For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಆರೋಗ್ಯಕ್ಕಾಗಿ ಈ ಆಹಾರಗಳನ್ನು ಮಿಸ್‌ ಮಾಡದಿರಿ

|

ಕಾಲಕ್ಕೆ ತಕ್ಕಂತೆ ನಮ್ಮ ಆಹಾರಕ್ರಮ ಬದಲಾಯಿಸಬೇಕಾಗುತ್ತದೆ. ಅದರಲ್ಲೂ ಸೀಸನಲ್ ಫುಡ್ಸ್ ಅಂದರೆ ಆ ಸಮಯದಲ್ಲಿ ದೊರೆಯುವಂಥ ಹಣ್ಣು-ಹಂಪಲುಗಳ ಸೇವನೆ ತುಂಬಾ ಒಳ್ಳೆಯದು. ಇದೀಗ ಬೇಸಿಗೆ ಕಾಲ. ಈ ಕಾಲದಲ್ಲಿ ನಾವು ದೇಹವನ್ನು ತಂಪಾಗಿಡುವ ಆಹಾರಗಳ ಸೇವನೆ ಮಾಡುವುದು ಒಳ್ಳೆಯದು.

Foods That Reduce Body Heat During Summer | Boldsky Kannada

ಇದೀಗ ಎಲ್ಲರೂ ಬರೀ ಕೊರೊನಾವೈರಸ್‌ ತಡೆಗಟ್ಟುವುದು ಹೇಗೆ ಎಂದು ಯೋಚಿಸಿ, ಇತರ ಆರೋಗ್ಯ ಸಮಸ್ಯೆಗಳತ್ತ ಹೆಚ್ಚಿನ ಗಮನ ನೀಡುತ್ತಿಲ್ಲ, ಪರಿಣಾಮ ಆ ಆರೋಗ್ಯ ಸಮಸ್ಯೆಗಳು ಕಾಡಲಾರಂಭಿಸುತ್ತವೆ.

Foods To Reduce Body Heat This Summer

ಬೇಸಿಗೆಯಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳನ್ನು ನಮ್ಮ ಆಹಾರಕ್ರಮದಲ್ಲಿ ಬದಲಾವಣೆ ತಂದು ಅಂದರೆ ದೇಹವನ್ನು ತಂಪಾಗಿಡುವ ಆಹಾರಗಳ ಸೇವನೆ ಮೂಲಕ ತಡೆಗಟ್ಟಬಹುದಾಗಿದೆ.

ಬೇಸಿಗೆಯಲ್ಲಿ ಬಾಡಿ ಹೀಟ್ ಅಂದರೆ ದೇಹದ ಉಷ್ಣತೆ ಹೆಚ್ಚಾಗುವ ಸಮಸ್ಯೆ ಕೆಲವರಲ್ಲಿ ಕಂಡು ಬರುತ್ತದೆ, ಹಾಗಂತ ಇದನ್ನು ನಿರ್ಲಕ್ಷ್ಯ ಮಾಡಿದರೆ ದೇಹದ ಅಂಗಾಂಗಗಳು, ಸ್ನಾಯುಗಳ ಸೆಳೆತ, ಬೆವರು ಸಾಲೆಗಳು, ಮೊಡವೆ, ತಲೆಸುತ್ತು, ವಾಂತಿ ಮುಂತಾದ ಗಂಭೀರವಾದ ಆರೋಗ್ಯ ಸಮಸ್ಯೆ ಉಂಟು ಮಾಡಬಹುದು.

ಬಿಸಿಲಿನಲ್ಲಿ ಹೊರಗಡೆ ತಿರುಗಾಡುವುದು, ಬಿಸಿಲಿನಲ್ಲಿ ಕೆಲಸ ಮಾಡುವುದು, ದೇಹದ ಉಷ್ಣತೆ ಹೆಚ್ಚು ಮಾಡುವ ಆಹಾರಗಳ ಸೇವನೆ, ಕಡಿಮೆ ಪ್ರಮಾಣದಲ್ಲಿ ನೀರು ಕುಡಿಯುವುದು ಇವೆಲ್ಲಾ ದೇಹದ ಉಷ್ಣತೆ ಹೆಚ್ಚು ಮಾಡುವುದು.

