For Quick Alerts
ALLOW NOTIFICATIONS  
For Daily Alerts

ಕಾರ್ಡಿಯೋ : ಈ ವ್ಯಾಯಾಮ ಹೇಗೆ ಮಾಡಬೇಕು, ಏಕೆ ಮಾಡಬೇಕು?

|

ಅನೇಕರಿಗೆ ಜಿಮ್ ಗೆ ಹೋಗಿ ಭಾರ ಎತ್ತಲು ಕಷ್ಟವಾಗಬಹುದು. ಯಾರು ಅಲ್ಲಿ ತನಕ ಹೋಗಿ ಭಾರ ಎತ್ತಿ ಸುಸ್ತು ಮಾಡಿಕೊಳ್ತಾರೆ ಅಂತ ಅಂದುಕೊಳ್ಳುತ್ತಾರೆ. ಅಂತವರಿಗೆ ನಾವಿವತು ಕಾರ್ಡಿಯೋ ವ್ಯಾಯಾಮದ ಬಗ್ಗೆ ತಿಳಿಸಿಕೊಡುತ್ತೇವೆ. ಜಿಮ್ ಗೆ ಹೋಗದೆ ಫಿಟ್ ಆಗಿರಬೇಕು, ಕೊಬ್ಬು, ಬೊಜ್ಜು ಕರಗಿಸಬೇಕು ಮತ್ತು ಆರೋಗ್ಯವಾಗಿ ಇರಬೇಕು ಎಂದು ಅಂದುಕೊಂಡಿದ್ದರೆ ಕಾರ್ಡಿಯೋ ವ್ಯಾಯಾಗಳ ಮೊರೆ ಹೋಗುವುದು ಉತ್ತಮ ಐಡಿಯಾ. ಇದು ನಿಮಗೆ ಭಾರ ಅನ್ನುವ ಅನುಭವ ನೀಡುವುದಿಲ್ಲ.

ಇನ್ನು ಕಾರ್ಡಿಯೋ ವ್ಯಾಯಾಮ ಎಂದರೆ ಏನು ಅನ್ನೋದನ್ನ ನೋಡೋದಾದ್ರೆ, ಕಾರ್ಡಿಯೊ ಎಂದರೆ ಒಂದು ರೀತಿಯ ವ್ಯಾಯಾಮವಾಗಿದೆ. ಈ ಕಾರ್ಡಿಯೋ ವ್ಯಾಯಾಮ ಮಾಡುವುದರಿಂದ ನಿಮ್ಮ ಹೃದಯ ಆರೋಗ್ಯವಾಗಿರುತ್ತದೆ. ಕಾರ್ಡಿಯೋದಿಂದ ಹೃದಯದ ಬಡಿತ ಹೆಚ್ಚಾಗುತ್ತದೆ, ಉಸಿರಾಟದ ಸಮಸ್ಯೆಯೂ ದೂರವಾಗುತ್ತದೆ. ದೀರ್ಘ ಉಸಿರಾಟವೂ ನಿಮ್ಮ ಹೃದಯ ಹಾಗೂ ಶ್ವಾಸಕೋಶವನ್ನು ಚೆನ್ನಾಗಿ ಇಡುತ್ತದೆ.

ಇನ್ನು ಕಾರ್ಡಿಯೋ ವ್ಯಾಯಾಮಗಳು ಯಾವುವು ಅನ್ನೋದನ್ನ ನೋಡೋದಾದ್ರೆ, ರೋಪ್ ಜಂಪಿಂಗ್ , ಮೆಟ್ಟಿಲುಗಳಲ್ಲಿ ಓಡುವುದು, ವಾಕಿಂಗ್, ರೋಯಿಂಗ್, ಸೈಕ್ಲಿಂಗ್ ಹೀಗೆ ಹಲವು ರೀತಿಯ ವ್ಯಾಯಾಮಗಳನ್ನು ಕಾರ್ಡಿಯೋ ಅನ್ನುತ್ತಾರೆ. ಸುಲಭವಾಗಿ ಹೇಳುವುದಾದರೆ ಹೃದಯ ಬಡಿತವನ್ನುಜಾಸ್ತಿ ಮಾಡುವ ಯಾವುದೇ ವ್ಯಾಯಾಮವೂ ಕಾರ್ಡಿಯೋ ಎಕ್ಸರ್ ಸೈಸ್ ಎಂದೆನಿಸುತ್ತದೆ.

