For Quick Alerts
ALLOW NOTIFICATIONS  
For Daily Alerts

ಜಿಮ್ ಗೆ ಹೋಗುತ್ತಿದ್ದೀರಾ? ಬಾಡಿ ಬಿಲ್ಡ್‌ಗೆ ಇಲ್ಲಿದೆ 7ಡೇ ಡಯಟ್ ಚಾರ್ಟ್

|

ಸುಂದರವಾದ ಬಾಡಿ ಹೊಂದಬೇಕು ಅನ್ನುವ ಆಸೆ ಎಲ್ಲರಿಗೂ ಕಾಮನ್ ಆಗಿರುತ್ತೆ. ಹುಡಗರಾಗಲಿ, ಹುಡುಗಿಯರಾಗಲಿ ಸಖತ್ ಬಾಡಿ ಹೊಂದಬೇಕು ಎಂದು ಆಸೆ ಪಡುತ್ತಾರೆ. ಹೀಗೆ ಬಾಡಿ ಸಖತ್ ಮೆಂಟೇನ್ ಮಾಡಬೇಕೆಂದರೆ ಜಿಮ್ ಗೆ ಹೋಗಬೇಕು. ಬರೀ ಜಿಮ್ ಗೆ ಹೋದರೆ ಸಾಕಾಗುವುದಿಲ್ಲ. ವ್ಯಾಯಾಮಗಳ ಜೊತೆ ಫುಡ್ ಡಯಟ್ ಕೂಡ ಮುಖ್ಯ. ಫುಡ್ ಡಯಟ್ ಮಾಡದೇ ನೀವು ಎಷ್ಟು ವ್ಯಾಯಾಮ ಮಾಡಿದರೂ ಏನು ಪ್ರಯೋಜನವಿಲ್ಲ. ಯಾಕೆಂದರೆ ಜಿಮ್ ಜೊತೆಗೆ ದೇಹಕ್ಕೆ ಸರಿಯಾದ ಪ್ರೋಟೀನ್ ಕೂಡ ಸಿಗಬೇಕಾಗುತ್ತದೆ. ಸ್ನಾಯುಗಳ ಬೆಳವಣಿಗೆ ದೇಹಕ್ಕೆ ಅವಶ್ಯಕವಾದ ಪ್ರೋಟೀನ್‌ಗಳು, ಕೊಬ್ಬುಗಳು ಮತ್ತು ಕಾರ್ಬೋಹೈಡ್ರೇಟ್‌ಗಳು ಅತ್ಯಗತ್ಯ. ಪ್ರತೀ ದಿನ ಏನು ಸೇವಿಸಬೇಕು?

ನಮ್ಮ ಊಟದಲ್ಲಿ ಏನೆಲ್ಲಾ ಇರಬೇಕು? ಎನ್ನುವುದನ್ನು ಜಿಮ್ ಗೆ ಹೋಗುವವರು ತಿಳಿದುಕೊಳ್ಳಬೇಕು. ನೀವು ಜಿಮ್ ಗೆ ಹೋಗುತ್ತಿದ್ದರೆ ಖಂಡಿತ ನಿಮಗೆ ಈ ಆರ್ಟಿಕಲ್ ತುಂಬಾ ಉಪಯೋಗಕ್ಕೆ ಬರಬಹುದು. ಜಿಮ್ ಗೆ ಹೋಗಿ ಬಾಡಿ ಬಿಲ್ಡ್ ಮಾಡಬೇಕು ಅಂತ ಇದ್ದರೆ ನಿಮಗೆ ವಾರದ ಏಳು ದಿನ ಏನು ಸೇವಿಸಬೇಕು? ಯಾವ ರೀತಿಯ ಆಹಾರ ಪದ್ದತಿ ಅನುಸರಿಸಬೇಕು ಎನ್ನುವುದನ್ನು ನಾವು ಹೇಳಿಕೊಡುತ್ತೇವೆ ಇಲ್ಲಿ ನೋಡಿ.

ಯಾವೆಲ್ಲ ಆಹಾರ ಸೇವಿಸಬೇಕು!

ಯಾವೆಲ್ಲ ಆಹಾರ ಸೇವಿಸಬೇಕು!

