For Quick Alerts
ALLOW NOTIFICATIONS  
For Daily Alerts

ಪ್ರತಿದಿನ ನಾವು ಕೊಬ್ಬಿನಂಶದ ಆಹಾರ ಸೇವಿಸದಿದ್ದರೆ ದೇಹಕ್ಕೆ ಏನಾಗುತ್ತೆ ಗೊತ್ತಾ?

|

ತುಪ್ಪನಾ? ಬೇಡ್ವೆ ಬೇಡ...ತುಪ್ಪ ತಿಂದ್ರೆ ದಪ್ಪಗಾಗುತ್ತೇನೆ, ಚೀಸ್‌.. ಬೆಣ್ಣೆ ಯಾವುದೂ ಬೇಡ, ಏಕೆಂದರೆ ಕೊಬ್ಬಿನಂಶ ತಿಂದರೆ ದಪ್ಪಗಾಗುತ್ತೇನೆ ಎಂದು ಡಯಟ್‌ ಬಗ್ಗೆ ಸರಿಯಾ ತಿಳುವಳಿಕೆ ಇಲ್ಲದವರಷ್ಟೇ ಹೇಳುತ್ತಾರೆ. ಏಕೆಂದರೆ ನಮ್ಮ ದೇಹಕ್ಕೆ ಕೊಬ್ಬಿನಂಶ ಕೂಡ ಪ್ರೊಟೀನ್‌ನಷ್ಟೇ ಅವಶ್ಯಕ. ದೇಹದಲ್ಲಿ ಕೊಬ್ಬಿನಂಶ ಕಡಿಮೆಯಾದರೆ ಕಾಯಿಲೆ ಉಂಟಾಗುವುದು.

Fat Deficiency

ದೇಹದಲ್ಲಿ ಕೊಬ್ಬಿನಂಶ ಕಡಿಮೆಯಾದರೆ ಕಂಡು ಬರುವ ಲಕ್ಷಣಗಳೇನು? ಕೊಬ್ಬಿನಂಶ ಏಕೆ ಅವಶ್ಯಕ? ದಿನದಲ್ಲಿ ಎಷ್ಟು ಪ್ರಮಾಣದಲ್ಲಿ ಕೊಬ್ಬಿನಂಶ ಸೇವಿಸಬೇಕು ಎಂಬೆಲ್ಲಾ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ. ಕೊಬ್ಬಿನಂಶದ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ಅಂಶಗಳಿವು ನೋಡಿ:

 ನಿಮ್ಮ ದೇಹದಲ್ಲಿ ಕೊಬ್ಬಿನಂಶ ಅವಶ್ಯಕ ಏಕೆ?

ನಿಮ್ಮ ದೇಹದಲ್ಲಿ ಕೊಬ್ಬಿನಂಶ ಅವಶ್ಯಕ ಏಕೆ?

ದೇಹವು ವಿಟಮಿನ್ಸ್‌ ಹೀರಿಕೊಳ್ಳಲು ಅವಶ್ಯಕ: ವಿಟಮಿನ್‌ ಎ, ಡಿ, ಇ ಮತ್ತು ಕೆ ಇವುಗಳನ್ನು ಮ್ಮ ದೇಹ ಹೀರಿಕೊಳ್ಳಲು ಕೊಬ್ಬಿನಂಶ ಅವಶ್ಯಕ. ಕೊಬ್ಬಿನಂಶದ ಕೊರತೆ ಉಂಟಾದರೆ ದೇಹವು ವಿಟಮಿನ್‌ ಹೀರಿಕೊಳ್ಳುವುದಿಲ್ಲ, ಇದರಿಂದ ವಿಟಮಿನ್ಸ್‌ ಕೊರತೆ ಉಂಟಾಗುವುದು.

ಜೀವ ಕಣಗಳ ಬೆಳವಣಿಗೆಗೆ ಅವಶ್ಯಕ: ಕೊಬ್ಬಿನಂಶ ದೇಹದ ಪ್ರತಿಯೊಂದು ಜೀವ ಕಣಗಳ ರಕ್ಷಣೆ ಮಾಡುತ್ತದೆ.

ಮೆದುಳು ಹಾಗೂ ಕಣ್ಣಿನ ಆರೋಗ್ಯಕ್ಕೆ ಅವಶ್ಯಕ: ಒಮೆಗಾ 3 ಕೊಬ್ಬಿನಾಮ್ಲ ಮೆದುಳು ಹಾಗೂ ಕಣ್ಣಿನ ಆರೋಗ್ಯಕ್ಕೆ ಅವಶ್ಯಕ. ಆದರೆ ಒಮೆಗಾ 3 ಕೊಬ್ಬಿನಂಶ ನಮ್ಮ ದೇಹ ಉತ್ಪಾದಿಸುವುದಿಲ್ಲ, ಅದನ್ನು ಆಹಾರದಿಂದಲೇ ಪಡೆಯಬೇಕು. ಒಮೆಗಾ 3 ಮೀನಿನಲ್ಲಿ, ಅಗಸೆ ಬೀಜಗಳಲ್ಲಿ ಇರುತ್ತದೆ.

