For Quick Alerts
ALLOW NOTIFICATIONS  
For Daily Alerts

ನಿಮಗೆ ಗೊತ್ತೇ? ಸೆಕ್ಸ್ ‌ನಿಂದ ಕೂಡ ದೇಹದ ತೂಕ ಇಳಿಸಿಕೊಳ್ಳಬಹುದಂತೆ!!

|

ಹೊದಿಕೆಯಡಿ ನಡೆಯುವ ಅತ್ಯಂತ ಖಾಸಗಿಯಾದ ಲೈಂಗಿಕ ಕ್ರೀಡೆ ಸುಖವನ್ನು ನೀಡುವ ಜೊತೆಗೇ ತೂಕ ಇಳಿಸಲೂ ನೆರವಾಗುತ್ತದೆಯೇ? ಖಂಡಿತವಾಗಿಯೂ ಹೌದು! ಲೈಂಗಿಕವಾಗಿ ಸಕ್ರಿಯರಾಗಿರುವ ಮೂಲಕ ಇದರ ಮೂಲ ಉದ್ದೇಶ ನೆರವೇರುವುದರ ಜೊತೆಗೇ ದೇಹದಲ್ಲಿ ಸಂಗ್ರಹವಾಗಿದ್ದ ಹೆಚ್ಚುವರಿ ಕ್ಯಾಲೋರಿಗಳೂ ದಹಿಸಲ್ಪಡುತ್ತವೆ.

ದೇಹ-ಆತ್ಮ-ಮನಗಳ ಮಿಲನದ ಅದ್ಭುತ ಅನುಭವದೊಂದಿಗೇ ಕ್ಯಾಲೋರಿಗಳು ದಹಿಸಲ್ಪಡುವ ಮೂಲಕ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಇದುವರೆಗಿನ ನಮ್ಮ ನಂಬಿಕೆಯನ್ನು ಈ ಮಾತು ಕೊಂಚ ಅಲ್ಲಾಡಿಸುತ್ತಿದೆಯಲ್ಲವೇ?

ಆದರೆ ವಿಜ್ಞಾನ ಈ ಮಾತನ್ನು ಸರಿ ಎಂದಿದ್ದು ಇದಕ್ಕೆ ಪೂರಕವಾಗಿ ಐದು ಖಚಿತ ಮಾಹಿತಿಗಳನ್ನು ಒದಗಿಸಿದೆ. ಬನ್ನಿ, ಇವುಗಳಲ್ಲಿ ಕೆಲವು ನಿಮಗೆ ಅಚ್ಚರಿ ತರಿಸಿದರೆ ಉಳಿದವು ನಿಮಗೆ ಹೆಚ್ಚಿನ ಸಂತೋಷದ ಸುದ್ದಿ ನೀಡಬಹುದು, ಬನ್ನಿ, ಇವು ಯಾವುವು ಎಂಬುದನ್ನು ನೋಡೋಣ...

