For Quick Alerts
ALLOW NOTIFICATIONS  
For Daily Alerts

ನರೇಂದ್ರ ಮೋದಿ ಜನ್ಮದಿನದ ವಿಶೇಷ: ಇದೆ ನೋಡಿ ನಮ್ಮ ಪ್ರಧಾನಿ ಡಯಟ್ ಮತ್ತು ಫಿಟ್ನೆಸ್‌ ರಹಸ್ಯ

|

ಇಂದು(ಸೆ.17) ನಮ್ಮ ಪ್ರಧಾನಿ ನರೇಂದ್ರ ಮೋದಿಯವರ 71ನೇ ಹುಟ್ಟುಹಬ್ಬ. ಮೋದಿಯವರು ತಮ್ಮ ಆಡಳಿತ ಶೈಲಿಯಿಂದ ಹೇಗೆ ಗಮನ ಸೆಳೆಯುತ್ತಾರೋ ಹಾಗೆಯೇ ಫಿಟ್ನೆಸ್‌ ವಿಷಯದಲ್ಲೂ ಗಮನ ಸೆಳೆಯುತ್ತಾರೆ. ವಯಸ್ಸು 71 ಆದರೂ 30 ಹರೆಯದ ಯುವಕನಂತೆ ತುಂಬಾ ಚುರು-ಚುರುಕಾಗಿ ಇರುತ್ತಾರೆ. ಎಷ್ಟು ಪ್ರಯಾಣ ಮಾಡಿದರೂ, ತುಂಬಾ ಬ್ಯುಸಿ ಶೆಡ್ಯೂಲ್‌ನಲ್ಲಿ ಕಾರ್ಯ ನಿರ್ವಹಿಸಿದರೂ ಇವರ ಮುಖದಲ್ಲಿ ಒಮದು ಕಿಂಚಿತ್ತೂ ಆಯಾಸ ಕಾಣುವುದಿಲ್ಲ.

'If the body is fit, mind is a hit'ಎಂಬುವುದು ಪ್ರಧಾನಿ ಮೋದಿಯವರ ಕೋಟ್‌ ಆಗಿದೆ. ಯೋಗಕ್ಕೆ ತುಂಬಾನೇ ಮಹತ್ವ ನೀಡುವ ಮೋದಿಯವರ ಫಿಟ್ನೆಸ್‌ ಸೀಕ್ರೆಟ್‌ ಯೋಗ ಎಂಬುವುದು ಪ್ರತಿಯೊಬ್ಬರು ತಿಳಿದಿರುವ ವಿಷಯವಾಗಿದೆ.

ಯೋಗ ಜೊತೆಗೆ ಆಹಾರಕ್ರಮದ ಕಡೆಗೂ ತುಂಬಾ ಗಮನ ಕೊಡುತ್ತಾರೆ. ಫಿಟ್ನೆಸ್‌ಗಾಗಿ ಮೋದಿಯವರು ಏನೆಲ್ಲಾ ಮಾಡುತ್ತಾರೆ ಎಂದು ನೋಡೋಣ:

ಮೋದಿಯವರ ಆಹಾರಕ್ರಮ

ಮೋದಿಯವರ ಆಹಾರಕ್ರಮ

ಮೋದಿಯವರು ತುಂಬಾ ಕಟ್ಟುನಿಟ್ಟಿನ ಆಹಾರಕ್ರಮ ಪಾಲಿಸುತ್ತಾರೆ. ಮೋದಿಯವರು ಗುಜರಾತಿ ಅಡುಗೆಯೆಂದರೂ ಅದರಲ್ಲೂ ಕಿಚಡಿ ತುಂಬಾ ಇಷ್ಟಪಡುತ್ತಾರೆ. ಪ್ರತಿದಿನ ಒಂದು ಕಪ್‌ ಮೊಸರು ತಿನ್ನುತ್ತಾರೆ. ವಾರಕ್ಕೊಮ್ಮೆ ಆರೋಗ್ಯಕರ ಪೋಷಕಾಂಶವಿರುವ ಪರೋಟ ಸೇವಿಸುತ್ತಾರೆ. ಹಿಮಾಲ ಪ್ರದೇಶದ ಅಣಬೆ ಸೇವಿಸುತ್ತಾರೆ. ಮೋದಿಯವರು ತಿನ್ನುವ ಅಣಬೆಯ ಸೈಂಟಿಫಿಕ್‌ ಹೆಸರು ಮರ್ಕ್ಯೂಲಾ ಎಕ್ಸ್ಯೂಲೆಂಟಾ.

