಯಟ್‌ ಅಷ್ಟೇ ಅಲ್ಲ ಇಂಥಾ ವಿಚಾರಗಳ ಕಡೆ ಗಮನಹರಿಸಬೇಕು

|

ದಪ್ಪ ಇರೋರು ತೂಕ ಕಳೆದುಕೊಳ್ಳಬೇಕು ಎಂದು ಡಯಟ್‌, ಜಿಮ್‌ಗೆ ಹೋಗುತ್ತಾರೆ, ಸಣ್ಣ ಇರೋರು ಆಕರ್ಷಕ ಮೈಕಟ್ಟು ಬೆಳೆಸಿಕೊಳ್ಳಬೇಕು ಎನ್ನುವುದಕ್ಕಾಗಿ ಜಿಮ್‌ಗೆ ಹೋಗುತ್ತಾರೆ. ಆದರೆ ಎಷ್ಟೇ ಪ್ರಯತ್ನಿಸಿದರೂ ದೇಹದಲ್ಲಿ ಅಂದುಕೊಂಡ ಬದಲಾವಣೆ ಆಗದೇ ಇರಬಹುದು.

123

ಕೆಲವೊಮ್ಮೆ ದೇಹದ ತೂಕ ಇಳಿಸಿಕೊಳ್ಳುವುದಾಗಲಿ, ಸದೃಢ ಮೈಕಟ್ಟು ಬೆಳೆಸಿಕೊಳ್ಳೋದು ಕಷ್ಟ ಅನ್ನಿಸಿಬಿಡುತ್ತದೆ. ಆದರೆ ಅಸಾಧ್ಯವಾದುದು ಯಾವುದೂ ಇಲ್ಲ. ಮನಸ್ಸು ಮಾಡಿದರೆ ಎಲ್ಲವೂ ಸರಳವಾಗಿಬಿಡುತ್ತದೆ. ನೀವು ಅದರ ಕಡೆಗೆ ಹೆಚ್ಚಿನ ಗಮನ, ಶ್ರದ್ಧೆ, ಪ್ರೇರೇಪಣೆ ಬೇಕಾಗುತ್ತದೆ. ಆದರೆ ಅದೇ ನಿಮಗೆ ಕಷ್ಟವೆನಿಸಬಹುದು. ನೀವೂ ಆರೋಗ್ಯಕರ, ಸದೃಢ ಮೈಕಟ್ಟನ್ನು ಬೆಳೆಸಿಕೊಳ್ಳಬೇಕೆಂದರೆ ಈ ಯೂಸ್‌ಫುಲ್‌ ಟಿಪ್ಸ್ ತಪ್ಪದೇ ಓದಿ.

ಮೊದಲು ಚಿಕ್ಕ ಚಿಕ್ಕ ಗುರಿಗಳತ್ತ ಗಮನ ಹರಿಸಿ

ಮೊದಲು ಚಿಕ್ಕ ಚಿಕ್ಕ ಗುರಿಗಳತ್ತ ಗಮನ ಹರಿಸಿ

ಪ್ರಾರಂಭದಲ್ಲೇ ದೊಡ್ಡ ಗುರಿಯನ್ನು ಸಾಧಿಸಲು ಹೊರಡುವುದು ಕಷ್ಟವಾಗಬಹುದು. ಅದಕ್ಕಾಗಿ ಅದಕ್ಕಾಗಿಯೇ ಆ ದೊಡ್ಡ ಗುರಿಯನ್ನೇ ಸಣ್ಣ ಸಣ್ಣ ನಿರ್ದಿಷ್ಟ ಮತ್ತು ವಾಸ್ತವಿಕ ಗುರಿಗಳಾಗಿ ವಿಂಗಡಿಸಿ. ಉದಾಹರಣೆಗೆ ಒಂದು ತಿಂಗಳಲ್ಲಿ ಇಂತಿಷ್ಟು ತೂಕವನ್ನು ಕಳೆದುಕೊಳ್ಳಬೇಕೆಂದು ನಿರ್ಧರಿಸಿದಲ್ಲಿ. ಒಂದು ವಾರದಲ್ಲಿ ಇಷ್ಟು ತೂಕ ಕಳೆದುಕೊಳ್ಳಬೇಕು ಎನ್ನುವ ಗುರಿ ಹೊಂದಿಸಿಕೊಳ್ಳಿ. ಇದೇ ರೀತಿಯಾಗಿ ಪ್ರತಿ ವಾರ ಅಥವಾ ಪ್ರತಿ ತಿಂಗಳು ಸಮಂಜಸವಾದ ಗುರಿಯನ್ನು ರಚಿಸುವ ಮೂಲಕ ವರ್ಕೌಟ್‌ ಅಥವಾ ಡಯಟ್‌ ಪ್ರಾರಂಭಿಸಿ. ವಾರಕ್ಕೆ ಎರಡು ಮೂರು ಕೆಜಿ ತೂಕ ಇಳಿಕೆಯಂತೆ ತಿಂಗಳಲ್ಲಿ ಸರಿಸುಮಾರು ಹತ್ತು ಕೆಜಿಯಷ್ಟು ತೂಕ ಇಳಿಸಿಕೊಳ್ಳುವ ಗುರಿಯನ್ನಿಟ್ಟುಕೊಳ್ಳಿ.

