For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ತಿನ್ನಲೇಬೇಕಾದ 10 ತರಕಾರಿಗಳಿವು

|

ಕಾಲಕ್ಕೆ ತಕ್ಕಂತೆ ನಮ್ಮ ಆಹಾರ ಪದ್ಧತಿಯೂ ಬದಲಾಗಲಾಗಬೇಕು. ತರಕಾರಿ ಆರೋಗ್ಯಕ್ಕೆ ಒಳ್ಳೆಯದು, ಆದರೆ ಎಲ್ಲಾ ಬಗೆಯ ತರಕಾರಿಗಳು ಮಳೆಗಾಲದ ಆಹಾರದ ಪದ್ಧತಿಗೆ ಸೂಕ್ತವಲ್ಲ ಎಂಬುವುದು ನಿಮಗೆ ಗೊತ್ತೇ?

ಇಲ್ಲಿ ನಾವು ಮಳೆಗಾಲದಲ್ಲಿ ಯಾವ ತರಕಾರಿ ತಿಂದರೆ ಒಳ್ಳೆಯದು, ಯಾವ ಬಗೆಯ ತರಕಾರಿ ಮಳೆಗಾಲಕ್ಕೆ ಸೂಕ್ತವಲ್ಲ ಎಂಬ ಮಾಹಿತಿ ಇಲ್ಲಿ ನೀಡಿದ್ದೇವೆ.

Must-Have Healthy Vegetables During The Monsoon

ಮಳೆಗಾಲದಲ್ಲಿ ಸೊಪ್ಪು ಸ್ವಲ್ಪ ಕಡಿಮೆ ಬಳಕೆ ಮಾಡುವುದು ಒಳ್ಳೆಯದು. ಸೊಪ್ಪು ತಂದರೂ ತುಂಬಾ ಸ್ವಚ್ಛ ಮಾಡಿ, ಚೆನ್ನಾಗಿ ತೊಳೆದು ಬಳಸಬೇಕು. ಏಕೆಂದರೆ ಮಳೆಗಾಲದಲ್ಲಿ ಸೊಪ್ಪಿನಲ್ಲಿ ಸೂಕ್ಷ್ಮ ಜೀವಿಗಳು ಬೆಳೆದಿರುತ್ತವೆ, ಇಂಥ ಸೊಪ್ಪುಗಳನ್ನು ತಿಂದಾಗ ಹೊಟ್ಟೆ ನೋವು, ಬೇಧಿ ಈ ರೀತಿಯ ಹೊಟ್ಟೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುವುದು.

ಮಳೆಗಾಲದಲ್ಲಿ ತಿನ್ನಲು ಸೂಕ್ತವಾದ ಅನೇಕ ರುಚಿಕರವಾದ ತರಕಾರಿಗಳಿವೆ, ಬನ್ನಿ ಆ ತರಕಾರಿಗಳಾವುವು ಎಂದು ನೋಡೋಣ:

1. ಹಾಗಾಲಕಾಯಿ

1. ಹಾಗಾಲಕಾಯಿ

ಹಾಗಾಲಕಾಯಿ ಸ್ವಲ್ಪ ಉಷ್ಣವಾಗಿರುವುದರಿಂದ ಮಳೆಗಾಲ ಹಾಗೂ ಚಳಿಗಾಲಕ್ಕೆ ತುಂಬಾ ಸೂಕ್ತವಾದ ತರಕಾರಿಯಾಗಿದೆ. ಅಲ್ಲದೆ ಹಾಗಾಲಕಾಯಿ ತಿಂದರೆ ಹೊಟ್ಟೆ ಹುಳು ಕೂಡ ನಾಶವಾಗುತ್ತದೆ ಇನ್ನು ಜೀರ್ಣಕ್ರಿಯೆಗೆ ತುಂಬಾ ಸಹಕಾರಿ.

ಹಾಗಾಲಕಾಯಿ ಜ್ಯೂಸ್‌ ಮಧುಮೇಹಿಗಳಿಗೆ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುವಲ್ಲಿ ಸಹಕಾರಿ.

2. ಸೋರೆಕಾಯಿ

2. ಸೋರೆಕಾಯಿ

ಮಳೆಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳಿಗೆ ಅತ್ಯುತ್ತಮವಾದ ಮನೆಮದ್ದು ಸೋರೆಕಾಯಿ. ಇದರಲ್ಲಿ ರಂಜಕ, ಮೆಗ್ನಿಷ್ಯಿಯ, ಪೊಟಾಷ್ಯಿಯಂ ಹಾಗೂ ಕಡಿಮೆ ಪ್ರಮಾಣದ ಕೊಬ್ಬಿನಂಶವಿದೆ.

