For Quick Alerts
ALLOW NOTIFICATIONS  
For Daily Alerts

ನೈಸರ್ಗಿಕವಾಗಿ ನಿದ್ದೆಯಲ್ಲಿ ನಿಮ್ಮ ತೂಕವನ್ನು ಕಳೆದುಕೊಳ್ಳುವುದು ಹೇಗೆ?

By Sushma Charhra
|

ನೈಸರ್ಕಿವಾಗಿ ನೀವು ನಿದ್ರಿಸುವಾಗಲೂ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬ ವಿಚಾರ ನಿಮಗೆ ತಿಳಿದಿದ್ಯಾ? ಎಸ್, ನೀವು ಸತ್ಯವನ್ನೇ ಓದಿದ್ದೀರಿ. ವಿಜ್ಞಾನಿಗಳು ಬಹಿರಂಗ ಪಡಿಸಿರುವಂತೆ ಕ್ಯಾಲೋರಿಯನ್ನು ಕರಗಿಸಿಕೊಳ್ಳಲು ನಿದ್ದೆಯೂ ಕೂಡ ಸಹಕಾರಿಯಾಗಿದೆ. ಈ ಲೇಖನದಲ್ಲಿ ನಾವು ನಿಮಗೆ ನಿದ್ದೆಯಲ್ಲಿ ತೂಕ ಕಡಿಮೆ ಮಾಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ತಿಳಿಸಲಿದ್ದೇವೆ.

ಕೆಲವು ಸಿಂಪಲ್ ಉಪಾಯಗಳಿವೆ. ನಿಮ್ಮ ನಿತ್ಯದ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಆಗ ತೂಕ ಕಳೆದುಕೊಳ್ಳಲು ಸುಲಭವಾಗುತ್ತೆ. ನಿಮಗೆ ಸರಿಯಾದ ಸಮಯಕ್ಕೆ ಮಲಗಲು ಸಾಧ್ಯವಾಗುತ್ತಿಲ್ಲ, ಅಥವಾ ನಿದ್ದೆ ಸಾಕಾಗುತ್ತಿಲ್ಲ, ನಿದ್ದೆ ಬರುತ್ತಿಲ್ಲ ಇತ್ಯಾದಿ ಸಮಸ್ಯೆಗಳಿದ್ದರೆ ಈ ಲೇಖನವು ನಿಮಗೆ ಸಹಾಯ ಮಾಡಲಿದೆ.

ಕೆಲವರಿಗೆ ಚಿಪ್ಸ್ ಇತ್ಯಾದಿ ಕರುಂಕುರುಂ ಪದಾರ್ಥಗಳನ್ನು ತಿನ್ನದೇ ಇದ್ರೆ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ ಗೊತ್ತಾ. ಅಧ್ಯಯನವು ತಿಳಿಸುವ ಪ್ರಕಾರ,ಮಲಗುವ ಮುನ್ನ ಯಾರು ಪ್ರೋಟೀನ್ ಅಂಶವಿರುವ( 30 ಗ್ರಾಂನಷ್ಟು ಪ್ರೋಟೀನ್) ಆಹಾರ ಸೇವಿಸುತ್ತಾರೋ ಅವರು ಮಾರನೇ ದಿನ ಬೆಳಿಗ್ಗೆ ಏಳುವಾಗ ಶೇಕಡಾವಾರು ಅವರ ಶಕ್ತಿಯನ್ನು ಹೆಚ್ಚಿಸಿಕೊಂಡಿರುತ್ತಾರೆ. ಮಾಂಸಖಂಡಗಳನ್ನು ಬಲಗೊಳಿಸಲು ಈ ಪ್ರೋಟೀನ್ ಅಂಶವು ರಾತ್ರಿಯ ವೇಳೆಯಲ್ಲಿ ಸಹಾಯ ಮಾಡುತ್ತೆ.ಮಾಂಸಖಂಡಗಳು ಹೆಚ್ಚಿದ್ದಾಗ,ಕ್ಯಾಲೋರಿಯನ್ನು ಕರಗಿಸಲು ನಿಮಗಿದು ನೆರವಾಗುತ್ತೆ.

ರಾತ್ರಿಯಲ್ಲೂ ತೂಕ ಕರಗಿಸುವ ಕೆಲವು ಸರಳ ಉಪಾಯಗಳಿವೆ.. ಅವುಗಳಿಗಾಗಿ ಮುಂದೆ ಓದಿ..