ನಿಮ್ಮ ಮನಸಲ್ಲಿ ಜಿಮ್ ಗೆ ಹೋಗಿ ಬಾಡಿ ಬಿಲ್ಡ್ ಮಾಡುವ ಆಸೆ ಇದ್ದರೆ ಖಂಡಿತವಾಗಿಯೂ ನಮ್ಮ ದೇಹಕ್ಕೆ ಏನು ಬೇಕು ಎನ್ನುವುದನ್ನು ನಾವು ಗಮನಿಸಬೇಕು. ಮುಖ್ಯವಾಗಿ ಬಾಡಿ ಬಿಲ್ಡ್ ಮಾಡಬೇಕು ಎನ್ನುವುದು ನಿಮ್ಮ ಯೋಚನೆಯಾದರೆ ನಿಮಗೆ ಹೆಚ್ಚುವರಿ ಕ್ಯಾಲೋರಿಗಳು, ಪ್ರೊಟೀನ್ ಗಳ ಅಗತ್ಯತೆ ಇರುತ್ತದೆ. ಹೀಗಿದ್ದಾಗ ನೀವು ಕ್ಯಾಲೋರಿಗಳು, ಪ್ರೊಟೀನ್ ಗಳಿರುವ ಆಹಾರವನ್ನೇ ಸೇವಿಸಬೇಕು. ಹಾಗಾದರೆ ಯಾವೆಲ್ಲಾ ಆಹಾರಗಳು ಬಾಡಿ ಬಿಲ್ಡ್ ಮಾಡಲು ಸಹಾಯ ಮಾಡುತ್ತದೆ.

1.ಕೊಬ್ಬಿನಾಂಶ ಕಡಿಮೆ ಇರುವ ಮಾಂಸಗಳು!

1.ಕೊಬ್ಬಿನಾಂಶ ಕಡಿಮೆ ಇರುವ ಮಾಂಸಗಳು!

ಕೊಬ್ಬಿನಾಂಶ ಕಡಿಮೆ ಇರುವ ಮಾಂಸಗಳು ದೇಹವನ್ನು ಬೆಳೆಸಲು ಅತ್ಯುತ್ತಮ. ಯಾಕೆಂದರೆ ಕೊಬ್ಬಿನಾಂಶ ಕಡಿಮೆ ಇರುವ ಮಾಂಸಗಳಲ್ಲಿ ಸಖತ್ ಪ್ರೋಟೀನ್ ಸಿಗುತ್ತದೆ. ಪ್ರೋಟೀನ್ ಗಳು ಸ್ನಾಯ್ತುಗಳು ಬೆಳೆಯಲು ಮತ್ತು ನಿರ್ವಹಣೆಗೆ ಸಹಾಯ ಮಾಡುತ್ತದೆ. ಟರ್ಕಿ, ಚಿಕನ್, ಗೋಮಾಂಸ, ಹಂದಿಯ ಸೊಂಟದ ಮಾಂಸ, ಸಾಲ್ಮನ್ ಮತ್ತು ಕಾಡ್ ಮೀನುಗಳಲ್ಲಿ ಉತ್ತಮ ಪ್ರೊಟೀನ್ ಇರುವುದರಿಂದ ದೇಹವನ್ನು ಬೆಳೆಸಲು ಇಚ್ಚಿಸುವವರು ಈ ಆಹಾರಗಳನ್ನು ಸೇವಿಸಬಹುದು.

2.ಧಾನ್ಯಗಳ ಸೇವನೆ!

2.ಧಾನ್ಯಗಳ ಸೇವನೆ!

ಧಾನ್ಯಗಳನ್ನು ಸೇವಿಸುವುದರಿಂದ ದೇಹಕ್ಕೆ ಕಾರ್ಬೋಹೈಡ್ರೇಟ್‌ಗಳು ಸಿಗುತ್ತದೆ. ಬ್ರೌನ್ ರೈಸ್, ಧಾನ್ಯದ ಬ್ರೆಡ್‌ಗಳು, ರಾಗಿ, ಓಟ್ಸ್ ಗಳು ದೇಹವನ್ನು ಬೆಳೆಸಲು ಪೂರಕ ಆಹಾರ ಉತ್ಪನ್ನವಾಗಿದೆ. ಇವುಗಳು ಕಾರ್ಬೋಹೈಡ್ರೇಟ್‌ಗಳಾಗಿದ್ದು, ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಸ್ನಾಯುಗಳ ಬೆಳವಣಿಗೆ ಮತ್ತು ನಿರ್ವಹಣೆಗೆ ಅಗತ್ಯವಾದ ಪ್ರಮುಖ ಸೂಕ್ಷ್ಮ ಪೋಷಕಾಂಶಗಳನ್ನು ಇವುಗಳು ಒದಗಿಸುತ್ತದೆ. ಧಾನ್ಯಗಳಾದ ಕಡ್ಲೆ, ಉದ್ದನ್ನು ನೀರಿನಲ್ಲಿ ಹಾಕಿ ಜಿಮ್ ಗೆ ಹೋಗುವವರು ತಿನ್ನುತ್ತಾರೆ. ಇದು ಅತ್ಯುತ್ತಮ ಫುಡ್.

