For Quick Alerts
ALLOW NOTIFICATIONS  
For Daily Alerts

ಉತ್ತಮ ದೇಹದಾರ್ಢ್ಯತೆಗಾಗಿ ಪ್ರಯತ್ನಿಸುತ್ತಿದ್ದೀರಾ? ಈ ಪ್ರೊಟೀನ್ ಶೇಕ್ ಕುಡಿಯಿರಿ

|

ಉತ್ತಮ ದೇಹದಾರ್ಢ್ಯತೆ ಹೊಂದುವ ಆಸೆ ನಿಮಗಿದ್ದರೆ ಪ್ರೋಟೀನ್ ಶೇಕ್ ಗಳು ಬಹಳ ಬೆಸ್ಟ್. ವ್ಯಾಯಾಮ ಮಾಡುವುದಕ್ಕೂ ಮುನ್ನ ಮತ್ತು ವ್ಯಾಯಾಮದ ನಂತರ ದೇಹದ ಮಾಂಸಖಂಡಗಳಿಗೆ ಅಗತ್ಯವಿರುವ ಪ್ರೊಟೀನ್‌ಗಳನ್ನು ಒದಗಿಸುವ ಮೂಲಕ ನೀವು ನಿಮ್ಮ ಮಾಂಸಖಂಡಗಳ ಬಲವರ್ಧನೆ ಮಾಡಿಕೊಳ್ಳಬಹುದು.

ಕೊಬ್ಬಿನಾಂಶ ಕರಗಿಸಿ, ದೇಹ ಸೌಂದರ್ಯ ಹೆಚ್ಚಿಸಿ ಮತ್ತು ನಿಮ್ಮ ಆರೋಗ್ಯ ವೃದ್ಧಿಸಲು ಇದು ಸಹಕಾರಿ. ನಾವಿಲ್ಲಿ 15 ಅತ್ಯುತ್ತಮ ಹೋಮ್ ಮೇಡ್ (ಮನೆಯಲ್ಲಿಯೇ ಮಾಡಬಹುದಾದ) ಪ್ರೋಟೀನ್ ಶೇಕ್ ಗಳನ್ನು ನಿಮಗಾಗಿ ತಿಳಿಸಿಕೊಡುತ್ತಿದ್ದೇವೆ.

 1. ಬಿಸಿಬಿಸಿ ಕೋಕಾ

1. ಬಿಸಿಬಿಸಿ ಕೋಕಾ

ಬೇಕಾಗುವ ಪದಾರ್ಥಗಳು

1 ಕಪ್ ಕೊಬ್ಬಿನಂಶಯಿಲ್ಲದ ಇಲ್ಲದ ಹಾಲು

1 ಕಪ್ ಹಾಲಿನ ಚಾಕಲೇಟ್ ಅಥವಾ ಕೊಕಾ

1 ಸ್ಕೂಪ್ ಪ್ರೊಟೀನ್ ಪೌಡರ್

½ ಕಪ್ ಕಡಿಮೆ ಫ್ಯಾಟ್ ಇರುವ ಕಾಟೇಜ್ ಚೀಜ್

ತಯಾರಿಸುವ ವಿಧಾನ ಹೇಗೆ?

ಬಿಸಿ ನೀರನ್ನು ಬ್ಲೆಂಡರ್ ಗೆ ಸೇರಿಸಿ ಮತ್ತು ಎಲ್ಲಾ ಪದಾರ್ಥಗಳನ್ನು ಅದಕ್ಕೆ ಹಾಕಿ. ಮೃದುವಾದ ಮಿಶ್ರಣ ಸಿಗುವವರೆಗೆ ಬ್ಲೆಂಡ್ ಮಾಡಿ. ಒಂದು ದೊಡ್ಡ ಗ್ಲಾಸ್ ಅಥವಾ ಲೋಟಕ್ಕೆ ಹಾಕಿ ಸವಿಯಿರಿ.