ದೇಹದ ಉಷ್ಣತೆ ಕಡಿಮೆ ಮಾಡಲು ದೇಹವನ್ನು ತಂಪಾಗಿಸುವ ಈ ಹಣ್ಣುಗಳನ್ನು ಸೇವಿಸಿ:

1. ಕಲ್ಲಂಗಡಿ ಹಣ್ಣು

1. ಕಲ್ಲಂಗಡಿ ಹಣ್ಣು

ಇದು ಬೇಸಿಗೆ ಕಾಲದಲ್ಲಿ ತುಂಬಾ ದೊರೆಯುತ್ತದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಆ್ಯಂಟಿಆಕ್ಸಿಡೆಂಟ್, ಅಮೈನೋ ಆಮ್ಲಗಳಿವೆ. ಇದರಲ್ಲಿ ನೀರಿನಂಶ ಕೂಡ ಅತ್ಯಧಿಕವಿದೆ. ಇದನ್ನು ತಿನ್ನುವುದರಿಂದ ದೇಹ ಉಷ್ಣತೆ ಕಾಪಾಡುವುದರ ಜೊತೆಗೆ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬಹುದು.

2. ಕರ್ಬೂಜ

2. ಕರ್ಬೂಜ

ಈ ಹಣ್ಣು ತಿಂದರೆ ದೇಹಕ್ಕೆ ತುಂಬಾ ತಂಪು, ಅಲ್ಲದೆ ನೀರಿನಂಶವೂ ಇದೆ. ಇದರಲ್ಲಿ ವಿಟಮನ್ಸ್, ಪೋಷಕಾಂಶಗಳು ಅದಿಕವಿದ್ದು ಬೇಸಿಗೆಕಾಲಕ್ಕೆ ಸೂಕ್ತವಾದ ಹಣ್ಣು ಇದಾಗಿದೆ.

3. ಸೌತೆಕಾಯಿ

3. ಸೌತೆಕಾಯಿ

ಸೌತೆಕಾಯಿ ಬೇಸಿಗೆಯಲ್ಲಿ ತಿನ್ನುವುದರಿಂದ ದೇಹವನ್ನು ತಂಪಾಗಿಡುವುದು ಮಾತ್ರವಲ್ಲ ತ್ವಚೆಯಲ್ಲಿ ಗುಳ್ಳೆಗಳು ಏಳುವುದನ್ನು ತಡೆಗಟ್ಟಬಹುದು. ಪ್ರತಿದಿನ ಎರಡು ಸೌತೆಕಾಯಿ ತಿನ್ನುವುದು ಒಳ್ಳೆಯದು.

4. ಪುದೀನಾ

4. ಪುದೀನಾ

ಪುದೀನಾ ಕೂಡ ದೇಹವನ್ನು ತಂಪಾಗಿ ಇಡುವುದು. ನೀರಿಗೆ ಸ್ವಲ್ಪ ಸೌತೆಕಾಯಿ, ಎರಡು ಎಲೆ ಪುದೀನಾ ಸ್ವಲ್ಪ ನಿಂಬೆ ರಸ ಹಾಕಿ ಕುಡಿಯಿರಿ, ದೇಹದ ಉಷ್ಣತೆ ಕಡಿಮೆಯಾಗುವುದು. ಇದನ್ನು ಜ್ಯೂಸ್ ಮಾಡಿದಾಗ ಕೂಡ ಹಾಕಿ ಕುಡಿಯಬಹುದು. ಟೀ ಜೊತೆ ಹಾಕಿ ಕುಡಿಯಿರಿ.