ಇದು ಹೊಟ್ಟೆಯನ್ನು ತಣ್ಣಗೆ ಇಡುತ್ತದೆ ಹಾಗೂ ಇದರಲ್ಲಿರುವ ಪ್ರತಿಜೀವಕ ಅಂಶಗಳು ಹೊಟ್ಟೆಯಲ್ಲಿರುವ ಬೇಡದ ಅಂಶಗಳನ್ನು ಹೊರಹಾಕಲು ಸಹಕಾರಿ. ಸೋರೆಕಾಯಿ ತೂಕ ಇಳಿಕೆ ಮಾಡುತ್ತದೆ ಇನ್ನು ಕೆಮ್ಮು, ಜ್ವರ ಮುಂತಾದ ಆರೋಗ್ಯ ಸಮಸ್ಯೆ ಉಂಟಾಗದಂತೆ ತಡೆಗಟ್ಟುತ್ತದೆ.

 3. ಪಡವಲಕಾಯಿ

3. ಪಡವಲಕಾಯಿ

ಮಳೆಗಾಲದಲ್ಲಿ ಸೇವಿಸಬಹುದಾದ ಅತ್ಯುತ್ತಮವಾದ ಮತ್ತೊಂದು ತರಕಾರಿ ಎಂದರೆ ಪಡವಲಕಾಯಿ. ಇದರಲ್ಲಿರುವ

ಆಂಟಿಪೈರೆಟಿಕ್ ಚಟುವಟಿಕೆ ಮಳೆಗಾಲದಲ್ಲಿ ಕಾಡುವ ಜ್ವರ, ಕೆಮ್ಮು, ಶೀತ ಮುಂತಾದ ಸಣ್ಣ-ಪುಟ್ಟ ಸಮಸ್ಯೆಗಳನ್ನು ತಡೆಗಟ್ಟುತ್ತದೆ.

ಮಳೆಗಾಲದಲ್ಲಿ ಆದಷ್ಟು ಮನೆಯೂಟ ಮಾಡಿ, ಹೊರಗಡೆ ಆಹಾರ ಸೇವಿಸಿದರೆ ಆರೋಗ್ಯ ಸಮಸ್ಯೆ ಹೆಚ್ಚಾಗುವುದು.

4. ಮಡ ಹಾಗಲಕಾಯಿ or ಸಿಹಿ ಹಾಗಲಕಾಯಿ

4. ಮಡ ಹಾಗಲಕಾಯಿ or ಸಿಹಿ ಹಾಗಲಕಾಯಿ

ಇದು ಕೂಡ ಮಳೆಗಾಲದ ತರಕಾರಿಯಾಗಿದೆ. ಆಯುರ್ವೇದ ಪ್ರಕಾರ ಇದರಲ್ಲಿ ಉರಿಯೂತ ಕಡಿಮೆ ಮಾಡುವ, ವಿರೇಚಕ ಮತ್ತು ಆಂಟಿಪೈರೆಟಿಕ್ ಗುಣಗಳಿರುವುದರಿಂದ ಲಿವರ್‌ ಆರೋಗ್ಯಕ್ಕೆ ಒಳ್ಳೆಯದು.

ಇದನ್ನು ಜ್ವರ ಬಂದಾಗ ಸೇವಿಸಿದರೆ ಬೇಗನೆ ಚೇತರಿಕೆ ಉಂಟಾಗುವುದು, ಕೆಮ್ಮು, ಶೀತ ಕಡಿಮೆ ಮಾಡುವುದು.

ಇದರಿಂದ ಸಾರು, ಪಲ್ಯ ಮಾಡಿ ಸವಿಯಬಹುದು.

5. ಸೀಮೆಬದನೆ

5. ಸೀಮೆಬದನೆ

ಸೀಮೆಬದನೆ ಕೂಡ ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿರುವ ತರಕಾರಿಯಾಗಿದ್ದು, ಇದನ್ನು ಬೇಳೆ ಜೊತೆ ಹಾಕಿ ಸಾರು ಮಾಡಿದರೆ ರುಚಿಕರವಾಗಿರುತ್ತದೆ.

ಇದರಿಂದ ಪಲ್ಯ ಕೂಡ ತಯಾರಿಸಬಹುದು. ಇದರಲ್ಲಿರುವ ಪಾಲಿ ಸ್ಯಾಚುರೈಡ್ಸ್, ವಿಟಮಿನ್ಸ್ ಹಾಗೂ ಕೆರೋಟಿನ್ ಅಂಶ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

6. ಅಣಬೆ

6. ಅಣಬೆ

ಅಣಬೆ ಕೂಡ ಮಳೆಗಾಲಕ್ಕೆ ಸೂಕ್ತವಾದ ಒಂದು ಆಹಾರ ವಸ್ತುವಾಗಿದೆ. ಹಳ್ಳಿ ಕಡೆಗಳಲ್ಲಿ ಮಳೆಗಾಲದಲ್ಲಿ ಅಣಬೆ ನೈಸರ್ಗಿಕವಾಗಿ ಬೆಳೆಯುತ್ತವೆ. ಇದು ದೇಹವನ್ನು ಬೆಚ್ಚಗೆ ಇಡುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅಣಬೆಯಿಂದ ಸೂಪ್ ತಯಾರಿಸಬಹುದು ಹಾಗೂ ಇತರ ಖಾದ್ಯಗಳನ್ನು ಮಾಡಿ ಸವಿಯಬಹುದು.