ಕುಡಿಯುವುದಕ್ಕೆ ಅತ್ಯುತ್ತಮ ಸಮಯ:

ರಾತ್ರಿಯ ಊಟದ ಸಮಯ ಅಥವಾ ವ್ಯಾಯಾಮ ಮಾಡಿದ ನಂತರ

2. ಕಿತ್ತಳೆ

2. ಕಿತ್ತಳೆ

ಬೇಕಾಗುವ ಪದಾರ್ಥಗಳು

ತಾಜಾ ಕಿತ್ತಳೆ ರಸ

½ ಕಪ್ ಫ್ಯಾಟ್ ಫ್ರೀ ಆಗಿರುವ ವೆನಿಲ್ಲಾ ಯೋಗರ್ಟ್

1 ಸ್ಕೂಪ್ ವೆನಿಲ್ಲಾ ಫ್ಲೇವರ್ ಇರುವ ಪ್ರೋಟಿನ್ ಪೌಡರ್

ತಯಾರಿಸುವ ವಿಧಾನ ಹೇಗೆ?

ಎಲ್ಲಾ ಪದಾರ್ಥಗಳನ್ನು ಬ್ಲೆಂಡರ್ ಗೆ ಹಾಕಿ ಮಿಶ್ರಣ ಮಾಡಿ. ಅಗತ್ಯವಾಗುವಷ್ಟು ನೀರನ್ನು ಸೇರಿಸಿ ಮೃದುವಾದ ಸ್ಮೂದಿ ತಯಾರಿಸಿ ಕುಡಿಯಿರಿ.

ಸೇವಿಸುವುದಕ್ಕೆ ಸೂಕ್ತ ಸಮಯ:

ಬೆಳಿಗ್ಗೆ

3. ಚಾಕಲೇಟ್ ಬಾದಾಮಿ ಬ್ರೌನಿ

3. ಚಾಕಲೇಟ್ ಬಾದಾಮಿ ಬ್ರೌನಿ

ಬೇಕಾಗುವ ಪದಾರ್ಥಗಳು

1 ಕಪ್ ಫ್ಯಾಟ್ ಫ್ರೀ ಆಗಿರುವ ಹಾಲು

1 ಸ್ಕೂಪ್ ಪ್ರೋಟೀನ್ ಪೌಡರ್

ಕತ್ತರಿಸಿಕೊಂಡಿರುವ ಒಣಗಿದ ಬೀಜಗಳು

1 ಬ್ರೌನಿ

ತಯಾರಿಸುವ ವಿಧಾನ ಹೇಗೆ?

ಒಂದು ಸ್ಕೂಪ್ ಪ್ರೋಟೀನ್ ಪೌಡರ್ ಗೆ ಫ್ಯಟ್ ಫ್ರೀ ಹಾಲನ್ನು ಸೇರಿಸಿ. ಗಂಟುಗಳು ಉಳಿಯದಂತೆ ಚೆನ್ನಾಗಿ ಕುಲುಕಿ. ಮೇಲ್ಬಾಗದಲ್ಲಿ ಬೀಜಗಳಿಂದ ಅಲಂಕರಿಸಿ ಮತ್ತು ಬ್ರೌನಿಯಿಂದ ಅಲಂಕರಿಸಿ ಕುಡಿಯಿರಿ.

ಸೇವಿಸುವುದಕ್ಕೆ ಸೂಕ್ತ ಸಮಯ:

ವ್ಯಾಯಾಮ ಆರಂಭಿಸುವುದಕ್ಕೂ ಮುನ್ನ

4. ಚಾಕಲೇಟ್ ಕಡಲೆಬೀಜ ಮತ್ತು ಬೆಣ್ಣೆ

4. ಚಾಕಲೇಟ್ ಕಡಲೆಬೀಜ ಮತ್ತು ಬೆಣ್ಣೆ

ಬೇಕಾಗುವ ಪದಾರ್ಥಗಳು

2 ಸ್ಕೂಪ್ ಗಳಷ್ಟು ಚಾಕಲೇಟ್ ಪ್ರೋಟಿನ್ ಪೌಡರ್

2 ಸ್ಪೂನ್ ಹೆವಿ ವೈಪಿಂಗ್ ಕ್ರೀಮ್

1 ಟೇಬಲ್ ಸ್ಪೂನ್ ಫ್ಲ್ಯಾಕ್ ಮೀಲ್

1 ಟೇಬಲ್ ಸ್ಪೂನ್ ಪೀನಟ್ ಬಟರ್

ನೀರು

ತಯಾರಿಸುವ ವಿಧಾನ ಹೇಗೆ?

