For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ತಿನ್ನಬೇಕಾದ 5 ಆಹಾರಗಳಿವು

|

ಚಳಿಗಾಲ ಎಂದರೆ ಒಣಹವೆ ಖಚಿತ. ಈ ಸಮಯದಲ್ಲಿ ಹೀರಿಕೊಳ್ಳಲು ಗಾಳಿಯಲ್ಲಿ ಆರ್ದ್ರತೆಯೇ ಇರದ ಕಾರಣ, ನಮ್ಮ ತ್ವಚೆ ಒಣಗುತ್ತದೆ ಹಾಗೂ ದೇಹದಲ್ಲಿ ನಿರ್ಜಲೀಕರಣವೂ ಎದುರಾಗಬಹುದು. ಆದ್ದರಿಂದ ಇದಕ್ಕಾಗಿ ಸೂಕ್ತ ತಯಾರಿ ನಡೆಸುವುದೇ ಜಾಣತನದ ಕ್ರಮವಾಗಿದೆ. ಚಳಿಗಾಲದಲ್ಲಿ ದೇಹದಿಂದ ಹೊರಹರಿವ ಬೆವರಿನ ಪ್ರಮಾಣವೂ ಇಳಿಮುಖವಾಗುವ ಕಾರಣ ದೇಹದ ನೀರಿನಂಶವನ್ನು ಸೂಕ್ತ ಮಟ್ಟಗಳಲ್ಲಿ ಸಮತೋಲನ ಸಾಧಿಸುವ ಮೂಲಕ ಎಲ್ಲಾ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ಬೇಸಿಗೆಯಲ್ಲಿ ನಾವು ನೀರನ್ನು ಕುಡಿಯುತ್ತಿರಲು ಮತ್ತು ತೇವಕಾರಕಗಳನ್ನು ಹಚ್ಚಿಕೊಳ್ಳಲು ಹೆಚ್ಚಿನ ಆದ್ಯತೆ ನೀಡುತ್ತಿದ್ದರೂ, ಚಳಿಗಾಲದಲ್ಲಿ ಕೆಲವೊಮ್ಮೆ ನೀರನ್ನು ಕುಡಿಯುವುದನ್ನೇ ನಾವು ಮರೆಯುತ್ತೇವೆ. ಇದು ನಿಮ್ಮ ರೋಗ ನಿರೋಧಕ ಶಕ್ತಿ, ದೇಹದ ಉಷ್ಣತೆ, ಕೀಲು ನೋವು ಇತ್ಯಾದಿಳ ಮೇಲೆ ಪ್ರಭಾವ ಬೀರಬಹುದು. ಅಂತಹ ಸಮಸ್ಯೆಗಳು ಎದುರಾಗದಂತೆ ಇರಲು ಚಳಿಗಾಲದ ಸಮಯದಲ್ಲಿಯೂ ಸಹ ದೇಹದಲ್ಲಿ ಸಾಕಷ್ಟು ನೀರಿನಂಶ ಇರುವುದು ಅಗತ್ಯ. ಈ ಕಾರ್ಯವನ್ನು ಸುಲಭವಾಗಿಸಲು ಕೆಲವು ಆಹಾರಗಳು ಸೂಕ್ತವಾಗಿವೆ. ಇವು ಯಾವುವು ಎಂಬುದನ್ನು ನೋಡೋಣ:

ಪಾಲಕ್ ಸೊಪ್ಪು ಅಥವಾ ಬಸಲೆ ಸೊಪ್ಪು:

ಪಾಲಕ್ ಸೊಪ್ಪು ಅಥವಾ ಬಸಲೆ ಸೊಪ್ಪು:

ಅತ್ಯಂತ ಪೌಷ್ಟಿಕ ಆಹಾರವಾಗಿರುವ ಬಸಲೆ ಸೊಪ್ಪು ಅಥವಾ ಪಾಲಕ್ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಅತ್ಯಂತ ಹೆಚ್ಚಾಗಿರುವ ಕಾರಣ ನಮ್ಮ ತ್ವಚೆ ಮತ್ತು ಕೂದಲಿಗೆ ಅದ್ಭುತವಾದ ಆರೈಕೆ ನೀಡುವ ಜೊತೆಗೇ, ಚಳಿಗಾಲದಲ್ಲಿ ನಿಮ್ಮ ದೇಹದಲ್ಲಿ ನೀರನ್ನು ಉಳಿಸಿಕೊಳ್ಳಲು ನೆರವಾಗುವ ಅತ್ಯಂಅ ಅದ್ಭುತ ಆಹಾರವೂ ಆಗಿದೆ. ಈ ಎಲೆಗಳು ದಪ್ಪನಾಗಿದ್ದಷ್ಟೂ ಇದರಲ್ಲಿರುವ ನೀರಿನಂಶ ಹೆಚ್ಚು. ನಂಬಲರ್ಹ ಆರೋಗ್ಯ ವರದಿಗಳ ಪ್ರಕಾರ ಹಸಿರು ಎಲೆಗಳಲ್ಲಿ ತರಕಾರಿ ಶೇಕಡಾ 90 ಕ್ಕಿಂತ ಹೆಚ್ಚು ನೀರಿನ ಅಂಶವನ್ನು ಹೊಂದಿರುತ್ತದೆ. ಇದಲ್ಲದೆ, ಇದು ಲ್ಯೂಟೀನ್, ಪೊಟ್ಯಾಸಿಯಮ್, ಕರಗದ ನಾರು, ಮತ್ತು ಮೆದುಳಿಗೆ ಚುರುಕುತನವನ್ನು ನೀಡುವ ಫೋಲೇಟ್ ಮತ್ತು ವಿಟಮಿನ್ ಇ ಮುಂತಾದ ಅಂಶಗಳಿಂದ ಕೂಡಿದೆ. ಇವೆಲ್ಲವೂ ಒಟ್ಟಾಗಿ ಪಾಲಕ್ ಅಥವಾ ಬಸಲೆ ಸೊಪ್ಪುಗಳನ್ನು ಚಳಿಗಾಲದಲ್ಲಿ ಹೇರಳವಾಗಿ ಸೇವಿಸಲು ಸೂಕ್ತವಾದ ಆಹಾರವಾಗಿಸುತ್ತದೆ.

ಟೊಮಾಟೋ

ಟೊಮಾಟೋ

ಪ್ರಪಂಚದಾದ್ಯಂತದ ಅಡುಗೆಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ಟೊಮೆಟೊ ವಾಸ್ತವವಾಗಿ ಒಂದು ಹಣ್ಣು, ಆದರೆ ನಾವು ಇದನ್ನು ತರಕಾರಿಯಂತೆ ಬಳಸುತ್ತಿದ್ದೇವೆ. ಟೊಮಾಟೋ ಅಡುಗೆಯ ರುಚಿಯನ್ನು ಹೆಚ್ಚಿಸುವ ಜೊತೆಗೇ ಖಾದ್ಯವನ್ನು ಸಾಂದ್ರೀಕೃತಗೊಳಿಸಲೂ ನೆರವಾಗುತ್ತದೆ. ಸಾಮಾನ್ಯವಾಗಿ ಟೊಮಾಟೋ ಹಣ್ಣೇ ಆಗಿದ್ದರೂ ಇದರ ರುಚಿಯಿಂದಾಗಿ ಹಣ್ಣಿನ ರೂಪದಲ್ಲಿ ಹೆಚ್ಚಿನವರು ಸೇವಿಸಲು ಇಷ್ಟಪಡುವುದಿಲ್ಲ. ವಾಸ್ತವ ಎಂದರೆ ಈ ಹಣ್ಣಿನಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ನೀರಿನ ಅಂಶವಿದೆ, ಅದು ದೇಹವನ್ನು ಒಳಗಿನಿಂದ ಪೋಷಿಸಲು ಅನುವು ಮಾಡಿಕೊಡುತ್ತದೆ. ತೂಕ ಇಳಿಕೆಗೆ ಸಹಾಯ ಮಾಡುವ ಜನಪ್ರಿಯ ಆಹಾರವಾದ ಟೊಮೆಟೊವನ್ನು ಹಸಿಯಾಗಿಯೂ, ಬೇಯಿಸಿದ ಮತ್ತು ಇತರ ಆಹಾರ ಪದಾರ್ಥಗಳೊಂದಿಗೆ ಬೆರೆಸಿಯೂ ಸೇವಿಸಬಹುದು. ಟೊಮೆಟೊವನ್ನು ಅಡುಗೆಯಲ್ಲಿ ಬಳಸುವುದು ನಮ್ಮ ದೇಶದಲ್ಲಿ ಶತಮಾನಗಳಿಂದ ಜನಪ್ರಿಯವಾಗಿವೆ.

