For Quick Alerts
ALLOW NOTIFICATIONS  
For Daily Alerts

ತಿಂಗಳೊಳಗೆ ಹೊಟ್ಟೆಯ ಬೊಜ್ಜು ಕರಗಿಸುವ ಗಿಡಮೂಲಿಕೆಗಳು

By Sushma Charhra
|

ನೀವು ನಿಮ್ಮ ದೇಹದ ಸೊಂಟದ ಭಾಗದಲ್ಲಿರುವ ಕೊಬ್ಬಿನಾಂಶವನ್ನು ಕರಗಿಸುವ ವೈಟ್ ಲಾಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೀರಾ? ಒಂದು ವೇಳೆ ನಿಮ್ಮ ಉದ್ದೇಶ ಕೇವಲ ಬೆಲ್ಲಿ ಫ್ಯಾಟನ್ನು ಮಾತ್ರ ಕರಗಿಸುವುದೇ ಆದರೆ, ನಿಮ್ಮ ಡಯಟ್ಟಿನ ಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ನೀವು ಮಾಡಿಕೊಳ್ಳಬೇಕಾಗುತ್ತದೆ.

ಯಾವ ವ್ಯಕ್ತಿಗಳು ಅತಿಯಾದ ಬೆಲ್ಲಿಯ ಕೊಬ್ಬಿನಾಂಶ ಮತ್ತು ತೂಕದಿಂದ ಬಳಲುತ್ತಿರುತ್ತಾರೋ ಅವರು ಹಲವು ರೀತಿಯ ಅನಾರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಾರೆ.

ಇದು ರಕ್ತದೊಡ್ಡದಲ್ಲಿ ಹೆಚ್ಚಳ, ಡಯಾಬಿಟೀಸ್ ಸಮಸ್ಯೆ ಬರುವ ಸಾಧ್ಯತೆಯ ಹೆಚ್ಚಳ ಮತ್ತು ಹೃದಯದ ಸಮಸ್ಯೆಗಳಿಗೂ ಕಾರಣವಾಗಬಹುದು.
ಕೆಲವು ರೀತಿಯ ಜೀವನಶೈಲಿಯ ಬದಲಾವಣೆ ಮತ್ತು ತಾಜಾವಾಗಿ ಆಹಾರ ಸೇವನೆ, ಮನೆಯಲ್ಲೇ ತಯಾರಿಸಿದ ಆಹಾರಗಳನ್ನು ಸೇವಿಸುವುದು ಮತ್ತು ಪ್ರತಿದಿನ ವ್ಯಾಯಾಮದ ಅಭ್ಯಾಸ ಬೆಳೆಸಿಕೊಳ್ಳುವುದರಿಂದಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ಇದು ಒಂದೇ ದಿನದಲ್ಲಿ ಆಗುವುದಲ್ಲ ಬದಲಾಗಿ ನಿಧಾನವಾಗಿ ಆಗುವ ಪ್ರಕ್ರಿಯೆಯಾಗಿದೆ. ಒಂದು ವೇಳೆ ನೀವು ವೇಗವಾಗಿ ಫಲಿತಾಂಶ ಪಡೆಯಬೇಕು ಮತ್ತು ಕೂಡಲೇ ತೂಕವನ್ನು ಕಡಿಮೆಗೊಳಿಸಿಕೊಳ್ಳಬೇಕು ಎಂದರೆ ನಿಮ್ಮ ಡಯಟ್ ನಲ್ಲಿ ಕೆಲವು ರೀತಿಯ ಮೂಲಿಕೆಗಳನ್ನು ಬಳಸಿಕೊಳ್ಳುವುದು ಬಹಳ ಒಳ್ಳೆಯದು.

