For Quick Alerts
ALLOW NOTIFICATIONS  
For Daily Alerts

ಯಾವುದೇ ಆರೋಗ್ಯ ಸಮಸ್ಯೆಯಿದ್ದರೆ 8 ಯೋಗಮುದ್ರೆಗಳನ್ನು ಅಭ್ಯಾಸ ಮಾಡಿ

By Sushma Charhra
|

ಯೋಗ ಅನ್ನುವುದು ಕೇವಲ ವ್ಯಾಯಾಮ ಮಾತ್ರವಲ್ಲ ಬದಲಾಗಿ ಇದೊಂದು ಆಧ್ಯಾತ್ಮಿಕ ಅಭ್ಯಾಸವಾಗಿದ್ದು, ನಿಮ್ಮ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುವ ವಿಧಾನವಾಗಿದೆ. ಇದು ಕೇವಲ ನಿಮ್ಮ ದೇಹವನ್ನು ಬಗ್ಗಿಸುವುದು, ತಿರುಚುವುದನ್ನು ಮಾಡಿ ದೇಹಕ್ಕೆ ಬೇರೆಬೇರೆ ಆಕಾರ ಕೊಡುವುದು ಮಾತ್ರವಲ್ಲ, ಇದರಲ್ಲಿ ಕೆಲವು ಮುದ್ರೆಯ ಭಂಗಿಗಳೂ ಕೂಡ ಇದ್ದು ಇವು ಧ್ಯಾನದ ಸಂದರ್ಬದಲ್ಲಿ ಮಾಡಬೇಕಾಗುತ್ತದೆ.ಪ್ರಾಣಾಯಾಮ ಮತ್ತು ಧ್ಯಾನದ ಸಂದರ್ಬದಲ್ಲಿ ತೆಗೆದುಕೊಳ್ಳಬೇಕಾದ ಸನ್ನೆಗಳನ್ನು ಮುದ್ರೆಗಳು ಎಂದು ಕರೆಯಲಾಗುತ್ತೆ.

ಇದು ನೇರವಾಗಿ ಶಕ್ತಿಯನ್ನು ನಮ್ಮ ದೇಹದೊಳಕ್ಕೆ ಪ್ರವೇಶಿಸಲು ನೆರವು ಮಾಡಿ ಕೊಡುತ್ತದೆ. ಯೋಗಿ ತಂತ್ರಗಳನ್ನು ಬಲ್ಲವರು ಈ ಮುದ್ರಾ ಯೋಗದ ತಂತ್ರಗಳು ಮೆದುಳಿನ ವಿವಿಧ ಪ್ರದೇಶಗಳನ್ನು ಉತ್ತೇಜಿಸುತ್ತವೆ ಎಂದು ಹೇಳುತ್ತಾರೆ. ಕೈಗಳ ಯೋಗದ ಮುದ್ರೆಗಳು ಮತ್ತು ಅದರಿಂದ ಆಗುವ ಲಾಭಗಳು : ಮುದ್ರೆಗಳಲ್ಲಿ ಹಲವು ವಿಧದ ಸನ್ನೆಗಳಿದ್ದು, ಒಂದೊಂದು ವಿಭಿನ್ನ ಲಾಭಗಳನ್ನು ನೀಡುತ್ತದೆ., ಪ್ರತಿಯೊಂದನ್ನು ಈ ಕೆಳಗೆ ವಿವರಿಸಲಾಗಿದೆ.,. ದಯವಿಟ್ಟು ಗಮನಿಸಿ..

