For Quick Alerts
ALLOW NOTIFICATIONS  
For Daily Alerts

ಯೋಗದ ಮೂಲಕ ತೂಕ ಇಳಿಸಿಕೊಳ್ಳುವುದು ಹೇಗೆ?

By Sushma Charhra
|

ಪ್ರತಿಯೊಬ್ಬರಿಗೂ ಗೊತ್ತು ಯೋಗ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ, ಫ್ಲೆಕ್ಸಿಬ್ಲಿಟಿ ಅಧಿಕವಾಗುತ್ತದೆ ಮತ್ತು ಇನ್ನು ಹಲವಾರು ಆರೋಗ್ಯ ಲಾಭಗಳಿವೆ ಎಂಬುದು. ಅವುಗಳಲ್ಲಿ ಇನ್ನೊಂದು ಪ್ರಮುಖವಾದ ಲಾಭವನ್ನು ಯೋಗ ಕರುಣಿಸುತ್ತದೆ ಅದೇನು ಎಂದರೆ ತೂಕ ಇಳಿಸಿಕೊಳ್ಳುವಿಕೆ. ಒಂದು ವೇಳೆ ನೀವು ಯೋಗ ಮಾಡುವುದನ್ನು ಪ್ರೀತಿಸುತ್ತೀರಾದರೆ, ಮತ್ತು ಯೋಗದಿಂದ ತೂಕ ಇಳಿಸಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಿದ್ದರೆ, ಈ ಲೇಖನವು ನಿಮಗೆ ಲಾಭದಾಯಕವಾಗಲಿದೆ.

"ಯೋಗ " ಶಬ್ದವನ್ನು ಸಂಸ್ಕೃತದ "ಯುಗ್" ದಿಂದ ಪಡೆಯಲಾಗಿದ್ದು ಇದು ನಿಮ್ಮ ವೈಯಕ್ತಿಕ ಪ್ರಜ್ಞೆ ಮತ್ತು ಸಾರ್ವತ್ರಿಕ ಪ್ರಜ್ಞೆಯ ಒಕ್ಕೂಟವನ್ನು ಸೂಚಿಸುತ್ತದೆ. ಯೋಗವು ಪುರಾತನ ಭಾರತೀಯ ಅಭ್ಯಾಸವಾಗಿದ್ದು, ಇದು ದೈಹಿಕ ಆರೋಗ್ಯಕ್ಕೆ ನೇರ ಸಂಬಂಧವನ್ನು ಹೊಂದಿದೆ ಅರ್ಥಾತ್ ಮನುಷ್ಯನ ದೇಹದ ಆರೋಗ್ಯ ವೃದ್ಧಿಸಲು ಇದು ಸಹಾಯಕವಾಗಿದೆ.ಯೋಗವು ಸರಳವಾದ ಧ್ಯಾನ, ಉಸಿರಾಟದ ಹಿಡಿತ ಮತ್ತು ಕೆಲವು ದೈಹಿಕ ಕಸರತ್ತುಗಳನ್ನು ಒಳಗೊಂಡಿರುತ್ತದೆ.

Yoga

ಒತ್ತಡವನ್ನು ಕಡಿಮೆ ಮಾಡುವುದರಿಂದ ಹಿಡಿದು, ಸಂಧಿ ನೋವಿನವರೆಗೆ ಒಟ್ಟಾರೆ ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. ನಿಮ್ಮ ಬೆಲ್ಲಿಯ ಮೇಲೆ ಉತ್ತಮ ಪರಿಣಾಮಗಳನ್ನು ಮಾಡಲು ಯೋಗವು ನೆರವಿಗೆ ಬರುತ್ತದೆ . ಒಟ್ಟಾರೆ ನಿಮ್ಮ ದೇಹ ತೂಕ ಇಳಿಸಲು ಯೋಗ ಹೇಗೆ ನೆರವಿಗೆ ಬರುತ್ತೆ ಎಂಬುದರ ವಿವರಣೆ ಈ ಲೇಖನದಲ್ಲಿದೆ ಮುಂದೆ ಓದಿ..