ಹಾಗಾದರೆ ಈ ಕಾರ್ಡಿಯೋ ಎಕ್ಸರ್ ಸೈಸ್ ಯಾವಾಗ ಮಾಡಬೇಕು? ಯಾಕೆ ಮಾಡಬೇಕು? ಎಷ್ಟು ಮಾಡಬೇಕು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ:

ಯಾವಾಗ ಕಾರ್ಡಿಯೋ ವ್ಯಾಯಮ ಮಾಡಬೇಕು?

ಯಾವಾಗ ಕಾರ್ಡಿಯೋ ವ್ಯಾಯಮ ಮಾಡಬೇಕು?

ಸುಂದರ ಕಾಯ ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿ ನಿಮ್ಮಲ್ಲಿ ಚೈತನ್ಯವನ್ನು ಉಂಟುಮಾಡುವ ಕಾರ್ಡಿಯೋ ವ್ಯಾಯಮವನ್ನು ಯಾರು ಬೇಕಾದರು ಮಾಡಬಹುದು. ಇದಕ್ಕೆ ವಯಸ್ಸಿನ ಮಿತಿ ಇಲ್ಲ. ಆದ್ರೆ ವಯಸ್ಸಿಗೆ ತಕ್ಕಂತಿರುವ ಕಾರ್ಡಿಯೋ ವ್ಯಾಯಾಮವನ್ನು ಮಾಡುವುದು ಒಳ್ಳೆಯದು. ಇನ್ನು ಫಿಟೆನೆಸ್ ಟ್ರೈನರ್ ಗಳ ಪ್ರಕಾರ ಕಾರ್ಡಿಯೋವನ್ನು ಬೆಳಗ್ಗಿನ ಜಾವ ಮಾಡುವುದು ಉತ್ತಮ. ಯಾಕೆಂದರೆ ರಾತ್ರಿ 7 ರಿಂದ 8 ಗಂಟೆಗಳ ಕಾಲ ನೀವು ನಿದ್ರೆ ಮೂಲಕ ರೆಸ್ಟ್ ಮಾಡಿರುತ್ತೀರಿ. ಹೀಗೆ ರೆಸ್ಟ್ ಮಾಡಿದ ಬಾಡಿಯನ್ನು ಸುಲಭವಾಗಿ ಕಾರ್ಡಿಯೋ ಮೂಲಕ ಬೂಸ್ಟ್ ಮಾಡಬಹುದು. ಅಲ್ಲದೇ ನಿಮ್ಮ ದೇಹದ ಶಕ್ತಿ ಹಾಗೂ ಮೂಡ್ ಅನ್ನು ಕಾರ್ಡಿಯೋ ಬದಲಿಸುತ್ತದೆ. ಹೀಗಾಗಿ ಬೆಳಗ್ಗೆ ಮಾಡಿದರೆ ಉತ್ತಮ. ಹಾಗಾಂತ ಸಂಜೆ ಮಾಡಿದರೆ ಸಮಸ್ಯೆ ಏನು ಇಲ್ಲ. ಅನೇಕರು ಸಂಜೆ ವೇಳೆ ಭಾರ ಎತ್ತುವ ವ್ಯಾಯಾಮ ಅಂದರೆ ಜಿಮ್ ಮಾಡುವುದು ಜಾಸ್ತಿ.

ಯಾಕಾಗಿ ನಾವು ಕಾರ್ಡಿಯೋ ಮಾಡಬೇಕು?