yoga in kannada

1. ಜ್ಞಾನ ಮುದ್ರೆ

ಇದು ಮೊದಲ ಯೋಗ ಮುದ್ರೆಯ ಸನ್ನೆಯಾಗಿದ್ದು ಜ್ಞಾನ ಮುದ್ರೆ ಎಂದು ಕರೆಯುತ್ತಾರೆ

. ಈ ಮುದ್ರೆಯನ್ನು ಮಾಡುವುದು ಹೇಗೆ?
ಧ್ಯಾನವನ್ನು ಕೈಗೊಳ್ಳುವಾಗ ಈ ಮುದ್ರೆ ಮಾಡುವುದನ್ನು ಅಭ್ಯಾಸ ಮಾಡಿ. ತಾಜಾ ಮನಸ್ಸಿನಲ್ಲಿ, ಮುಂಜಾವಿನಲ್ಲಿ ಈ ಮುದ್ರೆಯನ್ನು ಮಾಡುವುದು ಬಹಳ ಉಪಯೋಗಕಾರಿ. ನಿಮ್ಮ ತೋರುಬೆರಳಿನ ತುದಿಯನ್ನು ಹೆಬ್ಬೆರಳಿನ ತುದಿಯಿಂದ ಮುಟ್ಟಿ. ಉಳಿದ ಮೂರುಬೆರಳುಗಳನ್ನು ನೇರವಾಗಿ ಇಟ್ಟುಕೊಳ್ಳಬೇಕು. ಸ್ವಲ್ಪ ಡೊಂಕಾದರೆ ಯಾವುದೇ ತೊಂದರೆ ಇಲ್ಲ, ಧ್ಯಾನವನ್ನು ಕೈಗೊಳ್ಳುವಾಗ ಸಾಮಾನ್ಯವಾಗಿ ಮಾಡುವ ಯೋಗಮುದ್ರೆ ಇದಾಗಿದೆ. ಇದು ತುಂಬಾ ಲಾಭದಾಯಕವಾಗಿರುವ ಮುದ್ರೆಯಾಗಿದ್ದೂ ಪ್ರತಿಯೊಬ್ಬರೂ ಅಭ್ಯಾಸ ಮಾಡುವುದು ಅವರ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು.

. ಲಾಭಗಳು :
ಈ ಮುದ್ರೆಯ ಹೆಸರೇ ಸೂಚಿಸುವಂತೆ, ಇದನ್ನು ಮಾಡುವುದರಿಂದಾಗಿ ನಿಮ್ಮ ಏಕಾಗ್ರತೆ ಮತ್ತು ಮೆದುಳಿನ ಶಕ್ತಿಯು ಅಧಿಕವಾಗುತ್ತದೆ.
• ನಿಮ್ಮ ಮೆದುಳಿನ ಶಕ್ತಿಯನ್ನು ವರ್ಧಿಸುತ್ತದೆ
• ಇನ್ಸೋಮ್ನೇನಿಯಾ ಅಥವಾ ಮರೆಗುಳಿತನ ಸಮಸ್ಯೆಯನ್ನು ನಿವಾರಿಸುವ ತಾಕತ್ತು ಇದಕ್ಕಿದೆ
ಈ ಮುದ್ರೆಯನ್ನು ಪ್ರತಿದಿನ ಮಾಡುವುದನ್ನು ಅಭ್ಯಾಸ ಮಾಡಿಕೊಂಡರೆ, ನೀವು ನಿಮ್ಮ ಮಾನಸಿಕ ಮತ್ತು ಸೈಕಾಲಾಜಿಕಲ್ ಸಮಸ್ಯೆಗಳಾದ ಸಿಟ್ಟು, ಒತ್ತಡ, ಆತಂಕ,ಮತ್ತು ಖಿನ್ನತೆಯನ್ನು ನಿವಾರಣೆ ಮಾಡಿಕೊಳ್ಳಬಹುದು.