ಹಾಲಿನ ಉತ್ಪನ್ನಗಳು!

ಹಾಲಿನ ಉತ್ಪನ್ನಗಳು!

ಅಧ್ಯಯನ ವರದಿಯೊಂದರ ಪ್ರಕಾರ 9 ಗ್ರಾಂ ಹಾಲಿನ ಪ್ರೋಟೀನ್‌ನಿಂದ ಸ್ನಾಯುಗಳಲ್ಲಿ ಪ್ರೋಟೀನ್ ಸಂಶ್ಲೇಷಣೆ ಮಾಡಲು ನೆರವಾಗುವುದು ಮತ್ತು ವ್ಯಾಯಾಮದ ಬಳಿಕ ದೇಹಕ್ಕೆ ಇದು ಚೇತರಿಕೆ ನೀಡುವುದು. ಒಂದು ಕಪ್ ಕೆಫಿರ್‪ನಲ್ಲಿ ಸುಮಾರು 9.2 ಗ್ರಾಂನಷ್ಟು ಉನ್ನತ ಮಟ್ಟದ ಪ್ರೋಟೀನ್ ಇದೆ. ಈ ಪ್ರೋಟೀನ್ ಸ್ನಾಯುಗಳಲ್ಲಿ ಇರುವಂತಹ ಹೊಸ ಕೋಶಗಳನ್ನು ದುರಸ್ತಿ ಮಾಡುವುದು. ಈ ಪ್ರೋಟೀನ್ ಪ್ರಮುಖವಾದ ಅಮಿನೋ ಆಮ್ಲವನ್ನು ಕೂಡ ಒದಗಿಸುವುದು. 2007ರಲ್ಲಿ ನಡೆಸಿರುವಂತಹ ಅಧ್ಯಯನದ ಪ್ರಕಾರ ಹಾಲಿನ ಮೂಲದಿಂದ ಸಿಗುವಂತಹ ಪ್ರೋಟೀನ್ ಸೋಯಾ ಪ್ರೋಟೀನ್ ಗಿಂತ ತುಂಬಾ ಒಳ್ಳೆಯದು ಮತ್ತು ಇದು ಸ್ನಾಯುಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದೆ. ಹಾಲು, ಮೊಸರು, ತುಪ್ಪ, ಚೀಸ್ ಬಾಡಿ ಬಿಲ್ಡಿಂಗ್ ಗೆ ಉತ್ತಮ ಪ್ರೋಟೀನ್ ನೀಡುವ ವಸ್ತುಗಳು.

ಹಣ್ಣು ಮತ್ತು ತರಕಾರಿಗಳು

ಹಣ್ಣು ಮತ್ತು ತರಕಾರಿಗಳು

ದೇಹ ಬೆಳೆಸಲು ನೀವು ಜಿಮ್ ಗೆ ಹೋಗುತ್ತಿದ್ದರೆ ಖಂಡಿತವಾಗಿಯೂ ಮಿಸ್ ಮಾಡದೆ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ. ಇದರಿಂದ ನಿಮ್ಮ ದೇಹಕ್ಕೆ ಬೇಕಾದ ವಿಟಮಿನ್‌ಗಳು ಮತ್ತು ಖನಿಜಾಂಶಗಳು ಸಿಗುತ್ತದೆ. ಹಣ್ಣುಗಳ ಪೈಕಿ ಬಾಳೆಹಣ್ಣು, ಸೇಬು, ಕಿತ್ತಳೆ, ಕಿವಿ, ಬ್ಲೂ ಬೆರಿ, ಕಲ್ಲಂಗಡಿ ಉತ್ತಮ. ತರಕಾರಿಗಳ ಪೈಕಿ ಸಿಹಿ ಗೆಣಸು, ಎಲ್ಲಾ ರೀತಿಯ ಸೊಪ್ಪು, ಬಟಾಟೆ ತುಂಬಾನೇ ಒಳ್ಳೆಯದು.

