For Quick Alerts
ALLOW NOTIFICATIONS  
For Daily Alerts

ಮೈ ತೂಕ ಹೆಚ್ಚಬೇಕೆ? ಈ ಆಯುರ್ವೇದ ಔಷಧಿಗಳು ಒಳ್ಳೆಯದು

|

ತೂಕ ಹೆಚ್ಚಿಸುವುದು ತುಂಬಾ ಸುಲಭ, ಆದರೆ ತೂಕ ಇಳಿಸಲು ಕಷ್ಟ ಎನ್ನುವ ಮಾತು ಇದೆ. ಹಾಗಾದರೆ ತೂಕ ಹೆಚ್ಚಿಸುವುದು ಅಷ್ಟು ಸುಲಭವೇ ಎನ್ನುವ ಪ್ರಶ್ನೆ ಬರುವುದು. ಇದೇ ಪ್ರಶ್ನೆಯನ್ನು ನೀವು ಸಪೂರ ದೇಹದವರಲ್ಲಿ ಕೇಳಿ ನೋಡಿದರೆ ಅವರ ಪರಿಸ್ಥಿತಿ ಹೇಗಿದೆ ಎನ್ನುವುದು ಗೊತ್ತಾಗುವುದು.

ಏಕೆಂದರೆ ಅವರು ತೂಕ ಹೆಚ್ಚಿಸಬೇಕು ಎಂದು ತುಂಬಾ ಶ್ರಮ ಪಡುತ್ತಲಿರುವರು. ಆದರೆ ಇದು ಅವರಿಗೆ ಸಾಧ್ಯವಾಗುವುದೇ ಇಲ್ಲ. ಅದೇ ರೀತಿಯಾಗಿ ಅಧಿಕ ತೂಕ ಹೊಂದಿರುವವರಿಗೆ ತೂಕ ಇಳಿಸುವುದು ಕಷ್ಟದ ಕೆಲಸ. ಒಬ್ಬೊಬ್ಬರಿಗೆ ಒದೊಂದು ಸಮಸ್ಯೆ. ಏನೇ ಆಗಲಿ, ಸಾವಿರಾರು ವರ್ಷಗಳಿಂದ ಭಾರತೀಯರು ಪಾಲಿಸಿಕೊಂಡು ಬಂದಿರುವಂತಹ ಚಿಕಿತ್ಸಾ ವಿಧಾನ ಆಯುರ್ವೇದ ಮೂಲಕ ತೂಕ ಹೆಚ್ಚಿಸಬಹುದು ಎಂದು ಹೇಳಲಾಗಿದೆ. ಇದಕ್ಕೆ ಕೆಲವೊಂದು ಸರಳ ಹಾಗೂ ವೆಚ್ಚದಾಯಕವಲ್ಲದ ಚಿಕಿತ್ಸಾ ಕ್ರಮಗಳು ಇವೆ.

ಆಯುರ್ವೇದವು ಧಾನ್ಯ ಮತ್ತು ಯೋಗ ಮಾಡಬೇಕೆಂದು ಸಲಹೆ ನೀಡುವುದು. ಇದರ ಮೂಲಕವಾಗಿ ದೇಹವು ಸಮತೋಲಿನ ಶಕ್ತಿ ಪಡೆಯಲು ಸಾಧ್ಯವಿದೆ. ತೂಕ ಕಡಿಮೆ ಇರುವಂತಹ ಜನರು ಆಯುರ್ವೇದ ಚಿಕಿತ್ಸಾ ಕ್ರಮವನ್ನು ಪಾಲಿಸಿಕೊಂಡು ಹೋದರೆ ಖಂಡಿತವಾಗಿಯೂ ದೇಹದ ತೂಕ ಹೆಚ್ಚಿಸಬಹುದು.

ತೂಕ ಹೆಚ್ಚಿಸಲು ಆಯುರ್ವೇದವೇ ಯಾಕೆ?

