For Quick Alerts
ALLOW NOTIFICATIONS  
For Daily Alerts

ತೂಕ ಇಳಿಕೆಯಿಂದ-ಅಲ್ಸರ್ ಗುಣಪಡಿಸುವವರಿಗೆ ಮಣ್ಣಿನ ಪಾತ್ರೆಯಲ್ಲಿಟ್ಟ ತಂಗಳನ್ನದ ಪ್ರಯೋಜನಗಳು

|

ತಂಗಳನ್ನ ತಿನ್ನುವುದು ಒಳ್ಳೆಯದು ಎಂದು ಹೇಳುವುದನ್ನು ಕೇಳಿರಬಹುದು. ಆದರೆ ತಂಗಳನ್ನ ಹಾಗೇ ತಿಂದರೆ ಆರೋಗ್ಯಕರವೇ ಎಂದು ನೋಡಿದರೆ ಅಲ್ಲ, ಹಾಗಾದರೆ ಹೇಗೆ ತಿನ್ನಬೇಕು? ಇದು ಬಹುತೇಕ ಜನರಿಗೆ ಗೊತ್ತಿರುವುದಿಲ್ಲ. ಅದು ಗೊತ್ತಾದರೆ ತಂಗಳನ್ನ ತಿಂದು ತುಂಬಾ ಆರೋಗ್ಯಕರ ಗುಣಗಳನ್ನು ಪಡೆಯಬಹುದು. ಅಲ್ಲದೆ ಬೆಳಗ್ಗೆ ತಿಂಡಿಗೆ ನೀವು ಏನೂ ಬೇಡ, ತಂಗಳನ್ನ ಇದ್ದರೆ ಸಾಕು ಎಂದು ಹೇಳಿದರೂ ಹೇಳಬಹುದು, ಅಷ್ಟೊಂದು ಅದ್ಭುತ ಗುಣ ತಂಗಳನ್ನದಲ್ಲಿದೆ.

ಪ್ರಸಿದ್ಧ ಲೈಫ್‌ ಸ್ಟೈಲ್‌ ಎಕ್ಸ್‌ಪರ್ಟ್‌ ಆಗಿರುವ ಲುಕೆ ಕೌಂಟಿನೋ ಅವರು ತಂಗಳನ್ನ ತಿನ್ನುವುದರಿಂದ ಏನೆಲ್ಲಾ ಪ್ರಯೋಜಗಳಿವೆ, ಎಂಬುವುದನ್ನು ತಿಳಿಸಿದ್ದಾರೆ ನೋಡಿ:

ಅತ್ಯುತ್ತಮವಾದ ಪ್ರೊಬಯೋಟಿಕ್‌

ಅತ್ಯುತ್ತಮವಾದ ಪ್ರೊಬಯೋಟಿಕ್‌

ಪ್ರೊಬಯೋಟಿಕ್ ಆಹಾರಗಳು ಕರುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊಸರು ಕೂಡ ಪ್ರೊಬಯೋಟಿಕ್‌ ಆಹಾರವಾಗಿದೆ. ಕರುಳಿನಲ್ಲಿರುವ ಕಶ್ಮಲ ಹೊರ ಹಾಕಿ ಜೀರ್ಣಕ್ರಿಯೆಗೆ ಇಂಥ ಆಹಾರಗಳು ಸಹಾಯ ಮಾಡುತ್ತವೆ. ತಂಗಳಾನ್ನು ಕೂಡ ಅತ್ಯುತ್ತಮವಾದ ಪ್ರೊಬಯೋಟಿಕ್ ಆಹಾರವಾಗಿದೆ.

ತಂಗಳನ್ನ ಹೇಗೆ ತಿನ್ನಬೇಕು?

ತಂಗಳನ್ನ ಹೇಗೆ ತಿನ್ನಬೇಕು?

ರಾತ್ರಿ ಬಾಕಿ ಉಳಿದ ಅನ್ನವನ್ನು ಮಣ್ಣಿನ ಪಾತ್ರೆಯಲ್ಲಿ ಹಾಕಿ ನೀರು ಹಾಕಿಡಿ. ಬೆಳಗ್ಗೆ ಅದಕ್ಕೆ ಸ್ವಲ್ಪ ಮೊಸರು ಸೇರಿಸಿ ಒಂದು ಚಮಚ ಖಾಲಿ ಹೊಟ್ಟೆಯಲ್ಲಿ ತಿನ್ನಿ. ಮೊಸರು ಬೇಡ ಅಂದರೆ ಹಾಗೆಯೂ ತಿನ್ನಬಹುದು. ಇನ್ನು ಇದಕ್ಕೆ ಸ್ವಲ್ಪ ಉಪ್ಪು, ಈರುಳ್ಳಿ,ಹಸಿ ಮೆಣಸು ಕತ್ತರಿಸಿ ಹಾಕಿಯೂ ಸೇವಿಸಬಹುದು.

ಯಾರಿಗೆ ತುಂಬಾ ಒಳ್ಳೆಯದು? ಎಷ್ಟು ದಿನ ಸೇವಿಸಬೇಕು?

ಯಾರಿಗೆ ತುಂಬಾ ಒಳ್ಳೆಯದು? ಎಷ್ಟು ದಿನ ಸೇವಿಸಬೇಕು?