ಈ ಆಹಾರಗಳನ್ನು ಸೇವಿಸಬೇಡಿ!

ಈ ಆಹಾರಗಳನ್ನು ಸೇವಿಸಬೇಡಿ!

ಸಂಸ್ಕರಿಸಿದ ಆಹಾರಗಳಿಂದ ಕೊಂಚ ದೂರವಿದ್ದರೆ ಉತ್ತಮ. ಸಂಸ್ಕರಿಸಿದ ಆಹಾರಗಳು ದೇಹದಾರ್ಢ್ಯದ ಪ್ರಗತಿಯ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ. ಮಾತ್ರವಲ್ಲದೆ, ಹೆಚ್ಚಿನ ಪ್ರಮಾಣದ ಸಂಸ್ಕರಿಸಿದ ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು. ವೈಟ್ ಬ್ರೆಡ್, ವೈಟ್ ಪಾಸ್ತಾ, ಸಂಸ್ಕರಿಸಿದ ಮಾಂಸಗಳು, ಐಸ್ ಕ್ರೀಮ್, ಪಿಜ್ಜಾ, ಸೋಡಾ ಮತ್ತು ಕ್ಯಾಂಡಿಗಳು ಸಂಸ್ಕರಿಸಿದ ಆಹಾರಗಳು.

ಎಣ್ಣೆ ಆಹಾರಗಳು ಸೇವಿಸಬೇಡಿ!

ಎಣ್ಣೆ ಆಹಾರಗಳು ಸೇವಿಸಬೇಡಿ!

ಎಣ್ಣೆಯುಕ್ತ ಆಹಾರಗಳನ್ನು ಸೇವಿಸುವುದು ದೇಹಕ್ಕೆ ಹಾನಿಕಾರಕವಾಗಿದೆ. ಡೀಪ್ ಫ್ರೈಡ್ ಆಹಾರಗಳು ಉರಿಯೂತವನ್ನು ಉಂಟುಮಾಡುತ್ತವೆ ಮತ್ತು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಅಲ್ಲದೇ ನಿಮಗೆ ಬೊಜ್ಜು ಸಂಭವಿಸಬಹುದು. ಫ್ರೆಂಚ್ ಫ್ರೈಸ್, ಚಿಕನ್ ಸ್ಟ್ರಿಪ್ಸ್, ಇನ್ನಿತರ ಎಣ್ಣೆಯ ಪಕೋಡಗಳು, ಜಂಕ್ ಫುಡ್ ಗಳಿಂದ ದೂರ ಉಳಿಯುವುದು ಒಳ್ಳೆಯದು.

ಮದ್ಯಪಾನ!

ಮದ್ಯಪಾನ!

ಹಲವಾರು ಅಧ್ಯಯನಗಳ ಪ್ರಕಾರ ಮದ್ಯಪಾನ ದೇಹದ ಬೆಳವಣಿಗೆ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತಂತೆ. ಆದ್ದರಿಂದ, ಮದ್ಯಪಾನವನ್ನು ಜಿಮ್ ಗೆ ಹೋಗುವವರು ಅಥವಾ ದೇಹವನ್ನು ಬೆಳೆಸಬೇಕು ಎನ್ನುವವರು ದೂರವಿರುವುದು ಒಳ್ಳೆಯದು. ಅದಾಗ್ಯೂ ಕುಡಿಯಲೇ ಬೇಕು ಎಂದರೆ ಮಿತವಾಗಿ ಕುಡಿಯಿರಿ.

7 ದಿನದ ಬಾಡಿ ಬಿಲ್ಡಿಂಗ್ ಡಯಟ್ ಇಲ್ಲಿದೆ!

7 ದಿನದ ಬಾಡಿ ಬಿಲ್ಡಿಂಗ್ ಡಯಟ್ ಇಲ್ಲಿದೆ!

