For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಿಕೊಳ್ಳಲು ಗ್ರೀನ್ ಟೀ ಡಯಟ್ ಪ್ಲಾನ್

By Sushma Charhra
|

ಪ್ರಪಂಚದಲ್ಲಿ ಅತಿ ಹೆಚ್ಚು ಚಾಲ್ತಿಯಲ್ಲಿರುವ ಪಾನೀಯವೆಂದರೆ ಅದು ಚಹಾ.. ಅದರಲ್ಲೂ ಅತಿಯಾಗಿ ಬೊಜ್ಜಿರುವವರು ತಮ್ಮ ದೇಹದ ತೂಕ ಇಳಿಸಿಕೊಳ್ಳುವಿಕೆಗಾಗಿ ಗ್ರೀನ್ ಟೀ ಸೇವಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಅದಕ್ಕಾಗಿ ಒಂದು ಡಯಟ್ ಪ್ಲಾನ್ ಇದ್ದರೆ ಬಹಳ ಒಳ್ಳೆಯದು. ಸರಿಯಾದ ಕ್ರಮದ ಟೀ ಸೇವನೆ ಇಲ್ಲದೆ ಇದ್ದರೆ ದೈಹಿಕ ಆರೋಗ್ಯ ಸಮತೋಲನ ಕಳೆದುಕೊಳ್ಳುತ್ತೆ.

ತೂಕ ಇಳಿಸಲು ಗ್ರೀನ್ ಟೀ ಡಯಟ್ ಪ್ಲಾನ್

ಟೀಯಲ್ಲಿ EGCG ಅಂಶವಿದ್ದು ಇದು ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತೆ. ಬೊಜ್ಜಿನ ಅಂಶವನ್ನು ಬಹಳ ಬೇಗನೆ ಕರಗಿಸುತ್ತೆ. ದೇಹದ ಉಷ್ಣತೆಯನ್ನು ಇದು ಹೆಚ್ಚಿಸುವುದರಿಂದಾಗಿ ದೇಹದ ತೂಕ ಕಡಿಮೆಯಾಗುತ್ತೆ.1 ಕಪ್ ಗ್ರೀನ್ ಟೀಯಲ್ಲಿ 120 ರಿಂದ 320 ಮಿಲಿಗ್ರಾಮ್ ನಷ್ಟು ಕೆಟಾಚಿನ್ ಅಂಶವಿದ್ದು,10 ರಿಂದ 60 ಮಿಲಿ ಗ್ರಾಮ್ ನಷ್ಟು ಕೆಫಿನ್ ಅಂಶವಿರುತ್ತೆ.

