For Quick Alerts
ALLOW NOTIFICATIONS  
For Daily Alerts

ಒಣ ದ್ರಾಕ್ಷಿ ಮತ್ತು ಬೆಲ್ಲದ ಕಾಂಬಿನೇಷನ್ ಬೇಗನೆ ಹೊಟ್ಟೆ ಕರಗಿಸುತ್ತೆ, ಹೇಗೆ ಬಳಸಬೇಕು ಗೊತ್ತಾ?

|

ಮೈ ತೂಕ ಹೆಚ್ಚಾಗುತ್ತಿರುವಾಗ ಪ್ರಾರಂಭದಲ್ಲಿ ಹೆಚ್ಚಿನವರು ತಲೆ ಕೆಡಿಸಿಕೊಳ್ಳುವುದಿಲ್ಲ. ಕೆಲವು ತಿಂಗಳುಗಳು ಕಳೆಯುತ್ತಿದ್ದಂತೆ ಡ್ರೆಸ್‌ಗಳು ಬಿಗಿಯಾಗುವುದು, ಹೊಟ್ಟೆ ಮುಂದೆ ಬಂದಿರುತ್ತದೆ ಆಗ ಅಯ್ಯೋ ದಪ್ಪಗಾದೆ, ಕರಗಿಸಬೇಕು ಎಂದು ಯೋಚಿಸುತ್ತೇವೆ.

ಏನೂ ಕಷ್ಟಪಡದೆ ತಿಂದು-ಉಂಡು ಆರಾಮವಾಗಿ ಇದ್ದಾಗ ಮೈ ತೂಕ ಹೆಚ್ಚಾಗಿರುತ್ತದೆ, ಆದರೆ ಮೈ ತೂಕ ಇಳಿಸಿಕೊಳ್ಳುವುದು ತುಂಬಾನೇ ಕಷ್ಟ ಅನ್ನುವುದು ಮೈ ತೂಕವನ್ನು ಇಳಿಸಿಕೊಳ್ಳಲು ಹೋದಾಗಲೇ ತಿಳಿಯುವುದು. ವ್ಯಾಯಾಮ, ಡಯಟ್‌ ಎಲ್ಲಾ ಮಾಡಿದರೂ ಗ್ರಾಂ ಲೆಕ್ಕದಲ್ಲಿ ತೂಕ ಕಡಿಮೆಯಾಗುತ್ತಿರುತ್ತದೆ.

ನೀವು ತೂಕ ಇಳಿಕೆಗೆ ಪ್ರಯತ್ನಿಸುವಾಗ ಕೆಲವೊಂದು ಆರೋಗ್ಯಕರ ಟಿಪ್ಸ್ ನೀವು ಆರೋಗ್ಯಕರವಾಗಿ ಬೇಗನೆ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತೆ, ಅಂಥದ್ದೇ ಟಿಪ್ಸ್‌ ಬಗ್ಗೆ ಇಲ್ಲಿ ಹೇಳಲಾಗಿದೆ. ಹೌದು ಒಣದ್ರಾಕ್ಷಿ ಹಾಗೂ ಬೆಲ್ಲ ಬಳಸಿ ಮೈ ತೂಕ ಕಡಿಮೆ ಮಾಡುವ ಟಿಪ್ಸ್‌ ನೀಡಿದ್ದೇವೆ ನೋಡಿ:

ಮೈ ತೂಕ ಇಳಿಸಲು ಬೆಲ್ಲ ಮತ್ತುಒಣದ್ರಾಕ್ಷಿ ಹೇಗೆ ಬಳಸಬೇಕು?

ಮೈ ತೂಕ ಇಳಿಸಲು ಬೆಲ್ಲ ಮತ್ತುಒಣದ್ರಾಕ್ಷಿ ಹೇಗೆ ಬಳಸಬೇಕು?

ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ನೀರಿನಲ್ಲಿ 5-6 ಒಣ ದ್ರಾಕ್ಷಿ ನೆನೆಹಾಕಿ ಮುಚ್ಚಿಡಿ. ಬೆಳಗ್ಗೆ ಅದಕ್ಕೆ ಚಿಕ್ಕ ಬೆಲ್ಲದ ತುಂಡುಗಳನ್ನು ಹಾಕಿ ಅಥವಾ ಬೆಲ್ಲದ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ. ಈ ನೀರು ಸೇವಿಸುವ ಮುನ್ನ ಒಂದು ಚಿಕ್ಕ ತುಂಡು ಬೆಲ್ಲವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ನಂತರ ಬೆಲ್ಲ ಹಾಗೂ ದ್ರಾಕ್ಷಿಯ ನೀರು ಕುಡಿಯಬೇಕು.