ಕಾಮಕ್ರೀಡೆ ಕ್ಯಾಲೋರಿಗಳನ್ನು ಬಳಸುವುದಲ್ಲ, ಸ್ಫೋಟಿಸುತ್ತದೆ

ಕಾಮಕ್ರೀಡೆ ಕ್ಯಾಲೋರಿಗಳನ್ನು ಬಳಸುವುದಲ್ಲ, ಸ್ಫೋಟಿಸುತ್ತದೆ

ಇಂದು ಮನರಂಜನೆಗಾಗಿ ನಾವು ಸುಮ್ಮನೇ ಕುಳಿತು ಟೀವಿ, ನೆಟ್ಫ್ಲಿಕ್ಸ್ ಮೊದಲಾದವುಗಳನ್ನು ನೋಡುತ್ತಾ ಘಂಟೆಗೆ ಕೇವಲ ಎಪ್ಪತ್ತು ಕ್ಯಾಲೋರಿಗಳನ್ನು ದಹಿಸುತ್ತಾ, ಅನಗತ್ಯ ಕುರುಕಲು ತಿಂಡಿ ತಿನ್ನುತ್ತಾ ಬೊಜ್ಜು ಹೆಚ್ಚಿಸಿಕೊಳ್ಳುವ ಬದಲು ಕೊಂಚ ಮುದನೀಡುವ ವ್ಯಾಯಾಮದಲ್ಲಿ ತೊಡಗಿದರೆ ಹೇಗೆ? ದಂಪತಿಗಳು ಕೇವಲ ಇಪ್ಪತ್ತೈದು ನಿಮಿಷಗಳನ್ನು ಇದಕ್ಕಾಗಿ ನೀಡಿದರೆ, ಅಂದರೆ ಮುನ್ನಲಿವಿಗಾಗಿ ಹತ್ತು ನಿಮಿಷ, ಮುಖ್ಯ ಕೆಲಸಕ್ಕಾಗಿ ಹದಿನೈದು ನಿಮಿಷ, ಈ ಅವಧಿಯಲ್ಲಿ ಸುಮಾರು ಅರವತ್ತೆಂಟು ಕೇಜಿಯವರೆಗಿನ ಮಹಿಳೆಯರು ಎಂಭತ್ತೆಂಟು ಕ್ಯಾಲೋರಿಗಳನ್ನೂ, ಸುಮಾರು ಎಂಭತ್ತು ಕೇಜಿ ತೂಗುವ ಪುರುಷ ನೂರಾ ಆರು ಕ್ಯಾಲೋರಿಗಳನ್ನೂ ದಹಿಸಿರುತ್ತಾರೆ. ಅಂದರೆ ಇಷ್ಟೇ ಸಮಯದಲ್ಲಿ ನಡೆಸುವ ದೋಣಿ ಹುಟ್ಟು ಹಾಕುವ ಅಥವಾ ವ್ಯಾಯಾಮದ ಸೈಕಲ್ ತುಳಿಯುವ ಸಮಾನಾಂತರ ವ್ಯಾಯಾಮಕ್ಕೆ ಸರಿಯಾಗಿದೆ. ಅದರಲ್ಲೂ ಶರೀರಕ್ಕೆ ಹೆಚ್ಚಿನ ಶ್ರಮ ನೀಡುವ ಭಂಗಿಗಳನ್ನು ಅನುಸರಿಸಿದರೆ ಇನ್ನೂ ಹೆಚ್ಚಿನ ಕ್ಯಾಲೋರಿಗಳನ್ನು ದಹಿಸಬಹುದು. ಅದರಲ್ಲೂ, ಎರಡನೆಯ ಬಾರಿ ಪ್ರಯತ್ನಿಸುವ ದಂಪತಿಗಳಿಗೆ ಬೋನಸ್ ಕಾದಿದೆ! ಈಗ ಜೋರಾಗಿ ಹೊಡೆದುಕೊಳ್ಳುತ್ತಿರುವ ಹೃದಯವನ್ನು ಇಷ್ಟೇ ಜೋರಾಗಿ ಹೊಡೆಯುವಂತೆ ಮಾಡಬೇಕಾದರೆ ಸುಮಾರು ಹತ್ತು ಮಹಡಿಗಳನ್ನು ಓಡೋಡಿ ಹತ್ತಬೇಕಾಗುತ್ತದೆ.

