For Quick Alerts
ALLOW NOTIFICATIONS  
For Daily Alerts

ಪ್ರಕೃತಿಯ ಮಡಿಲಿನಲ್ಲಿ ಧ್ಯಾನ ಮಾಡುವುದರಿಂದಾಗುವ ಲಾಭಗಳೇನು?

By Sushma Charhra
|

ವಾತಾವರಣವು ಮೋಡ ಕವಿದಂತಿದ್ದರೆ ನೀವು ಏನನ್ನು ಮಾಡಲು ಇಚ್ಛಿಸುತ್ತೀರಿ. ಹೊರಗಿನ ವಾತಾವರಣದಲ್ಲಿ ಸಮಯ ಕಳೆಯಲು ಇಚ್ಛಿಸುತ್ತೀರಿ ಅಲ್ವಾ? ಹಾಗೆಯೇ ವಾತಾವರಣದ ಮಡಿಲಲ್ಲಿ ದೂರ ತಿರುಗಾಡುತ್ತಿದ್ದರೆ ನಿಮ್ಮ ಮನಸ್ಸು ಉಲ್ಲಸಿತಗೊಳ್ಳುತ್ತೆ ಅಲ್ವಾ? ಅದು ಪ್ರಕೃತಿಯ ತಾಕತ್ತು. ಹೌದು, ಅದೆಷ್ಟೋ ಶತಮಾನಗಳಿಂದಲೂ ಧ್ಯಾನ ಮಾಡುವುದು,

ಪ್ರಕೃತಿಯ ಮಡಿಲಿನಲ್ಲಿ ತಪಸ್ಸು ಮಾಡುವುದರಿಂದಾಗಿ ಅದ್ಭುತ ಶಕ್ತಿಯನ್ನು ಸಿದ್ಧಿಸಿಕೊಳ್ಳಬಹುದು ಎಂಬುದು ಸಾಬೀತಾಗಿರುವ ವಿಷಯವೇ ಆಗಿದೆ. ಅದೇ ಕಾರಣಕ್ಕೆ ಹಿಂದಿನಿಂದಲೂ ಧ್ಯಾನ ಕೇಂದ್ರಗಳು ಮತ್ತು ಧಾರ್ಮಿಕ ಕೇಂದ್ರಗಳು ಕಾಡುಗಳ ಮಧ್ಯದಲ್ಲೇ ಇರುತ್ತಿದ್ದವು.. ಕಾಡುಗಳಲ್ಲಿ, ದಟ್ಟ ಕಾನನದಲ್ಲಿ ಧ್ಯಾನ ಮಾಡುವುದರಿಂದಾಗಿ ಆರೋಗ್ಯ ಲಾಭಗಳಿವೆ ಎಂಬುದು ಹಿಂದಿನಿಂದಲೂ ತಿಳಿದಿರುವ ವಿಷಯವೇ ಆಗಿದೆ.

Meditating

ಹೊರಗಡೆ ಧ್ಯಾನ ಮಾಡುವುದು ಹೇಗೆ?

