For Quick Alerts
ALLOW NOTIFICATIONS  
For Daily Alerts

ಚಿಕನ್‌ಗುನ್ಯಾ ಕಾಯಿಲೆಯಿಂದ ಚೇತರಿಕೆಗೆ ತಿನ್ನಬೇಕಾದ ಆಹಾರಗಳು

|

ಚಿಕನ್‌ಗುನ್ಯಾ ಎಂಬುವುದು ಸೊಳ್ಳೆಗಳಿಂದ ಹರಡುವ ವೈರಲ್ ಸೋಂಕಾಗಿದೆ. ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆ ಕಚ್ಚಿದಾಗ ಈ ಸೋಂಕು ಹರಡುವುದು. ಚಿಕನ್‌ ಗುನ್ಯಾ ಬಂದ್ರೆ, ಚಿಕನ್‌ ಗುನ್ಯಾದಿಂದ ಗುಣಮುಖವಾದ ಮೇಲೂ ಇದರ ತೊಂದರೆಗಳು ತುಂಬಾ ಸಮಯ ಇರುತ್ತದೆ. ಕೆಲವರಿಗೆ ಚಿಕನ್‌ಗುನ್ಯಾ ಬಂದು ವರ್ಷಗಳು ಕಳೆದರು ಮಂಡಿ ನೋವು, ಕಾಲು ನೋವು ಸಮಸ್ಯೆ ಕಾಡುವುದು, ಆದ್ದರಿಂದ ಚಿಕನ್‌ಗುನ್ಯಾ ಕಾಯಿಲೆಯನ್ನು ನಿರ್ಲಕ್ಷ್ಯ ಮಾಡಬಾರದು.

ಚಿಕನ್‌ಗುನ್ಯಾ ಬಂದಾಗ ಸೂಕ್ತ ಔಷಧ ತೆಗೆದುಕೊಳ್ಳುವುದರ ಜೊತೆಗೆ ಆಹಾರಕ್ರಮದ ಕಡೆಗೂ ಗಮನ ನೀಡಬೇಕು. ಇಲ್ಲದಿದ್ದರೆ ಮೈಕೈ ನೋವು, ಮಂಡಿ ನೋವು ಇವೆಲ್ಲಾ ವರ್ಷ ಕಳೆದರೂ ಕಾಡುವುದು, ಅದರಲ್ಲೂ ಮಳೆಗಾಲ, ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗುವುದು.

ಪ್ರತೀವರ್ಷ ಭಾರತದಲ್ಲಿ ಸಾಕಷ್ಟು ಜನರಿಗೆ ಡೆಂಗ್ಯೂ ಕಾಯಿಲೆ ಬರುತ್ತಿದೆ. ವಿಶ್ವದಲ್ಲಿಯೇ 100-400 ಮಿಲಿಯನ್‌ ಜನರಿಗೆ ಡೆಂಗ್ಯೂ ಕಾಯಿಲೆ ಬರುತ್ತಿದೆ. ಡೆಂಗ್ಯೂಗೆ ನಿರ್ದಿಷ್ಟವಾದ ಚಿಕಿತ್ಸೆಯಿಲ್ಲ. ಪ್ರಾರಂಭದಲ್ಲಿಯೇ ಗುರುತಿಸಿದರೆ ಗುಣಪಡಿಸುವುದು ಸುಲಭವಾಗುವುದು. ಇದರ ಜೊತೆಗೆ ಡೆಂಗ್ಯೂ ಬಂದವರು ಬೇಗನೆ ಗುಣಮುಖರಾಗಲು ಈ ಆಹಾರಕ್ರಮಗಳನ್ನು ಅನುಸರಿಸುವುದು ಒಳ್ಳೆಯದು:

ಚಿಕನ್‌ಗುನ್ಯಾ ಲಕ್ಷಣಗಳು

ಚಿಕನ್‌ಗುನ್ಯಾ ಲಕ್ಷಣಗಳು

* ಜ್ವರ

* ಮೈಯಲ್ಲಿ ಗುಳ್ಳೆಗಳು ಏಳುವುದು

* ಸಂಧಿ ನೋವು

* ಸ್ನಾಯುಗಳಲ್ಲಿ ನೋವು

* ಸಂಧಿಗಳಲ್ಲಿ ಊತ

* ಸುಸ್ತು

* ತಲೆನೋವು

* ವಾಂತಿ

* ತಲೆಸುತ್ತು

ಸೋಂಕು ಇರುವ ಸೊಳ್ಳೆ ಕಚ್ಚಿ 6 ದಿನವಾದ ಬಳಿಕ ಈ ಲಕ್ಷಣಗಳು ಖಂಡು ಬರುವುದು. ಹೀಗೆ ಲಕ್ಷಣಗಳು ಕಂಡು ಬಂದರೆ ಕೂಡಲೇ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಪಡೆಯಿರಿ ಜೊತೆಗೆ ಈ ಆಹಾರಗಳನ್ನು ಸೇವಿಸಿ.

