For Quick Alerts
ALLOW NOTIFICATIONS  
For Daily Alerts

ಈ ಹಾರ್ಮೋನ್‌ಗಳಿಂದ ಮಹಿಳೆಯರ ಮೈ ತೂಕ ಹೆಚ್ಚುವುದು

|

ಹೆಚ್ಚೇನು ತಿನ್ನುತ್ತಿಲ್ಲ, ಆದರೂ ನಾನ್ಯಾಕೆ ದಪ್ಪಗಾಗುತ್ತಿದ್ದೇನೆ ಎಂಬುವುದು ಹಲವಾರು ಜನರ ಸಮಸ್ಯೆಯಾಗಿದೆ. ಕೆಲವರಂತೂ ದಪ್ಪಗಾಗುತ್ತಿದ್ದೇನೆ ಎಂದು ತಿನ್ನುವುದನ್ನು ತುಂಬಾ ಕಡಿಮೆ ಮಾಡುತ್ತಾರೆ. ಇದರಿಂದಾಗಿ ದೇಹಕ್ಕೆ ಅಗ್ಯತವಿರುವ ಪೋಷಕಾಂಶ ದೊರೆಯದೆ ಮತ್ತೊಂದು ಸಮಸ್ಯೆ ಹುಟ್ಟಿಕೊಳ್ಳುತ್ತದೆಯೇ ವಿನಃ ದಪ್ಪ ಮಾತ್ರ ಕಡಿಮೆಯಾಗಿರುವುದಿಲ್ಲ.

Hormones

ತಿನ್ನುವುದರಿಂದ ಮಾತ್ರ ದಪ್ಪಗಾಗುವುದಿಲ್ಲ, ಬದಲಿಗೆ ದಪ್ಪಗಾಗಲು ಇನ್ನು ಹಲವು ಕಾರಣಗಳಿವೆ ಎಂಬುವುದು ನಮಗೆ ಗೊತ್ತೇ? ಹೌದು ದೇಹದಲ್ಲಿ ಹಾರ್ಮೋನ್‌ಗಳ ವ್ಯತ್ಯಾಸವಾದರೆ ನೀವು ತಿನ್ನಿ, ತಿನ್ನದಿರಿ ಆದರೆ ಶರೀರ ದಪ್ಪಗಾಗುವುದು. ದೇಹದಲ್ಲಿ ಚಯಾಪಚಯ ಕ್ರಿಯೆ ಚೆನ್ನಾಗಿ ನಡೆಯದಿದ್ದರೆ, ಉರಿಯೂತ ಸಮಸ್ಯೆ, ಮೆನೋಪಾಸ್, ಗ್ಲೂಕೋಸ್ ತೆಗೆದುಕೊಳ್ಳುವುದು, ಹಸಿವು ನಿಯಂತ್ರಿಸಲು ಸಾಧ್ಯವಾಗದಿರುವುದು, ಅಜೀರ್ಣ ಸಮಸ್ಯೆ ಇವೆಲ್ಲಾ ತೂಕ ಹೆಚ್ಚಾಗಲು ಕಾರಣಗಳಾಗಿರುತ್ತವೆ.

ಇಲ್ಲಿ ನಾವು ಕಡಿಮೆ ತಿಂದರೂ ಮಹಿಳೆಯರ ತೂಕ ಹೆಚ್ಚಾಗಲು ಹಾರ್ಮೋನ್‌ ವ್ಯತ್ಯಾಸ ಹೇಗೆ ಕಾರಣವಾಗುತ್ತವೆ ಎಂಬ ಮಾಹಿತಿ ನೀಡಿದ್ದೇವೆ ನೋಡಿ:

1. ಥೈರಾಯ್ಡ್

1. ಥೈರಾಯ್ಡ್

ಥೈರಾಯ್ಡ್ ಸಮಸ್ಯೆ ಹಾರ್ಮೋನ್‌ ಅಸಮತೋಲನದಿಂದಾಗಿ ಉಂಟಾಗುತ್ತದೆ. ನಮ್ಮ ಕುತ್ತಿಗೆಯ ಬಳಿ ಥೈರಾಯ್ಡ್‌ ಗ್ರಂಥಿ ಇರುತ್ತದೆ. ಇದು T3, T4 ಮತ್ತು ಕ್ಯಾಲ್ಸಿಟೋನಿನ್ ಎಂಬ ಹಾರ್ಮೋನ್‌ ಉತ್ಪತ್ತಿಯಾಗುತ್ತದೆ. ಈ ಹಾರ್ಮೋನ್‌ಗಳಿಗೂ ದೇಹದ ಚಯಾಪಚಯ ಕ್ರಿಯೆ, ನಿದ್ದೆ, ಹೃದಯ ಬಡಿತ, ಬೆಲವಣಿಗೆ, ಮೆದುಳಿನ ಸಾಮಾರ್ಥ್ಯಕ್ಕೆ ಸಂಬಂಧವಿದೆ.

