For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಬೇಕೇ? ಹಾಗಾದರೆ ಈ 14 ದಿನಗಳ ಲಿಂಬೆ-ನೀರಿನ ಚಾಲೆಂಜ್ ಸ್ವೀಕರಿಸಿ!

|

ಇಂದಿನ ದಿನಗಳಲ್ಲಿ ಸವಲತ್ತು ಹೆಚ್ಚಿತ್ತಿದ್ದಂತೆಯೇ ಏರುತ್ತಿರುವ ತೂಕವೂ ಕಾಳಜಿಯ ವಿಷಯವಾಗಿದ್ದು ತೂಕ ಇಳಿಸುವುದು ಒಂದು ಅಗತ್ಯತೆಯಾಗಿಬಿಟ್ಟಿದೆ. ತೂಕ ಇಳಿಸಬೇಕೆಂದು ಬಯಸುವವರರಲ್ಲಿ ಹೆಚ್ಚಿನವರು ಆರಂಭಶೂರರೇ ಆಗಿದ್ದು ಇದಕ್ಕೆ ಸೂಕ್ತ ಪ್ರಾರಂಭಿಕ ದಿನಾಂಕವನ್ನು ಎದುರುನೋಡುತ್ತಿರುತ್ತಾರೆ. ವಿಶ್ವದಲ್ಲಿ ಅತಿ ಹೆಚ್ಚು ಜನರು ಆಯ್ಕೆ ಮಾಡುವ ದಿನಾಂಕವೆಂದರೆ ಜನವರಿ ಒಂದು. ಮರುದಿನ ರಸ್ತೆಯಲ್ಲೆಲ್ಲಾ ಜಾಗಿಂಗ್ ಮಾಡುವವರ ಸಂಖ್ಯೆ ಅಗಣಿತ. ಈ ಹುರುಪು ಕೇವಲ ಒಂದೆರಡು ದಿನವಷ್ಟೇ, ನಾಲ್ಕನೆಯ ದಿನ ಮುಕ್ಕಾಲು ಪಾಲು ಈ ಸಂಖ್ಯೆ ಕರಗಿ ಆರನೆಯ ದಿನಕ್ಕೆ ಯಥಾ ಪ್ರಕಾರ ಇರುತ್ತದೆ. ಇದಕ್ಕೆ ವಾಸ್ತವ ಕಾರಣವೆಂದರೆ ನಮ್ಮೆಲ್ಲರಿಗೂ ದಿನದ ಇಪ್ಪತ್ತನಾಲ್ಕು ಗಂಟೆಗಳೂ ಒಂದಲ್ಲಾ ಒಂದು ನಮಗೆ ಖುಷಿತರುವ ವಿಷಯಗಳಿಗೆ ಮೀಸಲಾಗಿದ್ದು ಇದನ್ನು ತ್ಯಜಿಸಲು ನಮಗಾರಿಗೂ ಇಷ್ಟವಾಗುವುದಿಲ್ಲ.

ಹಾಗಾಗಿ, ಎಲ್ಲಿಯವರೆಗೆ ನಮಗೆ ತೂಕ ಇಳಿಸಲೇಬೇಕೆಂಬ ಹಠ ಮೂಡುವುದಿಲ್ಲವೋ, ಅಲ್ಲಿಯವರೆಗೆ ಈ ಆರಂಭಶೂರತ್ವ ಹೋಗುವುದೇ ಇಲ್ಲ. ಈ ಹಠವನ್ನು ಸಾಧಿಸಲು ಈಗೊಂದು ವಿಧಾನ ಲಭ್ಯವಿದೆ. ಇದೇ ಹದಿನಾಲ್ಕು ದಿನಗಳ ಲಿಂಬೆ ನೀರಿನ ಸವಾಲು ಅಥವಾ ಚಾಲೆಂಜ್. ಈ ಸವಾಲು ಸುಲಭ, ಸರಳ, ಆರೋಗ್ಯಕರ ಹಾಗೂ ವಿನೋದಕರವೂ ಆಗಿದೆ. ಅಲ್ಲದೇ ಈ ವಿಧಾನವನ್ನು ಸರಿಯಾದ ರೀತಿಯಲ್ಲಿ ಅನುಸರಿಸಿದರೆ (ನಾವು ಈ ವಿಧಾನವನ್ನು ಮುಂದೆ ಹೇಳಲಿದ್ದೇವೆ) ನೀವು ಎರಡೇ ವಾರದಲ್ಲಿ ನಿಮ್ಮ ದೇಹದಾರ್ಢ್ಯವನ್ನು ಅನುಸರಿಸಿ ಸಾಧ್ಯವಾಗುವ ಗರಿಷ್ಟ ಇಳಿಕೆಯನ್ನು ಸಾಧಿಸಬಹುದು. ಆದರೆ ಇದಕ್ಕೆ ಬೇಕಾಗಿರುವುದು ದೃಢ ಮನೋಬಲ ಹಾಗೂ ಇದನ್ನು ನಡುವೆ ನಿಲ್ಲಸಲಾರೆ ಎಂಬ ದೃಢಸಂಕಲ್ಪ!