* ಯಾವಾಗ ನೀವು ಪ್ರಕೃತಿಯ ನಡುವೆ ಧ್ಯಾನ ಮಾಡುತ್ತೀರೋ, ನೈಸರ್ಗಿಕ ಜಗತ್ತನ್ನು ನೀವು ಗ್ರಹಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತೀರಿ. ನಿಮ್ಮ ನಿತ್ಯದ ಅಭ್ಯಾಸದಿಂದ ಒಂದು ಸಣ್ಣ ಬದಲಾವಣೆಯು ನಿಸರ್ಗದಲ್ಲಿ ಧ್ಯಾನ ಮಾಡುವುದರಿಂದ ಸಿಗುತ್ತದೆ. ನಿಸರ್ಗದಲ್ಲಿ ಧ್ಯಾನ ಮಾಡುವುದರಿಂದಾಗಿ ತಲೆ, ದೇಹ ಮತ್ತು ಮನಸ್ಸು ರಿಫ್ರೆಶ್ ಆಗುತ್ತದೆ.,
* ಅಧ್ಯಯನದ ಪ್ರಕಾರ, ಹುಲ್ಲಿನ ಮೇಲೆ ನಡೆಯುವುದರಿಂದಾಗಿ ನಿಮ್ಮ ಆತಂಕವು ಶೇಕಡಾ 62 ರಷ್ಟು ಕಡಿಮೆಯಾಗುತ್ತದೆಯಂತೆ. ನಿಮ್ಮ ಶೂಗಳನ್ನು ತೆಗೆಯಿರಿ ಮತ್ತು ಮೃದುವಾದ ಹುಲ್ಲಿನ ಮೇಲೆ ನಡೆದಾಡಿ. ಇದರಿಂದ ಖಂಡಿತವಾಗಿಯೂ ನೀವು ಅಧ್ಬುತವಾಗಿ ಖುಷಿಗೊಳ್ಳುತ್ತೀರಿ.
* ಪ್ರಕೃತಿಯು ನಿಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ. ನಿಮ್ಮ ಮನಸ್ಸು ಕಲಬೆರಿಕೆಯಾಗಿದ್ದರೆ, ಖಂಡಿತ ನೀವು ರಿಫ್ರೆಶ್ ಆಗುತ್ತೀರಿ ಮತ್ತು ಯಾವುದೇ ನೀರಸ ಭಾವನೆ ನಿಮ್ಮಲ್ಲಿದ್ದರೂ ಕೂಡ ಪ್ರಕೃತಿಯಲ್ಲಿ ಧ್ಯಾನ ಮಾಡುವುದರಿಂದಾಗಿ ನೀವು ಅದರಿಂದ ಹೊರಬರುತ್ತೀರಿ. ನಿಮ್ಮನ್ನು ರೀಬೂಟ್ ಮಾಡಲು ಇದು ಸಹಕಾರಿಯಾಗಿರುತ್ತದೆ ಮತ್ತು ಧ್ಯಾನವು ನಿಮ್ಮ ಮನಸ್ಸನ್ನು ಉಲ್ಲಸಿತಗೊಳಿಸಿ ಹೊಸ ಆಲೋಚನೆಗಳಿಗೆ ನಿಮ್ಮನ್ನು ನೀವು ತೆರೆದುಕೊಳ್ಳುವಂತೆ ಮಾಡುತ್ತದೆ.
*ಒಂದು ವೇಳೆ ನಿಮ್ಮ ತಲೆಯಲ್ಲಿ ಅನಗತ್ಯವಾದ ಆಲೋಚನೆಗಳಿದ್ದಲ್ಲಿ, ನೀವು ಪ್ರಕೃತಿಯ ಶಬ್ಧಗಳನ್ನು ಆಲಿಸಿ, ಗಾಳಿಯ ಶಬ್ದ, ಪಕ್ಷಿಗಳ ಚಿಲಿಪಿಲಿ ಮತ್ತು ಕಪ್ಪೆಗಳ ಶಬ್ದ ಕೂಡ ನಿಮಗೆ ಹಿತವನ್ನೇ ನೀಡುತ್ತದೆ.
*ನೀವು ಖಾಲಿ ಪಾದಗಳಲ್ಲಿ ನೆಲದಲ್ಲಿ ಕುಳಿತುಕೊಳ್ಳುವುದರಿಂದಾಗಿ, ಭೂಮಿಯ ಜೊತೆ ಸಂಪರ್ಕಕ್ಕೆ ಒಳಗಾಗುತ್ತೀರಿ ಮತ್ತು ನಿಮಗೆ ಉತ್ತಮ ಶಕ್ತಿ ದೊರಕುತ್ತದೆ.
* ಧ್ಯಾನ ಮಾಡುವುದರಿಂದಾಗುವ ಮತ್ತೊಂದು ಲಾಭವೆಂದರೆ, ನಿಮಲ್ಲೊಂದು ಮಾಂತ್ರಿಕ ಭಾವನೆಯ ಪ್ರವೇಶವಾಗುತ್ತದೆ. ಅದು ನಿಜಕ್ಕೂ ನಿಮ್ಮನ್ನು ಉಲ್ಲಸಿತರನ್ನಾಗಿಸುತ್ತದೆ.

ಪ್ರಕೃತಿಯ ಮಧ್ಯದ ಧ್ಯಾನವು ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ ಯಾಕೆ?

ಪ್ರಕೃತಿಯ ಮಡಿಲಿನಲ್ಲಿ ನೀವು ಧ್ಯಾನ ಕೈಗೊಂಡರೆ, ನೀವು ಪ್ರಕೃತಿಯ ಸಹಜತೆಗಳಿಗೆ ಮೈಯೊಡ್ಡುತ್ತೀರಿ ಅರ್ಥಾತ್ ಗಾಳಿಯ ಶಬ್ಧ, ಮರಗಿಡಗಳ ಅಲುಗಾಡಿಯ ಶಬ್ದ, ನಿಮ್ಮ ಮುಖದ ಮೇಲೆ ಬೀಳುವ ಸೂರ್ಯನ ಕಿರಣಗಳು, ಭೂಮಿಯ ಮಣ್ಣಿನ ಗುಣಗಳ ಸ್ಪರ್ಷ ಇವೆಲ್ಲವೂ ಕೂಡ ನಿಮ್ಮಲ್ಲಿ ಧನಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ನಿಮ್ಮ ಮನಸ್ಸಿನ ಮೇಲೆ ಪ್ರವಹಿಸಿ ನಿಮ್ಮನ್ನು ಉಲ್ಲಾಸಿತರನ್ನಾಗಿ ಮಾಡಿ ನಿಮ್ಮ ನೋವನ್ನು ಗುಣಪಡಿಸುವಲ್ಲಿ ಇವುಗಳ ಪಾತ್ರ ಬಹಳ ಪ್ರಮುಖವಾದದ್ದು.

