For Quick Alerts
ALLOW NOTIFICATIONS  
For Daily Alerts

ಮೈ ಬೊಜ್ಜು ಕರಗುತ್ತಿಲ್ಲವೇ?ಬಾಳೆದಿಂಡಿನ ಜ್ಯೂಸ್ ಟ್ರೈ ಮಾಡಿ

|

ವರ್ಕೌಟ್‌ ಮಾಡ್ತಾ ಇದ್ದೀರಾ, ಡಯಟ್‌ ಕೂಡ ಫಾಲೋ ಮಾಡ್ತಾ ಇದ್ದೀರ ಆದರೂ ಹಠಮಾರಿ ಮೈಬೊಜ್ಜು ಕರಗಿಸಲು ಕಷ್ಟವಾಗುತ್ತಿದೆಯೇ? ಹಾಗಾದರೆ ನೀವು ಬಾಳೆದಿಂಡಿನ ಜ್ಯೂಸ್‌ ಏಕೆ ಟ್ರೈ ಮಾಡಬಾರದು.

Banana Stem Juice Helps For Weight Loss

ನೀವು ನಿಮ್ಮ ಆಹಾರಕ್ರಮದಲ್ಲಿ ಬಾಳೆದಿಂಡಿನ ಜ್ಯೂಸ್‌ ಸೇರಿಸಿದ್ದೇ ಆದರೆ ಕರಗಲ್ಲ ಎನ್ನುವ ಬೊಜ್ಜು ಕೂಡ ಕರಗುವುದು, ಅಲ್ಲದೆ ಇದನ್ನು ಕುಡಿಯುವುದರಿಂದ ದೇಹಕ್ಕೆ ಅನೇಕ ಆರೋಗ್ಯಕರ ಪ್ರಯೋಜನಗಳು ಕೂಡ ಇವೆ. ಇದು ದೇಹದಲ್ಲಿರುವ ಕಶ್ಮಲಗಳನ್ನು ಹೊರ ಹಾಕುತ್ತದೆ ಅಲ್ಲದೆ ಕಿಡ್ನಿ ಸ್ಟೋನ್‌ ಬಾರದಂತೆ ತಡೆಯುತ್ತದೆ, ಈ ಸಮಸ್ಯೆ ಇದ್ದವರಿಗೆ ಕಿಡ್ನಿ ಸ್ಟೋನ್ ಹೊರಹಾಕುವಲ್ಲಿ ಕೂಡ ಸಹಕಾರಿ.

ಆದರೆ ಇದರ ಪ್ರಯೋಜನಗಳ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇಲ್ಲ, ಬಾಳೆಹಣ್ಣು ಪೋಷಕಾಂಶಗಳ ಆಗರ, ಇದರಲ್ಲಿ ಕೊಲೆಸ್ಟ್ರಾಲ್ ಅಂಶವಿಲ್ಲ, ನೀವು ಬಾಳೆಹಣ್ಣು ತೂಕ ಹೆಚ್ಚುತ್ತೆ ಎಂಬ ಕಾರಣದಿಂದ ತಿನ್ನದಿದ್ದರೆ ಮರು ಚಿಂತನೆ ಮಾಡುವುದು ಒಳ್ಳೆಯದು. ಏಕೆಂದರೆ ಇದರಲ್ಲಿ ವಿಟಮಿನ್ ಸಿ, ನಾರಿನಂಶ, ಪೊಟಾಷ್ಯಿಯಂ, ವಿಟಮಿನ್ ಬಿ, ಮ್ಯಾಂಗನೀಸ್ ಇದ್ದು ದೇಹಕ್ಕೆ ಶಕ್ತಿಯನ್ನು ತುಂಬುವ ಕೆಲಸ ಮಾಡುತ್ತದೆ.

ಇಲ್ಲಿ ನಾವು ಬಾಳೆದಿಂಡಿನ ಜ್ಯೂಸ್ ತೂಕ ಇಳಿಕೆಗೆ ಹೇಗೆ ಸಹಕಾರಿ, ಇದನ್ನು ಹೇಗೆ ಸೇವಿಸಬೇಕು ಎಂಬುವುದರ ಬಗ್ಗೆ ಹೇಳಿದ್ದೇವೆ ನೋಡಿ:

ಬಾಳೆದಿಂಡಿನ ಜ್ಯೂಸ್ ತೂಕ ಇಳಿಕೆಗೆ ಹೇಗೆ ಪರಿಣಾಮಕಾರಿ

ಬಾಳೆದಿಂಡಿನ ಜ್ಯೂಸ್ ತೂಕ ಇಳಿಕೆಗೆ ಹೇಗೆ ಪರಿಣಾಮಕಾರಿ

ಬಾಳೆದಿಂಡಿನಲ್ಲಿ ಕಡಿಮೆ ಕ್ಯಾಲೋರಿ ಹಾಗೂ ಅತ್ಯಧಿಕ ನಾರಿನಂಶವಿರುತ್ತದೆ. ಈ ಜ್ಯೂಸ್‌ ಕುಡಿಯುವುದರಿಂದ ಬೇಗನೆ ಹೊಟ್ಟೆ ಹಸಿವು ಉಂಟಾಗುವುದಿಲ್ಲ, ಅಲ್ಲದೆ ಇದರಲ್ಲಿರುವ ನಾರಿನಂಶ ಬೇಗನೆ ಸಕ್ಕರೆಯಂಶ ಬಿಡುಗಡೆ ಮಾಡುವುದಿಲ್ಲ, ಅಲ್ಲದೆ ಈ ನಾರಿನಂಶಕ್ಕೆ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುವ ಗುಣ ಕೂಡ ಇದೆ.