ಗಾಯವನ್ನು ಒಣಗಿಸುತ್ತೆ: ಗಾಯವಾದರೆ ಅದು ಬೇಗ ಒಣಗಲು ಕೊಬ್ಬಿನಂಶ ಅವಶ್ಯಕವಾಗಿದೆ.

ಹಾರ್ಮೋನ್‌ಗಳ ಉತ್ಪತ್ತಿಗೆ ಅವಶ್ಯಕ: ನಮ್ಮ ದೇಹವು ಕೆಲವೊಂದು ಬಗೆಯ ಹಾರ್ಮೋನ್‌ಗಳನ್ನು ಉತ್ಪತ್ತಿ ಮಾಡಲು ಅದರಲ್ಲೂ ಸೆಕ್ಸ್ ಹಾರ್ಮೋನ್‌ಗಳಾದ ಟೆಸ್ಟೋಸ್ಟಿರೋನೆ ಮತ್ತು ಈಸ್ಟ್ರೋಜಿನ್ ಉತ್ಪತ್ತಿಗೆ ಕೊಬ್ಬಿನಂಶ ಅವಶ್ಯಕ.

ದೇಹದಲ್ಲಿ ಶಕ್ತಿ ಹೆಚ್ಚಲು: ಒಂದು ಗ್ರಾಂ ಕೊಬ್ಬಿನಂಶ ತಿಂದ್ರೆ 9 ಕ್ಯಾಲೋರಿಯಷ್ಟು ಶಕ್ತಿ ದೊರೆಯುವುದು. ಅದೇ ಒಂದು ಗ್ರಾಂ ಕಾರ್ಬೋಹೈಡ್ರೇಟ್ಸ್ ಬರೀ 4 ಕ್ಯಾಲೋರಿಯಷ್ಟು ಶಕ್ತಿಯನ್ನು ನೀಡುವುದು.

ಕೊಬ್ಬಿನ ವಿಧಗಳು

ಕೊಬ್ಬಿನ ವಿಧಗಳು

ಟ್ರಾನ್ಸ್‌ ಫ್ಯಾಟ್‌

ಟ್ರಾನ್ಸ್‌ ಫ್ಯಾಟ್ ಆರೋಗ್ಯಕ್ಕೆ ಒಳ್ಳೆಯ ಕೊಬ್ಬಿನಂಶವಲ್ಲ. ನಮ್ಮ ದೇಹಕ್ಕೆ ಟ್ರಾನ್ಸ್‌ ಫ್ಯಾಟ್‌ನ ಅವಶ್ಯಕತೆಯಿಲ್ಲ. ಟ್ರಾನ್ಸ್‌ ಫ್ಯಾಟ್‌ ಕೊಬ್ಬಿನಂಶ ಹೆಚ್ಚಾಗಿ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆ, ಪಾರ್ಶ್ವವಾಯು, ಟೈಪ್‌ 2 ಮಧುಮೇಹ ಉಂಟಾಗುವುದು.

ಟ್ರಾನ್ಸ್‌ ಫ್ಯಾಟ್‌ ಕೊಬ್ಬಿನಂಶ ಈ ಬಗೆಯ ವಸ್ತುಗಳಲ್ಲಿ ಹೆಚ್ಚಾಗಿ ಇರುತ್ತದೆ:

* ಸಂಸ್ಕರಿಸಿದ ಆಹಾರ ( ಪಾಪ್‌ಕಾರ್ನ್‌, ಫ್ರೋಝನ್‌ ಪಿಜ್ಜಾ, ಮುಂತಾದವು)

