For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಬೊಜ್ಜು ಕರಗಿಸಲು ಕೆಲ ವಿಧಾನಗಳು

By Hemanth
|

ಸ್ಲಿಮ್ ಆಗಿ ಫಿಟ್ ಇರಲು ಯಾರಿಗೆ ಇಷ್ಟವಿರಲ್ಲ ಹೇಳಿ? ಪ್ರತಿಯೊಬ್ಬರು ಬಯಸುವುದು ಇದನ್ನೇ. ಆರೋಗ್ಯವಂತ ದೇಹವಿದ್ದರೆ ಆಗ ಎಲ್ಲಾ ಸುಖಗಳು ಸಿಕ್ಕಿದಂತೆ ಇಂತಹ ಸಮಯದಲ್ಲಿ ಬೊಜ್ಜು ಬೆಳೆಸಿಕೊಂಡ ದೇಹದವರು ಪಡುತ್ತಿರುವಂತಹ ಪಾಡು ಅಷ್ಟಿಷ್ಟಲ್ಲ. ಯಾಕೆಂದರೆ ಬೊಜ್ಜು ದೇಹವು ನಮಗೆ ಮುಜುಗರ ಉಂಟುಮಾಡುವುದು ಮಾತ್ರವಲ್ಲದೆ, ಇದು ನೋಡುವವರಿಗೂ ಅಸಹ್ಯವಾಗಿ ಕಾಣಿಸುವುದು. ಆದರೆ ಏನು ಮಾಡುವುದು ಜೀವನಶೈಲಿ, ವೈದ್ಯಕೀಯ ಸಮಸ್ಯೆ ಹಾಗೂ ಕೆಲವೊಂದು ಸಲ ಅನುವಂಶೀಯವಾಗಿ ಬೊಜ್ಜು ಬರುವುದಿದೆ. ಇಂತಹ ಬೊಜ್ಜು ದೇಹದಿಂದಾಗಿ ಹೃದಯಾಘಾತ, ಪಾರ್ಶ್ವವಾಯು ಅಥವಾ ಮಧುಮೇಹ ಕಾಣಿಸಿಕೊಳ್ಳುವುದು.

ಹೊಟ್ಟೆಯ ಬೊಜ್ಜಿನಿಂದಾಗಿ ಕ್ಯಾನ್ಸರ್ ಸಹಿತ 39 ರೀತಿಯ ಕಾಯಿಲೆಗಳು ದೇಹವನ್ನು ಭಾದಿಸಬಹುದು. ಇದಕ್ಕಾಗಿ ಆರೋಗ್ಯಕರವಾದ ತೂಕ ಕಾಪಾಡಿಕೊಂಡು ಹೋಗುವುದು ಅತೀ ಅಗತ್ಯ. ಇದಕ್ಕಾಗಿ ನೀವು ಈ ಲೇಖನ ಓದಲೇಬೇಕು. ಇದರಲ್ಲಿ ಆರೋಗ್ಯಕರ ಆಹಾರ ಕ್ರಮ ಮತ್ತು ಕೆಲವೊಂದು ವ್ಯಾಯಾಮಗಳನ್ನು ಸೂಚಿಸಲಾಗಿದೆ. ಇದನ್ನು ಪಾಲಿಸಿಕೊಂಡು ಹೋಗಿ.

how to reduce belly fat in men

ಆಹಾರ ಪಥ್ಯ

ಬೊಜ್ಜು ಕರಗಿಸಬೇಕೆಂದು ಹೋಗುವವರ ಆಹಾರ ಪಥ್ಯವು ಎರಡು ಕಾರಣಗಳಿಂದಾಗಿ ವಿಫಲವಾಗುವುದು. ಮೊದಲನೇಯದಾಗಿ ಅವರು ತಿನ್ನುವ ಆಹಾರದ ಮೇಲೆ ಹೆಚ್ಚಿನ ನಿರ್ಬಂಧ ಹಾಕಿರುವರು ಅಥವಾ ಏನೂ ತಿನ್ನಲಿಲ್ಲ ಎನ್ನುವ ಭಾವನೆಯು ಅವರಲ್ಲಿ ಮೂಡುವುದು. ಇದರಿಂದಾಗಿ ಆಹಾರ ಪಥ್ಯವನ್ನು ಬಿಟ್ಟು ಮತ್ತೆ ಹಳೆ ಅಭ್ಯಾಸಗಳತ್ತ ಹೋಗಲಿದ್ದೀರಿ.

