For Quick Alerts
ALLOW NOTIFICATIONS  
For Daily Alerts

ಸೂಪ್ ರೆಸಿಪಿ: ತಿಂಗಳೊಳಗೆ ದೇಹದ 10 ಕೆಜಿಯಷ್ಟು ತೂಕ ಇಳಿಕೆ!

By Arshad
|

ಸೂಪ್ ಆರೋಗ್ಯಕರ ದ್ರವಾಹಾರ ಮಾತ್ರವಲ್ಲ, ತೂಕ ಇಳಿಕೆಗೂ ಸೂಕ್ತವಾಗಿದೆ. ನಮ್ಮ ದೇಹಕ್ಕೆ ದ್ರವಾಹಾರ ಹೆಚ್ಚು ಉತ್ತಮವಾಗಿದೆ, ಏಕೆಂದರೆ ಇದರಲ್ಲಿ ಹೆಚ್ಚಿನ ನೀರು ಇರುವ ಕಾರಣ ಸುಲಭವಾಗಿ ಪಚನಗೊಳ್ಳುತ್ತದೆ ಹಾಗೂ ಕರುಳುಗಳಲ್ಲಿ ಹೀರಲ್ಪಡುತ್ತದೆ. ಆದ್ದರಿಂದ ಘನ ಆಹಾರಗಳಿಗಿಂತಲೂ ದ್ರವಾಹಾರದಲ್ಲಿರುವ ಪೋಷಕಾಂಶಗಳೇ ಸುಲಭವಾಗಿ ಜೀರ್ಣಗೊಂಡು ದೇಹಕ್ಕೆ ಲಭ್ಯವಾಗುತ್ತವೆ. ಕೆಲವು ಸೂಪ್‍ಗಳು ಹಸಿವನ್ನು ಹೆಚ್ಚಿಸುವ ಕಾರಣದಿಂದ ಊಟಕ್ಕೂ ಮೊದಲು ಬಡಿಸಲಾಗುತ್ತದೆ. ಆದರೆ ಕೆಲವು ಸೂಪ್‌ಗಳು ನಿಮ್ಮ ಹಸಿವನ್ನು ತಣಿಸಿ ಇನ್ನಷ್ಟು ತಿನ್ನದಿರಲು ನೆರವಾಗುತ್ತವೆ.

ತೂಕ ಇಳಿಸಲು ಈ ಬಗೆಯ ಸೂಪ್ ಗಳು ಉತ್ತಮ ಆಯ್ಕೆಯಾಗಿವೆ. ಇವುಗಳ ಸೇವನೆಯಿಂದ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ದೇಹದಿಂದ ಹೆಚ್ಚು ಕ್ಯಾಲೋರಿಗಳನ್ನು ಖರ್ಚುಮಾಡಿಸಲು ನೆರವಾಗುತ್ತದೆ. ಅಲ್ಲದೇ ಹೊಟ್ಟೆ ತುಂಬಿರುವ ಭಾವನೆಯುಂಟುಮಾಡಿ ಅನಾರೋಗ್ಯಕರ ಆಹಾರಗಳಾದ ಕ್ಯಾಂಡಿ, ಸಿದ್ಧ ಆಹಾರ, ಕುರುಕು ತಿಂಡಿ ಅಥವಾ ಸಕ್ಕರೆ ಭರಿತ ಆಹಾರಗಳ ಸೇವನೆಯಿಂದ ತಡೆಯುತ್ತದೆ.

ಈ ಸೂಪ್ ಹೊಟ್ಟೆಗೆ ಸೇರಿದ ತಕ್ಷಣ ಹೊಟ್ಟೆ ತುಂಬಿರುವ ಸಂಕೇತ ಮೆದುಳಿಗೆ ತಲುಪಿ ಅಹ್ಲಾದಕರವಾದ ಅನುಭೂತಿ ಪಡೆಯುವ ಮೂಲಕ ಇನ್ನಷ್ಟು ತಿನ್ನದಿರಲು ನೆರವಾಗುತ್ತದೆ. ಇಂದಿನ ಲೇಖನದಲ್ಲಿ ಈ ಗುಣವಿರುವ ಕೆಲವು ಸೂಪ್ ಗಳನ್ನು ಪ್ರಸ್ತುತಪಡಿಸಲಾಗಿದ್ದು ನಿಮ್ಮ ಆಹಾರಕ್ರಮವನ್ನು ಈ ಸೂಪ್ ಗಳಿಗೆ ಬದಲಿಸಿಕೊಳ್ಳುವ ಮೂಲಕ ಕೇವಲ ಒಂದೇ ತಿಂಗಳಲ್ಲಿ ಸುಮಾರು ಹತ್ತು ಕೇಜಿಗಳಷ್ಟು ತೂಕವನ್ನು ಕಳೆದುಕೊಳ್ಳಲು ಸಾಧ್ಯ....

