For Quick Alerts
ALLOW NOTIFICATIONS  
For Daily Alerts

ಈ ಸಿಂಪಲ್ ಸಲಹೆಗಳನ್ನು ಅನುಸರಿಸಿದರೆ, ಖಂಡಿತ ಹೊಟ್ಟೆಯ ಬೊಜ್ಜು ಕರಗುತ್ತದೆ

By Deepu
|

ಸೂಪರ್ ಫಾಸ್ಟ್ ಯುಗದಲ್ಲಿ ದೇಹದ ಆರೋಗ್ಯದ ಕಡೆ ಗಮನಹರಿಸುವುದೇ ಕಡಿಮೆ. ಯಾಕೆಂದರೆ ಅಂತಹ ಪುರುಸೊತ್ತು ನಮಗೆ ಇರುವುದಿಲ್ಲ. ಬೆಳಿಗ್ಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸುವ ಹೊತ್ತಿಗೆ ಕೆಲಸಕ್ಕೆ ಹೋಗಲು ಸಮಯವಾಗಿರುತ್ತದೆ. ಸಂಜೆ ಮನಗೆ ಬರುವಾಗಲೇ ರಾತ್ರಿ ಊಟದ ಸಮಯವಾಗಿರುತ್ತದೆ. ಇನ್ನು ದೇಹದ ಕಡೆ ಗಮನಹರಿಸಲು ಸಮಯವೆಲ್ಲಿದೆ? ಕೆಲವರು ದೇಹವನ್ನು ದಂಡಿಸದೆ ಇರುವ ಕಾರಣ ಹೊಟ್ಟೆ ಬೆಳೆಸಿಕೊಂಡಿದ್ದಾರೆ. ಅದರಲ್ಲೂ ಕೆಲವರು ಎತ್ತರಕ್ಕೆ ತಕ್ಕ ತೂಕವನ್ನು ಹೊಂದಿದ್ದರೂ ಅವರ ಹೊಟ್ಟೆ ಮಾತ್ರ ದೊಡ್ಡದಾಗಿಯೇ ಇರುತ್ತದೆ. ಇದಕ್ಕೆ ಹಲವಾರು ಕಾರಣಗಳಿರಬಹುದು

ಇನ್ನು ಕೆಲವರು ತೂಕದೊಂದಿಗೆ ಹೊಟ್ಟೆಯೂ ಮುಂದೆ ಬಂದಿರುತ್ತದೆ. ಹೊಟ್ಟೆಯಲ್ಲಿ ಬೊಜ್ಜು ಬೆಳೆಯಲು ಗರ್ಭಧಾರಣೆ ಬಳಿಕ ತೂಕ ಹೆಚ್ಚಾಗುವುದು, ಹಾರ್ಮೋನು ವೈಪರಿತ್ಯ, ಕುಳಿತುಕೊಂಡೇ ಕೆಲಸ ಮಾಡುವುದು, ಅಜೀರ್ಣ, ಅನಾರೋಗ್ಯಕರ ಆಹಾರಕ್ರಮ, ಅತಿಯಾಗಿ ಆಲ್ಕೋಹಾಲ್ ಸೇವನೆ ಇತ್ಯಾದಿ ಕಾರಣಗಳಾಗಿವೆ. ಬೊಜ್ಜು ಬೆಳೆಯಲು ಕಾರಣಗಳು ಏನೇ ಇದ್ದರೂ ಅದರಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಕೊಲೆಸ್ಟ್ರಾಲ್, ಅತಿಯಾದ ಒತ್ತಡ, ಬೆನ್ನುನೋವು, ಮಂಡಿನೋವು, ಹೃದಯಸಂಬಂಧಿ ಕಾಯಿಲೆ ಇತ್ಯಾದಿಗಳು ಕಾಣಿಸಿಕೊಳ್ಳುವುದು. ವ್ಯಾಯಾಮ ಮಾಡಲು ಸಮಯವಿಲ್ಲದೆ ಇರುವವರು ಇಲ್ಲಿ ಕೊಟ್ಟಿರುವ ಕೆಲವೊಂದು ಸಲಹೆಗಳನ್ನು ಪಾಲಿಸಿ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದಾಗಿದೆ...

