Just In
Don't Miss
- News
ಬಿಜೆಪಿಗೆ ಸೆಡ್ಡು ಹೊಡೆದು ಹಣ ಬಲವನ್ನು ಮಣಿಸಿದ ಶರತ್ ಬಚ್ಚೇಗೌಡ ಯಾರು?
- Movies
ವೈರಲ್ ಆದ ಬಾಲಿವುಡ್ ಜೋಡಿ ಹಕ್ಕಿಗಳ ರಹಸ್ಯ ಪ್ರವಾಸ ಫೋಟೋಗಳಿವು
- Automobiles
ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಬಿಎಸ್-6 ಮಹೀಂದ್ರಾ ಮರಾಜೊ
- Technology
ನಿಮ್ಮ ಪಿಸಿಗೆ ವೈರಸ್ ಅಟ್ಯಾಕ್ ಆಗಿದೆಯಾ ಎಂಬುದನ್ನು ಪರೀಕ್ಷಿಸುವುದು ಹೇಗೆ?
- Finance
Mi ನೋಟ್ 10 ಭಾರತದಲ್ಲಿ 2020ರ ಜನವರಿಯಲ್ಲಿ ಬಿಡುಗಡೆ
- Sports
ಸಾಮೂಹಿಕ ಉದ್ಧೀಪನ ಸೇವನೆ ಸಾಬೀತು; ನಾಲ್ಕು ವರ್ಷ ರಷ್ಯಾ ಜಾಗತಿಕ ಕ್ರೀಡಾಕೂಟದಿಂದ ನಿಷೇಧ
- Education
KPSC Admit Card 2019: ಗ್ರೂಪ್ "ಬಿ" ಮತ್ತು "ಸಿ" ಹುದ್ದೆಗಳ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಈ ಹಣ್ಣುಗಳನ್ನು ಒಟ್ಟಾಗಿ ತಿನ್ನುವುದು ಆರೋಗ್ಯಕರವಲ್ಲ!
ಒಂದು ಬಟ್ಟಲು ಹಣ್ಣು ಮತ್ತು ತರಕಾರಿ ಅಗಾಧ ಪೌಷ್ಠಿಕಾಂಶಗಳನ್ನು ಹೊಂದಿದೆ. ನಿತ್ಯ ಫ್ರೂಟ್ ಮತ್ತು ತರಕಾರಿ ಸಲಾಡ್ ಸೇವಿಸುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಇದು ಒಂದು ಹೊತ್ತಿನ ಊಟಕ್ಕೆ ಸಮ ಎಂಬುದು ಎಲ್ಲರಿಗೂ ತಿಳಿದ ವಿಷಯವೇ.
ನಾವು ಸಹ ಹಲವು ಬಾರಿ ಮದುವೆ ಮನೆಗಳಲ್ಲಿ ನೀಡುವ, ಹೊರಗೆ ಊಟದ ಬದಲಾಗಿ ಒಂದು ಬಟ್ಟಲು ಹಣ್ಣು ತಿನ್ನುವ ಅಥವಾ ಮನೆಯಲ್ಲಿರುವ ಎಲ್ಲಾ ಹಣ್ಣು, ತರಕಾರಿಗಳನ್ನು ಕತ್ತರಿಸಿ ಹಾಲಿನಲ್ಲಿ ಅಥವಾ ಉಪ್ಪು ಹಾಕಿ ಫ್ರೂಟ್ ಮತ್ತು ತರಕಾರಿ ಸಲಾಡ್ ಮಾಡಿ ಸೇವಿಸುವ ಅಭ್ಯಾಸವನ್ನು ಹೊಂದಿರುತ್ತೇವೆ. ಆದರೆ ಹೀಗೆ ತಿನ್ನುವ ಕ್ರಮ ಸರಿಯೇ?. ವಿವಿಧ ರುಚಿ, ಗುಣಗಳನ್ನು ಹೊಂದಿರುವ ಹಣ್ಣು, ತರಕಾರಿಯನ್ನು ಒಂದೇ ಸಮಯದಲ್ಲಿ ತಿನ್ನಬಾರದು ಎಂಬುದು ನಿಮಗೆ ಗೊತ್ತೆ?.

ಹಣ್ಣು, ತರಕಾರಿ ಸಲಾಡ್ ಏಕೆ ತಿನ್ನಬಾರದು?