ಪ್ರತಿಬಾರಿ ನಿಮ್ಮ ಫೋಟೋಗಳನ್ನು ತೆಗೆಯಿರಿ

ಪ್ರತಿಬಾರಿ ನಿಮ್ಮ ಫೋಟೋಗಳನ್ನು ತೆಗೆಯಿರಿ

ಸ್ವಪ್ರೇರಣೆಯನ್ನು ತಂದುಕೊಳ್ಳಲು ಉತ್ತಮ ಮಾರ್ಗವೆಂದರೆ ಫೋಟೋ ತೆಗೆದುಕೊಳ್ಳುವುದು. ವಿಶೇಷವಾಗಿ ರೂಪಾಂತರದ ಆರಂಭದಲ್ಲಿ ಒಂದು ಫೋಟೋ ತೆಗೆಯಿರಿ. ಅದಾದ ನಂತರ ವರ್ಕೌಟ್‌ ಅಥವಾ ಡಯಟ್‌ ಪ್ರಾರಂಭಿಸಿದ ನಂತರ ನಿಮ್ಮ ದೇಹದಲ್ಲಿ ಕೆಲವೊಂದು ವಾರ, ತಿಂಗಳುಗಳಲ್ಲಿ ಬದಲಾವಣೆ ಕಂಡುಬರುತ್ತದೆ. ನೀವಂದುಕೊಂಡಂತೆ ದೇಹದಲ್ಲಿ ಬದಲಾವಣೆಯನ್ನು ಕಾಣಲು ಆರಂಭಿಸಬಹುದು. ನೀವು ಡಯಟ್‌ ಆರಂಭಿಸಿದ ದಿನದಿಂದ ಉತ್ಸಾಹದಿಂದ ಮುಂದುವರಿದಿದ್ದರೂ, ಕೆಲವೊಮ್ಮೆ ಅಯ್ಯೋ ಏನೂ ಬದಲಾವಣೆ ಆಗೇ ಇಲ್ಲ ಎಂದು ಅನಿಸಬಹುದು. ಹೀಗಾದಾಗ ಮತ್ತೆ ಮರುಚೈತನ್ಯ ಪಡೆದುಕೊಳ್ಳಲು ನಿಮ್ಮ ವೈಟ್‌ ಲಾಸ್‌ ಜರ್ನಿಯ ಆರಂಭದ ಫೋಟೋಗಳನ್ನು ನೋಡಿ. ಇದನ್ನು ಮುಂದುವರಿಸಲು ಪ್ರತಿ 8 ರಿಂದ 12 ವಾರಗಳಿಗೊಮ್ಮೆ ನಿಮ್ಮ ಫೋಟೋ ತೆಗೆಯಿರಿ.

