Just In
- 1 hr ago
ಈ ಪ್ರಾಯಾಣಾಮ ತಪ್ಪದೇ ಮಾಡಿದರೆ ಸಾಕು, ಅಧಿಕ ರಕ್ತದೊತ್ತಡಕ್ಕೆ ಬೈಬೈ ಹೇಳಬಹುದು..!
- 3 hrs ago
ಒಂದೇ ದಿನದಲ್ಲಿ ಬಂದಿದೆ ವಟ ಸಾವಿತ್ರಿ ವ್ರತ ಹಾಗೂ ಶನಿ ಜಯಂತಿ: ಈ ಕಾಕತಾಳೀಯಗಳು ಸಂಭವಿಸಲಿದೆ
- 6 hrs ago
ಇತ್ತೀಚೆಗಷ್ಟೇ ಟೈಪ್ 2 ಮಧುಮೇಹ ಕಾಣಿಸಿಕೊಂಡಿದ್ದರೆ ಗುಣಪಡಿಸುವುದು ಹೇಗೆ?
- 9 hrs ago
Today Rashi Bhavishya: ಬುಧವಾರದ ದಿನ ಭವಿಷ್ಯ: ವೃಷಭ, ಕುಂಭ, ಮೀನ ರಾಶಿಯವರಿಗೆ ಒತ್ತಡವೇ ಸಮಸ್ಯೆ, ಎಚ್ಚರ
Don't Miss
- News
ವಿಜಯೇಂದ್ರಗೆ ಟಿಕೆಟ್ ನಕಾರ; ಬಿಜೆಪಿಗೆ ತಿರುಗುಬಾಣ ಎಂದ ಕುಮಾರಸ್ವಾಮಿ
- Sports
RCB vs LSG: ಎಲಿಮಿನೇಟರ್ ಪಂದ್ಯದಲ್ಲಿ ಈ ಮೈಲಿಗಲ್ಲುಗಳ ಮೇಲೆ ಕೊಹ್ಲಿ, ರಾಹುಲ್, ಸಿರಾಜ್ ಕಣ್ಣು
- Movies
41 ದಿನದಲ್ಲಿ ಇಷ್ಟೊಂದು ಇಳಿಕೆ ಕಂಡೇ ಇಲ್ಲ: 'ಕೆಜಿಎಫ್ 2' ಕಲೆಕ್ಷನ್ ಡ್ರಾಪ್ ಆಗಿದ್ದೇಕೆ?
- Automobiles
ಹೊಸ ಇವಿ ನೀತಿ: ರಾಜಸ್ತಾನದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಭರ್ಜರಿ ಸಬ್ಸಡಿ!
- Education
KLE Society Recruitment 2022 : 14 ಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ದಾವೋಸ್: ರೆನ್ಯೂ ಪವರ್ನಿಂದ ರಾಜ್ಯದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆ ಒಪ್ಪಂದ
- Technology
ಸ್ಪೈಸ್ಜೆಟ್ ಸಿಸ್ಟಂಗಳ ಮೇಲೆ ರಾನ್ಸಮ್ವೇರ್ ಅಟ್ಯಾಕ್!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೋವಿಡ್ 19: ಬುಗುರಿ ಹಣ್ಣು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪರಿಣಾಮಕಾರಿ
ಕೋವಿಡ್ 19 ಮತ್ತೆ ಹೆಚ್ಚಾಗುತ್ತಿದೆ. ಕೋವಿಡ್ ನಿಯಂತ್ರಿಸಲು ಸೆಮಿ ಲಾಕ್ಡೌನ್, ವೀಕೆಂಡ್ ಕರ್ಫ್ಯೂ ಇದೆ. ಕೋವಿಡ್ 19 ನಿಯಂತ್ರಿಸಲು ಇವೆಲ್ಲಕ್ಕಿಂತ ಪ್ರಮುಖವಾಗಿ ಬೇಕಾಗಿರುವುದು ಉತ್ತಮ ರೋಗ ನಿರೋಧಕ ಶಕ್ತಿ.
ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ ಕೊರೊನಾ ವೈರಸ್ ಬಾಧಿಸುವುದಿಲ್ಲ. ಕೋವಿಡ್ 19 ವಿರುದ್ಧ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆಯನ್ನು ನೀಡಲಾಗುತ್ತಿದೆ. ಇದರ ಜೊತೆಗೆ ನಾವು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳತ್ತ ಗಮನ ನೀಡಬೇಕು.
ಕೋವಿಡ್ 19 ಕಾಲದಲ್ಲಿ ಜನರು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳಾವುವು ಎಂದು ತಿಳಿಯ ಬಯಸುತ್ತಾರೆ. ಕಷಾಯ, ಕೆಲವೊಂದು ಆಯುರ್ವೇದ ಔಷಧಿಗಳು, ಗಿಡ ಮೂಲಿಕೆಗಳು, ಕೆಲವೊಂದು ಹಣ್ಣುಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ. ನಾವಿಲ್ಲ ಅಂಥ ಒಂದು ಹಣ್ಣಿನ ಬಗ್ಗೆ ಹೇಳಿದ್ದೇವೆ.
ನಿಮಗೆಲ್ಲಾ ಬುಗುರಿ ಹಣ್ಣುಗೊತ್ತೇ?
ಬುಗುರಿ ಹಣ್ಣನ್ನು ಇಂಗ್ಲಿಷ್ನಲ್ಲಿ ber ಎಂದು ಕರೆಯಲಾಗುವುದು. ಪ್ರಸಿದ್ಧ ಸೆಲೆಬ್ರಿಟಿ ನ್ಯೂಟ್ರಿಷಿಯನಿಸ್ಟ್ ರುಜುತಾ ದ್ವಿವೇಕರ್ ಬುಗುರಿ ಕಾಯಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು ಎಂದು ಹೇಳಿದ್ದಾರೆ. ಇದರಲ್ಲಿ ವಿಟಮಿನ್ ಸಿ, ಬಿ1, ಬಿ2 ಹಾಗೂ ಆ್ಯಂಟಿ ಆಕ್ಸಿಡೆಂಟ್ ಇದೆ. ಈ ಹಣ್ಣು ನಮ್ಮಲ್ಲಿ ಒತ್ತಡವನ್ನು ಕಡಿಮೆ ಮಾಡುವುದು ಹಾಗೂ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.
ಇದರ ಗುಣಗಳ ಬಗ್ಗೆ ನೋಡುವುದಾದರೆ:

1. ರೋಗ ನಿರೋಧಕ ಶಕ್ತಿ ಹೆಚ್ಚುವುದು
ಮಕ್ಕಳು ಆಗಾಗ ಕಾಯಿಲೆ ಬೀಳುತ್ತಿದ್ದರೆ ಅವರಿಗೆ ಈ ಹಣ್ಣು ನೀಡುವುದರಿಂದ ಕಾಯಿಲೆ ಬೀಳುವುದು ಕಡಿಮೆಯಾಗುವುದಾಗಿ ರುಜುತಾ ಅವರು ಹೇಳಿದ್ದಾರೆ. ಈ ಹಣ್ಣು ಚಳಿಗಾಲದಲ್ಲಿ ಸಿಗುವುದರಿಂದ ಈ ಸಮಯದಲ್ಲಿ ನೀವು ಇದನ್ನು ಕೊಂಡು ತಿನ್ನಿ, ಮಕ್ಕಳಿಗೂ ತಿನ್ನಲು ನೀಡಿ. ಇದು ತುಂಬಾ ಆರೋಗ್ಯಕರವಾದ ಹಣ್ಣಾಗಿದ್ದು ಇಮ್ಯೂನಿಟಿ ಅಥವಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಅಲ್ಲದೆ ಕೋವಿಡ್ 19 ಈ ಸಮಯದಲ್ಲಿ ಅದರ ವಿರುದ್ಧ ಹೋರಾಡಲು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಹಣ್ಣು ಸಹಾಯ ಮಾಡುವುದು.

