For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ತೂಕ ಇಳಿಸುವ ಸುಲಭ ಮಾರ್ಗೋಪಾಯಗಳು

By Sushma Charhra
|

ಬೇಸಿಗೆಯ ಈ ಬಿರು ಬಿಸಿಲನ್ನು ಸಹಿಸುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಭಾರತದಂತ ದೇಶದಲ್ಲಿ ಬೇಸಿಗೆಯ ತಾಪ ಇಲ್ಲಿನ ಜನತೆಯನ್ನು ಹೈರಾಣು ಮಾಡಿ ಬಿಡುತ್ತೆ. ಅದರ ಜೊತೆಜೊತೆಗೆ ಭಾರತೀಯರಿಗೆ ತೂಕ ಇಳಿಸುವುದು ಕೂಡ ಒಂದು ಸವಾಲಾಗಿ ಪರಿಣಮಿಸಿಬಿಡುತ್ತೆ. ಅದೇ ಕಾರಣಕ್ಕೆ ಬೇಸಿಗೆಯಲ್ಲಿ ತೂಕ ಇಳಿಸಬೇಕು ಅಂದರೆ ಏನು ಮಾಡಬೇಕು ಅನ್ನುವ ಸಿಂಪಲ್ ಕೆಲವು ವಿಧಾನಗಳನ್ನು ನಾವಿಲ್ಲಿ ಹೇಳುತ್ತಿದ್ದೇವೆ.

ಆರೋಗ್ಯವನ್ನೂ ಕಾಪಾಡಿಕೊಂಡು ತೂಕ ಇಳಿಸುವುದು ಒಂದು ಸವಾಲಿನ ಕೆಲಸ, ಅದೇ ಕಾರಣಕ್ಕೆ ನಾವಿಲ್ಲಿ ನಿಮಗೆ ಸುಲಭ ಮಾರ್ಗೋಪಾಯವನ್ನು ತಿಳಿಸಿಕೊಡುತ್ತಿದ್ದೇವೆ.

 1. ಸೂಪ್ ಕುಡಿಯಿರಿ

1. ಸೂಪ್ ಕುಡಿಯಿರಿ

ಬಿರು ಬೇಸಿಗೆಯಲ್ಲಿ ಸೂಪ್ ಕುಡಿಯೋದಾ.,. ಅಬ್ಬಬ್ಬಾ ಅದ್ಹೇಗೆ ಸಾದ್ಯ.. ಮೊದಲೇ ಉರಿಯುತ್ತಿರುವ ವಾತಾವರಣ. ಅದರ ಜೊತೆಗೆ ಬಿಸಿಬಿಸಿ ಅಡುಗೆ ಸೇವಿಸೋದಾದ್ರೂ ಹೇಗೆ ಅನ್ನೋದು ನಿಮ್ಮ ಪ್ರಶ್ನೆ ಆಗಿರಬಹುದು. ಆದರೆ ನೆನಪಿಡಿ. ಬೇಸಿಗೆಯಲ್ಲಿ ಸೂಪ್ ಕುಡಿಯುವುದರಿಂದಾಗಿ ನೀವು ಆರೋಗ್ಯ ವಾಗಿರಲು ಸಾಧ್ಯವಿದೆ.

ಮತ್ತು ತೂಕವನ್ನು ಇಳಿಸಿಕೊಳ್ಳಲು ಸಾಧ್ಯವಿದೆ. ತರಕಾರಿಗಳಿಂದ ತಯಾರಿಸಿರುವ ಮತ್ತು ನಾನ್ ವೆಜ್ ಸೂಪ್ ಗಳು ಬಹಳ ಪರಿಣಾಮಕಾರಿ. ಟ್ರೈ ಮಾಡಿ ನೋಡಿ. ತೀರಾ ಬಿಸಿ ಅಲ್ಲದೇ ಇದ್ದರೂ ಹದ ಬೆಚ್ಚಗಿರುವ ಸೂಪ್ ಸೇವನೆ ಟ್ರೈ ಮಾಡಿ ನೋಡಿ.

 2. ಮೆಡಿಟೇರಿಯನ್ ಡಯಟ್ ಟ್ರೈ ಮಾಡಿ

2. ಮೆಡಿಟೇರಿಯನ್ ಡಯಟ್ ಟ್ರೈ ಮಾಡಿ

ಇದೇನಿದು ಅಂತ ಆಶ್ಚರ್ಯ ಆಗುತ್ತಿದೆಯಾ.. ತಾಜಾ ತರಕಾರಿಗಳು, ಆಲಿವ್ ಆಯಿಲ್ ನಿಂದ ತಯಾರಿಸಿರುವ ಆಹಾರ, ಚಿಕನ್ ಮತ್ತು ಮಟನ್ ಸೂಪ್ ಗಳು, ಬ್ಯಾಲೆನ್ಸ್ ಆಗಿರುವ ಮತ್ತು ಕೊಬ್ಬಿನಾಂಶ ರಹಿತ ಆಹಾರಗಳ ಸೇವನೆಯನ್ನು ಮಾಡಿ.