ಆಮ್ಲೀಯ, ಸಿಹಿ ಹಾಗೂ ತಟಸ್ಥ ರುಚಿಗಳನ್ನು ಹೊಂದಿರುವ ವಿವಿಧ ಹಣ್ಣು, ತರಕಾರಿಗಳನ್ನು ಒಂದೇ ಸಮಯದಲ್ಲಿ ತಿನ್ನುವುದು ಎಂದಿಗೂ ಆರೋಗ್ಯಕರವಲ್ಲ. ಹಣ್ಣು, ತರಕಾರಿಗಳ ಸಲಾಡ್ ಹೀಗೆ ತಿನ್ನಬೇಕು ಎಂಬ ನಿಯಮವಿದೆ. ಮೊದಲನೆಯದಾಗಿ ನೀವು ಎಂದಿಗೂ ಹಣ್ಣು ಮತ್ತು ತರಕಾರಿಯನ್ನು ಒಟ್ಟಾಗಿ ತಿನ್ನಲೇಬಾರದು. ಎರಡನೆಯದಾಗಿ ಕೆಲವು ಹಣ್ಣುಗಳನ್ನು ಸಹ ಒಟ್ಟಾಗಿ ತಿನ್ನಲೇಬಾರದು. ಒಂದೇ ಬಾರಿ ವಿವಿಧ ಹಣ್ಣು ತರಕಾರಿಗಳನ್ನು ತಿನ್ನುವುದರಿಂದ ನಿಮ್ಮ ದೇಹ ಪ್ರತಿಯೊಂದು ಹಣ್ಣು, ತರಕಾರಿಯನ್ನು ಜೀರ್ಣಿಸಿಕೊಳ್ಳುವ ವೇಗ ವಿಭಿನ್ನವಾಗಿರುತ್ತದೆ. ನೀವು ಒಟ್ಟಾಗಿ ಎಲ್ಲಾ ವಿಧಧ ಹಣ್ಣು, ತರಕಾರಿಗಳನ್ನು ತಿನ್ನುವುದರಿಂದ ಸರಾಗ ಜೀರ್ಣಕ್ರಿಯೆಗೆ ಅಡ್ಡಿಯುಂಟಾದಂತಾಗುತ್ತದೆ.
ಯಾವ ಯಾವ ಹಣ್ಣುಗಳನ್ನು ಒಟ್ಟಾಗಿ ಸೇವಿಸಬಾರದು
ಮುಂದಿನ ಬಾರಿ ಹಣ್ಣು ಅಥವಾ ತರಕಾರಿ ಸಲಾಡ್ ಮಾಡುವಾಗ ಯಾವ ಹಣ್ಣುಗಳನ್ನು ಒಟ್ಟಾಗಿ ಸೇವಿಸಬಾರದು, ಎಂತಹ ಹಣ್ಣುಗಳನ್ನು ಒಟ್ಟಾಗಿ ಸೇವಿಸಬಹುದು ಇಲ್ಲಿದೆ ಪಟ್ಟಿ.
ನೀವು ಇಡೀ ದಿನ ಡೆಸ್ಕ್ನಲ್ಲಿ ಕುಳಿತುಕೊಳ್ಳುವಿರೇ ? ಆರೋಗ್ಯ ಸುಧಾರಣೆಗೆ ಇಲ್ಲಿದೆ ಟಿಪ್ಸ್

ನೀರಿನ ಅಂಶವುಳ್ಳ ಹಣ್ಣುಗಳ ಜತೆ ಯಾವುದೇ ಹಣ್ಣು ಬೇಡ
ನೀರಿನ ಅಂಶ ಹೇರಳವಾಗಿರುವ ಹಣ್ಣು ಒಂದು ರೀತಿ ಬ್ರಹ್ಮಚಾರಿಯಂತೆ ಏಕಾಂಗಿ. ಈ ಹಣ್ಣುಗಳ ಜತೆ ಬೇರೆ ಯಾವ ಹಣ್ಣನ್ನು ಸೇರಿಸಿ ತಿನ್ನಬೇಡಿ. ಇಂತಹ ಹಣ್ಣುಗಳನ್ನು ಬೇರೆ ಹಣ್ಣಿನ ಜತೆ ತಿಂದರೆ ಜೀರ್ಣವಾಗಲು ಕಷ್ಟವಾಗುತ್ತದೆ. ಇದು ಸಾಕಷ್ಟು ನೀರಿನ ಅಂಶವನ್ನು ಹೊಂದಿರುವ ಹಣ್ಣು ಆಗಿರುವುದರಿಂದ ಇತರೆ ಹಣ್ಣುಗಳಿಗಿಂತ ಶೀಘ್ರ ಜೀರ್ಣವಾಗವ ಸಾಮರ್ಥ್ಯವನ್ನು ಹೊಂದಿದೆ. ಕಲ್ಲಂಗಡಿ, ಖರ್ಬೂಜದ ವಿವಿಧ ತಳಿಯ ಹಣ್ಣುಗಳ ಮಿಶ್ರಣ ಯಾವುದೇ ಹಣ್ಣಿನ ಜತೆ ಬೇಡವೇ ಬೇಡ.