1. ಕತ್ತಲಲ್ಲಿ ನಿದ್ರಿಸುವುದು

1. ಕತ್ತಲಲ್ಲಿ ನಿದ್ರಿಸುವುದು

ಕತ್ತಲಲ್ಲಿ ನಿದ್ರಿಸಿದರೆ ನಿಮ್ಮ ದೇಹಕ್ಕೆ ಕೆಲವು ಹಾರ್ಮೋನುಗಳ ಬಿಡುಗಡೆಗೆ ಸಹಕಾರಿಯಾಗುತ್ತೆ. ಈ ಹಾರ್ಮೋನುಗಳು ಕ್ಯಾಲೋರಿಯನ್ನು ಕರಗಿಸಲು ನೆರವಾಗುತ್ತೆ ಎಂಬುದನ್ನು ಅಧ್ಯಯನವೊಂದು ಸಾಬೀತುಮಾಡಿದೆ. ಹಾಗಾಗಿ ನಿಮ್ಮ ಮಲಗುವ ಕೋಣೆಯಲ್ಲಿ ಯಾವುದೇ ಬೆಳಕು ಇಲ್ಲದೇ ಇರುವುದು ಸೂಕ್ತ. ಅಷ್ಟೇ ಅಲ್ಲ ಬೀದಿದೀಪಗಳು ಅಪ್ಪಳಿಸುವ ಮತ್ತು ಇತರೆ ಯಾವುದೇ ರೀತಿಯ ಬೆಳಕು ನಿಮ್ಮ ಕೋಣೆಗೆ ಬರುವಂತಿದ್ದರೆ ಆ ಕೋಣೆಯನ್ನು ಮಲಗುವ ಕೋಣೆಯಾಗಿ ಮಾಡಿಕೊಳ್ಳದೇ ಇರುವುದು ಸೂಕ್ತ.

2. ನಿದ್ದೆಗೆ ನಿಮ್ಮ ಸಮಯ ಕೊಡಿ

2. ನಿದ್ದೆಗೆ ನಿಮ್ಮ ಸಮಯ ಕೊಡಿ

ನಿದ್ದೆಗೆ ಸರಿಯಾಗಿ ಸಮಯ ನೀಡಿ. 7 ರಿಂದ 8 ಗಂಟೆಯ ನಿದ್ದೆ ಪ್ರತಿ ಮನುಷ್ಯನಿಗೆ ಬೇಕೆಬೇಕು. ಈ ನಿದ್ದೆಯು ಸರಿಯಾಗಿದ್ದರೆ, ನಿಮ್ಮ ಕ್ಯಾಲೋರಿಯನ್ನು ಕರಗಿಸಲು ಇದು ಸಹಾಯ ಮಾಡುತ್ತೆ. ಯಾರು ಸರಿಯಾಗಿ ವಿರಾಮ ತೆಗೆದುಕೊಳ್ಳುತ್ತಾರೋ, ಅವರು ಶೇಕಡಾ 5 ರಷ್ಟು ಪ್ರಮಾಣದ ಹೆಚ್ಚು ಪ್ರಮಾಣದ ಶಕ್ತಿಯನ್ನು ಕರಗಿಸುವ ಸಾಮರ್ಥ್ಯವನ್ನು ವಿರಾಮ ತೆಗೆದುಕೊಳ್ಳದೇ ಇರುವವರಿಗಿಂತ ಹೊಂದಿರುತ್ತಾರೆ ಅನ್ನುವುದನ್ನು ಅಧ್ಯಯನವೊಂದು ಬಹಿರಂಗ ಪಡಿಸಿದೆ. ಸರಿಯಾಗಿ ನಿದ್ದೆ ಮಾಡುವ ವ್ಯಕ್ತಿಯು ಶೇಕಡಾ 20 ರಷ್ಟು ಕ್ಯಾಲೋರಿಯನ್ನು ಊಟದ ನಂತರ ಕರಗಿಸಲು ಸಾಧ್ಯವಿದೆ. ಆದರೆ ಅತಿಯಾಗಿ ನಿದ್ರಿಸುವವರಲ್ಲಿ ಫ್ಯಾಟ್ ಸೆಲ್ ಗಳು ಕಡಿಮೆ ಸೂಕ್ಷ್ಮ ಮತಿಗಳಾಗುತ್ತವೆ ಮತ್ತು ಚುರುಕಾಗಿ ಇರುವುದಿಲ್ಲ.