ತೂಕ ಇಳಿಕೆಗೆ ಲಿಂಬೆ ನೀರೇ ಏಕೆ?

ತೂಕ ಇಳಿಕೆಗೆ ಲಿಂಬೆ ನೀರೇ ಏಕೆ?

ನಮ್ಮ ದೇಹಕ್ಕೆ ನೀರು ಅಗತ್ಯವಾಗಿ ಬೇಕಾಗಿದೆ. ನೀರನ್ನು ಕುಡಿದ ಬಳಿಕ ಅಗತ್ಯ ಕಾರ್ಯಗಳಿಗೆ ನೀರನ್ನು ತಲುಪಿಸಲು ಕೊಂಚ ಪ್ರಮಾಣದಲ್ಲಿ ದೇಹಕ್ಕೆ ಕ್ಯಾಲೋರಿಗಳನ್ನು ಖರ್ಚು ಮಾಡಬೇಕಾಗಿ ಬರುತ್ತದೆ. ಈ ನೀರಿಗೆ ಕೊಂಚ ಲಿಂಬೆರಸವನ್ನು ಸೇರಿಸಿದಾಗ ಬಳಸಬೇಕಾಗಿ ಬರುವ ಕ್ಯಾಲೋರಿಗಳು ಅತಿ ಹೆಚ್ಚಾಗುತ್ತದೆ. ಇದೇ ಈ ವಿಧಾನದ ಗುಟ್ಟು. ಲಿಂಬೆರಸ ದೇಹದಲ್ಲಿ ಹಲವಾರು ಬಗೆಯ ಪರಿಣಾಮಗಳನ್ನು ಉಂಟುಮಾಡುತ್ತದೆ ಹಾಗೂ ಮುಖ್ಯವಾಗಿ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬಿನ ಸಂಗ್ರಹವನ್ನು ಬಳಸಿಕೊಳ್ಳುವುದರ ಮೂಲಕ ತೂಕ ಇಳಿಸುತ್ತದೆ. ಅಲ್ಲದೇ ಲಿಂಬೆರಸ ಆಮ್ಲೀಯವಾಗಿದ್ದು ಜೀವ ರಾಸಾಯನಿಕ ಕ್ರಿಯೆ ಚುರುಕುಗೊಳ್ಳುತ್ತದೆ. ಅಷ್ಟೇ ಅಲ್ಲ, ಲಿಂಬೆರಸದ ಸೇವನೆ ಸತತವಾಗಿದ್ದರೆ ಆರೋಗ್ಯಕ್ಕೆ ಇನ್ನೂ ಹಲವಾರು ಬಗೆಯ ಪ್ರಯೋಜನಗಳಿವೆ. ಹೃದಯ ಮತ್ತು ಜೀರ್ಣವ್ಯವಸ್ಥೆಗೆ ಲಿಂಬೆ ನೀಡುವ ಸಹಕಾರ ಅತಿ ಹೆಚ್ಚು ಹಾಗೂ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡಿ ಹಲವಾರು ಕ್ಯಾನ್ಸರ್ ಗಳಿಂದ ರಕ್ಷಣೆ ಒದಗಿಸುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನೂ ಉತ್ತಮಗೊಳಿಸುತ್ತದೆ.