* ಕೇಕ್ಸ್, ಕುಕ್ಕೀಸ್‌ ಈ ಬಗೆಯ ಆಹಾರಗಳು

* ಕರಿದ ಪದಾರ್ಥಗಳು

* ವನಸ್ಪತಿ

ಸ್ಯಾಚುರೇಟಡ್‌ ಫ್ಯಾಟ್/ ಸಂಸ್ಕರಿಸಿದ ಕೊಬ್ಬಿನಂಶ

ಸ್ಯಾಚುರೇಟಡ್‌ ಫ್ಯಾಟ್/ ಸಂಸ್ಕರಿಸಿದ ಕೊಬ್ಬಿನಂಶ

ಸ್ಯಾಚುರೇಟಡ್‌ ಫ್ಯಾಟ್‌ ಮಾಂಸ, ಮೊಟ್ಟೆ, ಹಾಲಿನ ಉತ್ಪನ್ನಗಳಲ್ಲಿರುತ್ತದೆ. ಪ್ರತಿದಿನ ನಮ್ಮ ಆಹಾರದಲ್ಲಿ ಶೇ.10ರಷ್ಟು ಸ್ಯಾಚುರೇಟಡ್ ಕೊಬ್ಬಿನಂಶ ಇದ್ದರೆ ಒಳ್ಳೆಯದು ಎಂದು USDA ಸಲಹೆ ನೀಡಿದೆ. ಅನ್‌ಸ್ಯಾಚುರೇಟಡ್‌ ಫ್ಯಾಟ್‌ ಬದಲಿಗೆ ಸ್ಯಾಚುರೇಟಡ್‌ ಫಯಾಟ್‌ ತಿನ್ನುವುದರಿಂದ ಹೃದಯಾಘಾತ ಅಪಾಯ ಕಡಿಮೆಯಾಗುವುದು.

ಮೋನೋಸ್ಯಾಚುರೇಟಡ್ ಫ್ಯಾಟ್ಸ್‌

ಇದು ರೂಮಿನ ಉಷ್ಣತೆಯಲ್ಲಿ ದ್ರವ ರೂಪದಲ್ಲಿ ಇರುತ್ತದೆ.

* ಆಲೀವ್‌ ಎಣ್ಣೆ, ಸಾಸಿವೆ ಎಣ್ಣೆ, ಸನ್‌ ಫ್ಲವರ್ ಎಣ್ಣೆ ಇವುಗಳಲ್ಲಿ ಇರುತ್ತದೆ.

* ನಟ್ಸ್‌ನಲ್ಲಿರುತ್ತದೆ ( ಬಾದಾಮಿ, ಕಡಲೆ ಎಣ್ಣೆ, ವಾಲ್ನಟ್‌,ಗೋಡಂಬಿ )

* ನಟ್‌ ಬಟರ್ (ಪೀನಟ್ ಬಟರ್, ಆಲ್ಮೋಂಡ್‌ ಬಟರ್)

* ಬೆಣ್ಣೆ ಹಣ್ಣು

 ಪಾಲಿಅನ್‌ಸ್ಯಾಚುರೇಟಡ್‌ ಫ್ಯಾಟ್ಸ್‌

ಪಾಲಿಅನ್‌ಸ್ಯಾಚುರೇಟಡ್‌ ಫ್ಯಾಟ್ಸ್‌

ಇವುಗಳನ್ನು ನಮ್ಮ ದೇಹ ಉತ್ಪತ್ತಿ ಮಾಡುವುದಿಲ್ಲ. ಇವುಗಳನ್ನು ನಾವು ಆಹಾರದ ಮೂಲಕ ಸೇವಿಸಬೇಕು. ಈ ಕೊಬ್ಬಿನಂಶಗಳು ತುಂಬಾನೇ ಅವಶ್ಯಕವಾಗಿದೆ. ಒಮೆಗಾ 3 ಕೊಬ್ಬಿನಂಶ ಪಾಲಿಅನ್‌ಸ್ಯಾಚುರೇಟಡ್‌ ಆಗಿದ್ದು ಇದು ಹೃದಯದ ಆರೋಗ್ಯಕ್ಕೆ ತುಂಬಾನೇ ಅವಶ್ಯಕ ಜೊತೆಗೆ ರಕ್ತದೊತ್ತಡವನ್ನು ಸಮತೋಲನಲ್ಲಿರುತ್ತದೆ.