ಡೇ 1

ಉಪಹಾರ : ಓಟ್ ಮೀಲ್ (ಹಾಲು ಅಥವಾ ನೀರಿನೊಂದಿಗೆ) ಡ್ರೈ ಫ್ರುಟ್ಸ್ ಮತ್ತು ಬಗೆಬಗೆಯ ಬೀಜಗಳು

ಸ್ನ್ಯಾಕ್ಸ್ : ಬೇಯಿಸಿದ ಮೊಟ್ಟೆ

ಮಧ್ಯಾಹ್ನ ಊಟ : ಕೋಳಿ ಅಥವಾ ಟರ್ಕಿ, ಮೀಡಿಯಂ ಗಾತ್ರದ ಬೇಯಿಸಿದ ಆಲೂಗಡ್ಡೆ, ಬ್ರೌನ್ ರೈಸ್

ರಾತ್ರಿ ಊಟ : ಸ್ವೀಟ್ ಚಿಲ್ಲಿ ಸ್ವಾಸ್ ಜೊತೆಗೆ ಸಲ್ಮಾನ್ ಫಿಶ್, ಬ್ರೌನ್ ಪಾಸ್ತಾ

ಸ್ನಾಕ್ಸ್ 2 : ಬಾಳೆಹಣ್ಣಿನ ಪ್ರೋಟೀನ್ ಶೇಕ್

ಡೇ 2

ಡೇ 2

ಉಪಹಾರ : ಬೆಣ್ಣೆ ಹಣ್ಣು(ಅವಕಾಡೊ), ಮೊಟ್ಟೆ , ಹೋಲ್ ಗ್ರೇನ್ ಟೋಸ್ಟ್

ಸ್ನ್ಯಾಕ್ಸ್ : ಪೀನೆಟ್ ಬಟರ್ ಮತ್ತು ಆಪಲ್ ಹಣ್ಣು

ಮಧ್ಯಾಹ್ನ ಊಟ : ಬ್ರೌನ್ ಪಾಸ್ತಾ ಮತ್ತು ಗ್ರೀನ್ ಸಲಾಡ್

ರಾತ್ರಿ ಊಟ : ಚಿಕನ್ ಸ್ಟಿರ್ ಫ್ರೈ, ಸೋಯಾ ಸಾಸ್ ಪೆಪ್ಪರ್ಸ್, ಈರುಳ್ಳಿ ಮತ್ತು ಬ್ರೊಕೊಲಿ

ಸ್ನಾಕ್ಸ್ 2 : ಬೆರ್ರಿ ಹಣ್ಣುಗಳ ಪ್ರೋಟೀನ್ ಶೇಕ್

ಡೇ 3

ಡೇ 3

ಉಪಹಾರ : ಚಿಕನ್/ಟರ್ಕಿ, ಸ್ವಾಸೇಜ್ ಮೊಟ್ಟೆ, ಹೋಲ್ ಗ್ರೈನ್ ಟೋಸ್ಟ್

ಸ್ನ್ಯಾಕ್ಸ್ : ಗ್ರೀಕ್ ಯೋಗರ್ಟ್ ಗ್ರಾನೋಲಾ

ಮಧ್ಯಾಹ್ನ ಊಟ : ಲೆಟಿಸ್ ಚಿಕನ್ / ಟರ್ಕಿ ಕಪ್ಪು ಬೀನ್ಸ್ ಜೊತೆಗೆ ಗ್ರೈನ್ ವ್ರ್ಯಾಪ್

ರಾತ್ರಿ ಊಟ : ಹಂದಿ ಟೆಂಡರ್ಲೋಯಿನ್, ಸಿಹಿ ಗೆಣಸು ಕಾರ್ನ್

ಸ್ನಾಕ್ಸ್ 2 : ಬೆರ್ರಿ ಹಣ್ಣುಗಳ ಪ್ರೋಟೀನ್ ಶೇಕ್

ಡೇ 4

ಡೇ 4

ಉಪಹಾರ : ಓಟ್ ಮೀಲ್ (ಹಾಲು ಅಥವಾ ನೀರಿನೊಂದಿಗೆ) ಡ್ರೈ ಫ್ರುಟ್ಸ್ ಮತ್ತು ಬಗೆಬಗೆಯ ಬೀಜಗಳು

ಸ್ನ್ಯಾಕ್ಸ್ : ಹೋಲ್ ಗ್ರೇನ್ ಟೋಸ್ಟ್ ಜೊತೆಗೆ ಪೀನಟ್ ಬಟರ್, ಆರೆಂಜ್

ಮಧ್ಯಾಹ್ನ ಊಟ : ಚಿಕನ್, ಟೊಮೋಟೋ ಸಾರು, ಬ್ರೌನ್ ರೈಸ್

ರಾತ್ರಿ ಊಟ : ಬೀಫ್ ಸಿರ್ಲೋಯಿನ್, ಸಿಹಿ ಆಲೂಗಡ್ಡೆ