ಸಿಹಿ ಹಣ್ಣುಗಳ ಜತೆ ಆಮ್ಲೀಯ / ಉಪ ಆಮ್ಲೀಯತೆಯ ಹಣ್ಣು ಉತ್ತಮವಲ್ಲ
ಆಮ್ಲೀಯ ಅಂಶ ಇರುವ ದ್ರಾಕ್ಷಿಹಣ್ಣು, ಸ್ಟ್ರಾಬೆರಿಗಳಂತಹ ಮತ್ತು ಉಪ ಆಮ್ಲೀಯ ಹಣ್ಣುಗಳಾದ ಸೇಬು, ದಾಳಿಂಬೆ ಮತ್ತು ಪೀಚ್ ಗಳಂಥ ಹಣ್ಣುಗಳನ್ನು ಸಿಹಿ ಅಂಶವುಳ್ಳ
ಬಾಳೆಹಣ್ಣು ಮತ್ತು ಒಣದ್ರಾಕ್ಷಿಗಳೊಂದಿಗೆ ಬೆರೆಸಬೇಡಿ. ಇದು ಉತ್ತಮ ಜೀರ್ಣಕ್ರಿಯೆಗೆ ಅನನುಕೂಲ. ಇದೇ ಕಾರಣಕ್ಕಾಗಿಯೇ ಪೇರಲ(ಚೇಪೆಕಾಯಿ) ಮತ್ತು ಬಾಳೆಹಣ್ಣುಗಳನ್ನು ಸಹ ಬೆರೆಸಬಾರದು. ಕೆಲವು ಅಧ್ಯಯನಗಳು ಈ ಜೋಡಿ ನಿಮ್ಮ ವಾಕರಿಕೆ, ಆಸಿಡೋಸಿಸ್ ಮತ್ತು ತಲೆನೋವಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತದೆ. ಆಮ್ಲೀಯ ಹಾಗೂ ಸಿಹಿಹಣ್ಣುಗಳನ್ನು ಒಟ್ಟಾಗಿ ಸೆವಿಸುವುದರಿಂದ ವಾಕರಿಕೆ, ತಲೆನೋವು, ಆಮ್ಲವ್ಯಾಧಿಯಂಥ ಸಮಸ್ಯೆ ಉಂಟಾಗಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ. ಆದರೆ ನೀವು ಆಮ್ಲೀಯ ಅಂಶವುಳ್ಳ ಹಣ್ಣುಗಳನ್ನು ಉಪ-ಆಮ್ಲೀಯ ಹಣ್ಣುಗಳೊಂದಿಗೆ ಬೆರೆಸಿ ತಿನ್ನಬಹದು.

ಹಣ್ಣಿನೊಂದಿಗೆ ತರಕಾರಿ ಆರೋಗ್ಯಕರವಲ್ಲ
ಹಣ್ಣು ಮತ್ತು ತರಕಾರಿಯ ಜೀರ್ಣಕ್ರಿಯೆಯ ವಿಧಾನ ಭಿನ್ನವಾಗಿದೆ. ಹಣ್ಣುಗಳು ಬಹಳ ಬೇಗ ಜೀರ್ಣವಾಗುವ ಸಾಮರ್ಥ್ಯವನ್ನು ಹೊಂದಿದೆ. ಹಲವು ಪೌಷ್ಟಿಕಾಂಶ ತಜ್ಞರು ಹೇಳುವ ಪ್ರಕಾರ ಹಣ್ಣುಗಳು ಉದರಕ್ಕೆ ಸೇರುತ್ತಿದ್ದಂತೆ ಜೀರ್ಣವಾಗುತ್ತದೆ ಎನ್ನಲಾಗಿದೆ. ಅಲ್ಲದೇ, ಹಣ್ಣುಗಳು ಹೆಚ್ಚಿನ ಸಿಹಿ ಅಂಶವನ್ನು ಹೊಂದಿದೆ ಮತ್ತು ತರಕಾರಿಯ ಜತೆ ಹಣ್ಣು ತಿಂದಾಗ ತರಕಾರಿಯ ಜೀರ್ಣಕ್ರಿಯೆಗೆ ಅಡ್ಡಿಯುಂಟು ಮಾಡುತ್ತದೆ. ಉದಾಹರಣೆಗೆ ಕ್ಯಾರೆಟ್ ಮತ್ತು ಆರೆಂಜ್ ಅನ್ನು ಒಟ್ಟಾಗಿ ಸೇವಿಸಿದರೆ ಎದೆಯುರಿ ಮತ್ತು ಹೆಚಚ್ಉವರಿ ಪಿತ್ತರಸ ಉತ್ಪತಿಯಾಗುತ್ತದೆ ಎನ್ನಲಾಗಿದೆ.