1. ಎಳನೀರು

1. ಎಳನೀರು

ಜ್ವರ ಬಂದಾಗ ಎಳನೀರು ಕುಡಿಯಬಾರದೆಂದೇ ಯೋಚಿಸುತ್ತಾರೆ, ಆದರೆ ಚಿಕನ್‌ಘುನ್ಯಾ ಬಂದಾಗ ಎಳನೀರು ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬಹುದು, ಜೊತೆಗೆ ದೇಹದ ಒಳಗೆ ಇರುವ ಕಶ್ಮಲಗಳನ್ನು ಕೂಡ ಹೊರ ಹಾಕಲು ಸಹಕಾರಿ.

2. ಸೊಪ್ಪು ಹಾಗೂ ತರಕಾರಿಗಳು

2. ಸೊಪ್ಪು ಹಾಗೂ ತರಕಾರಿಗಳು

ಸೊಪ್ಪಿನ ಆಹಾರ ಹೆಚ್ಚಾಗಿ ಶೇವಿಸಿ. ಜೊತೆಗೆ ತರಕಾರಿಗಳ ಸೂಪ್‌ ಜೀರ್ಣಕ್ರಿಯೆಗೆ ಸಹಕಾರಿ. ವಿಟಮಿನ್‌ ಎ ಅಧಿಕವಿರುವ ಆಹಾರ ಸೇವಿಸಿ.

 3. ಸೂಪ್ ಸೇವಿಸಿ

3. ಸೂಪ್ ಸೇವಿಸಿ

ವೆಜ್ ಅಥವಾ ಚಿಕನ್ ಸೂಪ್‌ ಸುಸ್ತು ಕಡಿಮೆ ಮಾಡಿ ಬೇಗನೆ ಚೇತರಿಸಲು ಸಹಾಯ ಮಾಡುತ್ತದೆ. ಸೂಪ್‌ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಬ್ರೊಕೋಲಿ ಸೂಪ್ ಮಾಡಿ ಕೊಡಿ. ಇದರಲ್ಲಿ ವಿಟಮಿನ್‌ ಸಿ ಅಧಿಕವಿದೆ. ಜೊತೆಗೆ ಸೂಪ್‌ ಕುಡಿಯುವುದರಿಂದ ಚಿಕನ್‌ಗುನ್ಯಾದ ರೋಗ ಲಕ್ಷಣಗಳು ಕಡಿಮೆಯಾಗುವುದು.

 4. ಪಪ್ಪಾಯಿ ಎಲೆಯ ರಸ

4. ಪಪ್ಪಾಯಿ ಎಲೆಯ ರಸ

ಚಿಕನ್‌ಗುನ್ಯಾ ಅಥವಾ ಡೆಂಗ್ಯೂ ಬಂದಾಗ ಪಪ್ಪಾಯಿ ಎಲೆಯ ರಸ ಕುಡಿಯುವುದರಿಂದ ದೇಹದಲ್ಲಿ ಪ್ಲೇಟ್‌ಲೆಟ್‌ ಹೆಚ್ಚಾಗುವುದು. ಪ್ಲೇಟ್‌ಲೆಟ್‌ ಕಡಿಮೆಯಾದರೆ ಜೀವಕ್ಕೆ ಅಪಾಯ. ಪ್ಲೇಟ್‌ಲೆಟ್ ಹೆಚ್ಚಿಸುವುದರಲ್ಲಿ ಪಪ್ಪಾಯಿ ಎಲೆಯ ರಸ ಸಹಾಯ ಮಾಡುತ್ತದೆ. ಒಂದು ಚಮಚದಂತೆ ಮೂರು ಹೊತ್ತು ಕುಡಿಯಬೇಕು. ಹೆಚ್ಚು ಕುಡಿಯಬೇಡಿ ಬೇಧಿಯಾಗಬಹುದು.