ಈ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾದಾಗ ಹೈಪೋಥೈರಾಯ್ಡ್ ಉಂಟಾಗಿ ಇದರಿಂದ ಮೈ ತೂಕ ಹೆಚ್ಚಾಗುವುದು, ಖಿನ್ನತೆ, ಮಲಬದ್ಧತೆ, ತಲೆಸುತ್ತು, ಅದಿಕ ರಕ್ತದೊತ್ತಡ, ಹೃದಯ ಬಡಿತ ಕಡಿಮೆಯಾಗುವುದು, ಚಯಾಪಚಯ ಕ್ರಿಯೆ ನಿಧಾನವಾಗುವುದು ಮುಂತಾದ ಸಮಸ್ಯೆ ಉಂಟಾಗುವುದು.

ಥೈರಾಯ್ಡ್ ಚಿಕಿತ್ಸೆ:

* ಥೈರಾಯ್ಡ್ ಸಮಸ್ಯೆಗೆ ವೈದ್ಯರು ಥೈರಾಯ್ಡ್ ಹಾರ್ಮೋನ್‌ ನಿಯಂತ್ರಣಕ್ಕೆ ಔಷಧಿ ಕೊಡುತ್ತಾರೆ. ಅದನ್ನು ತೆಗೆದುಕೊಳ್ಳಬೇಕಾಗುತ್ತದೆ.

* ತರಕಾರಿಗಳಾದ ಹೂಕೋಸು, ಎಲೆಕೋಸು, ಬ್ರೊಕೋಲಿ, ಟರ್ನಿಪ್ ಇವುಗಳನ್ನು ಹಸಿ ತಿನ್ನಬಾರದು. ಥೈರಾಯ್ಡ್ ನಿಯಂತ್ರಣಕ್ಕೆ ತರಕಾರಿಯನ್ನು ಚೆನ್ನಾಗಿ ಬೇಯಿಸಿ ಕೊಡಬೇಕು.

* ಮೃದ್ವಂಗಿಗಳು, ಕುಂಬಳಕಾಯಿ ಇವುಗಳನ್ನು ತಿನ್ನುವುದು ಒಳ್ಳೆಯದು.

2. ಇನ್ಸುಲಿನ್

2. ಇನ್ಸುಲಿನ್

ಇನ್ಸುಲಿನ್ ಎಂಬುವುದು ಒಂದು ಹಾರ್ಮೋನ್, ಇದು ಮೇದೋಜೀರಕ ಗ್ರಂಥಿಯಲ್ಲಿರುವ ಬೀಟಾ ಕಣಗಳಿಂದ ಪ್ರತ್ಯೇಕಿಸಲ್ಪಡುತ್ತದೆ. ಇದನ್ನು ನಮ್ಮ ದೇಹದ ಕಣಗಳು ಶಕ್ತಿಯಾಗಿ ಉಪಯೋಗಿಸಬಹುದು, ಇಲ್ಲಾ ಕೊಬ್ಬು ರೀತಿಯಲ್ಲಿ ಶೇಖರವಾಗಬಹುದು.

ಇನ್ಸುಲಿನ್ ಹಾರ್ಮೋನ್‌ ದೇಹದಲ್ಲಿ ಗ್ಲೂಕೋಸ್‌ ಪ್ರಮಾಣ ನಿಯಂತ್ರಣದಲ್ಲಿಡಲು ಅವಶ್ಯಕ. ಹೆಚ್ಚು ಸಂಸ್ಕರಿಸಿದ ಆಹಾರ ಸೇವನೆ, ಮದ್ಯಪಾನ, ಕೃತಕ ಸಿಹಿ ಪಾನೀಯಗಳು, ಸ್ನ್ಯಾಕ್ಸ್, ಅನಾರೋಗ್ಯಕರ ಆಹಾರ ಇವುಗಳು ಇನ್ಸುಲಿನ್ ಹಾರ್ಮೋನ್‌ ಉತ್ಪತ್ತಿಗೆ ತಡೆಯೊಡ್ಡುತ್ತದೆ. ಆಗ ನಮ್ಮ ದೇಹದ ಕಣಗಳಿಗೆ ಇನ್ಸುಲಿನ್ ಪೂರೈಕೆಯಾಗುವುದಿಲ್ಲ. ಇದರಿಂದ ದೇಹದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗಿ ಟೈಪ್ 2 ಮಧುಮೆಹ ಉಂಟಾಗುವುದು.

ಇನ್ಸುಲಿನ್ ಹಾರ್ಮೊನ್ ಸಮತೋಲನ ಹೇಗೆ?