5. ಸೊಪ್ಪು ಮತ್ತು ತರಕಾರಿ

5. ಸೊಪ್ಪು ಮತ್ತು ತರಕಾರಿ

ನಿಮ್ಮ ಆಹಾರದ ಪ್ಲೇಟ್‌ ಸೊಪ್ಪು ಹಾಗೂ ತರಕಾರಿ ಹೆಚ್ಚಿರಲಿ. ಸೊಪ್ಪುಗಳು ಹಾಗೂ ಹಸಿರು ತರಕಾರಿಗಳನ್ನು ತಿನ್ನುವುದರಿಂದ ದೇಹ ತಂಪಾಗಿರುವುದು ಮಾತ್ರವಲ್ಲ ದೇಹಕ್ಕೆ ಅಗ್ಯತವಾದ ಪೋಷಕಾಂಶ ದೊರೆಯುವುದು ಹಾಗೂ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುವುದು.

6. ಎಳನೀರು

6. ಎಳನೀರು

ಬೇಸಿಗೆಯಲ್ಲಿ ಪ್ರತಿದಿನ ಒಂದು ಎಳನೀರು ಕುಡಿದರೆ ದೇಹಕ್ಕೆ ಖನಿಜಾಂಶಗಳು ದೊರೆಯುವುದರ ಜೊತೆಗೆ ಬೇಸಿಗೆಯಲ್ಲಿ ಹೆಚ್ಚಾಗಿ ಬರುವ ಚಿಕನ್‌ಪಾಕ್ಸ್ ಕೂಡ ತಡೆಗಟ್ಟಬಹುದು. ಎಳನೀರು ದೇಹದ ಉಷ್ಣತೆ ಕಡಿಮೆ ಮಾಡುವುದು.

7. ದಾಳಿಂಬೆ

7. ದಾಳಿಂಬೆ

ದಾಳಿಂಬೆಯಲ್ಲಿ ವಿಟಮನ್ಸ್ ಹಾಗೂ ಪೋಷಕಾಂಶಗಳು ಹಾಗೂ ಆ್ಯಂಟಿಆಕ್ಸಿಡೆಂಟ್‌ ಅಂಶಗಳಿವೆ, ಇದನ್ನು ತಿನ್ನುವುದು, ಇದರ ಜ್ಯೂಸ್ ಮಾಡಿ ಕುಡಿಯುವುದು ಮಾಡಿದರೆ ದೇಹ ತಂಪಾಗಿರುತ್ತದೆ.

8. ಈರುಳ್ಳಿ

8. ಈರುಳ್ಳಿ

ಈರುಳ್ಳಿಗೆ ದೇಹದ ಉಷ್ಣತೆ ಕಡಿಮೆ ಮಾಡುವ ಗುಣವಿದೆ. ತುಂಬಾ ಸೆಕೆ ಅನಿಸಿದಾಗ ಸ್ವಲ್ಪ ಮಜ್ಜಿಗೆಗೆ ಈರುಳ್ಳಿ ಕತ್ತರಿಸಿ ಹಾಕಿ, ಸ್ವಲ್ಪ ಉಪ್ಪು ಹಾಗೂ ಬೇಕಿದ್ದರೆ ಹಸಿ ಮೆಣಸಿನಕಾಯಿ ಕತ್ತರಿಸಿ ಹಾಕಿ ಸವಿಯಿರಿ ತುಂಬಾ ಹಿತ ಅನಿಸುವುದು.

9. ಮೆಂತೆ

9. ಮೆಂತೆ

ಇದನ್ನು ದೇಹದ ಉಷ್ಣತೆ ಕಡಿಮೆ ಮಾಡಲು ಮನೆಮದ್ದಾಗಿ ಬಳಸುತ್ತಾರೆ. ಯಾರಿಗೆ ಬಾಡ್‌ ಹೀಟ್‌ ಸಮಸ್ಯೆ ಇರುತ್ತದೆಯೋ ಅವರು ಒಂದು ಚಮಚ ಮೆಂತೆ ರಾತ್ರಿ ನೆನೆಹಾಕಿ ಬೆಳಗ್ಗೆ ಸೇವಿಸುವುದು ಒಳ್ಲೆಯದು. ಇದನ್ನು ಸೇವಿಸುವುದರಿಂದ ದೇಹದ ಉಷ್ಣತೆ ಹೆಚ್ಚಾಗಿ ಕಾಲು ಉರಿ ಉಂಟಾಗುವುದನ್ನು ತಡೆಗಟ್ಟಬಹುದು.