ಈ ಸಿಂಪಲ್ ಸಲಹೆಗಳನ್ನು ಅನುಸರಿಸಿದರೆ, ಖಂಡಿತ ಹೊಟ್ಟೆಯ ಬೊಜ್ಜು ಕರಗುತ್ತದೆ

1. ಬ್ರೇಕ್ ಫಾಸ್ಟ್ ಮುನ್ನ ನಡೆದಾಡಿ

1. ಬ್ರೇಕ್ ಫಾಸ್ಟ್ ಮುನ್ನ ನಡೆದಾಡಿ

ಪ್ರತಿದಿನ ಮುಂಜಾನೆ ಬೆಳಿಗ್ಗೆದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ನೀರು ಮಾತ್ರವೇ ಕುಡಿದು ಕನಿಷ್ಟ ಹದಿನೈದರಿಂದ ಇಪ್ಪತ್ತು ನಿಮಿಷಗಳಾದರೂ ನಡೆದಾಡಿ. ಇದಕ್ಕೆ ಹೊರಗೇ ಹೋಗಬೇಕೆಂದಿಲ್ಲ, ಮನೆಯಲ್ಲಿರುವ ಟ್ರೆಡ್ ಮಿಲ್ ಸಹಾ ಉಪಯೋಗಿಸಬಹುದು. ಆದರೆ ಮುಂಜಾನೆಯ ತಾಜಾ ಹವೆಯನ್ನು ಪಡೆಯಲು ಹೊರಗೆ ನಡೆದಾಡುವುದೇ ಸೂಕ್ತ. ಇದನ್ನೊಂದು ಅಭ್ಯಾಸ ವನ್ನಾಗಿಸಿಕೊಳ್ಳಬೇಕು. ಇದರಿಂದ ಜೀವರಾಸಾಯನಿಕ ಕ್ರಿಯೆಯ ಗತಿ ಉತ್ತಮಗೊಳ್ಳುತ್ತದೆ ಹಾಗೂ ಕೊಬ್ಬನ್ನು ಶೀಘ್ರವಾಗಿ ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ವಿಶೇಷವಾಗಿ ಸೊಂಟದ ಕೊಬ್ಬನ್ನು ಕರಗಿಸಲು ಬೆಳಗ್ಗಿನ ನಡಿಗೆ ಪೂರಕ ಎಂದು ಕೆಲವು ಅಧ್ಯಯನಗಳಲ್ಲಿ ದೃಢಪಟ್ಟಿದೆ. ನಿತ್ಯವೂ, ಒಂದೂ ದಿನ ಬಿಡದೇ ಬೆಳಗ್ಗಿನ ನಡಿಗೆಯಿಂದ ಐದು ವಾರಗಳಲ್ಲಿ ಐದು ಇಂಚಿನಷ್ಟು ಕೊಬ್ಬು ಕರಗಲು ಸಾಧ್ಯವಾಗುತ್ತದೆ.