ಬಿಸಿ ಮತ್ತು ಹುಳಿ ಕೋಸಿನ ಸೂಪ್

ಬಿಸಿ ಮತ್ತು ಹುಳಿ ಕೋಸಿನ ಸೂಪ್

ಈ ಸೂಪ್ ತಯಾರಿಸಲು ಮೊದಲು ಕೊಂಚ ಕೋಸು ಮತ್ತು ಈರುಳ್ಳಿಯನ್ನು ಕೊಚ್ಚಿ ಆಲಿವ್ ಎಣ್ಣೆಯಲ್ಲಿ ಚಿಕ್ಕ ಉರಿಯಲ್ಲಿ ಹತ್ತು ನಿಮಿಷ ಬಾಡಿಸಬೇಕು. ಬಳಿಕ ಕಾಳುಮೆಣಸು, ಉಪ್ಪು, ಸೇಬಿನ ಶಿರ್ಕಾ ಹಾಗೂ ಟೊಮಾಟೋ ಬೆರೆಸಬೇಕು. ಕೊಂಚ ನೀರು ಹಾಕಿ ಇಪ್ಪತ್ತು ನಿಮಿಷ ಚಿಕ್ಕ ಉರಿಯಲ್ಲಿ ಕುದಿಸಿದರೆ ಸೂಪ್ ಸಿದ್ಧವಾಗಿದೆ. ಇದರಲ್ಲಿ ಕೇವಲ 248 ಕ್ಯಾಲೋರಿಗಳಿದ್ದು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಗುಣವಿರುವ ಕಾರಣ ತೂಕ ಇಳಿಕೆ ಶೀಘ್ರವಾಗುತ್ತದೆ.

ಕಪ್ಪು ಬೀನ್ಸ್ ಸೂಪ್

ಕಪ್ಪು ಬೀನ್ಸ್ ಸೂಪ್

ನಾಲ್ಕು ಬೆಳ್ಳುಳ್ಳಿ ಎಸಳು, ಒಂದು ಕೊಚ್ಚಿದ ನೀರುಳ್ಳಿ, ಒಂದು ದೊಡ್ಡ ಚಮಚ ಜೀರಿಗೆ ಇಷ್ಟನ್ನೂ ಆಲಿವ್ ಎಣ್ಣೆಯಲ್ಲಿ ಬಾಡಿಸಿ ಬಳಿಕ ಮೂರು ಟೊಮಾಟೋ, ನಾಲ್ಕು ಹಸಿಮೆಣಸು ಹಾಗೂ ರಾತ್ರಿಯಿಡೀ ನೆನೆಸಿಟ್ಟ ಕಪ್ಪು ಬೀನ್ಸ್ ಗಳನ್ನು ಹಾಕಿ ಸಾಕಷ್ಟು ನೀರು ಬೆರೆಸಿ ಸುಮಾರು ಇಪ್ಪತ್ತು ನಿಮಿಷ ಕುದಿಸಿ. ಬೇಗ ಆಗಬೇಕೆಂದರೆ ಕುಕ್ಕರ್ ಬಳಸಬಹುದು. ಈ ಸೂಪ್ ನಲ್ಲಿ ಕೇವಲ 245 ಕ್ಯಾಲೋರಿಗಳಿವೆ ಹಾಗೂ ಹತ್ತು ಗ್ರಾಂ ಪ್ರೋಟೀನ್ ಇದೆ. ಇವು ಸೊಂಟದ ಕೊಬ್ಬು ಕರಗಿಸಲು ನೆರವಾಗುತ್ತವೆ.