ಆಯುರ್ವೇದವನ್ನು ಹಿಂದಿನಿಂದಲೂ ಹೆಚ್ಚಿನವರು ನಂಬಿಕೊಂಡು ಬಂದಿರುವರು. ಇದರ ಮೇಲೆ ವಿಶ್ವಾಸವಿಡಲು ಹಲವಾರು ಕಾರಣಗಳು ಇವೆ. ಮೊದಲನೆಯದಾಗಿ ಇದರ ಪ್ರಮಾಣವು ಮಿತವಾಗಿ ಇರುವುದು. ಎರಡನೇಯದಾಗಿ ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾಗದು. ಅಂತಿಮವಾಗಿ ಆಯುರ್ವೇದ ಔಷಧಿಯು ಅಗ್ಗ ಮತ್ತು ಸುಲಭವಾಗಿ ಸಿಗುವುದು. ಆಯುರ್ವೇದವು ಸುರಕ್ಷಿತವಾಗಿದೆ. ಏಕೆಂದರೆ ಇದನ್ನು ನೈಸರ್ಗಿಕ ಗಿಡಮೂಲಿಕೆಗಳಿಂದ ತಯಾರಿಸಲಾಗುತ್ತದೆ. ಯಾವುದೇ ರೀತಿಯ ರಾಸಾಯನಿಕ ಬಳಕೆ ಮಾಡಲ್ಲ. ದೇಹ ತೂಕ ಹೆಚ್ಚಿಸಲು ಬಳಸಬಹುದಾದ ಕೆಲವು ಆಯುರ್ವೇದ ಔಷಧಿಗಳು ಇಲ್ಲಿವೆ.

ಶತಾವರಿ

ಶತಾವರಿ

ಗರ್ಭಿಣಿಯರು ಮತ್ತು ಬಾಣಂತಿಯರಿಗೆ ತುಂಬಾ ಲಾಭಕಾರಿ ಎಂದು ಸಾಬೀತಾಗಿರುವಂತಹ ಶತಾವರಿಯು ತೂಕ ಹೆಚ್ಚಿಸಲು ಕೂಡ ನೆರವಾಗುವುದು ಎಂದು ಹೇಳಲಾಗುತ್ತದೆ. ಇದರಲ್ಲಿ ಇರುವಂತಹ ಹೆಚ್ಚಿನ ಪ್ರಮಾಣದ ನೀರಿನಾಂಶವು ದೇಹದಲ್ಲಿನ ದ್ರವಾಂಶ ಕಾಪಾಡಲು ನೆರವಾಗುವುದು. ಶತಾವರಿಯು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಗಮನಾರ್ಹ ರೀತಿಯಲ್ಲಿ ಸುಧಾರಣೆ ಮಾಡುವುದು. ಭಾರತದಲ್ಲಿ ಹಿಮಾಲಯನ್ ಹರ್ಬಲ್ಸ್ ಶತಾವರಿ ಉತ್ಪಾದಕರಾಗಿರುವರು.

ಸೀತಾಫಲ

ಸೀತಾಫಲ

ಅನ್ನೋನಾ ಸ್ಕ್ವಾಮೋಸಾ ಎನ್ನುವುದು ಸೀತಾಫಲದ ವೈಜ್ಞಾನಿಕ ಹೆಸರು. ಇದು ತೂಕ ಹೆಚ್ಚಳ ಮಾಡಲು ಸೇವಿಸಬಹುದಾದ ಅತ್ಯುತ್ತಮ ಹಣ್ಣಾಗಿದೆ. ಈ ಹಣ್ಣು ಅನೋರೆಕ್ಸಿಯಾ ತಡೆದು ದೇಹದ ಸ್ನಾಯುಗಳನ್ನು ಬಲಪಡಿಸುವ ಮೂಲಕ ತುಂಬಾ ಪರಿಣಾಮಕಾರಿ ಆಗಿ ದೇಹ ತೂಕ ಹೆಚ್ಚಳ ಮಾಡಲು ನೆರವಾಗುವುದು. ದಿನಕ್ಕೊಂದು ಸೀತಾಫಲ ತಿಂದರೆ ಆಗ ನಿಮ್ಮ ದೇಹ ತೂಕವನ್ನು ಹೆಚ್ಚಿಸಬಹುದು.