ಲಿಂಬೆ ನೀರಿನ ಸೇವನೆಯಿಂದ ದೇಹದಿಂದ ನಿವಾರಣೆಯಾಗುವ ಕಲ್ಮಶಗಳು

ಲಿಂಬೆ ನೀರಿನ ಸೇವನೆಯಿಂದ ದೇಹದಿಂದ ನಿವಾರಣೆಯಾಗುವ ಕಲ್ಮಶಗಳು

ತೂಕ ಇಳಿಕೆಗೆ ಲಿಂಬೆ ನೀರು ಅತ್ಯುತ್ತಮ ಆಯ್ಕೆಯಾಗಿದೆ. ನಾವು ಕುಡಿಯುವ ನೀರಿಗೆ ಕೊಂಚ ಲಿಂಬೆಯನ್ನು ಸೇರಿಸಿ ಕುಡಿಯುವುದರಿಂದ ದೇಹದಿಂದ ಕಲ್ಮಶಗಳು ನಿವಾರಣೆಯಾಗುವ ಸಾಮರ್ಥ್ಯ ಹೆಚ್ಚುತ್ತದೆ. ದೇಹದಿಂದ ಕಲ್ಮಶಗಳನ್ನು ನಿವಾರಿಸಲು ಇತರ ವಿಧಾನಗಳಿಗಿಂತ ಲಿಂಬೆನೀರೇ ಉತ್ತಮ, ಏಕೆಂದರೆ ಇತರ ವಿಧಾನಗಳಲ್ಲಿ ಇಡಿಯ ದಿನ ಉಪವಾಸವಿದ್ದು ಒಂದು ಔಷಧಿಯನ್ನು ಸತತವಾಗಿ ಸೇವಿಸುತ್ತಲೇ ಇರಬೇಕಾಗುತ್ತದೆ. ಲಿಂಬೆ ನೀರಿನ ಸೇವನೆಯ ಜೊತೆಗೆ ನಾವು ಇತರ ನಿತ್ಯದ ಆಹಾರಗಳನ್ನು ಸೇವಿಸಬಹುದಾಗಿದೆ ಹಾಗೂ ಕಲ್ಮಶಗಳನ್ನೂ ಯಶಸ್ವಿಯಾಗಿ ನಿವಾರಿಸಬಹುದು.

Most Read: ಇಂತಹ ಆಹಾರಗಳನ್ನು ಚಳಿಗಾಲದಲ್ಲಿ ತಪ್ಪದೇ ಮಿಸ್ ಮಾಡದೇ ಸೇವಿಸಿ

ದೇಹದಿಂದ ಕಲ್ಮಶಗಳನ್ನು ನಿವಾರಿಸಲು ಲಿಂಬೆನೀರಿನ ಸೇವನೆಯಿಂದ ಈ ಪ್ರಯೋಜನಗಳಿವೆ:

ದೇಹದಿಂದ ಕಲ್ಮಶಗಳನ್ನು ನಿವಾರಿಸಲು ಲಿಂಬೆನೀರಿನ ಸೇವನೆಯಿಂದ ಈ ಪ್ರಯೋಜನಗಳಿವೆ:

*ಇದರಿಂದ ತೂಕ ಇಳಿಕೆಗೆ ನೆರವಾಗುತ್ತದೆ

*ದೇಹಕ್ಕೆ ಅಗತ್ಯವಾದ ನೀರಿನ ಪೂರೈಕೆಯಾಗುತ್ತದೆ

*ಲಿಂಬೆಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

*ಲಿಂಬೆನೀರಿನ ಮೂಲಕ ಕಲ್ಮಶಗಳು ನಿವಾರಣೆಯಾದ ಬಳಿಕ ತ್ವಚೆ ಆರೋಗ್ಯಕರ, ನುಣುಪು ಹಾಗೂ ಕಾಂತಿಯುಕ್ತವಾಗುತ್ತದೆ