2. ವಾಯು ಮುದ್ರೆ

ಈ ಮುದ್ರೆಯನ್ನು ಮಾಡುವುದು ಹೇಗೆ?
ಈ ಮುದ್ರೆಯನ್ನು ನೀವು ನಿಂತುಕೊಂಡೇ ಬೇಕಿದ್ದರೂ ಮಾಡಬಹುದು, ಕುಳಿದು ಅಥವಾ ಮಲಗಿರುವ ಭಂಗಿಯಲ್ಲೂ ಕೂಡ ಮಾಡಬಹುದು. ಇದನ್ನು ಮಾಡುವುದು ಬಹಳ ಸುಲಭ.ನಿಮ್ಮ ತೋರು ಬೆರಳನ್ನು ಮಡಚಿ. ನೀವು ಹೀಗೆ ಮಡಚಿದಾಗ ಎರಡು ಮೂಳೆಗಳನ್ನು ಬೆರಳಿನಲ್ಲಿ ಗಮನಿಸಬಹುದು.ಇದನ್ನು phalanx ಮೂಳೆಗಳು ಎಂದು ಕರೆಯಲಾಗುತ್ತೆ.. ಯಾವಾಗ ನೀವು ತೋರು ಬೆರಳನ್ನು ಹೀಗೆ ಮಡಚುತ್ತೀರೋ,ನೀವು ಕಾಣುವು ಎರಡನೇ ಮೂಳೆಯನ್ನು ನಿಮ್ಮ ಹೆಬ್ಬೆರಳಿನಿಂದ ಒತ್ತಬೇಕು. ಮೇಲೆ ತೋರಿಸಲಾಗಿರುವ ಚಿತ್ರವನ್ನು ಗಮನಿಸಿ. ಉಳಿದ ಮೂರು ಬೆರಳನ್ನು ಆದಷ್ಟು ಬಿಡಿಸಿಡಿ.ಇಂತಹದ್ದೇ ಸಂದರ್ಬದಲ್ಲಿ ಈ ಮುದ್ರೆಯನ್ನು ಮಾಡಬೇಕು ಎಂಬ ಯಾವುದೇ ನಿಯಮವಿಲ್ಲ, ನಿಮಗೆ ಇಚ್ಛೆ ಇದ್ದಾಗಲೆಲ್ಲ ಮಾಡಬಹುದು. ಸಮಯ ಸಿಕ್ಕಾಗಲೆಲ್ಲ ಮಾಡಬಹುದು. ಅಷ್ಟೇ ಅಲ್ಲ, ಖಾಲಿ ಹೊಟ್ಟೆಯಲ್ಲೇ ಮಾಡಬೇಕು ಎಂದೇನೂ ಇಲ್ಲ. ನೀವು ಹೊಟ್ಟೆ ಭರ್ತಿ ಆಹಾರ ಸೇವಿಸಿದಾಗಲೂ ಕೂಡ ಮಾಡಬಹುದು.

. ಲಾಭಗಳು :
*ವಾಯು ಮುದ್ರೆಯ ಹೆಸರೇ ಸೂಚಿಸುವಂತೆ ಇದು ದೇಹದ ಗಾಳಿಯ ಅಂಶಗಳನ್ನು ಸಮತೋಲನದಲ್ಲಿ ಇಡಲು ನೆರವಾಗುತ್ತದೆ.
*ಇದು ದೇಹದಲ್ಲಿರುವ ಅಥವಾ ಹೊಟ್ಟೆಯಲ್ಲಿನ ಹೆಚ್ಚಿನ ಗಾಳಿಯನ್ನು ಹೊರಹಾಕಲು ನೆರವಾಗುತ್ತದೆ ಮತ್ತು ಆ ಮೂಲಕ ಸಂಧಿವಾತ ಮತ್ತು ಎದೆ ನೋವು ಕಡಿಮೆಯಾಗುತ್ತದೆ.