ದೊಣ್ಣೆ ಮೆಣಸು

ದೊಣ್ಣೆ ಮೆಣಸು

ದೊಣ್ಣೆ ಮೆಣಸು ಹೆಸರೇ ತಿಳಿಸುವಂತೆ ಹೊಟ್ಟೆ ಡುಬ್ಬವಾಗಿರುವ ಹಸಿಮೆಣಸಿನಂತೆ ಕಾಣುವ ಮೆಣಸಿನ ಒಂದು ಪ್ರಬೇಧ. ಇದು ಕೆಲವಾರು ಬಣ್ಣಗಳಲ್ಲಿ ದೊರಕುತ್ತದೆ. ಹಸಿರು, ಹಳದಿ, ಕಿತ್ತಳೆ ಮತ್ತು ಕೆಂಪು. ವಾಸ್ತವದಲ್ಲಿ, ಇವೆಲ್ಲವೂ ದೊಣ್ಣೆ ಮೆಣಸು ಕಾಯಾಗಿದ್ದಿನಿಂದ ಬಲಿಯುವವರೆಗೂ ಪಡೆಯುವ ಬಣ್ಣಗಳೇ ಹೊರತು ಬೇರೆ ಬೇರೆ ವಿಧಗಳಲ್ಲ. ನಾವು ಆಹಾರದ ಸೊಗಸು ಹೆಚ್ಚಿಸಲಿಕ್ಕಾಗಿಯೇ ಈ ಬಣ್ಣ ಬಣ್ಣದ ದೊಣ್ಣೆ ಮೆಣಸುಗಳನ್ನು ಸೊಗಸಾಗಿ ಕತ್ತರಿಸಿ ಅಡುಗೆಯ ಚೆಂದವನ್ನು ಹೆಚ್ಚಿಸುತ್ತೇವೆ. ವಾಸ್ತವದಲ್ಲಿ, ಹಸಿರು ದೊಣ್ಣೆಮೆಣಸು ಎಳತಾಗಿದ್ದು ಹಸಿಯಾಗಿಯೇ ತಿನ್ನಬಹುದಾದ, ಖಾರವೇ ಇಲ್ಲದ ಮೆಣಸಾಗಿದೆ. ಅಲ್ಲದೇ ಇದರಲ್ಲಿರುವುದು ಬಹುತೇಕ ನೀರಿನಂಶ! (ನಿಖರವಾಗಿ 93.9%) ಇದೇ ಕಾರಣಕ್ಕೆ ಹಸಿರು ದೊಣ್ಣೆಮೆಣಸನ್ನು ಸಲಾಡ್ ರೂಪದಲ್ಲಿ ಸೇವಿಸಿದಾಗ ದೇಹಕ್ಕೆ ಹೆಚ್ಚಿನ ನೀರಿನಂಶ ದೊರಕುತ್ತದೆ. ಇದರ ಜೊತೆಗೇ ವಿಟಮಿನ್ ಸಿ, ಬಿ6, ಬೀಟಾ ಕ್ಯಾರೋಟೀನ್, ಫೋಲಿಕ್ ಆಮ್ಲ ಹಾಗೂ ಥಿಯಾಮಿನ್ ಮೊದಲಾದ ಪೋಷಕಾಂಶಗಳೂ ಇವೆ.