10 ಕಾಮಕಸ್ತೂರಿ

10 ಕಾಮಕಸ್ತೂರಿ

ಕಾಮಕಸ್ತೂರಿ ಕೂಡ ದೇಹವನ್ನು ತಂಪಾಗಿ ಇಡುತ್ತದೆ. ಇದನ್ನು ರಾತ್ರಿ ನೆನೆ ಹಾಕಿ ಬೆಳಗ್ಗೆ ಕುಡಿದರೆ ದೇಹದ ಉಷ್ಣತೆ ಹೆಚ್ಚಾಗಿ ಉಂಟಾಗುವ ಮಲಬದ್ಧತೆ ಸಮಸ್ಯೆ ಕೂಡ ಹೋಗಲಾಡಿಸಬಹುದು. ಇದು ದೇಹದ ತೂಕ ಇಳಿಸುವಲ್ಲಿಯೂ ಸಹಕಾರಿ.

11. ಸೋಂಪು ಮತ್ತು ಜೀರಿಗೆ

11. ಸೋಂಪು ಮತ್ತು ಜೀರಿಗೆ

ಸೋಂಪು ಮತ್ತು ಜೀರಿಗೆ ಕೂಡ ದೇಹದ ಉಷ್ಣತೆ ಕಡಿಮೆ ಮಾಡುತ್ತದೆ. ಕೆಲವರಿಗೆ ದೇಹದ ಉಷ್ಣತೆ ಹೆಚ್ಚಾದಾಗ ಹೊಟ್ಟೆ ನೋವು ಉಂಟಾಗುವುದು, ಆಗ ಜೀರಿಗೆ ನೀರು ಮಾಡಿ ಕುಡಿಯಿರಿ, ತಕ್ಷಣ ಕಡಿಮೆಯಾಗುವುದು. ಇನ್ನು ಆಹಾರದ ಬಳಿಕ ಸ್ವಲ್ಪ ಸೋಂಪು ಬಾಯಿಗೆ ಹಾಕಿದರೆ ಜೀರ್ಣಕ್ರಿಯೆಗೆ ಕೂಡ ಒಳ್ಳೆಯದು.

12. ಮಜ್ಜಿಗೆ

12. ಮಜ್ಜಿಗೆ

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಮಜ್ಜಿಗೆ ತುಂಬಾ ಸಹಕಾರಿ. ದಿನದಲ್ಲಿ 2-3 ಲೋಟ ಮಜ್ಜಿಗೆ ಕುಡಿಯಿರಿ, ದೇಹಕ್ಕೆ ತುಂಬಾ ಒಳ್ಳೆಯದು. ಕೆಲವರು ಮಜ್ಜಿಗೆ ಸ್ವಲ್ಪ ರಾಗಿ ಹಾಕಿ ಅಂಬಳಿ ಮಾಡಿ ಕುಡಿಯಿರಿ. ಇದರಿಂದ ದೇಹ ತಂಪಾಗಿ ಇರುತ್ತದೆ.

ಸಲಹೆ: ಬಾಡಿ ಹೀಟ್‌ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ಮಾಡಬೇಡಿ. ಇನ್ನು ಮೈ ಮೇಲೆ ಬೊಬ್ಬೆಗಳು ಎದ್ದಿದ್ದರೆ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಿರಿ. ಬಿಸಿಲಿನಲ್ಲಿ ಓಡಾಡಬೇಡಿ. ಕೆಲಸ-ಕಾರ್ಯಗಳನ್ನು ಮುಂಜಾನೆಯಿಂದ 10 ಗಂಟೆಯವರೆಗೆ ನಮತರ ಸಂಜೆ 4 ಗಂಟೆಯ ಬಳಿಕ ಮಾಡಿ. ತುಂಬಾ ಬಿಸಿಲು ಇರುವಾಗ ಮನೆಯಲ್ಲಿಯೇ ಇರಿ.

English summary

Foods To Reduce Body Heat This Summer

As summer is upon us, it is time to prepare your body and reduce body heat. Here are a few healthy foods that can reduce body heat. Include these foods in your summer diet to remain healthy and cool.
X
Desktop Bottom Promotion