ಕಾಮಕ್ರೀಡೆ ಕಾರ್ಬೋಹೈಡ್ರೇಟು ಮತ್ತು ಕೊಬ್ಬು ಸೇವನೆಯ ಹಂಬಲವನ್ನು ತಪ್ಪಿಸುತ್ತದೆ

ಕಾಮಕ್ರೀಡೆ ಕಾರ್ಬೋಹೈಡ್ರೇಟು ಮತ್ತು ಕೊಬ್ಬು ಸೇವನೆಯ ಹಂಬಲವನ್ನು ತಪ್ಪಿಸುತ್ತದೆ

ಲೈಂಗಿಕವಾಗಿ ಸಕ್ರಿಯರಾಗಿರುವ ವ್ಯಕ್ತಿಗಳ ದೇಹದಲ್ಲಿ ಸಾಕಷ್ಟು ಪ್ರಮಾಣದ ಕಾರ್ಟಿಸೋಲ್ ಎಂಬ ಮನೋಭಾವವನ್ನು ನಿಯಂತ್ರಿಸುವ ರಸದೂತ ಬಿಡುಗಡೆಯಾಗಿರುತ್ತದೆ. ಇದು ಅತಿ ಹೆಚ್ಚೂ ಆಗಕೂಡದು, ಕಡಿಮೆಯೂ ಆಗಕೂಡದು. ಲೈಂಗಿಕ ತೃಪ್ತ ವ್ಯಕ್ತಿಗಳಲ್ಲಿ ಇದೇ ಮಟ್ಟದಲ್ಲಿರುತ್ತದೆ. ಒಂದು ವೇಳೆ ಹೆಚ್ಚಾದರೆ ಇದು ಕಾರ್ಬೋಹೈಡ್ರೇಟು ಮತ್ತು ಕೊಬ್ಬು ಹೆಚ್ಚಿರುವ ಆಹಾರಗಳನ್ನು ನೋಡಿದ ತಕ್ಷಣ ತಿನ್ನುವ ಬಯಕೆಯನ್ನು ಹುಚ್ಚಿಬ್ಬಿಸುತ್ತದೆ. ಪರಿಣಾಮವಾಗಿ ಅನಗತ್ಯ ಆಹಾರಸೇವನೆಯಿಂದ ತೂಕ, ಕೊಬ್ಬು ಹೆಚ್ಚುತ್ತದೆ. ಕಾರ್ಟಿಸೋಲ್ ಕಡಿಮೆಯಾದರೆ ಇದು ಆಹಾರಸೇವನೆಯ ಬಯಕೆಯ ಹೊರತಾಗಿ ಮನವನ್ನು ಅಪಾಯಕರ ಹಾಗೂ ಅಮಾನವೀಯ ಕೃತ್ಯಗಳಿಗೆ ಪ್ರೇರಣೆ ನೀಡಬಹುದು. ಲೈಂಗಿಕ ತೃಪ್ತಿಯ ಮೂಲಕ ಯಾವುದೇ ಬಗೆಯ ಮನೋವಿಕಾರಗಳನ್ನು ಉದ್ದೇಪನಗೊಳಿಸುವ ಪ್ರಚೋದನೆಗಳಿಗೆ ಪ್ರಬುದ್ದವಾಗಿ ವರ್ತಿಸುವ ನಿಟ್ಟಿನಲ್ಲಿ ಮನ್ನ ಮನ ತಯಾರಾಗುತ್ತದೆ. ವಿಶೇಷವಾಗಿ ಸಂಭೋಗ, ಸುತ್ತಮುತ್ತಲ ಸಂದರ್ಭಗಳು ಚಿಂತೆಗೆ ಕಾರಣವಾಗಿದ್ದರೂ, ಹೃದಯದ ಒತ್ತಡವನ್ನು ಆರೋಗ್ಯಕರ ಮಟ್ಟದಲ್ಲಿರಿಸಲು ನೆರವಾಗುತ್ತದೆ. ಜಗತ್ತಿನ ಸಾವಿರಾರು ಆಕರ್ಷಣೆಗಳನ್ನು ಮೀರಿ ನಿಲ್ಲುವ, ಅನಗತ್ಯ ಆಹಾರಸೇವನೆಗೆ ಬೇಡ ಎನ್ನಲು ಮನ ಸಮರ್ಥವಾಗುತ್ತದೆ. ಮಾನಸಿಕ ಒತ್ತಡವಿಲ್ಲದೇ ಹೋದಾದ ಎಲ್ಲಾ ಕಾರ್ಯಗಳು ಸುಲಭವಾಗಿ ಜರುಗುತ್ತವೆ ಹಾಗೂ ಮೈಕಟ್ಟು ಸಹಾ ಸುದೃಢವಾಗುತ್ತದೆ.