5.ಹರ್ಬ್ಸ್

5.ಹರ್ಬ್ಸ್

ತುಳಸಿ ಎಲೆ ಅಲೆಗೆದು ತಿನ್ನುವುದರಿಂದ ಜ್ವರ ಕಡಿಮೆಯಾಗುವುದು, ರೋಗ ನಿರೋಧಕ ಶಕ್ತಿ ಹೆಚ್ಚುವುದು. ಇನ್ನು ಸೋಂಪು, ಅಜ್ವೈನ್, ಜೀರಿಗೆ, ಬೆಲ್ಲ, ನಿಂಬೆರಸ ಇವೆಲ್ಲಾ ಸಂಧಿ ನೋವು ಕಡಿಮೆ ಮಾಡಲು ಸಹಾಯ ಮಾಡುವುದು. ಇವುಗಳನ್ನು ಆಹಾರದಲ್ಲಿ ಸೇರಿಸಿ.

6. ವಿಟಮಿನ್ ಸಿ ಅತ್ಯಧಿಕ ಇರುವ ಆಹಾರಗಳು

6. ವಿಟಮಿನ್ ಸಿ ಅತ್ಯಧಿಕ ಇರುವ ಆಹಾರಗಳು

* ಕಿತ್ತಳೆ

* ಕಿವಿ ಹಣ್ಣು

* ಸೀಬೆಕಾಯಿ

* ಬ್ರೊಕೊಲಿ

* ಟೊಮೆಟೊ

* ನಿಂಬೆರಸ

ಇವುಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು.

7. ಅಮೃತ ಬಳ್ಳಿಯ ರಸ

7. ಅಮೃತ ಬಳ್ಳಿಯ ರಸ

ಚಿಕನ್‌ಗುನ್ಯಾಗೆ ಅಮೃತ ಬಳ್ಳಿಯ ರಸ ರಾಮಬಾಣವಾಗಿದೆ. ಅಮೃತ ಬಳ್ಳಿ ರಸ ನೀರಿನಲ್ಲಿ ಹಾಕಿ ದಿನದಲ್ಲಿ ಎರಡು ಬಾರಿ ತೆಗೆದುಕೊಳ್ಳುವುದರಿಂದ ಒಳ್ಳೆಯ ಫಲಿತಾಂಶ ಉಂಟಾಗುವುದು. ಅಮೃತ ಬಳ್ಳಿ ದಂಟನ್ನು ನೀರಿನಲ್ಲಿ ಹಾಕಿ ಕುದಿಸಿ ಕುಡಿಯಬಹುದು.

ನೆನಪಿಡಿ: ಅತಿಯಾಗಿ ಕುಡಿಯಬಾರದು

8. ಬಾರ್ಲಿ ಗಂಜಿ

8. ಬಾರ್ಲಿ ಗಂಜಿ

ಬಾರ್ಲಿ ಗಂಜಿ ಜೀರ್ಣಕ್ರಿಯೆಗೆ ತುಂಬಾ ಸಹಕಾರಿಯಾಗಿದೆ. ಇದು ಲಿವರ್‌ನಲ್ಲಿರುವ ಕಶ್ಮಲವನ್ನು ಹೊರ ಹಾಕಲು ಕೂಡ ಸಹಕಾರಿ.

9. ಹಣ್ಣುಗಳು

9. ಹಣ್ಣುಗಳು

ಮೂಸಂಬಿ

ಬಾಳೆಹಣ್ಣು

ಪಪ್ಪಾಯಿ

ಸೇಬು

ಕಿವಿಹಣ್ಣು

ದಾಳಿಂಬೆ

ಇವುಗಳನ್ನು ಹೆಚ್ಚಾಗಿ ಸೇವಿಸಿ.

ಚಿಕನ್‌ಗುನ್ಯಾ ಆದಾಗ ಯಾವ ಆಹಾರಗಳಿಂದ ದೂರವಿರಬೇಕು?

ಚಿಕನ್‌ಗುನ್ಯಾ ಆದಾಗ ಯಾವ ಆಹಾರಗಳಿಂದ ದೂರವಿರಬೇಕು?