1. ಡಾಲ್ಫಿನ್ ಭಂಗಿ ಅಥವಾ ಮಯೂರಾಸನ
2. ಕಪಾಲಭಾತಿ ಪ್ರಾಣಾಯಾಮ
3. ಊರ್ಧ್ವ ಮುಖ ಶ್ವಾನಾಸನ
4. ಧನುರಾಸನ
5. ನೌಕಾಸನ
6. ಮತ್ಸ್ಯಾಸನ
7. ಭುಜಂಗಾಸನ
8. ಮಲಾಸನ
9. ಸಿಂಹಾಸನ
10. ಅಧೋಮುಖ ಶ್ವಾನಾಸನ

1. ಡಾಲ್ಫಿನ್ ಭಂಗಿ ಅಥವಾ ಆರ್ಧ ಪಿಂಚ ಮಯೂರಾಸನ

ಡಾಲ್ಫಿನ್ ಭಂಗಿಯನ್ನು ಆರ್ಧ ಪಿಂಚ ಮಯೂರಾಸನ ಎಂದು ಸಂಬೋಧಿಸುತ್ತಾರೆ.ಈ ಯೋಗದಲ್ಲಿ ನೀವು ನಿಮ್ಮ ದೇಹದ ಮೇಲ್ಬಾಗವನ್ನು ನಿಮ್ಮ ತೋಳುಗಳಲ್ಲಿ ಬ್ಯಾಲೆನ್ಸ್ ಮಾಡುತ್ತೀರಿ ಮತ್ತು ಆ ಮೂಲಕ ನಿಮ್ಮ ದೇಹವನ್ನು ತೇಲಿಸುತ್ತೀರಿ. ಡಾಲ್ಫಿನ್ ಯೋಗದ ಭಂಗಿಯನ್ನು ಮಾಡುವುದರಿಂದಾಗಿ ನಿಮ್ಮ ತೋಳುಗಳ ಬಲ ಹೆಚ್ಚಾಗುತ್ತದೆ,ಕರುಳಿನ ಆರೋಗ್ಯ ಹೆಚ್ಚುತ್ತದೆ. ಯಾವ ವ್ಯಕ್ತಿಗಳಿಗೆ ಕುತ್ತಿದೆ ಅಥವಾ ತೋಳಿನ ಗಾಯಗಳಾಗಿರುತ್ತದೆಯೋ ಅಂತವರು ಈ ಯೋಗ ಭಂಗಿಯನ್ನು ಪ್ರಯತ್ನಿಸದೇ ಇರುವುದು ಒಳಿತು.

2. ಕಪಾಲಭಾತಿ ಪ್ರಾಣಾಯಾಮ

ಈ ಯೋಗವು ಉಸಿರಾಟ ಪ್ರಕ್ರಿಯೆಯ ಒಂದು ಟೆಕ್ನಿಕ್ ಆಗಿದೆ.ಇದರಲ್ಲಿ ನೀವು ದೀರ್ಘವಾದ ಉಚ್ಛ್ವಾಸ ಮತ್ತು ವೇಗವಾದ ನಿಚ್ಛ್ವಾಸ ಕ್ರಿಯೆಯನ್ನುಕೈಗೊಳ್ಳುತ್ತೀರಿ. ದೀರ್ಘವಾದ ಉಚ್ಛ್ವಾಸದಲ್ಲಿ ಹೊಟ್ಟೆಯು ಒಳಮುಖವಾಗಿ ಸಾಗುತ್ತೆ ಮತ್ತು ವೇಗವಾದ ನಿಚ್ಛ್ವಾಸ ಕ್ರಿಯೆಯಲ್ಲಿ ಹೊಟ್ಟೆಯು ಹೊರಮುಖವಾಗಿ ಬರುತ್ತದೆ.ಈ ರೀತಿಯ ಹೊಟ್ಟೆಯ ಚಲನೆಯು ಹೊಟ್ಟೆಯ ಮಾಂಸಖಂಡಗಳಿಗೆ ಲಾಭದಾಯಕವಾಗಿರುತ್ತದೆ..ಬೆಲ್ಲಿ ಫ್ಯಾಟ್ ಕರಗಿಸಲು ನಿಯಮಿತವಾಗಿ ಕಪಾಲಭಾತಿಯನ್ನು ಅಭ್ಯಾಸ ಮಾಡುವುದು ಒಳಿತು.