ಎಲ್ಲಾ ವಸ್ತುಗಳನ್ನು ಅಗತ್ಯ ಪ್ರಮಾಣದಷ್ಟು ನೀರನ್ನು ಸೇರಿಸಿ ರುಬ್ಬಿಕೊಳ್ಳಿ. ಸರಿಯಾಗಿ ಮಿಶ್ರಣವಾದ ನಂತರ ಐಸ್ ಕ್ಯೂಬ್ ಸೇರಿಸಿ ಸೇವಿಸಬಹುದು.

ಸೇವಿಸುವುದಕ್ಕೆ ಸೂಕ್ತ ಸಮಯ:

ಬೆಳಿಗ್ಗೆ ಅಥವಾ ವ್ಯಾಯಾಮ ಆರಂಭಿಸುವುದಕ್ಕೂ ಮುನ್ನ

5. ಕಾಫಿ ಶೇಕ್

5. ಕಾಫಿ ಶೇಕ್

ಕಾಫಿ ಪ್ರಿಯರೆಲ್ಲರಿಗೂ ಇದು ಪರಿಪೂರ್ಣವಾದ ಡ್ರಿಂಕ್ ಆಗಿದೆ. ಇಂಟರ್ ನ್ಯಾಷನಲ್ ಸೊಸೈಟಿ ಆಫ್ ಸ್ಪೋರ್ಟ್ಸ್ ನ್ಯೂಟ್ರೀಷಿಯನ್ ಅಧ್ಯಯನದ ಪ್ರಕಾರ ಕಾಫಿಯಲ್ಲಿನ ಕೆಫೀನ್ ಅಂಶವು ವ್ಯಾಯಾಮದ ಪ್ರದರ್ಶನವನ್ನು ಅಧಿಕಗೊಳಿಸುತ್ತದೆ.

ಬೇಕಾಗುವ ಪದಾರ್ಥಗಳು

1 ಕಪ್ ಹಾಟ್ ಕಾಫಿ

2 ಟೀ ಸ್ಪೂನ್ ಜೇನುತುಪ್ಪ

1 ಸ್ಕೂಪ್ ಚಾಕಲೇಟ್ ವೇ ಪ್ರೋಟೀನ್ ಪೌಡರ್

ತಯಾರಿಸುವ ವಿಧಾನ ಹೇಗೆ?

ಒಂದು ಕಪ್ ಹಾಟ್ ಕಾಫಿಗರ ಎರಡು ಟೀ ಸ್ಪೂನ್ ಜೇನು ಮತ್ತು ಪ್ರೊಟೀನ್ ಪೌಡರ್ ನ್ನು ಸೇರಿಸಿ ಕದಡಿದರೆ ಕುಡಿಯುವ ಡ್ರಿಂಕ್ ಸಿದ್ಧವಾಗುತ್ತದೆ.

ಸೇವಿಸುವುದಕ್ಕೆ ಸೂಕ್ತ ಸಮಯ:

ವ್ಯಾಯಾಮ ಆರಂಭಿಸುವುದಕ್ಕೂ ಮುನ್ನ

 6. ನಿಂಬೆಯ ಟ್ವಿಸ್ಟ್

6. ನಿಂಬೆಯ ಟ್ವಿಸ್ಟ್

ಬೇಕಾಗುವ ಪದಾರ್ಥಗಳು

2 ಕಪ್ ಲೆಮನೇಡ್

1 ಸ್ಕೂಪ್ ವೆನಿಲ್ಲಾ ಕೆಸಿನ್ ಪೌಡರ್

1 ಸ್ಕೂಪ್ ವೆನಿಲ್ಲಾ ವೆ ಪ್ರೊಟೀನ್

ತಯಾರಿಸುವ ವಿಧಾನ ಹೇಗೆ?