ಇದೇ ವೇಳೆ ಸಮಸ್ಯೆಯು ಆರಂಭವಾಗುವುದು. ಏನು ಮಾಡಬೇಕೆಂದು ನಿಮಗೆ ತೋಚುವುದಿಲ್ಲ. ಹೊಟ್ಟೆಯ ಬೊಜ್ಜು ಕರಗುವಂತೆ ಮಾಡಲು ನೀವು ಸಕ್ಕರೆಯುಕ್ತ ಮತ್ತು ಸಂಸ್ಕರಿತ ಆಹಾರ ಸೇವನೆ ನಿಲ್ಲಿಸಬೇಕು. ಇಡೀ ಆಹಾರ ಮತ್ತು ನಾರಿನಾಂಶ ಹೆಚ್ಚಿರುವ ಆಹಾರ ಸೇವನೆ ಮಾಡಬೇಕು. ಕಾರ್ಬ್ರೋಹೈಡ್ರೇಟ್ಸ್ ಸೇವನೆ ಕಡೆ ನೀವು ಗಮನಹರಿಸಬೇಕು. ಕಾರ್ಬ್ಸ್ ನಿಂದ ಸುಮಾರು 40ಶೇ. ಕ್ಯಾಲರಿ ಸೇವನೆಯು ಬೊಜ್ಜು ಕರಗಿಸಲು ಪರಿಣಾಮಕಾರಿ ಎಂದು ಸಾಬೀತಾಗಿದೆ.

ಹೊಟ್ಟೆಯ ಕೊಬ್ಬು ಕರಗಿಸಲು ನೀವು ಎಷ್ಟು ತಿನ್ನಬೇಕು?

ಆಹಾರದಲ್ಲಿ ಹಣ್ಣುಗಳು, ತರಕಾರಿಗಳು, ಇಡೀ ಧಾನ್ಯಗಳು ಮತ್ತು ಬೀನ್ಸ್ ನ್ನು ಸೇರಿಸಿಕೊಳ್ಳಿ. ಇದು ನಾರಿನಾಂಶ ಸೇವನೆ ಹೆಚ್ಚು ಮಾಡುವುದು.

ಉನ್ನತ ಮಟ್ಟದ ಪ್ರೋಟೀನ್ ಜತೆಗೆ ಪ್ರಮುಖವಾಗಿರುವಂತಹ ಅಮಿನೋ ಆಮ್ಲ ಸೇವನೆ ಮಾಡಿ. ಇದು ಕೋಳಿಮಾಂಸ, ಮೀನು, ಮೊಟ್ಟೆ, ತೊಫು ಇತ್ಯಾದಿಗಳಲ್ಲಿ ಕಂಡುಬರುವುದು.

ಬೊಜ್ಜನ್ನು ಕರಗಿಸಲು ಹೋಗಿ ನೀವು ನೈಸರ್ಗಿಕ ಕೊಬ್ಬನ್ನು ಕಡೆಗಣಿಸಬೇಡಿ. ನೈಸರ್ಗಿಕ ಕೊಬ್ಬು ತರಕಾರಿ ಎಣ್ಣೆ, ಬೀಜಗಳು, ಕಾಯಿಗಳು ಮತ್ತು ಅವಕಾಡೋದಲ್ಲಿ ಇರುವುದು. ಕೇಕ್, ಕುಕ್ಕೀಸ್, ಕ್ಯಾಂಡಿ ಮತ್ತು ಸೋಡಾ ಸೇವನೆ ಸಂಪೂರ್ಣವಾಗಿ ನಿರ್ಬಂಧಿಸಿ. ಫಾಸ್ಟ್ ಫುಡ್, ಹಾಟ್ ಡಾಗ್ಸ್, ಬಕಾನ್ ಮತ್ತು ಅಧಿಕ ಕೊಬ್ಬು ಇರುವ ಚಿಪ್ಸ್ ಕೇವಲ ಅನಾರೋಗ್ಯಕರ ಮಾತ್ರವಲ್ಲದೆ ಇದು ಕೊಬ್ಬು ಅಧಿಕ ಹೊಂದಿದೆ. ಆದರೆ ಪೋಷಕಾಂಶಗಳು ಕಡಿಮೆ ಇದೆ.

