For Quick Alerts
ALLOW NOTIFICATIONS  
For Daily Alerts

ದೇಹದ ತೂಕ ಇಳಿಸಲು ನೆರವಾಗುವ ಕೆಲವು ಯೋಗಾಸನಗಳು

|

ಯೋಗ ಎನ್ನುವುದು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ತನ್ನ ಫಿಟ್ನೆಸ್ ನ್ನು ಕಾಪಾಡಿಕೊಳ್ಳಲು ಬೇಕಾಗಿರುವಂತಹ ಅತೀ ಮಹತ್ವದ ವ್ಯಾಯಾಮ ವಿಧಾನವಾಗಿದೆ. ಭಾರತೀಯರು ಹಿಂದಿನಿಂದಲೂ ಯೋಗವನ್ನು ಬಳಸಿಕೊಂಡು ಬರುತ್ತಿದ್ದರು. ಇದು ವಿಶ್ವಮಟ್ಟದಲ್ಲಿ ಇಂದು ಪ್ರಚಾರ ಪಡೆದುಕೊಂಡಿದೆ. ಯೋಗ ಎನ್ನುವ ಶಬ್ದವು ಯುಜಿ'ಎನ್ನುವ ಸಂಸ್ಕೃತ ಪದದಿಂದ ಬಂದಿದೆ. ಯುಜಿ ಎಂದರೆ ದೈಹಿಕ ಪ್ರಜ್ಞೆ ಮತ್ತು ಬ್ರಹ್ಮಾಂಡ ಶಕ್ತಿಯ ಮಿಲನವಾಗಿದೆ. ಯೋಗವು ದೈಹಿಕ ಮತ್ತು ಮಾನಸಿಕವಾಗಿ ಚಿಕಿತ್ಸವಾಗಿ ಇರುತ್ತದೆ. ಇದು ತೂಕ ಕಳೆದುಕೊಳ್ಳಲು ನೆರವಾಗುವುದು. ನಿಮಗೆ ಯೋಗವು ಇಷ್ಟವಾಗಿದ್ದೆ ಮತ್ತು ತೂಕ ಇಳಿಸಲು ಪ್ರಯತ್ನಿಸುತ್ತಿದ್ದರೆ ಆಗ ನಿಮಗೆ ಈ ಲೇಖನವು ತುಂಬಾ ಸಹಕಾರಿ ಆಗಲಿದೆ.

Yoga

ಯೋಗ ಮತ್ತು ತೂಕ ಇಳಿಸುವುದು

ತೀವ್ರ ರೀತಿಯ ಯೋಗಾಭ್ಯಾಸಗಳಿಂದ ಕ್ಯಾಲರಿ ದಹಿಸುವ ಕಾರಣದಿಂದ ನಿಮಗೆ ತೂಕ ಇಳಿಸಲು ನೆರವಾಗಲಿದೆ. ಇದು ತೂಕ ಏರುವುದನ್ನು ತಡೆಯುವುದು. ಶಕ್ತಶಾಲಿ ಯೋಗಾಭ್ಯಾಸಗಳನ್ನು ಮಾಡುವುದರಿಂದ ನಿಮಗೆ ಬಲಶಾಲಿ ಸ್ನಾಯುಗಳನ್ನು ಬೆಳೆಸಲು ಮತ್ತು ಚಯಾಪಚಯ ಕ್ರಿಯೆ ಸುಧಾರಣೆ ಮಾಡಲು ನೆರವಾಗಲಿದೆ. ಅಮೆರಿಕನ್ ಜರ್ನಲ್ ಆಫ್ ಲೈಫ್ ಸ್ಟೈಲ್ ಮೆಡಿಸಿನ್ ನಲ್ಲಿ ಪ್ರಕಟಗೊಂಡಿರುವಂತಹ ವರದಿಯ ಪ್ರಕಾರ ತೂಕ ಕಳೆದುಕೊಳ್ಳಲು ಯೋಗವು ಹಲವಾರು ವಿಧದಿಂದ ನೆರವಾಗುವುದು ಮತ್ತು ಒತ್ತಡ ನಿವಾರಣೆ ಕೂಡ ಮಾಡುವುದು. ತೂಕ ಇಳಿಸಲು ಕೆಲವು ಯೋಗಾಸನಗಳು