ಒಂದು ತಿಂಗಳ ಮೆಡಿಟೇರಿಯನ್ ಡಯಟ್ ನಿಮ್ಮ ತೂಕದಲ್ಲಿ ಭಾರೀ ವ್ಯತ್ಯಾಸ ತರಲಿದೆ ಅನ್ನುವುದಂತೂ ಸತ್ಯ.

 3. ಅತಿಯಾಗಿ ಹಣ್ಣಿನ ಜ್ಯೂಸ್ ಕುಡಿಯುವುದು ನಿಲ್ಲಿಸಿ

3. ಅತಿಯಾಗಿ ಹಣ್ಣಿನ ಜ್ಯೂಸ್ ಕುಡಿಯುವುದು ನಿಲ್ಲಿಸಿ

ಬೇಸಿಗೆಯಲ್ಲಿ ತಣ್ಣಗಿರುವ ಫ್ರೂಟ್ ಜ್ಯೂಸ್ ಕುಡಿಯೋಣ ಅನ್ನಿಸೋದು ಸರ್ವೇಸಾಮಾನ್ಯ. ಅದೇ ಕಾರಣಕ್ಕೆ ಹೆಚ್ಚಿನವರು ಪದೇ ಪದೇ ಹಣ್ಣಿನ ಜ್ಯೂಸ್ ಸೇವಿಸುತ್ತಲೇ ಇರುತ್ತಾರೆ.

ಅದರೆ ಅದರಲ್ಲಿ ಸಕ್ಕರೆ ಅಂಶ ಅಧಿಕವಾಗಿದ್ದು ಅದು ನಿಮ್ಮ ದೇಹದಲ್ಲಿ ಹೆಚ್ಚಿನ ಕೆಟ್ಟ ಪರಿಣಾಮಗಳಿಗೆ ಕಾರಣವಾಗುತ್ತೆ. ಅದರ ಬದಲಿಗೆ ಹಣ್ಣಿನ ಸೇವನೆ ಮತ್ತು ಎಳನೀರು ಸೇವನೆ ದೇಹಕ್ಕೆ ಬಹಳ ಒಳ್ಳೆಯದು.

 4. ಅಲ್ಕೋಹಾಲ್ ಸೇವನೆ ನಿಲ್ಲಿಸಿ

4. ಅಲ್ಕೋಹಾಲ್ ಸೇವನೆ ನಿಲ್ಲಿಸಿ

ಅಲ್ಕೋಹಾಲ್ ಸೇವನೆ ಯಾವಾಗಲೂ ಕೂಡ ಕೆಟ್ಟದ್ದೆ. ಅದಕ್ಕೆ ಕಾರಣದ ಪರಿಮಿತಿ ಇಲ್ಲ. ಚಿಲ್ಡ್ ಬಿಯರ್ ಮತ್ತು ಕಾಕ್ ಟೈಲ್ ಸೇವಿಸುವುದು ಕೆಲವರ ಅಭ್ಯಾಸವಾಗಿರುತ್ತೆ. ಅದು ನಿಮ್ಮ ದೇಹಕ್ಕೆ ಅಹಿತವಾದದ್ದು ನಿಮ್ಮ ತೂಕದ ಮೇಲೆ ವ್ಯತ್ಯಯ ಮಾಡುತ್ತೆ. ಹಾಗಾಗಿ ಅದಷ್ಟು ಇದರಿಂದ ದೂರವಿರುವುದೇ ಲೇಸು

 5. ನಿಮ್ಮನ್ನ ನೀವು ಕಂಟ್ರೋಲ್ ಮಾಡಿಕೊಳ್ಳಿ

5. ನಿಮ್ಮನ್ನ ನೀವು ಕಂಟ್ರೋಲ್ ಮಾಡಿಕೊಳ್ಳಿ

ಅತಿಯಾದ ಟೆಂಪರೇಚರ್ ಇರುವುದರಿಂದ ಬೇಸಿಗೆಯಲ್ಲಿ ಬೆವರುವಿಕೆ ಅಧಿಕವಾಗಿರುತ್ತೆ. ಹಾಗಾಗಿ ಹಸಿವಾಗುವುದು ಕೂಡ ಅಧಿಕ. ಆಹಾರ ಸೇವಿಸುತ್ತಲೇ ಇರಬೇಕು ಅನ್ನುವ ಫೀಲಿಂಗ್ ಕೆಲವರಿಗೆ ಆಗಬಹುದು.