3. ಅಗ್ನಿ ಮುದ್ರೆ

. ಈ ಮುದ್ರೆಯನ್ನು ಮಾಡುವುದು ಹೇಗೆ?
ನಿಮ್ಮ ಉಂಗುರ ಬೆರಳನ್ನು ಮಡಚಿಕೊಳ್ಳಿ ಮತ್ತು ಅದರ ಎರಡನೇ ಮೂಳೆಯನ್ನು ಹೆಬ್ಬೆರಳಿನ ಸಹಾಯದಿಂದ ಒತ್ತಬೇಕು. ಉಳಿದೆಲ್ಲ ಬೆರಳುಗಳನ್ನು ನೇರವಾಗಿರಿಸಿಕೊಳ್ಳಿ.ಈ ಮುದ್ರೆಯನ್ನು ಕೇವಲ ಕುಳಿತುಕೊಂಡಿರುವಾಗ ಮಾತ್ರ ಅಭ್ಯಾಸ ಮಾಡಬೇಕು ಮತ್ತು ಬೆಳಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿ ಮಾತ್ರ ಮಾಡಬೇಕು ಎಂಬ ನಿಯಮವಿದೆ. ಪ್ರತಿದಿನ 15 ನಿಮಿಷ ಈ ಮುದ್ರೆಯನ್ನು ಮಾಡುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು.

. ಲಾಭಗಳು :
*ಇದು ನಿಮ್ಮ ಒಬೆಸಿಟಿಯನ್ನು ನಿಯಂತ್ರಿಸಿ. ದೇಹದಲ್ಲಿ ಶೇಖರಣೆಗೊಂಡಿರುವ ಹೆಚ್ಚಿನ ಕೊಬ್ಬಿನಾಂಶವನ್ನು ಕರಗಿಸಿ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ. *ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ದೇಹದ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ ಸಹಕಾರಿಯಾಗಿದೆ. ಇದು ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ನೆರವು ನೀಡುತ್ತದೆ ಮತ್ತು ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಂಟ್ರೋಲ್ ಮಾಡಲು ನೆರವಾಗುತ್ತದೆ.

4. ಪೃಥ್ವಿ ಮುದ್ರೆ

ಈ ಮುದ್ರೆಯನ್ನು ಮಾಡುವುದು ಹೇಗೆ?
*ನಿಮ್ಮ ಉಂಗುರ ಬೆರಳಿನ ತುದಿಯನ್ನು ಹೆಬ್ಬೆರಳಿನ ತುದಿಯನ್ನು ಒತ್ತಬೇಕು ಮತ್ತು ಉಳಿದೆಲ್ಲ ಬೆರಳುಗಳನ್ನು ಆದಷ್ಟು ಬಿಡಿಸಬೇಕು. ಈ ಮುದ್ರೆಯನ್ನು ಬೆಳಗಿನ ಹೊತ್ತು ಮಾಡುವುದು ಪ್ರಾಶಸ್ತ್ಯವಾಗಿದೆ.ಆದರೆ ಬೇರೆ ಸಮಯದಲ್ಲೂ ಕೂಡ ಇದನ್ನು ಮಾಡಬಹುದು ಮತ್ತು ಎಷ್ಟು ಹೊತ್ತು ಬೇಕಾದರೂ ಮಾಡಬಹುದು ಎಂದು ಹೇಳಲಾಗುತ್ತದೆ.ಪದ್ಮಾಸನದಲ್ಲಿ ಕುಳಿತುಕೊಳ್ಳಿ ಮತ್ತು ಮೊಣಕೈಯನ್ನು ಮೊಣಕಾಲುಗಳ ಮೇಲೆ ಮತ್ತು ಅಂಗೈಯನ್ನು ನೇರವಾಗಿ ಇಟ್ಟುಕೊಳ್ಳಿ .
*ನೀವು ಯಾವಾಗ ಒತ್ತಡದಲ್ಲಿ ಇದ್ದೀರಿ ಎಂದು ಭಾವಿಸೋತ್ತೀರೋ ಆಗ ಈ ಮುದ್ರೆಯನ್ನು ಮಾಡುವುದು ಬಹಳ ಒಳ್ಳೆಯದು. ಪದ್ಮಾಸನದಲ್ಲಿ ಈ ಮುದ್ರೆಯನ್ನು ಮಾಡುವುದರಿಂದಾಗಿ ಬಹಳ ಬೇಗನೆ ಫಲಿತಾಂಶವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಇದು ನಿಮ್ಮ ಚರ್ಮದ ಕಾಂತಿ ಹೆಚ್ಚಳ ಮಾಡುವುದಕ್ಕೆ ಒಂದು ಅದ್ಭುತತವಾದ ಮುದ್ರೆಯಾಗಿದೆ.