ನಗರದ ಗಾರ್ಡನ್ ಗಳಲ್ಲಿ, ಪಾರ್ಕ್ ಗಳಲ್ಲಿ ಧ್ಯಾನ ಕೈಗೊಳ್ಳುವುದರಿಂದಾಗಿ ಧ್ಯಾನಶೀಲ ಜಾಗೃತಿಯನ್ನು ಹೆಚ್ಚು ಮಾಡುತ್ತದೆ ಮತ್ತು ಆಶ್ಚರ್ಯವನ್ನು ಹೆಚ್ಚು ಗೊಳಿಸಲೂ ಬಹುದು. ಒಟ್ಟಾರೆ ಧ್ಯಾನಾವಸ್ಥೆಗೆ ನೀವು ಮನೆಯ ಒಳಗಿನ ವಾತಾವರಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವುದಕ್ಕಿಂತ ಪ್ರಕೃತಿಯ ಮಡಿಲಿಗೆ ನಿಮ್ಮನ್ನು ಒಡ್ಡಿಕೊಳ್ಳುವುದು ಬಹಳ ಒಳ್ಳೆಯದು. ನಿಮ್ಮ ಮನೆಯಲ್ಲೇ ಸಣ್ಣ ಗಾರ್ಡನ್ ಇದ್ದರೆ ಅದು ಅನುಕೂಲವಾದೀತು. ಖಂಡಿತವಾಗಿಯೂ ಅದು ನಿಮ್ಮ ಮುಖದಲ್ಲಿ ನಗುವನ್ನು ತರಿಸುತ್ತದೆ. ನೋವನ್ನು ನಿವಾರಿಸಿಕೊಳ್ಳುವುದಕ್ಕೆ ನಿಮ್ಮನ್ನು ನೀವು ಧ್ಯಾನಾವಸ್ಥೆಗೆ ತೆರೆದುಕೊಳ್ಳಬೇಕಿದೆ ಮತ್ತು ಇದರಿಂದಾಗಿ ನಿಮ್ಮ ಜೀವನದಲ್ಲಿ ಖಂಡಿತವಾಗಿಯೂ ಮಹತ್ವದ ಬದಲಾವಣೆಗಳಾಗಲಿದೆ. ಹಾಗಾದ್ರೆ ಧ್ಯಾನದಿಂದ ಯಾವೆಲ್ಲ ಲಾಭಗಳಿವೆ ಇವೆ ಎಂಬುದರ ಇನ್ನಷ್ಟು ವಿವರಗಳನ್ನು ತಿಳಿಯೋಣ ಬನ್ನಿ ..

1.ಖಿನ್ನತೆ ಮತ್ತು ಆತಂಕವನ್ನು ಕಡಿಮೆ ಮಾಡಲು ನೆರವಾಗುತ್ತೆ

ಹಲವಾರು ಅಧ್ಯಯನಗಳು ತಿಳಿಸಿರುವಂತೆ, ಧ್ಯಾನವು ನಿಮ್ಮ ಖಿನ್ನತೆ ಮತ್ತು ಆತಂಕವನ್ನು ಕಡಿಮೆ ಮಾಡುವಲ್ಲಿ ಬಹಳ ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತದೆ. ಪ್ರತಿದಿನ ಧ್ಯಾನ ಮಾಡುವುದರಿಂದಾಗಿ, ಋಣಾತ್ಮಕ ಆಲೋಚನೆಗಳು ಕಡಿಮೆಯಾಗಿ, ದಿನದಿಂದ ದಿನಕ್ಕೆ ನೀವು ಖಿನ್ನತೆಗೊಳಗಾದ ನಿಮ್ಮ ಮೂಡ್ ರಿಫ್ರೆಶ್ ಆಗುತ್ತದೆ ಮತ್ತು ಹೊಸದಾದ ಆಲೋಚನೆಗಳು ಉತ್ತಮವಾದ ಯೋಚನೆಗಳು ನಿಮ್ಮನ್ನು ಆವರಿಸಲು ಸಹಕಾರಿಯಾಗಿದೆ.