ಕಟ್ಟುನಿಟ್ಟಿನ ಉಪವಾಸ ಮಾಡುತ್ತಾರೆ

ಕಟ್ಟುನಿಟ್ಟಿನ ಉಪವಾಸ ಮಾಡುತ್ತಾರೆ

ಮೋದಿಯವರು ತುಂಬಾ ಕಟ್ಟುನಿಟ್ಟಿನ ಉಪವಾಸ ಮಾಡುತ್ತಾರೆ. ಕಳೆದ 35 ವರ್ಷದಿಂದ ಮೋದಿಯವರು ನವರಾತ್ರಿ ಸಮಯಕ್ಕೆ ಉಪವಾಸ ಮಾಡುತ್ತಿದ್ದಾರೆ. ಈ ಸಂಪ್ರದಾಯವನ್ನು ಇದುವರೆಗೂ ಮುರಿದಿಲ್ಲ. ಬರೀ ನಿಂಬು ಪಾನಿ ಕುಡಿದು ಇರುತ್ತಾರೆ. ದೇಹದಲ್ಲಿರುವ ಕಶ್ಮಲವನ್ನು ಶುದ್ಧ ಮಾಡಲು ಉಪವಾಸ ತುಂಬಾ ಸಹಾಯ ಮಾಡುತ್ತದೆ.

ಯೋಗ ಅಭ್ಯಾಸ

ಯೋಗ ಅಭ್ಯಾಸ

ಮೋದಿಯವರು ಪ್ರತಿದಿನ ಯೋಗ ಅಭ್ಯಾಸ ಮಾಡುತ್ತಾರೆ. ಸೂರ್ಯ ನಮಸ್ಕಾರ ಮಾಡುತ್ತಾರೆ. ಯೋಗಾಸನಗಳನ್ನು ಮಾಡುತ್ತಾರೆ, ನಂತರ ಪ್ರಾಣಯಾಮ ಮಾಡುತ್ತಾರೆ. ದೇಹದ ಫಿಟ್ನೆಸ್‌ ಕಾಪಾಡುವಲ್ಲಿ ಮೋದಿಯವರ ಈ ಅಭ್ಯಾಸಗಳು ತುಂಬಾ ಸಹಕಾರಿಯಾಗಿದೆ. ಯೋಗಾಸನ ಹಾಗೂ ಪ್ರಾಣಯಾಮ ಮಾನಸಿಕ ಒತ್ತಡವನ್ನು ಹೊರಹಾಕುತ್ತೆ. ಆದ್ದರಿಂದ ದಿನದಲ್ಲಿ 20 ದಾಸು ದುಡಿದರೂ ಮೋದಿಯವರ ಮುಖದಲ್ಲಿ ಆಯಾಸ ಕಂಡು ಬರುವುದಿಲ್ಲ.

 ಸರಿಯಾಗಿ ನಿದ್ದೆ ಮಾಡುತ್ತಾರೆ

ಸರಿಯಾಗಿ ನಿದ್ದೆ ಮಾಡುತ್ತಾರೆ

ಮೋದಿಯವರು 8 ತಾಸು ನಿದ್ದೆ ಮಾಡಲ್ಲ, 4-5 ತಾಸು ಅಷ್ಟೇ ನಿದ್ದೆ ಮಾಡುತ್ತಾರೆ. ಆದರೆ ನಿದ್ದೆಯನ್ನು ಸರಿಯಾಗಿ ಮಾಡುತ್ತಾರೆ. ಬೆಳಗ್ಗೆ 4 ಗಂಟೆಗೆ ಎದ್ದು ತಮ್ಮ ದಿನಚರಿ ಪ್ರಾರಂಭಿಸುತ್ತಾರೆ. ಯೋಗ ಅಭ್ಯಾಸ ಅವರಿಗೆ ನಿದ್ದೆ ಸರಿಯಾಗಿ ಮಾಡಲು ಸಹಕಾರಿಯಾಗಿದೆ. ಯೋಗ ನಿದ್ರೆ ಅಭ್ಯಾಸ ಮಾಡುವುದರಿಂದ 4 ಗಂಟೆ ನಿದ್ದೆ ಮಾಡಿದರೂ ಇವರು ಚಟುವಟಕೆಯಿಂದ ಇರುತ್ತಾರೆ.

ಸಸ್ಯಾಹಾರ ಸೇವನೆ

ಸಸ್ಯಾಹಾರ ಸೇವನೆ

ಬ್ರೇಕ್‌ಫಾಸ್ಟ್‌ ತುಂಬಾನೇ ಅವಶ್ಯಕ, ಒಳ್ಳೆಯ ಬ್ರೇಕ್‌ಫಾಸ್ಟ್ ಇಡೀ ದಿನಕ್ಕೆ ಶಕ್ತಿಯನ್ನು ತುಂಬುವುದು. ಮೋದಿಯವರು ಸಸ್ಯಾಹಾರ ಮಾತ್ರ ಸೇವಿಸುತ್ತಾರೆ. ಹಣ್ಣು ಹಾಗೂ ತರಕಾರಿಗಳು ಕಡ್ಡಾಯವಾಗಿ ಆಹಾರಕ್ರಮದಲ್ಲಿ ಇರಬೇಕು.