 ಬಾಳೆದಿಂಡಿನ ಜ್ಯೂಸ್ ಮಾಡುವುದು ಹೇಗೆ?

ಬಾಳೆದಿಂಡಿನ ಜ್ಯೂಸ್ ಮಾಡುವುದು ಹೇಗೆ?

ಇದು ಇತರ ಜ್ಯೂಸ್‌ಗಳಂತೆ ರುಚಿಕರವಲ್ಲ, ಆದರೆ ನಿಮ್ಮ ತೂಕ ಇಳಿಕೆಯ ಗುರಿ ಮುಟ್ಟಲು ಸಹಕಾರಿ.

ಬೇಕಾಗುವ ಸಾಮಗ್ರಿ

ಬಾಳೆದಿಂಡು ಚಿಕ್ಕದಾಗಿ ಕತ್ತರಿಸಿದ್ದು1 ಕಪ್

ನಿಂಬೆರಸ 1 ಚಮಚ

ನೀರು 1ಕಪ್

ಚಿಟಿಕೆಯಷ್ಟು ಉಪ್ಪು

ಮಾಡುವ ವಿಧಾನ

ಮಾಡುವ ವಿಧಾನ

  • ಒಂದು ಕಪ್ ನೀರಿಗೆ ಕತ್ತರಿಸಿದ ಬಾಳೆದಿಂಡು ಹಾಕಿ ಒಂದು ಗಂಟೆ ಬಿಡಿ.
  • ನಂತರ ಬ್ಲೆಂಡ್ ಮಡಿ, ಆ ಜ್ಯೂಸ್‌ ಅನ್ನು ಸೋಸಿ ಅದಕ್ಕೆ ಚಿಟಿಕೆಯಷ್ಟು ಉಪ್ಪು, ನಿಂಬೆರಸ ಹಾಕಿ ಮಿಶ್ರ ಮಾಡಿ ಕುಡಿಯಿರಿ.
  • ಈ ಜ್ಯೂಸ್‌ ಅನ್ನು ಪ್ರತಿದಿನ ತೆಗೆದುಕೊಳ್ಳಿ, ಇದರಿಂದ ತೂಕ ನಿಯಂತ್ರಣ ಸಾಧ್ಯ.

    ಬಾಳೆದಿಂಡಿನ ಜ್ಯೂಸ್‌ನ ಇತರ ಪ್ರಯೋಜನಗಳು

    ಬಾಳೆದಿಂಡಿನ ಜ್ಯೂಸ್‌ನ ಇತರ ಪ್ರಯೋಜನಗಳು

    ಈ ಜ್ಯೂಸ್‌ ಕುಡಿಯುವುದರಿಂದ ಅತೀ ದೊಡ್ಡ ಪ್ರಯೋಜನವೆಂದರೆ ಕಿಡ್ನಿ ಸ್ಟೋನ್ ಸಮಸ್ಯೆ ಇರಲ್ಲ. ಕಿಡ್ನಿ ಸ್ಟೋನ್‌ ಉಂಟಾದಾಗ ಅದು ನೀಡುವ ನೋವು ಅನುಭವಿಸಿದವರಿಗೆ ಗೊತ್ತಿರುತ್ತದೆ. ಕಿಡ್ನಿ ಸ್ಟೋನ್‌ ಉಂಟಾಗುವುದನ್ನು ತಡೆಗಟ್ಟಿ, ಕಿಡ್ನಿಯನ್ನು ರಕ್ಷಣೆ ಮಾಡುವ ಗುಣ ಈ ಜ್ಯೂಸ್‌ನಲ್ಲಿದೆ.

    ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುತ್ತೆ, ಜೀರ್ಣಕ್ರಿಯೆ

    ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುತ್ತೆ, ಜೀರ್ಣಕ್ರಿಯೆ

    ದೇಹದೊಳಗೆ ಕಶ್ಮಲ ಸಂಗ್ರಹವಾದರೆ ಇದರಿಂದ ಕೂಡ ಕಾಯಿಲೆಗಳು ಹೆಚ್ಚಾಗುವುದು, ಜೀರ್ಣಕ್ರಿಯೆ ಸರಾಗವಾಗಿ ನಡೆಯುವಂತೆ ಮಾಡಿ, ದೇಹದೊಳಗಿರುವ ಕಶ್ಮಲಗಳನ್ನು ಹೊರಹಾಕುವಲ್ಲಿ ಈ ಜ್ಯೂಸ್‌ ತುಂಬಾ ಸಹಕಾರಿ. ಇದು ಚಯಾಪಚಯ ಕ್ರಿಯೆ ಸರಿಯಾಗಿ ನಡೆಯುವಂತೆ ಮಾಡಿ, ಮೈ ಬೊಜ್ಜು ಕರಗಿಸುತ್ತದೆ.

    ಸೂಚನೆ: ಬಾಳೆದಿಂಡಿನ ಜ್ಯೂಸ್‌ ಕುಡಿಯುವುದರಿಂದ ಯಾವುದೇ ಅಡ್ಡಪರಿಣಾಮವಿಲ್ಲ ಆದರೂ ನಿಮ್ಮ ಆಹಾರಕ್ರಮದಲ್ಲಿ ತೂಕ ಇಳಿಕೆಗಾಗಿ ಏನೇ ಬದಲಾವಣೆ ತರುವ ಮುನ್ನ ಫಿಟ್‌ನೆಸ್‌ ಎಕ್ಸ್‌ಪರ್ಟ್ ಸಲಹೆ ಪಡೆಯಿರಿ.

English summary

Banana Stem Juice For Weight Loss

Have you tiered of trying weightloss tips, here are how banana stem juice helps for weight loss, read on.
X
Desktop Bottom Promotion