ಉಪಾಹಾರಕ್ಕೆ ಆಹಾರ ಕ್ರಮ

ಇಡೀ ಧಾನ್ಯದ ಸೀರಲ್ ಅಥವಾ ಓಟ್ ಮೀಲ್(11/4 ಕಪ್), ಕೊಬ್ಬುರಹಿತ ಹಾಲು(2 ಕಪ್), ಬಾದಾಮಿ ಅಥವಾ ಬೀಜಗಳು(4ಚಮಚ) ಮತ್ತು ದ್ರಾಕ್ಷಿ (2ಚಮಚ). ಇವುಗಳಲ್ಲಿ 591 ಕ್ಯಾಲರಿ, 29 ಗ್ರಾಂ ಪ್ರೋಟೀನ್, 78 ಗ್ರಾಮ್ ಕಾರ್ಬ್ರೋಹೈಡ್ರೇಟ್ಸ್ ಮತ್ತು 18 ಗ್ರಾಂ ಕೊಬ್ಬು ಇದೆ.

ಮಧ್ಯಾಹ್ನದ ಊಟಕ್ಕೆ

ಇಡೀ ಧಾನ್ಯದಿಂದ ಮಾಡಿರುವ ಬ್ರೆಡ್ ನ ಸ್ಯಾಂಡ್ ವಿಚ್, ಮಾಂಸ ಅಥವಾ ಟುನಾ(5 ಔನ್ಸ್), ಕಡಿಮೆ ಕೊಬ್ಬಿರುವ ಚೀಸ್(1 ತುಂಡು), ಟೊಮೆಟೊ(2 ತುಂಡು), ಮಯೋನೀಸ್(1 ಚಮಚ), ಕ್ಯಾರೆಟ್(1) ಮತ್ತು ಕಿತ್ತಳೆ ಜ್ಯೂಸ್ (1ಕಪ್). ಇವುಗಳಲ್ಲಿ ಸುಮಾರು 666 ಕ್ಯಾಲರಿ, 41 ಗ್ರಾಂ ಪ್ರೋಟೀನ್, 71 ಗ್ರಾಂ ಕಾರ್ಬ್ರೋಹೈಡ್ರೇಟ್ಸ್ ಮತ್ತು 25 ಗ್ರಾಂ ಕೊಬ್ಬು ಇದೆ.

ರಾತ್ರಿ ಊಟಕ್ಕೆ

ಹಂದಿ ಮಾಂಸ, ಕೋಳಿ ಅಥವಾ ಸಮುದ್ರಖಾದ್ಯ(5 ಜೌನ್ಸ್), ಸಲಾಡ್(1 ಕಪ್), ಹಸಿರೆಲೆ ತರಕಾರಿಗಳು(1 ಕಪ್), ಬ್ರೆಡ್, ಬಟಾಟೆ ಅಥವಾ ಪಾಸ್ತಾ(1 ತುಂಡು ಅಥವಾ ಒಂದು ಕಪ್) ಮತ್ತು ಹಣ್ಣುಗಳು(3/4 ಕಪ್). ಇವುಗಳಲ್ಲಿ ನಿಮ್ಮ ದೇಹಕ್ಕೆ 379-953 ಕ್ಯಾಲರಿ, 23-53 ಗ್ರಾಂ ಪ್ರೋಟೀನ್, 33-109 ಗ್ರಾಂ ಕಾರ್ಬ್ರೋಹೈಡ್ರೇಟ್ಸ್ ಮತ್ತು 12-43 ಗ್ರಾಂ ಕೊಬ್ಬು ಇರುವುದು.

ತಿಂಡಿ(ಎರಡು ಸಲ)

ಇಡೀ ಧಾನ್ಯದ ಬ್ರೆಡ್(2 ತುಂಡುಗಳು), ನೆಲಗಡೆಲೆ ಬೆಣ್ಣೆ(2 ಚಮಚ), ಕೊಬ್ಬುರಹಿತ ಹಾಲು(2ಕಪ್) ಮತ್ತು ಸೇಬು(1 ಮಧ್ಯಮ ಗಾತ್ರದ್ದು). ಇದರಲ್ಲಿ 629 ಕ್ಯಾಲರಿ, 31 ಗ್ರಾಂ ಪ್ರೋಟೀನ್, 83 ಗ್ರಾಂ ಕಾರ್ಬ್ರೋಹೈಡ್ರೇಟ್ಸ್ ಮತ್ತು 20 ಗ್ರಾಂ ಕೊಬ್ಬು ಇದೆ.