2. ಮಾನಸಿಕ ಒತ್ತಡ ಕಡಿಮೆ ಮಾಡುವುದು
ಈ ಹಣ್ಣು ಮನಸ್ಸು ಶಾಂತವಾಗಿಸುವುದು, ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು. ಇದರಲ್ಲಿರುವ sedative ಅಂಶ ಒತ್ತಡದಿಂದ ಉಂಟಾದ ಹಾರ್ಮೋನ್ಗಳನ್ನು ಕಡಿಮೆ ಮಾಡುವುದು. ಇದು ದೇಹ ಹಾಗೂ ಮನಸ್ಸಿನ ಆರೋಗ್ಯ ಹೆಚ್ಚಿಸುವುದು.

3. ಮಲಬದ್ಧತೆ ತಡೆಗಟ್ಟುವುದು
ಮಲಬದ್ಧತೆ ಸಮಸ್ಯೆ ಇದ್ದರೆ ಈ ಹಣ್ಣುಗಳನ್ನು ತಿಂದರೆ ಆ ಸಮಸ್ಯೆ ದೂರಾಗುವುದು. ಇದು ಕರುಳಿನ ಆರೋಗ್ಯ ವೃದ್ಧಿಸುವುದು.

4. ರಕ್ತದೊತ್ತಡ ಇರುವವರೆಗೆ ಮತ್ತು ಮಧುಮೇಹಿಗಳಿಗೆ ಅತ್ಯುತ್ತಮವಾದ ಹಣ್ಣು
ಬುಗುರಿ ಹಣ್ಣಿನಲ್ಲಿ ಅಧಿಕ ಪೊಟಾಷ್ಯಿಯಂ ಹಾಗೂ ಕಡಿಮೆ ಸೋಡಿಯಂ ಇರುವುದರಿಂದ ಬಿಪಿ ಅಥವಾ ರಕ್ತದೊತ್ತಡ ನಿಯಂತ್ರಿಸಲು ಸಹಕಾರಿ. ಅಲ್ಲದೆ ಈ ಹಣ್ಣು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕಾರಿ. ಇದರಲ್ಲಿ ಕಬ್ಬಿಣದಂಶ, ರಂಜಕ ಅಧಿಕವಿರುವುದರಿಂದ ರಕ್ತಸಂಚಾರಕ್ಕೆ ಸಹಕಾರಿ.

5. ಮೂಳೆಗಳನ್ನು ಬಲಪಡಿಸುತ್ತೆ
ಇದರಲ್ಲಿ ಕ್ಯಾಲ್ಸಿಯಂ, ರಂಜಕ, ಕಬ್ಬಿಣದಂಶ ಅಧಿಕವಿರುವುದರಿಂದ ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಸಂಧಿವಾತ ಸಮಸ್ಯೆ ಇರುವವರು ಈ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು.

6. ತಲೆಹೊಟ್ಟಿನ ಸಮಸ್ಯೆ ನಿವಾರಿಸುತ್ತೆ, ತ್ವಚೆಗೆ ಒಳ್ಳೆಯದು
ತಲೆ ಹೊಟ್ಟಿನ ಸಮಸ್ಯೆಯಿದ್ದರೆ ಅದನ್ನು ತಡೆಗಟ್ಟಲು ಸಹಕಾರಿಯಾಗಿದೆ. ಇದು ಕೂದಲಿನ ಬುಡವನ್ನು ಒಳಗಿನಿಂದ ಪೋಷಣೆ ಮಾಡುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಆರೋಗ್ಯ ಹೆಚ್ಚುವುದು,ತ್ವಚೆ ಹೊಳಪು ಹೆಚ್ಚುವುದು.