3. ಊರ್ಧ್ವ ಮುಖ ಶ್ವಾನಾಸನ

ಈ ಭಂಗಿಯನ್ನು ಊರ್ಧ್ವ ಮುಖ ಶ್ವಾನಾಸನ ಎಂದು ಹೇಳಲಾಗುತ್ತೆ. ಇದು ನಿಮ್ಮ ತೋಳುಗಳ ಸ್ನಾಯುಗಳನ್ನು ಸ್ಟ್ರೆಚ್ ಮಾಡುತ್ತದೆ ಮತ್ತು ದೇಹದ ತೂಕವನ್ನು ಬ್ಯಾಲೆನ್ಸ್ ಮಾಡಲು ನೆರವಾಗುತ್ತದೆ. ಇದನ್ನು ಪ್ರತಿದಿನ ಮಾಡುವುದರಿಂದಾಗಿ ನಿಮ್ಮ ತೋಳುಗಳು, ಕರುಳು ಆರೋಗ್ಯಯುತವಾಗುತ್ತದೆ. ಒಂದು ವೇಳೆ ನೀವು ತೋಳಿನ ಗಾಯದ ಸಮಸ್ಯೆ ಅಥವಾ ಕುತ್ತಿಗೆ ನೋವು ಅನುಭವಿಸುತ್ತಿದ್ದರೆ ಈ ಯೋಗಭಂಗಿಯನ್ನು ಮಾಡದೇ ಇರುವುದು ಲೇಸು.

4. ಧನುರಾಸನ

ಇದನ್ನು ಧನುರಾಸನ ಎಂದು ಕರೆಯುತ್ತಾರೆ. ಮೊದಲು ನೀವು ನಿಮ್ಮ ಯೋಗ ಮ್ಯಾಟ್ ನಲ್ಲಿ ಬೋರಲಾಗಿ ಮಲಗಿ ಮತ್ತು ನಿಮ್ಮ ತೋಳುಗಳನ್ನು ದೇಹದ ಬದಿಯಲ್ಲಿ ಇಟ್ಟುಕೊಳ್ಳಿ. ಉಸಿರಾಟ ಪ್ರಕ್ರಿಯೆ ಆರಂಭಿಸಿ ಮತ್ತು ಎದೆಯ ಭಾಗವನ್ನು ನೆಲದಿಂದ ಎತ್ತಲು ಆರಂಭಿಸಿ ಮತ್ತು ಕಾಲುಗಳನ್ನು ಕೂಡ ಎತ್ತಿ. ಹೊಟ್ಟೆ ನೆಲಕ್ಕೆ ತಾಗಿಯೇ ಇರಬೇಕು . ಈ ಯೋಗವು ನಿಮ್ಮ ಬೆಲ್ಲಿ ಫ್ಯಾಟ್ ಗಳನ್ನು ಕರಗಿಸಲು, ರಕ್ತ ಸಂಚಾರವನ್ನು ನರಗಳಲ್ಲಿ ಅಧಿಕಗೊಳಿಸಲು ಮತ್ತು ತೋಳುಗಳ,ಭುಜದ ಬಲವನ್ನು ಹೆಚ್ಚಿಸಲು, ಕುತ್ತಿಗೆ ಮತ್ತು ಕಾಲಿನ ಸ್ನಾಯುಗಳ ಆರೋಗ್ಯ ಕಾಪಾಡಲು ನೆರವಿಗೆ ಬರುತ್ತದೆ.ಈ ಯೋಗವು ಅಸ್ತಮಾ ಕಾಯಿಲೆ ಇರುವವರಿಗೆ ಬಹಳ ಒಳ್ಳೆಯದು ಯಾಕೆಂದರೆ ಇದು ಎದೆಯನ್ನು ಹಿಗ್ಗಿಸುತ್ತದೆ ಮತ್ತು ಶ್ವಾಸಕೋಶಕ್ಕೆ ಉಸಿರಾಟದ ತಾಕತ್ತನ್ನು ಅಧಿಕಗೊಳಿಸುತ್ತದೆ.

