For Quick Alerts
ALLOW NOTIFICATIONS  
For Daily Alerts

ತೂಕ ಇಳಿಕೆಗೆ ಮೊಟ್ಟೆಯನ್ನು ಹೇಗೆ ತಿಂದರೆ ಆರೋಗ್ಯಕರ?

|

ನೀವು ತೂಕ ಇಳಿಕೆಯ ಪ್ರಯತ್ನದಲ್ಲಿದ್ದೀರಾ? ನಿಮಗೆ ಆರೋಗ್ಯಕರ ಆಹಾರಕ್ರಮ ಮತ್ತು ನಿತ್ಯದ ವ್ಯಾಯಾಮ ಅನಿವಾರ್ಯವಾಗಿದೆ ಹಾಗೂ ಈ ಮೂಲಕ ಆರೋಗ್ಯಕರ ತೂಕ ಪಡೆಯಲು ಸಾಧ್ಯವಾಗುತ್ತದೆ. ಇಂದು ತೂಕ ಇಳಿಕೆಯ ಪ್ರಯತ್ನದಲ್ಲಿರುವ ಹೆಚ್ಚಿನ ವ್ಯಕ್ತಿಗಳು ತಮ್ಮ ಜೀವನಕ್ರಮವನ್ನು ಬದಲಿಸಿಕೊಳ್ಳುವ ಅನಿವಾರ್ಯತೆಗೆ ಒಗ್ಗಿಕೊಳ್ಳುವಲ್ಲಿ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ.

How to eat eggs for weight loss

ಆದರೆ, ತೂಕ ಇಳಿಸುವ ಪ್ರಯತ್ನದಲ್ಲಿ, ಆಹಾರದಲ್ಲಿ ನಿಯಂತ್ರಣ ಪ್ರಮುಖ ಪಾತ್ರ ವಹಿಸುತ್ತದೆ. ತೂಕ ಇಳಿಕೆಯ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೆ ಅತಿ ಅಗತ್ಯವಾದ ಮತ್ತು ಸೂಕ್ತವಾದ ಆಹಾರವೆಂದರೆ ಮೊಟ್ಟೆಗಳು.ಮೊಟ್ಟೆಗಳಲ್ಲಿ ಪೋಟೀನುಗಳು ಉತ್ತಮ ಪ್ರಮಾಣದಲ್ಲಿದ್ದು ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಮೊಟ್ಟೆಗಳು ಸುಲಭವಾಗಿ ಮತ್ತು ಸುಲಭದರದಲ್ಲಿ ಲಭ್ಯವಿದ್ದು ಅತಿ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಆಹಾರವಾಗಿದೆ. ತೂಕ ಇಳಿಕೆಯ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೆ ಮೊಟ್ಟೆ ಉತ್ತಮ ಆಹಾರವಾಗಿದ್ದು ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ. ಆದರೆ, ನಾವು ಮಾಡುವ ಕೆಲವು ಚಿಕ್ಕ ತಪ್ಪುಗಳಿಂದಾಗಿ ಮೊಟ್ಟೆಯ ಗರಿಷ್ಟ ಪ್ರಯೋಜನವನ್ನು ಪಡೆಯದೇ ಹೋಗುತ್ತೇವೆ. ಯಾವುದು ಈ ತಪ್ಪುಗಳು? ಹೆಚ್ಚಿನ ಜನರು ಯಾವ ತಪ್ಪುಗಳನ್ನು ಮಾಡುತ್ತಿದ್ದಾರೆ? ಕುತೂಹಲ ಕೆರಳಿತೇ, ಬನ್ನಿ, ಈ ಪ್ರಶ್ನೆಯ ಉತ್ತರವನ್ನು ನೋಡೋಣ:

ತಪ್ಪು #1: ಮೊಟ್ಟೆಯ ಹಳದಿ ಭಾಗವನ್ನು ಎಸೆಯುವುದು:

ತಪ್ಪು #1: ಮೊಟ್ಟೆಯ ಹಳದಿ ಭಾಗವನ್ನು ಎಸೆಯುವುದು:

ಕೊಲೆಸ್ಟ್ರಾಲ್ ಹೆಚ್ಚಿರುತ್ತದೆ ಎಂಬ ಕಾರಣವನ್ನು ಒಡ್ಡಿ ಕೆಲವರು ಮೊಟ್ಟೆಯ ಹಳದಿ ಭಾಗವನ್ನು ನಿವಾರಿಸಿ ಬಿಳಿಯ ಭಾಗವನ್ನು ಮಾತ್ರವೇ ಸೇವಿಸುತ್ತಾರೆ. ಮೊಟ್ಟೆಯ ಹಳದಿ ಭಾಗ ತೂಕ ಹೆಚ್ಚಳಕ್ಕೆ ಕಾರಣ ಎಂಬ ಭಾವನೆ ಬೆಳೆದುಬಂದಿದೆ. ವಾಸ್ತವದಲ್ಲಿ, ಮೊಟ್ಟೆಯ ಹಳದಿ ಭಾಗದಲ್ಲಿ ಕೊಲೆಸ್ಟ್ರಾಲ್ ಇದ್ದರೂ, ನಾವು ತಿಳಿದಷ್ಟೇನೂ ಇವು ಅಪಾಯಕಾರಿಯಲ್ಲ. ಈ ಬಗ್ಗೆ ಹಲವಾರು ಅಧ್ಯಯನಗಳನ್ನು ನಡೆಸಲಾಗಿದೆ ಹಾಗೂ ಭಾರೀ ಪ್ರಮಾಣದಲ್ಲಿ ಸೇವಿಸಿದಾಗ ಮಾತ್ರವೇ ಇವು ಅಪಾಯಕಾರಿಯೇ ಹೊರತು ದಿನದ ಮಿತಿಯಲ್ಲಿ ಸೇವಿಸಿದಾಗ ಅಲ್ಲ ಎಂದು ಸಾಬೀತುಪಡಿಸಿವೆ. ವಾಸ್ತವದಲ್ಲಿ ಹಳದಿ ಭಾಗದಲ್ಲಿಯೂ ಕರಗುವ ನಾರಿನಂಶ, ವಿಟಮಿಬಿ ಬಿ12, ವಿಟಮಿನ್ ಎ, ಇ, ಸತು, ಸೋಡಿಯಂ, ಪೊಟ್ಯಾಶಿಯಂ, ಕಬ್ಬಿಣ, ಮೆಗ್ನೇಶಿಯಂ, ಕ್ಯಾಲ್ಸಿಯಂ ಹಾಗೂ ಇತರ ಅಗತ್ಯ ಪೋಷಕಾಂಶಗಳಿವೆ. ಹಳದಿ ಭಾಗವನ್ನು ಇಲ್ಲವಾಗಿಸಿದರೆ ಈ ಪ್ರಯೋಜನಗಳೂ ಇಲ್ಲವಾಗುತ್ತವೆ.