2. ಉಪಾಹಾರದಲ್ಲಿ ಹೆಚ್ಚಿನ ನಾರು ಇರುವ ಆಹಾರ ಸೇವಿಸಿ

2. ಉಪಾಹಾರದಲ್ಲಿ ಹೆಚ್ಚಿನ ನಾರು ಇರುವ ಆಹಾರ ಸೇವಿಸಿ

ಸಾಮಾನ್ಯವಾಗಿ ಕೊಬ್ಬು ಕಳೆದುಕೊಳ್ಳಲಿಚ್ಛಿಸುವ ವ್ಯಕ್ತಿಗಳು ಉಪಾಹಾರವನ್ನೇ ತ್ಯಜಿಸುತ್ತಾರೆ. ಇದೊಂದು ಅಪಾಯಕಾರಿಯಾದ ಕ್ರಮವಾಗಿದ್ದು ಜೀವರಾಸಾಯನಿಕ ಕ್ರಿಯೆಯನ್ನು ಕುಂಠಿತಗೊಳಿಸಿ ಕೊಬ್ಬು ಕರಗದೇ ಹೋಗಿ ಮೂಲ ಉದ್ದೇಶವೇ ಈಡೇರದೇ ಹೋಗಬಹುದು ಹಾಗೂ ಬೆಳಗ್ಗಿನ ಉಪಾಹಾರ ಮೆದುಳಿಗೆ ಅತ್ಯಗತ್ಯವಾಗಿ ಬೇಕಾಗಿದ್ದು ಇದನ್ನು ಪಡೆಯದೇ ಹೋದರೆ ಮೆದುಳಿಗೆ ತಲುಪುವ ರಕ್ತದ ಪ್ರಮಾಣದಲ್ಲಿಯೂ ಕುಂಠಿತವಾಗಿ ಹಲವಾರು ತೊಂದರೆಗಳು ಎದುರಾಗಬಹುದು. ಬದಲಿಗೆ, ಹೆಚ್ಚಿನ ಪ್ರಮಾಣದ ಕರಗದ ನಾರು ಇರುವ ಆಹಾರಗಳಾದ ಹಸಿರು ಸಾಲಾಡ್, ಓಟ್ಸ್, ಅವಲಕ್ಕಿ ಮೊದಲಾದವುಗಳನ್ನು ಸೇವಿಸಬಹುದು. ಇದರಿಂದ ಉತ್ತಮ ಆರೋಗ್ಯವನ್ನು

ಕಾಪಾಡಿಕೊಳ್ಳುವ ಜೊತೆಗೇ ಕೊಬ್ಬನ್ನೂ ಶೀಘ್ರವಾಗಿ ಕರಗಿಸಿಕೊಳ್ಳಬಹುದು.

3. ಹಣ್ಣುಗಳ ಬಣ್ಣಗಳಿಗೆ ಗಮನ ನೀಡಿ

3. ಹಣ್ಣುಗಳ ಬಣ್ಣಗಳಿಗೆ ಗಮನ ನೀಡಿ

ಆರೋಗ್ಯದ ದೃಷ್ಟಿಯಿಂದ ಹಣ್ಣು ಮತ್ತು ತರಕಾರಿಗಳ ಸೇವನೆ ಎಷ್ಟು ಅಗತ್ಯ ಎಂದು ನಮಗೆಲ್ಲಾ ತಿಳಿದಿದೆ. ಇವುಗಳ ಸೇವನೆಯಿಂದ ಆರೋಗ್ಯವೃದ್ದಿಯ ಜೊತೆಗೇ ತೂಕದಲ್ಲಿ ಇಳಿಕೆಗೂ ನೆರವಾಗುತ್ತದೆ. ಆದರೆ, ಕೊಬ್ಬನ್ನು ಕರಗಿಸುವ ನಿಟ್ಟಿನಲ್ಲಿ ಹಸಿರು ಬಣ್ಣದ ಹಣ್ಣು-ತರಕಾರಿಗಳಿಗಿಂತ ಕೆಂಪು ಬಣ್ಣದವೇ ಉತ್ತಮ ಆಯ್ಕೆಯಾಗಿವೆ. ಕಲ್ಲಂಗಡಿ, ಕೆಂಪು ಚಕ್ಕೋತ, ಕೆಂಪು ಪೇರಲೆ ಹಣ್ಣು ಮೊದಲಾದವುಗಳಲ್ಲಿ ಹೆಚ್ಚಿನ ಪ್ರಮಾಣದ ಫೆನಾಲ್ ಗಳಿವೆ ಹಾಗೂ ಇವುಗಳನ್ನು ಜೀರ್ಣಿಸಿಕೊಳ್ಳಲು ನಮ್ಮ ಜೀರ್ಣಾಂಗಗಳಿಗೆ ಸೊಂಟದ ಕೊಬ್ಬನ್ನು ಅನಿವಾರ್ಯವಾಗಿ ಬಳಸಿಕೊಳ್ಳಬೇಕಾಗಿ ಬರುತ್ತದೆ.