3. ಮಧ್ಯಪಾನ ಸೇವಿಸುವುದನ್ನು ಬಿಟ್ಟುಬಿಡಿ

3. ಮಧ್ಯಪಾನ ಸೇವಿಸುವುದನ್ನು ಬಿಟ್ಟುಬಿಡಿ

ಮಲಗುವ ಮುನ್ನ ಆಲ್ಕೋಹಾಲ್ ಸೇವಿಸುವುದರಿಂದ ಕ್ಯಾಲೋರಿ ಕಡಿಮೆ ಮಾಡಲು ಸಾಧ್ಯವಿಲ್ಲ. ದೇಹವು ಆಲ್ಕೋಹಾಲನ್ನು ಚಯಾಪಚಯ ಕ್ರಿಯೆಗೆ ಒಳಪಡಿಸುತ್ತೆ.ಇದು ತೂಕ ಇಳಿಸುವ ಪ್ರಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಆದರೆ ಊಟಕ್ಕೂ ಮುನ್ನ ಒಂದು ಗ್ಲಾಸ್ ವೈನ್ ಸೇವಿಸುವುದು ಪರವಾಗಿಲ್ಲ, ಆದರೆ ಅದು ಮಲಗುವುದಕ್ಕೂ 3 ಗಂಟೆಗಳ ಮುನ್ನವಾಗಿದ್ದರೆ ಮಾತ್ರ ಓಕೆ.

4. ರಾತ್ರಿಯ ಆಹಾರ ಸ್ವಲ್ಪವೇ ಇರಲಿ

4. ರಾತ್ರಿಯ ಆಹಾರ ಸ್ವಲ್ಪವೇ ಇರಲಿ

ರಾತ್ರಿ ಅತಿಯಾಗಿ ಆಹಾರ ಸೇವಿಸಿದರೆ, ಅದು ಜೀರ್ಣವಾಗಲು ದೇಹಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಇದು ಮಧ್ಯಪಾನ ಸೇವಿಸಿದಂತೆಯೇ ಸರಿ. ಗಾಢ ನಿದ್ದೆಯಲ್ಲಿದ್ದಾಗ, ಮೆದುಳು ಕೆಲವು ಹಾರ್ಮೋನುಗಳ ಬಿಡುಗಡೆಗೆ ಪ್ರೇರೇಪಿಸುತ್ತೆ. ಆದರೆ ಅತಿಯಾಗಿ ಆಹಾರ ಸೇವಿಸಿದರೆ ಜೀರ್ಣಕ್ರಿಯೆ ತಡವಾಗಿ, ಆಹಾರವು ಇಂಧನವಾಗಿ ಬಳಕೆಯಾಗುವ ಬದಲು ಕೊಬ್ಬಿನಾಂಶವಾಗಿ ದೇಹದಲ್ಲಿ ಹಾಗೆ ಉಳಿದು ನಿಮ್ಮ ದೇಹವನ್ನು ದಪ್ಪವಾಗುವಂತೆ ಮಾಡುತ್ತೆ. ಹಾಗಾಗಿ ಆದಷ್ಟು ಕಡಿಮೆ ಆಹಾರವನ್ನು ರಾತ್ರಿಯ ವೇಳೆಯಲ್ಲಿ ಸೇವಿಸಿ.