 ಸೋಮವಾರ

ಸೋಮವಾರ

ಮುಂಜಾನೆ 1 ಗ್ರೀನ್ ಟೀ - 1 ಟೇಬಲ್ ಸ್ಪೂನ್ ನಷ್ಟು ನಿಂಬೆರಸ

ಮಧ್ಯಾಹ್ನ ಊಟಕ್ಕೂ ಮುಂಚೆ 11 am - 1 ಕಪ್ ಗ್ರೀನ್ ಟೀ

ರಾತ್ರಿ ಊಟಕ್ಕೂ ಮುಂಚೆ 5 pm - 1 ಕಪ್ ಗ್ರೀನ್ ಟೀ ಮತ್ತು

ಇದು ಹೇಗೆ ಕೆಲಸ ಮಾಡುತ್ತೆ

ಗ್ರೀನ್ ಟೀ ಗೆ ನಿಂಬೆರಸ ಸೇರಿಸಿದಾಗ ಟೀ ಯ ರುಚಿ ಮತ್ತು ಪರಿಮಳ ಅಧಿಕಗೊಳ್ಳುತ್ತೆ. ನಿಮ್ಮ ಇಮ್ಯೂನಿಟಿಯನ್ನು ವೃದ್ಧಿಸಲು ಇದು ಸಹಕಾರಿ. ಊಟಕ್ಕೂ ಮುನ್ನ ಟೀ ಕುಡಿಯುವುದರಿಂದಾಗಿ ಅತಿಯಾಗಿ ಊಟ ಮಾಡುವುದು ತಪ್ಪುತ್ತೆ ಅಂದರೆ ನಿಮ್ಮ ಹಸಿವನ್ನು ನಿಯಂತ್ರಿಸುವ ಸಾಮರ್ಥ್ಯ ಇದಕ್ಕಿದೆ. ಊಟದ ನಂತ್ರ ಮೊಸರು ಇಲ್ಲವೇ ಮಜ್ಜಿಗೆ ಸೇವಿಸುವುದರಿಂದಾಗಿ ಊಟ ಮಾಡಿದ್ದು ಸರಾಗವಾಗಿ ಜೀರ್ಣವಾಗುತ್ತೆ ಮತ್ತೂ ತೂಕ ಇಳಿಸಿಕೊಳ್ಳಲು ನೆರವಾಗುತ್ತೆ.

ಮಂಗಳವಾರ

ಮಂಗಳವಾರ

ಮುಂಜಾನೆ 1 ಕಪ್ ಗ್ರೀನ್ ಟೀ - ಅರ್ಧ ಟೀ ಸ್ಪೂನ್ ನಷ್ಟು ಚಕ್ಕೆ ಪುಡಿ

ಮಧ್ಯಾಹ್ನ ಊಟಕ್ಕೂ ಮುಂಚೆ 11 am -- 1 ಕಪ್ ಗ್ರೀನ್ ಟೀ

ರಾತ್ರಿ ಊಟಕ್ಕೂ ಮುಂಚೆ 5 pm --- 1 ಕಪ್ ಗ್ರೀನ್ ಟೀ ಒಂದು ಕ್ರ್ಯಾಕರ್ ಬಿಸ್ಕೇಟ್

ಇದು ಹೇಗೆ ಕೆಲಸ ಮಾಡುತ್ತೆ

ದೇಹದಲ್ಲಿರುವ ಅತಿಯಾದ ಬೊಜ್ಜಿನ ಅಂಶವನ್ನು ಹೊಡೆದುಹಾಕುವ ಸಾಮರ್ಥ್ಯ ಚಕ್ಕೆಪುಡಿಗಿದೆ. ಅದು ಗ್ರೀನ್ ಟೀಯೊಡನೆ ಸಮ್ಮಿಲನಗೊಂಡಾಗ ನಿಮ್ಮ ದೇಹದಲ್ಲಿರುವ ಹೆಚ್ಚಿನ ಬೊಜ್ಜಿನ ಅಂಶ ಕರಗಿ ನೀವು ತೆಳುವಾಗಲು ಸಹಾಯ ಮಾಡುತ್ತೆ. ಅಷ್ಟೇ ಅಲ್ಲ ಟೀಗೊಂದು ಫ್ಲೇವರ್ ಮತ್ತು ರುಚಿಯನ್ನು ಚಕ್ಕೆ ಪುಡಿ ನೀಡುತ್ತೆ. ಚಕ್ಕೆಯನ್ನು ಇಷ್ಟ ಪಡದೆ ಇರುವವರು ಅದರ ಬದಲಾಗಿ ಕಾಳುಮೆಣಸಿನ ಪುಡಿಯನ್ನು ಸೇರಿಸಿಕೊಳ್ಳಬಹುದು.