ಈ ಮೂಲಿಕೆಗಳು ನಿಮ್ಮ ಬೆಲ್ಲಿಯ ಕೊಬ್ಬಿನಾಂಶವನ್ನು ಕಳೆದುಕೊಳ್ಳಲು ನೆರವು ನೀಡುತ್ತೆ ಯಾಕೆಂದರೆ ಇವುಗಳಲ್ಲಿ ಪ್ರಬಲವಾದ ಸಂಯುಕ್ತಗಳಿರುತ್ತವೆ ಅದುವೇ ಫಾಲಿಫೀನಾಲ್, ಗ್ರೀನ್ ಟೀ ಯಿಂದಾಗಿ ಸಿಗುವ ಆಂಟಿ ಆಕ್ಸಿಡೆಂಟ್ ಇತ್ಯಾದಿ. ಈ ಮೂಲಿಕೆಗಳಲ್ಲಿರುವ ನೈಸರ್ಗಿಕ ಅಂಶಗಳು ಬೆಲ್ಲಿ ಫ್ಯಾಟ್ ಅಂಶವನ್ನು ಕರಗಿಸಲು ನೆರವು ನೀಡುತ್ತದೆ. ಹಾಗಾದ್ರೆ ಯಾವ 10 ಮೂಲಿಕೆಗಳು ನಿಮ್ಮ ಬೆಲ್ಲಿ ಫ್ಯಾಟನ್ನು ಕರಗಿಸಲು ನೆರವು ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳಿ...

1. ಜಿನ್ಸೆಂಗ್

1. ಜಿನ್ಸೆಂಗ್

ಜಿನ್ಸೆಂಗ್ ಹೆಚ್ಚು ದುಬಾರಿಯಾಗಿರುವ ಒಂದು ಮೂಲಿಕೆಯಾಗಿದ್ದು, ತೂಕ ಕಳೆದುಕೊಳ್ಳಲು ಬಹಳವಾಗಿ ನೆರವು ನೀಡುತ್ತದೆ. ಇದರಲ್ಲಿ ಕೆಫಿನ್ ಅಂಶವಿದ್ದು, ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ ಮತ್ತು ದಿನವಿಡೀ ನಿಮ್ಮ ದೇಹದ ಶಕ್ತಿಯನ್ನು ಹೆಚ್ಚಿಸಲು ನೆರವು ನೀಡುತ್ತದೆ. ಹಾಗಾಗಿ ನೀವು ಪ್ರತಿದಿನ ಜಿನ್ಸೆಂಗ್ ನಿಂದ ತಯಾರಿಸಿದ ಟೀ ಕುಡಿಯುವುದು ಬಹಳ ಒಳ್ಳೆಯದು.

2. ದಾಸವಾಳದ ಟೀ

2. ದಾಸವಾಳದ ಟೀ

ದಾಸವಾಳದ ಹೂವಿನ ಸಾರವು ತೂಕ ಕಡಿಮೆಗೊಳಿಸಲು ನೆರವು ನೀಡುತ್ತದೆ ಯಾಕೆಂದರೆ ಇದು ದೇಹದಲ್ಲಿರುವ ಹೆಚ್ಚಿನ ನೀರಿನಂಶವನ್ನು ತೆಗೆಯಲು ಸಹಾಯ ಮಾಡುತ್ತದೆ. ಒಣಗಿಸಿದ ದಾಸವಾಳದ ಹೂವಿನಲ್ಲಿ ಮೂತ್ರವರ್ಧಕ ಗುಣಗಳಿರುತ್ತದೆ ಮತ್ತು ಬ್ಲೋಟಿಂಗ್ ನ ಸಮಸ್ಯೆಯನ್ನು ತಡೆಯುವಲ್ಲಿ ನೆರವಾಗುತ್ತದೆ. ಅಷ್ಟೇ ಅಲ್ಲದೆ, ಶೇಖರಣೆಗೊಂಡಿರು ಕೊಬ್ಬಿನಂಶವನ್ನು ತೆದೆಯಲು ಮತ್ತು ಕಾರ್ಬೋಹೈಡ್ರೇಟ್ ಗಳು ದೇಹದಲ್ಲಿ ಹೀರಿಕೊಳ್ಳುವಿಕೆಯನ್ನು ಕಡಿಮೆಗೊಳಿಸಲು ಇದು ನೆರವಾಗುತ್ತದೆ.

ತಯಾರಿಸುವ ವಿಧಾನ ಬೇಕಾಗುವ ಸಾಮಾಗ್ರಿಗಳು

*ಚೆನ್ನಾಗಿ ಒಣಗಿಸಿದ ದಾಸವಾಳ ಹೂವಿನ ದಳಗಳು

*ಎರಡು ಚಮಚ ಸಕ್ಕರೆ

*ನೀರು - 1 ಕಪ್

*ಲಿಂಬೆಹಣ್ಣಿನ ರಸ - 2 ಟೀ.ಚಮಚ

*ಶುಂಠಿ - ಸಣ್ಣಕ್ಕೆ ಹೆಚ್ಚಿರುವುದು

ಮಾಡುವ ವಿಧಾನ

1. ತಳ ಆಳವಿರುವ ಪಾತ್ರೆಯಲ್ಲಿ ನೀರು ಬಿಸಿಗಿಟ್ಟು ಶುಂಠಿಯ ತುಂಡು ಮತ್ತು ದಾಸವಾಳ ದಳಗಳನ್ನು ಸೇರಿಸಿ 10 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿ. (ದಾಸವಾಳ ದಳಗಳು ಚೆನ್ನಾಗಿ ಕುದಿದಾಗ ಕೆಂಬಣ್ಣಕ್ಕೆ ತಿರುಗುತ್ತದೆ)