ಹೀಗೆ ಮಾಡುವುದರಿಂದ ನಿಮ್ಮ ಚಯಪಚಯ ಕ್ರಿಯೆ ಆರೋಗ್ಯಕರವಾಗುವುದು. ಮೈ ತೂಕ ಕಡಿಮೆಯಾಗಬೇಕೆಂದರೆ ಚಯ ಪಚಯ ಕ್ರಿಯೆ ಉತ್ತಮವಾಗಬೇಕು. ನೀವು ಈ ಟಿಪ್ಸ್ ಬಳಸಿದರೆ ಅಧಿಕ ಮೈ ತೂಕ ಸುಲಭದಲ್ಲಿ ಇಳಿಸಬಹುದು.

ಎಷ್ಟು ಸಮಯ ಬಳಸಬೇಕು?

ಎಷ್ಟು ಸಮಯ ಬಳಸಬೇಕು?

ಈ ಟಿಪ್ಸ್‌ ದಿನಾ ಮಾಡಿದರೂ ಇದರಿಂದ ಆರೋಗ್ಯಕ್ಕೆ ಒಳ್ಳೆಯದೆ ಹೊರತು ಅಡ್ಡಪರಿಣಾಮವಿಲ್ಲ. ಏಕೆಂದರೆ ದಿನಾ 4-5 ದ್ರಾಕ್ಷಿ ನೆನೆ ಹಾಕಿ ತಿನ್ನುವ ಅಬ್ಯಾಸ ಜೀರ್ಣಕ್ರಿಯೆಗೆಒಳ್ಳೆಯದು, ಇನ್ನು ನೈಸರ್ಗಿಕವಾದ ಬೆಲ್ಲ ಶಕ್ತಿಯನ್ನು ತುಂಬುವುದು. ಅಷ್ಟು ಮಾತ್ರವಲ್ಲಿ ಇವೆರಡರ ಮಿಶ್ರಣ ಸೇವಿಸುವುದರಿಂದ ರಕ್ತದೊತ್ತಡ ಕಡಿಮೆಯಾಗುವುಉದ, ಉಸಿರಾಟದ ಸಮಸ್ಯೆಯಿದ್ದರೆ ಅದು ಕಡಿಮೆಯಾಗುವುದು, ಮೂಳೆಗಳು ಬಲವಾಗುವುದು, ಜೊತೆಗೆ ನೀವು ಬಯಸಿದಂತೆ ಆರೋಗ್ಯಕ್ಕರ ತೂಕಕ್ಕೆ ಮರಳಬಹುದು.

ಒಣದ್ರಾಕ್ಷಿ, ಬೆಲ್ಲದಲ್ಲಿರುವ ಪೋಷಕಾಂಶಗಳು

ಒಣದ್ರಾಕ್ಷಿ, ಬೆಲ್ಲದಲ್ಲಿರುವ ಪೋಷಕಾಂಶಗಳು

ಒಣದ್ರಾಕ್ಷಿಯಲ್ಲಿ ವಿಟಮಿನ್‌ ಬಿ, ವಿಟಮಿನ್‌ ಸಿ, ಕಬ್ಬಿಣದಂಶ ಇರುವುದರಿಂದ ರಕ್ತ ಹೀನತೆ, ಮಲ ಬದ್ಧತೆ ಈ ಬಗೆಯ ಸಮಸ್ಯೆ ತಡೆಗಟ್ಟುತ್ತೆ. ಇನ್ನು ಬೆಲ್ಲ ತಿನ್ನುವುದರಿಂದ ವಿಟಮಿನ್ ಬಿ 12, ಬಿ 3, ಪೋಲೆಟ್‌, ಕ್ಯಾಲ್ಸಿಯಂ, ಕಬ್ಬಿಣದಂಶ, ರಂಜಕ, ಮೆಗ್ನಿಷ್ಯಿಯಂ, ಮ್ಯಾಂಗನೀಸ್ ಮುಂತಾದ ಪೋಷಕಾಂಶಗಳು ದೊರೆಯುವುದು.

ಬೆಲ್ಲವನ್ನು ಮಧುಮೇಹಿಗಳು ಸೇವಿಸಬಹುದಾ?

ಬೆಲ್ಲವನ್ನು ಮಧುಮೇಹಿಗಳು ಸೇವಿಸಬಹುದಾ?