ಸ್ನಾಕ್ಸ್ 2 : ಬೆರ್ರಿ ಹಣ್ಣುಗಳ ಪ್ರೋಟೀನ್ ಶೇಕ್

ಡೇ 5

ಡೇ 5

ಉಪಹಾರ : ಓಟ್ಸ್, ಗ್ರೀಕ್ ಯೋಗಾರ್ಟ್, ಬೆರ್ರಿ ಹಣ್ಣುಗಳು

ಸ್ನ್ಯಾಕ್ಸ್ : ಕಾಟೇಜ್ ಚೀಸ್, ಬೆರ್ರಿ ಹಣ್ಣುಗಳು

ಮಧ್ಯಾಹ್ನ ಊಟ : ತಂದೂರಿ ಚಿಕನ್ ಜೊತೆಗೆ ಗ್ರೈನ್ ವ್ರ್ಯಾಪ್ ಮತ್ತು ಬೆಲ್ ಪೆಪ್ಪರ್ ಆವಕಾಡೊದೊಂದಿಗೆ ಗ್ರೈನ್ ವ್ರ್ಯಾಪ್

ರಾತ್ರಿ ಊಟ : ಬೇಯಿಸಿದ ಕ್ವಿನೋವಾ ಬಟಾಣಿಗಳೊಂದಿಗೆ ಕಾಡ್ ಫಿಲೆಟ್

ಸ್ನಾಕ್ಸ್ 2 : ಡ್ರೈ ಫ್ರುಟ್ಸ್ ಮತ್ತು ನಟ್ಸ್ ನ ಪ್ರೋಟೀನ್ ಶೇಕ್

ಡೇ 6

ಡೇ 6

ಉಪಹಾರ : ಕಾಡ್ ಫಿಲ್ಲೆಟ್ ನೊಂದಿಗೆ ಬೇಯಿಸಿದ ಆಲೂಗಡ್ಡೆ, ಬೇಯಿಸಿದ ಹಸಿರು ಬಟಾಣಿ

ಸ್ನ್ಯಾಕ್ಸ್ : ಮಿಶ್ರ ಬೀಜಗಳು ಮತ್ತು ಬಟಾಣಿ

ಮಧ್ಯಾಹ್ನ ಊಟ : ಬಹು ಧಾನ್ಯದ ರೋಟಿ, ಚಿಕನ್ ಕರಿ, ಕ್ಯಾರೆಟ್ ಸಲಾಡ್

ರಾತ್ರಿ ಊಟ : ಟರ್ಕಿ ಮೀಟ್ ಬಾಲ್, ಹೋಲ್ ವೀಟ್ ಸ್ಪಾಗೇಟ್ಟಿ ಸ್ಪೀನಾಚ್

ಸ್ನಾಕ್ಸ್ 2 : ಕಲ್ಲಂಗಡಿ ಪ್ರೊಟೀನ್ ಮಿಲ್ಕ್ ಶೇಕ್

ಡೇ 7

ಡೇ 7

ಉಪಹಾರ : ಬೇಯಿಸಿದ ಮೊಟ್ಟೆ ಜೊತೆಗೆ ಹೋಲ್ ಗ್ರೈನ್ ಟೋಸ್ಟ್

ಸ್ನ್ಯಾಕ್ಸ್ : ಗ್ರೀಕ್ ಯೋಗರ್ಟ್, ತಾಜಾ ಬೆರ್ರಿಗಳು ಮತ್ತು ನಟ್ಸ್

ಮಧ್ಯಾಹ್ನ ಊಟ : ಬೀಫ್ ಕರಿ, ಕ್ವಿನೋವಾ ಬ್ರೊಕೊಲಿ

ರಾತ್ರಿ ಊಟ : ಮಾಧ್ಯಮ ಗಾತ್ರದ ಬೇಯಿಸಿದ ಆಲೂಗಡ್ಡೆ, ಟ್ಯೂನ ಚೀಸ್, ಗ್ರೀನ್ ಸಲಾಡ್

ಸ್ನಾಕ್ಸ್ 2 : ದ್ರಾಕ್ಷಿ ಹಣ್ಣಿನ ಪ್ರೊಟೀನ್ ಶೇಕ್

English summary

7-Day Bodybuilding Diet Plan to Build Muscle and Lose Fat in Kannada

7-Day Body Building Diet: The Ultimate Guide, Read on,
X
Desktop Bottom Promotion