2. ಇದು ಚೆನ್ನಾಗಿ ಕುದಿದ ನಂತರ ಸೋಸಿಕೊಂಡು ಇದಕ್ಕೆ 2 ಚಮಚದಷ್ಟು ಸಕ್ಕರೆ ಮತ್ತು ಎರಡು ಟೀ ಚಮಚದಷ್ಟು ಲಿಂಬೆಯ ರಸವನ್ನು ಸೇರಿಸಿ

3. ಅರೋಗ್ಯಕರವಾದ ದಾಸವಾಳ ದಳಗಳ ಚಹಾವನ್ನು ಸವಿಯಿರಿ.

3. ಗ್ರೀನ್ ಟೀ

3. ಗ್ರೀನ್ ಟೀ

ಗ್ರೀನ್ ಟೀಯನ್ನು ತೂಕ ಇಳಿಸಿಕೊಳ್ಳುವಿಕೆಗೆ ಒಂದು ಅದ್ಭುತವಾದ ಮೂಲಿಕೆ ಎಂದು ಪರಿಗಣಿಸಲಾಗುತ್ತದೆ.ಇದು ಆಂಟಿಆಕ್ಸಿಡೆಂಟ್ ಗಳಿಂದ ಶ್ರೀಮಂತವಾಗಿದೆ ಮತ್ತು ಚಯಾಪಚಯ ಕ್ರಿಯೆಯನ್ನು ವೃದ್ಧಿಸುವ ತಾಕತ್ತು ಇದರಲ್ಲಿ ಅಧಿಕವಾಗಿದೆ ಹಾಗಾಗಿ ತೂಕ ಇಳಿಕೆಗೆ ಇದು ಬಹಳವಾಗಿ ನೆರವಾಗುತ್ತದೆ. ಕೇವಲ ಬೆಲ್ಲಿ ಫ್ಯಾಟ್ ಕರಗಿಸಲು ಮಾತ್ರವಲ್ಲ ಬದಲಾಗಿ ಕ್ಯಾನ್ಸರ್ ಮತ್ತು ಡಯಾಬಿಟೀಸ್ ಸಮಸ್ಯೆಯ ನಿಯಂತ್ರಣಕ್ಕೂ ಇದು ನೆರವಾಗಲಿದೆ.

4. ಪುದೀನಾ

4. ಪುದೀನಾ

ಪುದೀನಾವು ಅದ್ಭುತ ಪರಿಮಳವಿರುವ ಒಂದು ಮೂಲಿಕೆಯಾಗಿದ್ದು, ಹಲವಾರು ಅಡುಗೆಗಳಲ್ಲಿ ಅಧ್ಬುತ ಪರಿಮಳ ನೀಡಲು ಬಳಕೆಯಾಗುತ್ತೆ ಮತ್ತು ಇದು ಬೆಲ್ಲಿ ಫ್ಯಾಟ್ ಕರಗಿಸಲು ಬಹಳವಾಗಿ ನೆರವು ನೀಡುತ್ತದೆ. ಇದು ದೇಹದಿಂದ ಅನಗತ್ಯವಾದ ವಸ್ತುಗಳು ಮತ್ತು ಟಾಕ್ಸಿನ್ ಅಂಶವನ್ನು ದೇಹದಿಂದ ಹೊರಹಾಕಲು ಮತ್ತು ಜೀರ್ಣಕ್ರಿಯೆಗೆ ನೆರವು ನೀಡುತ್ತದೆ ಮತ್ತು ಹೊಟ್ಟೆಯಲ್ಲಿ ಗುಳುಗುಳು ಶಬ್ಧ ಬಂದಂತೆ ಭಾಸವಾಗುವ ಸಮಸ್ಯೆಯಿಂದ ಪರಿಹಾರ ನೀಡುತ್ತದೆ. ಪುದೀನಾ ಟೀ ಸೇವಿಸಬಹುದು ಅಥವಾ ನಿಮ್ಮ ಯಾವುದಾದರೂ ಅಡುಗೆಯಲ್ಲಿ ಪುದೀನಾ ಬಳಕೆ ಮಾಡಬಹುದು.