* ವಾರದಲ್ಲಿ 5 ಬಾರಿ ವ್ಯಾಯಾಮ ಮಾಡಿ

* ವೈದ್ಯರ ಸಲಹೆ ಮೇರೆಗೆ ರಕ್ತ ಪರೀಕ್ಷೆ ಮಾಡಿಸಿ ದೇಹದ ರಕ್ತದಲ್ಲಿ ಸಕ್ಕರೆಯಂಶ ಎಷ್ಟಿದೆ ಎಂದು ತಿಳಿದುಕೊಳ್ಳಿ.

* ಸಂಸ್ಕರಿಸಿದ ಆಹಾರ,ಕೃತಕ ಸಿಹಿ ಪದಾರ್ಥ ಇವುಗಳಿಂದ ದೂರವಿರಿ.

* ಆಯಾ ಕಾಲಕ್ಕೆ ಸಿಗುವ ಆಹಾರ ಸೇವಿಸಿ. ಸೊಪ್ಪು, ತರಕಾರಿ ಹೆಚ್ಚು ತಿನ್ನಿ.

*ಮೀನು, ನಟ್ಸ್, ಆಲೀವ್ ಎಣ್ಣೆ ಇವುಗಳು ಆಹಾರಕ್ರಮದಲ್ಲಿರಲಿ.

* ದಿನದಲ್ಲಿ 3-4 ಲೀಟರ್ ನೀರು ಕುಡಿಯಿರಿ.

3. ಲೆಪ್ಟಿನ್ ಸಮತೋಲನ

3. ಲೆಪ್ಟಿನ್ ಸಮತೋಲನ

ನಮ್ಮ ದೇಹದಲ್ಲಿರುವ ಲೆಪ್ಟಿನ್ ಹಾರ್ಮೋನ್ ಹೊಟ್ಟೆ ತುಂಬಿದಾಗ ಮೆದುಳಿಗೆ ಸಾಕು ಎಂಬ ಸಂದೇಶ ನೀಡುತ್ತದೆ. ಆದರೆ ಅಧಿಕ ಸಿಹಿ ಪದಾರ್ಥ ತಿನ್ನುವುದು, ಜಂಕ್‌ ಫುಡ್ಸ್, ಚಾಕೋಲೇಟ್ಸ್, ಹಣ್ಣುಗಳು, ಸಂಸ್ಕರಿಸಿದ ಅಹಾರ ಇವುಗಳಲ್ಲಿರುವ ಫ್ರಕ್ಟೋಸ್ ಅಂಶ ಅಧಿಕವಾದರೆ ಅದು ಕೊಬ್ಬಾಗಿ ಪರಿವರ್ತನೆಯಾಗಿ ದೇಹದ ಲಿವರ್, ಹೊಟ್ಟೆ, ಸೊಂಟ ಈ ಭಾಗದಲ್ಲಿ ಸಂಗ್ರಹವಾಗುವುದು.

ಅಧಿಕ ಫ್ರಕ್ಟೋಸ್ ಆಹಾರ ತಿನ್ನುವುದರಿಂದ ಅಧಿಕ ಕೊಬ್ಬು ಸಂಗ್ರಹವಾಗುತ್ತಾ ಹೋಗುತ್ತದೆ. ಇದರಿಂದ ಲಿಪ್ಟಿನ್‌ ಹಾರ್ಮೋನ್‌ ಮೆದುಳಿಗೆ ಆಹಾರ ಸಾಕು ಎಂಬ ಸಂದೇಶ ರವಾನಿಸುವುದನ್ನು ನಿಲ್ಲಿಸುತ್ತದೆ. ಇದರಿಂದ ತೂಕ ಹೆಚ್ಚಾಗುವುದು.

ಲಿಪ್ಟಿನ್ ಹಾರ್ಮೋನ್ ಸಮತೋಲನ ಹೇಗೆ?

*ದಿನದಲ್ಲಿ 7-8 ಗಂಟೆ ನಿದ್ದೆ ಮಾಡಬೇಕು. ನಿದ್ದೆ ಕಡಿಮೆಯಾದರೂ ಲಿಪ್ಟಿನ್ ಪ್ರಮಾಣ ಕಡಿಮೆಯಾಗುವುದು. ಇದರಿಂದ ಹೊಟ್ಟೆ ತುಂಬಿದೆ ಆಹಾರ ಸಾಕು ಎಂದು ಸಂದೇಶ ಕಳುಹಿಸುವುದನ್ನು ನಿಲ್ಲಿಸುತ್ತದೆ.

* ಮೂರು ಬಾರಿ ತುಂಬಾ ತಿನ್ನುವುದಕ್ಕಿಂತ ಪ್ರತಿ ಎರಡು ಗಂಟೆಗೊಮ್ಮೆ ಸ್ವಲ್ಪ-ಸ್ವಲ್ಪ ತಿನ್ನುವುದು ಒಳ್ಳೆಯದು.

* ಚೆನ್ನಾಗಿ ನೀರು ಕುಡಿಯಿರಿ.