ಹೂಕೋಸು

ಹೂಕೋಸು

ಹೂಕೋಸಿನಿಂದ ಹಲವಾರು ಬಗೆಗಳ ಖಾದ್ಯಗಳನ್ನು ತಯಾರಿಸಬಹುದು. ವೈವಿಧ್ಯತೆಯ ಹೊರತಾಗಿ, ಈ ತರಕಾರಿ ಅದ್ಭುತವಾದ ಪರಿಮಳವನ್ನೂ ಹೊಂದಿದೆ. ಆಲುಗಡ್ಡೆ ಸಹಿತ ಇದು ಇತರ ಆಹಾರ ಧಾನ್ಯಗಳು ಮತ್ತು ತರಕಾರಿಗಳೊಂದಿಗೆ ಚೆನ್ನಾಗಿ ಜೊತೆಯಾಗುತ್ತದೆ. ಆದರೆ ಉತ್ತಮ ಅಂಶವೆಂದರೆ ಅದರ ವೈವಿಧ್ಯತೆಯಲ್ಲ, ಬದಲಿಗೆ ಇದರಲ್ಲಿರುವ ನೀರಿನಂಶ! ಈ ಅಂಶವೇ ಹೂಕೋಸನ್ನು ಅತ್ಯುತ್ತಮ ಜಲಸಂಚಯ ಪೂರಕ ಆಹಾರ ಪದಾರ್ಥವನ್ನಾಗಿಸುತ್ತದೆ. ನಂಬಲರ್ಹ ವರದಿಗಳ ಪ್ರಕಾರ, ಒಂದು ಕಪ್ ನಷ್ಟು ಹೂಕೋಸಿನಲ್ಲಿ ನಮಗೆ 50 ಮಿಲಿಗಿಂತ ಹೆಚ್ಚು ನೀರಿನಂಶ ಲಭಿಸುತ್ತದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಸಸ್ಯಾಹಾರವೇ ಆಗಲಿ ಮಾಂಸಾಹಾರವೇ ಆಗಲಿ, ಅಡುಗೆಗೆ ಆಲಿವ್ ಎಣ್ಣೆ ಅತ್ಯುತ್ತಮವಾದದ್ದು ಎಂದು ನಮಗೆಲ್ಲರಿಗೂ ತಿಳಿದಿದೆ. ವಿಟಮಿನ್ ಇ ಮತ್ತು ಉತ್ತಮ ಕೊಬ್ಬಿನಂತಹ ಪೋಷಕಾಂಶಗಳನ್ನು ಹೊಂದಿರುವ ಈ ಎಣ್ಣೆಯ ಸೇವನೆಯಿಂದ ನಮ್ಮ ದೇಹದ ಒಳಗಿನಿಂದ ಅತ್ಯುತ್ತಮ ಪರಿಣಾಮ ದೊರಕುತ್ತದೆ. ಅಲ್ಲದೇ ಈ ತೈಲ ದೇಹದ ಹೊರಗಿನಿಂದಲೂ ಆರೈಕೆಯನ್ನು ನೀಡುತ್ತದೆ. ಚರ್ಮದ ಮೇಲೆ ಎಣ್ಣೆಯನ್ನು ಹಚ್ಚಿಕೊಳ್ಳುವ ಮೂಲಕ, ನಮ್ಮ ತ್ವಚೆಯನ್ನು ಪರಿಪೂರ್ಣವಾಗಿ ಪೋಷಿಸಲು ನಮಗೆ ಸಾಧ್ಯವಾಗದೇ ಇರಬಹುದು. ಆದ್ದರಿಂದ ನಮ್ಮ ಚರ್ಮವನ್ನು ಹೊಳೆಯುವಂತೆ ಮಾಡಲು ಮತ್ತು ಚಳಿಗಾಲದಲ್ಲಿ ತ್ವಚೆ ಒಣಗದಂತೆ ನೋಡಿಕೊಳ್ಳಲು ತೇವಕಾರಕ ಎಣ್ಣೆಗಳಾದ ಆಲಿವ್ ಎಣ್ಣೆಯನ್ನು ಸೇವಿಸುವುದೂ ಅಗತ್ಯವಿರುತ್ತದೆ.

English summary

Foods To Keep Yourself Hydrated During Winters

Have these foods to keep yourself hydrated during winter, read on.
X