ಬುಧವಾರ

ಬುಧವಾರ

ಮುಂಜಾನೆ --- 1 ಕಪ್ ಗ್ರೀನ್ ಟೀ ಮತ್ತು ಒಂದು ಸ್ಪೂನ್ ಜೇನುತುಪ್ಪ

ಮಧ್ಯಾಹ್ನ ಊಟಕ್ಕೂ ಮುಂಚೆ 11 am - - 1 ಕಪ್ ಗ್ರೀನ್ ಟೀ

ರಾತ್ರಿ ಊಟಕ್ಕೂ ಮುಂಚೆ 5 pm --- 1 ಕಪ್ ಗ್ರೀನ್ ಟೀ ಮತ್ತು ಒಂದು ಮುಷ್ಟಿ ಬೇಯಿಸಿದ ಜೋಳ

ಇದು ಹೇಗೆ ಕೆಲಸ ಮಾಡುತ್ತೆ

ಜೇನುತುಪ್ಪದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶವಿದೆ. ಪ್ರಕೃತಿದತ್ತವಾಗಿ ಸಿಗುವ ಇದು ನಿಮ್ಮ ದೇಹವನ್ನು ಆರೋಗ್ಯವಾಗಿ ಮತ್ತು ಪೋಷಕಾಂಶಭರಿತವಾಗಿಡಲು ಸಹಕಾರಿಯಾಗಿರುತ್ತೆ. ಸಕ್ಕರೆಯ ಬದಲು ಜೇನು ಟೀ ಗೆ ರುಚಿಯ ಜೊತೆಗೆ ಆರೋಗ್ಯವನ್ನು ನೀಡಲು ಸಹಾಯ ಮಾಡುತ್ತೆ. ಸಕ್ಕರೆ ಬದಲಾಗಿ ಬಳಸುವುದರಿಂದಾಗ ಶೇಕಡಾ 63ರಷ್ಟು ಕ್ಯಾಲೋರಿ ನಿಮ್ಮ ದೇಹಕ್ಕೆ ಸೇರುವುದು ತಪ್ಪುತ್ತೆ.

 ಗುರುವಾರ

ಗುರುವಾರ

ಮುಂಜಾನೆ -- 1 ಕಪ್ ಗ್ರೀನ್ ಟೀ

ಮಧ್ಯಾಹ್ನ ಊಟಕ್ಕೂ ಮುಂಚೆ 11 am --- 1 ಕಪ್ ಗ್ರೀನ್ ಟೀ

ರಾತ್ರಿ ಊಟಕ್ಕೂ ಮುಂಚೆ 5 pm --- 1 ಕಪ್ ಗ್ರೀನ್ ಟೀ

ಇದು ಹೇಗೆ ಕೆಲಸ ಮಾಡುತ್ತೆ

ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಇದು ಸಹಕಾರಿಯಾಗಿದೆ. ಪ್ರತಿ ದಿನ ಗ್ರೀನ್ ಟೀ ಕುಡಿದು ಬೋರ್ ಆಗುವ ಬದಲು ಸ್ವಲ್ಪ ನ್ಯೂಟ್ರೀಷಿಯಸ್ ಆಗಿರುವ ಆಹಾರವನ್ನು ರಾತ್ರಿ ಮತ್ತು ಮಧ್ಯಾಹ್ನದ ಊಟದಲ್ಲಿ ಬಳಸಿ ನೋಡಿ. ಆಗ ನಿಮ್ಮ ಡಯಟ್ ನಿಮಗೆ ಖುಷಿಯನ್ನು ನೀಡುತ್ತೆ. ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತೆ.

 ಶುಕ್ರವಾರ

ಶುಕ್ರವಾರ

ಮುಂಜಾನೆ - - 1 ಕಪ್ ಗ್ರೀನ್ ಟೀ ಅರ್ಧ ಟೀ ಸ್ಪೂನ್ ನಷ್ಟು ಚಕ್ಕೆ ಪೌಡರ್

ಮಧ್ಯಾಹ್ನ ಊಟಕ್ಕೂ ಮುಂಚೆ 11 am -- 1 ಕಪ್ ಗ್ರೀನ್ ಟೀ

ರಾತ್ರಿ ಊಟಕ್ಕೂ ಮುಂಚೆ 5 pm --- 1 ಕಪ್ ಗ್ರೀನ್ ಟೀ ಅರ್ಧ ಕಪ್ ನಷ್ಟು ಉಪ್ಪು ಹಾಕದ ಪಾಪ್ ಕಾರ್ನ್