5.ರೋಸ್ಮೆರಿ

5.ರೋಸ್ಮೆರಿ

ಅಡುಗೆಗಳಲ್ಲಿ ಬಳಸುವ ಅತ್ಯಂತ ಹೆಚ್ಚು ಪ್ರಸಿದ್ಧ ಮೂಲಿಕೆ ಎಂದರೆ ಅದು ರೋಸ್ಮರಿ.ಲಿಪೇಸ್ ಅನ್ನೋ ಎನ್ಝೈಮ್ ಗಳಿಂದ ಇದು ಶ್ರೀಮಂತವಾಗಿದೆ ಮತ್ತು ಇದು ದೇಹದಲ್ಲಿರುವ ಫ್ಯಾಟ್ ಮಾಲಿಕ್ಯೂಲ್ ಗಳನ್ನು ಕರಗಿಸಲು ಬಹಳ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುತ್ತದೆ. ರೋಸ್ಮೆರಿ ಬೆಲ್ಲಿ ಫ್ಯಾಟನ್ನು ಕರಗಿಸಲು ಸಹಾಯ ಮಾಡುತ್ತೆ ಯಾಕೆಂದರೆ ಇದರಲ್ಲಿ ಫೈಬರ್ ಅಂಶವಿದ್ದು, ಇದು ಫ್ಯಾಟ್ ಹೀರುವಿಕೆಯನ್ನು ತಡೆಯುತ್ತದೆ ಮತ್ತು ಹೆಚ್ಚು ಗಂಟೆಗಳ ಕಾಲ ನೀವು ಫುಲ್ ಆಗಿರುವಂತೆ ನೋಡಿಕೊಳ್ಳುತ್ತದೆ.

6. ಅಲೋವೆರಾ

6. ಅಲೋವೆರಾ

ಅಲವೀರಾವು ಹೆಚ್ಚಿನವರಿಗೆ ತಿಳಿದಿರುವ ಪ್ರಸಿದ್ಧ ಮೂಲಿಕೆಯಾಗಿದ್ದು, ಇದರಲ್ಲಿ ಹಲವಾರು ಆರೋಗ್ಯದ ಲಾಭಗಳಿವೆ.ಇದನ್ನು ಕೂದಲು, ಚರ್ಮ ಇತ್ಯಾದಿಗಳ ಸಮಸ್ಯೆಗಳನ್ನು ಪರಿಹರಿಸಲು ಬಳಸಲಾಗುತ್ತದೆ ಮತ್ತು ತೂಕ ಇಳಿಸುವಿಕೆಗೂ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.. ಅಲವೀರಾದಲ್ಲಿ ಆಂಟಿಆಕ್ಸಿಡೆಂಟ್ ಗಳಿದ್ದು, ಇದು ದೇಹವನ್ನು ಡೀಟಾಕ್ಸಿಫೈ ಮಾಡಲು ಸಹಾಯಕವಾಗಿದೆ ಮತ್ತು ಚಯಾಪಚಯ ಕ್ರಿಯೆಯ ವರ್ಧನೆಗೆ ಸಹಕಾರಿ ಅಷ್ಟೇ ಅಲ್ಲ ಬೆಲ್ಲಿ ಫ್ಯಾಟ್ ಕರಗಿಸಲೂ ಕೂಡ ಇದು ಸಹಾಯಕ... ಪ್ರತಿ ದಿನ ಬೆಳಿಗ್ಗೆ ಅಲವೀರಾ ಜ್ಯೂಸ್ ಸೇವನೆಯಿಂದ ಬೇಗನೆ ತೂಕ ಕಳೆದುಕೊಳ್ಳಬಹುದಾಗಿದೆ.