 7. ಮೂಲಂಗಿ

7. ಮೂಲಂಗಿ

ಮೂಲಂಗಿಯಲ್ಲಿ ಹಲವಾರು ಆರೋಗ್ಯಕರಣಗಳಿವೆ, ಅದರಲ್ಲಿ ಬಹುಮುಖ್ಯವಾದ ಗುಣವೆಂದರೆ ರಕ್ತವನ್ನು ಶುದ್ಧೀಕರಿಸುತ್ತದೆ. ಅಲ್ಸರ್, ಹೆಪಟಿಕ್ ಉರಿಯೂತ ಮುಂತಾದ ಸೋಂಕು ನಿವಾರಣೆಗೆ, ಮೂಲವ್ಯಾಧಿ ಸಮಸ್ಯೆ ಗುಣಪಡಿಸಲು ಮೂಲಂಗಿ ತುಂಬಾ ಒಳ್ಳೆಯದು. ಮೂಲಂಗಿ ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ. ಇದು ಶ್ವಾಸಕೋಶದ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

8. ಬೀಟ್‌ರೂಟ್

8. ಬೀಟ್‌ರೂಟ್

ಬೀಟ್‌ರೂಟ್‌ ಕೂಡ ಮಳೆಗಾಲಕ್ಕೆ ಸೂಕ್ತವಾದ ತರಕಾರಿಯಾಗಿದೆ. ಬೀಟ್‌ ರೂಟ್‌ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಹಾಗೂ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಹೊಟ್ಟೆಯಲ್ಲಿ ಸೂಕ್ಷ್ಮಜೀವಿ ಉತ್ಪತ್ತಿಯನ್ನು ತಡೆಗಟ್ಟುತ್ತದೆ. ಸೂಕ್ಷ್ಮಾಣುಗಳಿಂದ ದೇಹವನ್ನು ರಕ್ಷಣೆ ಮಾಡುತ್ತದೆ.

 9. ಸುವರ್ಣ ಗೆಡ್ಡೆ

9. ಸುವರ್ಣ ಗೆಡ್ಡೆ

ಸುವರ್ಣಗಡ್ಡೆಯಲ್ಲಿ ಕೂಡ ಹಲವಾರು ಪೋಷಕಾಂಶಗಳಿವೆ. ಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ಹೊಟ್ಟೆ ಸಂಬಂಧಿಸಿದ ಸಮಸ್ಯೆ ತಡೆಗಟ್ಟುವಲ್ಲಿ ಇದು ಸಹಕಾರಿ. ಸುವರ್ಣ ಗಡ್ಡೆಯಿಂದ ಸಾರು, ಪಲ್ಯ ಮಾಡಿದರೆ ತುಂಬಾ ರುಚಿಕರವಾಗಿರುತ್ತದೆ.

 10. ಹೀರೆಕಾಯಿ

10. ಹೀರೆಕಾಯಿ

ಹೀರೆಕಾಯಿಯಲ್ಲಿ ನೈಸರ್ಗಿಕವಾಗಿ ರಕ್ತವನ್ನು ಶುದ್ಧೀಕರಿಸುವ ಅಂಶವಿದೆ. ಇದು ದೇಹದಲ್ಲಿರುವ ಬೇಡ ರಾಸಾಯನಿಕಗಳನ್ನು ಹೊರಹಾಕಲು ಸಹಕಾರಿ. ಹೀರೆಕಾಯಿಯಲ್ಲಿ ಕ್ಯಾರೋಟಿನ್, ಅಮೈನೋ ಆಮ್ಲ, ಪ್ರೊಟೀನ್, ಸಿಸ್ಟೈನ್ ಅಂಶವಿದೆ. ಇದರಲ್ಲಿರುವ ಫ್ಲೇವೋನಾಯ್ಡ್ ಅಂಶ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಜೀರ್ಣಕ್ರಿಯೆ ತುಂಬಾ ಸಹಕಾರಿ.

ಸಲಹೆ: ಮಳೆಗಾಲದಲ್ಲಿ ಕಾಡುವ ಸಾಮಾನ್ಯ ಶೀತ, ಜ್ವರ, ಕೆಮ್ಮು ಸಮಸ್ಯೆ, ಹೊಟ್ಟೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ತಡೆಗಟ್ಟಲು ಆಹಾರಕ್ರಮದ ಕಡೆ ಹೆಚ್ಚಿನ ಗಮನ ನೀಡಬೇಕು. ಮೈ ಬೆಚ್ಚಗಾಗಿಸುವ ಆಹಾರ ಸೇವನೆ ಒಳ್ಳೆಯದು.

English summary

Must-Have Healthy Vegetables During The Monsoon

There are varieties of other vegetables to eat during monsoon. They are considered healthy and keep all seasonal infections at bay. Take a look at these vegetables and include them in your diet to get their benefits.
Story first published: Wednesday, June 24, 2020, 13:33 [IST]
X
Desktop Bottom Promotion