For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಿಕೊಳ್ಳಲು ಅಲೋವೆರಾ ಜ್ಯೂಸ್‌‌ ಕುಡಿಯುವ ವಿಧಾನಗಳು

|

ಅಲೋವೆರಾವನ್ನು ಹಿಂದಿನಿಂದಲೂ ಭಾರತದಲ್ಲಿ ಆಯುರ್ವೇದ ಔಷಧಿಗಳಲ್ಲಿ ಹಾಗೂ ಚಿಕಿತ್ಸೆಯಲ್ಲಿ ಬಳಸಿಕೊಂಡು ಬರಲಾಗುತ್ತಾ ಇತ್ತು. ಆದರೆ ಇದರ ಬಗ್ಗೆ ಹೆಚ್ಚಿನ ಜನರಿಗೆ ಅಷ್ಟು ತಿಳಿದಿರಲಿಲ್ಲ. ಕಳೆದ ಕೆಲವು ವರ್ಷಗಳಿಂದ ಅಲೋವೆರಾವು ಹೆಚ್ಚಿನ ಎಲ್ಲಾ ಕಡೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದೆ. ಅಲೋವೆರಾವನ್ನು ಆರೋಗ್ಯದಿಂದ ಹಿಡಿದು ಸೌಂದರ್ಯವರ್ಧಕವಾಗಿಯೂ ಬಳಸಿಕೊಳ್ಳಲಾಗುತ್ತಿದೆ. ಕೆಲವೇ ಜನರು ಬಳಸುತ್ತಿದ್ದ ಅಲೋವೆರಾವು ಇಂದು ಪ್ರತಿಯೊಂದು ಮಾರುಕಟ್ಟೆಯಲ್ಲಿ ಎಲ್ಲರಿಗೂ ಲಭ್ಯವಿದೆ.

ಇದರಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇದರ ಲೋಳೆಯು ಆರೋಗ್ಯಕ್ಕೆ ತುಂಬಾ ಎಂದು ಸಾಬೀತು ಆಗಿದೆ. ಅಲೋವೆರಾವನ್ನು ಬಳಸಿಕೊಂಡು ಇಂದು ಹಲವಾರು ರೀತಿಯ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಲಿದೆ. ಇಂತಹ ಉತ್ಪನ್ನಗಳು ಅಲೋವೆರಾದ ಲೋಳೆಯನ್ನು ಬಳಸಿಕೊಳ್ಳುತ್ತಿವೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಅಲೋವೆರಾದ ಬಗ್ಗೆ ಹೆಚ್ಚು ಆಸಕ್ತಿ ಮೂಡಿದೆ ಎಂದು ಹೇಳಲಾಗುತ್ತಿದೆ. ಅಲೋವೆರಾವನ್ನು ಬಳಸಿಕೊಂಡು ತೂಕ ಇಳಿಸಬಹುದು ಎಂದು ತಿಳಿದ ಬಳಿಕ ಇದರ ಜನಪ್ರಿಯತೆಯು ಮತ್ತಷ್ಟು ಹೆಚ್ಚಾಗಿದೆ.

