For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಲು ಕೆಲವು ನೈಸರ್ಗಿಕ ಪಾನೀಯಗಳು

By Hemanth
|

ದೇಹದಲ್ಲಿ ಬೊಜ್ಜು ಹೆಚ್ಚಾಗುತ್ತಿದೆ, ಹೊಟ್ಟೆ ದೊಡ್ಡದಾಗುತ್ತಿದೆ, ಇನ್ನೇನು ಪ್ರತಿನಿತ್ಯ ವ್ಯಾಯಾಮ ಮಾಡಿಕೊಂಡು ಆರೋಗ್ಯಕರ ಆಹಾರ ಸೇವನೆ ಮಾಡಬೇಕೆಂದು ಪ್ರತಿಯೊಬ್ಬರು ಆಲೋಚನೆ ಮಾಡಿ, ಮೂರ್ನಾಲ್ಕು ವಾರಗಳ ಕಾಲ ಇದನ್ನು ಪಾಲಿಸಿಕೊಂಡು ಹೋಗುವರು. ಆದರೆ ಮನಸ್ಸು ಕೇಳಬೇಕಲ್ಲ, ಕೆಲವೇ ದಿನಗಳಲ್ಲಿ ತಿನ್ನುವ ಬಯಕೆ ಆರಂಭವಾಗುತ್ತದೆ. ಪಥ್ಯದಿಂದಾಗಿ ನಾಲಗೆಗೆ ಯಾವುದೇ ರುಚಿ ಹಿಡಿಸದಂತೆ ಆಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದವರು ಮತ್ತೆ ಅದೇ ಫಾಸ್ಟ್ ಫುಡ್ ಸೇವನೆ ಮಾಡಲು ಆರಂಭಿಸುವರು. ಸ್ನೇಹಿತರೊಂದಿಗೆ, ವಾರದಲ್ಲಿ ಒಂದೆರಡು ಸಲ, ಹುಟ್ಟುಹಬ್ಬ ಮತ್ತು ಇತರ ಕಾರ್ಯಕ್ರಮಗಳಲ್ಲಿ ಹೀಗೆ ಆಹಾರ ಪಥ್ಯವೆನ್ನುವುದು ನೆನಪೇ ಇರುವುದಿಲ್ಲ.

ಈ ಲೇಖನದಲ್ಲಿ ಪ್ರತಿಯೊಬ್ಬರಿಗೂ ತೂಕ ಕಳೆದುಕೊಳ್ಳು ನೆರವಾಗುವಂತಹ ವಿಚಾರಗಳ ಬಗ್ಗೆ ನಾವು ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ. ತೂಕ ಕಡಿಮೆ ಮಾಡುವಂತಹ ಪಾನೀಯಗಳನ್ನು ಕುಡಿಯುವುದ ಮತ್ತು ಆರೋಗ್ಯಕರ ಆಹಾರ ಸೇವನೆ ಜತೆಗೆ ವಾರದಲ್ಲಿ ನಾಲ್ಕು ಸಲ ಪ್ರತಿನಿತ್ಯ ವ್ಯಾಯಾಮ ಮಾಡುವುದು ಇದರಲ್ಲಿ ಒಳಗೊಂಡಿರುವಂತಹ ಅಂಶಗಳು.

ಈ ಪಾನೀಯಗಳು ಆರೋಗ್ಯಕರ ಮಾತ್ರವಲ್ಲದೆ ಕುಡಿಯಲು ತುಂಬಾ ರುಚಿಕರವಾಗಿರುವುದು. ಮನೆಯಲ್ಲೇ ತಯಾರಿಸಿರುವಂತಹ ಈ ಪಾನೀಯಗಳು ಬಯಕೆಯನ್ನು ದೂರವಿಡುವುದು. ಈ ಲೇಖನದಲ್ಲಿ ನಿಮಗೆ ನಾವು 15 ಪಾನೀಯಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿದುಕೊಂಡು ತೂಕ ಕಡಿಮೆ ಮಾಡಲು ಪ್ರಯತ್ನಿಸಿ.