*ಲಿಂಬೆನೀರಿನ ಸೇವನೆ ಮೂತ್ರಪಿಂಡಗಳಿಗೆ ಸಹಕಾರಿಯಾಗಿದೆ ಹಾಗೂ ಕಲ್ಲುಗಳಾಗುವುದನ್ನು ತಪ್ಪಿಸುತ್ತದೆ

*ಲಿಂಬೆನೀರಿನ ಸೇವನೆಯಿಂದ ದೇಹಕ್ಕೆ ಅಗತ್ಯ ಪ್ರಮಾಣದ ಪೊಟ್ಯಾಶಿಯಂ ದೊರಕುತ್ತದೆ

*ಲಿಂಬೆನೀರು ಉತ್ಕರ್ಷಣಶೀಲ ಒತ್ತಡ (oxidative stress)ವನ್ನು ಕಡಿಮೆಗೊಳಿಸುತ್ತದೆ. ಲಿಂಬೆನೀರನ್ನು ಸೇವಿಸಿ *ತೂಕ ಇಳಿಸಲು ದೃಢನಿಶ್ಚಯ ಮಾಡಿದ್ದರೆ ಮಾತ್ರ ಮುಂದೆ ಓದಿ:

ಮೊದಲ ದಿನ

ಮೊದಲ ದಿನ

ಈ ದಿನ ಬೆಳಿಗ್ಗೆದ್ದ ತಕ್ಷಣ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸವನ್ನು ಬೆರೆಸಿ ಕುಡಿಯಬೇಕು. ಬಳಿಕ ಸುಮಾರು ಮುಕ್ಕಾಲು ಘಂಟೆಯವರೆಗೆ ಏನನ್ನೂ ಸೇವಿಸಬಾರದು

ಎರಡನೆಯ ದಿನ

ಎರಡನೆಯ ದಿನ

ಇಂದು ಎರಡು ಲೋಟ ನೀರಿಗೆ ಎರಡು ಲಿಂಬೆಹಣ್ಣಿನ ರಸವನ್ನು ಬೆರೆಸಿ ಒಂದು ಚಿಕ್ಕ ಚಮಚ ಜೇನನ್ನು ಬೆರೆಸಿ ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸಬೇಕು. ಬಳಿಕ ಸುಮಾರು ಮುಕ್ಕಾಲು ಘಂಟೆಯವರೆಗೆ ಏನನ್ನೂ ಸೇವಿಸಬಾರದು

ಮೂರನೆಯ ದಿನ

ಮೂರನೆಯ ದಿನ

ಇಂದು ಮೂರು ಲೋಟ ನೀರಿಗೆ ಮೂರು ಲಿಂಬೆ ಹಣ್ಣುಗಳನ್ನು ಸೇರಿಸಿ ಒಂದು ಚಿಕ್ಕ ಚಮಚದಷ್ಟು ಜೇನನ್ನು ಮೂರೂ ಲೋಟಗಳಲ್ಲಿ ಕೊಂಚ ಕೊಂಚವಾಗಿ ಬೆರೆಸಿ ಇದರಲ್ಲಿ ಅರ್ಧದಷ್ಟು ಪ್ರಮಾಣವನ್ನು ಬೆಳಗ್ಗೆದ್ದ ತಕ್ಷಣ ಪ್ರಥಮ ಆಹಾರವಾಗಿ ಕುಡಿಯಬೇಕು. ಉಳಿದರ್ಧ ಪ್ರಮಾಣವನ್ನು ಮದ್ಯಾಹ್ನದ ಊಟಕ್ಕೂ ಕೊಂಚ ಹೊತ್ತಿನ ಮುನ್ನ ಸೇವಿಸಬೇಕು.

Most Read: ಮಂಗನ ಕಾಯಿಲೆ ಎಂದರೇನು? ಈ ಕಾಯಿಲೆಯ ಲಕ್ಷಣಗಳೇನು?