4. ಘ್ರೆಲಿನ್

4. ಘ್ರೆಲಿನ್

ಇದನ್ನು ಹಸಿವಿನ ಹಾರ್ಮೋನ್ ಎಂದೇ ಕರೆಯಲಾಗುವುದು. ಘ್ರೆಲಿನ್ ಹಾರ್ಮೋನ್ ಹಸಿವನ್ನು ಹೆಚ್ಚಿಸುತ್ತದೆ ಹಾಗೂ ಕೊಬ್ಬು ಸಂಗ್ರಹವಾಗುವಂತೆ ಮಾಡುತ್ತದೆ. ಹೊಟ್ಟೆ ಖಾಲಿಯಾದಾಗ ಈ ಘ್ರೆಲಿನ್ ಉತ್ಪತ್ತಿ ಹೆಚ್ಚಾಗಿ ಹಸಿವು ಉಂಟಾಗುವುದು. ದೇಹದಲ್ಲಿ ಘ್ರೆಲಿನ್ ಹಾರ್ಮೋನ್ ಹೆಚ್ಚಾದರೆ ದೇಹದಲ್ಲಿ ಕೊಬ್ಬು ಹೆಚ್ಚು ಸಂಗ್ರಹವಾಗುವುದು. ಒಬೆಸಿಟಿ ಸಮಸ್ಯೆ ಇರುವವರಲ್ಲಿ ಈ ಘ್ರೆಲಿನ್ ಹಾರ್ಮೋನ್ ಅಸಮತೋಲವಿರುತ್ತದೆ. ಇನ್ನು ಕಟ್ಟುನಿಟ್ಟನ ಆಹಾರಕ್ರಮ ಪಾಲಿಸಿದರೆ ಹಾಗೂ ಉಪವಾಸ ಮಾಡಿದರೆ ಘ್ರೆಲಿನ್ ಅಂಶ ಅಧಿಕವಿರುತ್ತದೆ.

ಘ್ರೆಲಿನ್ ಸಮತೋಲನ ಹೇಗೆ?

ಪ್ರತಿ 2-3ಗಂಟೆಗೊಮ್ಮೆ ತಿನ್ನಬೇಕು.

ದಿನದಲ್ಲಿ 6-7 ಹೊತ್ತು ತಿನ್ನಬೇಕು.

ತಾಜಾ ಹಣ್ಣುಗಳು, ತರಕಾರಿ, ಪ್ರೊಟೀನ್, ನಾರಿನಂಶ ಹಾಗೂ ಆರೋಗ್ಯಕರ ಕೊಬ್ಬಿನಂಶವಿರುವ ಆಹಾರ ಸೇವಿಸಿ.

ಊಟಕ್ಕೆ20 ನಿಮಿಷಕ್ಕೆ ಮುನ್ನ ಒಂದೂವರೆ ಕಪ್ ನೀರು ಉಡಿಯಿರಿ

ಒಬೆಸಿಟಿ ಉಂಟಾಗಿದ್ದರೆ ವೈದ್ಯರ ಸಲಹೆ ಪಡೆಯಿರಿ.

5. ಈಸ್ಟ್ರೋಜಿನ್

5. ಈಸ್ಟ್ರೋಜಿನ್

ಈಸ್ಟ್ರೋಜಿನ್ ಕಡಿಮೆಯಾದರೂ, ಜಾಸ್ತಿಯಾದರೂ ತೂಕ ಹೆಚ್ಚಾಗುವುದು. ದೇಹದಲ್ಲಿ ಈಸ್ಟ್ರೋಜಿನ್ ಹಾರ್ಮೋನ್ ಹೆಚ್ಚಾಗಲು ಕಾರಣವೇನೆಂದು ನೋಡೋಣ. ಗರ್ಭಕೋಶದಲ್ಲಿ ಈಸ್ಟ್ರೋಜಿನ್ ಹೆಚ್ಚು ಉತ್ಪತ್ತಿಯಾಗುವುದರಿಂದ ದೇಹದಲ್ಲಿ ಈ ಹಾರ್ಮೋನ್ ಹೆಚ್ಚಾಗಿದ್ದರೆ, ಆಹಾರಕ್ರಮದಿಂದಲೂ ಈಸ್ಟ್ರೋಜಿನ್ ಪ್ರಮಾಣ ಹೆಚ್ಚಾಗುವುದು.