 ಕೊಬ್ಬಿನ ಕರಗುವಿಕೆಯನ್ನು ಇಮ್ಮಡಿಗೊಳಿಸುತ್ತದೆ

ಕೊಬ್ಬಿನ ಕರಗುವಿಕೆಯನ್ನು ಇಮ್ಮಡಿಗೊಳಿಸುತ್ತದೆ

ಕೊಬ್ಬನ್ನು ಕರಗಿಸಲು ಒಂದು ಸುಲಭವಾದ ಮಾರ್ಗವೆಂದರೆ ಚೆನ್ನಾಗಿ ನಿದ್ರಿಸುವುದು. ಮಗುವಿನಂತೆ ಗಾಢನಿದ್ದೆಯನ್ನು ಸಾಕಷ್ಟು ಹೊತ್ತು ಪಡೆದಾಗ ಇದು ಎಲ್ಲಾ ವಿಧಗಳಿಂದಲೂ ಆರೋಗ್ಯಕ್ಕೆ ಸಹಕಾರಿಯಾಗಿದೆ. ಮಲಗುವ ಮುನ್ನ ದಂಪತಿಗಳ ನಡುವಣ ಮಿಲನ ಉತ್ತಮ ಪ್ರಮಾಣದ ಆಕ್ಸಿಟೋಸಿನ್ ಎಂಬ ರಸದೂತ ಬಿಡುಗಡೆಯಾಗುತ್ತದೆ ಹಾಗೂ ಮನಸ್ಸು ನಿರಾಳವಾಗಿ ಸುಲಭವಾಗಿ ಗಾಢನಿದ್ದೆಗೆ ಜಾರಲು ನೆರವಾಗುತ್ತದೆ. ಆತ್ಮೀಯವಾದ ಆಪ್ಪುಗೆಯೇ ಈ ರಸದೂತದ ಬಿಡುಗಡೆಗೆ ಸಾಕಷ್ಟಾಗುತ್ತದೆ. ಇದೇ ಕಾರಣಕ್ಕೆ ತಾಯಿಯ ಎದೆಯನ್ನಪ್ಪುವ ಮಗು ಕೆಲವೇ ಕ್ಷಣಗಳಲ್ಲಿ ನಿದ್ದೆಗೆ ಜಾರುತ್ತದೆ.

 ಕೊಬ್ಬಿನ ಕರಗುವಿಕೆಯನ್ನು ಇಮ್ಮಡಿಗೊಳಿಸುತ್ತದೆ

ಕೊಬ್ಬಿನ ಕರಗುವಿಕೆಯನ್ನು ಇಮ್ಮಡಿಗೊಳಿಸುತ್ತದೆ

ದಂಪತಿಗಳಿಗೆ ಇದು ಶುಭವಾರ್ತೆಯೇ ಸರಿ, ಏಕೆಂದರೆ ಕಾಮಕ್ರೀಡೆಯ ಬಳಿಕ ಪಡೆಯುವ ಸುಖನಿದ್ದೆಯಿಂದಾಗಿ ನಿದ್ದೆಯ ಸಮಯದಲ್ಲಿ ಇತರ ಸಮಯದಲ್ಲಿ ಆಹಾರದ ಮೇಲಿನ ನಿಯಂತ್ರಣದಿಂದ ಸಾಧಿಸಬಹುದಾದ ಕೊಬ್ಬಿನ ಬಳಕೆಯ ದುಪ್ಪಟ್ಟು ಪ್ರಮಾಣದ ಕೊಬ್ಬನ್ನು ಕರಗಿಸಬಹುದು! ಈ ಮಾಹಿತಿಯನ್ನು ಒಂದು ಅಧಿಕೃತ ಸರ್ಕಾರಿ ಸಮೀಕ್ಷೆಯೇ ತಿಳಿಸಿದೆ.

