For Quick Alerts
ALLOW NOTIFICATIONS  
For Daily Alerts

ತುಂಬಾ ಫಾಸ್ಟ್‌ಫುಡ್‌ ತಿನ್ನುವವರು ಪ್ರತಿದಿನ ದ್ರಾಕ್ಷಿ ತಿಂದರೆ 4 ರಿಂದ 5 ವರ್ಷ ಜೀವಿತಾವಧಿ ಹೆಚ್ಚುತ್ತದೆ !

|

ದ್ರಾಕ್ಷಿ ಹಣ್ಣನ್ನು ಹಲವರು ಇಷ್ಟಪಡುತ್ತಾರೆ. ಕೆಲವರು ಇದು ಹುಳಿ ಎಂದು ಇಷ್ಟಪಡೋದಿಲ್ಲ. ಆದರೆ ದ್ರಾಕ್ಷಿ ಹಣ್ಣಿನ ಸೇವನೆಯಿಂದ ಸಿಗುವ ಪ್ರಯೋಜನಗಳನ್ನು ತಿಳಿದರೆ ಇಷ್ಟಪಡದವರು ಕೂಡ ದ್ರಾಕ್ಷಿ ಹಣ್ಣನ್ನು ಸೇವಿಸಲು ಆರಂಭಿಸುತ್ತಾರೆ. ಹೌದು, ದ್ರಾಕ್ಷಿ ಹಣ್ಣಿನ ಸೇವನೆಯಿಂದ ಮನುಷ್ಯನ ಜೀವಿತಾವಧಿ 4 ರಿಂದ 5 ವರ್ಷ ಹೆಚ್ಚುತ್ತದೆ ಎನ್ನುವುದು ಸಂಶೋಧನೆ ಮೂಲಕ ತಿಳಿದುಬಂದಿದೆ.

BENIFITS OF eating grapes

ವೆಸ್ಟರ್ನ್ ನ್ಯೂ ಇಂಗ್ಲೆಂಡ್ ವಿಶ್ವವಿದ್ಯಾನಿಲಯವು ನಡೆಸಿದ ಸಂಶೋಧನೆಯಲ್ಲಿ ಇದು ತಿಳಿದುಬಂದಿದ್ದು, ದ್ರಾಕ್ಷಿಯನ್ನು ತಿಂಡಿಯಾಗಿ ಅಥವಾ ಸ್ನಾಕ್ಸ್ ರೂಪದಲ್ಲಿ ತಿನ್ನುವುದರಿಂದ ಜಂಕ್ ಫುಡ್ ಸೇವನೆಯಿಂದ ದೇಹದ ಮೇಲೆ ಉಂಟಾಗುವ ಪರಿಣಾಮ ಹಾಗೂ ಸಂಸ್ಕರಿಸಿದ ಆಹಾರದಿಂದ ನಮ್ಮ ದೇಹಕ್ಕೆ ಸೇರುವ ಕೊಬ್ಬುಗಳು ಮತ್ತು ಸಕ್ಕರೆಗಳನ್ನು ಹೊರಹಾಕುವುದಕ್ಕೆ ಸಹಾಯ ಮಾಡುತ್ತದೆ.

ಅಂದರೆ ದೇಹದಲ್ಲಿರುವ ಇಂತಹ ಕಲ್ಮಶವು ದ್ರಾಕ್ಷಿ ಹಣ್ಣಿನ ಸೇವನೆಯಿಂದ ಹೊರಹೊಗುತ್ತದೆ ಎನ್ನುವುದು ಸಂಶೋಧನೆಯಲ್ಲಿ ತಿಳಿದುಬಂದಿದೆ. ಜೊತೆಗೆ ದ್ರಾಕ್ಷಿ ಹಣ್ಣು ಸೇವನೆಯಿಂದ ನಮ್ಮ ದೇಹದ ಯಕೃತ್ತುನಲ್ಲಿ ಉಂಟಾಗುವ ಕೊಬ್ಬಿನಾಂಶ ನಿವಾರಣೆಯಾಗುತ್ತದೆ. ಅಲ್ಲದೇ ಜೀವಿತಾವಧಿಯು ವೃದ್ದಿಯಾಗುತ್ತದೆ ಎನ್ನುವುದು ಸಂಶೋಧನೆ ಮೂಲಕ ತಿಳಿದುಬಂದಿದೆ.