ಫೋನ್‌ ಬದಿಗಿಟ್ಟು ಇತರರೊಂದಿಗೆ ಆಹಾರ ಸೇವಿಸಿ

ಫೋನ್‌ ಬದಿಗಿಟ್ಟು ಇತರರೊಂದಿಗೆ ಆಹಾರ ಸೇವಿಸಿ

ಹೆಚ್ಚು ಸಮಯ ಪೋನ್‌ ಸ್ಕ್ರಾಲ್‌ ಮಾಡುತ್ತಲೇ ಸಮಯ ಕಳೆಯುವ ನಿಮ್ಮ ದೇಹವೂ ಕಣ್ಣಿಗೆ ಮತ್ತು ಮನಸ್ಸಿಗೆ ವಿಶ್ರಾಂತಿ ಬಯಸುತ್ತದೆ. ಅದರಲ್ಲೂ ಟಿವಿ ನೋಡುತ್ತಾ, ಫೋನ್‌ ನೋಡುತ್ತಾ ಅಥವಾ ಕೆಲಸ ಮಾಡುತ್ತಾ ತಿನ್ನುತ್ತಿದ್ದರೆ, ಸೇವಿಸುವ ಆಹಾರದ ಪ್ರಮಾಣವೂ ನಿಮಗರಿವಿಲ್ಲದೆಯೇ ಹೆಚ್ಚಾಗಿರುತ್ತದೆ. ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನೀವು ತಿನ್ನುವ ಆಹಾರಗಳ ಬಗ್ಗೆ ನೀವು ಗಮನ ಹರಿಸದಿದ್ದರೆ, ನಂತರ ನೀವು ಹೆಚ್ಚು ತಿನ್ನಲು ಪ್ರಯತ್ನಿಸುತ್ತೀರಂತೆ. ಏಕಾಂಗಿಯಾಗಿ ತಿನ್ನುವುದಕ್ಕಿಂತ ಹೆಚ್ಚಾಗಿ ಇತರರೊಂದಿಗೆ ಆಹಾರವನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ ಎನ್ನುತ್ತದೆ ಈ ಅಧ್ಯಯನ. ಅಲ್ಲದೇ ಇತರರೊಂದಿಗೆ ಒಟ್ಟಿಗೆ ಆಹಾರ ಸೇವಿಸುವ ವ್ಯಕ್ತಿಗಳಿಗಿಂತ ಒಂಟಿಯಾಗಿರುವ ಜನರು ದಿನಕ್ಕೆ ಕಡಿಮೆ ಪ್ರಮಾಣದ ತರಕಾರಿಗಳನ್ನು ತಿನ್ನುತ್ತಾರೆ ಎಂದು ಅಧ್ಯಯನವು ಸೂಚಿಸುತ್ತದೆ.

ನಿಮ್ಮ ಫಿಟ್ನೆಸ್‌ ಗುರಿಗಳ ಬಗ್ಗೆ ಆತ್ಮೀಯರೊಂದಿಗೂ ಮಾತನಾಡಿ

ನಿಮ್ಮ ಫಿಟ್ನೆಸ್‌ ಗುರಿಗಳ ಬಗ್ಗೆ ಆತ್ಮೀಯರೊಂದಿಗೂ ಮಾತನಾಡಿ

ಪ್ರೀತಿಪಾತ್ರರು, ನಿಕಟ ಸ್ನೇಹಿತರು ಮತ್ತು ನಿಮ್ಮಂತೆಯೇ ಫಿಟ್‌ ಆಗಿರಲು ಪ್ರಯತ್ನಿಸುತ್ತಿರುವವರೊಂದಿಗೆ ನಿಮ್ಮ ಗುರಿಗಳನ್ನು ಹಂಚಿಕೊಳ್ಳುವುದು ಸಹ ಪ್ರೇರಿತರಾಗಿ ಉಳಿಯಲು ಮತ್ತೊಂದು ಅದ್ಭುತ ಮಾರ್ಗವಾಗಿದೆ. ನೀವು ನಿಮ್ಮ ಡಯಟ್‌, ಫಿಟ್ನೆಸ್‌ನಲ್ಲಿ ಗುರಿಯನ್ನು ಸಾಧಿಸಲು ಅವರು ಪ್ರೇರಣೆ ಮತ್ತು ಬೆಂಬಲವನ್ನು ನೀಡುತ್ತಾರೆ. ಅವರು ನಿಮ್ಮ ಪ್ರಗತಿಯನ್ನು ಗಮನಿಸಲು ಪ್ರಾರಂಭಿಸಿದಾಗ ಅವರ ಸಕಾರಾತ್ಮಕ ಕಾಮೆಂಟ್‌ಗಳು ನಿಮ್ಮನ್ನು ಇನ್ನಷ್ಟು ಮುಂದುವರಿಸಲು ಪ್ರೋತ್ಸಾಹಿಸುತ್ತವೆ. ಆದಾಗ್ಯೂ, ನಿಮ್ಮ ಆರೋಗ್ಯಕರ ರೂಪಾಂತರವನ್ನು ರಹಸ್ಯವಾಗಿಡಲು ನೀವು ನಿಜವಾಗಿಯೂ ಬಯಸಿದರೆ, ನಿಮ್ಮ ಹತ್ತಿರದ ಸ್ನೇಹಿತರಿಗೆ ಮಾತ್ರ ತಿಳಿಸಿ. ನಿಮ್ಮನ್ನು ಹುರಿದುಂಬಿಸಲು ನಿಮ್ಮ ಸ್ನೇಹಿತ ಕೂಡ ನಿಮ್ಮೊಂದಿಗೆ ಬದಲಾವಣೆಯಲ್ಲಿ ಸೇರಿಕೊಳ್ಳಬಹುದು.