natural Drinks

1. ಲಿಂಬೆ ಮತ್ತು ಜೇನುತುಪ್ಪ ಜ್ಯೂಸ್

ಲಿಂಬೆ ಮತ್ತು ಜೇನುತುಪ್ಪವನ್ನು ಬಿಸಿ ನೀರಿಗೆ ಹಾಕಿಕೊಂಡು ಬೆಳಗ್ಗೆ ಕುಡಿದರೆ ಅದರಿಂದ ದೇಹವು ನಿರ್ವಿಷವಾಗುವುದು. ಲಿಂಬೆಯಲ್ಲಿ ಇರುವಂತಹ ವಿಟಮಿನ್ ಸಿ ದೇಹದಲ್ಲಿನ ವಿಷ ಹೊರಹಾಕುವುದು ಮತ್ತು ಪ್ರತಿರೋಧಕ ವ್ಯವಸ್ಥೆ ಬಲಪಡಿಸುವುದು ಮತ್ತು ದೇಹದೊಳಗಿನ ಆರೋಗ್ಯ ಕಾಪಾಡುವುದು. ಜೇನುತುಪ್ಪವು ಉರಿಯೂತ ಕಡಿಮೆ ಮಾಡಿಕೊಂಡು ಹೊಟ್ಟೆಯ ಸಮಸ್ಯೆ ನಿವಾರಿಸುವುದು. ಇದರಿಂದ ಲಿಂಬೆ, ಜೇನುತುಪ್ಪವನ್ನು ಬಿಸಿನೀರಿನೊಂದಿಗೆ ಸೇವನೆ ಮಾಡಿದರೆ ಅದು ತೂಕ ಕಳೆದುಕೊಳ್ಳಲು ತುಂಬಾ ಸಹಕಾರಿ.

2. ಅನಾನಸಿನೊಂದಿಗೆ ಸೀಯಾಳ

ಅನಾನಸನ್ನು ಸೀಯಾಳದೊಂದಿಗೆ ಸೇವನೆ ಮಾಡಿದರೆ ಇದು ತುಂಬಾ ಆರೋಗ್ಯಕಾರಿ. ಸೀಯಾಳದ ನೀರು ಬಯಕೆ ಮತ್ತು ಪದೇ ಪದೇ ಹಸಿವಾಗುವುದನ್ನು ತಡೆಯುವುದು. ಇದರಿಂದ ತೂಕ ಕಳೆದುಕೊಳ್ಳಲು ಸಹಕಾರಿ. ಅನಾನಸು ಜೀರ್ಣಕ್ರಿಯೆಗೆ ಒಳ್ಳೆಯದು ಮತ್ತು ಉರಿಯೂತ ಕಡಿಮೆ ಮಾಡುವುದು. ಇದರಿಂದ ಇದೊಂದು ತುಂಬಾ ಆರೋಗ್ಯಕಾರಿ ಪಾನೀಯ.
ಜೀರಿಗೆ ಜತೆಗೆ ಸೀಯಾಳ ಕುಡಿದರೆ ಅದು ಮತ್ತಷ್ಟು ಒಳ್ಳೆಯದು. ಯಾಕೆಂದರೆ ಜೀರಿಗೆಯು ಅಜೀರ್ಣ, ಹೊಟ್ಟೆ ಉಬ್ಬರ, ವಾಕರಿಕೆ ನಿವಾರಿಸುವುದು. ಇದು ಪೋಷಕಾಂಶಗಳ ಹೀರಿಕೊಳ್ಳಲು ನೆರವಾಗುವುದು ಮತ್ತು ದೇಹದಲ್ಲಿರುವ ವಿಷಕಾರಿ ಅಂಶ ಹೊರಹಾಕಲು ಸಹಕಾರಿ.

3. ಟೊಮೆಟೊ ಮತ್ತು ಲಿಂಬೆ ಜ್ಯೂಸ್

ಟೊಮೆಟೊ ಮತ್ತು ಲಿಂಬೆಯಲ್ಲಿ ಸಂಪೂರ್ಣವಾಗಿ ವಿಟಮಿನ್ ಗಳು ಇದೆ. ಟೊಮೆಟೊದಲ್ಲಿ ಕೆಲವೊಂದು ಖಿನಿಜಾಂಶಗಳು ಮತ್ತು ಪೈಥೋನ್ಯೂಟ್ರಿಯಂಟ್ಸ್ ಗಳಿವೆ. ಇದು ಬೊಜ್ಜು ತಡೆಯುವುದು. ವಿಟಮಿನ್ ಸಿ ಆ್ಯಂಟಿಆಕ್ಸಿಡೆಂಟ್ ಆಗಿ ಕೆಲಸ ಮಾಡುವುದು ಮತ್ತು ವಿಷಕಾರಿ ಅಂಶ ಹೊರಹಾಕುವುದು. ಇದರಿಂದ ನಾವು ಆರೋಗ್ಯವಾಗಿದ್ದುಕೊಂಡು ತೂಕ ಕಡಿಮೆ ಮಾಡಬಹುದು.