5. ನೌಕಾಸನ

ಬೋಟ್ ಪೋಸ್ ನ್ನು ನೌಕಾಸನ ಎಂದು ಕೂಡ ಕರೆಯುತ್ತಾರೆ. ನಿಮ್ಮ ಕೆಳಗಿನ ಹಿಂಭಾಗವು ಇದರಲ್ಲಿ ಇಡೀ ದೇಹವನ್ನು ಬ್ಯಾಲೆನ್ಸ್ ಮಾಡಬೇಕು, ನೀವು ನಿಮ್ಮ ಬೆಲ್ಲಿಯ ಫ್ಯಾಟ್ ಕರಗಿಸಲು ಶ್ರಮಿಸುತ್ತಿದ್ದರೆ, ಈ ಯೋಗವು ನಿಮಗೆ ಸಹಾಯ ಮಾಡುತ್ತದೆ. ಪ್ರತಿದಿನ ದೋಣಿಯ ಆಹಾರದಲ್ಲಿ ನಿಮ್ಮ ದೇಹವನ್ನು ಬೆಂಡ್ ಮಾಡುವುದರಿಂದಾಗಿ ಹಲವು ಲಾಭಗಳಿವೆ. ಯಾರಿಗೆ ಇನ್ಸೋಮ್ನಿಯಾ, ಸ್ಪೈನಲ್ ಗಾಯಗಳು ಅಥವಾ ಹರ್ನಿಯಾ ಸಮಸ್ಯೆ ಇರುತ್ತೋ ಅಂತವರು ಇದನ್ನು ಮಾಡದೇ ಇರುವುದು ಒಳಿತು.

6. ಮತ್ಸ್ಯಾಸನ

ಫಿಶ್ ಪೋಸ್ ನ್ನು ಮತ್ಸ್ಯಾಸನ ಎಂದು ಕರೆಯಲಾಗುತ್ತೆ. ಈ ಪೋಸ್ ನಲ್ಲಿ ನೀವು ನಿಮ್ಮ ದೇಹದ ಕೆಳಭಾಗವನ್ನು ಮಲಗಿಕೊಂಡು ಸ್ಟ್ರೆಚ್ ಮಾಡುತ್ತೀರಿ ಅಂದರೆ ಇದರಲ್ಲಿ ಕರುಳುಗಳು, ತೊಡೆಗಳು, ಕಿಬ್ಬೊಟ್ಟೆಯ ಸ್ನಾಯುಗಳು ಮತ್ತು ಸೊಂಟವನ್ನು ಸ್ಟ್ರೆಚ್ ಮಾಡಬೇಕು . ಈ ಯೋಗ ಆಸನವು ಸಂಪೂರ್ಣವಾಗಿ ನಿಮ್ಮ ದೇಹದ ಕೆಳಭಾಗವನ್ನು ಟ್ವಿಸ್ಟ್ ಮಾಡುವುದು ಮತ್ತು ಫುಲ್ ಮಾಡುವುದರಲ್ಲೇ ಅಡಗಿದ್ದು, ಇದು ನಿಮ್ಮ ಅನಗತ್ಯ ಕೊಬ್ಬಿನಾಂಶವನ್ನು ಕರಗಿಸಲು ಸಹಾಯ ಮಾಡುತ್ತದೆ. ಅದರಲ್ಲೂ ಪ್ರಮುಖವಾಗಿ ಸೊಂಟ ಮತ್ತು ಹೊಟ್ಟೆಯ ಭಾಗದಲ್ಲಿರುವ ಕೊಬ್ಬು ಕರಗಿಸಲು ನೆರವಿಗೆ ಬರುತ್ತದೆ.