ನಿಮ್ಮ ಆಹಾರಕ್ರಮವನ್ನು ಕಮಬದ್ಧವಾಗಿರಿಸಲು ನೆರವಾಗುತ್ತದೆ

ನಿಮ್ಮ ಆಹಾರಕ್ರಮವನ್ನು ಕಮಬದ್ಧವಾಗಿರಿಸಲು ನೆರವಾಗುತ್ತದೆ

ಅರೆ ಇದು ಹೇಗೆ? ಇದಕ್ಕೆ ನಮ್ಮ ಆತ್ಮವಿಶ್ವಾಸವೇ ಕಾರಣ! ಲೈಂಗಿಕವಾಗಿ ಸಕ್ರಿಯವಾಗಿರುವ ವ್ಯಕ್ತಿಗಳು ಹೆಚ್ಚು ಆತ್ಮವಿಶ್ವಾಸವುಳ್ಳವರಾಗಿರುತ್ತಾರೆ ಹಾಗೂ ತಮ್ಮ ಮೂಲಕ ತಮ್ಮ ಸಂಗಾತಿ ಸುಖವಾಗಿದ್ದಾರೆ ಎಂಬ ಭಾವನೆ ಪರಸ್ಪರರಲ್ಲಿ ಹೆಚ್ಚಿನ ವಿಶ್ವಾಸ ಹಾಗೂ ಅನ್ಯೋನ್ಯತೆಯನ್ನು ಮೂಡಿಸುತ್ತದೆ. ಈ ಮನೋಭಾವ ವ್ಯಕ್ತಿ ಸಮಾಜವನ್ನು ಎದುರಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಹಾಗೂ ಲೈಂಗಿಕ ಜೀವನವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಸಂಗಾತಿಯಿಂದ ದೊರಕುವ ಮೆಚ್ಚುಗೆ ಕೇವಲ ಆರೋಗ್ಯಕರ ಆಹಾರ ಸೇವನೆಗೆ ಪ್ರೇರಣೆ ನೀಡುತ್ತದೆ ಹಾಗೂ ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲು ನಿತ್ಯದ ವ್ಯಾಯಾಮಕ್ಕೆ ಕಟ್ಟುಬೀಳಲು ಮನಸ್ಸು ಪಕ್ವಗೊಳ್ಳುತ್ತದೆ.

ನಿಮ್ಮ ಆಹಾರಕ್ರಮವನ್ನು ಕಮಬದ್ಧವಾಗಿರಿಸಲು ನೆರವಾಗುತ್ತದೆ

ನಿಮ್ಮ ಆಹಾರಕ್ರಮವನ್ನು ಕಮಬದ್ಧವಾಗಿರಿಸಲು ನೆರವಾಗುತ್ತದೆ

ನೆನಪಿರಲಿ, ಉತ್ತಮ ಲೈಂಗಿಕ ಜೀವನಕ್ಕೆ ಅಸೂಯೆ ಮೂಡಿಸುವಂತಹ ಮೈಕಟ್ಟು ಅಥವಾ ಹೊಟ್ಟೆಯನ್ನು ಸೆಟೆಸಿದ ಸಿಕ್ಸ್-ಪ್ಯಾಕ್ ಮೊದಲಾದವುಗಳ ಅವಶ್ಯಕತೆಯೇ ಇಲ್ಲ! ನಿಮ್ಮ ಸಂಗಾತಿ ನಿಮ್ಮನ್ನು ಹೇಗೆ ಮೆಚ್ಚಿಕೊಳ್ಳುತ್ತಾರೆ ಹಾಗೂ ನಿಮ್ಮ ಬಗ್ಗೆ ಸದಭಿಪ್ರಾಯವನ್ನು ಹೊಂದಲು ನಿಮ್ಮಿಂದ ಯಾವ ಬದಲಾವಣೆಯನ್ನು ನಿರೀಕ್ಷಿಸುತ್ತಾರೆ ಎಂದು ತಿಳಿದುಕೊಂಡು ಆ ಪ್ರಕಾರ ನಿಮ್ಮ ಪ್ರಯತ್ನಗಳನ್ನು ಮುಂದುವರೆಸಿದರೆ ಸಾಕು. ಈ ಬದಲಾವಣೆ ಯಾವಾಗ ಪ್ರಾರಂಭವಾಯಿತೋ, ಆಹಾರಕ್ರಮ, ವ್ಯಾಯಾಮ ಮೊದಲಾದವುಗಳೆಲ್ಲಾ ತನ್ನಿಂತಾನೇ ನಿತ್ಯಾಭ್ಯಾಸವಾಗತೊಡಗುತ್ತವೆ.