ನಾಲ್ಕನೆಯ ದಿನ

ನಾಲ್ಕನೆಯ ದಿನ

ಇಂದು ನಾಲ್ಕು ಲೋಟ ನೀರಿಗೆ ನಾಲ್ಕು ಲಿಂಬೆಗಳ ರಸವನ್ನು ಬೆರೆಸಿ ಒಂದು ಚಿಕ್ಕ ಚಮಚ ಜೇನನ್ನು ಬೆರೆಸಿ ಈ ನೀರನ್ನು ಮೂರು ಭಾಗವಾಗಿ ವಿಂಗಡಿಸಿ ದಿನಕ್ಕೆ ಮೂರು ಬಾರಿ ಸೇವಿಸಬೇಕು. ಮೊದಲನೆಯದ್ದು ಬೆಳಗ್ಗಿನ ಪ್ರಥಮ ಆಹಾರವಾಗಿ, ಎರಡನೆಯದ್ದು ಮಧ್ಯಾಹ್ನದ ಊಟಕ್ಕೂ ಮುನ್ನ ಹಾಗೂ ಮೂರನೆಯದು ರಾತ್ರಿ ಮಲಗುವ ಮುನ್ನ.

ಐದನೆಯ ದಿನ

ಐದನೆಯ ದಿನ

ಇಂದು ಐದು ಲೋಟ ನೀರಿಗೆ ಐದು ಲಿಂಬೆಗಳನ್ನು ಹಾಕಿ ಕೊಂಚ ಜೇನು ಬೆರೆಸಿ. ಇದನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿ ಹಿಂದಿನಂತೆಯೇ ದಿನಕ್ಕೆ ಮೂರು ಬಾರಿ ಸೇವಿಸಿ. (ಆದರೆ ನಿನ್ನೆಗಿಂತಲೂ ಇಂದಿನ ಪ್ರಮಾಣ ಹೆಚ್ಚು)

ಆರನೆಯ ದಿನ

ಆರನೆಯ ದಿನ

ಇಂದು ಆರು ಲೋಟ ನೀರಿಗೆ ಆರು ಲಿಂಬೆಗಳನ್ನು ಬೆರೆಸಿ ಕೊಂಚ ಜೇನು ಬೆರೆಸಿ. ನಿನ್ನೆಯಂತೆಯೇ ದಿನಕ್ಕೆ ಮೂರು ಬಾರಿ, ಆದರೆ ಕೊಂಚ ಹೆಚ್ಚು ಪ್ರಮಾಣದಲ್ಲಿ ಸೇವಿಸಿ.

ಏಳನೆಯ ದಿನ

ಏಳನೆಯ ದಿನ

ಇಂದು ಹತ್ತು ಕಪ್ ನೀರಿಗೆ ಮೂರು ಲಿಂಬೆರಸವನ್ನು ಬೆರೆಸಿ. ಈ ನೀರನ್ನು ದಿನಕ್ಕೆ ಮೂರು ಬಾರಿ ಊಟಕ್ಕೂ ಮುನ್ನ ಸೇವಿಸಿ.

ಎಂಟನೆಯ ದಿನ

ಎಂಟನೆಯ ದಿನ

ಇದು ಆರು ಕಪ್ ನೀರಿಗೆ ಆರು ಲಿಂಬೆಹಣ್ಣುಗಳನ್ನು ಬೆರೆಸಿ. ಈ ನೀರನ್ನು ದಿನಕ್ಕೆ ಮೂರು ಬಾರಿ ಊಟಕ್ಕೂ ಮುನ್ನ ಸೇವಿಸಿ.

ಒಂಭತ್ತನೆಯ ದಿನ

ಒಂಭತ್ತನೆಯ ದಿನ

ಇಂದು ಐದು ಕಪ್ ನೀರಿಗೆ ಐದು ಲಿಂಬೆಗಳನ್ನು ಸೇರಿಸಿ. ಈ ನೀರನ್ನು ದಿನಕ್ಕೆ ಮೂರು ಬಾರಿ ಊಟಕ್ಕೂ ಮುನ್ನ ಸೇವಿಸಿ.

ಹತ್ತನೆಯ ದಿನ

ಹತ್ತನೆಯ ದಿನ

ಇಂದು ನಾಲ್ಕು ಕಪ್ ನೀರಿಗೆ ನಾಲ್ಕು ಲಿಂಬೆಗಳನ್ನು ಬೆರೆಸಿ ಕೊಂಚ ಜೇನು ಸೇರಿಸಿ. ಈ ನೀರನ್ನು ದಿನಕ್ಕೆ ಮೂರು ಬಾರಿ ಊಟಕ್ಕೂ ಮುನ್ನ ಸೇವಿಸಿ.

