For Quick Alerts
ALLOW NOTIFICATIONS  
For Daily Alerts

ಅಜ್ವೈನ್ ಕಷಾಯ ಬೆಳಗ್ಗೆ ಸೇವಿಸಿದರೆ ತೂಕ ಇಳಿಕೆಯ ಜೊತೆಗೆ ಹಲವು ಪ್ರಯೋಜನಗಳು

|

ಅಜ್ವೈ ಪ್ರತಿಯೊಂದು ಮನೆಗಳಲ್ಲಿ ಇದ್ದೇ ಇರುತ್ತದೆ. ತಿಂದಿದ್ದು ಅಜೀರ್ಣವಾಯ್ತು ಎಂದಾದರೆ ಸ್ವಲ್ಪ ಅಜ್ವೈನ್ ಬಾಯಿಗೆ ಹಾಕಿ ಜಗಿದರೆ ಸಾಕು ಸರಿ ಹೋಗುವುದು. ಇನ್ನು ಅಜೀರ್ಣದಿಂದ ಹೊಟ್ಟೆ ನೋವು ಕಾಣಿಸಿದರೆ ಅಜ್ವೈನ್‌ ನೀರಿಗೆ ಹಾಕಿ ಕುದಿಸಿ ಕುಡಿದರೆ ಸಾಕು, ಕುಡಿದ ಸ್ವಲ್ಪ ಹೊತ್ತಿನಲ್ಲಿಯೇ ನೋವು ಮಾಯ.

ಹೀಗೆ ಅಜ್ವೈನ್‌ ಅನ್ನು ಅಡುಗೆ ರುಚಿ ಹೆಚ್ಚಿಸಲು ಮಾತ್ರವಲ್ಲ ಅನೇಕ ಸಮಸ್ಯೆಗೆ ಮನೆಮದ್ದುಗಳಾಗಿ ಬಳಸುತ್ತೇವೆ ಅಲ್ವಾ? ಆದರೆ ಬೆಳಗ್ಗೆ ಎದ್ದು ಟೀ ಕುಡಿಯುವ ಅಭ್ಯಾವಿದ್ದರೆ ಅದರ ಬದಲಿಗೆ ಈ ಅಜ್ವೈನ್‌ ಕಷಾಯ ಮಾಡಿ ಕುಡಿದರೆ ಎಷ್ಟೊಂದು ಪ್ರಯೋಜನಗಳನ್ನು ಪಡೆಯಬಹುದು ಗೊತ್ತ? ತೂಕ ಇಳಿಕೆಯಿಂದ ಹಿಡಿದು ದೇಹದಲ್ಲಿರುವ ನೋವು ನಿವಾರಣೆ ಮಾಡುವಲ್ಲಿ ಈ ಕಷಾಯ ತುಂಬಾ ಪರಿಣಾಮಕಾರಿಯಾಗಿದೆ.

ನಾವಿಲ್ಲಿ ಅಜ್ವೈನ್ ಕಷಾಯ ಮಾಡುವುದು ಹೇಗೆ? ಇದು ಬೆಳಗ್ಗೆ ಕುಡಿಯುವುದರಿಂದ ಯಾವ ರೀತಿಯ ಗುಣಗಳನ್ನು ಪಡೆಯಬಹುದು ಎಂಬುವುದರ ಬಗ್ಗೆ ಹೇಳಿದ್ದೇವೆ ನೋಡಿ:

ಅಜ್ವೈನ್‌ ಕಷಾಯ ಮಾಡುವುದು ಹೇಗೆ?

ಅಜ್ವೈನ್‌ ಕಷಾಯ ಮಾಡುವುದು ಹೇಗೆ?