ತಪ್ಪು #2: ಮೊಟ್ಟೆ ಬೇಯಿಸಲು ತಪ್ಪಾದ ಎಣ್ಣೆಯನ್ನು ಬಳಸುವುದು

ತಪ್ಪು #2: ಮೊಟ್ಟೆ ಬೇಯಿಸಲು ತಪ್ಪಾದ ಎಣ್ಣೆಯನ್ನು ಬಳಸುವುದು

ಮೊಟ್ಟೆಯನ್ನು ಹಲವಾರು ಬಗೆಯ ಖಾದ್ಯಗಳ ರೂಪದಲ್ಲಿ ತಯಾರಿಸಬಹುದು. ತೂಕ ಇಳಿಸುವ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೆ ಕೊಬ್ಬರಿ ಎಣ್ಣೆ ಉತ್ತಮವಾಗಿದೆ. ಆದರೆ, ಬೆಣ್ಣೆ, ತುಪ್ಪ ಮೊದಲಾದ ಇತರ ಕೊಬ್ಬುಗಳು ಹೆಚ್ಚಿನ ಕ್ಯಾಲೋರಿಗಳನ್ನು ಸೇರಿಸುವ ಮೂಲಕ ತೂಕ ಇಳಿಕೆಯ ಪ್ರಯತ್ನಕ್ಕೆ ಹಿನ್ನಡೆ ಉಂಟಾಗಬಹುದು. ಅಲ್ಲದೇ ರುಚಿ ಹೆಚ್ಚಿಸಲು ಬಳಸುವ ರುಚಿಕಾರಕಗಳು ಅಧಿಕ ಸಂತೃಪ್ತ ಟ್ರಾನ್ಸ್ - ಫ್ಯಾಟ್ ಕೊಬ್ಬುಗಳನ್ನುಹೊಂದಿರುತ್ತವೆ ಹಾಗೂ ಹೃದಯದ ಆರೋಗ್ಯಕ್ಕೆ ಮಾರಕವಾಗಿವೆ. ಬದಲಿಗೆ, ಕೊಬ್ಬರಿ ಎಣ್ಣೆ ಬಳಸಿದರೆ ಇದರಲ್ಲಿ ಯಾವುದೇ ಸಂತೃಪ್ತ ಕೊಬ್ಬು ಇರದ ಕಾರಣ ಇವು ಹೃದಯದ ಆರೋಗ್ಯವನ್ನು ಕಾಪಾಡುವ ಜೊತೆಗೇ ತೂಕ ಇಳಿಕೆಯ ಪ್ರಯತ್ನಗಳಿಗೂ ಬೆಂಬಲ ನೀಡುತ್ತವೆ.

ತಪ್ಪು #3: ಅತಿ ಹೆಚ್ಚು ಬೇಯಿಸುವುದು:

ತಪ್ಪು #3: ಅತಿ ಹೆಚ್ಚು ಬೇಯಿಸುವುದು:

ಇದು ಹೆಚ್ಚಿನವರು ಮಾಡುವ ಸಾಮಾನ್ಯ ತಪ್ಪಾಗಿದೆ. ಮೊಟ್ಟೆಯನ್ನು ಎಂದಿಗೂ ಅತಿಯಾಗಿ ಬೇಯಿಸಬಾರದು. ಹೆಚ್ಚು ಬೇಯಿಸಿದಷ್ಟೂ ಇದರಲ್ಲಿರುವ ಪ್ರೋಟೀನುಗಳು ಮತ್ತು ಇತರ ಪೋಷಕಾಂಶಗಳು ನಷ್ಟವಾಗುತ್ತವೆ. ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ನುಗಳ ಸಾಮರ್ಥ್ಯವೂ ತಗ್ಗುತ್ತದೆ. ಅತಿಯಾದ ಬಿಸಿಯಲ್ಲಿ ತಯಾರಿಸಿದಾಗಲೂ ಇದರ ಕೊಲೆಸ್ಟ್ರಾಲ್ ಆಕ್ಸಿಡೀಕರಣಕ್ಕೆ ಒಳಗಾಗುತ್ತದೆ ಹಾಗೂ ಆಕ್ಸಿಸ್ಟೆರಾಲುಗಳು ಎಂಬ ಸಂಯುಕ್ತಗಳಾಗಿ ಪರಿವರ್ತಿತವಾಗುತ್ತವೆ. ಇವು ಹೃದಯದ ಕಾಯಿಲೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತವೆ.