ಹನ್ನೊಂದನೇ ದಿನ

ಹನ್ನೊಂದನೇ ದಿನ

ಇಂದು ಮೂರು ಕಪ್ ನೀರಿಗೆ ಮೂರು ಲಿಂಬೆಗಳನ್ನು ಬೆರೆಸಿ, ಕೊಂಚ ಜೇನು ಸೇರಿಸಿ. ಈ ನೀರನ್ನು ದಿನಕ್ಕೆ ಎರಡು ಬಾರಿ, ಮೊದಲನೆಯದು ಬೆಳಗ್ಗಿನ ಪ್ರಥಮ ಹಾಗೂ ಎರಡನೆಯದು ದಿನದ ಅಂತಿಮ ಆಹಾರವಾಗಿ ಸೇವಿಸಿ.

Most Read: ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ!

ಹನ್ನೆರಡನೇ ದಿನ

ಹನ್ನೆರಡನೇ ದಿನ

ಇಂದು ಎರಡು ಕಪ್ ನೀರಿಗೆ ಎರಡು ಲಿಂಬೆ ಸೇರಿಸಿ ಬೆಳಗ್ಗಿನ ಪ್ರಥಮ ಆಹಾರವನ್ನಾಗಿ ಸೇವಿಸಿ.

ಹದಿಮೂರನೇ ದಿನ

ಹದಿಮೂರನೇ ದಿನ

ಇಂದು ಒಂದು ಕಪ್ ನೀರಿಗೆ ಒಂದು ಲಿಂಬೆ ಸೇರಿಸಿ ಬೆಳಗ್ಗಿನ ಪ್ರಥಮ ಆಹಾರವನ್ನಾಗಿ ಸೇವಿಸಿ.

ಹದಿನಾಲ್ಕನೆಯ ದಿನ

ಹದಿನಾಲ್ಕನೆಯ ದಿನ

ಇಂದು ಹತ್ತು ಕಪ್ ನೀರಿಗೆ ಮೂರು ಲಿಂಬೆಹಣ್ಣುಗಳನ್ನು ಬೆರೆಸಿ ಒಂದು ದೊಡ್ಡ ಚಮಚ ಜೇನನ್ನು ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿಯಿರಿ. ಅಷ್ಟೇ! ತೂಕ ಇಳಿಸಲಿಕ್ಕೆ ಇದಕ್ಕಿಂತ ಸುಲಭವಾದ ವಿಧಾನ ಇನ್ನೊಂದಿರಲಾರದು. ಹದಿನಾಲ್ಕನೆಯ ದಿನದ ಬಳಿಕ ಪ್ರತಿದಿನವೂ ಪ್ರಥಮ ಆಹಾರವಾಗಿ ಒಂದು ಲೋಟ ನೀರಿಗೆ ಒಂದು ಲಿಂಬೆಹಣ್ಣನ್ನು ಬೆರೆಸಿ ಸೇವಿಸುವುದನ್ನು ನಾವು ಸಲಹೆ ಮಾಡುತ್ತೇವೆ. ಈ ಹದಿನಾಲ್ಕು ದಿನಗಳಲ್ಲಿ ನೀವು ಸೇವಿಸಬೇಕಾದ ಆಹಾರಗಳ ಬಗ್ಗೆ ಈ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಿ: ಹಸಿಯಾಗಿ ಸೇವಿಸಬಹುದಾದ ತರಕಾರಿಗಳು, ಹಣ್ಣುಗಳು, ಒಣಫಲಗಳು ಮತ್ತು ಬೀಜಗಳು, ಹುದುಗುಬರಿಸಿದ ಉತ್ಪನ್ನಗಳು (ಉದಾ: ಮೊಸರು), ಸಸ್ಯಜನ್ಯ ಪ್ರೋಟೀನ್, ಸಾವಯವ ವಿಧಾನದಲ್ಲಿ ಬೆಳೆಸಿದ ಪ್ರಾಣಿಗಳ ಮಾಂಸಾಹರ, ಕಪ್ಪು ಚಾಕಲೇಟು/ಹಸಿ ಕೋಕೋ ಉತ್ಪನ್ನಗಳು.