ಬೇಕಾಗುವ ಸಾಮಗ್ರಿ

1 ಚಮಚ ಅಜ್ವೈನ್

ಅರ್ಧ ಲೀಟರ್ ನೀರು

1 ನಿಂಬೆಹಣ್ಣು/1 ಚಮಚ ಆ್ಯಪಲ್ ಸೈಡರ್ ವಿನೆಗರ್

1 ಚಮಚ ಅರಿಶಿಣ

ಚಿಟಿಕೆಯಷ್ಟು ಬ್ಲ್ಯಾಕ್‌ ಸಾಲ್ಟ್

1 ಚಮಚ ಜೇನು

ತಯಾರಿಸುವ ವಿಧಾನ

ನೀರಿಗೆ ಅಜ್ವೈನ್ ಹಾಕಿ ಅರ್ಧ ಲೀಟರ್ ನೀರು ಅದರ ಅರ್ಧವಾಗುವಷ್ಟು ಕುದಿಸಿ. ನಂತರ ಅದನ್ನು ಗ್ಲಾಸ್‌ಗೆ ಸುರಿದು, ಅದಕ್ಕೆ ನಿಂಬೆರಸ, ಜೇನು, ಬ್ಲ್ಯಾಕ್ ಸಾಲ್ಟ್ ಬೆರೆಸಿ ನಂತರ ಬಿಸಿ ಬಿಸಿ ಕುಡಿಯಿರಿ.

ಅಜ್ವೈನ್ ನೀರು ಪ್ರತಿದಿನ ಏಕೆ ಕುಡಿಯಬೇಕು

ಅಜ್ವೈನ್ ನೀರು ಪ್ರತಿದಿನ ಏಕೆ ಕುಡಿಯಬೇಕು

ಅಜ್ವೈನ್‌ ನೀರನ್ನು ಬೆಳಗ್ಗೆ ಕುಡಿಯುವುದರಿಂದ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದು ಎಂದು ಸಂಶೋಧನೆಯಿಂದ ದೃಢಪಟ್ಟಿದೆ. Biomed research international ಜರ್ನಲ್ ಪ್ರಕಾರ ಅಜ್ವೈನ್‌ನಲ್ಲಿ ಔಷಧೀಯ ಗುಣಗಳಿವೆ. ಅಜ್ವೈನ್‌ನಲ್ಲಿ ಕಾರ್ಬೋಹೈಡ್ರೇಟ್ಸ್, ಕೊಬ್ಬು, ಪ್ರೊಟೀನ್, ನಾರಿನಂಶ, ಗ್ಲೈಸೋಸೈಡ್ಸ್, ಫ್ಲೇವೋನೆ, ಖನಿಜಾಂಶಗಳು, ಕ್ಯಾಲ್ಸಿಯಂ, ರಂಜಕ, ಕಬ್ಬಿಣದಂಶ, ಸತು, ತಾಮ್ರ, ಅಯೋಡಿನ್, ಮ್ಯಾಂಗಣಿಸ್, ಥೈಮೈನ್, ರಿಬೋಪ್ಲೇವಿನ್ ಹೀಗೆ ಅನೇಕ ಪೋಷಕಾಂಶಗಳು, ಖನಿಜಾಂಶಗಳಿವೆ.

ಅಜ್ವೈನ್‌ ಕಷಾಯದ ಆರೋಗ್ಯಕರ ಗುಣಗಳು

ಜಠರದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು

ಜಠರದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು

ಗ್ಯಾಸ್ಟ್ರಿಕ್‌ ಸಮಸ್ಯೆಯಿದ್ದು, ಕಿಬ್ಬೊಟ್ಟೆ ನೋವು, ಸ್ನಾಯು ಸೆಳೆತ ಸಮಸ್ಯೆ ಇದೆಯೇ? ಹಾಗಾದರೆ ಪ್ರತಿದಿನ ಅಜ್ವೈನ್ ಕಷಾಯ ಕುಡಿಯುವುದು ತುಂಬಾನೇ ಒಳ್ಳೆಯದು. ನೀವು ಖಾಲಿ ಹೊಟ್ಟೆಯಲ್ಲಿ ಅಜ್ವೈನ್ ನೀರು ಕುಡಿದರೆ ಅದು ಜೀರ್ಣಕ್ರಿಯೆಗೆ ತುಂಬಾನೆ ಸಹಾಯ ಮಾಡುತ್ತದೆ. ಇದರಿಂದ ಜಠರದ ಆರೋಗ್ಯ ವೃದ್ಧಿಯಾಗುವುದು. ಜೀರ್ಣಕ್ರಿಯೆ ಚೆನ್ನಾಗಿದ್ದರೆ ಅಜೀರ್ಣ, ಅಸಿಡಿಟಿ ಸಮಸ್ಯೆ ಕಾಡುವುದಿಲ್ಲ.