ಎಲ್ಲಾ ಪದಾರ್ಥಗಳನ್ನು ಸೇರಿಸಿ ಮತ್ತು ಚೆನ್ನಾಗಿ ಶೇಕ್ ಮಾಡಿ. ಸರಿಯಾದ ದಪ್ಪವನ್ನು ಕಾಪಾಡುವುದಕ್ಕಾಗಿ ಅಗತ್ಯ ಪ್ರಮಾಣದಲ್ಲಿ ನೀರನ್ನು ಕೂಡ ಸೇರಿಸಬಹುದು.

ಸೇವಿಸುವುದಕ್ಕೆ ಸೂಕ್ತ ಸಮಯ:

ವ್ಯಾಯಾಮದ ನಂತರ

7. ಪೀಚ್ ಪ್ರೊಟೀನ್

7. ಪೀಚ್ ಪ್ರೊಟೀನ್

ಬೇಕಾಗುವ ಪದಾರ್ಥಗಳು

½ ಕಪ್ ಪ್ರೋಝನ್ ಪೀಚ್ ಗಳು

½ ಕಪ್ ಕಡಿಮೆ ಫ್ಯಾಟ್ ಇರುವ ಯೋಗರ್ಟ್

2 ಸ್ಕೂಪ್ ವೆನಿಲ್ಲಾ ಪ್ರೋಟೀನ್ ಪೌಡರ್

1 ಕಪ್ ನೀರು

2 ಟೇಬಲ್ ಸ್ಪೂನ್ ಶುಗರ್ ಫ್ರೀ ಆಪಲ್ ಜ್ಯೂಸ್ (ಆಯ್ಕೆಗೆ ಬಿಟ್ಟದ್ದು)

ತಯಾರಿಸುವ ವಿಧಾನ ಹೇಗೆ?

ಎಲ್ಲಾ ಪದಾರ್ಥಗಳನ್ನು ಬ್ಲೆಂಡ್ ಮಾಡಿ. ಅಗತ್ಯ ಪ್ರಮಾಣದಲ್ಲಿ ನೀರನ್ನು ಸೇರಿಸಿ. ನಿಮ್ಮ ಇಚ್ಛೆಯಂತೆ ಇತರೆ ಯಾವುದರೆ ಹಣ್ಣಿನ ರಸವನ್ನು ಬೇಕಿದ್ದರೂ ಸೇರಿಸಿಕೊಳ್ಳಬಹುದು.

ಸೇವಿಸುವುದಕ್ಕೆ ಸೂಕ್ತ ಸಮಯ:

ಬೆಳಿಗ್ಗಿನ ಮಧ್ಯದ ಸಮಯದಲ್ಲಿ

8. ಬಾಳೆಹಣ್ಣಿನ ಶೇಕ್

8. ಬಾಳೆಹಣ್ಣಿನ ಶೇಕ್

ಪ್ರೋಟೀನ್ ಪಡೆಯುವುದಕ್ಕೆ ಬಾಳೆಹಣ್ಣನ್ನು ಹಲವು ರೀತಿಯಲ್ಲಿ ಸೇವಿಸಬಹುದು. ಅದರಲ್ಲಿ ಒಂದು ವಿಧಾನ ಡಾರ್ಕ್ ಚಾಕಲೇಟ್ ಜೊತೆಗೆ ಬಾಳೆಹಣ್ಣಿನ ಮಿಶ್ರಣ. ಇದು ಬಹಳ ಶ್ರೀಮಂತವೆನಿಸುವಂತಹ ಮಿಲ್ಕ್ ಶೇಕ್ ಆಗುತ್ತದೆ.