ಇದು ಹೇಗೆ ಕೆಲಸ ಮಾಡುತ್ತೆ

ಈಗಾಗಲೇ ಹೇಳಿರುವಂತೆ ಚಕ್ಕೆ ಟೀ ಯೊಡನೆ ಸೇರಿ ರುಚಿಯೂ ಹೆಚ್ಚಾಗುತ್ತೆ. ಇನ್ನು ನೀವು ಡಯಟ್ ಮಾಡುತ್ತಿರುವ ಕಾರಣವೇ ತೆಳುವಾಗುವುದು. ಅದಕ್ಕೆ ಪುಷ್ಠಿ ನೀಡಲು ಪಾಪ್ ಕಾರ್ನ್ ನಿಮಗೆ ನೆರವಾಗುತ್ತೆ. ಆದರೆ ರುಚಿಯೆಂದು ಅತಿಯಾಗಿ ಪಾಪ್ ಕಾರ್ನ್ ಸೇವಿಸಬೇಡಿ. ಅದಲಾಗಿ ಸರಿಯಾಗಿ ಅರ್ದ ಕಪ್ ನಷ್ಟು ಮಾತ್ರ ಸೇವಿಸಬೇಕು. ಉಪ್ಪು ಹಾಕದೆ ಸೇವಿಸುವುದು ಬಹಳ ಸೂಕ್ತ. ನಿಮ್ಮ ಮಾಂಸಖಂಡಗಳಿಗೆ ಶಕ್ತಿ ವರ್ಧಕವಾಗಿಯೂ ಇದು ಕೆಲಸ ಮಾಡುತ್ತೆ.

 ಶನಿವಾರ

ಶನಿವಾರ

ಮುಂಜಾನೆ 7.30 am -- 1 ಕಪ್ ಗ್ರೀನ್ ಟೀ ಮತ್ತು ಒಂದು ಸ್ಪೂನ್ ನಿಂಬೆ ರಸ

ಮಧ್ಯಾಹ್ನ ಊಟಕ್ಕೂ ಮುಂಚೆ 11 am -- 1 ಕಪ್ ಗ್ರೀನ್ ಟೀ

ರಾತ್ರಿ ಊಟಕ್ಕೂ ಮುಂಚೆ 5 pm -- - 1 ಕಪ್ ಗ್ರೀನ್ ಟೀ

ಇದು ಹೇಗೆ ಕೆಲಸ ಮಾಡುತ್ತೆ

ಪ್ರತಿದಿನ ಬೆಳಿಗ್ಗೆ ಗ್ರೀನ್ ಟೀ ಜೊತೆ ನಿಮ್ಮ ದಿನವನ್ನು ಆರಂಭಿಸುವುದರಿಂದಾಗಿ ನೀವು ಹೆಚ್ಚು ಕ್ರಿಯಾಶೀಲರಾಗಿರಲು ಸಾಧ್ಯವಾಗುತ್ತೆ. ಮತ್ತು ನಿಮ್ಮ ಚಯಾಪಚಯ ಕ್ರಿಯೆಗೆ ಇದು ನೆರವಾಗುತ್ತೆ. ನಿಂಬೆರಸ ಸೇವಿಸುವುದರಿಂದಾಗಿ ಆದಷ್ಟು ನಿಮ್ಮ ತೂಕ ಇಳಿಕೆಯು ಇದರಿಂದ ಸಾಧ್ಯವಾಗುತ್ತೆ. ನಿಂಬೆರಸದ ಬದಲಾಗಿ ಆಪಲ್ ಸಿಡರ್ ವಿನೆಗರ್ ನ್ನು ಕೂಡ ಗ್ರೀನ್ ಟೀ ಗೆ ಸೇರಿಸಿಕೊಳ್ಳಬಹುದು.

