For Quick Alerts
ALLOW NOTIFICATIONS  
For Daily Alerts

ಬೆಂಗಳೂರು ಪೊಲೀಸರ ಜುಂಬಾ ಕುಣಿತ ವೈರಲ್, ಜುಂಬಾ ಡ್ಯಾನ್ಸ್‌ನ ಪ್ರಯೋಜನಗಳೇನು ಗೊತ್ತಾ?

|

ಬೆಂಗಳೂರು ಪೊಲೀಸರು ಜುಂಬಾ ಡ್ಯಾನ್ಸ್‌ಗೆ ಕುಣಿದು ಕುಪ್ಪಳಿಸಿದ ವೀಡಿಯೋ ಸಿಕ್ಕಾ ಪಟ್ಟೆ ವೈರಲ್ ಆಗಿದೆ. ಒತ್ತಡ ನಿವಾರಣೆಗಾಗಿ ಈಶಾನ್ಯ ಪೊಲೀಸರಿಗೆ ಮೂರು ದಿನಗಳ ಕಾಲ ಜುಂಬಾ ನೃತ್ಯ ತರಬೇತಿ ನೀಡಲಾಗಿತ್ತು.

ಸದಾ ಆಕ್ಟೀವ್ ಆಗಿರ್ಬೇಕಂದ್ರೆ ಇದು ಬೆಸ್ಟ್ ಆಯ್ಕೆ! | Oneindia Kannada
Bangalore Police Jumba dance

ಮಾನ್ಯತಾ ಟೆಕ್‌ ಪಾರ್ಕ್‌ನ ಮ್ಯಾನ್‌ಪೋ ಕನ್ವೆಷನ್‌ ಹಾಲ್‌ನಲ್ಲಿ 3 ದಿನಗಳವರೆಗೆ ಈ ಜುಂಬಾ ನೃತ್ಯ ನೀಡಲಾಗಿತ್ತು. ಸುಮಾರು 800ಕ್ಕೂ ಅಧಿಕ ಪೊಲೀಸರು ಈ ತರಬೇತಿಯಲ್ಲಿ ಭಾಗವಹಿಸಿದ್ದರು. ಪೊಲೀಸರು ಜುಂಬಾ ನೃತ್ಯ ಮಾಡಿರುವ ವೀಡಿಯೋವನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದೇ ತಡ ವೀಡಿಯೋ ವೈರಲ್ ಅಗಿದೆ. ಪೊಲೀಸರ ನೃತ್ಯಕ್ಕೆ ನಟ ಪುನೀತ್‌ ರಾಜ್‌ಕುಮಾರ್‌ ಹಾಗೂ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜುಂಬಾ ನೃತ್ಯ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು ಮಾತ್ರವಲ್ಲ ಈ ಪ್ರಮುಖ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.

1. ಮನಸ್ಸಿಗೆ ಖುಷಿ ನೀಡುತ್ತದೆ

1. ಮನಸ್ಸಿಗೆ ಖುಷಿ ನೀಡುತ್ತದೆ

ಜುಂಬಾ ಡ್ಯಾನ್ಸ್‌ನಲ್ಲಿ ನೃತ್ಯ ಮಾಡುತ್ತಾ ವ್ಯಾಯಾಮ ಮಾಡುವುದು ಮನಸ್ಸಿಗೆ ತುಂಬಾ ಖುಷಿಯಾಗುತ್ತದೆ ಹಾಗೂ ಈ ವ್ಯಾಯಾಮ ಬೋರ್‌ ಅನಿಸುವುದಿಲ್ಲ. ಜುಂಬಾ ಡ್ಯಾನ್ಸ್ ಮಾಡುತ್ತಿದ್ದರೆ ಅದು ವ್ಯಾಯಾಮ ಎಂದು ಅನಿಸುವುದೇ ಇಲ್ಲ. ಅದರಲ್ಲೂ ಒಂದಿಷ್ಟು ಮಂದಿ ಜೊತೆ ಸೇರಿಕೊಂಡು ಮಾಡುತ್ತಿದ್ದರೆ ನೃತ್ಯ ಅಭ್ಯಾಸ ಮಾಡಿದಂತಾಗುವುದು.

2. ತೂಕ ಇಳಿಕೆಯಾಗುತ್ತದೆ

2. ತೂಕ ಇಳಿಕೆಯಾಗುತ್ತದೆ

ತೂಕ ಇಳಿಕೆಗೆ ಇದೊಂದು ಅತ್ಯುತ್ತಮವಾದ ವಿಧಾನವಾಗಿದೆ. ದಿನಾ ಒಂದೇ ಬಗೆಯ ವ್ಯಾಯಾಮ ಮಾಡುವುದು ಬೋರ್‌ ಎಂದು ಅನಿಸುವವರು ಜುಂಬಾ ನೃತ್ಯಕ್ಕೆ ಸೇರುವುದು ಒಳ್ಳೆಯದು. ಜುಂಬಾ ನೃತ್ಯ ಮಾಡುವುದರಿಂದ ಆಕರ್ಷಕವಾದ ಮೈಕಟ್ಟು ಪಡೆಯಬಹುದು. ಈ ವ್ಯಾಯಾಮ ಮಾಡಿದರೆ ಒಂದು ಗಂಟೆಯಲ್ಲಿ 600ರಿಂದ 1000 ಕ್ಯಾಲೋರಿ ಕರಗಿಸಬಹುದು.