4. ಬೆಣ್ಣೆಹಣ್ಣು

4. ಬೆಣ್ಣೆಹಣ್ಣು

ಅವೋಕಾಡೋ ಅಥವಾ ಬೆಣ್ಣೆಹಣ್ಣಿನ ತಿರುಳಿನಲ್ಲಿ ಅಪಾರಪ್ರಮಾಣದ ಪೋಷಕಾಂಶಗಳಿರುವ ಕಾರಣ ಇದನ್ನು ಸುಪರ್ ಫುಡ್ ಎಂದೂ ಕರೆಯಲಾಗುತ್ತದೆ. ಕೊಬ್ಬು ಕರಗಿಸುವುದರಿಂದ ಹಿಡಿದು ಕ್ಯಾನ್ಸರ್ ತಡೆಗಟ್ಟುವ ವರೆಗೆ ಈ ಹಣ್ಣಿನ ಸೇವನೆಯ ಪ್ರಯೋಜನಗಳಿವೆ. ಹಾಗಾಗಿ ನಿಯಮಿತವಾಗಿ ಈ ಹಣ್ಣನ್ನು ಸೇವಿಸುತ್ತಾ ಬರುವ ಮೂಲಕ ಆರೋಗ್ಯವನ್ನು ವೃದ್ದಿಸಿಕೊಳ್ಳುವ ಜೊತೆಗೇ ಸೊಂಟದ ಕೊಬ್ಬನ್ನೂ ಕರಗಿಸಬಹುದು. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಜೀವರಾಸಾಯನಿಕ ಕ್ರಿಯೆಯನ್ನು ತೀವ್ರಗೊಳಿಸುವ ಮೂಲಕ ಕೊಬ್ಬಿನ ಕರಗುವಿಕೆಯನ್ನು ಶೀಘ್ರಗೊಳಿಸುತ್ತವೆ.

5. ಪ್ರೋಟೀನ್ ಯುಕ್ತ ಪೇಯ ಸೇವಿಸಿ

5. ಪ್ರೋಟೀನ್ ಯುಕ್ತ ಪೇಯ ಸೇವಿಸಿ

ಪ್ರತಿದಿನ ಬೆಳಿಗ್ಗೆ, ಲಘು ಹಾಗೂ ಹೆಚ್ಚಿನ ನಾರುಯುಕ್ತ ಉಪಾಹಾರವನ್ನು ಸೇವಿಸಿದ ಬಳಿಕ ಹೆಚ್ಚುವರಿ ಪ್ರೊಟೀನ್ ಯುಕ್ತ ಪೇಯವನ್ನು ಸೇವಿಸಲು ಮರೆಯದಿರಿ. ಉದಾಹರಣೆಗೆ, ವ್ಹೇ (whey) ಅಥವಾ ಸಸ್ಯಜನ್ಯ ಪ್ರೋಟೀನ್ ಹೆಚ್ಚುವರಿ ಆಹಾರಯುಕ್ತ ಪೇಯಗಳನ್ನು ಸೇವಿಸುವ ಮೂಲಕ ಹೊಟ್ಟೆಯ ಕೊಬ್ಬನ್ನು ಕರಗಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಲು ನೆರವಾಗುತ್ತದೆ. ಏಕೆಂದರೆ ಪ್ರೋಟೀನ್ ಕರಗಿಸಲು ಕೊಬ್ಬಿನ ಬಳಕೆಯಾಗುವುದು ಅನಿವಾರ್ಯ! ಹಾಗಾಗಿ ಒಂದು ವೇಳೆ ತೂಕ ಇಳಿಸುವ ನಿಟ್ಟಿನಲ್ಲಿ ನೀವು ವ್ಯಾಯಾಮಗಳನ್ನು ಮಾಡುತ್ತಿದ್ದರೆ ಪ್ರೋಟೀನ್ ಯುಕ್ತ ಪೇಯ ಸೇವನೆಯಿಂದ ಸ್ನಾಯುಗಳು ಹುರಿಗಟ್ಟಲೂ ನೆರವಾಗುತ್ತದೆ.