. ಲಾಭಗಳು :
*ಇದು ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಇದು ತಾಳ್ಮೆ ಮತ್ತು ಸಹಿಷ್ಣುತೆಯನ್ನು ಅಧಿಕಗೊಳಿಸುತ್ತದೆ. ಧ್ಯಾನಸ್ಥರಾಗಿದ್ದಾಗ ನಿಮ್ಮ ಏಕಾಗ್ರತೆಯನ್ನು ಇದು ವೃದ್ಧಿಸುತ್ತದೆ.

5. ವರುಣ ಮುದ್ರೆ

ದೇಹದ ಹೊರಗಿನ ಸೌಂದರ್ಯ ರಕ್ಷಣೆಗೆ ಇದು ಬಹಳ ಪ್ರಮುಖವಾಗಿ ಮಾಡಬೇಕಾಗಿರುವ ಮುದ್ರೆಯಾಗಿದೆ. ಈ ಮುದ್ರೆಯಿಂದ ನಿಮಗೆ ಧನಾತ್ಮಕ ಪರಿಣಾಮಗಳಾಗಲಿದೆ ಮತ್ತು ಎಲ್ಲಾ ರೀತಿಯ ಹೊರಗಿನ ಸಮಸ್ಯೆಗಳಿಂದ ನಿಮ್ಮನ್ನು ದೂರವಿಡಲು ಇದು ನೆರವಿಗೆ ಬರುತ್ತದೆ. ತುಂಬಾ ಪರಿಣಾಮಕಾರಿಯಾದ ಯೋಗ ಆಸನ ಇದಾಗಿದ್ದು, ನಿಮ್ಮ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ಇದು ನೆರವಾಗುತ್ತದೆ. ಹಾಗಾದ್ರೆ ಇದನ್ನು ಪರಿಪಕ್ವತೆಯಿಂದ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಈ ಮುದ್ರೆಯನ್ನು ಮಾಡುವುದು ಹೇಗೆ?
*ನಿಮ್ಮ ಕಿರಿಬೆರಳನ್ನು ನಿಧಾನವಾಗಿ ನಿಮ್ಮ ಹೆಬ್ಬೆರಳಿನ ಸಹಾಯದಿಂದ ಮುಟ್ಟಬೇಕು. ಉಳಿದೆಲ್ಲ ಬೆರಳುಗಳು ನೇರವಾಗಿರಲಿ. ಈ ಮುದ್ರೆಯನ್ನು ಮಾಡಲು ಇಂತಹದ್ದೇ ಸಮಯ ಎಂದೇನೂ ಇಲ್ಲ. ಯಾವುದೇ ಸಮಯದಲ್ಲಾದರೂ, ಯಾವುದೇ ಭಂಗಿಯಲ್ಲಾದರೂ ಮಾಡಬಹುದು,ಆದರೆ ಅಡ್ಡಗಾಲಿನಲ್ಲಿ ಕುಳಿತು ಮಾಡುವುದಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ.