ನೌಕಾಸನ

ನೌಕಾಸನ

ಇದು ದೋಣಿಯ ಭಂಗಿಯಲ್ಲಿ ಇರುವುದು. ದೇಹವನ್ನು ನೆಲದಿಂದ ಸಮತೋಲದಲ್ಲಿ ಇಡುವುದು ಮತ್ತು ಹೊಟ್ಟೆಯ ಬೊಜ್ಜು ಕರಗಿಸಲು ನಿಮಗೆ ತುಂಬಾ ಕಷ್ಟವಾಗುತ್ತಿದ್ದರೆ ಆಗ ನೀವು ಈ ಯೋಗಾಸನ ಮಾಡಲೇಬೇಕು. ಈ ಯೋಗಾಸನವು ನಿಮಗೆ ನೆರವಾಗಲಿದೆ. ನೌಕಾಸನ ದಿನಾಲೂ ಅಭ್ಯಾಸ ಮಾಡಿದರೆ ಆಗ ನಿಮಗೆ ಅದರಿಂದ ಬಲಯುತ ಹೊಟ್ಟೆ, ಒತ್ತಡ ನಿವಾರಣೆ ಮತ್ತು ಕರುಳು, ಕಿಡ್ನಿ ಮತ್ತು ಪ್ರಾಸ್ಟೇಟ್ ಗ್ರಂಥಿಗಳನ್ನು ಇದು ಉತ್ತೇಜಿಸುವುದು.

ಸೂಚನೆ: ನಿದ್ರಾಹಿಣತೆ, ಬೆನ್ನು ನೋವು ಅಥವಾ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದರೆ ಆಗ ನೀವು ಈ ಯೋಗಾಸನ ಪ್ರಯತ್ನಿಸಬೇಡಿ.

ಇದನ್ನು ಅಭ್ಯಾಸ ಮಾಡುವುದು ಹೇಗೆ?

•ಕಾಲುಗಳನ್ನು ನೇರವಾಗಿಸಿ ನೆಲದ ಮೇಲೆ ಕುಳಿತುಕೊಳ್ಳಿ.

•ಮೊಣಕಾಲನ್ನು ಬಗ್ಗಿಸಿಕೊಂಡು ಕಾಲುಗಳನ್ನು ಮೇಲಕ್ಕೆ ಎತ್ತಿಕೊಳ್ಳಿ, ತೊಡೆಗಳು ಈ ವೇಳೆ ನೆಲದ ಕೋನದಲ್ಲಿರಲಿ ಮತ್ತು ಮೊಣಕಾಲು ನೆಲಕ್ಕೆ ಸಮಾನಾಂತರವಾಗಿರಲಿ.

•ಕೈಗಳನ್ನು ಕೂಡ ನೀವು ಮೇಲಕ್ಕೆತ್ತಿ ಮತ್ತು ಇದು ನೆಲಕ್ಕೆ ಸಮಾನಾಂತರವಾಗಿರಲಿ.

•ಕಾಲುಗಳನ್ನು ಈ ವೇಳೆ ಮೇಲಕ್ಕೆತ್ತಿ. ಮುಖವು ಮೇಲಕ್ಕಿರಲಿ.

•ಈ ಭಂಗಿಯಲ್ಲಿ 30 ಸೆಕೆಂಡುಗಳ ಕಾಲ ಹಾಗೆ ಇರಿ ಮತ್ತು ಐದು ಸಲ ಇದನ್ನು ಪುನರಾವರ್ತಿಸಿ.

Most Read: ಯೋಗ ಟಿಪ್ಸ್: ಒತ್ತಡವನ್ನು ಹದ್ದು ಬಸ್ತಿನಲ್ಲಿಡುವ 'ನೌಕಾಸನ'

ದಂಡಾಸನ

ದಂಡಾಸನ

ಈ ಆಸನದಲ್ಲಿ ಕೈಗಳು ನಿಮ್ಮ ದೇಹಕ್ಕೆ ಬಲ ನೀಡಲು ನೆರವಾಗುವುದು. ಈ ಆಸನ ಮಾಡುವ ಕಾರಣದಿಂದಾಗಿ ನಿಮ್ಮ ಕೈಗಳು ಹಾಗೂ ಭುಜವನ್ನು ಬಲಗೊಳಿಸುವುದು.