ಬೇಕಾಗುವ ಪದಾರ್ಥಗಳು

2 ಸ್ಕೂಪ್ ಚಾಕಲೇಟ್ ಪ್ರೋಟೀನ್ ಪೌಡರ್

1 ಕಪ್ ಹೆಚ್ಚುವರಿ ಸಿಹಿ ಸೇರಿಸದ ಬಾದಾಮಿ ಹಾಲು

1 ಸಣ್ಣದಾಗಿ ಹೆಚ್ಚಲಾಗಿರುವ ಮತ್ತು ಮಧ್ಯಮ ಗಾತ್ರ ಬಾಳೆಹಣ್ಣು

1 ಟೀಸ್ಪೂನ್ ಡಾರ್ಕ್ ಚಾಕಲೇಟ್ ಚೋಕೋ ಚಿಪ್ಸ್

ಚಕ್ಕೆ ಪುಡಿ ಚಿಟಿಕೆ

ತಯಾರಿಸುವ ವಿಧಾನ ಹೇಗೆ?

ಒಂದು ಕಪ್ ಬಾದಾಮಿ ಹಾಲಿಗೆ ಎರಡು ಸ್ಕೂಪ್ ಚಾಕಲೇಟ್ ಪ್ರೋಟೀನ್ ಪೌಡರ್ ಸೇರಿಸಿ. ಗಂಟುಗಳು ಉಳಿಯದಂತೆ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಪ್ರೋಝನ್ ಬಾಳೆಹಣ್ಣಿನ ತಜಂಡುಗಳನ್ನು ಸೇರಿಸಿ. ನೀವು ಬಾಳೆಹಣ್ಣುಗಳನ್ನು ಕತ್ತರಿಸಲೂಬಹುದು ಅಥವಾ ರುಬ್ಬಿಕೊಂಡು ಸೇರಿಸಬಹುದು.ಚೋಕೋ ಚಿಪ್ಸ್ ಜೊತೆಗೆ ಸರ್ವ್ ಮಾಡಿ ಮತ್ತು ಸ್ವಲ್ಪ ಚಕ್ಕೆಯ ಪುಡಿಯನ್ನು ಸೇರಿಸಿ.

ಸೇವಿಸುವುದಕ್ಕೆ ಸೂಕ್ತ ಸಮಯ:

ಜಿಮ್ ತೆರಳುವ ಮುನ್ನ ವ್ಯಾಯಮ ಆರಂಭಿಸುವ ಮುನ್ನ

9. ಫ್ರೂಟಿ ಪ್ರೋಟೀನ್ ಶೇಕ್

9. ಫ್ರೂಟಿ ಪ್ರೋಟೀನ್ ಶೇಕ್

ಪ್ರೋಟೀನ್ ಶೇಕ್ ನಲ್ಲಿ ಫೈಬರ್ ಇರುವುದಿಲ್ಲ. ಹಣ್ಣುಗಳಿಂದ ತುಂಬಿರುವ ಆಹಾರದಲ್ಲಿ ಪ್ರೋಟೀನ್ ಜೊತೆಗೆ ಅಧಿಕ ಫೈಬರ್ ಅಂಶವೂ ಇರುತ್ತದೆ.

ಬೇಕಾಗುವ ಪದಾರ್ಥಗಳು

2 ಸ್ಕೂಪ್ ವೇ ಪ್ರೋಟೀನ್ ಪೌಡರ್

1 ಕಪ್ ಸಿಹಿ ಇರದ ಬಾದಾಮಿ ಹಾಲು ಅಥವಾ 1 ಕಪ್ ಆಪಲ್ ಜ್ಯೂಸ್

½ ಬಾಳೆಹಣ್ಣು

1 ಟೀಸ್ಪೂನ್ ಗೋಧಿ ರಸ

1 ಕಪ್ ಹೆಚ್ಚಿದ ಪೀಚ್ ಗಳು

3 ಸ್ಟ್ರಾಬೆರ್ರಿಗಳು

ತಯಾರಿಸುವ ವಿಧಾನ ಹೇಗೆ?