ತಂಗಳನ್ನು ಪ್ರತಿಯೊಬ್ಬರಿಗೂ ಒಳ್ಳೆಯದು. ಇನ್ನು ಸರ್ಜರಿ ಆದವರು ಈ ರೀತಿ ತಿನ್ನುವುದರಿಂದ ಕರುಳಿನ ಆರೋಗ್ಯ ವೃದ್ಧಿಯಾಗುವುದು. ಜೀರ್ಣಕ್ರಿಯೆ ಉತ್ತಮವಾಗುವುದು. ಇನ್ನು ಅಲ್ಸರ್‌ ಸಮಸ್ಯೆ ತಡೆಗಟ್ಟಲು ಕೂಡ ಇದು ಸಹಕಾರಿಯಾಗಿದೆ.

ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ

ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ

ತಂಗಳನ್ನ ಈ ರೀತಿ ತಿಂದರೆ ನಿಮ್ಮ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದು. ಹಾರ್ಮೋನ್‌ಗಳನ್ನು ಸಮತೋಲನದಲ್ಲಿಡಲು ಸಹಕಾರಿ. ಉರಿಯೂತದ ಸಮಸ್ಯೆಯಿದ್ದರೆ ಅದು ಕೂಡ ಕಡಿಮೆಯಾಗುವುದು.

ದೇಹದ ಉಷ್ಣತೆ ಕಡಿಮೆಯಾಗುವುದು

ದೇಹದ ಉಷ್ಣತೆ ಕಡಿಮೆಯಾಗುವುದು

ದೇಹದಲ್ಲಿ ಉಷ್ಣಾಂಶ ಹೆಚ್ಚಾದರೆ ತಂಗಳನ್ನು ಹೀಗೆ ತಿಂದರೆ ದೇಹದ ಉಷ್ಣಾಂಶ ಕಡಿಮೆ ಮಾಡಬಹುದು.

ತ್ವಚೆ ಸೌಂದರ್ಯಕ್ಕೂ ಒಳ್ಳೆಯದು

ನೀವು ಈ ರೀತಿ ವಾರದಲ್ಲಿ 5 ಬಾರಿ ಅಥವಚಾ ವಾರದ ಏಳೂ ದಿನವೂ ತಿನ್ನುವುದರಿಂದ ತ್ವಚೆಯಲ್ಲಿ ಬದಲಾವಣೆ ಕಾಣಬಹುದು. ನಿಮ್ಮ ತ್ವಚೆಯ ಹೊಳಪು ಹೆಚ್ಚುವುದು. ಅಲ್ಲದೆ ಈ ಅಭ್ಯಾಸದಿಂದ ಯೌವನದ ಕಳೆ ಬೇಗನೆ ಮಾಸುವುದಿಲ್ಲ.

FAQ's
  • ನೀರಿನಲ್ಲಿ ನೆನೆ ಹಾಕಿದ ತಂಗಳನ್ನದಲ್ಲಿರುವ ಪೋಷಕಾಂಶಗಳಾವುವು?

    ಈ ತಂಗಲನ್ನದಲ್ಲಿ ಮೈಕ್ರೋ ನ್ಯೂಟ್ರಿಯಂಟ್ ಹಾಗೂ ಖನಿಜಾಂಶಗಳಿರುತ್ತವೆ. ಇದರಲ್ಲಿ ಕಬ್ಬಿಣದಂಶ, ಪೊಟಾಷ್ಯಿಯಂ, ಕ್ಯಾಲ್ಸಿಯಂ ಇದ್ದು ಈ ಅನ್ನವನ್ನು ಪ್ರತಿದಿನ ಒಂದು ಚಮಚ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ನಿಮ್ಮ ಆರೋಗ್ಯ ವೃದ್ಧಿಯಾಗುವುದು.

  • ತಂಗಳನ್ನು ತಿಂದರೆ ದಪ್ಪ ಆಗುವುದೇ?

    ಇಲ್ಲ, ತಂಗಳನ್ನ ಈ ರೀತಿ ತಿಂದರೆ ತೂಕ ಕಡಿಮೆ ಮಾಡಲು ಸಹಕಾರಿಯಾಗಿದೆ. ಏಕೆಂದರೆ ನೀರಿನಲ್ಲಿ ನೆನೆ ಹಾಕಿದ ಅನ್ನದಲ್ಲಿ ಶೇ. 60ರಷ್ಟು ಕ್ಯಾಲೋರಿ ಕಡಿಮೆ ಇರುತ್ತದೆ. 100 ಗ್ರಾಂ ಬೇಯಿಸಿದ ಅನ್ನದಲ್ಲಿ 130 ಕ್ಯಾಲೋರಿ ಇದ್ದರೆ ತಂಗಳನ್ನದಲ್ಲಿ 52 ಕ್ಯಾಲೋರಿ ಇರುವುದು.

English summary

Health benefits of keeping cooked rice in cooled water overnight in kannada

Health benefits of keeping cooked rice in cooled water overnight in kannada, read on...
Story first published: Saturday, September 11, 2021, 9:11 [IST]
X
Desktop Bottom Promotion