* ಸಿಹಿ ಪದಾರ್ಥಗಳು, ಟೀ, ಕಾಫಿ ಮುಟ್ಟಲೇಬೇಡಿ

* ಎಣ್ಣೆ ಪದಾರ್ಥಗಳು, ಖಾರ ಪದಾರ್ಥಗಳಿಂದ ದೂರವಿರಿ

* ಜಂಕ್‌ ಫುಡ್ಸ್, ಬೀದಿ ಬದಿಯ ಆಹಾರಗಳನ್ನು ದೂರವಿಡಿ

FAQ's
  • ಚಿಕನ್‌ಗುನ್ಯಾ ಹೇಗೆ ಹರಡುವುದು? ಎಲ್ಲಾ ಸೊಳ್ಳೆಗಳಿಂದ ಹರಡುವುದೇ?

    ಚಿಕನ್‌ಗುನ್ಯಾ ಸೋಂಕು ತಗುಲಿದ ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆ ಕಚ್ಚಿದಾಗ ಹರಡುವುದು. ಸೊಳ್ಳೆ ಚಿಕನ್‌ಗುನ್ಯಾ ಇರುವ ವ್ಯಕ್ತಿಗೆ ಕಚ್ಚಿ, ಆ ಸೊಳ್ಳೆ ಮತ್ತೊಬ್ಬರಿಗೆ ಕಚ್ಚಿದರೆ ಹರಡುವುದು.

  • ಚಿಕನ್‌ಗುನ್ಯಾ ಜ್ವರದ ಲಕ್ಷಣಗಳೇನು?

    ಚಿಕನ್‌ಗುನ್ಯಾ ಕಾಯಿಲೆಯ ಲಕ್ಷಣವೆಂದರೆ ಜ್ವರದ ಜೊತೆಗೆ ಸಂಧಿನೋವು ಕೂಡ ಇರುತ್ತದೆ. ಇದರ ಜೊತೆಗೆ ತಲೆನೋವು, ಸ್ನಾಯುಗಳಲ್ಲಿ ನೋವು, ಸಂಧಿಗಳಲ್ಲಿ ಊತ, ಮೈಯಲ್ಲಿ ಬೊಬ್ಬೆ ಮುಂತಾದ ಲಕ್ಷಣಗಳೂ ಕಂಡು ಬರುವುದು. ಚಿಕನ್‌ಗುನ್ಯಾ ಮಾರಾಣಾಂತಿಕವಲ್ಲ. ಬೇಗನೆ ಚಿಕಿತ್ಸೆ ಪಡೆದರೆ ಒಂದು ವಾರದೊಳಗೆ ಸುಧಾರಿಸಬಹುದು. ಚಿಕಿತ್ಸೆ ಪಡೆಉವುದು ತುಂಬಾ ತಡವಾದರೆ ಸಾವಿನ ಸಂಖ್ಯೆ ಶೇ. 1ರಷ್ಟು ಇದೆ.

  • ಚಿಕನ್‌ಗುನ್ಯಾಗೆ ಯಾವ ಚಿಕಿತ್ಸೆ ಒಳ್ಳೆಯದು?

    ಚಿಕನ್‌ಗುನ್ಯಾಗೆ ನಿರ್ದಿಷ್ಟವಾದ ಚಿಕಿತ್ಸೆಯಿಲ್ಲ. ಚಿಕನ್‌ಗುನ್ಯಾ ಬಂದಾಗ ಸಾಕಷ್ಟು ನೀರು ಕುಡಿಯುವಂತೆ ವೈದ್ಯರು ಸಲಹೆ ನೀಡುತ್ತಾರೆ. ಚಿಕನ್‌ಗುನ್ಯಾ ಬಂದಾಗ ನೋವು ನಿವಾರಕ ಮಾತ್ರೆಗಳು, ಜ್ವರ ಕಡಿಮೆ ಮಾಡುವ ಮಾತ್ರೆಗಳನ್ನು ನೀಡಲಾಗುವುದು. ಆದರೆ ibuprofen ಮತ್ತು aspirin ಮಾತ್ರೆಗಳನ್ನು ನೀಡಬಾರದು. ಸ್ವಯಂ ಚಿಕಿತ್ಸೆ ಬೇಡ... ವೈದ್ಯರ ಬಳಿ ಹೋಗಿ ಅವರು ಸೂಚಿಸಿದ ಮಾತ್ರೆಗಳನ್ನು ತೆಗೆದುಕೊಳ್ಳಿ.

English summary

Chikungunya Diet: Best Foods For Chikungunya Patients in Kannada

Chikungunya Diet: Best Foods For Chikungunya Patients in Kannada: Best Foods For Chikungunya Patients in Kannada, read on...
X
Desktop Bottom Promotion