ತಪ್ಪು #4: ತಪ್ಪಾದ ಆಹಾರಗಳೊಂದಿಗೆ ಜೊತೆಯಾಗಿಸುವುದು

ತಪ್ಪು #4: ತಪ್ಪಾದ ಆಹಾರಗಳೊಂದಿಗೆ ಜೊತೆಯಾಗಿಸುವುದು

ಆಲೂಗಡ್ಡೆಯಂತೆಯೇ ಮೊಟ್ಟೆಯನ್ನು ಇತರ ಹಲವಾರು ಆಹಾರಗಳ ಜೊತೆಗೆ ಸಿದ್ಧಪಡಿಸಬಹುದಾದರೂ ತೂಕ ಇಳಿಕೆಯ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೆ ಕೆಲವು ಜೊತೆಗಳು ಸೂಕ್ತವಲ್ಲ. ತರಕಾರಿಗಳು ಉತ್ತಮ ಆಯ್ಕೆಯಾಗಿವೆ. ಪಾಲಕ್, ಟೊಮಾಟೋ ಮತ್ತು ದೊಣ್ಣೆ ಮೆಣಸು ನಿಮ್ಮ ತೂಕ ಇಳಿಕೆಯ ಪ್ರಯತ್ನಕ್ಕೆ ಬೆಂಬಲ ನೀಡುವ ಆಹಾರಗಳಾಗಿವೆ. ಇವನ್ನು ಮೊಟ್ಟೆಯ ಆಮ್ಲೆಟ್, ಬುರ್ಜಿ ಅಥವಾ ಮೊಟ್ಟೆಯನ್ನು ಸೇವಿಸುವಾಗ ಜೊತೆಯಲ್ಲಿಯೇ ಹಸಿಯಾಗಿಯೂ ಸೇವಿಸಬಹುದು.

ತಪ್ಪು #5: ಕ್ಯಾಲೋರಿಗಳನ್ನು ಲೆಕ್ಕ ಮಾಡದೇ ಇರುವುದು

ತಪ್ಪು #5: ಕ್ಯಾಲೋರಿಗಳನ್ನು ಲೆಕ್ಕ ಮಾಡದೇ ಇರುವುದು

ತೂಕ ಇಳಿಕೆಯ ಪ್ರಯತ್ನದಲ್ಲಿರುವ ವ್ಯಕ್ತಿಗಳು ತಮ್ಮ ಆಹಾರದ ಒಟ್ಟಾರೆ ಕ್ಯಾಲೋರಿಗಳ ಲೆಕ್ಕಾಚಾರ ಇಡುವುದು ಅತಿ ಅಗತ್ಯವಾಗಿದೆ. ಆದ್ದರಿಂದ ತೂಕ ಇಳಿಕೆಯ ವ್ಯಕ್ತಿಗಳು ಆದಷ್ಟೂ ಮಟ್ಟಿಗೆ ಕಡಿಮೆ ಕ್ಯಾಲೋರಿಗಳ ಆಹಾರವನ್ನು ಆಯ್ದುಕೊಳ್ಳಬೇಕು. ಆದ್ದರಿಂದ ಮೊಟ್ಟೆಯನ್ನು ಸೇವಿಸುವಾಗ ಪೂರ್ಣವಾಗಿ ಬೇಯದೇ ಕೊಂಚ ಒಳಗೆ ಹಸಿ ಇರುವಂತೆ ಬೇಯಿಸಿದ ಆಮ್ಲೆಟ್ ಅಥವಾ ಒಳಗಿನ ಹಳದಿ ಭಾಗ ಕಪ್ಪಾಗದೇ ಇರುವಂತೆ ಬೇಯಿಸಿದ ಮೊಟ್ಟೆಗಳು ಉತ್ತಮ ಆಯ್ಕೆಯಾಗಿವೆ.

ಈ ಮೂಲಕ ಇಳಿದ ತೂಕ ಮತ್ತೆ ಏರದಂತೆಯೂ ತಡೆಯಬಹುದು.

English summary

Avoid Making These Mistakes While Having Eggs for Weight Loss in kannada

Avoid making these mistakes while having eggs for weight loss in kannada...
Story first published: Saturday, May 1, 2021, 19:25 [IST]
X
Desktop Bottom Promotion