ಮಾಡುವ ವಿಧಾನ

•ನೆಲದ ಮೇಲೆ ಕುಳಿತುಕೊಳ್ಳಿ ಮತ್ತು ಕೈಗಳು ನಿಮ್ಮ ಸೊಂಟದ ಹತ್ತಿರವಿರಲಿ ಮತ್ತು ಬೆರಳುಗಳು ಮುಂದಿನ ಭಾಗಕ್ಕೆ ಇರಲಿ.

•ಮೊಣಕಾಲನ್ನು ಬಗ್ಗಿಸಿ ಮತ್ತು ಪಾದವು ನೆಲದ ಮೇಲಿರಲಿ.

•ಉಸಿರನ್ನು ಹೊರಗೆ ಬಿಡಿ ಮತ್ತು ಪಾದವನ್ನು ಒತ್ತಿ ಹಿಡಿಯಿರಿ ಮತ್ತು ಕೈಗಳನ್ನು ನೆಲಕ್ಕೆ ಒತ್ತಿ ಮತ್ತು ಸೊಂಟವನ್ನು ಮೇಲಕ್ಕೆ ಎತ್ತಿ.

•ಕಾಲುಗಳನ್ನು ನೇರವಾಗಿಸಿ ಮತ್ತು ತಲೆಯನ್ನು ನಿಧಾನವಾಗಿ ತಿರುಗಿಸಿ.

•ಇದನ್ನು 30 ನಿಮಿಷ ಕಾಲ ಹಾಗೆ ಬಿಡಿ ಮತ್ತು ಮತ್ತೆ ಸಾಮಾನ್ಯ ಭಂಗಿಗೆ ಬಂದು ಉಸಿರನ್ನು ಬಿಡಿ.

ಸಿಂಹಾಸನ

ಸಿಂಹಾಸನ

ಮುಖದಲ್ಲಿ ಹೆಚ್ಚಿನ ಕೊಬ್ಬು ಇದ್ದರೆ ಆಗ ನೀವು ಈ ಆಸನವನ್ನು ಮಾಡಬಹುದು. ಇದರಿಂದ ಮುಖದ ಮೇಲಿನ ಸ್ನಾಯುಗಳು ಬಲಗೊಳ್ಳುವುದು. ಈ ಭಂಗಿಯಲ್ಲಿ ನೀವು ನಾಲಗೆಯನ್ನು ಹೊರಗೆ ಹಾಕಿದಾಗ, ಮುಖದ ಸ್ನಾಯುಗಳು, ಬೆನ್ನು ಮತ್ತು ತೊಡೆಗಳು ಒತ್ತಲ್ಪಡುವುದು. ಈ ಆಸನದಿಂದ ನೀವು ಮುಖದ ಕೊಬ್ಬು ಕಳೆದುಕೊಳ್ಳಬಹುದು. ಯಾವುದೇ ವಯಸ್ಸಿನವರು ಈ ಯೋಗಾಸನ ಮಾಡಬಹುದು.

ಮಾಡುವ ವಿಧಾನ

•ನೆಲದ ಮೇಲೆ ಮಂಡಿಯೂರಿ ಕುಳಿತುಕೊಳ್ಳಿ ಮತ್ತು ಕಾಲುಗಳನ್ನು ಬಗ್ಗಿಸಿಕೊಳ್ಳಿ.

•ಮೊಣಕಾಲಿಗೆ ವಿರುದ್ಧವಾಗಿ ಅಂಗೈಯನ್ನು ಒತ್ತಿಕೊಳ್ಳಿ.

•ಅಂಗೈಯನ್ನು ಬಿಡಿಸಿಕೊಳ್ಳಿ ಮತ್ತು ಬೆರಳುಗಳನ್ನು ಉಗುರುಗಳಂತೆ ತೆರೆಯಿರಿ.

•ಉಸಿರಾಡಿ ಮತ್ತು ಬಾಯಿಯನ್ನು ತೆರೆಯಿರಿ ಮತ್ತು ನಾಲಗೆ ಹೊರಗೆ ಹಾಕಿ. ಇದನ್ನು ಮಡಚುತ್ತಾ ಗಲ್ಲದ ಕಡೆ ಕೊಂಡೊಯ್ಯಿರಿ.