ಲಾಭಗಳು :
*ಹಲವು ರೀತಿಯ ಲಾಭಗಳನ್ನು ಈ ಮುದ್ರೆಯಿಂದ ಪಡೆಯಲು ಸಾಧ್ಯವಿದೆ. ವರುಣ ಮುದ್ರೆಯು ನಿಮ್ಮ ದೇಹದಲ್ಲಿನ ನೀರಿನ ಅಂಶವನ್ನು ಸಮತೋಲನದಲ್ಲಿ ಇಡಲು ನೆರವಾಗುತ್ತದೆ. ಇದು ನಿಮ್ಮ ದೇಹದಲ್ಲಿನ ಫ್ಲೂಯಿಡ್ ಗಳ ಸಂಚಾರವನ್ನು ಅಧಿಕಗೊಳಿಸುತ್ತದೆ ಮತ್ತು ನಿಮ್ಮನ್ನು ಯಾವಾಗಲೂ ಮಾಯಿಶ್ಚರೈಸ್ ಆಗಿರುವಂತೆ ನೋಡಿಕೊಳ್ಳುತ್ತದೆ.
*ಇದು ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಉದಾಹರಣೆಗೆ ಶುಷ್ಕತೆ, ಚರ್ಮದ ಸೋಂಕು ಇತ್ಯಾದಿಗಳ ನಿವಾರಣೆಗೆ ಸಹಕಾರಿಯಾಗಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಮೊಡವೆಗಳು ಗೋಚರಿಸುವುದನ್ನು ಬಹಳ ದೀರ್ಘ ಕಾಲದ ವರೆಗೆ ತಡೆಯುತ್ತದೆ.

6. ಸ್ನಾಯು ಮುದ್ರೆ

. ಈ ಮುದ್ರೆಯನ್ನು ಮಾಡುವುದು ಹೇಗೆ?
ಮಧ್ಯ ಬೆರಳಿನ ಮೊದಲ ಮೂಳೆಯನ್ನು ಹೆಬ್ಬೆರಳಿನ ಸಹಾಯದಿಂದ ಒತ್ತಬೇಕು

ಲಾಭಗಳು :
*ಈ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದಾಗಿ ಏಕಾಗ್ರತೆಯ ಮಟ್ಟವು ಅಧಿಕವಾಗುತ್ತದೆ ಕೇವಲ 5 ರಿಂದ 10 ನಿಮಿಷ ಈ ಮುದ್ರೆಯನ್ನು ಮಾಡಿದರೂ ಸಾಕು ಹಲವು ಲಾಭಗಳನ್ನು ಪಡೆಯಬಹುದು.
*ಈ ಮುದ್ರೆಯು ಯಾವು ಕಿವುಡರಾಗಿರುತ್ತಾರೋ ಅಂತವರಿಗೆ ಮತ್ತು ಮಾನಸಿಕ ಅಸ್ವಸ್ಥತೆ ಎದುರಿಸುತ್ತಿರುವ ವ್ಯಕ್ತಿಗಳಿಗೆ ಬಹಳ ಪ್ರಯೋಜನಕ್ಕೆ ಬರುತ್ತದೆ. ಆದರೆ ಯಾರು ಹುಟ್ಟಿನಿಂದಲೇ ಅಂಗವೈಕಲ್ಯತೆಯಿಂದ ಬಳಲುತ್ತಿರುತ್ತಾರೋ ಅವರು ಇದರ ಪ್ರಯೋಜನ ಪಡೆಯಲು ಸಾಧ್ಯವಿಲ್ಲ.

7. ಸೂರ್ಯ ಮುದ್ರೆ

.ಈ ಮುದ್ರೆಯನ್ನು ಮಾಡುವುದು ಹೇಗೆ?
ಉಂಗುರ ಬೆರಳನ್ನು ಒತ್ತಬೇಕು, ಹೆಬ್ಬೆರಳಿನ ಸಹಾಯದಿಂದ ಒತ್ತಿ. ಹೇಗೆ ಎಂಬುದನ್ನು ಚಿತ್ರದಲ್ಲಿ ಗಮನಿಸಿ ನೋಡಿ.