2. ಇದು ಮೆದುಳಿನಲ್ಲಿ ಏಕಾಗ್ರತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ

ಮನುಷ್ಯನ ಎಲ್ಲಾ ಸೃಜನಾತ್ಮಕ ಮತ್ತು ಕ್ರಾಂತಿಕಾರಿ ಆಲೋಚನೆಗಳಿಗೆ ಆತನ ಮೆದುಳಿನಲ್ಲಿ ನಡೆಯುವ ಕೆಲವು ಕ್ರಿಯೆಯೇ ಕಾರಣ., ಅಧ್ಯಯನಗಳು ಹೇಳುವಂತೆ, ಧ್ಯಾನವು ಮೆದುಳಿನಲ್ಲಿನ ಏಕಾಗ್ರತೆಯನ್ನು ಹೆಚ್ಚಿಸಲು ಬಹಳವಾಗಿ ನೆರವು ನೀಡುತ್ತದೆ.

3. ನೋವಿನ ವಿರುದ್ಧ ಹೋರಾಡುವ ಸಾಮರ್ಥ್ಯವನ್ನ ಬೆಳೆಸುತ್ತೆ

ಧ್ಯಾನವು ನೋವಿನ ವಿರುದ್ಧ ಸೆಣಸಾಡುವ ಸಾಮರ್ಥ್ಯವನ್ನು ವೃದ್ಧಿಸುತ್ತದೆ.ಯಾವುದೇ ರೀತಿಯ ದೈಹಿಕ ಇಲ್ಲವೇ ಮಾನಸಿಕ ನೋವುಗಳನ್ನೂ ಕೂಡ ಧ್ಯಾನ ಮಾಡುವ ಮೂಲಕ ನಿವಾರಣೆ ಮಾಡಿಕೊಳ್ಳಬಹುದು ಅಥವಾ ತಡೆಹಿಡಿದುಕೊಳ್ಳಬಹುದು.ಒಂದೇ ಮಟ್ಟದ ನೋವೇ ಆಗಿದ್ದರೂ ಕೂಡ ಅದನ್ನು ಅನುಭವಿಸುವ ಪ್ರಮಾಣ ಧ್ಯಾನ ಮಾಡುವವರಿಗೂ ಮತ್ತು ಧ್ಯಾನ ಮಾಡದೇ ಇರುವವರಿಗೂ ಹೋಲಿಸಿದರೆ ಬಹಳವಾಗಿ ವ್ಯತ್ಯಾಸವಿರುತ್ತದೆ ಮತ್ತು ಧ್ಯಾನ ಮಾಡುವವರು ಅದು ದೊಡ್ಡ ನೋವೇ ಆಗಿದ್ದರೂ ಕೂಡ ಅದನ್ನು ಸಣ್ಣ ನೋವು ಎಂಬಂತೆ ಭಾವಿಸುತ್ತಾರೆ.

4. ಒತ್ತಡದ ಮಟ್ಟವನ್ನು ಕುಗ್ಗಿಸುತ್ತದೆ ಮತ್ತು ಭಯವನ್ನು ಕಡಿಮೆ ಮಾಡುತ್ತದೆ

ಮಾನಸಿಕ ಸಮಸ್ಯೆಗಳಾದ ಆತಂಕ, ಸಾಮಾನ್ಯ ಒತ್ತಡ ಮತ್ತು ಫೋಬಿಯಾಗಳು ಧ್ಯಾನದಲ್ಲಿ ಭಾರೀ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಯಾಕೆಂದರೆ ನೀವು ಧ್ಯಾನವನ್ನು ಕೈಗೊಂಡಾಗ, ಯಾವುದೇ ಅನುಭವವನ್ನು ಯಾವುದೇ ರೀತಿಯಲ್ಲೂ ತೀರ್ಮಾನಿಸದೆ ಪ್ರಸ್ತುತ ಕ್ಷಣವನ್ನು ಆಲೋಚಿಸಲು ಇದು ಸಹಾಯ ಮಾಡುತ್ತದೆ.