7. ಪಾರ್ಸ್ಲಿ

7. ಪಾರ್ಸ್ಲಿ

ಪಾರ್ಸೀಯನ್ನು ಹೆಚ್ಚಾಗಿ ಆಹಾರದ ಅಲಂಕಾರಕ್ಕೆ ಬಳಸಲಾಗುತ್ತೆ. ಆದರೆ ನಿಮಗೆ ಗೊತ್ತಾ, ಈ ಅಧ್ಬುತ ಮೂಲಿಕೆ ನಿಮ್ಮ ಬೆಲ್ಲಿ ಫ್ಯಾಟ್ ಕರಗಿಸಲು ನೆರವಿಗೆ ಬರುತ್ತದೆ. ಪಾರ್ಸಿಯು ರಕ್ತದಲ್ಲಿರುವ ಗ್ಲುಕೋಸ್ ಅಂಶವನ್ನು ಗಣನೀಯವಾಗಿ ಕಡಿಮೆ ಮಾಡಲು ನೆರವಿಗೆ ಬರುತ್ತದೆ ಮತ್ತು ಆ ಮೂಲಕ ಹಸಿವನ್ನು ಕಡಿಮೆ ಮಾಡುತ್ತದೆ. ಆಹಾರವು ಶಕ್ತಿಯಾಗಿ ಬಳಕೆಯಾಗುವುದನ್ನು ಇದು ಪ್ರೊತ್ಸಾಹಿಸುತ್ತದೆಯೇ ಹೊರತು ದೇಹದಲ್ಲಿ ಕೊಬ್ಬಿನಂಶವಾಗಿ ಶೇಕರಣೆಗೊಳ್ಳುವುದಕ್ಕೆ ಇದು ಬಿಡುವುದಿಲ್ಲ.

8. ಡ್ಯಾಂಡಲಿಯನ್

8. ಡ್ಯಾಂಡಲಿಯನ್

ಡ್ಯಾಂಡಲಿಯನ್ ಒಂದು ಶಕ್ತಿಶಾಲಿಯಾದ ತೂಕ ಇಳಿಕೆಗೆ ನೆರವು ನೀಡುವ ವಸ್ತುವಾಗಿದೆ. ಇದರ ಪ್ರತಿಯೊಂದು ಭಾಗವನ್ನು ನೀವು ತಿನ್ನಬಹುದಾಗಿದೆ ಮತ್ತು ಇದು ನಿಮ್ಮ ದೇಹದ ಟಾಕ್ಸಿನ್ಸ್ ನ್ನು ನ್ಯೂಟ್ರಲೈಸ್ ಮಾಡುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡಲು ನೆರವು ನೀಡುತ್ತದೆ. ಡ್ಯಾಂಡಲಿಯನ್ ಗಳ ಎಲೆಗಳು ಬೆಲ್ಲಿ ಫ್ಯಾಟ್ ಕರಗಿಸಲು ಬಹಳವಾಗಿ ಉಪಕಾರಿಯಾಗಿದೆ , ನೀವಿದನ್ನು ಟೀ ರೂಪದಲ್ಲೂ ಸೇವಿಸಬಹುದು ಇಲ್ಲವೇ ಸಲಾಡ್ ಗಳಲ್ಲೂ ಬಳಕೆ ಮಾಡಬಹುದಾಗಿದೆ.

9. ಹಾಲು ಥಿಸಲ್

9. ಹಾಲು ಥಿಸಲ್

ಹಾಲು ಥಿಸಲ್ ಅನ್ನುವುದು ಒಂದು ಸಸ್ಯಜನ್ಯ ಸಾರವಾಗಿದ್ದು, ಇದನ್ನು ಯಕೃತ್ತಿನ ಆರೋಗ್ಯವನ್ನು ಹೆಚ್ಚಿಸಲು ಪ್ರಮುಖವಾಗಿ ಬಳಕೆ ಮಾಡಲಾಗುತ್ತೆ.ಆದರೆ ಇದು ಒಂದು ಕೊಬ್ಬು ಕರಗಿಸುವ ಸಾಧನವೂ ಹೌದಾಗಿದೆ.ಹಾಲು ಥಿಸಲ್ ನಲ್ಲಿ ಅಗತ್ಯವಾದ ಕೆಲವು ವಸ್ತುಗಳಿದ್ದು, ಇವು ಲಿವರ್ ನಲ್ಲಿನ ಟಾಕ್ಸಿನ್ ಗಳನ್ನು ಸ್ವಚ್ಛಗೊಳಿಸುತ್ತದೆ. ಇದು ದೇಹವನ್ನು ಸರಿಯಾಗಿ ಗ್ಲುಕೋಸ್ ನ್ನು ಬಳಸಿಕೊಳ್ಳುವಂತೆ, ಮತ್ತು ಸಕ್ಕರೆಯು ಅನಗತ್ಯವಾಗಿ ಕೊಬ್ಬಿನಂಶವಾಗಿ ದೇಹದಲ್ಲಿ ಶೇಖರಣೆಯಾಗದಂತೆ ತಡೆಯಲು ನೆರವು ನೀಡುತ್ತದೆ.