ನೀವು ಸೇವಿಸುವ ಆಹಾರದ ಮೇಲೆ ಗಮನ ಹರಿಸಿ

ನೀವು ಸೇವಿಸುವ ಆಹಾರದ ಮೇಲೆ ಗಮನ ಹರಿಸಿ

ತೂಕ ಕಳೆದುಕೊಳ್ಳುವ ಸಮಯದಲ್ಲಿ ನೀವು ಸೇವಿಸುವ ಆಹಾರದಲ್ಲಿನ ಪೌಷ್ಟಿಕಾಂಶದ ಮಟ್ಟವನ್ನು ಅಳೆದುಕೊಳ್ಳುವುದು ಕೂಡಾ ಅಷ್ಟೇ ಮುಖ್ಯ. ನಿಮ್ಮ ಆಹಾರ ಸೇವನೆಯ ಪ್ರಮಾಣದ ಭಾಗವನ್ನು ಅಳೆಯಿರಿ. ಈ ಸಮಯದಲ್ಲಿ ಹೆಚ್ಚೂ ತಿನ್ನಬಾರದು, ಕಡಿಮೆಯೂ ತಿನ್ನಬಾರದು ಎನ್ನುವುದನ್ನು ನೆನಪಿನಲ್ಲಿಡಿ. ನಿಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ನೀವು ತೆಗೆದುಕೊಳ್ಳಲೇಬೇಕಾಗುತ್ತದೆ. ಕೆಲವು ಆಹಾರಗಳಲ್ಲಿ ಕ್ಯಾಲೊರಿ ಹೆಚ್ಚಾಗಿರುತ್ತದೆ. ನೀವು ಅಂದುಕೊಂಡಿರುವುದಕ್ಕಿಂತಲೂ ಹೆಚ್ಚು ಕ್ಯಾಲೋರಿಗಳನ್ನು ಹೊಂದಿರುತ್ತದೆ. ನೀವು ಸೇವಿಸುವ ಆಹಾರದ ಬಗ್ಗೆ ನಿಮಗೆ ಸಂಶಯಗಳಿದ್ದಲ್ಲಿ ಪೌಷ್ಟಿಕತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ.

ಪ್ರಕ್ರಿಯೆ ನಿಧಾನವಿರಲಿ

ಪ್ರಕ್ರಿಯೆ ನಿಧಾನವಿರಲಿ

ಯಾವುದೇ ಆಗಲಿ ಒಂದೇ ಬಾರಿ ತೂಕವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಹಂತ ಹಂತವಾಗಿ ಮುಂದುವರಿಯಬೇಕೇ ಹೊರತು, ಒಮ್ಮೆಲೇ ತೂಕ ಇಳಿಸಿಕೊಂಡರೆ ಅಥವಾ ಒಂದು ವಾರದಲ್ಲಿ ನಿಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ತೂಕವನ್ನು ಕಳೆದುಕೊಂಡರೆ ಅಸ್ವಸ್ಥತೆಗೆ ಒಳಗಾಗಬಹುದು. ನಿಮ್ಮ ದೇಹದ ತೂಕ ಎಷ್ಟಿರಬೇಕೋ ಅಷ್ಟೇ ತೂಕದ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ದೇಹದ ಬಗ್ಗೆ ಇರುವ ಕೀಳರಿಮೆ ಬಿಟ್ಟು ಬಿಡಿ, ನನ್ನಿಂದಾಗದು ಎನ್ನುವ ಮಾತನ್ನು ಮರೆತು, ಉತ್ತಮ ಆರೋಗ್ಯಕರ ಜೀವನಶೈಲಿಗಾಗಿ ಡಯಟ್‌, ಫಿಟ್‌ನೆಸ್‌ ಕಾಪಾಡಿಕೊಳ್ಳಿ.

English summary

How to have a healthy transformation in kannada

ದಪ್ಪ ಇರೋರು ತೂಕ ಕಳೆದುಕೊಳ್ಳಬೇಕು ಎಂದು ಡಯಟ್‌, ಜಿಮ್‌ಗೆ ಹೋಗುತ್ತಾರೆ, ಸಣ್ಣ ಇರೋರು ಆಕರ್ಷಕ ಮೈಕಟ್ಟು ಬೆಳೆಸಿಕೊಳ್ಳಬೇಕು ಎನ್ನುವುದಕ್ಕಾಗಿ ಜಿಮ್‌ಗೆ ಹೋಗುತ್ತಾರೆ. ಆದರೆ ಎಷ್ಟೇ ಪ್ರಯತ್ನಿಸಿದರೂ ದೇಹದಲ್ಲಿ ಅಂದುಕೊಂಡ ಬದಲಾವಣೆ ಆಗದೇ ಇರಬಹುದು.
X
Desktop Bottom Promotion