For Quick Alerts
ALLOW NOTIFICATIONS  
For Daily Alerts

ಕೀಟೋ ಡಯಟ್‌ ಅಪಾಯಕಾರಿಯೇ? ಯಾರು ಮಾತ್ರ ಇದನ್ನು ಪಾಲಿಸಬಹುದು?

|

ತೂಕ ಇಳಿಕೆಗೆ ಮಾಡುವ ಫೇಮಸ್ ಡಯಟ್‌ಗಳಲ್ಲಿ ಒಂದು ಕೀಟೋ ಡಯಟ್‌. ಹೆಚ್ಚಿನವರು ಈ ಡಯಟ್‌ ಪಾಲಿಸಿ ತೂಕ ಕಳೆದುಕೊಳ್ಳುತ್ತಾರೆ. ಇದನ್ನು ಲೋ ಕಾರ್ಬ್‌ ಡಯಟ್‌ ಎಂದು ಕೂಡ ಕರೆಯಲಾಗುವುದು. ಈ ಡಯಟ್‌ನ ವಿಶೇಷತೆಯೆಂದರೆ ಅತ್ಯಂತ ಕಡಿಮೆ ಕಾರ್ಬ್ಸ್‌ನ ಆಹಾರ ತೆಗೆದುಕೊಳ್ಳುವುದು. ಈ ಡಯಟ್‌ ಪಾಲಿಸುವವರು ಕೊಬ್ಬು ಹಾಗೂ ಪ್ರೊಟೀನ್ ಆಹಾರಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಕೀಟೋ ಡಯಟ್‌ ಪಾಲಿಸಿದರೆ ತಿಂಗಳೊಳಗೆ ಅದರ ಫಲಿತಾಂಶ ಕಂಡು ಬರುವುದರಿಂದ ಈ ಡಯಟ್‌ ಹೆಚ್ಚಿನವರು ಪಾಲಿಸುತ್ತಾರೆ. ಡ್ಯಾಶ್‌ ಡಯಟ್‌ಗಿಂತ ಕೀಟೋ ಡಯಟ್‌ ಸುರಕ್ಷಿತ ಎಂದು ಹೇಳಲಾಗುವುದು.

side effect of keto diet

ಆದರೆ ಇತ್ತೀಚೆಗೆ ಕೀಟೋ ಡಯಟ್‌ ಪಾಲಿಸಿ ಬಾಲಿವುಡ್ ಹಾಗೂ ಬೆಂಗಾಲಿ ಚಿತ್ರಗಳಲ್ಲಿ ನಟಿಸಿರುವ ನಟಿ ಮಿಸ್ತಿ ಮುಖರ್ಜಿಯ ಸಾವಿನ ಸುದ್ದಿ ಈ ಡಯಟ್ ಪಾಲಿಸುತ್ತಿರುವವರಲ್ಲಿ ಭಯ ಹುಟ್ಟಿಸಿದೆ. ಕೀಟೋ ಡಯಟ್ ಅಪಾಯಕಾರಿಯೇ, ಇದರಿಂದ ಆರೋಗ್ಯಕ್ಕೆ ಸಮಸ್ಯೆ ಹುಟ್ಟುವುದೇ? ಎಂಬ ಭಯ ಕಾಡುವಂತೆ ಮಾಡಿದೆ.

ನಾವಿಲ್ಲಿ ಕೀಟೋ ಡಯಟ್‌ನ ಅಡ್ಡ ಪರಿಣಾಮಗಳು ಹಾಗೂ ಯಾರು ಈ ಡಯಟ್ ಪಾಲಿಸಿದರೆ ತೊಂದರೆಯಿಲ್ಲ, ಯಾರು ಪಾಲಿಸಬಾರದು ಎಂಬ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಕೀಟೋ ಡಯಟ್ ಅಡ್ಡ ಪರಿಣಾಮಗಳು