•ಕಣ್ಣುಗಳನ್ನು ಅಗಲವಾಗಿಸಿ ಮತ್ತು ಉಸಿರು ಬಿಡಿ.

ಅರ್ಧ ಪಿಂಚ ಮಯೂರಾಸನ

ಅರ್ಧ ಪಿಂಚ ಮಯೂರಾಸನ

ಈ ಆಸನದಲ್ಲಿ ಕೈಗಳು ನಿಮ್ಮ ದೇಹದ ಸಂಪೂರ್ಣ ಭಾರವನ್ನು ಸಮತೋಲನದಲ್ಲಿ ಇಡುವುದು. ಈ ಆಸನವನ್ನು ಮಾಡುವುದರಿಂದ ಕೈಗಳು, ಭುಜಗಳು ಬಲಗೊಳ್ಳುತ್ತದೆ.

ಸೂಚನೆ: ಕುತ್ತಿಗೆ ಅಥವಾ ಭುಜದ ನೋವು ಇರುವಂತಹವರು ಈ ಯೋಗಾಸನ ಮಾಡಬಾರದು.

ಮಾಡುವ ವಿಧಾನ

•ಕೈಗಳು ಮತ್ತು ಮೊಣಕಾಲನ್ನು ನೆಲದ ಮೇಲಿಡಿ.

•ಮೊಣಕಾಲುಗಳು ಸೊಂಟದ ಕೆಳಗೆ ಇರಬೇಕು ಮತ್ತು ಮೊಣಕೈಯು ನೆಲದ ಮೇಲಿರಬೇಕು ಮತ್ತು ಭುಜಗಳು ನೇರವಾಗಿ ಮಣಿಕಟ್ಟಿನ ಮೇಲಿರಬೇಕು.

•ಅಂಗೈಯನ್ನು ಮತ್ತು ಮೊಣಕೈಯನ್ನು ನೆಲಕ್ಕೆ ಒತ್ತಿ.

•ಉಸಿರನ್ನು ಬಿಡಿ ಮತ್ತು ಮೊಣಕಾಲನ್ನು ನೆಲದಿಂದ ಮೇಲಕ್ಕೆ ಎತ್ತಿ ಮತ್ತು ಸ್ವಲ್ಪ ಬಗ್ಗಿಸಿ.

•ತಲೆಯು ನೆಲದ ಭಾಗಕ್ಕಿರಲಿ.

•ಇದನ್ನು 30 ಸೆಕೆಂಡು ಕಾಲ ಮಾಡಿ ಮತ್ತು ಉಸಿರನ್ನು ಹೊರಗೆ ಬಿಡುತ್ತಿರುವಂತೆ ಮೊಣಕಾಲಿಗೆ ಆರಾಮ ನೀಡಿ.

Most Read: ಮುಂಗೈ- ಮಣಿಕಟ್ಟುಗಳ ದೃಢತೆಗೆ-ಮಯೂರಾಸನ ಅನುಸರಿಸಿ

ಮತ್ಸ್ಯಾಸನ

ಮತ್ಸ್ಯಾಸನ

ಈ ಯೋಗಾಸನವು ದೇಹದ ಕೆಳಗಿನ ಭಾಗವಾಗಿರು ತೊಡೆಗಳು, ಹೊಟ್ಟೆಯ ಸ್ನಾಯುಗಳು ಮತ್ತು ಸೊಂಟಕ್ಕೆ ಒತ್ತಡ ಹಾಕುವುದು. ಈ ಯೋಗಾಸನವು ಬಾಗುವುದು ಮತ್ತು ದೇಹದ ಕೆಳಗಿನ ಭಾಗವನ್ನು ಮೇಲಕ್ಕೆ ಎತ್ತುವುದಾಗಿದೆ. ಇದರಿಂದ ಹೊಟ್ಟೆ ಮತ್ತು ತೊಡೆಯಲ್ಲಿ ಇರುವಂತಹ ಕೊಬ್ಬು ಕರಗುವುದು.

ಮಾಡುವ ವಿಧಾನ

•ನೆಲದ ಮೇಲೆ ಮಲಗಿ ಮತ್ತು ಮೊಣಕಾಲು ಸ್ವಲ್ಪ ಮಡಚಿ.