6. ಮೊಟ್ಟೆಯ ಬಿಳಿಭಾಗವನ್ನು ಸೇವಿಸಿ

6. ಮೊಟ್ಟೆಯ ಬಿಳಿಭಾಗವನ್ನು ಸೇವಿಸಿ

ಹೆಚ್ಚಿನ ಜನರು ಸ್ನಾಯುಗಳನ್ನು ಹುರಿಗಟ್ಟಿಸುವ ಜೊತೆಗೇ ತೂಕವನ್ನೂ ಕಳೆದುಕೊಳ್ಳಲು ತಮ್ಮ ಆಹಾರದಲ್ಲಿ ಮೊಟ್ಟೆಯನ್ನು ಅವಶ್ಯವಾಗಿ ಸೇರಿಸಿಕೊಳ್ಳುತ್ತಾರೆ. ಇದೇ ಕಾರಣವನ್ನು ತೂಕ ಇಳಿಸಿಕೊಳ್ಳಲೂ ಉಪಯೋಗಿಸಬಹುದು, ಏಕೆಂದರೆ ಮೊಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದೆ. ದಿನಕ್ಕೆರಡು ಹೊತ್ತುಗಳಲ್ಲಿ ಕನಿಷ್ಠ ಒಂದು ಮೊಟ್ಟೆಯನ್ನು ಸೇವಿಸಿದರೆ ಸೊಂಟದ ಕೊಬ್ಬನ್ನು ಶೀಘ್ರವಾಗಿ ಇಳಿಸಿಕೊಳ್ಳಲು ನೆರವಾಗುತ್ತದೆ ಹಾಗೂ ವ್ಯಾಯಾಮಕ್ಕೆ ಅಗತ್ಯವಾದ ಶಕ್ತಿಯನ್ನೂ ಒದಗಿಸುತ್ತದೆ.

7. ಲಿಂಬೆರಸ-ಬೆರೆಸಿದ ನೀರನ್ನು ಕುಡಿಯಿರಿ

7. ಲಿಂಬೆರಸ-ಬೆರೆಸಿದ ನೀರನ್ನು ಕುಡಿಯಿರಿ

ಲಿಂಬೆರಸ ಸೇರಿಸಿದ ನೀರನ್ನು ಕುಡಿಯುವ ಮೂಲಕ ಸೊಂಟದ ಕೊಬ್ಬು ಶೀಘ್ರವಾಗಿ ಕರಗಲು ನೆರವಾಗುತ್ತದೆ ಎಂಬುದನ್ನು ಕೆಲವಾರು ಅಧ್ಯಯನಗಳ ಮೂಲಕ ಕಂಡುಕೊಳ್ಳಲಾಗಿದೆ. ದಿನದ ಅವಧಿಯಲ್ಲಿ ಸೇವಿಸುವ ನೀರಿನಲ್ಲಿ ಲಿಂಬೆಯನ್ನು ಅಡ್ಡಲಾಗಿ ಕತ್ತರಿಸಿದ ಕೆಲವು ಬಿಲ್ಲೆಗಳನ್ನು ಸೇರಿಸಿಯೂ ಕುಡಿಯಬಹುದು. ಲಿಂಬೆರಸದಲ್ಲಿರುವ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟುಗಳು ಜೊತೆಗೂಡಿ ಸೊಂಟದ ಭಾಗದಲ್ಲಿರುವ ಕೊಬ್ಬನ್ನು ಕರಗಿಸಲು ನೆರವಾಗುವ ಜೊತೆಗೇ ದೇಹದ ಕಲ್ಮಶಗಳನ್ನು ನಿವಾರಿಸಲೂ ನೆರವಾಗುತ್ತದೆ.