5. ನಿಮ್ಮ ದೇಹ ಮತ್ತು ಮನಸ್ಸನ್ನು ಎಚ್ಚರಿಕೆಯಿಂದ ಇರುವಂತೆ ಮಾಡುತ್ತದೆ

ಅಧ್ಯಯನಗಳು ತಿಳಿಸಿರುವಂತೆ, ಧ್ಯಾನದಿಂದಾಗಿ ನಿಮ್ಮ ದೇಹ ಮತ್ತು ಮನಸ್ಸು ಎಚ್ಚರಿಕೆಯಿಂದ ವರ್ತಿಸಲು ಬಹಳವಾಗಿ ನೆರವು ನೀಡುತ್ತದೆ. ಯಾವುದೇ ಸನ್ನಿವೇಶದಲ್ಲೂ ಕೂಡ ಧ್ಯಾನ ಕೈಗೊಳ್ಳುವವರು ಹೆಚ್ಚು ಅಲರ್ಟ್ ಆಗಿ ಇರುತ್ತಾರೆ.

6. ನಿಮ್ಮ ಮೂಡನ್ನು ಹೆಚ್ಚಿಸುತ್ತದೆ ಮತ್ತು ಗಮನ ಕೇಂದ್ರೀಕರಿಸಲು ನೆರವು ನೀಡುತ್ತೆ

ಅಧ್ಯಯನಗಳಿಂದ ತಿಳಿದು ಬಂದಿರುವ ವಿಚಾರವೇನೆಂದರೆ, ಕಡಿಮೆ ಮೂಡ್ ನಲ್ಲಿ ಇರುವವರು ಅಥವಾ ಜೀವನದ ಕ್ಷಣಗಳಿಂದ ಯಾರು ಕಡಿಮೆ ತೃಪ್ತಿ ಹೊಂದಿರುತ್ತಾರೋ ಅವರು ಧ್ಯಾನ ಮಾಡಿದ ನಂತರ ಬಹಳವಾಗಿ ಉತ್ತಮ ಅನುಭವ ಪಡೆಯುತ್ತಾರೆ ಮತ್ತು ಮಾನಸಿಕವಾಗಿ ನಾನು ಉತ್ತಮ ಸ್ಥಾನದಲ್ಲೇ ಇದ್ದೇನೆ ಎಂಬ ಭಾವನೆಗೆ ತೆರಳುತ್ತಾರೆ. ತಮ್ಮ ಜೀವನದ ಸಾರ್ಥಕತೆಯ ಬಗ್ಗೆ ತೃಪ್ತರಾಗುತ್ತಾರೆ.

7. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಕಡಿಮೆಯಾಗುವಂತೆ ಮಾಡುತ್ತೆ

ಕಾರ್ಡಿಯೋವಸ್ಕೂಲರ್ ಕಾಯಿಲೆಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಧ್ಯಾನವು ಶೇಕಡಾ 48 ರಷ್ಟು ಪ್ರಮಾಣದ ಸ್ಟ್ರೋಕ್, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಮತ್ತು ಮಯೋಕಾರ್ಡಿಯಲ್ ಫಂಕ್ಷನ್ ಗಳ ಕಾರ್ಯಕ್ಷಮತೆಯ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತದೆ.

8. ರಕ್ತದ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿ

ಅಧ್ಯಯನಗಳಿಂದಾಗಿ ತಿಳಿದಿರುವುದೇನೆಂದರೆ, ನರಗಳು ರಿಲ್ಯಾಕ್ಸ್ ಆಗಲು ಧ್ಯಾನವು ಸಹಕಾರಿಯಾಗಿರುತ್ತದೆ ಮತ್ತು ಹೈಪರ್ ಟೆಕ್ಷನ್ ನ್ನ ಕಂಟ್ರೋಲ್ ಮಾಡುವ ತಾಕತ್ತು ಧ್ಯಾನಕ್ಕಿದೆ. 3 ತಿಂಗಳು ಧ್ಯಾನ ಕೈಗೊಂಡವರಲ್ಲಿ ರಕ್ತದೊತ್ತಡ ಪ್ರಮಾಣವು ಗಣನೀಯವಾಗಿ ಕಡಿಮೆಯಾದ ಬಗ್ಗೆ ಅಧ್ಯಯನಕಾರರು ತಿಳಿಸುತ್ತಾರೆ. ಧ್ಯಾನವು ಕೆಲವು ಆನುವಂಶಿಕ ಮತ್ತು ಆಣ್ವಿಕ ಪರಿಣಾಮಗಳನ್ನು ಉಂಟುಮಾಡುತ್ತದೆ, ಇದರಿಂದಾಗಿ ಕಾಯಿಲೆಯ ಚೇತರಿಕೆಯ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಕಾರಿಯಾಗಿದೆ ಎಂದು ಹೇಳಲಾಗುತ್ತದೆ.

English summary

What Are The Benefits Of Meditating In Nature?

Meditation in nature gives more than just a peaceful mind. It gives a sense of freedom and mind-blowing insights. Read out the more benefits.
X
Desktop Bottom Promotion