4. ಪಪ್ಪಾಯಿ ಮತ್ತು ದಾಲ್ಚಿನಿ

ಪಪ್ಪಾಯಿಯು ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೊಟ್ಟೆಯ ಆರೋಗ್ಯ ಸುಧಾರಿಸುವುದು ಎಂದು ನಮಗೆಲ್ಲರಿಗು ತಿಳಿದಿದೆ. ಅದೇ ರೀತಿ ದಾಲ್ಚಿನಿಯಲ್ಲಿ ಹೆಪ್ಪುಗಟ್ಟುವಿಕೆ ವಿರೋಧಿ ಮತ್ತು ಸೂಕ್ಷ್ಮಾಣು ವಿರೋಧಿ ಗುಣಗಳು ಇದ್ದು, ಮೆದುಳಿನ ಕಾರ್ಯಕ್ಕೆ ಸುಧಾರಿಸುವುದು. ಇಷ್ಟು ಮಾತ್ರವಲ್ಲದೆ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುವುದು ಮತ್ತು ತೂಕ ಕಳೆದುಕೊಳ್ಳಲು ಇದು ಸಹಕಾರಿ.

5. ಶುಂಠಿ ಮತ್ತು ಲಿಂಬೆರಸ

ಲಿಂಬೆಯಲ್ಲಿರುವಂತಹ ವಿಟಮಿನ್ ಸಿಯು ಹೊಟ್ಟೆಯ ಆರೋಗ್ಯ ಕಾಪಾಡುವುದು ಮತ್ತು ತೂಕ ಕಳೆದುಕೊಳ್ಳಲು ನೆರವಾಗುವುದು. ಹೊಟ್ಟೆಗೆ ಸಂಬಂಧಿಸಿದಂತಹ ಹಲವಾರು ರೀತಿಯ ಸಮಸ್ಯೆಗಳಾದ ಭೇದಿ, ಗ್ಯಾಸ್ಟ್ರಿಕ್ ನ್ನು ಶುಂಠಿಯು ಕಡಿಮೆ ಮಾಡುವುದು. ಇದೇ ರೀತಿ ದೇಹದಲ್ಲಿರುವ ವಿಷವನ್ನು ಹೊರಹಾಕಿ ಆರೋಗ್ಯ ಕಾಪಾಡುವುದು.

6. ಅಗಸೆ ಬೀಜಗಳು, ಕಡುಚಾಕಲೇಟ್ ಮತ್ತು ಕಾಫಿ

ಇದು ಸಮಸ್ಯೆಯ ಪಾನೀಯವೆಂದು ನಿಮಗನಿಸಬಹುದು. ಆದರೆ ಇದು ಪ್ರತಿಯೊಬ್ಬರಿಗೂ ತುಂಬಾ ಇಷ್ಟವಾಗಿರುವಂತದ್ದಾಗಿದೆ. ಕಾಫಿಯಲ್ಲಿ ಕೆಫಿನ್ ಇದೆ ಮತ್ತು ಕೆಫಿನ್ ಹಾಗೂ ಅಗಸೆ ಬೀಜಗಳು ತೂಕ ಕಳೆದುಕೊಳ್ಳಲು ಸಹಕಾರಿ. ಇನ್ಸುಲಿನ್ ಪ್ರತಿರೋಧಕ ಮತ್ತು ಉರಿಯೂತವನ್ನು ಕಡಿಮೆ ಮಾಡುವ ಅಗಸೆ ಬೀಜವು ತೂಕ ಕಳೆದುಕೊಳ್ಳಲು ನೆರವಾಗುವುದು. ಕಡು ಚಾಕಲೇಟ್ ಜೀರ್ಣಕ್ರಿಯೆ ಮತ್ತು ಕೊಬ್ಬಿನಾಮ್ಲಗಳ ಹೀರುವಿಕೆಯನ್ನು ತಡೆಯುವುದು. ಇದು ತೂಕ ಕಳೆದುಕೊಳ್ಳು ತುಂಬಾ ಸಹಕಾರಿ.

7. ದಾಲ್ಚಿನಿ, ಲಿಂಬೆ ಮತ್ತು ಅನಾನಸು

ಅನಾನಸು ಉರಿಯೂತ ಕಡಿಮೆ ಮಾಡಿ ಜೀರ್ಣಕ್ರಿಯೆಗೆ ನೆರವಾಗುವುದು. ಲಿಂಬೆಯಲ್ಲಿರುವ ವಿಟಮಿನ್ ಸಿ ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು. ದಾಲ್ಚಿನಿಯು ಹಸಿವು ಕಡಿಮೆ ಮಾಡಿಕೊಂಡು ರಕ್ತದಲ್ಲಿನ ಸಕ್ಕರೆ ಮಟ್ಟ ತಗ್ಗಿಸುವುದು. ಇದರಿಂದ ಈ ಪಾನೀಯ ಅದ್ಭುತವನ್ನು ಉಂಟು ಮಾಡಲಿದೆ.