 ಅಲೋವೆರಾದಲ್ಲಿ ವಿಷಕಾರಿ ಅಂಶವನ್ನು ಹೊರಹಾಕುವಂತಹ ಗುಣ

ಅಲೋವೆರಾದಲ್ಲಿ ವಿಷಕಾರಿ ಅಂಶವನ್ನು ಹೊರಹಾಕುವಂತಹ ಗುಣ

ಅಲೋವೆರಾದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಹಾಕುವಂತಹ ಗುಣದಿಂದಾಗಿ ಇದು ತೂಕ ಕಳೆದುಕೊಳ್ಳಲು ಸಹಕಾರಿಯಾಗಿದೆ. ತೂಕ ಇಳಿಸಲು ಪ್ರಯತ್ನಿಸುತ್ತಾ ಇರುವವರು ಮತ್ತು ಬೊಜ್ಜು ಕಡಿಮೆ ಮಾಡಬೇಕೆಂದು ಹರಸಾಹಸ ಪಡುತ್ತಿರುವವರು ಖಂಡಿತವಾಗಿಯೂ ಇದರ ಲಾಭಗಳ ಬಗ್ಗೆ ತಿಳಿದು ಕೊಂಡಿರಬಹುದು. ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಿಕೊಳ್ಳಲು ಅಲೋವೆರಾವನ್ನು ಯಾವ ರೀತಿಯಲ್ಲಿ ಆಹಾರ ಕ್ರಮದಲ್ಲಿ ಅಳವಡಿಸಿ ಕೊಳ್ಳಬೇಕು ಎನ್ನುವುದು ಮಾತ್ರ ಹೆಚ್ಚಿನವರಿಗೆ ತಿಳಿದಿಲ್ಲ. ಈ ಲೇಖನದಲ್ಲಿ ಐದು ವಿಧಾನಗಳನ್ನು ನಿಮಗೆ ಹೇಳಿಕೊಡಲಾಗಿದೆ. ಇದರ ಮೂಲಕ ನೀವು ಅಲೋವೆರಾದ ಗರಿಷ್ಠ ಲಾಭವನ್ನು ಪಡೆಯಬಹುದು. ಜ್ಯೂಸ್ ಮತ್ತು ಸ್ಮೂಥಿ ಮೂಲಕವಾಗಿ ಅಲೋವೆರಾವನ್ನು ಸೇವಿಸುವ ಮೂಲಕವಾಗಿ ನೀವು ಇದರ ಅತ್ಯುತ್ತಮ ಲಾಭ ಪಡೆಯಬಹುದು. ಇದರಿಂದ ಅದರ ಲಾಭವು ಇಮ್ಮಡಿಯಾಗುವುದು ಮಾತ್ರವಲ್ಲದೆ ಅದರ ರುಚಿಯು ನಿಮಗೆ ಚೆನ್ನಾಗಿ ಸಿಗುವುದು.

ಲಿಂಬೆಯೊಂದಿಗೆ ಅಲೋವೆರಾ ಜ್ಯೂಸ್

ಲಿಂಬೆಯೊಂದಿಗೆ ಅಲೋವೆರಾ ಜ್ಯೂಸ್

ಪ್ರತಿನಿತ್ಯ ನೀವು ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ನ್ನು ಸೇವಿಸಬೇಕು ಮತ್ತು ಈ ಜ್ಯೂಸ್ ಕುಡಿದ ಬಳಿಕ ಒಂದು ಗಂಟೆ ಏನೂ ತಿನ್ನಬಾರದು. ಅಲೋವೆರಾದಲ್ಲಿ ಇರುವಂತಹ ನಿರ್ವಿಷಕಾರಿ ಗುಣವು ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಹಾಕುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಈ ಜ್ಯೂಸ್ ಕರುಳನ್ನು ಕೂಡ ಸ್ವಚ್ಛಗೊಳಿಸುವುದು ಮತ್ತು ಇದರಿಂದ ಹೊಟ್ಟೆಯ ಕ್ರಿಯೆಗಳು ತುಂಬಾ ಸರಾಗ ಮತ್ತು ಆರೋಗ್ಯಕರವಾಗಿ ಇರುವುದು.

ಜ್ಯೂಸ್ ತಯಾರಿಸುವುದು ಹೇಗೆ?

ಜ್ಯೂಸ್ ತಯಾರಿಸುವುದು ಹೇಗೆ?

ಒಂದು ಲೋಟ ನೀರು ತೆಗೆದುಕೊಳ್ಳಿ ಮತ್ತು ಅದಕ್ಕೆ ಒಂದು ಲಿಂಬೆಯ ರಸ ಹಾಕಿ. ಈಗ ಇದಕ್ಕೆ ಒಂದು ಚಮಚ ಅಲೋವೆರಾ ಲೋಳೆ(ತಾಜಾ ಎಲೆಗಳಿಂದ ಪಡೆದಿರುವುದು ಮತ್ತು ಪ್ಯಾಕ್ ಮಾಡಿದ್ದು ಅಲ್ಲ). ಇದನ್ನು ಈಗ ಒಂದು ತವಾಗೆ ಹಾಕಿಕೊಂಡು ಬಿಸಿ ಮಾಡಿಕೊಳ್ಳಿ(ಲೋಳೆಯು ನೀರಿನ ರೂಪಕ್ಕೆ ಬರುವ ತನಕ). ಇದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ ಮತ್ತು ಬಿಸಿಯಾಗಿ ಇರುವಾಗಲೇ ಕುಡಿಯಿರಿ.

Most Read:ಅಪ್ಪಿತಪ್ಪಿಯೂ ಇಂತಹ ಹಸಿ ಆಹಾರಗಳನ್ನು ತಿನ್ನಬೇಡಿ-ಇವೆಲ್ಲಾ ಆರೋಗ್ಯಕ್ಕೆ ಬಹಳ ಅಪಾಯಕಾರಿ!