 ಹೇಗಿತ್ತು ಅಧ್ಯಯನ?

ಹೇಗಿತ್ತು ಅಧ್ಯಯನ?

ದ್ರಾಕ್ಷಿ ಹಣ್ಣಿನಲ್ಲಿ ಸಿಗುವ ಪ್ರಯೋಜನ ಕುರಿತು ಅಧ್ಯಯನ ನಡೆಸಲು ವೆಸ್ಟರ್ನ್ ನ್ಯೂ ಇಂಗ್ಲೆಂಡ್ ವಿಶ್ವವಿದ್ಯಾನಿಲಯವು ಇಲಿಯನ್ನು ತನ್ನ ಸಂಶೊಧನಾ ವಸ್ತುವಾಗಿ ಬಳಸಿಕೊಂಡಿತ್ತು. ಸಂಶೋಧನೆ ಹಿನ್ನೆಲೆ ಇಲಿಗಳಿಗೆ ಭಾರೀ ಕೊಬ್ಬಿನಾಂಶ ಇರುವ ಆಹಾರವನ್ನು ನೀಡಲಾಗಿತ್ತು. ಇನ್ನು ಈ ಇಲಿಗಳಿಗೆ ದ್ರಾಕ್ಷಿ ಹಣ್ಣಿನ ಪೌಡರ್ ನೀಡಲಾಗಿದೆ. ಬೇರೆ ಇಲಿಗಳಿಗೆ ಹೋಲಿಸಿದರೆ ದ್ರಾಕ್ಷಿ ಪೌಡರ್ ತಿಂದ ಇಲಿಗಳ ಯಕೃತ್ತಿನಲ್ಲಿ ಕೊಬ್ಬಿನಾಂಶ ಇರಲಿಲ್ಲ. ಅಲ್ಲದೇ ಸಂಶೋಧನೆಗಳಿಗೆ ಒಳಪಟ್ಟ ಇಲಿಗಳು ಬೇರೆ ಇಲಿಗಳಿಗೆ ಹೋಲಿಸಿದರೆ ಹೆಚ್ಚಿನ ವರ್ಷ ಬದುಕಿತ್ತು. ಇದು ಸಂಶೋಧನೆಯಿಂದ ತಿಳಿದು ಬಂದ ವಿಚಾರವಾಗಿದೆ.

ದ್ರಾಕ್ಷಿ ತಿಂದರೆ ಏನಾಗುತ್ತದೆ?

ದ್ರಾಕ್ಷಿ ತಿಂದರೆ ಏನಾಗುತ್ತದೆ?

ಇನ್ನು ದ್ರಾಕ್ಷಿ ಹಣ್ಣು ಅಥವಾ ಪೌಡರ್ ಸೇವನೆಯಿಂದ ಜೀವಿತಾವಧಿ ಹೆಚ್ಚಾಗುವುದು ಹಾಗೂ ಫ್ಯಾಟಿ ಲಿವರ್ ಸಮಸ್ಯೆ ದೂರವಾಗುವುದಕ್ಕೆ ಮುಖ್ಯ ಕಾರಣ ಜೀನ್ ಅಭಿವ್ಯಕ್ತಿಯ ಬದಲಾವಣೆಯಾಗಿದೆ. ಹೌದು, ಕೊಬ್ಬಿನ ಯಕೃತ್ತು ಸಮಸ್ಯೆ ಸುಮಾರು 25% ಮಾನವರ ಮೇಲೆ ಪರಿಣಾಮ ಬೀರುತ್ತದೆ. ಅಂತಿಮವಾಗಿ ಇದು ಯಕೃತ್ತಿನ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಆದರೆ ದ್ರಾಕ್ಷಿಯಲ್ಲಿರುವ ಗುಣವು ಉತ್ಕರ್ಷಣ ನಿರೋಧಕ ಜೀನ್ ಗಳನ್ನು ಉತ್ಪಾದಿಸುತ್ತದೆ. ಇವುಗಳು ಕೊಬ್ಬಿನ ಯಕೃತ್ತ್ ಬೆಳವಣಿಗೆಗೆ ಕಾರಣವಾದ ಜೀನ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಸೋ, ಫ್ಯಾಟಿ ಲಿವರ್ ಸಮಸ್ಯೆ ನಿವಾರಣೆಯಾಗುತ್ತದೆ. ಹೀಗೆ ಫ್ಯಾಟಿ ಲಿವರ್ ಸಮಸ್ಯೆ ನಿವಾರಣೆಯಾದರೆ ಆರೋಗ್ಯವು ಚೆನ್ನಾಗಿರುತ್ತದೆ. ಅಲ್ಲದೇ, ಜೀವಿತಾವಧಿಯು ಹೆಚ್ಚುತ್ತದೆ. ಸಿಂಪಲ್ ಆಗಿ ಹೇಳಬೇಕಾದರೆ ದ್ರಾಕ್ಷಿ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್ ಗುಣವು ಮನುಷ್ಯನ ದೇಹದಲ್ಲಿ ಉಂಟಾಗುವ ಕೊಬ್ಬಿನ ಯಕೃತ್ತ್ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ದ್ರಾಕ್ಷಿಯಲ್ಲಿ ಆಂಟಿಆಕ್ಸಿಡೆಂಟ್ ಗುಣ ಹೆಚ್ಚಿರುವುದರಿಂದ ಆರೋಗ್ಯ ಸಮಸ್ಯೆ ಬರುವುದಿಲ್ಲ.