ಅಶ್ವಗಂಧ ಚೂರ್ಣ

ಅಶ್ವಗಂಧ ಚೂರ್ಣ

ತೂಕ ಹೆಚ್ಚಿಸಲು ಈ ಗಿಡಮೂಲಿಕೆಯು ತುಂಬಾ ಅದ್ಭುತವಾಗಿ ಕೆಲಸ ಮಾಡುವುದು. ಈ ಚೂರ್ಣವು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಹಲವಾರು ಔಷಧಿಗಳಲ್ಲಿ ಬಳಕೆ ಮಾಡಲಾಗುತ್ತದೆ. ಇದರಲ್ಲಿ ಹಲವಾರು ಲಾಭಗಳಿಂದಾಗಿ ಇದನ್ನು ಭಾರತದ ಜಿನ್ಸೆಂಗ್ ಎಂದು ಕರೆಯಲಾಗುತ್ತದೆ. ಅಧಿಕ ಕ್ಯಾಲರಿ ಇರುವ ಆಹಾರೊಂದಿಗೆ ಅಶ್ವಗಂಧವನ್ನು ಸೇವನೆ ಮಾಡಿದರೆ ಅದು ದೇಹದ ತೂಕ ಹೆಚ್ಚಿಸಲು ನೆರವಾಗುವುದು. ಪ್ರತಿನಿತ್ಯ 100 ಮಿ.ಗ್ರಾಂ. ಸೇವಿಸಬೇಕು. ಆಯುರ್ವೇದಿಕ್ ಅಂಗಡಿಗಳಲ್ಲಿ ಹೆಚ್ಚಾಗಿ ಅಶ್ವಗಂಧ ಚೂರ್ಣವು ಲಭ್ಯವಿರುವುದು.

ಚ್ಯವನಪ್ರಾಶ್

ಚ್ಯವನಪ್ರಾಶ್

ಚ್ಯವನ್ ಪ್ರಾಶ್ ತುಂಬಾ ಜನಪ್ರಿಯ ಹಾಗೂ ತೂಕ ಹೆಚ್ಚಿಸಲು ತುಂಬಾ ಒಳ್ಳೆಯ ಟಾನಿಕ್. ಇದರಲ್ಲಿ ಹಲವಾರು ರೀತಿಯ ಗಿಡಮೂಲಿಕೆಗಳಿದ್ದು, ಇದರಿಂದ ದೇಹದಲ್ಲಿನ ಮೂಳೆಗಳು ಹಾಗೂ ಸ್ನಾಯುಗಳು ಬಲಗೊಳ್ಳುವುದು. ಇದು ಪ್ರತಿರೋಧಕ ವ್ಯವಸ್ಥೆಯನ್ನು ಸಾಕಷ್ಟು ಮಟ್ಟದಲ್ಲಿ ಸುಧಾರಣೆ ಮಾಡಲು ನೆರವಾಗುವುದು ಮತ್ತು ಚ್ಯವನ್ ಪ್ರಾಶ್ ನ್ನು ನಿಯಮಿತವಾಗಿ ಸೇವನೆ ಮಾಡಿದರೆ ಅದರಿಂದ ದೇಹದ ತೂಕವು ಹೆಚ್ಚಾಗುವುದು. ಇದು ಎಲ್ಲಾ ವಯಸ್ಸು ಹಾಗೂ ಲಿಂಗದವರಿಗೆ ಅತ್ಯುತ್ತಮ ಟಾನಿಕ್ ಆಗಿರುವುದು. ದಿನಕ್ಕೆ ಎರಡು ಚಮಚ ಚ್ಯವನ್ ಪ್ರಾಶ್ ಸೇವಿಸಿದರೆ ಅದರಿಂದ ರಕ್ತಸಂಚಾರವು ಸುಗಮವಾಗಿ ಆಗುವುದು ಮತ್ತು ದೇಹದ ಒಳಗೆ ಶಕ್ತಿಗುಂದಿದ ಕೆಲವೊಂದು ಪ್ರಮುಖ ಅಂಶಗಳನ್ನು ಪುನರುಜ್ಜೀವನಗೊಳಿಸಲು ನೆರವಾಗುವುದು. ಚ್ಯವನ್ ಪ್ರಾಶ್ ಜೀರ್ಣಕ್ರಿಯೆಗೆ ವೇಗ ನೀಡುವುದು ಮತ್ತು ಬೇಗನೆ ಹಸಿವಾಗುವಂತೆ ಮಾಡುವುದು. ಎಲ್ಲಾ ರೀತಿಯ ಮಳಿಗೆಗಳಲ್ಲಿ ಲಭ್ಯವಾಗುವಂತಹ ಚ್ಯವನ್ ಪ್ರಾಶ್ ತೂಕ ಹೆಚ್ಚಿಸಲು ತುಂಬಾ ಒಳ್ಳೆಯ ಔಷಧಿ.

ಫೋಟೊ ಕೃಪೆ:https://www.theayurvedaexperience.com/blog/chyavanprash-chyawanprash/

English summary

Ayurveda Medicine For Weight Gain

Underweight also will not give attractive shape to the body. Here are tips to increase body weight without side effect.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X