ಮೋದಿಯವರ ಡ್ರೆಸ್ಸಿಂಗ್ ಕೂಡ ಅಷ್ಟೇ ಆಕರ್ಷಕ

ಮೋದಿಯವರ ಡ್ರೆಸ್ಸಿಂಗ್ ಕೂಡ ಅಷ್ಟೇ ಆಕರ್ಷಕ

ಮೋದಿಯವರು ಸದಾ ತಮ್ಮ ಡ್ರೆಸ್ಸಿಂಗ್‌ ಮೂಲಕ ಗಮನ ಸೆಳೆಯುತ್ತಾರೆ. ಮೋದಿಯವರು ಇಸ್ತ್ರಿ ಇಲ್ಲದ ಬಟ್ಟೆ ಧರಿಸಲ್ಲ. ತಾಮ್ರದ ಲೋಟದಲ್ಲಿ ನೀರು ಕುಡಿಯುತ್ತಾರೆ. ವಾಚ್‌ ಹಾಗೂ ಸ್ಯಾಂಡಲ್‌ ಕ್ರೇಝ್‌ ಕೂಡ ಇದೆ. ಕುರ್ತಾ ತುಂಬಾ ಇಷ್ಟ ಪಡುವ ಮೋದಿ ತಮ್ಮ ಫಿಟ್ನೆಸ್ ಜೊತೆಗೆ ಡ್ರೆಸ್ಸಿಂಗ್‌ ಸ್ಟೈಲ್‌ನಿಂದ ಮತ್ತಷ್ಟು ಯಂಗ್‌ ಕಾಣಿಸುತ್ತಾರೆ. ಮೋದಿಯವರನ್ನು ನೋಡಿದರವರು ಅಬ್ಬಾಬ್ಬ ಎಂದರೆ 40-45 ವರ್ಷ ಇರಬಹುದು ಎಂದು ಅಂದಾಜಿಸುತ್ತಾರೆ. ಆದರೆ 71ನೇ ಹುಟ್ಟು ಹಬ್ಬ ಆಚರಿಸುತ್ತಿರುವ ಮೋದಿಯವರು ದೇಹವನ್ನು ಹೇಗೆ ನೋಡಿಕೊಳ್ಳಬೇಕು ಎಂಬುವುದಕ್ಕೆ ಮಾದರಿ.... ಹುಟ್ಟು ಹಬ್ಬದ ಶುಭಾಶಯಗಳು ಮೋದಿಜೀ....

FAQ's
  • ಮೋದಿಯವರ ಅಚ್ಚು-ಮೆಚ್ಚಿನ ಆಹಾರಗಳು

    * ಕಟ್ಟಾ ದೋಕ್ಲಾ
    * ಕಿಚಡಿ
    * ಬೇಸನ್‌ ಖಾಂಡ್ವಿ (ಕಡಲೆ ಹಿಟ್ಟಿನಿಂದ ತಯಾರಿಸಿದ್ದು)
    * ಕೇಸರಿ-ಬಾದಾಮಿ ಶ್ರೀಖಂಡ್
    * ಬೆಂಡೆಕಾಯಿ ಕಢಿ

  • ಮೋದಿಯವರ ದಿನಚರಿ ಹೇಗಿರುತ್ತೆ?

    * ಮೋದಿಯವರು ಮುಂಜಾನೆ 4 ಅಥವಾ 5 ಗಂಟೆಗೆ ಏಳುತ್ತಾರೆ. ಒಂದು ಕಪ್‌ ಟೀ ಕುಡಿಯುತ್ತಾ ಹಿಂದಿನ ದಿನದ ಟ್ವೀಟ್ ನೋಡುತ್ತಾರೆ, ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗಿರುವ ಕೆಲವೊಂದು ಮುಖ್ಯ ವಿಷಯಗಳನ್ನು ಗಮನಿಸುತ್ತಾರೆ.
    * ನಂತರ ಯೋಗ ಹಾಗೂ ಧ್ಯಾನ ಮಾಡುತ್ತಾರೆ.
    * ಬೆಳಗ್ಗೆ 9 ಗಂಟೆಗೆ ಆಫೀಸ್‌ಗೆ ಬರುತ್ತಾರೆ.
    * ದಿನದಲ್ಲಿ 18 ತಾಸು ದುಡಿಯುತ್ತಾರೆ.
    * ಮನೆಗೆ 7.30ವರೆಗೆ ಹಿಂತಿರುಗಿದರೂ ಕೆಲಸ 9 ಗಂಟೆಯಾದರೂ ಆಫೀಸರ್‌ಗಳಿಗೆ ಪೋನ್ ಮಾಡುವುದು, ಬಾಕಿಯುಳಿದ ಕೆಲಸ ಕಡೆ ಗಮನ ನೀಡುವುದು ಮಾಡುತ್ತಾರೆ.
    * ಮೋದಿ ತಾನು ಕೆಲಸ ಮಾಡುವುದು ಮಾತ್ರವಲ್ಲಿ ತನ್ನ ಜೊತೆಯಲ್ಲಿರುವವರು ಸರಿಯಾದ ರೀತಿಯಲ್ಲಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತಾರೆ.
    * ದೇಶಕ್ಕಾಗಿ ಒಂದು ದಿನ ರಜೆನೂ ಹಾಕದೆ ದುಡಿಯುತ್ತಾರೆ.

English summary

Happy Birthday Narendra Modi: Modi Diet and Fitness Secrets in Kannada

Happy Birthday Narendra Modi: Modi Diet and Fitness Secrets in Kannada, Read on...
X
Desktop Bottom Promotion