5. ರಾತ್ರಿ ಮಲಗುವಾಗ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸಬೇಡಿ

5. ರಾತ್ರಿ ಮಲಗುವಾಗ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸಬೇಡಿ

ಮ್ಯಾನ್ಚೆಸ್ಟರ್ ವಿಶ್ವವಿದ್ಯಾಲಯವು ನಡೆಸಿದ ಅಧ್ಯಯನದ ಪ್ರಕಾರ, ನೀಲಿ ಬಣ್ಣದ ತರಂಗಾಂತರಗಳು ಅಂದರೆ ನಿಮ್ಮ ಮೊಬೈಲ್, ಟ್ಯಾಬ್ಲೆಟ್ ಗಳಿಂದ ಹೊರಬರುವ ಇವು, ದೇಹದ ಸಾಮಾನ್ಯ ಪ್ರಕ್ರಿಯೆಯನ್ನು ಹದಗೆಡಿಸುತ್ತೆ. ಇದು ಮೆಲಟಾನಿನ್ ಉತ್ಪಾದನೆಯನ್ನು ಕುಗ್ಗಿಸುತ್ತೆ ಮತ್ತು ಚಯಾಪಚಯ ಕ್ರಿಯೆಯನ್ನು ಹಾಳು ಮಾಡುತ್ತೆ.ಹಾಗಾಗಿ ಮಲಗುವ ಮುನ್ನ ಟಿವಿ, ಮೊಬೈಲ್, ಇವುಗಳಿಂದ ದೂರವೇ ಇರಿ, ಇನ್ನೊಂದು ಅಧ್ಯಯನವು ಟಿವಿ ಸ್ಕ್ರೀನ್ ಗಳನ್ನು ನಿದ್ದೆಯ ಸಮಯದಲ್ಲಿ ಹತ್ತಿರವೇ ಇಟ್ಟುಕೊಳ್ಳುವುದರಿಂದ ಟ್ರೈಗಿಸರೈಡ್ ಗಳು ದೇಹದ ಮೇಲೆ ಕೆಟ್ಟ ಪರಣಾಮವನ್ನು ಉಂಟು ಮಾಡುತ್ತೆ.

6. ತಣ್ಣನೆಯ ಕೋಣೆಯಲ್ಲಿ ಮಲಗಿ

6. ತಣ್ಣನೆಯ ಕೋಣೆಯಲ್ಲಿ ಮಲಗಿ

ಕಡಿಮೆ ತಾಪಮಾನವಿರುವ ಕೋಣೆಯಲ್ಲಿ ಮಲಗುವುದರಿಂದ ನಿಮ್ಮ ಕ್ಯಾಲೋರಿಯನ್ನು ಕರಗಿಸಿಕೊಳ್ಳಬಹುದು. ನಾವು ನಿಮ್ಮ ಬಳಿ ಚಾಲೆಂಜ್ ಕಟ್ಟುತ್ತೇವೆ, ಖಂಡಿತ ನಿಮಗೆ ಈ ಸತ್ಯ ತಿಳಿದಿರಲಿಕ್ಕಿಲ್ಲ ಅಲ್ಲವೇ? ಹೌದು.. ಅಧ್ಯಯನವೊಂದು ತಿಳಿಸಿರುವಂತೆ ಯಾರು ತಣ್ಣನೆಯ ವಾತಾವರಣದ ಕೋಣೆಯಲ್ಲಿ ಮಲಗುತ್ತಾರೋ ಅವರು, ಸೆಖೆಯ ಕೋಣೆಯಲ್ಲಿ ಮಲಗಿದ ವ್ಯಕ್ತಿಗಳಿಗಿಂತ ಶೇಕಡಾ 7 ರಷ್ಟು ಪ್ರಮಾಣದ ದೇಹದ ಕೊಬ್ಬಿನಾಂಶವನ್ನು ಕರಗಿಸಲು ಸಾಧ್ಯವಾಗುತ್ತೆ. ಯಾಕೆಂದರೆ ಸೆಖೆಯಲ್ಲಿದ್ದಾಗ ನಿಮ್ಮ ದೇಹವು, ದೇಹದ ತಾಪಮಾನವನ್ನು ಕಡಿಮೆ ಮಾಡಿಕೊಳ್ಳಲು ಶ್ರಮವಹಿಸುತ್ತಾ ಇರುತ್ತದೆ.

7. ಹಗಲಿನಲ್ಲಿ ಆದಷ್ಟು ಚುರುಕಾಗಿರಿ

7. ಹಗಲಿನಲ್ಲಿ ಆದಷ್ಟು ಚುರುಕಾಗಿರಿ

ಸರಿಯಾದ ವ್ಯಾಯಾಮ ಬೇಕೇಬೇಕು. ಆದರೆ,ಮಲಗುವ ನಾಲ್ಕು ಗಂಟೆಗೂ ಮುನ್ನ ವ್ಯಾಯಾಮ ಮಾಡಿ. ಮಲಗುವ ಕೇಲವೇ ನಿಮಿಷದ ಮುಂಚೆ ವ್ಯಾಯಾಮ ಮಾಡುವುದು ಸರಿಯಲ್ಲ. ಒಂದು ವೇಳೆ ಹಾಗೆ ಮಾಡಿದರೆ, ನಿಮ್ಮ ದೇಹವು ಹೆಚ್ಚು ಹೊತ್ತು ಎಚ್ಚರವಾಗಿರುವಂತೆ ಮಾಡುತ್ತೆ. ರಾತ್ರಿಯ ನಿದ್ದೆ ಹಾಳು ಮಾಡಿ, ನಿತ್ರಾಣರಾಗುವಂತಾಗುತ್ತೆ. ಹಗಲು ಚುರುಕಾಗಿರಿ,ರಾತ್ರಿ ಆರಾಮಾಗಿರಿ.