ಹಾಗಾಗಿ ಪದೇ ಪದೇ ಆಹಾರ ಸೇವಿಸಿ ಅನಗತ್ಯ ಕೊಬ್ಬು ದೇಹಕ್ಕೆ ಸೇರಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಬೇಕು ಅಂದರೆ ನಿಮ್ಮನ್ನು ನೀವು ಕಂಟ್ರೋಲ್ ಮಾಡಿಕೊಳ್ಳಬೇಕು.

6. ಬೇಸಿಗೆಯಲ್ಲಿ ಧರಿಸಬಹುದಾದ ಬಟ್ಟೆಯನ್ನೇ ಧರಿಸಿ

6. ಬೇಸಿಗೆಯಲ್ಲಿ ಧರಿಸಬಹುದಾದ ಬಟ್ಟೆಯನ್ನೇ ಧರಿಸಿ

ಬೇಸಿಗೆಯಲ್ಲಿ ಎಲ್ಲಾ ಬಟ್ಟೆಗಳೂ ಸೂಕ್ತವಲ್ಲ. ಬೇಸಿಗೆಗೆ ಒಗ್ಗುವ ಬಟ್ಟೆಗಳನ್ನೇ ಧರಿಸುವುದರಿಂದಾಗಿ ನಿಮಗೆ ನೀವು ಹೆಚ್ಚು ಕಂಫರ್ಟ್ ಫೀಲ್ ನೀಡಲು ಸಾಧ್ಯವಾಗುತ್ತೆ. ಮತ್ತು ಅದರಿಂದ ನೀವು ಮೋಟಿವೇಟ್ ಆಗಿ ಸಾಕಷ್ಟು ಹೆಲ್ತಿಯಾಗಿರಲು ಸಾಧ್ಯವಾಗುತ್ತೆ.

 7. ವ್ಯಾಯಾಮ ಮಾಡುವುದನ್ನು ತಪ್ಪಿಸಬೇಡಿ

7. ವ್ಯಾಯಾಮ ಮಾಡುವುದನ್ನು ತಪ್ಪಿಸಬೇಡಿ

ಯಾವ ಕಾಲವೇ ಆಗಿರಲಿ ದೇಹಕ್ಕೆ ವ್ಯಾಯಾಮ ಅಗತ್ಯವಿರುತ್ತೆ. ಫಿಟ್ ನೆಸ್ ನ ಮೊದಲ ಸೂತ್ರವೇ ವ್ಯಾಯಾಮ. ಯಾರು ಸರಿಯಾಗಿ ದೇಹವನ್ನು ದಂಡಿಸುವುದಿಲ್ಲವೋ ಅವರು ಖಂಡಿತ ಆರೋಗ್ಯವಾಗಿರಲು ಸಾಧ್ಯವಿಲ್ಲ. ವ್ಯಾಯಾಮಕ್ಕೆ ಸಮಯ ನೀಡಿದರೆ ಖಂಡಿತ ನೀವು ಆರೋಗ್ಯವಾಗಿರಲು ಸಾಧ್ಯ.

 8. ಸಲಾಡ್ ಸೇವನೆ ಮಾಡಿ

8. ಸಲಾಡ್ ಸೇವನೆ ಮಾಡಿ

ಆಹಾರ ಸೇವಿಸುವಾಗ ಬಹಳ ಜಾಗರೂಕತೆ ಮುಖ್ಯ. ಫ್ರೆಶ್ ಸಲಾಡ್ ಸೇವಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು, ಫ್ರೆಶ್ ಫ್ರೂಟ್ ಮತ್ತು ತರಕಾರಿಗಳು ದೇಹದ ಮೆಟಾಬಾಲಿಕ್ ರೇಟನ್ನು ಹೆಚ್ಚಿಸಿ ನೀವು ಹೆಚ್ಟು ಆರೋಗ್ಯವಾಗಿರುವಂತೆ ಮಾಡುತ್ತೆ ಮತ್ತು ದೇಹದ ತೂಕ ಕಡಿಮೆಗೊಳಿಸಿಕೊಳ್ಳಲು ಸಹಕಾರಿಯಾಗಿರುತ್ತೆ.

Read more about: summer body summer weight loss
English summary

ಬೇಸಿಗೆಯಲ್ಲಿ ತೂಕ ಇಳಿಸುವ ಸುಲಭ ಮಾರ್ಗೋಪಾಯಗಳು

Summer time makes most people want to wear clothes which are shorter and lighter. However, some people could feel self-conscious to wear certain summer clothes, due to the presence of excess fat in their body. These are the fast weight loss tips for summer which include having chicken soup, going on a meditterean diet, avoiding fruit juices, etc.
Story first published: Thursday, April 19, 2018, 16:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more