ವ್ಯಾಯಾಮ ಮಾಡಿ

ಹೊಟ್ಟೆಯ ಕೊಬ್ಬು ಕರಗಿಸಲು ಕೇವಲ ಆಹಾರ ಪಥ್ಯ ಮಾಡಿದರೆ ಸಾಲದು. ಪುರುಷರಿಗೆ ಹೊಟ್ಟೆ ಕೊಬ್ಬು ಕರಗಿಸಲು ಕಾರ್ಡಿಯೊ ಒಳ್ಳೆಯದು. ಪ್ರತಿನಿತ್ಯ ನೀವು 30-60 ನಿಮಿಷ ಕಾಲ ಕಾರ್ಡಿಯೊ ವ್ಯಾಯಾಮ ಮಾಡಬೇಕು. ವಾರದಲ್ಲಿ ಐದು ದಿನ ಕಾಲ. ವೇಗದ ನಡಿಗೆ ಅಥವಾ ಟೆನಿಸ್ ನಂತಹ ಆಟವೂ ಇದಕ್ಕೆ ಉತ್ತಮವಾಗಿರುವುದು. ಮೆಟ್ಟಿಲು ಹತ್ತುವುದು, ಕುರ್ಚಿಯಿಂದ ಮೇಲೆದ್ದು ಬಾಗುವುದು ಮತ್ತು ಕೈಗಳನ್ನು ಅಲ್ಲಾಡಿಸುವುದು, ಪೋನ್ ನಲ್ಲಿ ಮಾತನಾಡುತ್ತಾ ನಡೆಯುವುದು ಅಥವಾ ಸ್ವಲ್ಪ ದೂರಲ್ಲಿ ವಾಹನ ನಿಲ್ಲಿಸಿ ನಡೆಯುವುದು.

ಸ್ನಾಯು ಬೆಳೆಸುವ ಸಂಬಂಧವಾಗಿ ನೀವು ಕೇವಲ ಕುಳಿತು ಏಳುವುದನ್ನು ಮಾತ್ರ ಮಾಡಬೇಡಿ. ಎಲ್ಲಾ ಸ್ನಾಯುಗಳಿಗೆ ಬೇಕಾಗಿರುವ ವ್ಯಾಯಾಮ ಮಾಡಿಕೊಳ್ಳಿ. ಕಾಲುಗಳು, ಬೆನ್ನು, ಭುಜಗಳು ಮತ್ತು ಹೊಟ್ಟೆಗೆ ಬೇಕಾಗಿರುವ ಪುಶ್ ಅಪ್, ಪುಲ್ ಅಪ್ ಮತ್ತು ಸ್ಕ್ವಾಟ್ ಗಳನ್ನು ವಾರದಲ್ಲಿ ಎರಡು ಸಲ ಮಾಡಿ. ಹೊಟ್ಟೆಯ ಕೊಬ್ಬಿನ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ ಮತ್ತು ಇದನ್ನು ಕಡಿಮೆ ಮಾಡಿಕೊಳ್ಳಲು ಅವರು ತುಂಬಾ ಆತ್ಮವಿಶ್ವಾಸದಿಂದ ಕೆಲಸ ಮಾಡುತ್ತಾರೆ.

ಹೊಟ್ಟೆಯ ಬೊಜ್ಜು ನಿಜವಾಗಿಯೂ ಒಳ್ಳೆಯದಲ್ಲ. ಇದು ಕೆಲವೊಂದು ಕಾಯಿಲೆಗಳನ್ನು ತರುವುದು ಮಾತ್ರವಲ್ಲದೆ, ನಿಮ್ಮ ದೇಹದ ಸೌಂದರ್ಯ ಕೂಡ ಕೆಡಿಸುವುದು. ಹೊಟ್ಟೆಯ ಬೊಜ್ಜು ದೂರ ಮಾಡಲು ಮೇಲೆ ಹೇಳಿರುವಂತಹ ಸಲಹೆಗಳನ್ನು ಪಾಲಿಸಿಕೊಂಡು ಹೋಗಿ. ಇದು ಹೇಗೆ ಕೆಲಸ ಮಾಡುತ್ತಿದೆ ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಲು ಮರೆಯಬೇಡಿ.

English summary

Men, Here’s How You Can Lose Belly Fat

Grab a tape right away, wrap it around yourself just below your belly button, and check if the measurement reads 94 cm (37 in) or more. If it does, it's high time you take action. Belly fat is much more than a bulk of stubborn, unsightly weight in your body's abdominal region. Carrying fat around your midsection, even if you're slim elsewhere, actually goes much beyond.
Story first published: Saturday, June 30, 2018, 8:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more