8. ಊಟಕ್ಕೆ ಧಾನ್ಯಗಳನ್ನು ಬಳಸಿ

8. ಊಟಕ್ಕೆ ಧಾನ್ಯಗಳನ್ನು ಬಳಸಿ

ಮಧ್ಯಾಹ್ನದ ಊಟಕ್ಕೆ ಕಾರ್ಬೋಹೈಡ್ರೇಟ್ ಗಳನ್ನು ಒಳಗೊಂಡ ಆಹಾರಗಳನ್ನು ಸೇವಿಸಿ. ಇದು ರಾತ್ರಿಯ ವೇಳೆಯಲ್ಲಿ ಚೆನ್ನಾಗಿ ನಿದ್ರಿಸುವಂತೆ ಮಾಡುತ್ತೆ.ಸೆರೋಟೋನಿನ್ ಅಂಶವು ಧಾನ್ಯಗಳಲ್ಲಿದ್ದು, ಇವು ನಿಮ್ಮ ನಿದ್ರೆಯಲ್ಲಿ ಮೆಲೋಟೋನಿನ್ ಆಗಿ ಪರಿವರ್ತಿತವಾಗುತ್ತೆ. ಬಾಲ್ರಿ, ಬ್ರೌನ್ ರೈಸ್,ಓಟ್ಸ್, ಗೋಧಿ ಇವುಗಳನ್ನು ಬಳಸಿ

9. ಬೆತ್ತಲಾಗಿ ನಿದ್ರಿಸಿ

9. ಬೆತ್ತಲಾಗಿ ನಿದ್ರಿಸಿ

ನಿಮಗೆ ಗೊತ್ತಾ ನೀವು ಬೆತ್ತಲಾಗಿ ಮಲಗುವುದರಿಂದ ನಿಮ್ಮ ಕ್ಯಾಲೋರಿ ಕರಗುತ್ತೆ ಅನ್ನುವುದು..? ಅಷ್ಟೇ ಅಲ್ಲ ಇದರಿಂದ ಇನ್ನೂ ಹಲವಾರಿ ಆರೋಗ್ಯ ಲಾಭಗಳಿವೆ. ಬೆತ್ತಲಾಗಿ ಮಲಗುವುದು ಹೇಗೆ ನಿಮಗೆ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತೆ? ಇದು ನಿಮ್ಮ ದೇಹವನ್ನು ತಂಪಾಗಿರಿಸುತ್ತೆ. ಇದು ನಿಮ್ಮ ದೇಹದಲ್ಲಿ ಆರೋಗ್ಯಕಾರಿ ಫ್ಯಾಟ್ ಅಂಶವನ್ನು ಹೆಚ್ಚಿಸಿ, ಹೆಚ್ಚಿನ ಶಕ್ತಿಯನ್ನು ಕರಗುವಂತೆ ಮಾಡುತ್ತೆ. ಅಷ್ಟೇ ಅಲ್ಲ ಇದು ಒತ್ತಮ ರೀತಿಯಲ್ಲಿ ನಿಮ್ಮ ದೇಹಕ್ಕೆ ಗಾಳಿಯ ಸಂಚಲನ ಮಾಡಿ, ವೀರ್ಯದ ಕಣಗಳ ಗುಣಮಟ್ಟವನ್ನು ಹೆಚ್ಚಿಸುತ್ತೆ.

ನೀವು ಈ ಲೇಖನ ಓದುತ್ತಿದ್ದರೆ ನಿಮ್ಮ ಆಪ್ತರಿಗೆ ಶೇರ್ ಮಾಡಿ..

Read more about: ನಿದ್ದೆ ತೂಕ
English summary

how-to-lose-weight-in-your-sleep-naturally

how-to-lose-weight-in-your-sleep-naturally
Story first published: Friday, May 18, 2018, 17:14 [IST]
X
Desktop Bottom Promotion