ಎಲ್ಲಾ ಪದಾರ್ಥಗಳನ್ನು ಸೇರಿಸಿ ಬ್ಲೆಂಡ್ ಮಾಡಿ ಜೊತೆಗೆ ಹಣ್ಣಿನ ತಿರುಳನ್ನೂ ಸೇರಿಸಿ. ಸರಿಯಾದ ಜ್ಯೂಸ್ ಗಾಗಿ ಅಗತ್ಯವಿರುವಷ್ಟು ನೀರು ಸೇರಿಸಿ.

ಸೇವಿಸುವುದಕ್ಕೆ ಸೂಕ್ತ ಸಮಯ:

ವ್ಯಾಯಾನ ಮಾಡುವುದಕ್ಕೂ ಮೊದಲು

10. ತೆಂಗಿನಕಾಯಿ ಬಾದಾಮಿ

10. ತೆಂಗಿನಕಾಯಿ ಬಾದಾಮಿ

ಬೇಕಾಗುವ ಪದಾರ್ಥಗಳು

2 ಸ್ಕೂಪ್ ಚಾಕಲೇಟ್ ಪ್ರೋಟೀನ್

1 ಕಪ್ ಸಿಹಿ ಇರದ ಬಾದಾಮಿ ಹಾಲು

2 ಟೀಸ್ಪೂನ್ ಡಾರ್ಕ್ ಚಾಕಲೇಟ್ ಚೊಕೋ ಚಿಪ್ಸ್

2 ಟೇಬಲ್ ಸ್ಪೂನ್ ಬಾದಾಮಿ ಬಟರ್

1/4 ಕಪ್ ಹೆಚ್ಚುವರಿ ಸಿಹಿಯಾಗಿರದ ಎಳೆ ತೆಂಗಿನಕಾಯಿ

ತಯಾರಿಸುವ ವಿಧಾನ ಹೇಗೆ?

ಎಲ್ಲಾ ಪದಾರ್ಥಗಳನ್ನು ಮಿಕ್ಸರ್ ನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕೊಕೊನಟ್ ಅಲ್ಮಂಡ್ ನ ಶೇಕ್ ಸವಿಯಿರಿ.

ಸೇವಿಸುವುದಕ್ಕೆ ಸೂಕ್ತ ಸಮಯ:

ವ್ಯಾಯಾಮ ಮಾಡುವುದಕ್ಕೂ ಮೊದಲು

ತೀರ್ಮಾನ

ತೀರ್ಮಾನ

ನಿಮ್ಮ ಮಾಂಸಖಂಡಗಳ ಬಲವರ್ಧನೆಗೆ ಮನೆಯಲ್ಲೆ ತಯಾರಿಸಿಕೊಳ್ಳಬಹುದಾದ ಪ್ರೊಟೀನ್ ಶೇಕ್ ಗಳು ಬಹಳ ಪ್ರಯೋಜನಕಾರಿ. ಸ್ಮೂದಿಗೆ ಪ್ರೋಟೀನ್ ಅಂಶವನ್ನು ಹೆಚ್ಚಿಸುವ ಸಲುವಾಗಿ ಪ್ರೋಟೀನ್ ಪೌಡರ್ ನ್ನು ಸೇರಿಸಲಾಗುತ್ತದೆ. ಶಕ್ತಿಯನ್ನು ಇದು ಹೆಚ್ಚಿಸುತ್ತದೆ . ಹಾಗಾಗಿ ರುಚಿಯಾಗಿರುವ ಮೇಲಿನ ಸ್ಮೂದಿಗಳನ್ನು ತಯಾರಿಸಿಕೊಂಡು ನಿಮ್ಮ ದೇಹದಾರ್ಢ್ಯತೆಯನ್ನು ಹೆಚ್ಚಿಸಿಕೊಳ್ಳಬಹುದು.

English summary

Best Homemade Protein Shake For Body Building

Hare best home made protien shake for gym body, have a look,
X
Desktop Bottom Promotion