ಇನ್ನು ಆಹಾರಕ್ರಮದಿಂದ ಹೇಳುವುದಾದರೆ ಮನುಷ್ಯ ತಿನ್ನುವ ಪ್ರಾಣಿಗಳಿಗೆ ಸ್ಟಿರೋಯ್ಡ್, ಹಾರ್ಮೋನ್ಸ್ ಆ್ಯಂಟಿ ಬಯೋಟಿಕ್ಸ್ ಅಂಶ ನೀಡಿ ಅವುಗಳು ದಷ್ಟಪುಷ್ಟವಾಗಿ ಬೆಳೆಸಲಾಗಿರುತ್ತದೆ. ಇವುಗಳನ್ನು ತಿನ್ನುವುದರಿಂದ ದೇಹದಲ್ಲಿ ಈಸ್ಟ್ರೋಜಿನ್ ಪ್ರಮಾಣ ಹೆಚ್ಚಾಗುವುದು. ದೇಹದಲ್ಲಿ ಈಸ್ಟ್ರೋಜಿನ್ ಹೆಚ್ಚಾದರೆ ಇನ್ಸುಲಿನ್ ಉತ್ಪತ್ತಿ ಕೂಡ ಕಡಿಮೆಯಾಗುವುದು. ಇದರಿಂದ ಕೂಡ ಮೈ ತೂಕ ಹೆಚ್ಚಾಗುವುದು. ಇನ್ನು ಕೆಲವು ಮಹಿಳೆಯರಿಗೆ ಬೇಗನೆ ಮೆನೋಪಾಸ್ ಅಂದರೆ ಮುಟ್ಟು ನಿಲ್ಲುವುದು.

ದೇಹದಲ್ಲಿ ಈಸ್ಟ್ರೋಜಿನ್ ಪ್ರಮಾಣ ಕಡಿಮೆಯಾದರೆ ನಮ್ಮ ದೇಹವು ಬೇರೆ ಕಣಗಳಲ್ಲಿ ಈಸ್ಟ್ರೋಜಿನ್ ಉತ್ಪತ್ತಿಯಾಗುತ್ತವೆಯೇ ಎಂದು ನೋಡುತ್ತದೆ, ದೇಹಕ್ಕೆ ಈಸ್ಟ್ರೋಜಿನ್ ದೇಹದಲ್ಲಿ ಕೊಬ್ಬಿನಂಶದಿಂದ ದೊರೆಯುತ್ತದೆ. ಆದ್ದರಿಂದಾಗಿ ದೇಹವು ಶಕ್ತಿಯನ್ನು ಕೊಬ್ಬಾಗಿ ಪರಿವರ್ತಿಸಲಾರಂಭಿಸುತ್ತದೆ. ಇದರಿಂದ ತೂಕ ಹೆಚ್ಚಾಗುವುದು.

ಈಸ್ಟ್ರೋಜಿನ್ ಸಮತೋಲನ ಹೇಗೆ?

* ಸಂಸ್ಕರಿಸಿದ ಮಾಂಸಾಹಾರ ತಿನ್ನಬೇಡಿ. ಸ್ಥಳೀಯ ಮಾರುಕಟ್ಟೆಯಿಂದ ಮಾಂಸವನ್ನು ಖರೀದಿಸಿ ತಿನ್ನಿ. ಸಂಗ್ರಹಿಸಿಟ್ಟ ಮಾಂಸ ಬಳಕೆ ಮಾಡಬಾರದು.

* ಮದ್ಯಪಾನ ಮಾಡಬಾರದು

* ಪ್ರತಿದಿನ ವ್ಯಾಯಾಮ ಮಾಡಬೇಕು, ಇನ್ನು ಮಾನಸಿಕ ಒತ್ತಡ ಕೂಡ ಕಡಿಮೆ ಮಾಡಬೇಕು

* ಧಾನ್ಯಗಳನ್ನು ಹೆಚ್ಚಾಗಿ ಸೇವಿಸಿ.

*ಈಸ್ಟೋಜಿನ್ ಪ್ರಮಾಣ ಸಮತೋಲನದಲ್ಲಿಡಲು ಏನು ಮಾಡಬೇಕೆಂದು ವೈದ್ಯರ ಸಲಹೆ ಕೇಳಿ.

6. ಕಾರ್ಟಿಸೋಲ್

6. ಕಾರ್ಟಿಸೋಲ್

ಕಾರ್ಟಿಸೋಲ್ ಹಾರ್ಮೋನ್ ಒತ್ತಡಕ್ಕೆ ಒಳಗಾದಾಗ, ಖಿನ್ನತೆ ಉಂಟಾದಾಗ, ಭಯವಾದಾಗ, ಕೋಪಗೊಂಡಾಗ, ದೈಹಿಕವಾಗಿ ಗಾಯಗೊಂಡಾಗ ಉಂಟಾಗುತ್ತದೆ.