8. ಲಿಂಬೆ ಮತ್ತು ಮೇಪಲ್ ಸೀರಪ್ ಜ್ಯೂಸ್

ಲಿಂಬೆಯ ಆರೋಗ್ಯ ಲಾಭಗಳ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ಇದರಲ್ಲಿ ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಇದು ವಿಷಕಾರಿ ಅಂಶ ಹೊರಹಾಕಿ ಆರೋಗ್ಯ ಕಾಪಾಡುವುದು. ಸಾವಯವವಾಗಿರುವ ಮೇಪಲ್ ಸೀರಪ್ ಯಕೃತ್ ನ ಕಾರ್ಯ ಸುಧಾರಿಸುವುದು ಮತ್ತು ಮಧುಮೇಹ ಪೂರ್ವದಲ್ಲಿ ಉಂಟಾಗುವ ಚಯಾಪಚಯ ಕ್ರಿಯೆ ಸುಧಾರಿಸುವುದು. ಇದರಿಂದ ಆರೋಗ್ಯ ಸುಧಾರಣೆಯಾಗುವುದು.

9. ಹಾಲೊಡಕು ಪ್ರೋಟೀನ್ ಗಳು ಮತ್ತು ಚಿಯಾ ಬೀಜಗಳು

ಚಿಯಾ ಬೀಜಗಳು ಚಯಾಪಚಯಾ ಕ್ರಿಯೆ ಸುಧಾರಣೆ ಮಾಡುವುದು. ಅದೇ ರೀತಿಯ ಹಾಲೊಡಕು ಪ್ರೋಟೀನ್ ಗಳು ಸ್ನಾಯುಗಳ ನಾರಿನಾಂಶ ಮರುಸ್ಥಾಪಿಸುವುದು ಮತ್ತು ಪ್ರತಿರೋಧಕ ಶಕ್ತಿ ಸುಧಾರಿಸುವುದು. ಇದು ತೂಕ ಕಳೆದುಕೊಳ್ಳಲು ಸಹಕಾರಿ.

10. ಸೆಲರಿ ಮತ್ತು ಆ್ಯಪಲ್ ಸೀಡರ್ ವಿನೇಗರ್

ಸೆಲೆರಿಯಲ್ಲಿ ಕ್ಯಾಲರಿ ಅನ್ನುವುದು ಇಲ್ಲ ಮತ್ತು ಇದನ್ನು ದೇಹವು ಜೀರ್ಣಿಸಿಕೊಳ್ಳಲು ಹೆಚ್ಚಿನ ಶಕ್ತಿ ವ್ಯಯಿಸಬೇಕಾಗುತ್ತದೆ. ಇದರಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುವುದು ಮತ್ತು ಜೀರ್ಣಕ್ರಿಯೆ ಸುಧಾರಣೆಯಾಗುವುದು. ಆ್ಯಪಲ್ ಸೀಡರ್ ವಿನೇಗರ್ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡುವುದು ಮತ್ತು ತೂಕ ಕಳೆದುಕೊಳ್ಳಲು ಇದು ಸಹಕಾರಿ.

11. ಮೆಂತ್ಯೆ ಮತ್ತು ಸೌತೆಕಾಯಿ ಪಾನೀಯ

ರಾತ್ರಿ ವೇಳೆ ಮೆಂತ್ಯೆ ಕಾಳುಗಳನ್ನು ನೀರಿನಲ್ಲಿ ನೆನೆಸಿಕೊಂಡು ಬೆಳಗ್ಗೆ ಅದನ್ನು ಸೋಸಿಕೊಳ್ಳಿ. ಎರಡನ್ನು ಜತೆಯಾಗಿ ಸೇರಿಸಿಕೊಂಡು ರುಬ್ಬಿಕೊಳ್ಳಿ. ಸೌತೆಕಾಯಿಯಲ್ಲಿ ಶೇ. 96ರಷ್ಟು ನೀರಿನಾಂಶವಿದೆ ಮತ್ತು ಇದು ದೇಹದಲ್ಲಿ ನೀರಿನಾಂಶವಿರುವಂತೆ ಮಾಡುವುದು. ಇದರಲ್ಲಿ ಹಲವಾರು ರೀತಿಯ ಖನಿಜಾಂಶಗಳು ಮತ್ತು ಆಹಾರದ ನಾರಿನಾಂಶಗಳು ಇವೆ. ಇವೆಲ್ಲವೂ ವಿಷ ಹೊರಹಾಕುವುದು. ಮೆಂತ್ಯೆಯು ಚಯಾಪಚಯ ಕ್ರಿಯೆ ಸುಧಾರಿಸುವುದು. ಇದರಿಂದ ಇದು ತೂಕ ಇಳಿಸಲು ಸಹಕಾರಿ.