ಭಾನುವಾರ

ಭಾನುವಾರ

ಮುಂಜಾನೆ 7.30 am -- 1 ಕಪ್ ಗ್ರೀನ್ ಟೀ ಮತ್ತು ಒಂದು ಸ್ಪೂನ್ ಚಕ್ಕೆ ಪುಡಿ ಮತ್ತು ಒಂದು ಸ್ಪೂನ್ ಜೇನುತುಪ್ಪ

ಮಧ್ಯಾಹ್ನ ಊಟಕ್ಕೂ ಮುಂಚೆ 11 am -- 1 ಕಪ್ ಗ್ರೀನ್ ಟೀ

ರಾತ್ರಿ ಊಟಕ್ಕೂ ಮುಂಚೆ 5 pm -- - 1 ಕಪ್ ಗ್ರೀನ್ ಟೀ ವಿವಿಧ ಕಾಳುಗಳಿಂದ ತಯಾರಿಸಿರುವ ಒಂದು ಕ್ರ್ಯಾಕರ್

ಇದು ಹೇಗೆ ಕೆಲಸ ಮಾಡುತ್ತೆ

ಕ್ಯಾಲೋರಿ ಲೆಕ್ಕಾಚಾರ ಹಾಕಲು ಶುರು ಮಾಡುವುದೇ ಯಾವಾಗ ನೀವು ನಿಮ್ಮ ತೂಕ ಇಳಿಸಲು ಆರಂಭಿಸುತ್ತೀರೋ ಆಗ. ನಿಮ್ಮ ಕ್ಯಾಲೋರಿ ದಿನದಿಂದ ದಿನಕ್ಕೆ ಕಡಿಮೆಯಾಗಬೇಕು ಅಂದರೆ ನೀವು ಸರಿಯಾದ ಡಯಟ್ ಆರಂಭಿಸಬೇಕು. ಅದಕರ್ಕೆ ಜೇನು, ಚಕ್ಕೆ ಪುಡಿ ನಿಮಗೆ ಸಹಾಯ ಮಾಡುತ್ತೆ.

ಟೀ ಕುಡಿಯುವುದರ ದುಷ್ಪರಿಣಾಮಗಳು

ಅತಿಯಾಗಿ ಟೀ ಕುಡಿಯುವುದರಿಂದ ಕೇವಲ ಒಳ್ಳೆಯದು ಮಾತ್ರವಲ್ಲ ಬದಲಾಗಿ ಕೆಲವು ಸೈಡ್ ಎಫೆಕ್ಟ್ ಕೂಡ ಆಗಲಿದೆ. ತಲೆನೋವು, ನರ ದೌರ್ಬಲ್ಯ,ನಿದ್ದೆಯ ಸಮಸ್ಯೆ, ವಾಂತಿ, ಎದೆಯುರಿ, ಹೀಗೆ ಹಲವು ಸಮಸ್ಯೆಗಳಿಗೂ ಕೂಡ ಟೀ ಕಾರಣವಾಗಬಹುದು. ಅತಿಯಾಗಿ ಕುಡಿದರೆ ಅಮೃತವೂ ವಿಷ ಅಂತ ಗಾದೆಯೇ ಇಲ್ವೇ.. ಹಾಗೆ ಯಾವುದೇ ಒಂದು ಪದಾರ್ಥ ಅತಿಯಾಗಿ ಸೇವಿಸುವುದರಿಂದ ಒಳ್ಳೆಯದಾಗುವುದಕ್ಕಿಂತ ಹೆಚ್ಚು ಕೆಟ್ಟದಾಗುತ್ತೆ ಅನ್ನೋದು ನೆನಪಿರಲಿ..

Read more about: green tea diet plan lose weight
English summary

ತೂಕ ಇಳಿಸಿಕೊಳ್ಳಲು ಗ್ರೀನ್ ಟೀ ಡಯಟ್ ಪ್ಲಾನ್

Green tea has higher concentrations of polyphenols, also called catechins. This is actively linked to weight loss. According to the University of Maryland Medical Center, you need to drink 2 to 3 cups of green tea a day. Green tea is also a source of caffeine. Caffeine helps the body to burn both calories and fats.
Story first published: Friday, April 20, 2018, 15:36 [IST]
X
Desktop Bottom Promotion