ಅಲೋವೆರಾ ಮತ್ತು ಶುಂಠಿ ಚಹಾ

ಅಲೋವೆರಾ ಮತ್ತು ಶುಂಠಿ ಚಹಾ

ಮಧ್ಯಾಹ್ನದ ಬಳಿಕ ನೀವು ಸೇವಿಸಲು ಇದು ಅತ್ಯುತ್ತಮ ಪಾನೀಯವಾಗಿದೆ. ಶುಂಠಿಯಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇದರಲ್ಲಿ ಮುಖ್ಯವಾಗಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು, ಉರಿಯೂತ ಶಮನಕಾರಿ, ಆರೋಗ್ಯಕಾರಿ ಜೀರ್ಣಕ್ರಿಯೆಗೆ ಸಹಕಾರಿ ಮತ್ತು ದ್ರವ ಶೇಖರಣೆಯಾಗುವುದನ್ನು ಇದು ತಡೆಯುವುದು. ಈ ಗುಣಗಳು ಅಲೋವೆರಾದ ಜತೆಗೆ ಸೇರಿಕೊಂಡಾಗ ಅದು ದೇಹದಲ್ಲಿ ಇರುವಂತಹ ಕೊಬ್ಬನ್ನು ತೆಗೆದುಹಾಕುವುದು.

ತಯಾರಿಸುವುದು ಹೇಗೆ?

ತಯಾರಿಸುವುದು ಹೇಗೆ?

ಈ ರುಚಿಕರವಾದ ಚಹಾ ಮಾಡಲು ನೀವು ಮೊದಲು ಒಂದು ಚಮಚ ಶುಂಠಿಯನ್ನು ತುರಿದುಕೊಲ್ಳಬೇಕು ಮತ್ತು ಇದಕ್ಕೆ ಒಂದು ಚಮಚ ಅಲೋವೆರಾ ಜ್ಯೂಸ್ ಹಾಕಬೇಕು. ಈ ಮಿಶ್ರಣವನ್ನು ಒಂದು ಲೋಟ ನೀರಿಗೆ ಹಾಕಿ ಮತ್ತು ಅದನ್ನು ಕುದಿಸಿ. ನೀರಿನೊಂದಿಗೆ ಲೋಳೆಯು ಸರಿಯಾಗಿ ಮಿಶ್ರಣವಾದ ಬಳಿಕ ನೀವು ಬಿಸಿ ಮಾಡುವುದನ್ನು ನಿಲ್ಲಿಸಿಬಿಡಿ. ಈಗ ಮಿಶ್ರಣವು ಸುಮಾರು 10 ನಿಮಿಷ ಕಾಲ ಹಾಗೆ ತಣ್ಣಗಾಗಲು ಬಿಡಿ.

Most Read:ತುಪ್ಪ ಬೆರೆಸಿದ ಹಾಲಿನ ಸೇವನೆ- ಆರೋಗ್ಯಕ್ಕೆಷ್ಟು ಒಳ್ಳೆಯದು ಗೊತ್ತೇ?

ಅನಾನಸು, ಸೌತೆಕಾಯಿ ಮತ್ತು ಅಲೋವೆರಾ ಜ್ಯೂಸ್

ಅನಾನಸು, ಸೌತೆಕಾಯಿ ಮತ್ತು ಅಲೋವೆರಾ ಜ್ಯೂಸ್

ಈ ಜ್ಯೂಸ್ ನ್ನು ಕುಡಿಯಲು ಸರಿಯಾದ ಸಮಯವೆಂದರೆ ಮಧ್ಯಾಹ್ನ ಊಟ ಮಾಡಿದ ಬಳಿಕ. ಅನಾನಸು ಜೀರ್ಣಕ್ರಿಯೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ದೇಹದಲ್ಲಿರುವಂತಹ ವಿಷಕಾರಿ ಅಂಶವನ್ನು ಹೊರಹಾಕುವುದು. ಸೌತೆಕಾಯಿಯು ದೇಹಕ್ಕೆ ತೇವಾಂಶ ನೀಡುವುದು ಮತ್ತು ನಾರಿನಾಂಶವು ಇದರಲ್ಲಿ ಇದೆ. ಇದು ಜೀರ್ಣಕ್ರಿಯೆಗೆ ಕೂಡ ತುಂಬಾ ಸಹಕಾರಿಯಾಗಿ ಇರುವುದು.

ಜ್ಯೂಸ್ ತಯಾರಿಸುವುದು ಹೇಗೆ?