7. ಭುಜಂಗಾಸನ

ಕೋಬ್ರಾ ಪೋಸ್ ಅಥವಾ ಇದನ್ನು ಭುಜಂಗಾಸನ ಎಂದು ಕರೆಯುತ್ತಾರೆ. ಇದು ಸೂರ್ಯನಮಸ್ಕಾರದ ಪ್ರಮುಖ ಭಂಗಿಯೂ ಹೌದು..ಈ ಯೋಗ ಆಸನದಲ್ಲಿ ನಿಮ್ಮ ದೇಹದ ಮೇಲ್ಬಾಗದ ಅಂಗಗಳು ತೊಡಗಿಕೊಳ್ಳುತ್ತವೆ ಮತ್ತು ಕಿಬ್ಬೊಟ್ಟೆಯ ಸ್ನಾಯುಗಳು ಸ್ಟ್ರೆಚ್ ಮಾಡಬೇಕಾಗುತ್ತದೆ ಮತ್ತು ಇದು ಬೆಲ್ಲಿಯಲ್ಲಿರು ಅನಗತ್ಯ ಕೊಬ್ಬಿನಾಂಶವನ್ನು ಕರಗಿಸಲು ನೆರವಿಗೆ ಬರುತ್ತದೆ. ಒಂದು ವೇಳೆ ನೀವೇನಾದ್ರೂ ಹರ್ನಿಯಾ ಸಮಸ್ಯೆಯವರು ಮತ್ತು ಗರ್ಭಿಣಿ ಸ್ತ್ರೀಯರು ಈ ಭಂಗಿಯನ್ನು ಮಾಡಲು ಪ್ರಯತ್ನಿಸುವುದು ಬೇಡ.

8. ಮಲಾಸನ

ಗಾರ್ಲ್ಯಾಂಡ್ ಪೋಸ್ ಅಥವಾ ಮಲಾಸನ ಎಂದು ಕರೆಯಲಾಗುತ್ತೆ.. ಈ ಯೋಗದ ಭಂಗಿಯು ದಿನವಿಡೀ ಡೆಸ್ಕ್ ನಲ್ಲಿ ಕುಳಿತೇ ಕೆಲಸ ಮಾಡುವ ವ್ಯಕ್ತಿಗಳಿಗೆ ಬಹಳ ಸಹಾಯಕ್ಕೆ ಬರುತ್ತದೆ. ದೇಹದ ಕೆಳಭಾಗದಲ್ಲಿ ಸೇರಿಕೊಳ್ಳುವ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಈ ಆಸನವು ತೊಡೆ, ಹಿಪ್ ನ ಸ್ನಾಯುವನ್ನು ಸ್ಟ್ರೆಚ್ ಮಾಡಲು ಮತ್ತು ಫ್ಲೆಕ್ಸಿಬ್ಲಿಟಿಯನ್ನು ಹೆಚ್ಚಿಸಲು ನೆರವಿಗೆ ಬರುತ್ತದೆ ಮತ್ತು ಹೊರಗಿನ ಮತ್ತು ಒಳಭಾಗದ ತೊಡೆಯನ್ನು ಟೋನ್ ಮಾಡಲು ಸಹಾಯಕವಾಗಿದೆ.