12. ಗ್ರೀನ್ ಟೀ ಮತ್ತು ಪುದೀನಾ ಎಲೆಗಳು

ಗ್ರೀನ್ ಟೀಯಲ್ಲಿ ಎಜಿಎಸಿ ಅಂಶವಿದ್ದು. ಇದು ತೂಕ ಕಳೆದುಕೊಳ್ಳಲು ಮತ್ತು ಕೊಬ್ಬನ್ನು ಚಯಾಪಚಯಗೊಳಿಸಲು ನೆರವಾಗುವುದು. ಪುದೀನಾ ಎಲೆಗಳಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗುಗಣಗಳು ಗ್ಯಾಸ್ಟ್ರಿಕ್, ಅಲರ್ಜಿ ಮತ್ತು ಇತರ ಸಮಸ್ಯೆ ನಿವಾರಣೆ ಮಾಡುವುದು. ಇದರಿಂದ ತೂಕ ಕಳೆದುಕೊಳ್ಳಲು ಸಹಕಾರಿ.

13. ಗೋಧಿಹುಲ್ಲು ಮತ್ತು ದ್ರಾಕ್ಷಿ ಜ್ಯೂಸ್

ಕೊಬ್ಬು ಕಡಿಮೆ ಮಾಡಲು ಗೋಧಿ ಹುಲ್ಲು ತುಂಬಾ ಸಹಕಾರಿ. ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಮತ್ತು ವಿಷಕಾರಿ ಅಂಶ ಹೊರಹಾಕುವುದು. ದ್ರಾಕ್ಷಿಯು ಸಕ್ಕರೆ ಮಟ್ಟ ನಿಯಂತ್ರಣದಲ್ಲಿಟ್ಟುಕೊಂಡು ತೂಕ ಕಳೆದುಕೊಳ್ಳಲು ಸಹಕರಿಸುವುದು. ಇದು ಉರಿಯೂತ ಶಮನಕಾರಿ ಮತ್ತು ಸೂಕ್ಷ್ಮಾಣು ವಿರೋಧಿ ಗುಣ ಹೊಂದಿದೆ.

14. ಕೇಲ್ ಮತ್ತು ಎಸಿವಿ ಜ್ಯೂಸ

ಆ್ಯಪಲ್ ಸೀಡರ್ ವಿನೇಗರ್ ತೂಕ ಕಳೆದುಕೊಳ್ಳಲು ಸಹಕಾರಿ ಮತ್ತು ಇದು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡುವುದು. ಕೇಲ್ ನಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಆಹಾರದ ನಾರಿನಾಂಶವು ಸಮೃದ್ಧವಾಗಿದೆ. ಇದು ಸಕ್ಕರೆ ಮಟ್ಟ ನಿಯಂತ್ರಿಸಿ ಬೊಜ್ಜು ಮತ್ತು ಮಧುಮೇಹ ತಡೆಯುವುದು.

15. ದಾಳಿಂಬೆ, ದ್ರಾಕ್ಷಿಹಣ್ಣು ಮತ್ತು ಜೇನುತುಪ್ಪ

ಈ ಮೂರನ್ನು ಮಿಶ್ರಣ ಮಾಡಿಕೊಂಡರೆ ಅದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ, ಉರಿಯೂತ ತಗ್ಗುವುದು ಮತ್ತು ಇನ್ಸುಲಿನ್ ಸೂಕ್ಷ್ಮತೆ ಸುಧಾರಿಸುವುದು. ಇದು ಹೊಟ್ಟೆಯ ಸಮಸ್ಯೆ ನಿವಾರಿಸುವುದು ಮತ್ತು ತೂಕ ಕಳೆದುಕೊಳ್ಳಲು ಸಹಕಾರಿ.

English summary

You Can Lose Weight Naturally With These 15 Drinks!

Now you can lose weight quickly and naturally with the help of these juices: lemon & honey juice, pineapple in coconut water, papaya & cinnamon, ginger & lemon juice, flaxseed, dark chocolate, & coffee, cinnamon, lime & pineapple juice, lemon & maple syrup juice, whey proteins & chia seeds, celery & apple cider vinegar drink, etc.
X
Desktop Bottom Promotion