•ಉಸಿರಾಡಿ ಮತ್ತು ನೆಲದ ಮೇಲಿಂದ ಸೊಂಟವನ್ನು ಸ್ವಲ್ಪ ಮೇಲಕ್ಕೆತ್ತಿ ಮತ್ತು ಅಂಗೈಯನ್ನು ಪೃಷ್ಠದ ಅಡಿಗಿಡಿ.

•ಮೊಣಕೈಯನ್ನು ನೀವು ನೆಲಕ್ಕೆ ಒತ್ತಿಕೊಳ್ಳಿ.

•ತಲೆಯನ್ನು ನೆಲದ ಮೇಲಿಡಿ.

•ಈ ಭಂಗಿಯಲ್ಲಿ 30 ಸೆಕೆಂಡು ಇರಿ ಮತ್ತು ಉಸಿರನ್ನು ಹೊರಬಿಡಿ.

ಸೂಚನೆ: ಋತುಚಕ್ರವಾಗುತ್ತಿದ್ದರೆ, ರಕ್ತದೊತ್ತಡ ಮತ್ತು ಮೈಗ್ರೇನ್ ನಿಂದ ಬಳಲುತ್ತಿದ್ದರೆ ಆಗ ನೀವು ಈ ಆಸನವನ್ನು ಮಾಡಬಾರದು.

Most Read: ಕುತ್ತಿಗೆ, ಭುಜಗಳಲ್ಲಿ ನೋವೇ? ಮತ್ಸ್ಯಾಸನ ಅನುಸರಿಸಿ ಸಾಕು

ಭುಜಂಗಾಸನ

ಭುಜಂಗಾಸನ

ಈ ಯೋಗಾಸನವು ದೇಹದ ಮೇಲಿನ ಭಾಗಕ್ಕೆ ಸಂಬಂಧಿಸಿದೆ ಮತ್ತು ಹೊಟ್ಟೆಯ ಸ್ನಾಯಗಳ ಮೇಲೆ ಒತ್ತಡ ಹಾಕುವುದು ಮತ್ತು ಇಲ್ಲಿರುವಂತಹ ಬೇಡದ ಕೊಬ್ಬನ್ನು ಕರಗಿಸಲು ಇದು ನೆರವಾಗುವುದು.

ಸೂಚನೆ: ನೀವು ಗರ್ಭಿಣಿ ಅಥವಾ ಹರ್ನಿಯಾದ ಸಮಸ್ಯೆ ಎದುರಿಸುತ್ತಿದ್ದರೆ ಆಗ ನೀವು ಈ ಆಸನ ಮಾಡಬಾರದು.

ಮಾಡುವ ವಿಧಾನ

•ಹೊಟ್ಟೆಯ ಮೇಲೆ ಮಲಗಿ, ಕಾಲುಗಳನ್ನು ಅಗಲವಾಗಿಸಿ ಮತ್ತು ಕೈಗಳನ್ನು ಭುಜದ ಕೆಳಗೆ ಸಮಾನಾಂತರವಾಗಿ ನೆಲದ ಮೇಲಿಡಿ.

•ಉಸಿರನ್ನು ಎಳೆಯಿರಿ ಮತ್ತು ನೆಲದ ಮೇಲಿಂದ ಎದೆಯನ್ನು ಮೇಲಕ್ಕೆತ್ತಿ.

•ಬೆನ್ನಿಗೆ ವಿರುದ್ಧವಾಗಿ ಭುಜದ ಹಿಂದಿನ ಭಾಗ ಬಿಗಿಯಾಗಿಸಿ.

•30 ಸೆಕೆಂಡು ಕಾಲ ಹಾಗೆ ಇರಿ ಮತ್ತು ಉಸಿರನ್ನು ಬಿಡಿ.