ಒಮೆಗಾ 3 ಕೊಬ್ಬಿನಂಶ ಈ ಆಹಾರಗಳಿಂದ ದೊರೆಯುತ್ತದೆ

* ಮೀನು

* ಮೃದ್ವಂಗಿಗಳು

* ಅಗಸೆ ಬೀಜ

* ಚಿಯಾ ಬೀಜ

* ವಾಲ್ನಟ್

ದೇಹದಲ್ಲಿ ಕೊಬ್ಬಿನಂಶದ ಕೊರತೆ ಉಂಟಾದರೆ ಕಂಡು ಬರುವ ಲಕ್ಷಣಗಳು

ದೇಹದಲ್ಲಿ ಕೊಬ್ಬಿನಂಶದ ಕೊರತೆ ಉಂಟಾದರೆ ಕಂಡು ಬರುವ ಲಕ್ಷಣಗಳು

* ಆಗಾಗ ತಿನ್ನಬೇಕೆನಿಸುವುದು

* ಹೊಟ್ಟೆಯಲ್ಲಿ ಉರಿ

* ಸಿಸ್ಟಿಕ್‌ ಫೈಬ್ರೋಸಿಸ್

* ಮೇದೋಜ್ಜೀರಕ ಗ್ರಂಥಿಯ ಕೊರತೆ

ವಿಟಮಿನ್‌ ಕೊರತೆ ಉಂಟಾಗುವುದು

* ಇರಳು ಕುರುಡುತನ

* ಬಂಜೆತ

* ಗಂಟಲಿನಲ್ಲಿ ಊತ

* ಮೈಯಲ್ಲಿ ಗುಳ್ಳೆಗಳು ಏಳುವುದು

* ಕೂದಲು ಡ್ರೈಯಾಗುವುದು

* ಹಲ್ಲುಗಳು ಸಡಿಲವಾಗುವುದು

* ಖಿನ್ನತೆ ಉಂಟಾಗುವುದು

* ಸ್ನಾಯುಗಳಲ್ಲಿ ನೋವು ಕಂಡು ಬರುವುದು

* ಉಗುರಿನ ಕೆಳಗಡೆ ರಕ್ತ ಹೆಪ್ಪುಗಟ್ಟುವುದು

 ತ್ವಚೆ ಸಮಸ್ಯೆ ಕಂಡು ಬರುವುದು

ತ್ವಚೆ ಸಮಸ್ಯೆ ಕಂಡು ಬರುವುದು

ದೇಹದಲ್ಲಿ ಕೊಬ್ಬಿನಂಶದ ಕೊರತೆ ಉಂಟಾದರೆ ತ್ವಚೆ ಡ್ರೈಯಾಗುವುದು, ಮೈಯಲ್ಲಿ ಗುಳ್ಳೆಗಳು ಕಂಡು ಬರುವುದು.

ಗಾಯ ನಿಧಾನಕ್ಕೆ ಒಣಗುವುದು

ವಿಟಮಿನ್‌ ಎ ಮತ್ತು ವಿಟಮಿನ್‌ ಡಿ ಕೊರತೆಯಿಂದಾಗಿ ಗಾಯವಾದರೆ ಬೇಗನೆ ಒಣಗುವುದಿಲ್ಲ.

ಕೂದಲು ಉದುರುವುದು

ದೇಹದಲ್ಲಿ ಕೊಬ್ಬಿನಂಶದ ಕೊರತೆ ಉಂಟಾದರೆ ಕೂದಲು ತುಂಬಾನೇ ಉದುರುವುದು. ಕೂದಲು ಒರಟಾಗುವುದು.

ಆಗಾಗ ಕಾಯಿಲೆ ಬೀಳುವುದು

ದೇಹದಲ್ಲಿ ಒಳ್ಳೆಯ ಕೊಬ್ಬಿನಂಶದ ಕೊರತೆ ಉಂಟಾದರೆ ಆಗಾಗ ಕಾಯಿಲೆ ಬೀಳುವಿರಿ, ಏಕೆಂದರೆ ಕೊಬ್ಬಿನಂಶದ ಕೊರತೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು.

ನೀವು ಬ್ಯಾಲೆನ್ಸ್ ಡಯಟ್‌ ಹೇಗೆ ತಿನ್ನಬೇಕು?

ನೀವು ಬ್ಯಾಲೆನ್ಸ್ ಡಯಟ್‌ ಹೇಗೆ ತಿನ್ನಬೇಕು?

* ನೀವು 2,500 ಕ್ಯಾಲೋರಿಯ ಆಹಾರ ತಿಂದರೆ 97ಗ್ರಾಂ ಕೊಬ್ಬಿನಂಶ ಇರಬೇಕು.

* 2000 ಕ್ಯಾಲೋರಿಯ ಆಹಾರ ತಿಂದರೆ 66 ಗ್ರಾಂ ಕೊಬ್ಬಿನಂಶ ಇರಬೇಕು.

* 1,500 ಕ್ಯಾಲೋರಿಯ ಆಹಾರ ತಿಂದರೆ 50 ಗ್ರಾಂ ಇರಬೇಕು.

ಈಗ ನೀವು ಒಳ್ಳೆಯ ಕೊಬ್ಬಿನಂಶ ಬೇಡ ಅನ್ನಲ್ಲ ತಾನೆ?

English summary

Fat Deficiency: Signs You’re Not Getting Enough Fat in Your Diet in Kannada

Fat Deficiency: Signs You’re Not Getting Enough Fat in Your Diet in Kannada, read on...
Story first published: Tuesday, March 22, 2022, 18:36 [IST]
X
Desktop Bottom Promotion