ಈ ಅದ್ಭುತವಾಗಿರುವಂತಹ ಜ್ಯೂಸ್ ತಯಾರಿಸುವ ಬೇಕಾಗುವಂತಹ ಸಾಮಗ್ರಗಳೆಂದರೆ ಒಂದು ತುಂಡು ಅನಾನಸು, ಒಂದು ಚಮಚ ಅಲೋವೆರಾ, ಒಂದು ಕಪ್ ನೀರು ಮತ್ತು ಅರ್ಧ ಸೌತೆಕಾಯಿ. ಎಲ್ಲವನ್ನು ಜತೆಯಾಗಿ ಮಿಕ್ಸಿ ಹಾಕಿ ರುಬ್ಬಿಕೊಳ್ಳಿ. ಇದು ಮೆತ್ತಗಿನ ಮಿಶ್ರಣವಾಗುವ ತನಕ ರುಬ್ಬುತ್ತಾ ಇರಬೇಕು. ಮಧ್ಯಾಹ್ನ ಊಟದ ಬಳಿಕ ನಿಮಗೆ ತುಂಬಾ ಹಸಿವಾಗುತ್ತಲಿದ್ದರೆ ಆಗ ನೀವು ಈ ಸ್ಮೂಥಿಯನ್ನು ಸೇವಿಸಿದರೆ ತುಂಬಾ ಒಳ್ಳೆಯದು.

ಕಿತ್ತಳೆ, ಸ್ಟ್ರಾಬೆರಿ ಮತ್ತು ಅಲೋವೆರಾ ಸ್ಮೂಥಿ

ಕಿತ್ತಳೆ, ಸ್ಟ್ರಾಬೆರಿ ಮತ್ತು ಅಲೋವೆರಾ ಸ್ಮೂಥಿ

ಕಡಿಮೆ ಕ್ಯಾಲರಿ ಹೊಂದಿರುವ ಮತ್ತು ಮಧುಮೇಹಿಗಳಿಗೆ ಇದು ತುಂಬಾ ಸಹಕಾರಿಯಾಗಿರಲಿದೆ. ಸ್ಟ್ರಾಬೆರಿಯು ತೂಕ ಇಳಿಸಿಕೊಳ್ಳಲು ತುಂಬಾ ಸಹಕಾರಿಯಾಗಿರುವುದು. ಸ್ಟ್ರಾಬೆರಿಯು ಹೆಚ್ಚಿನ ನಾರಿನಾಂಶವನ್ನು ಹೊಂದಿದೆ ಮತ್ತು ಇದು ದೇಹದವನ್ನು ಶುದ್ಧೀಕರಿಸುವುದು. ಕಿತ್ತಳೆ, ಅಲೋವೆರಾ ಮತ್ತು ಸ್ಟ್ರಾಬೆರಿಯನ್ನು ಜತೆ ಸೇರಿಸಿದರೆ ಆಗ ಅದರಿಂದ ತೂಕ ಇಳಿಸಿಕೊಳ್ಳುವಂತಹ ತುಂಬಾ ಅತ್ಯುತ್ತಮವಾಗಿರುವಂತಹ ಆ್ಯಂಟಿಆಕ್ಸಿಡೆಂಟ್ ಪಾನೀಯವನ್ನು ತಯಾರಿಸಿಕೊಳ್ಳಬಹುದಾಗಿದೆ.

ತಯಾರಿಸಿಕೊಳ್ಳುವುದು ಹೇಗೆ?

ಈ ಜ್ಯೂಸ್ ನ್ನು ತಯಾರಿಸಿಕೊಳ್ಳಲು ಮೊದಲು ನೀವು ಕಿತ್ತಳೆ ಹಣ್ಣಿನ ರಸ ತೆಗೆದುಕೊಳ್ಳಿ. ಈ ಜ್ಯೂಸ್ ಗೆ ಈಗ ಮೂರು ನಾಲ್ಕು ತುಂಡುಗಳಷ್ಟು ಸ್ಟ್ರಾಬೆರಿ ಹಾಕಿ. ಇದರ ಬಳಿಕ ಒಂದು ಚಮಚ ತಾಜಾ ಅಲೋವೆರಾ ಜ್ಯೂಸ್ ಹಾಕಿ. ಇದೆಲ್ಲವನ್ನು ಮಿಶ್ರಣ ಮಾಡಿಕೊಂಡ ಬಳಿಕ ಮಿಕ್ಸಿಗೆ ಹಾಕಿಬಿಡಿ. ಅರ್ಧ ಕಪ್ ನೀರು ಹಾಕಿಕೊಂಡು ಮೆತ್ತಗಾಗುವ ತನಕ ರುಬ್ಬಿಕೊಳ್ಳಿ ಮತ್ತು ಇದನ್ನು ನೀವು ಕುಡಿಯಬಹುದು.

English summary

Ways to consume aloe vera for a healthy weight loss!

Aloe vera has gained popularity in the past few years for the health benefits that it provides. And it’s difficult for a thing not to become famous once it's connected to the word ‘weight loss’. Aloe vera is helpful in losing weight due to the detoxifying properties it has. Most people who want to lose weight or are struggling to do so surely know about it. But what most of them don’t know is how to inculcate it in their diet/routine for losing weight in a healthy manner.
X
Desktop Bottom Promotion