Most Read: ಕಪ್ಪಗಿನ ಕುತ್ತಿಗೆಯ ಸಮಸ್ಯೆಗೆ ಇಲ್ಲಿದೆ ಪವರ್‌ಫುಲ್ ಮನೆಮದ್ದು

ಈ ಆಹಾರಗಳನ್ನು ಆದಷ್ಟೂ ತಗ್ಗಿಸಿ

ಈ ಆಹಾರಗಳನ್ನು ಆದಷ್ಟೂ ತಗ್ಗಿಸಿ

ಸಕ್ಕರೆ, ಸಂಸ್ಕರಿಸಿದ ಲಘು ಆಹಾರಗಳು, ಧಾನ್ಯಗಳು, ಸೋಡಾ, ಸಿದ್ಧ ಆಹಾರಗಳು. ಆದರೆ ಲಿಂಬೆನೀರು ಕುಡಿದ ಮಾತ್ರಕ್ಕೆ ತೂಕ ಪೂರ್ಣವಾಗಿ ಇಳಿಯುವುದಿಲ್ಲ ಎಂಬುದು ನೆನಪಿರಲಿ. ನಿತ್ಯವೂ ಸಾಕಷ್ಟು ವ್ಯಾಯಾಮವೂ ಅಗತ್ಯ. ತೂಕ ಇಳಿಕೆಗೆ ನಿಮ್ಮ ಅಹಾರಕ್ರಮ ಮತ್ತು ಜೀವನಕ್ರಮಗಳು ನೇರವಾಗಿ ಕಾರಣವಾಗಿವೆ. ನಿತ್ಯವೂ ಕನಿಷ್ಟ ಇಪ್ಪತ್ತರಿಂದ ಮೂವತ್ತು ನಿಮಿಷ ವ್ಯಾಯಾಮ ಮಾಡಬೇಕು ಹಾಗೂ ವಾರದಲ್ಲಿ ಕನಿಷ್ಟ ಐದು ದಿನಗಳನ್ನಾದರೂ ಮಾಡಲೇಬೇಕು. ಈ ವ್ಯಾಯಾಮಗಳಲ್ಲಿ ಹೃದಯದ ಬಡಿತವನ್ನು ಹೆಚ್ಚಿಸುವ ಮತ್ತು ಹೆಚ್ಚಿಸದ ಎರಡೂ ಬಗೆಯ ವ್ಯಾಯಾಮಗಳಿರಬೇಕು. ನಿಮಗೆ ಇಷ್ಟವಾಗುವ ವ್ಯಾಯಾಮಗಳನ್ನೇ ಮಾಡಿ. (ಅಲ್ಲೆಲ್ಲೋ ಯಾರೋ ತಮಗೆ ಶವಾಸನ ಇಷ್ಟ ಎಂದು ಹೇಳಿದಂತಾಯಿತು!) ದಿನವಿಡೀ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ಮಗ್ನರಾಗಿರಲು ಯತ್ನಿಸಿ. ನಡಿಗೆ, ನೃತ್ಯ, ಬೆಟ್ಟವೇರುವುದು, ಅಷ್ಟೇ ಏಕೆ, ಮಕ್ಕಳೊಂದಿಗೆ ಅಥವಾ ನಾಯಿಮರಿಯೊಂದಿಗೆ ಆಟವಾಡಿಯೂ ದಿನದ ವ್ಯಾಯಾಮದ ಅಗತ್ಯತೆಯನ್ನು ಪೂರೈಸಿಕೊಳ್ಳಬಹುದು.

English summary

Fourteen Days lemon water challenge to lose Weight

Starting a weight loss journey can be intimidating. It's easy to say, "I'll start tomorrow..." Especially if you've tried and failed in the past, thinking about starting a new weight loss lifestyle where your favorite treats aren't invited can seem daunting at best. That's why we created a 14 Day Lemon
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more