8. ಕಾರ್ಬೋಹೈಡ್ರೇಟುಗಳ ಸೇವನೆ ಕಡಿಮೆ ಮಾಡಿ

8. ಕಾರ್ಬೋಹೈಡ್ರೇಟುಗಳ ಸೇವನೆ ಕಡಿಮೆ ಮಾಡಿ

ತೂಕ ಕಳೆದುಕೊಳ್ಳಬೇಕೆಂದರೆ, ವಿಶೇಷವಾಗಿ ಸೊಂಟದ ಕೊಬ್ಬು ಕರಗಿಸಿಕೊಳ್ಳಬೇಕೆಂದರೆ, ನಿಮ್ಮ ಆಹಾರದಲ್ಲಿ ಅನಾರೋಗ್ಯಕರ ಕಾರ್ಬೋಹೈಡ್ರೇಟುಗಳನ್ನು ಕಡಿಮೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಬಿಳಿ ಬ್ರೆಡ್, ಬಿಳಿ ಅನ್ನ, ಸಕ್ಕರೆ, ಪಾಸ್ತಾ, ಪಿಜ್ಜಾ, ಬೇಕರಿ ಉತ್ಪನ್ನಗಳು ಮೊದಲಾದವುಗಳನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿಕೊಳ್ಳಬೇಕು. ಇವುಗಳ ಬದಲಿಗೆ ಹೆಚ್ಚಿನ ನಾರು ಹಾಗೂ ಪ್ರೋಟೀನ್ ಯುಕ್ತ ಆಹಾರಗಳನ್ನು ಸೇವಿಸುವ ಮೂಲಕ ಸೊಂಟದ ಕೊಬ್ಬನ್ನು ಶೀಘ್ರವಾಗಿ ಕರಗಿಸಿಕೊಳ್ಳಬಹುದು.

9. ಸೊಂಟದ ಸ್ನಾಯುಗಳಿಗೆ ಸೆಳೆತ ನೀಡುವ ವ್ಯಾಯಾಮ ಮಾಡಿ

9. ಸೊಂಟದ ಸ್ನಾಯುಗಳಿಗೆ ಸೆಳೆತ ನೀಡುವ ವ್ಯಾಯಾಮ ಮಾಡಿ

ಯಾವುದೇ ಬಗೆಯ ವ್ಯಾಯಾಮ ಆರೋಗ್ಯಕ್ಕೆ ಪೂರಕವೇ ಹೌದು. ಆದರೆ ಒಂದು ವೇಳೆ ಸೊಂಟದ ಕೊಬ್ಬನ್ನು ಕರಗಿಸಿಕೊಳ್ಳುವುದು ನಿಮ್ಮ ಆದ್ಯತೆಯಾಗಿದ್ದರೆ ನಿಮ್ಮ ವ್ಯಾಯಾಮಗಳಲ್ಲಿ ಹೊಟ್ಟೆಯ ಸ್ನಾಯುಗಳಿಗೆ ಹೆಚ್ಚಿನ ಕೆಲಸ ನೀಡುವ ವ್ಯಾಯಾಮಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಇದರೊಂದಿಗೆ ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ವ್ಯಾಯಾಮಗಳಾದ ನಿಧಾನಗತಿಯ ಓಟ, ಸರಳ ಸೆಳೆತದ ವ್ಯಾಯಾಮಗಳ ಜೊತೆಗೇ ಹೊಟ್ಟೆಯ ಸ್ನಾಯುಗಳಿಗೆ ಒತ್ತು ನೀಡುವ ಇಳಿಜಾರಿನಲ್ಲಿ ತಲೆಯನ್ನು ಮೇಲೆತ್ತುವ, ಹೊಟ್ಟೆಯನ್ನು ಸಂಕುಚಿಸುವ ವ್ಯಾಯಾಮಗಳನ್ನು ನಿತ್ಯವೂ ನಿರ್ವಹಿಸುವ ಮೂಲಕ ನಿಮ್ಮ ಸೊಂಟದ ಕೊಬ್ಬು ಶೀಘ್ರವೇ ಕರಗುತ್ತದೆ.

English summary

Tips to lose belly fat in 1 month without any exercise

Belly fat is one of the toughest to lose, even according to nutritionists and fitness experts. This is because, the stomach region houses a number of visceral organs and so visceral fat gets stored in the abdominal region very easily. While a certain amount of fat is required to protect their organs, excess amounts of it deposited can give a person belly fat. Apart from making a person feel unfit and lowering their confidence levels, excess belly fat can also be extremely harmful for health.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more