 ಕೀಟೋ ಫ್ಲೂ ಬರಬಹುದು

ಕೀಟೋ ಫ್ಲೂ ಬರಬಹುದು

ಇದು ಕೀಟೋ ಡಯಟ್‌ ಪಾಲಿಸಿದವರ ಅನುಭವಕ್ಕೆ ಬಂದಿರಬಹುದು. ಇದು ಕೀಟೋ ಡಯಟ್ ಪ್ರಾರಂಭಿಸಿದಾಗ ಉಂಟಾಗುವುದು. ಕೀಟೋ ಡಯಟ್‌ ಪ್ರಾರಂಭಿಸಿದಾಗ ದೇಹಕ್ಕೆ ಹೆಚ್ಚಿನ ಕಾರ್ಬ್ಸ್ ದೊರೆಯುವುದಿಲ್ಲ, ದೇಹವು ಗ್ಲೂಕೋಸ್ ಬದಲಿಗೆ ಕೀಟೋನ್ಸ್ ಬಳಸಿ ಶಕ್ತಿ ಉತ್ಪಾದಿಸುತ್ತದೆ. ಯಾವಾಗ ದೇಹವು ಕೀಟೋನ್ ಬಳಸಲು ಪ್ರಾರಂಭಿಸುತ್ತದೆಯೋ ಆಗ ದೇಹದಲ್ಲಿನ ಕೊಬ್ಬು ಕರಗಲಾರಂಭಿಸುತ್ತದೆ. ಆಗ ನಿಮ್ಮ ದೇಹದಲ್ಲಿ ಹಲವು ಬದಲಾವಣೆ ಕಂಡು ಬರುತ್ತದೆ. ಇದನ್ನೇ ಕೀಟೋ ಫ್ಲೂ ಎಂದು ಕರೆಯಲಾಗುವುದು.

ಕೀಟೋ ಫ್ಲೂ ಲಕ್ಷಣಗಳು: ತಲೆನೋವು, ಸುಸ್ತು, ಮಲಬದ್ಧತೆ, ವಾಂತಿ, ತಲೆಸುತ್ತು ಮುಂತಾದ ಸಮಸ್ಯೆಗಳು ಕಂಡು ಬರುವುದು.

ದೇಹದಲ್ಲಿ ಕೊಬ್ಬು ಕರಗಲಾರಂಭಿಸಿದಾಗ ಆಗಾಗ ಮೂತ್ರವಿಸರ್ಜನೆಗೆ ಹೋಗಬೇಕೆನಿಸುವುದು, ಇದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು. ಅಲ್ಲದೆ ಕಾರ್ಬ್ಸ್ ಕಡಿಮೆ ತಿಂದಾಗ ಹೆಚ್ಚು ಸಿಹಿ ತಿನ್ನಬೇಕೆಂಬ ಬಯಕೆ ಉಂಟಾಗುವುದು, ಕೆಲಸದಲ್ಲಿ ಏಕಗ್ರತೆ ಉಂಟಾಗುವುದಿಲ್ಲ, ಹೀಗೆ ಮುಂತಾದ ತೊಂದರೆ ಉಂಟಾಗುತ್ತದೆ.

ಆದರೆ ಈ ಲಕ್ಷಣಗಳು ಒಮದು ವಾರಗಳವರೆಗೆ ಮಾತ್ರ ಇರುತ್ತದೆ, ನಂತರ ಸರಿ ಹೋಗುವುದು.

 ಕಿಡ್ನಿ ಹಾಗೂ ಹೃದಯಕ್ಕೆ ಹಾನಿಯುಂಟಾಗುವುದು

ಕಿಡ್ನಿ ಹಾಗೂ ಹೃದಯಕ್ಕೆ ಹಾನಿಯುಂಟಾಗುವುದು

ದೇಹದಲ್ಲಿ ಎಲೆಕ್ಟ್ರೋಲೈಟ್ಸ್ ಹಾಗೂ ದ್ರವಾಂಶ ಕಡಿಮೆಯಾಗಿ ಆಗಾಗ ಮೂತ್ರ ವಿಸರ್ಜನೆಗೆ ಹೋಗುವುದರಿಂದ ಎಲೆಕ್ಟ್ರೋಲೈಟ್ಸ್‌ ಆದ ಸೋಡಿಯಂ, ಮೆಗ್ನಿಷ್ಯಿಯಂ, ಪೊಟಾಷ್ಯಿಯಂ ಎಲ್ಲವೂ ಕಡಿಮೆಯಾಗುವುದು. ಇದರಿಂದ ಕಿಡ್ನಿ ಹಾಗೂ ಹೃದಯದ ಆರೋಗ್ಯಕ್ಕೆ ಉಂಟಾಗುವುದು.

ಈ ಡಯಟ್‌ ಪಾಲಿಸುವವರು ದೇಹದಲ್ಲಿ ನೀರಿನಂಶ ಕಾಪಾಡಿದರೆ ಈ ತೊಂದರೆ ಉಂಟಾಗುವುದಿಲ್ಲ. ಎಲೆಕ್ಟ್ರೋಲೈಟ್ಸ್ ಕೊರತೆ ಉಂಟಾದರೆ ಎದೆಯುರಿ ಸಮಸ್ಯೆ ಉಂಟಾಗುವುದು.