ಯಾಕಾಗಿ ನಾವು ಕಾರ್ಡಿಯೋ ಮಾಡಬೇಕು?

ಮನುಷ್ಯ ಯಾವುದೇ ವ್ಯಾಯಾಮ ಮಾಡದೆ ಇದ್ದರೆ ರೋಗ ರುಜಿನಗಳು ಆತನನ್ನು ಕಾಡುತ್ತದೆ. ವಯಸ್ಸಿಗಿಂತ ಮೊದಲೇ ನಡೆಯಲು ಆಗದೆ ಕೈಕಾಲುಗಳಲ್ಲಿ ನೋವು ಕಾಡುತ್ತದೆ. ಇಂತಹ ಅನೇಕ ಸಮಸ್ಯೆಗಳನ್ನು ತಪ್ಪಿಸಲು ಕಾರ್ಡಿಯೋ ವ್ಯಾಯಾಮ ಮಾಡುವುದು ಒಳ್ಳೆಯದು. ಹೌದು, ಆರೋಗ್ಯಕ್ಕೆ ಸಂಬಂಧಪಟ್ಟಂತೆ ಅನೇಕ ಲಾಭಗಳು ಕಾರ್ಡಿಯೋದಿಂದ ನಮಗೆ ಸಿಗುತ್ತದೆ. ಕಾರ್ಡಿಯೋದಿಂದ ಹೃದಯರಕ್ತನಾಳದ ಕಂಡೀಷನಿಂಗ್ ಸುಧಾರಿಸುತ್ತದೆ. ಅಲ್ಲದೇ ಹೃದಯ ಬಡಿತ ಜಾಸ್ತಿಯಾಗಿ ಹೃದಯ ಸಂಬಂಧ ಕಾಯಿಲೆ ದೂರವಾಗುತ್ತದೆ. ಬ್ಲಡ್ ಪ್ರೆಷರ್ ಸಮಸ್ಯೆ ಇದ್ದರೆ ಇದರಿಂದಲೂ ನಿವಾರಣೆ ಸಿಗುತ್ತದೆ.

ಕೆಟ್ಟ ಕೊಬ್ಬನ್ನೌ ತೆಗೆದು ಒಳ್ಳೆಯ ಕೊಬ್ಬು ಉತ್ಪಾದನೆಗೆ ಸಹಕಾರಿಯಾಗುತ್ತದೆ. ಮಧುಮೇಹ ನಿಯಂತ್ರಣಕ್ಕೂ ಇದು ಸಹಕಾರಿಯಾಗಿದೆ. ಶ್ವಾಸಕೋಶ ಸಮಸ್ಯೆಗೂ ಇದು ಕಾರ್ಡಿಯೋ ಉತ್ತಮ. ಇದಲ್ಲದೇ ಕಾಲು, ಮೂಳೆಗಳ ಸ್ನಾಯು, ಸಂದು ನೋವುಗಳಿದ್ದರು ಅವುಗಳನ್ನು ಗಟ್ಟಿಗೊಳಿಸುತ್ತದೆ. ಹೀಗೆ ಕಾರ್ಡಿಯೋ ಮಾಡುವುದರಿಂದ ಅನೇಕ ಸಮಸ್ಯೆಗಳ್ನ್ನು ನಿವಾರಣೆ ಮಾಡಬಹುದಾಗಿದೆ. ಇನ್ನು ಆರೋಗ್ಯ ಮಾತ್ರವಲ್ಲದೇ ನಿಮ್ಮ ಮಾನಸಿಕ ಆರೋಗ್ಯಕ್ಕೂ ಕಾರ್ಡಿಯೋ ಉತ್ತಮ. ಕಾರ್ಡಿಯೋದಿಂದ ಏಕಾಗ್ರತೆ ಹೆಚ್ಚುತ್ತದೆ, ಮನಸ್ಸು ಹಗುರವಾದ ಫೀಲ್ ಆಗುತ್ತದೆ. ಇನ್ನು ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬಹುದು. ತೂಕ ಇಳಿಸಬಹುದಾಗಿದೆ. ಅಲ್ಲದೇ ದೇಹದ ಸಾಮಾರ್ಥ್ಯವನ್ನು ಹೆಚ್ಚಿಸಬಹುದು.