ಕಾರ್ಟಿಸೋಲ್‌ ದೇಹದಲ್ಲಿ ಶಕ್ತಿಯ ಸಮತೋಲನ ಕಾಪಾಡುವ ಕೆಲಸ ಮಾಡುತ್ತದೆ. ಅಂದರೆ ಕಾರ್ಬೋಹೈಡ್ರೇಟ್ಸ್, ಪ್ರೊಟೀನ್, ಕೊಬ್ಬು ಇವುಗಳಲ್ಲಿ ದೇಹದ ಯಾವ ಕಾರ್ಯಕ್ಕೆ ಯಾವ ಶಕ್ತಿ ಬೇಕು ಅದನ್ನು ಒದಗಿಸುವ ಕಾರ್ಯವನ್ನು ಕಾರ್ಟಿಸೋಲ್‌ ಮಾಡುತ್ತದೆ.

ಕಾರ್ಟಿಸೋಲ್‌ ಕೊಬ್ಬಿನಂಶದಿಂದ ಹಸಿವಿನ ಕಣಗಳಿಗೆ ಹಾಗೂ ಸ್ನಾಯುಗಳಿಗೆ ಶಕ್ತಿಯನ್ನು ಒದಗಿಸುವ ಕಾರ್ಯ ಮಾಡುತ್ತದೆ. ಸಣ್ಣ ಪುಟ್ಟ ಮಾನಸಿಕ ಒತ್ತಡ ನಿರ್ವಹಿಸಲು ಕಾರ್ಟಿಸೋಲ್ ಬೇಕು. ಆದರೆ ಅನಾರೋಗ್ಯಕರ ಜೀವನಶೈಲಿ ಹಾಗೂ ಆಹಾರಶೈಲಿಯಿಂದ ಕಾರ್ಟಿಸೋಲ್ ಉತ್ಪತ್ತಿ ಹೆಚ್ಚಾಗಿ ದೇಹದಲ್ಲಿ ಕೊಬ್ಬು ಸಂಗ್ರಹವಾಗುವಂತೆ ಮಾಡುವುದು.

ಕಾರ್ಟಿಸೋಲ್ ಪ್ರಮಾಣ ಕಡಿಮೆ ಮಾಡುವುದು ಹೇಗೆ?

*ಮಾನಸಿ ಒತ್ತಡವನ್ನು ಕಡಿಮೆ ಮಾಡಿ. ನಿಮಗೆ ಇಷ್ಟವಾದ ಕೆಲಸವನ್ನು ಮಾಡುವುದು, ಹೊಸ ಕೌಶಲ್ಯ ಬೆಳೆಸಿಕೊಳ್ಳುವುದು ಮಾಡಿ.

* ಕುಟುಂಬದವರೊಂದಿಗೆ ಸಂತೋಷವಾಗಿ ಸಮಯ ಕಳೆಯಿರಿ.

* ಜನರು ಏನು ಯೋಚಿಸುತ್ತಿದ್ದಾರೆ ಅದರ ಬಗ್ಗೆ ಚಿಂತಿಸಬೇಡಿ.

* ಮಾನಸಿಕ ಒತ್ತಡಕ್ಕೆ ಒಳಗಾದಾಗ ದೀರ್ಘ ಉಸಿರು ತೆಗೆದುಕೊಳ್ಳಬೇಡಿ.

* ದಿನದಲ್ಲಿ 7-8 ಗಂಟೆ ನಿದ್ದೆ ಮಾಡಿ.

* ಮದ್ಯಪಾನ, ಸಂಸ್ಕರಿಸಿದ, ಕರಿದ ಆಹಾರ ಪದಾರ್ಥಗಳಿಂದ ದೂರವಿರಿ.

7.ಟೆಸ್ಟೋಸ್ಟಿರೋನೆ

7.ಟೆಸ್ಟೋಸ್ಟಿರೋನೆ

ಮಹಿಳೆಯರ ಅಂಡಾಶಯದಲ್ಲಿ ಕಡಿಮೆ ಪ್ರಮಾಣದಲ್ಲಿ ಟೆಸ್ಟೋಸ್ಟಿರೋನೆ ಉತ್ಪತ್ತಿಯಾಗುತ್ತದೆ. ಟೆಸ್ಟೋಸ್ಟಿರೋನೆ ಕೊಬ್ಬನ್ನು ಕರಗಿಸಲು, ಮೂಳೆಗಳನ್ನು ಬದಲವಾಗಿಡಲು, ಸ್ನಾಯುಗಳು ಸದೃಢವಾಗಲು ಅವಶ್ಯಕ.

ವಯಸ್ಸಾದಾಗ ಅಥವಾ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾದಾಗ ಮಹಿಳೆಯರಲ್ಲಿ ಟೆಸ್ಟೋಸ್ಟಿರೋನೆ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಮೂಳೆಗಳ ಬಲ ಕಡಿಮೆಯಾಗುವುದು, ಒಬೆಸಿಟಿ, ಖಿನ್ನತೆ ಉಂಟಾಗುವುದು. ಮಾನಸಿಕ ಒತ್ತಡ ಹೆಚ್ಚಾದಾಗ ದೇಹದಲ್ಲಿ ಕೊಬ್ಬಿನಂಶ ಹೆಚ್ಚಾಗಿ ಸಂಗ್ರಹವಾಗಿ ಮೈ ತೂಕ ಹೆಚ್ಚಾಗುವುದು.