ಮಲಾಸನ

ಮಲಾಸನ

ಈ ಆಸನವು ದಿನವಿಡಿ ಕುಳಿತುಕೊಂಡೇ ಕೆಲಸ ಮಾಡುತ್ತಾ ದೇಹದ ಕೆಳಗಿನ ಭಾಗದಲ್ಲಿ ಕೊಬ್ಬು ಜಮೆ ಮಾಡಿಕೊಂಡಿರುವವರಿಗೆ ತುಂಬಾ ಸಹಕಾರಿ. ಈ ಆಸನವು ತೊಡೆ, ಸೊಂಟದ ಸ್ನಾಯುಗಳಿಗೆ ಹೆಚ್ಚು ಒತ್ತಡ ಹಾಕುವುದು ಮತ್ತು ಇದರಿಂದ ಸ್ಥಿತಿಸ್ಥಾಪಕತ್ವ ಹೆಚ್ಚು ಮಾಡುವುದು. ಅದೇ ರೀತಿಯಾಗಿ ತೊಡೆಗಳ ಒಳಗಿನ ಹಾಗೂ ಹೊರಗಿನ ಭಾಗವನ್ನು ಬಲಗೊಳಿಸುವುದು.

ಸೂಚನೆ: ಸೊಂಟ ಅಥವಾ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದರೆ ಆಗ ನೀವು ಈ ಯೋಗಾಸನ ಮಾಡಬೇಡಿ.

ವಿಧಾನ

•ಚಕ್ಕಳ ಬಕ್ಕಳ ಹಾಕಿ ಕುಳಿತುಕೊಳ್ಳಿ ಮತ್ತು ಕಾಲುಗಳನ್ನು ದೂರವಾಗಿಸಿ.

•ಉಸಿರನ್ನು ಹೊರಗೆ ಬಿಡಿ ಮತ್ತು ತೊಡೆಗಳಿಂದ ನೀವು ಎದುರಿಗೆ ಬಾಗಿ.

•ಮೊಣಕೈಯನ್ನು ಮಂಡಿಗಳ ವಿರುದ್ಧ ಒತ್ತಿರಿ ಮತ್ತು ಅಂಗೈಯನ್ನು ಜತೆಯಾಗಿಸಿಕೊಳ್ಳಿ.

•ಈ ಭಂಗಿಯಲ್ಲಿ 30 ಸೆಕೆಂಡಿನಿಂದ ನಿಮಿಷ ಕಾಲ ಹಾಗೆ ಇರಿ ಮತ್ತು ಇದರ ಬಳಿಕ ಉಸಿರನ್ನು ಬಿಡಿ.

Most Read:ಭುಜ, ಕೈ ತೋಳುಗಳ ಬಲವೃದ್ಧಿಗೆ-ಪಿಂಚ ಮಯೂರಾಸನ

ತೂಕ ಇಳಿಸಲು ನೀವು ಯೋಗವನ್ನು ಎಷ್ಟರ ಮಟ್ಟಿಗೆ ಅಭ್ಯಾಸ ಮಾಡಬೇಕು?

ವಾರದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಮೂರರಿಂದ ಐದು ದಿನಗಳ ಕಾಲ ತೀವ್ರವಾದ ಯೋಗಾಸನ ಮಾಡಬೇಕು. ನಿಮಗೆ ಹೆಚ್ಚು ಸಮಯವಿಲ್ಲದೆ ಇದ್ದರೆ ಆಗ ನೀವು 20 ನಿಮಿಷ ಕಾಲ ಇದನ್ನು ಪ್ರಯತ್ನಿಸಿ. ಯೋಗವನ್ನು ಆರಂಭಿಸಿದ್ದರೆ ಆಗ ನೀವು ನಿಧಾನವಾಗಿ ಇದನ್ನು ಮಾಡಿ ಮತ್ತು ಅಭ್ಯಾಸ ಮಾಡಿದಂತೆ ಇದನ್ನು ಹೆಚ್ಚಿಸಿ.

ಯೋಗದೊಂದಿಗೆ ನೀವು ಸ್ವಲ್ಪ ತೀವ್ರವಾದ ಸೈಕ್ಲಿಂಗ್, ನಡಿಗೆ ಅಥವಾ ಈಜಬಹುದು.

English summary

How To Lose Weight With Yoga

Intense yoga exercises help you burn the most of calories, which aids in preventing weight gain. Practising power yoga daily helps you develop muscle tone and improve your metabolism. Some of the yoga poses for losing weight are fish pose, cobra pose, boat pose, plank pose,lion pose,dolphin pose, etc.
X
Desktop Bottom Promotion