3. ದೇಹಕ್ಕೆ ಆಕರ್ಷಕ ಮೈಕಟ್ಟು ನೀಡುತ್ತದೆ

3. ದೇಹಕ್ಕೆ ಆಕರ್ಷಕ ಮೈಕಟ್ಟು ನೀಡುತ್ತದೆ

ತೊಡೆ ದಪ್ಪ ಕರಗಿಸಬೇಕು, ಕೈ ತೋಳುಗಳಲ್ಲಿರುವ ಬೊಜ್ಜು ಕರಗಿಸಬೇಕು, ಸೊಂಟದ ಸುತ್ತವಿರುವ ಬೊಜ್ಜು ಕರಗಿಸಬೇಕು ಎಂದೆಲ್ಲಾ ಬಯಸುವವರು ಜುಂಬಾ ನೃತ್ಯ ಮಾಡುವುದರಿಂದ ಅಕರ್ಷಕ ಮೈಕಟ್ಟು ಪಡೆಯಬಹುದು. ಇದು ಸ್ನಾಯುಗಳನ್ನು ಬಲ ಪಡಿಸುತ್ತದೆ. ಮೈ ಬೊಜ್ಜು ಕರಗಿಸಿ, ನಿಮಗೆ ಯೌವನದ ಕಳೆಯನ್ನು ನೀಡುತ್ತದೆ.

4. ಹೃದಯದ ಆರೋಗ್ಯಕ್ಕೆ ಒಳ್ಳೆಯದು

4. ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಇದರಿಂದ ಏರೋಬಿಕ್ ಗುಣಗಳು ದೊರೆಯುವುದರ ಜೊತೆಗೆ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜುಂಬಾ ನೃತ್ಯ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸಿ ಹೃದಯದ ಸ್ವಾಸ್ಥ್ಯವನ್ನು ಕಾಪಾಡುತ್ತದೆ. ಹೃದಯದ ಸ್ವಾಸ್ಥ್ಯಕ್ಕೆ ಮುಖ್ಯವಾಗಿ ಮೈ ಬೊಜ್ಜು ಕರಗಬೇಕು. ಜುಂಬಾ ನೃತ್ಯ ಮಾಡುವುದರಿಂದ ಮೈ ಬೊಜ್ಜು ಟೆನ್ಷನ್ ಇರಲ್ಲ ನೋಡಿ.

5. ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ

5. ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ

ಜುಂಬಾ ನೃತ್ಯ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು. ತಲೆಸುತ್ತು ಕಡಿಮೆ ಮಾಡುವಲ್ಲಿ ಜುಂಬಾ ನೃತ್ಯ ತುಂಬಾ ಸಹಕಾರಿ ಎಂದು ಅಧ್ಯಯನಗಳು ಹೇಳೀವೆ. ಇದು ಏಕಾಗ್ರತೆಯನ್ನು ಹೆಚ್ಚಿಸಿ, ಮೆದುಳಿನ ಸಾಮಾರ್ಥ್ಯ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

6. ದೇಹದ ಅಂಗಗಳ ಸಮನ್ವಯ (Coordination) ಹೆಚ್ಚಿಸುತ್ತದೆ

6. ದೇಹದ ಅಂಗಗಳ ಸಮನ್ವಯ (Coordination) ಹೆಚ್ಚಿಸುತ್ತದೆ

ಜುಂಬಾ ನೃತ್ಯ ಮಾಡುವಾಗ ಕೈ ಕಾಲುಗಳನ್ನು ಆಡಿಸುತ್ತೇವೆ. ಆಗ ಕೈ ಕಾಲುಗಳಿಗೆ ಕೋ ಆರ್ಡಿನೇಷನ್ ಮುಖ್ಯವಾಗಿರುತ್ತದೆ, ಇದರಿಂದ ಮೆದುಳಿನ ಸಾಮರ್ಥ್ಯ ಚುರುಕಾಗುವುದು. ಇದು ದೇಹವನ್ನು ಸಡಿಲವಾಗಿ ಆಡಿಸಲು ಸಹಾಯ ಮಾಡುತ್ತದೆ.

7. ನಿಮ್ಮನ್ನು ಖುಷಿಯಾಗಿಡುತ್ತದೆ

7. ನಿಮ್ಮನ್ನು ಖುಷಿಯಾಗಿಡುತ್ತದೆ

ಪ್ರತಿಬಾರಿ ವ್ಯಾಯಾಮ ಮಾಡಿದಾಗ ದೇಹದಲ್ಲಿ ಎಂಡೋಫ್ರಿನ್ಸ್ ಹೆಚ್ಚಾಗುತ್ತದೆ. ಇದರಿಂದ ದೇಹದಲ್ಲಿ ಧನಾತ್ಮಕ ಚಿಂತನೆ ಸಾಮರ್ಥ್ಯ ಹೆಚ್ಚುವುದು.

ತೆಳ್ಳಗಾಗಬೇಕು, ಇನ್ನೊಂದಿಷ್ಟು ಚುರುಚುರುಕು ಆಗಬೇಕು ಎಂದು ಬಯಸುವುದಾದರೆ ಜೂಂಬಾ ನೃತ್ಯ ಬೆಸ್ಟ್ ಆಯ್ಕೆ ನೋಡಿ.

English summary

Blr Police Jumba Dance Goes Viral, Health Benefits of Jumba Dance

Bangalore police jumba dance become viral. Here are Why Zumba is a great alternative to traditional fitness programs:
X
Desktop Bottom Promotion