ಯೋ ಯೋ ಡಯಟ್

ಯೋ ಯೋ ಡಯಟ್

ಕೀಟೋ ಡಯಟ್‌ ನಿರಂತರವಾಗಿ ಪಾಲಿಸಲು ಸಾಧ್ಯನೇ ಇಲ್ಲ, ಆದ್ದರಿಂದ ಇದನ್ನು ಯೋ ಯೋ ಡಯಟ್ ಎಂದು ಹೇಳಲಾಗುವುದು, ಈ ಡಯಟ್‌ ತುಂಬಾ ಸಮಯ ಪಾಲಿಸಿದರೆ ದೇಹದ ಮೇಲೆ ಗಂಭೀರ ಪರಿಣಾಮ ಉಂಟಾಗುವುದು, ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುವುದು. ಅಲ್ಲದೆ ಬಾಯಲ್ಲಿ ದುರ್ವಾಸನೆ, ಮಲಬದ್ಧತೆ, ಅನಿಯಮಿತ ಮುಟ್ಟು, ಮೂಳೆ ಸವೆತ, ನಿದ್ರಾಹೀನತೆ ಮುಂತಾದ ಸಮಸ್ಯೆ ಕಂಡು ಬರಬಹುದು.

 ಯಾರು ಕೀಟೋ ಡಯಟ್ ಪಾಲಿಸಿದರೆ ಒಳ್ಳೆಯದು

ಯಾರು ಕೀಟೋ ಡಯಟ್ ಪಾಲಿಸಿದರೆ ಒಳ್ಳೆಯದು

ಕೆಲವು ವ್ಯಕ್ತಿಗಳಿಗೆ ಕೀಟೋ ಡಯಟ್ ತುಂಬಾ ಪರಿಣಾಮಕಾರಿಯಾಗಿದೆ. ನ್ಯಾಷನಲ್ ಸೆಂಟರ್ ಫಾರ್‌ ಹೆಲ್ತ್‌ ರಿಸರ್ಚ್ ಪ್ರಕಾರ ಅಪಸ್ಮಾರ( epilepsy) ಸಮಸ್ಯೆ ಇರುವ ಮಕ್ಕಳಿಗೆ ಒಳ್ಳೆಯದು.

ಈ ಸಮಸ್ಯೆ ಇರುವವರು ಕೀಟೋ ಡಯಟ್ ಪಾಲಿಸುವುದು ಒಳ್ಳೆಯದು

  • ಮೇದೋಜ್ಜೀರಕ ಗ್ರಂಥಿ ಸಮಸ್ಯೆpancreatic disease)
  • ಥೈರಾಯ್ಡ್ ಸಮಸ್ಯೆ
  • ಲಿವರ್ ಸಮಸ್ಯೆ
  • ಗಾಲ್‌ ಬ್ಲೇಡರ್ ಸಮಸ್ಯೆ
  • ಅತಿಯಾಗಿ ತಿನ್ನುವ ಸಮಸ್ಯೆ
  • ಇವರಿಗೆ ಕೀಟೋ ಡಯಟ್‌ ಒಳ್ಳೆಯದು. ಆದರೆ ಪ್ರಾರಂಭಿಸುವ ಮುನ್ನ ವೈದ್ಯರ ಸಲಹೆ ಪಡೆದು ಅವರ ಸಲಹೆ ಸೂಚನೆಗಳನ್ನು ತಪ್ಪದೆ ಪಾಲಿಸಿ ಈ ಡಯಟ್ ಪಾಲಿಸಬೇಕು.

     ಯಾರು ಕೀಟೋ ಡಯಟ್ ಮಾಡಬಾರದು?

    ಯಾರು ಕೀಟೋ ಡಯಟ್ ಮಾಡಬಾರದು?

    ಅತ್ಯಧಿಕ ರಕ್ತದೊತ್ತಡ

    ಮಧುಮೇಹ

    ಈ ರೀತಿಯ ಸಮಸ್ಯೆ ಇರುವವರಿಗೆ ಕೀಟೋ ಡಯಟ್ ಒಳ್ಳೆಯದಲ್ಲ.

    ಸಲಹೆ: ಕೀಟೋ ಡಯಟ್‌ ಬೇಗನೆ ತೂಕ ಇಳಿಕೆಗೆ ತುಂಬಾನೇ ಸಹಕಾರಿ. ಆದರೆ ನೀವು ಈ ಡಯಟ್‌ ಪಾಲಿಸುವ ಮುನ್ನ ನಿಮ್ಮ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಹಾಗೂ ಡಯಟಿಷಿಯನ್ ಬಳಿ ಸರಿಯಾದ ಸಲಹೆ ಪಡೆದು ನಂತರ ಪಾಲಿಸಿ.

English summary

Dangerous Side Effect Of Following Keto Diet In Kannada

Here are dangerous side effect of following keto diet in kannada, read on,
X
Desktop Bottom Promotion