10. ಹೋಲಿ ಬೆಸಿಲ್ (ತುಳಸಿ)

10. ಹೋಲಿ ಬೆಸಿಲ್ (ತುಳಸಿ)

ಹೋಲಿ ಬೆಸಿಲ್ ಕೂಡ ಒಂದು ಔಷಧೀಯ ಸಸ್ಯವಾಗಿದ್ದು, ತೂಕ ಇಳಿಸುವಿಕೆಗೂ ಇದಕ್ಕೂ ಒಂದಕ್ಕೊಂದು ಸಂಬಂಧ ಇದೆ. ಯಾಕೆಂದರೆ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುವ ತಾಕತ್ತು ಇದಕ್ಕಿದೆ. ಒಂದು ವೇಳೆ ನಿಮ್ಮ ಕಾರ್ಟಿಸೋಲ್ ಮಟ್ಟ ಅಧಿಕವಾಗಿದ್ದಾರೆ, ನೀವು ತೂಕ ಹೆಚ್ಚಳವಾಗುತ್ತೀರಿ ಅದರಲ್ಲೂ ಪ್ರಮುಖವಾಗಿ ನಿಮ್ಮ ಸೊಂಟದ ಕೆಳಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೊಜ್ಜು ಶೇಖರಣೆಗೊಳ್ಳುತ್ತದೆ. ಆದರೆ ಆಯುರ್ವೇದದ ಪ್ರಕಾರ , ಇದನ್ನು ಕರಗಿಸುವ ತಾಕತ್ತು ಹೋಲಿ ಬೆಸಿಲ್ ಗೆ ಇದೆ. ಹಾಗಾಗಿ ನಿತ್ಯ ತುಳಸಿ ಚಹಾ ಸೇವಿಸಿ

ತುಳಸಿ ಚಹಾ ತಯಾರಿಸುವ ವಿಧಾನ

*ಒಂದು ಪಾತ್ರೆಯಲ್ಲಿ ಒಂದು ಕಪ್ ನೀರು ಮತ್ತು 5-7 ತುಳಸಿ ಎಲೆಯನ್ನು ಸೇರಿಸಿ.

*ಪಾತ್ರೆಗೆ ಮುಚ್ಚಳವನ್ನು ಮುಚ್ಚಿ ಸಣ್ಣ ಉರಿಯಲ್ಲಿ 10 ನಿಮಿಷಗಳ ಕಾಲ ಕುದಿಸಿ.

*ನಂತರ ಉರಿಯನ್ನು ಆರಿಸಿ, ಚಹಾವನ್ನು ತಣಿಯಲು ಬಿಡಿ. *ಉಗುರು ಬೆಚ್ಚಗಿರುವಾಗಲೇ ಸೇವಿಸಬಹುದು.

*ಬೇಕಿದ್ದರೆ ಆರೋಗ್ಯ ಉತ್ಪನ್ನಗಳಾದ ಶುಂಠಿ, ಏಲಕ್ಕಿ, ಕರಿಮೆಣಸು, ಲವಂಗ ಹಾಗೂ ಕೆಲವು ಮಸಾಲೆ ಗಿಡಮೂಲಿಕೆಗಳನ್ನು ಸೇರಿಸಬಹುದು.

*ಇದನ್ನು ನಿತ್ಯವೂ ಸೇವಿಸಬಹುದು. ಇಲ್ಲವೇ ಅಗತ್ಯವಿದ್ದಾಗ ಸೇವಿಸಬಹುದು.

English summary

Superb Herbal Remedies for burn belly fat fast

Making a few lifestyle changes such as eating fresh, healthy home-cooked meals and exercising on a regular basis to lose weight can be a slow process. In order to get fast and effective results that will help increase your weight loss, you can include certain herbs in your diet plan. Herbs can cut off belly fat because they contain potent compounds such as polyphenol antioxidants found in green tea. These natural compounds of the herbs help to get rid of the belly fat fast. So, read to know more about the 10 herbs that help burn belly fat fast.
Story first published: Friday, June 15, 2018, 12:46 [IST]
X
Desktop Bottom Promotion