ಬೆಲ್ಲ ಸಕ್ಕರೆಯಂತೆ ಹಾನಿಕಾರಕವಲ್ಲ, ಆದರೆ ಮಧುಮೇಹಿಗಳು ದಿನಾ ಬೆಲ್ಲ ತಿನ್ನುವಂತಿಲ್ಲ ಅಪರೂಪಕ್ಕೆ ಸೇವಿಸಿದರೆ ಆರೋಗ್ಯಕ್ಕೇನೂ ತೊಂದರೆಯಿಲ್ಲ. 10ಗ್ರಾಂ ಬೆಲ್ಲದಲ್ಲಿ ಶೇ.65ರಿಂದ 85ರಷ್ಟು ಸುಕ್ರೋಸ್‌ ಇರುತ್ತದೆ. ಆದ್ದರಿಂದ ಮಧುಮೇಹಿಗಳು ತೂಕ ಇಳಿಕೆಗೆ ಈ ಟಿಪ್ಸ್ ಬಳಸಬೇಡಿ.

ಬೆಲ್ಲ ಮತ್ತು ದ್ರಾಕ್ಷಿ ತಿನ್ನುವುದರಿಂದ ದೊರೆಯುವ ಇತರ ಆರೋಗ್ಯಕರ ಪ್ರಯೋಜನಗಳು

ಬೆಲ್ಲ ಮತ್ತು ದ್ರಾಕ್ಷಿ ತಿನ್ನುವುದರಿಂದ ದೊರೆಯುವ ಇತರ ಆರೋಗ್ಯಕರ ಪ್ರಯೋಜನಗಳು

* ಉಸಿರಾಟದ ಸಮಸ್ಯೆ ಕಡಿಮೆಯಾಗುವುದು

* ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ

* ದೇಹಕ್ಕೆ ಶಕ್ತಿ ದೊರೆಯುವುದು

* ಮುಟ್ಟಿನ ಸಮಯದಲ್ಲಿ ಕಾಡುವ ನೋವಿನಿಂದ ಮುಕ್ತಿ ಪಡೆಯಬಹುದು

* ರಕ್ತಹೀನತೆ ತಡೆಗಟ್ಟಬಹುದು

* ರಕ್ತ ಶುದ್ಧವಾಗುತ್ತೆ

* ಲಿವರ್‌ನ ಕಶ್ಮಲ ಹೊರ ಹಾಕುತ್ತೆ

* ಮಲಬದ್ಧತೆ ಸಮಸ್ಯೆ ಕಡಿಮೆಯಾಗುವುದು.

*ಸಂಧಿವಾತ ಕಡಿಮೆಯಾಗುವುದು

* ರೋಗ ನಿರೋಧಕ ಶಕ್ತಿ ಹೆಚ್ಚುವುದು.

* ಪದೇ-ಪದೇ ಮೂತ್ರ ಸೋಂಕು ಕಾಡುತ್ತಿದ್ದರೆ ಅದು ಕಡಿಮೆಯಾಗುವುದು.

ಸೂಚನೆ

ಸೂಚನೆ

ನೀವು ತೂಕ ಇಳಿಕೆ ಬರೀ ಒಣ ದ್ರಾಕ್ಷಿ ಹಾಗೂ ಬೆಲ್ಲದ ನೀರು ಕುಡಿದರೆ ಸಾಕಾಗುವುದಿಲ್ಲ. ದಿನಾ 30 ನಿಮಿಷ ವ್ಯಾಯಾಮ ಮಾಡಬೇಕು, ಆರೋಗ್ಯಕರ ಆಹಾರಕ್ರಮ ಸೇವಿಸಬೇಕು. ಒಣ ದ್ರಾಕ್ಷಿ ಮತ್ತು ಬೆಲ್ಲದ ನೀರು ನಿಮ್ಮ ತೂಕ ಇಳಿಕೆಯ ಪ್ರಯತ್ನಕ್ಕೆ ಮತ್ತಷ್ಟು ಫಲ ನೀಡುವುದು. ಇದು ಹೊಟ್ಟೆ ಬೊಜ್ಜು ಕರಗಿಸಲು ಸಹಾಯ ಮಾಡುತ್ತೆ.

English summary

How Raisin and Jaggery Water Help You Loose Weight In Kannada

How Raisin and Jaggery Water Help You Loose Weight In Kannada, read on...
Story first published: Friday, May 6, 2022, 8:53 [IST]
X
Desktop Bottom Promotion