9. ಸಿಂಹಾಸನ

ಲಯನ್ ಪೋಸ್ ಅಥವಾ ಸಿಂಹಾಸನವೆಂದು ಕರೆಯಲಾಗುತ್ತೆ.ಒಂದು ವೇಳೆ ನಿಮಗೆ ಮುಖದಲ್ಲಿ ಫ್ಯಾಟ್ ಅಂಶವಿದ್ದರೆ, ಈ ಆಸನವು ನಿಮ್ಮ ಮುಖದ ಸ್ನಾಯುಗಳನ್ನು ಟೋನ್ ಮಾಡಲು ಸಹಕಾರಿಯಾಗಿದೆ.ಯಾವುದೇ ವಯಸ್ಸಿನ ವ್ಯಕ್ತಿಗಳು ಕೂಡ ಈ ಆಸನವನ್ನು ಮಾಡಬಹುದು.ನೀವು ಈ ಆಸನವನ್ನು ಕೈಗೊಳ್ಳುವಾಗ, ನಿಮ್ಮ ನಾಲಗೆಯನ್ನು ಹೊರ ಹಾಕಬೇಕು ಮತ್ತು ಬೆನ್ನುಲುಬು ಮತ್ತು ಸೊಂಟವನ್ನು ಆದಷ್ಟು ಸ್ಟ್ರೆಚ್ ಮಾಡಬೇಕು. ಇದು ಡಬಲ್ ಚಿನ್ ಇರುವವರಿಗೆ ಅದರ ನೆರವಿಗೆ ಸಹಾಯ ಮಾಡುತ್ತದೆ.

10. ಅಧೋಮುಖ ಶ್ವಾನಾಸನ

ಡೌನ್ ವರ್ಡ್ ಡಾಗ್ ಪೋಸ್ ಅಥವಾ ಅದನ್ನು ಅಧೋಮುಖ ಶ್ವಾನಾಸನ ಎಂದು ಕರೆಯುತ್ತಾರೆ .ಇದು ತೂಕ ಇಳಿಸುವ ಮತ್ತೊಂದು ಭಂಗಿ..ಇದು ಕೈಗಳ ಮೇಲೆ ಮೇಲ್ಬಾಗದ ದೇಹವನ್ನು ಬ್ಯಾಲೆನ್ಸ್ ಮಾಡುವುದು ಮತ್ತು ನಿಮ್ಮ ಕೈಚೀಲಗಳು ಮತ್ತು ತೋಳನ್ನು ಟೋನ್ ಮಾಡಲು ಇದು ಸಹಾಯಕ. ಒಂದು ವೇಳೆ ನೀವು ಕಾರ್ಪಲ್ ಟನಲ್ ಸಿಂಡ್ರೋಮ್ ನಿಂದ ಬಳಲುತ್ತಿದ್ದರೆ, ಈ ಆಸನವನ್ನು ಪ್ರಯತ್ನಿಸಬೇಡಿ.
ಒಂದು ವೇಳೆ ನೀವು ಜಿಮ್ ಹೋಗಲು ಇಚ್ಛಿಸುವುದಿಲ್ಲವಾದರೆ ಈ ಆಸನಗಳನ್ನು ಮನೆಯಲ್ಲೇ ಟ್ರೈ ಮಾಡಿ.
ಸೂಚನೆ: ಆಸನಗಳನ್ನು ಮಾಡುವುದು ಹೇಗೆ ಎಂಬ ಬಗ್ಗೆ ಚಿತ್ರಗಳನ್ನು ಗಮನಿಸಿ.

English summary

How To Lose Weight With Yoga

Everyone knows yoga is great for reducing stress and increasing flexibility and has myriad other benefits. One of these benefits is also helping you to lose weight. If you love doing yoga and are looking at how to lose weight with yoga, then this article will be beneficial for you. Read on to know how to lose weight with yoga.
X
Desktop Bottom Promotion