ಲಾಭಗಳು :
*ಇದು ನಿಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ನಿವಾರಣೆ ಮಾಡಲು ಸಹಾಯಕವಾಗಿರುವ ಮುದ್ರೆಯಾಗಿದೆ. ಅಷ್ಟೇ ಅಲ್ಲ ನೀವು ತೂಕವನ್ನು ಇಳಿಸಿಕೊಳ್ಳಲು ಇಚ್ಛಿಸುತ್ತಿದ್ದೀರಾ? ಹಾಗಾದ್ರೆ ಇದೊಂದು ಆಶ್ಚರ್ಯ ಹುಟ್ಟಿಸುವ ಮುದ್ರೆಯಾಗಿದ್ದು ನೀವು ನಿಮ್ಮ ಕೈಯಿಂದಲೇ ತೂಕ ಕಳೆದುಕೊಳ್ಳಲು ಇದು ನಿಮ್ಮ ನೆರವಿಗೆ ಬರುತ್ತದೆ. ಆತಂಕವನ್ನು ಕಡಿಮೆ ಮಾಡಲು ಈ ಮುದ್ರೆ ಸಹಾಯಕ
ಇದು ನಿಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ

8. ಪ್ರಾಣ ಮುದ್ರೆ

ಇದು ಬಹಳ ಪ್ರಮುಖ ಮುದ್ರೆಯಾಗಿದ್ದು, ಇದು ನಿಮ್ಮ ದೇಹದ ಶಕ್ತಿಯನ್ನು ಸಕ್ರಿಯಗೊಳಿಸಲು ಸಹಾಯಕವಾಗಿದೆ.

. ಈ ಮುದ್ರೆಯನ್ನು ಮಾಡುವುದು ಹೇಗೆ?
*ಈ ಮುದ್ರೆಯನ್ನು ಪದ್ಮಾಸನ ಹಾಕಿ ಮಾಡಬೇಕು. ನಿಮ್ಮ ಉಂಗುರ ಬೆರಳು ಮತ್ತು ಕಿರಿ ಬೆರಳು ಎರಡನ್ನೂ ಬಗ್ಗಿಸಿ ಮತ್ತು ಇವೆರಡು ಬೆರಳಿನ ತುದಿಯನ್ನು ನಿಮ್ಮ ಹೆಬ್ಬೆರಳಿನ ತುದಿಯಿಂದ ಮುಟ್ಟಿ. ನೀವು ಈ ಆಸನವನ್ನು ಇಂತಹದ್ದೇ ಸಮಯ ಎಂದೇನೂ ಇಲ್ಲ.
*ಯಾವಾಗ ಬೇಕಿದ್ದರೂ ಬೆಳಗಿನ ಹೊತ್ತಿನಲ್ಲಿ ನಿಮಗೆ ಸಮಯ ಸಿಕ್ಕಾಗಲೆಲ್ಲ ಮಾಡಬಹುದಾಗಿದೆ.

. ಲಾಭಗಳು :
*ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.
*ಇದು ನಿಮ್ಮ ಕಣ್ಣಿನ ಸಾಮರ್ಥ್ಯವನ್ನು ಹೆಚ್ಚು ಮಾಡುತ್ತದೆ ಮತ್ತು ಯಾವುದೇ ರೀತಿಯ ಕಣ್ಣಿನ ಸಮಸ್ಯೆಗಳಿದ್ದಲ್ಲಿ ಅದನ್ನು ನಿವಾರಣೆ ಮಾಡುವ ತಾಕತ್ತು ಈ ಮುದ್ರೆಗಿದೆ. ಅಷ್ಟೇ ಅಲ್ಲ ಇದು ಆಯಾಸ ಮತ್ತು ದಣಿವನ್ನು ಹೋಗಲಾಡಿಸುತ್ತದೆ.

English summary

Yoga Mudras To Overcome Any Ailments

Yoga is not only an exercise but a form of spiritual practice to improve you physical, mental and spiritual well being. It doesn’t only refer to twisting and curling your body into different shapes and poses, but it also involves some specific mudras posed during meditations. Mudras mean gestures adopted during pranayams and meditations that directs flow of energy into our body. Yogic tantras say that these mudra yoga techniques stimulate different areas of the brain.
X
Desktop Bottom Promotion