ಟೆಸ್ಟೋಸ್ಟಿರೇನೆ ಸಮತೋಲನ ಹೇಗೆ?

*ನಿಮ್ಮ ವೈದ್ಯರೊಂದಿಗೆ ಮಾತನಾಡಿ ಟೆಸ್ಟೋಸ್ಟಿರೋನೆ ಪ್ರಮಾಣ ಹೆಚ್ಚಿಸಲು ಏನು ಮಾಡಬೇಕೆಂಬ ಸಲಹೆ ಕೇಳಿ.

* ಅಗಸೆ ಬೀಜ, ಒಣ ಪ್ಲಮ್, ಕುಂಬಳಕಾಯಿ ಬೀಜ, ದಾನ್ಯಗಳನ್ನು ತಿನ್ನಿ.

* ಪ್ರತಿದಿನ ವ್ಯಾಯಾ ಮಾಡಿ.

* ವಿಟಮಿನ್ ಸಿ, ಮೆಗ್ನಿಷ್ಯಿಯಂ ಇರುವ ಆಹಾರ ಸೇವಿಸಿ

* ಸತುವಿನ ಸಪ್ಲಿಮೆಂಟ್ ತೆಗೆದುಕೊಳ್ಳಿ.

8. ಪ್ರೊಗೊಸ್ಟಿರೋನೆ

8. ಪ್ರೊಗೊಸ್ಟಿರೋನೆ

ದೇಹವು ಉತ್ತಮವಾಗಿ ಕಾರ್ಯನಿರ್ವಹಿಸಲು ದೇಹದಲ್ಲಿ ಪ್ರೊಗೊಸ್ಟಿರೋನೆ ಹಾಗೂ ಈಸ್ಟ್ರೋಜಿನ್ ಸಮತೋಲನದಲ್ಲಿರಬೇಕು. ಮೆನೋಪಾಸ್ ನಂತರ, ಅತ್ಯಧಿಕ ಮಾನಸಿಕ ಒತ್ತಡಕ್ಕೆ ಒಳಗಾದಾಗ, ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುತ್ತಿದದ್ರೆ ಪ್ರೊಗೊಸ್ಟಿರೋನೆ ಪ್ರಮಾಣ ಕಡಿಮೆಯಾಗುವುದು. ಇದರಿಂದ ಮೈ ತೂಕ ಹೆಚ್ಚಾಗುವುದು.

ಪ್ರೊಗೊಸ್ಟಿರೋನೆ ಸಮತೋಲನ ಕಾಪಾಡುವುದು ಹೇಗೆ?

* ಸ್ತ್ರೀರೋಗ ತಜ್ಞರ ಬಳಿ ಸಲಹೆ ಪಡೆಯಿರಿ.

* ಸಂಸ್ಕರಿಸಿದ ಮಾಂಸ ಸೇವಿಸಬೇಡಿ.

* ಪ್ರತಿದಿನ ವ್ಯಾಯಾಮ ಮಾಡಿ.

9. ಮೆಲಾಟೋನಿನ್

9. ಮೆಲಾಟೋನಿನ್

ಈ ಹಾರ್ಮೋನ್ ಉತ್ಪತ್ತಿಗೂ ನಿದ್ದೆಗೂ ಸಂಬಂಧವಿದೆ. ಈ ಹಾರ್ಮೋನ್‌ ಸಂಜೆಯಿಂದ ರಾತ್ರಿಯವರೆಗೆ ಹಾಗೂ ಬೆಳಗ್ಗೆ ಹೊತ್ತಿನಲ್ಲಿ ಉತ್ಪತ್ತಿಯಾಗಿತ್ತದೆ. ನೀವು ಕತ್ತಲಿನ ಕೋಣೆಯಲ್ಲಿ ಮಲಗಿದಾಗ ಮೆಲಾಟೋನಿನ್ ಪ್ರಮಾಣ ಹೆಚ್ಚಾಗಿ, ದೇಹದ ಉಷ್ಣತೆ ಕಡಿಮೆಯಾಗುವುದು, ಆಗ ಈ ಹಾರ್ಮೋನ್ ಉತ್ಪತ್ತಿಯಾಗುವುದು.

ಇದು ದೇಹದ ಬೆಳವಣಿಗೆಗೆ, ಸ್ನಾಯುಗಳ ಆರೋಗ್ಯಕ್ಕೆ ಅವಶ್ಯಕ. ನಿದ್ದೆಗೆ ತೊಂದರೆ ಉಂಟಾದರೆ ಮೆಲಾಟೋನಿನ್ ಪ್ರಮಾಣ ಕಡಿಮೆಯಾಗುವುದು. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಿ ಮೈ ತೂಕ ಕಡಿಮೆಯಾಗುವುದು.