ಎಷ್ಟು ಹೊತ್ತು ಕಾರ್ಡಿಯೋ ಮಾಡಬೇಕು?

ಎಷ್ಟು ಹೊತ್ತು ಕಾರ್ಡಿಯೋ ಮಾಡಬೇಕು?

ಕಾರ್ಡಿಯೋಗೆ ಸಮಯ ನಿಗದಿಪಡಿಸಿಲ್ಲ. ನಿಮ್ಮ ಆರೋಗ್ಯ ಹಾಗೂ ಫಿಸಿಕಲ್ ಫಿಟ್ ನೆಸ್ ಆಧಾರದ ಮೇಲೆ ನೀವು ಕಾರ್ಡಿಯೋ ಸಮಯವನ್ನು ಫಿಕ್ಸ್ ಮಾಡಿಕೊಳ್ಳಬಹುದು. ಅಥವಾ ನಿಮ್ಮ ಫಿಟ್ ನೆಸ್ ಟ್ರೈನರ್ ಸೂಚನೆ ಮೇರೆಗೆ ಇಷ್ಟು ಸಮಯ ಎಂದು ನಿಗದಿಪಡಿಸಿಕೊಳ್ಳಬಹುದು. ಅದಾಗ್ಯೂ ನೀವು ದಿನ ನಿತ್ಯ 10 ರಿಂದ 15 ನಿಮಿಷ ಕಾರ್ಡಿಯೋ ವ್ಯಾಯಾಮ ಮಾಡಿದರೆ ಉತ್ತಮವಾಗಿದೆ. ಅಥಾವ ವಾರಕ್ಕೆ ಒಂದು ಗಂಟೆ ಅಂದರೆ ಮೂರರಿಂದ ನಾಲ್ಕು ಸೆಷನ್ ರೀತಿಯಲ್ಲಿ ನೀವು ಕಾರ್ಡಿಯೋ ಮಾಡಿಕೊಳ್ಳಬಹುದಾಗಿದೆ. ಇದು ಉತ್ತಮ ಆಯ್ಕೆಯಾಗಿದೆ. ಇನ್ನು ದಿನಕ್ಕೆ ಕೇವಲ 15 ನಿಮಿಷಗಳ ವ್ಯಾಯಾಮವು ಜೀವಿತಾವಧಿಯನ್ನು ಮೂರು ವರ್ಷಗಳವರೆಗೆ ಹೆಚ್ಚಿಸುತ್ತದೆ ಮತ್ತು ಸಾವಿನ ಅಪಾಯವನ್ನು 14% ರಷ್ಟು ಕಡಿಮೆ ಮಾಡುತ್ತದೆ ಎಂದು ತೈವಾನ್ನ ಸಂಶೋಧನೆಯೊಂದು ಹೇಳಿದೆ. ಹೀಗಾಗಿ ದಿನ ನಿತ್ಯ 10 ರಿಂದ 15 ನಿಮಿಷ ಕಾರ್ಡಿಯೋ ಮಾಡುವುದು ಉತ್ತಮ ಆಯ್ಕೆ.

ಯಾವ ಕಾರ್ಡಿಯೋದಿಂದ ಏನು ಲಾಭ?

ಯಾವ ಕಾರ್ಡಿಯೋದಿಂದ ಏನು ಲಾಭ?