ಕುಂಬಳ ಮತ್ತು ಚೀಸ್ ಸೂಪ್

ಕುಂಬಳ ಮತ್ತು ಚೀಸ್ ಸೂಪ್

ಇದೊಂದು ಹೆಚ್ಚಿನ ಶಕ್ತಿ ನೀಡುವ ಸೂಪ್ ಆಗಿದ್ದು ಹೆಚ್ಚು ಹೊತ್ತಿನವರೆಗೆ ಹೊಟ್ಟೆ ತುಂಬಿರುವಂತಹ ಭಾವನೆಯನ್ನು ಮೂಡಿಸುತ್ತದೆ ಹಾಗೂ ವಿಶೇಷವಾಗಿ ಸಕ್ಕರೆ ತುಂಬಿದ ಖಾದ್ಯಗಳನ್ನು ತಿನ್ನದಿರುವಂತೆ ತಡೆಯುತ್ತದೆ. ಇದನ್ನು ತಯಾರಿಸಲು ಒಂದು ಕೊಚ್ಚಿದ ಈರುಳ್ಳಿ, ಮೂರು ಹಸಿಮೆಣಸು, ಒಂದು ದೊಡ್ಡ ಚಮಚ ಕಾಳುಮೆಣಸು ಹಾಗೂ ಒಂದು ದೊಡ್ಡ ಚಮಚ ಚೀಸ್ ಹಾಗೂ ಸುಮಾರು ನೂರು ಗ್ರಾಂ ನಷ್ಟು ಕುಂಬಳ ತಿರುಳನ್ನು ಚಿಕ್ಕದಾಗಿ ಕತ್ತರಿಸಿ ಸಾಕಷ್ಟು ನೀರಿನಲ್ಲಿ ಇಪ್ಪತ್ತು ನಿಮಿಷ ಕುದಿಸಿ.

ಬಿಸಿ ಕ್ಯಾರೆಟ್ ಮತ್ತು ಬೆಳ್ಳುಳ್ಳಿ ಸೂಪ್

ಬಿಸಿ ಕ್ಯಾರೆಟ್ ಮತ್ತು ಬೆಳ್ಳುಳ್ಳಿ ಸೂಪ್

ಒಂದು ಚಿಕ್ಕ ಕ್ಯಾರೆಟ್ ತುರಿ, ಕೆಂಪು ಮೆಣಸನ್ನು ಕುಟ್ಟಿ ಮಾಡಿದ ಪುಡಿ ಹಾಗೂ ಕೆಲವು ಎಸಳು ಬೆಳ್ಳುಳ್ಳಿಗಳನ್ನು ಜಜ್ಜಿ ಆಲಿವ್ ಎಣ್ಣೆಯಲ್ಲಿ ಐದು ನಿಮಿಷ ಭಾಡಿಸಿ. ಬಳಿಕ ನೀರು ಸೇರಿಸಿ ಕ್ಯಾರೆಟ್ ಬೇಯುವವರೆಗೂ ಕುದಿಸಿ. ಕೊನೆಗೆ ಕೊಂಚವೇ ಚಿಲ್ಲಿ ಸಾಸ್ ಹಾಕಿ ಮಿಶ್ರಣ ಮಾಡಿ. ಸೂಪ್ ಸಿದ್ಧವಾಗಿದೆ. ಈ ಸೂಪ್ ಕೊಂಚ ಖಾರವಾಗಿದ್ದರೂ ಹೆಚ್ಚಿನ ಕ್ಯಾಲೋರಿಗಳನ್ನು ಶೀಘ್ರವೇ ಕರಗಿಸುತ್ತದೆ. ಈ ಸೂಪ್ ಅನ್ನು ರಾತ್ರಿಯೂಟಕ್ಕೆ ಮೊದಲು ಸೇವಿಸಬೇಕು.