ಸೋಂಕು ತಡೆಗಟ್ಟುತ್ತದೆ

ಸೋಂಕು ತಡೆಗಟ್ಟುತ್ತದೆ

ಅಜ್ವೈನ್‌ಗೆ ಸೋಂಕು ನಿವಾರಕ ಗುಣವಿದೆ. ಆದ್ದರಿಂದ ಕೆಮ್ಮು, ಶೀತ, ಶೀತದಿಂದಾಗಿ ಉಂಟಾಗುವ ಕಿವಿ ನೋವು, ಬಾಯಿಯಲ್ಲಿ ಹುಣ್ಣು ಮುಂತಾದ ಸಮಸ್ಯೆಗಳು ಉಂಟಾಗದಂತೆ ತಡೆಗಟ್ಟುತ್ತದೆ.

ಉಸಿರಾಟದ ತೊಂದರೆ ಕಡಿಮೆ ಮಾಡುತ್ತದೆ

ಉಸಿರಾಟದ ತೊಂದರೆ ಕಡಿಮೆ ಮಾಡುತ್ತದೆ

ಅಜ್ವೈನ್ ಶ್ವಾಸಕೋಶದ ಆರೋಗ್ಯಕ್ಕೆ ಒಳ್ಳೆಯದು. ಅಸ್ತಮಾ ಸಮಸ್ಯೆ ಇರುವವರು ಈ ಕಷಾಯ ಮಾಡಿ ಕುಡಿಯುವುದರಿಂದ ತುಂಬಾ ಪ್ರಯೋಜನ ಪಡೆಯಬಹುದು. ಉಸಿರಾಟದ ತೊಂದರೆ ಕಾಡುವುದಿಲ್ಲ.

 ತೂಕ ಇಳಿಕೆಗೆ ಸಹಕಾರಿ

ತೂಕ ಇಳಿಕೆಗೆ ಸಹಕಾರಿ

ಅಧ್ಯಯನ ಪ್ರಕಾರ ಅಜ್ವೈನ್ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಕಾರಿ. ಕೊಲೆಸ್ಟ್ರಾಲ್ ಹೆಚ್ಚಾದರೆ ಒಬೆಸಿಟಿ ಸಮಸ್ಯೆ ಕಾಡುವುದು, ನಂತರ ಇತರ ಜೀವನಶೈಲಿ ಸಂಬಂಧಿತ ಸಮಸ್ಯೆಗಳಾದ ಮಧುಮೇಹ ಮುಂತಾದ ಸಮಸ್ಯೆ ಕಾಡುವುದು. ಈ ಸಮಸ್ಯೆ ತಡೆಗಟ್ಟುವಲ್ಲಿ ಅಜ್ವೈನ್ ಕಷಾಯ ಸಹಕಾರಿ.

 ನೋವು ನಿವಾರಕ

ನೋವು ನಿವಾರಕ

ಸಂಧಿವಾತ (RA) ಸಮಸ್ಯೆ ಇರುವವರು ಈ ಕಷಾಯ ಮಾಡಿ ಕುಡಿದರೆ ನೋವು ಕಡಿಮೆಯಾಗುವುದು. ಇನ್‌ಫ್ಲೇಮೇಷನ್ ರಿಸರ್ಚ್‌ ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯನ ವರದಿಯು ಅಜ್ವೈನ್‌ ಉರಿಯೂತ ಕಡಿಮೆ ಮಾಡುವ ಗುಣವನ್ನು ಹೊಂದಿದೆ ಎಂದು ಹೇಳಿದೆ.

English summary

Health Benefits Of Having Ajwain Kadha In The Morning in Kannada

Here are health benefits of having Ajwain Kadha in the morning, read on,
X
Desktop Bottom Promotion