ಪಿಷ್ಠ ಹಾಗೂ ಹೆಚ್ಚು ಪೌಷ್ಟಿಕ ಆಹಾರ ಒಟ್ಟಾಗಿ ಬೇಡ
ಹಸಿರು ಬಾಳೆಹಣ್ಣು ಮತ್ತು ಅಡುಗೆ ಬಾಳೆಹಣ್ಣು ಸೇರಿದಂತೆ ಕೆಲವು ಹಣ್ಣುಗಳಲ್ಲಿ ಮತ್ತು ತರಕಾರಿಗಳಲ್ಲಿ ಬೇಬಿ ಕಾರ್ನ್, ಆಲೂಗಡ್ಡೆ, ಅಲಸಂದೆ ಕಾಳು ಮತ್ತು ಕಪ್ಪು ಕಾಳುಗಳಲ್ಲಿ ಪಿಷ್ಠದ ಅಂಶವನ್ನು ಹೊಂದಿದೆ. ಇಂತಹ ಹಣ್ಣು-ತರಕಾರಿಗಳನ್ನು ಎಂದಿಗೂ ಬ್ರುಕೋಲಿ, ಸೀಬೆಕಾಯಿ, ಒಣದ್ರಾಕ್ಷಿ, ಸೊಪ್ಪುಗಳ ಜತೆ ಮಿಶ್ರಣ ಮಾಡಿ ಸೇವಿಸಬಾರದು. ಕಾರಣ ನಿಮ್ಮ ದೇಹ ಪ್ರೋಟೀನ್ ಅನ್ನು ಜೀರ್ಣಿಸಿಕೊಳ್ಳಲು ಆಸಿಡ್ ಅಂಶದ ಅಗತ್ಯವಿದೆ ಮತ್ತು ಪಿಷ್ಠದ ಅಂಶವನ್ನು ಜೀರ್ಣಿಸಲು ಕ್ಷಾರಿಯ (ಅಲ್ಕೈನ್) ಅಗತ್ಯವಿದೆ.

ಹಣ್ಣುಗಳಿಂದಾಗುವ ತ್ವರಿತ ಪರಿಹಾರಗಳು
* ಒಂದು ಬಾರಿಗೆ 4ರಿಂದ 6 ಹಣ್ಣುಗಳನ್ನು ಸೇವಿಸಿ
* ನೀವು ಅತಿಯಾದ ಪ್ರೋಟಿನ್ ಅಂಶವಿರುವ ಆಹಾರ ಸೇವಿಸಿದ್ದರೆ ಮರುದಿನ ಬೆಳಿಗ್ಗೆ ಪಪ್ಪಾಯ ಹಣ್ಣನ್ನು ಸೇವಿಸಿ. ಈ ಹಣ್ಣಿನಲ್ಲಿರುವ ಪಪೈನ್ ಅಂಶ ಇದನ್ನು ನಿಯಂತ್ರಿಸುತ್ತದೆ.
* ಹೆಚ್ಚು ಉಪ್ಪಿನ ಅಂಶವಿರುವ ಆಹಾರ ಸೇವಿಸಿದ್ದರೆ ನೀರಿನ ಅಂಶವಿರುವ ಕಲ್ಲಂಗಡಿ, ಖರ್ಬೂಜದಂತ ಹಣ್ಣುಗಳನ್ನು ಸೇವಿಸಿ.
* ಹೆಚ್ಚು ಕಾರ್ಬ್ಸ ಅಂಶವಿರುವಂಥ ಆಹಾರ ಸೇವಿಸಿದ್ದರೆ ಮರುದಿನ ಬೆಳಿಗ್ಗೆ ಸೇಬು ಸೇವಿಸಿ.