ನಿಮ್ಮ ಆಹಾರಕ್ರಮವನ್ನು ಕಮಬದ್ಧವಾಗಿರಿಸಲು ನೆರವಾಗುತ್ತದೆಸಕ್ರಿಯ ಲೈಂಗಿಕ ಜೀವನ ಮೈಕಟ್ಟನ್ನು ಸುಂದರವಾಗಿ ಕಾಪಾಡಿಕೊಳ್ಳಲು ನೆರವಾಗುತ್ತದೆ

ನಿಮ್ಮ ಆಹಾರಕ್ರಮವನ್ನು ಕಮಬದ್ಧವಾಗಿರಿಸಲು ನೆರವಾಗುತ್ತದೆಸಕ್ರಿಯ ಲೈಂಗಿಕ ಜೀವನ ಮೈಕಟ್ಟನ್ನು ಸುಂದರವಾಗಿ ಕಾಪಾಡಿಕೊಳ್ಳಲು ನೆರವಾಗುತ್ತದೆ

ತೂಕ ಕಳೆದುಕೊಳ್ಳುವುದು ಎಷ್ಟು ಮುಖ್ಯವೋ ಇಳಿದ ತೂಕ ಮತ್ತೆ ಏರದಂತೆ ನೋಡಿಕೊಳ್ಳುವುದೂ ಅಷ್ಟೇ ಮುಖ್ಯ. ಏಕೆಂದರೆ ವ್ಯಾಯಾಮದ ಪರಿಣಾಮವಾಗಿ ಕೆಲವು ಕೇಜಿಗಳನ್ನು ಬಲವಂತವಾಗಿ ಕಳೆದುಕೊಂಡರೂ ಯಾವಾಗ ವ್ಯಾಯಾಮದಿಂದ ರಜೆ ಪಡೆಯುತ್ತೇವೋ ಆಗ ತಕ್ಷಣವೇ ದೇಹ ಮತ್ತೆ ತೂಕವನ್ನು ಏರಿಸಿಕೊಂಡುಬಿಡುತ್ತದೆ. ಸೇನೆಯಲ್ಲಿರುವ ನಮ್ಮ ಸಹೋದರರು ಮನೆಗೆ ಆಗಮಿಸಿದಾಗ ಉತ್ತಮ ಮೈಕಟ್ಟು ಹೊಂದಿದ್ದು ಯಾವಾಗ ಮನೆಯಲ್ಲಿ ಅಮ್ಮನ ಅಡುಗೆ ಸೇವಿಸಲು ತೊಡಗುತ್ತಾರೋ, ವಾರವೊಂದರಲ್ಲಿಯೇ ನಾಲ್ಕಾರು ಕೇಜಿ ತೂಕ ಹೆಚ್ಚಿಸಿಕೊಂಡು ಬಿಡುತ್ತಾರೆ. ತೂಕ ಕಳೆದುಕೊಳ್ಳಲು ನಡೆಸುವ ವ್ಯಾಯಾಮಗಳ ಮೂಲಕ ಪುರುಷರ ದೇಹದಲ್ಲಿ ಕೊಬ್ಬು ಮಾಯವಾದಂತೆಯೇ ಕೊಂಚ ಪ್ರಮಾಣದಲ್ಲಿ ಟೆಸ್ಟಾಸ್ಟೆರೋನ್ ರಸದೂತ ಹೆಚ್ಚುತ್ತದೆ!