ಮೆಲಾಟೋನಿನ್ ಸಮತೋಲನ ಮಾಡುವುದು ಹೇಗೆ?

* ಕತ್ತಲೆ ರೂಂನಲ್ಲಿ ನಿದ್ದೆ ಮಾಡಿ

* 7-8 ಗಂಟೆ ನಿದ್ದೆ ಮಾಡಿ.

* ಮಲಗುವ ಎರಡು ಮೂರು ಗಂಟೆ ಮುಂಚೆ ಆಹಾರ ಸೇವನೆ ಒಳ್ಳೆಯದು.

* ಪ್ರೊಟೀನ್ ಆಹಾರಗಳು, ಹಾಲಿನ ಉತ್ಪನ್ನಗಳು ಮೆಲಾಟೋನಿನ್ ಪ್ರಮಾಣ ಹೆಚ್ಚಿಸುತ್ತದೆ

* ಬಾಳೆಹಣ್ಣು ಕೂಡ ಮಮೆಲಾಟೋನ್ ಉತ್ಪತ್ತಿಗೆ ಸಹಕಾರಿ.

10. ಗ್ಲೊಕೋಕಾರ್ಟಿಕೋಯ್ಡ್ಸ್

10. ಗ್ಲೊಕೋಕಾರ್ಟಿಕೋಯ್ಡ್ಸ್

ಉರಿಯೂತ ಸಮಸ್ಯೆ ಉಂಟಾದರೆ ಮೈ ತೂಕ ಕೂಡ ಹೆಚ್ಚಾಗುವುದು. ಗ್ಲೂಕೋಕಾರ್ಟಿಕೋಯ್ಡ್ಸ್ ಉರಿಯೂತ ಕಡಿಮೆ ಮಾಡುವಲ್ಲಿ ಸಹಕಾರಿ. ಇದು ದೇಹದಲ್ಲಿ ಸಕ್ಕರೆಯಂಶ, ಕೊಬ್ಬು, ಪ್ರೊಟೀನ್ ಇವುಗಳ ಸಮತೋಲನ ಕಾಪಾಡಲು ಸಹಕಾರಿ.

ಗ್ಲೊಕೋಕಾರ್ಟಿಕೋಯ್ಡ್ಸ್ ಪ್ರೊಟೀನ್ ಅನ್ನು ವಿಭಜನೆ ಮಾಡಿ ದೇಹದಲ್ಲಿ ಸಕ್ಕರೆಯಂಶ ಕಡಿಮೆ ಮಾಡುವುದು. ದೇಹದಲ್ಲಿ ಸಕ್ಕರೆಯಂಶ ಹೆಚ್ಚಾದರೆ ಇನ್ಸುಲಿನ್ ಪ್ರಮಾಣ ಕಡಿಮೆಯಾಗುವುದು. ಇದರಿಂದ ಮೈ ತೂಕ ಹೆಚ್ಚುವುದು.

ಗ್ಲೊಕೋಕಾರ್ಟಿಕೋಯ್ಡ್ಸ್ ಸಮತೋಲನ ಕಾಪಾಡುವುದು ಹೇಗೆ?

* ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ.

* ತಾಜಾ ಆಹಾರಗಳನ್ನು ತಿನ್ನಿ.

* 7-8 ಗಂಟೆ ನಿದ್ದೆ ಮಾಡಿ.

* ದಿನದಲ್ಲಿ3-4 ಲೀಟರ್ ನೀರುಕುಡಿಯಿರಿ.

* ವ್ಯಾಯಾಮ ಮಾಡಿ.

ಸೂಚನೆ: ಮೈ ತೂಕ ಹೆಚ್ಚಾದಾಗ ಆಹಾರ ಬಿಡುವುದು, ಸ್ವಯಂ ಚಿಕಿತ್ಸೆ ಮಾಡುವುದು ಮಾಡಬೇಡಿ. ವೈದ್ಯರ ಬಳಿ ಹೋಗಿ ಅವರು ನಿಮ್ಮ ಸಮಸ್ಯೆಗೆ ನಿಖರ ಕಾರಣ ತಿಳಿಸುತ್ತಾರೆ. ಹಾರ್ಮೋನ್‌ಗಳಿಂದಾಗಿ ಮೈ ತೂಕ ಹೆಚ್ಚಾದಾರೆ ಅದನ್ನು ನಿಯಂತ್ರಣದಲ್ಲಿಟ್ಟರೆ ಮೈ ತೂಕ ಹೆಚ್ಚಾಗುವುದಿಲ್ಲ.

English summary

Hormones Responsible For Weight Gain In Women

In this article we have discussed in detail some of the hormones which are responsible for unwanted weight gain in women.
Story first published: Wednesday, February 5, 2020, 16:16 [IST]
X
Desktop Bottom Promotion