ತಣ್ಣನೆಯ ಸೌತೆಯ ಸೂಪ್

ತಣ್ಣನೆಯ ಸೌತೆಯ ಸೂಪ್

ತಣ್ಣನೆಯ ಸೂಪ್ ಗಳು ದೇಹದ ಕ್ಯಾಲೋರಿಗಳನ್ನು ವೇಗವಾಗಿ ಬಳಸಿಕೊಳ್ಳುತ್ತವೆ, ಏಕೆಂದರೆ ದೇಹವನ್ನು ಬಿಸಿಯಾಗಿಸಲು ಇವು ಕ್ಯಾಲೋರಿಗಳನ್ನು ಖರ್ಚು ಮಾಡಬೇಕಾಗಿ ಬರುತ್ತದೆ. ಈ ಸೂಪ್ ತಯಾರಿಸಲು ಒಂದು ಎಳೆಯ ಸೌತೆಯ ಬಿಲ್ಲೆಗಳನ್ನು ನೀರಿನಲ್ಲಿ ಮೃದುವಾಗುವವರೆಗೂ ಬೇಯಿಸಿ. ಬಳಿಕ ಉರಿ ಆರಿಸಿ ತಣಿಯಲು ಬಿಡಿ. ಬಳಿಕ ಕೊಂಚ ಮೊಸರು, ಕೊಂಚ ಹಾಲು ಮತ್ತು ಉಪ್ಪು ಬೆರೆಸಿ ಮಿಕ್ಸಿಯಲ್ಲಿ ನುಣ್ಣಗೆ ಕಡೆಯಿರಿ. ಬಳಿಕ ಬಾಟಲಿಯಲ್ಲಿ ಹಾಕಿ ಫ್ರಿಜ್ಜಿನಲ್ಲಿಡಿ. ಈ ಸೂಪ್ ಅನ್ನು ಮಧ್ಯಾಹ್ನದ ಊಟಕ್ಕೂ ಮೊದಲು ತಣ್ಣಗಿದ್ದಂತೆಯೇ ಸೇವಿಸಿ.

 ಬೀಟ್ರೂಟ್ ಮತ್ತು ಬೆಳ್ಳುಳ್ಳಿ ಸೂಪ್

ಬೀಟ್ರೂಟ್ ಮತ್ತು ಬೆಳ್ಳುಳ್ಳಿ ಸೂಪ್

ಇದು ತೂಕ ಇಳಿಸಲು ಮಾತ್ರವಲ್ಲ, ರಕ್ತಕಣಗಳನ್ನು ಹೆಚ್ಚಿಸಲೂ ನೆರವಾಗುತ್ತದೆ. ಇದರ ಸೇವನೆಯಿಂದ ಚರ್ಮದ ಕಾಂತಿ ಹೆಚ್ಚುತ್ತದೆ ಹಾಗೂ ಕೂದಲು ಸಹಾ ಸೊಂಪಗಾಗುತ್ತದೆ. ಈ ಸೂಪ್ ತಯಾರಿಸಲು ಒಂದು ಬೀಟ್ರೂಟ್ ಅನ್ನು ಇಡಿಯಾಗಿ ಪ್ರೆಶರ್ ಕುಕ್ಕರಿನಲ್ಲಿ ನಾಲ್ಕು ಸೀಟಿ ಬರುವವರೆಗೆ ಕುದಿಸಿ. ಬಳಿಕ ಇದನ್ನು ಚಿಕ್ಕದಾಗಿ ಕೊಚ್ಚಿ ಹಿಂಡಿ ರಸ ಸಂಗ್ರಹಿಸಿ. ಒಂದು ಪಾತ್ರೆಯಲ್ಲಿ ಕೊಂಚ ಓಟ್ಸ್ ರವೆ, ಈರುಳ್ಳಿ, ಟೊಮಾಟೋ ಹಾಗೂ ಬೀಟ್ರೂಟ್ ನೀರನ್ನು ಹಾಕಿ ಸುಮಾರು ಹತ್ತು ನಿಮಿಷದವರೆಗೆ ಕುದಿಸಿ. ಬಿಸಿಯಾಗಿದ್ದಂತೆಯೇ ಸೂಪ್ ಕುಡಿಯಲು ರುಚಿಕರವಾಗಿರುತ್ತದೆ.

English summary

Soup Diet Lose 10 Pounds In A Week Guaranteed

Soups are best to lose weight and make you healthy. Having liquid food is good, as it is easy to digest and also gets absorbed well. This means that the nutrients present in soup are all well digested and absorbed by the body as compared to the solid foods. Some soups serve as appetisers, as they are served before main course to increase your hunger. However, some soups can suppress your hunger and make you feel satisfied.
X
Desktop Bottom Promotion