ಇನ್ನಿತರ ದ್ರಾಕ್ಷಿ ಹಣ್ಣಿನಿಂದ ಸಿಗುವ ಪ್ರಯೋಜನಗಳು

ಇನ್ನಿತರ ದ್ರಾಕ್ಷಿ ಹಣ್ಣಿನಿಂದ ಸಿಗುವ ಪ್ರಯೋಜನಗಳು

ದ್ರಾಕ್ಷಿ ಎಂಬ ಆರೋಗ್ಯದ ಹಣ್ಣು ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಒಂದು ಕಪ್ ದ್ರಾಕ್ಷಿಯಿಂದ 104 ಕಿಲೋ ಕ್ಯಾಲೋರಿ, 122 ಗ್ರಾಂ ನೀರು, 27.3 ಗ್ರಾಂ ಕಾರ್ಬೋಹೈಡ್ರೇಟ್ ಗಳು, 2 ಗ್ರಾಂ ಪ್ರೋಟೀನ್ ಮತ್ತು 0 ಕೊಲೆಸ್ಟ್ರಾಲ್ ಸಿಗುತ್ತದೆ. ಇದು ಫೈಟೋನ್ಯೂಟ್ರಿಯಂಟ್ ಗಳ ಅದ್ಭುತ ಆಗರವಾಗಿದೆ. ಆಯುರ್ವೇದದಲ್ಲೇ ದ್ರಾಕ್ಷಿ ಬಗ್ಗೆ ಬಹಳ ಹೊಗಳಲಾಗಿದೆ. ದ್ರಾಕ್ಷಾ ಫಲೋತ್ತಮಮ್ ಎಂದು ಆಯುರ್ವೇದದಲ್ಲಿ ಹೇಳಲಾಗಿದ್ದು ಅಂದರೆ ದ್ರಾಕ್ಷಿ ಎಲ್ಲಾ ಹಣ್ಣುಗಳಲ್ಲಿ ಅತ್ಯುತ್ತಮವಾಗಿದೆ ಎನ್ನಲಾಗಿದೆ. ಸಿಹಿ ರುಚಿಯನ್ನು ಹೊಂದಿರುವ ದ್ರಾಕ್ಷಿ ವಾತ ಮತ್ತು ಪಿತ್ತ ದೋಷವನ್ನು ಸಮತೋಲನಗೊಳಿಸುತ್ತದೆ. ಹುಳಿ ದ್ರಾಕ್ಷಿಗಳು ಕಫ ಮತ್ತು ಪಿತ್ತಕೋಶದ ದೋಷಗಳನ್ನು ಹೆಚ್ಚಿಸುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.

English summary

Grapes May Add 4-5 Years to Lifespans of Those Who Regularly Eat Fast Food in kannada

Study Says Eating Grapes May Add 4-5 Years to Lifespans of Those Who Regularly Eat Fast Food in kannada read on,
Story first published: Saturday, August 20, 2022, 9:07 [IST]
X
Desktop Bottom Promotion