ನಿಮ್ಮ ಆಹಾರಕ್ರಮವನ್ನು ಕಮಬದ್ಧವಾಗಿರಿಸಲು ನೆರವಾಗುತ್ತದೆಸಕ್ರಿಯ ಲೈಂಗಿಕ ಜೀವನ ಮೈಕಟ್ಟನ್ನು ಸುಂದರವಾಗಿ ಕಾಪಾಡಿಕೊಳ್ಳಲು ನೆರವಾಗುತ್ತದೆ

ನಿಮ್ಮ ಆಹಾರಕ್ರಮವನ್ನು ಕಮಬದ್ಧವಾಗಿರಿಸಲು ನೆರವಾಗುತ್ತದೆಸಕ್ರಿಯ ಲೈಂಗಿಕ ಜೀವನ ಮೈಕಟ್ಟನ್ನು ಸುಂದರವಾಗಿ ಕಾಪಾಡಿಕೊಳ್ಳಲು ನೆರವಾಗುತ್ತದೆ

ಈ ಮೂಲಕ ನಿಮಿರುತನ ಪೂರ್ಣವಾಗಿ ಪಡೆಯಲು ಸಾಧ್ಯವಾಗದೇ ಹೋಗುತ್ತಿದ್ದುದು ಈಗ ಸಾಧ್ಯವಾಗತೊಡಗುತ್ತದೆ. ಮಹಿಳೆಯರಲ್ಲಿ ತೂಕವನ್ನು ಕಳೆದುಕೊಂಡಾಗ ಶೀಘ್ರವೇ ಸಂವೇದನೆಗೆ ಒಳಗಾಗುವುದು, ಶೀಘ್ರ ಕಾಮಪರಾಕಾಷ್ಠೆಗೆ ತಲುಪುವುದು ಹಾಗೂ ಒಟ್ಟಾರೆ ಕಾಮತೃಪ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ತೂಕ ಕಳೆದುಕೊಳ್ಳಲು ಮತ್ತು ಏರದಂತೆ ಕಾಪಾಡಲು ಏನು ಮಾಡಬೇಕು? ಸುಲಭ ಉತ್ತರವೆಂದರೆ ಲೈಂಗಿಕವಾಗಿ ಸಕ್ರಿಯರಾಗಿರಬೇಕು! ಅಷ್ಟೇ. ವ್ಯಾಯಾಮದಿಂದ ರಜೆ ತೆಗೆದುಕೊಂಡಾಗ ಹೇಗೆ ತೂಕ ಏರುತ್ತದೆಯೋ ಅಂತೆಯೇ ಲೈಂಗಿಕ ಜೀವನದಿಂದ ರಜೆ ಪಡೆದಾಗಲೂ ತೂಕ ಏರುವ ಸಾಧ್ಯತೆ ಇದೆ. ಹಾಗಾಗಿ ನಿಮ್ಮ ನೆಚ್ಚಿನ ತೆಳುಸೊಂಟದ ಆ ಜೀನ್ಸ್ ಅನ್ನು ಹೆಚ್ಚು ಸಮಯದವರೆಗೆ ಧರಿಸುತ್ತಲೇ ಇರಬೇಕೆನಿಸಿದರೆ ಇದನ್ನು ಯಾವಾಗ ತೆಗೆದೆಸೆಯಬೇಕೆಂದು ಈಗ ನಿಮಗೆ ಗೊತ್ತು!

English summary

Ways Sex Helps You Lose Weight—and Keep It Off

Find out how an active sex life can keep you pleasingly slim. Could heart-pounding fun between the sheets help you get slimmer faster? Definitely! But the reasons an active sex life promotes weight loss go beyond its potential to torch calories. They touch the core of this ultimate mind-body-soul experience. What the heck are we talking about? Consider these five ways sex helps get and keep you slim. Some will surprise you, and all will please you.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more