ಎಲ್ಲಾ ಕಾರ್ಡಿಯೋ ವ್ಯಾಯಾಮದಿಂದ ಒಂದಲ್ಲ ಒಂದು ರೀತಿಯ ಲಾಭ ಇದ್ದೆ ಇದೆ. ಅದರಲ್ಲೂ ನೀವು ನಿತ್ಯ ಓಡುವ ಕಾರ್ಡಿಯೋ ವ್ಯಾಯಾಮ ಮಾಡುವುದಾದರೆ, ಅರ್ಧ ಗಂಟೆಯ ಓಡುವಿಕೆಯು ನಿಮ್ಮಲ್ಲಿ 300 ಕ್ಯಾಲೋರಿಗಳನ್ನು ದಿನದಲ್ಲಿ ಕರಗಿಸುತ್ತದೆ. ಹೆಚ್ಚಿನ ಪರಿಕರಗಳ ಸಹಾಯವಿಲ್ಲದೆ ನಿಮ್ಮ ದೇಹದಲ್ಲಿನ ಕೊಬ್ಬನ್ನು ಕರಗಿಸುವ ಕಾರ್ಡಿಯೋ ವ್ಯಾಯಾಮದ ಸರಳ ವ್ಯಾಯಾಮವಾಗಿದೆ. ಲಿಪ್ಟಿಕಲ್ ಟ್ರೈನರ್ ಅಥವಾ ಟ್ರೆಡ್ಮಿಲ್ ಎಂಬ ಮೆಶೀನ್ಗಳ ಮೂಲಕ ನೀವು ಕಾರ್ಡಿಯೋ ಎಕ್ಸೈಸ್ ಮಾಡಬಹುದು.

ಈ ಮೆಶೀನ್‌ಗಳಲ್ಲಿ ನೀವು ಅರ್ಧಗಂಟೆಗಳ ಕಾಲ ವ್ಯಾಯಾಮ ಮಾಡುವುದು 300 - 400 ಕ್ಯಾಲೋರಿಗಳನ್ನು ಕರಗಿಸುತ್ತದೆ. ಪ್ರತೀ ದಿನ ಅರ್ಧ ಗಂಟೆಗಳ ಕಾಲ ಈಜುವುದು 400 ರಷ್ಟು ಕ್ಯಾಲೋರಿಗಳನ್ನು ಕರಗಿಸುತ್ತದೆ. ಇದೊಂದು ತೂಕ ಇಳಿಕೆಗೆ ಸಹಕಾರಿಯಾಗಿರುವ ವ್ಯಾಯಾಮವಾಗಿದೆ. ಏರೋಬಿಕ್ಸ್ ಸ್ಟ್ರೆಚ್ಚಿಂಗ್, ಜಂಪಿಂಗ್ ಕ್ರಂಚಸ್ ಮತ್ತು ಇತರ ಕೆಲವೊಂದು ವ್ಯಾಯಾಮಗಳು ಸೇರ್ಪಡೆಗೊಂಡಿರುವುದರಿಂದ ನಿಮ್ಮ ದೇಹದಲ್ಲಿನ ಕೊಬ್ಬನ್ನು ಕರಗಿಸಲು ಇದು ಉತ್ತಮ ವ್ಯಾಯಾಮವಾಗಿದೆ. ಜುಂಬಾ ಡ್ಯಾನ್ಸ್ ಸ್ಟೆಪ್ಗಳನ್ನು ಒಳಗೊಂಡು ನಿಮ್ಮಲ್ಲಿ ವ್ಯಾಯಾಮ ಮಾಡಿಸುವುದರಿಂದ ನಿಮ್ಮ ಹೃದಯ ಬಡಿತವನ್ನು ಇದು ಹೆಚ್ಚಿಸುತ್ತದೆ. ಅಲ್ಲದೇ ಇದು ನಿಮ್ಮನ್ನು ಆಕರ್ಷಿಸುವ ಒಂದು ವ್ಯಾಯಮವಾಗಿದೆ.

English summary

Cardiovascular Exercise : When To Do it, Why To Do It And How Much To Do in Kannada

Cardiovascular Exercise : Here are complete deatil about when to do it, why to do it, how to do, read on...
X
Desktop Bottom Promotion